UN NETWORKS ಉಳ್ಳಾಲ: ಭಾರತ ದೇಶದಾದ್ಯಂತ ಆಟೊ ರಿಕ್ಷಾ ಚಾಲಕರ ಸಮಸ್ಯೆ ಅದನ್ನ ಬಗೆಹರಿಸಲು ಮತ್ತು ನ್ಯಾಯಯುತವಾಗಿ ಅವರಿಗೆ ಸಿಗುವಂತಹ ಸವಲತ್ತುಗಳನ್ನು ಎಲ್ಲಾ ಅಟೋ ರಿಕ್ಷಾ ಚಾಲಕರು ಪಡೆಯಬೇಕೆಂಬ ನಿಟ್ಟಿನಲ್ಲಿ ಸೋಶಿಯಲ್ ಡೆಮಾಕ್ರಟಿಕ್ ಆಟೋ ಯೂನಿಯನ್ ದೇಶದಾದ್ಯಂತ ಕಾರ್ಯಚರಿಸುತ್ತಾ ಇದ್ದು ಈ ನಿಟ್ಟಿನಲ್ಲಿ ಉಳ್ಳಾಲದಲ್ಲಿಯೂ ಆಟೋ ರಿಕ್ಷಾ ಚಾಲಕರ ಯೂನಿಯನ್ ಬಲಪಡಿಸುವ ಅಗತ್ಯ ಇದೆ ಎಂದು ಮಂಗಳೂರು ಕ್ಷೇತ್ರದ ಅಟೋ ರಿಕ್ಷಾ ಚಾಲಕರ ಅಧ್ಯಕ್ಷ ಅಬ್ಬಾಸ್ ಕಿನ್ಯ ಅಭಿಪ್ರಾಯಪಟ್ಟರು. ಉಳ್ಳಾಲ ನಗರ ಸಭೆಯ ಸಮುದಾಯ ಭವನದಲ್ಲಿ ಮಂಗಳೂರು ಕ್ಷೇತ್ರ ಸಮಿತಿಯಿಂದ ನಡೆದಂತಹ ಅಟೋ ರಿಕ್ಷಾ ಚಾಲಕರ ಸ್ನೇಹ ಕೂಟದಲ್ಲಿ ನೂತನವಾಗಿ ಉಳ್ಳಾಲನಗರ ಸಭಾ ಸಮಿತಿಯ ಸಭೆಯ ಅದ್ಯಕ್ಷತೆ ವಹಿಸಿ ಮಾತನಾಡಿದರು. ಸಭೆಯಲ್ಲಿ ಸೋಶಿಯಲ್ ಡೆಮಾಕ್ರಟಿಕ್ ಆಟೋ ಯೂನಿಯನ್ ಇದರ ಜಿಲ್ಲಾ ಮುಖಂಡ ಅಶ್ರಫ್ ಮಂಚಿ ಚಾಲಕರಿಗೆ ಯೂನಿಯನ್ ನ ಅಗತ್ಯತೆಯನ್ನು ಸಭೆಯಲ್ಲಿ ತಿಳಿಸಿಕೊಟ್ಟರು ಚುನಾವಣಾ ಪ್ರಕ್ರಿಯೆಯ ಮೂಲಕ ಉಳ್ಳಾಲ ನಗರ ಸಮಿತಿಯನ್ನು ಅಸ್ತಿತ್ವಕ್ಕೆ ತರಲಾಯಿತು, ಖಲೀಲ್ ಮೇಲಂಗಡಿ ಅಧ್ಯಕ್ಷರಾಗಿ, ಹೈದರ್ ತೊಕ್ಕೋಟು…
Author: UllalaVani
UN NETWORKS ಉಳ್ಳಾಲ: ಮುಂದೆ ಬರಲಿರುವ ಕರ್ಣಾಟಕ ರಾಜ್ಯ ಚುನಾವಣೆಯಲ್ಲಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಬಿ.ಜೆ.ಪಿ. ಸರಕಾರ ಬರವುದು ಖಚಿತ ಇದರೊಂದಿಗೆ ಮಂಗಳೂರು ಕ್ಷೇತ್ರದಲ್ಲಿಯೂ ಕಮಲ ಅರಳಿದೆ ಎಂದು ಬಿ.ಜೆ.