UN NETWORKS
ಕೊಲ್ಯ: ಕಾರೊಂದು ಸೈಕಲ್ ಗೆ ಡಿಕ್ಕಿ ಹೊಡೆದ ಪರಿಣಾಮ ಬಾಲಕನೋರ್ವ ಗಾಯಗೊಂಡ ಘಟನೆ ರಾ.ಹೆ.66 ರ ಕೋಟೆಕಾರು ಸಮೀಪ ಸಂಭವಿಸಿದೆ.
ಮಂಗಳೂರಿನಿಂದ ಕಾಸರಗೋಡು ಕಡೆಗೆ ತೆರಳುತ್ತಿದ್ದ ಕಾರು ರಸ್ತೆ ಬದಿಯಲ್ಲಿ ಸೈಕಲಿನಲ್ಲಿ ಬರುತ್ತಿದ್ದ ಬಾಲಕನಿಗೆ ಢಿಕ್ಕಿ ಹೊಡೆದಿದೆ. ಢಿಕ್ಕಿಯ ರಭಸಕ್ಕೆ ಸೈಕಲ್ ಛಿದ್ರವಾಗಿದ್ದು, ಬಾಲಕ ಕಾರಿನ ಗಾಜಿಗೆ ಎಸೆಯಲ್ಪಟ್ಟು ಅಲ್ಲಿಂದ ದೂರದ ಪೊದೆಯೊಂದಕ್ಕೆ ಎಸೆಯಲ್ಪಟ್ಟಿದ್ದಾನೆ. ಸಣ್ಣಪುಟ್ಟ ಗಾಯಗೊಂಡ ಬಾಲಕನನ್ನು ತೊಕ್ಕೊಟ್ಟು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.


