UN NETWORKS
ಮಂಗಳೂರು : ಅಯ್ಯಪ್ಪ ವೃತಧಾರಿಗಳ ಮೇಲೆ ಲಾಠಿ ಚಾರ್ಜ್ ನಡೆಸಿದ ಘಟನೆ ಮಂಗಳೂರಿನಲ್ಲಿ ನಡೆದಿದೆ.
ಮಂಗಳೂರಿನ ಗಂಜಿಮಠದಲ್ಲಿ ಅಯ್ಯಪ್ಪ ವೃತಧಾರಿಗೆ ಖಾಸಗಿ ಬಸ್ ಒಂದು ಡಿಕ್ಕಿ ಹೊಡೆದಿತ್ತು. ಈ ಹಿನ್ನಲೆಯಲ್ಲಿ ಬಸ್ ನ ಚಾಲಕ ಮತ್ತು ಅಯ್ಯಪ್ಪ ವೃತಧಾರಿಗೆ ಮಾತುಕತೆ ನಡೆದು ಬಸ್ ಚಾಲಕ ಅಯ್ಯಪ್ಪ ವೃತಧಾರಿಗೆ ನಿಂದನೆ ಮಾಡಿದ್ದಾನೆ.
ಈ ಹಿನ್ನಲೆಯಲ್ಲಿ ಅಯ್ಯಪ್ಪ ವೃತಧಾರಿಗಳು ಬಸ್ ಚಾಲಕ ಕ್ಷಮೆ ಕೋರುವಂತೆ ಆಗ್ರಹಿಸಿದ್ದಾರೆ. ಈ ಸಂದರ್ಭದಲ್ಲಿ ಸ್ಥಳಕ್ಕೆ ಆಗಮಿಸಿದ ಬಜ್ಪೆ ಪೊಲೀಸರು ಪರಿಸ್ಥಿತಿ ಕೈ ಮೀರುವ ಹಂತಕ್ಕೆ ತಲುಪಿದ ಹಿನ್ನಲೆಯಲ್ಲಿ ಪೊಲೀಸರು ಅಯ್ಯಪ್ಪ ವೃತಧಾರಿಗಳ ಮೇಲೆ ಲಾಠಿಚಾರ್ಜ್ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಅಯ್ಯಪ್ಪ ವೃತಧಾರಿಗಳು ಸೇರಿದಂತೆ ಹತ್ತು ವರ್ಷದ ಮಗುವಿಗೆ ಗಾಯವಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ. ಬಜ್ಪೆ ಪೊಲೀಸರ ಲಾಠಿ ಚಾರ್ಜ್ ವಿರುದ್ದ ಅಯ್ಯಪ್ಪ ವೃತಧಾರಿಗಳು ಪ್ರತಿಭಟನೆ ನಡೆಸಿದ್ದಾರೆ.
`ಯಾರ ಮೇಲೂ ಹಲ್ಲೆ ನಡೆಸಿಲ್ಲ’
ಘಟನೆಯ ಬೆನ್ನಲ್ಲೇ “ಸಾಮಾಜಿಕ ಜಾಲತಾಣದಲ್ಲಿ ಅಯ್ಯಪ್ಪ ಮಾಲಾಧಾರಿಗಳ ಮೇಲೆ ಪೊಲೀಸರು ಲಾಠಿಚಾರ್ಜ್ ನಡೆಸಿದ್ದಾರೆ” ಎಂಬ ಸುದ್ದಿ ಹರಿದಾಡುತ್ತಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪೊಲೀಸ್ ಇನ್ಸ್‍ಪೆಕ್ಟರ್ ಪರಶಿವ ಮೂರ್ತಿ, “ಯಾರ ಮೇಲೂ ಪೊಲೀಸರು ಹಲ್ಲೆ ನಡೆಸಿಲ್ಲ. ಯಾರಿಗಾದರೂ ಯಾರಿಂದಲೂ ಅನ್ಯಾಯವಾಗಿದ್ದರೆ ಠಾಣೆಗೆ ಬಂದು ದೂರು ನೀಡುವಂತೆ ಹೇಳಿದ್ದೇನೆ. ಆದರೆ, ಹಾಗೆ ಮಾಡದೆ 50ಕ್ಕೂ ಮಿಕ್ಕಿ ಜನರು ಸೇರಿದ್ದರಿಂದ ಗುಂಪನ್ನು ಚದುರಿಸಲು ಲಾಠಿ ಬೀಸಿದಾಗ ತಾಗಿರಬಹುದು” ಎಂದು ಹೇಳಿದ್ದಾರೆ.