ಪಿ. ಜಿಲ್ಲಾಧ್ಯಕ್ಷರಾದ ಸಂಜೀವ ಮಠಂದೂರು ಆಭಿಪ್ರಾಯಪಟ್ಟರು. ಮಂಗಳೂರು ಕ್ಷೇತ್ರ ಕಛೇರಿಯಲ್ಲಿ ನಡೆದ ಚುನಾವಣಾ ಪ್ರಣಾಳಿಕೆ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು ಪಕ್ಷದ ಚುನಾವಣಾ ಪ್ರಣಾಳಿಕೆಯಲ್ಲಿ ರಾಜ್ಯದ, ಜಿಲ್ಲೆಯ, ಕ್ಷೇತ್ರದ ಜ್ವಲಂತ ಸಮಸ್ಯೆ, ಬೇಡಿಕೆಗಳನ್ನು ಸಾರ್ವಜನಿಕರ ಅಭಿಪ್ರಾಯ ಕ್ರೋಡಿಕರಿಸಿ ರಚಿಸಲಾಗುವುದು. ಈ ಬಗ್ಗೆ ಪ್ರತಿ ಕ್ಷೇತ್ರದಲ್ಲಿ ಮುಂದಿನ ತಿಂಗಳು ವೈದ್ಯರು, ಇಂಜೀನಿಯರ್, ಶಿಕ್ಷಕರು, ಕೃಷಿಕರು, ಕಾರ್ಮಿಕರು, ಧಾರ್ಮಿಕ, ಸಾಮಾಜಿಕ ಕ್ಷೇತ್ರದ, ಯುವ ಸಮುದಾಯದ ಪ್ರಮುಖರನ್ನು ಅಹ್ವಾನಿಸಿ ಸಭೆ ನಡೆಯಲಿದ್ದು. ಪ್ರಣಾಳಿಕೆಯಲ್ಲಿ ತಮ್ಮ ಬೇಡಿಕೆಗಳನ್ನು ಮಂಡಿಸಬಹುದು ಎಂದರು. ಸಭೆಯ ಅಧ್ಯಕ್ಷತೆಯನ್ನು ಕ್ಷೇತ್ರ ಬಿ.ಜೆ.ಪಿ. ಅಧ್ಯಕ್ಷರಾದ ಸಂತೋಷ್ ಕುಮಾರ್ ರೈ ಬೋಳಿಯಾರ್ ವಹಿಸಿದ್ದರು. ಜಿಲ್ಲಾ ಪ್ರಣಾಳಿಕೆ ಸಮಿತಿ ಸಂಚಾಲಕ ವಿಶ್ವೇಶ್ವರ ಭಟ್, ಸಹ ಸಂಚಾಲಕ ಶಂಕರ್ ಭಟ್, ಮಾಜಿ ಶಾಸಕ ಕೆ. ಜಯರಾಮ ಶೆಟ್ಟಿ, ಕ್ಷೇತ್ರ ಪ್ರಭಾರಿ…
UN NETWORKS ಉಳ್ಳಾಲ: ಶಿಕ್ಷಕ ವೃತ್ತಿಯೆಂಬುದು ಶ್ರೇಷ್ಠವಾದದು, ಒಂದು ಮಗುವಿನಲ್ಲಿ ಹುದುಗಿರುವ ಪ್ರತಿಭೆಯನ್ನು ಗುರುತಿಸಿ, ಸರಿಯಾದ ತರಬೇತಿಯನ್ನು ನೀಡುವುದರೊಂದಿಗೆ ಉತ್ತಮ ಪ್ರಜೆಯನ್ನಾಗಿ ಮಾಡುವಲ್ಲಿ ಅವರ ಪಾತ್ರ ಹಿರಿದು ಎಂದು ಮಾಜಿ ಶಾಸಕ ಜಯರಾಮ ಶೆಟ್ಟಿ ಅಭಿಪ್ರಾಯಪಟ್ಟರು. ಉಳ್ಳಾಲ ವಲಯದ ದೈಹಿಕ ಶಿಕ್ಷಣ ಶಿಕ್ಷಕ ವೃಂದದವರ ವತಿಯಿಂದ ಇತ್ತೀಚೆಗೆ ತೊಕ್ಕೊಟ್ಟು ಅಂಬಿಕಾರೋಡ್‍ನಲ್ಲಿರುವ ಗಟ್ಟಿ ಸಮಾಜ ಭವನದಲ್ಲಿ ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಲೋಕನಾಥ ರೈ ಅವರಿಗೆ ಅಭಿನಂದನಾ ಸಮಾರಂಭದಲ್ಲಿ ಅಭಿನಂದನೆ ನೆರವೇರಿಸಿ ಮಾತನಾಡಿದರು. ದೈಹಿಕ ಶಿಕ್ಷಣವೆಂಬುದು ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಪೂರಕವಾದದ್ದು. ಹಾಗಾಗಿ ಇಂತಹ ವೃತ್ತಿಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿಯಾಗುತ್ತಿರುವವರನ್ನು ಗುರುತಿಸಿ, ಗೌರವಿಸುವುದು ಅತ್ಯುತ್ತಮ ಕಾರ್ಯವೆಂದರು. ಮುಖ್ಯ ಅತಿಥಿಯಾಗಿ ಹಝರತ್ ಸೈಯದ್ ಮದನಿ ದರ್ಗಾ ಉಳ್ಳಾಲ ಇದರ ಅಧ್ಯಕ್ಷ ಅಬ್ದುಲ್ ರಶೀದ್, ಉಳ್ಳಾಲ ಪುರಸಭೆ ಅಧ್ಯಕ್ಷ ಕುಂಞಮೋನು, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಯ ದೈಹಿಕ ಶಿಕ್ಷಣ ಪರೀವೀಕ್ಷಣಾಧಿಕಾರಿ ಗುರುನಾಥ್ ಬಾಗೇವಾಡಿ, ವಿದ್ಯಾರತ್ನ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ಕೆ. ರವೀಂದ್ರ ಶೆಟ್ಟಿ ಉಳಿದೊಟ್ಟು, ಉಳ್ಳಾಲ ಮೊಗವೀರ…
UN NETWORKS ಉಳ್ಳಾಲ: ಅಪಘಾತ ಸಂದರ್ಭದಲ್ಲಿ ಘಟನೆಯ ಸ್ಥಳದಿಂದ ಆಸ್ಪತ್ರೆಯ ತುರ್ತು ವಿಭಾಗಕ್ಕೆ ಗಾಯಾಳುವನ್ನು ಸಾಗಿಸುವಾಗ ಸರಿಯಾದ ಆರೋಗ್ಯ ಕ್ರಮಗಳನ್ನು ಪಾಲನೆ ಮಾಡದಿದ್ದರೆ ತೊಂದರೆಗಳು ಜಾಸ್ತಿ ಎಂದು ಕೆ.ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿಯ (ಕ್ಷೇಮ) ಡೀನ್ ಡಾ| ಪ್ರಕಾಶ್ ಪಿ.