UN NETWORKS
ಮಂಗಳೂರು : ಕುಖ್ಯಾತಿ ಮಂಕಿ ಸ್ಟ್ಯಾಂಡ್ ವಿಜಯ್ ಸಹಚರ ಗೋರಿಗುಡ್ಡೆಯ ರೌಡಿಶೀಟರ್ ಮೆರ್ಲಿಕ್ ಡಿಸೋಜಾ (21) ಎಂಬಾತನನ್ನು ತಂಡವೊಂದು ಬರ್ಬರವಾಗಿ ತಲವಾರಿನಿಂದ ಕಡಿದು ಕ್ರಿಸ್‍ಮಸ್ ದಿನದಂದೇ ಹತ್ಯೆ ನಡೆಸಿದೆ.
ಪಾಂಡೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯ ವೆಲೆನ್ಸಿಯ ಗೋರಿಗುಡ್ಡೆಯ ಪರ್ಪಲ್ ಸ್ಟ್ರೀಟ್‍ನಲ್ಲಿರುವ ಅಜ್ಜಿ ಮನೆಯಲ್ಲಿ ಕ್ರಿಸ್ ಮಸ್ ಆಚರಣೆಗೆಂದು ತಲುಪಿದ್ದ ಮೆಲ್ರಿಕ್ ಡಿಸೋಜಾ ನನ್ನು ಐದು ಮಂದಿಯ ತಂಡ ಹತ್ಯೆ ನಡೆಸಿದೆ. ಸಮೀಪದಲ್ಲಿನ ತನ್ನ ಅಜ್ಜಿ ಮನೆಯ ಎದುರುಗಡೆಯ ಸ್ಥಳವೊಂದರಲ್ಲಿ ಮೆರ್ಲಿಕ್ ಡಿಸೋಜಾ ಕುಲಿತುಕೊಂಡಿದ್ದ ಸಮಯದಲ್ಲಿ ಅಲ್ಲಿಗೆ ಬಂದ ತಂಡವೊಂದು ಏಕಾಏಕಿ ಈತನ ಮೇಲೆ ಮಾರಕಾಯುಧಗಳಿಂದ ಗಂಭೀರವಾಗಿ ಹಲ್ಲೆ ನಡೆಸಿ, ಬರ್ಬರವಾಗಿ ಹತ್ಯೆ ಮಾಡಲಾಗಿದೆ ಎನ್ನಲಾಗಿದೆ. ಈ ಘಟನೆಯೂ ಪೂರ್ವ ದ್ವೇಷದ ಹಿನ್ನಲೆಯಲ್ಲಿ ನಡೆದಿದೆ ಎನ್ನಲಾಗಿದೆ.
2016 ರಲ್ಲಿ ಹಿಂ.ಜಾ.ವೇ ಮುಖಂಡ ಸಂದೀಪ್ ಶೆಟ್ಟಿ ಹತ್ಯೆಗೆ ಮಂಕಿ ಸ್ಟ್ಯಾಂಡ್ ವಿಜಯ್ ನೇತೃತ್ವದ ತಂಡದಲ್ಲಿ ಮೆಲರಿಕ್ ಡಿಸೋಜಾ ಸಹಿತ 6 ಮಂದಿಯ ತಂಡ ಯತ್ನಿಸಿತ್ತು. ಇದೇ ಪ್ರಕರಣದಲ್ಲಿ ಜೈಲುಪಾಲಾಗಿದ್ದ ಮೆಲ್ರಿಕ್ 8 ದಿನಗಳ ಹಿಂದಷ್ಟೇ ಬಿಡುಗಡೆಯಾಗಿದ್ದ.
ಸ್ಥಳಕ್ಕೆ ಪಾಂಡೇಶ್ವರ ಠಾಣಾ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದು, ಆರೋಪಿಗಳ ಪತ್ತೆಗಾಗಿ ಕಾರ್ಯಚರಣೆ ಮುಂದುವರಿಸಿದ್ದಾರೆ ಎಂದು ತಿಳಿದುಬಂದಿದೆ.