ಎಸ್. ಅಭಿಪ್ರಾಯಪಟ್ಟರು. ನಿಟ್ಟೆ ಸಿಮ್ಯುಲೇಶನ್ ಸೆಂಟರ್‍ನಲ್ಲಿ ಅಪಘಾತದ ಗಾಯಾಳುವಿನ ನಿರ್ವಹಣೆಯಲ್ಲಿ ತರಬೇತಿ – ಇಂಟರ್‍ನ್ಯಾಷನಲ್ ಟ್ರಾಮಾ ಲೈಫ್ ಸಪೋ ರ್ಟ್ ಕೋರ್ಸ್ ಉದ್ಘಾಟಿಸಿ ಮಾತನಾಡಿದರು. ರೋಗಿಗಳು ಮತ್ತು ಗಾಯಾಳುಗಳನ್ನು ಸಾಗಿಸುವಾಗ ಅತ್ಯಂತ ಜಾಗರೂಕತೆ ವಹಿಸುವ ಅಗತ್ಯ ಇದೆ. ಇದರ ಕುರಿತು ಸಾರ್ವಜನಿಕರಲ್ಲೂ ಜಾಗೃತಿ ಮೂಡಿಸುವ ಅಗತ್ಯ ಇದೆ. ರೋಗಿಗಳ ಅಸಮರ್ಪಕ ನಿರ್ವಹಣೆಯಿಂದ ಫಲಿತಾಂಶ ಕೆಟ್ಟದಾಗುವ ಸಾಧ್ಯತೆಗಳಿವೆ ಎಂದರು. ಕಾರ್ಯಕ್ರಮದಲ್ಲಿ ಕ್ಷೇಮದ ಕುಲಸಚಿವ ಡಾ| ಜಯಪ್ರಕಾಶ ಶೆಟ್ಟಿ, ಕೆ.ಎಸ್ ಹೆಗ್ಡೆ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ| ಶಿವಕುಮಾರ್ ಹಿರೇಮಠ್, ನಿಟ್ಟೆ ಸಿಮ್ಯುಲೇಶನ್ ಕೇಂದ್ರದ ಸಂಯೋಜಕ ಡಾ| ರವೀಂದ್ರ ಯು. ಎಸ್. ಮತ್ತಿತರರು ಉಪಸ್ಥಿತರಿದ್ದರು. ಎಲುಬು ಮತ್ತು ಕೀಲು ವಿಭಾಗದ ಹೆಚ್ಚುವರಿ ಪ್ರಾಧ್ಯಾಪಕ ಡಾ|…
UN NETWORKS ಉಳ್ಳಾಲ : ಶ್ರೀ ವಿದ್ಯಾಂಜನೇಯ ವ್ಯಾಯಾಮ ಶಾಲೆ ಉಳ್ಳಾಲ ಇದರ ಆಶ್ರಯದಲ್ಲಿ ದ.ಕ. ಜಿಲ್ಲಾ ಅಮೆಚೂರು ಕಬಡ್ಡಿ ಅಸೋಸಿಯೇಶನ್‍ನ ಸಹಕಾರದೊಂದಿಗೆ ಎಸ್‍ವಿವಿಎಸ್ ಟ್ರೋಫಿ-2017 ಕಬಡ್ಡಿ ಪಂದ್ಯಾಟ ಡಿಸೆಂಬರ್ 24ರಂದು ಉಳ್ಳಾಲದಲ್ಲಿ ಜರಗಲಿದೆ. ದಕ್ಷಿಣ ಕನ್ನಡಜಿಲ್ಲೆ, ಉಡುಪಿ, ಕಾಸರಗೋಡು ಜಿಲ್ಲಾ ಮಟ್ಟದ ಪುರುಷರ 70ಕೆ.ಜಿ.ವಿಭಾಗದ ಪ್ರೊ ಮಾದರಿಯ ಮ್ಯಾಚ್ ಇದಾಗಿದ್ದು ಡಿ.24 ಆದಿತ್ಯವಾರ ಮಧ್ಯಾಹ್ನ 2ರಿಂದ ಉಳ್ಳಾಲ ನಗರ ಸಭಾ ಮೈದಾನದಲ್ಲಿ ಪಂದ್ಯ ಆರಂಭಗೊಳ್ಳಲಿದೆ. ಮೊದಲು ಬಂದ 20ತಂಡಗಳಿಗೆ ಮಾತ್ರ ಅವಕಾಶವಿದೆ ಎಂದು ಪ್ರಕಟನೆ ತಿಳಿಸಿದೆ
UN NETWORKS ಮಂಗಳೂರು: ಮನುಷ್ಯನಿಗೆ ಎಷ್ಟೇ ಸಂಪತ್ತು ಇದ್ದರೂ, ನೆಮ್ಮದಿ ಎನ್ನುವ ಸಂಪತ್ತು ಇಲ್ಲದಿದ್ದರೆ ಬದುಕೇ ವ್ಯರ್ಥ, ಅಂತಹ ನೆಮ್ಮದಿ ಬದುಕಿನಲ್ಲಿ ಸಿಗಬೇಕಾದರೆ, ದೈವೀ ಅನುಗ್ರಹ ಬೇಕು, ದೈವಿ ಸಂಪತ್ತು ಸಿಗಬೇಕು, ಅದುವೇ ಶಾಶ್ವತ, ಇದಕ್ಕೆ ಭಜನೆ ದೊಡ್ಡ ಸಾಧನ. ಭಜನೆಯಲ್ಲಿ ತನ್ಮಯವಾದರೆ ನಮ್ಮನ್ನು ನಾವೇ ಮರೆಯುತ್ತೇವೆ. ಎಂದು ಉಪ್ಪಳ ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮದ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿಯವರು ಆಶೀರ್ವಚನದ ಮಾತನಾಡಿದರು. ಮಾಡೂರು ಸಾಯಿಧಾಮ ಬಡಾವಣೆಯಲ್ಲಿ, ಶ್ರೀ ಶಿರಡಿ ಸಾಯಿಬಾಬಾ ಮಂದಿರದ ಅಖಂಡ ಭಜನಾ ಸಪ್ತಾಹದ ಸಮಾರೋಪಗೊಂಡು, ಭಜನೆಯ ಮೂಲಕ ಬದುಕಿಗೆ ಸಿಗುವ ನೆಮ್ಮದಿಯ ಬಗ್ಗೆ ಅವರು ಆಶೀರ್ವಚನದ ಮಾತಾನಾಡಿದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ ಕಟೀಲು ಶ್ರೀ ದುರ್ಗಾಪರಮೇಶ್ವರೀ ಕ್ಷೇತ್ರದ ಅನುವಂಶಿಕ ಅರ್ಚಕರು ವೇದಮೂರ್ತಿ ಬ್ರಹ್ಮಶ್ರೀ ಅನಂತ ಪದ್ಮನಾಭ ಅಸ್ರಣ್ಣ ಮಾತನಾಡಿ ಶಿರಡಿ ಸಾಯಿಬಾಬಾ ಗುರುಗಳು ಎಂದರೆ,ಕಷ್ಟದಲ್ಲಿರುವವರ ಕಷ್ಟವನ್ನು ಕಳೆಯುವ, ದುಖಃದಲ್ಲಿರುವವರ ದುಖಃವನ್ನು ಕಳೆಯುವ, ಇಂತಹ ಮಹಾತ್ಮರ ಸಾನಿಧ್ಯದಲ್ಲಿ ಅಖಂಡ ಭಜನಾ ಸಪ್ತಾಹ, ಪೂಜ್ಯ ಸ್ವಾಮೀಜಿಗಳ ಮಾರ್ಗದರ್ಶನದಲ್ಲಿ ನಡೆದಿದೆ,ಇದರಿಂದ ಪರಿಸರಕ್ಕೆ…
UN NETWORKS ಮುಡಿಪು: ವಿದ್ಯಾಸಂಸ್ಥೆಗಳಲ್ಲಿ ಕಲೆ ಸಂಸ್ಕೃತಿಯನ್ನು ಬೆಳೆಸುವ ಕಾರ್ಯ ನಿರಂತರವಾಗಿ ನಡೆದರೆ ಎಳವೆಯಲ್ಲಿಯೇ ವಿದ್ಯಾರ್ಥಿಗಳಲ್ಲಿ ಉತ್ತಮ ಮೌಲ್ಯಗಳನ್ನು ಬೆಳೆಸಿಕೊಳ್ಳಲು ಸಾಧ್ಯವಾಗುತ್ತದೆ. ನಾಡಿನ ಸಂಸ್ಕೃತಿಯನ್ನು ಬಿಂಬಿಸುವ ಕಾರ್ಯಕ್ರಮಗಳು ಹೆಚ್ಚು ಹೆಚ್ಚು ನಡೆಯುತ್ತಿರಬೇಕು ಮತ್ತು ಎಲ್ಲರ ಪ್ರೋತ್ಸಾಹವೂ ಅಗತ್ಯ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಕೆ,ಬೈರಪ್ಪ ಅವರು ಅಭಿಪ್ರಾಯಪಟ್ಟರು. ಅವರು ಶುಕ್ರವಾರ ಮುಡಿಪುವಿನಲ್ಲಿ ನಡೆಯುತ್ತಿರುವ ಸೂರಜ್ ಕಲಾಸಿರಿ-2017 ಸಾಂಸ್ಕೃತಿಕ ಉತ್ಸವದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಗಣ್ಯರಿಗೆ ಸಾಧನಶ್ರೀ ಪ್ರಶಸ್ತಿ ಪ್ರಧಾನಗೈದು ಮಾತನಾಡಿದರು. ನಮ್ಮ ಸಂಸ್ಕೃತಿಯನ್ನು ಬಿಂಬಿಸುವ ಇಂತಹ ಕಾರ್ಯಕ್ರಮವನ್ನು ಸೂರಜ್ ಶಿಕ್ಷಣ ಸಂಸ್ಥೆಯು ನಡೆಸುತ್ತಿರುವುದು ಶ್ಲಾಘನೀಯವಾಗಿದ್ದು ಮುಂದಿನ ದಿನಗಳಲ್ಲಿ ಇನ್ನಷ್ಟು ವಿಜ್ರಂಭಣೆಯಿಂದ ನಡೆಯುವಂತಾಗಲಿ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಕರುಣಾಕರಣ್, ಹೇಮಂತ್ ಕುಮಾರ್, ಇಲಿಯಾಸ್ ಸ್ಯಾಂಟೀಸ್, ನವೀನ್ ಕಿಲ್ಲೆ, ದೇವದಾಸ್ ರೈ, ಪ್ರಕಾಶ್ ಶೆಟ್ಟಿ, ಶ್ರೀಪತಿ ಭಟ್ ಮೂಡಬಿದ್ರೆ ಇವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಮಂಗಳೂರಿನ ಕೌನ್ಸಿಲರ್ ಬಿ.ರೇವತಿ ಸನಿಲ್, ತಾಲೂಕು ಪಂಚಾಯಿತಿ ಅಧ್ಯಕ್ಷ ಚಂದ್ರಹಾಸ್ ಕರ್ಕೇರ, ಸೂರಜ್ ಶಿಕ್ಷಣ ಸಂಸ್ಥೆಯ…
UN NETWORKS ಮುಡಿಪು: ನಾವು ಕಾವ್ಯವನ್ನು ಅರ್ಥೈಸುವಾಗ ಕವಿಯ ಬಗ್ಗೆ ಹಾಗೂ ಆತನ ಸ್ವಭಾವದ ಬಗ್ಗೆಯೂ ತಿಳಿದುಕೊಳ್ಳುವುದು ಬಹಳ ಮುಖ್ಯವಾಗುತ್ತದೆ. ಇದರಿಂದ ಅವರ ರಚನೆಯ ನೈಜತೆಯನ್ನು ಅರಿತುಕೊಳ್ಳಲು ಸಾಧ್ಯವಾಗುತ್ತದೆ. ಎಷ್ಟೋ ಸಂದರ್ಭಗಳಲ್ಲಿ ಕವಿಗಳು ಅಜ್ಞಾತರಾಗಿಯೇ ಉಳಿಯುತ್ತಾರೆ, ಇನ್ನು ಕೆಲವು ಸಂದರ್ಭದಲ್ಲಿ ಬರೆದದ್ದು ಯಾರೋ ಕೀರ್ತಿ ಯಾರಿಗೋ ಸಲ್ಲುತ್ತದೆ. ಹಾಗೆಯೇ ಹಿಂದೆ ಯಕ್ಷಗಾನ ಕ್ಷೇತ್ರದಲ್ಲಿ ಕೂಡಾ ಇಂತಹ ಹಲವಾರು ಮಹಾನ್ ಕವಿಗಳು ಇದ್ದರೂ ಅಜ್ಞಾತರಾಗಿ ಉಳಿದಿದ್ದಾರೆ ಎಂದು ಪ್ರಸಿದ್ಧ ಯಕ್ಷಗಾನ ಅರ್ಥಧಾರಿ ರಾಧಾಕೃಷ್ಣ ಕಲ್ಚಾರ್ ಅವರು ಹೇಳಿದರು. ಅವರು ಮಂಗಳೂರು ವಿಶ್ವ ವಿದ್ಯಾಲಯದ ಡಾ.ಪಿ.ದಯಾನಂದ ಪೈ ಮತ್ತು ಶ್ರೀ ಪಿ.ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರದ ಆಶ್ರಯದಲ್ಲಿ ಬುಧವಾರ ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿ ಕಾಲೇಜಿನ ಯಕ್ಷಗಾನ ಅಧ್ಯಯನ ಕೇಂದ್ರದ ಸಹಯೋಗದೊಂದಿಗೆ ನಡೆದ ಯಕ್ಷಮಂಗಳ ಪ್ರಚಾರೋಪನ್ಯಾಸದಲ್ಲಿ `ಮುದ್ದಣ’ ಕವಿಯ ಕುರಿತು ಮಾತನಾಡಿದರು. ಮುದ್ದಣ ಕವಿಯು ರತ್ನಾವತಿ ಕಲ್ಯಾಣ ಹಾಗೂ ಕುಮಾರ ವಿಜಯ ಎಂಬ ಎರಡು ಯಕ್ಷಗಾನ ಪ್ರಸಂಗಗಳನ್ನು ಬರೆದಿದ್ದನು. ಅಪಾರವಾದ ಜ್ಞಾನ…
UN NETWORKS ಉಳ್ಳಾಲ: ಸೋಮೇಶ್ವರ ಗ್ರಾಮ ಪಂಚಾಯತ್ 2017-18ನೇ ಸಾಲಿನ ಅರಿವಿನ ಸಿಂಚನ ಕಾರ್ಯಕ್ರಮ ಪಂಚಾಯತ್ ಕಚೇರಿ ಸಭಾಂಗಣದಲ್ಲಿ ನಡೆಯಿತು. ಅರಿವಿನ ಸಿಂಚನ ಕಾರ್ಯಕ್ರಮದಲ್ಲಿ ವಿಕಲಚೇತನರಿಗೆ 14ನೇ ಹಣಕಾಸು ನಿಧಿ ಮತ್ತು ಪಂಚಾಯತ್ ಅನುದಾನದಿಂದ 48 ಫಲಾನುಭವಿಗಳಿಗೆ 2.68 ಲಕ್ಷ ಸಹಾಯ ಧನದ ಚೆಕ್ ವಿತರಣೆಯನ್ನು ಸೋಮೇಶ್ವರ ಗ್ರಾಮ ಪಂಚಾಯತ್ ಅಧ್ಯಕ್ಷ ರಾಜೇಶ್ ಉಚ್ಚಿಲ್ ಹಸ್ತಾಂತರಿಸಿದರು.ಬಳಿಕ ಮಾತನಾಡಿದ ಅವರು ವಿಶೇಷವಾಗಿ ಸರಕಾರದಿಂದ ವಿಕಲಚೇತನರಿಗೆ ಸಿಗುವಂತಹ ಸವಲತ್ತುಗಳನ್ನು ಸಮರ್ಪಕವಾಗಿ ಬಳಸುವಲ್ಲಿ ಫಲಾನುಭವಿಗಳು ಆಸಕ್ತಿವಹಿಸಬೇಕು,ಸರಿಯಾದ ವೈದ್ಯಕೀಯ ದಾಖಲೆಯೊಂದಿಗೆ ಸಂಭಂಧಪಟ್ಟ ಇಲಾಖೆಯೊಂದಿಗೆ ನಿಖಟ ಸಂಪರ್ಕದಲ್ಲಿರಬೇಕು,ಸ್ವ ಉದ್ಯೋಗ,ದ್ವಿಚರ್ಕ ವಾಹನ,ಪಿಂಚಣಿ,ಹತ್ತು ಹಲವು ಸವಲತ್ತು ಸಿಗುತ್ತಿದ್ದು ಗೌರವಾನ್ವಿತ ಎಲ್ಲಾ ಜನಪ್ರತಿನಿಧಿಗಳು ಮತ್ತು ಸಾರ್ವಜನಿಕರು ಯೋಜನೆಯ ಸವಲತ್ತುಗಳನ್ನು ವಿಶೇಷವಾಗಿ ಫಲಾನುಭವಿಗಳಿಗೆ ಮುಟ್ಟಿಸುವಲ್ಲಿ ಆಸಕ್ತಿ ಮತ್ತು ಸಹಕಾರ ನೀಡಬೇಕೆಂದು ಹೇಳಿದರು. ಸೋಮೇಶ್ವರ ಜಿಲ್ಲಾ ಪಂಚಾಯತ್ ಸದಸ್ಯೆ ಶ್ರೀಮತಿ ಧನಲಕ್ಷ್ಮಿ ಗಟ್ಟಿ,ಸೋಮೇಶ್ವರ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಸುಶೀಲಾ ನಾಯಕ್, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಕೇಶವ ಪೂಜಾರಿ, ಗುಮಾಸ್ತೆ ರೂಪಾ,ವಿಕಲಚೇತನ ಶರತ್ ಉಪಸ್ಥಿತರಿದ್ದರು
UN NETWORKS ಉಳ್ಳಾಲ: ಪುತ್ತೂರು ಸುನ್ನಿ ಸೆಂಟರ್ ನಲ್ಲಿ ಕರ್ನಾಟಕ ಕಲ್ಚರಲ್ ಫೌಂಡೇಶನ್.(ಕೆಸಿಎಫ್.)ನ ಸೌದಿ ಅರೇಬಿಯಾದಿಂದ ಎಕ್ಷಿಟ್ ಆಗಿ ಬಂದ ಹಾಗೂ ರಜಾವಧಿಯಲ್ಲಿ ಊರಿಗೆ ತೆರಳಿರುವ ಕಾರ್ಯಕರ್ತರಿಂದ ಪ್ರವಾದಿ ಜನ್ಮದಿನದಿಂದ ಪುಳಕಿತಗೊಂಡ ರಬೀಹ್’ಗೆ (ಮೌಲಿದ್)ಪ್ರವಾದಿ ಕೀರ್ತನೆ ಹಾಡುವ ಮೂಲಕ ಶುಭ ವಿದಾಯ ಕೋರಲಾಯಿತು. ಪ್ರಸ್ತುತ ಕಾರ್ಯಕ್ರಮವನ್ನು ತಾಜುದ್ದೀನ್ ಸಖಾಫಿ ಸುಳ್ಯ ಉದ್ಘಾಟಿಸಿ ಕೆಸಿಎಫ್ ದಮ್ಮಾಂ ಝೋನಲ್ ಅದ್ಯಕ್ಷ ಉಮ್ಮರ್ ಫಾರೂಖ್ ಮುಸ್ಲಿಯಾರ್ ಕುಪ್ಪೆಟ್ಟಿ ಅದ್ಯಕ್ಷ ವಹಿಸಿ ಮಾತನಾಡಿ ಪ್ರವಾದಿಯ ಉದಾತ್ತ ಸಂದೇಶವನ್ನು ತಿಳಿ ಹೇಳಿ ಕೆಸಿಎಫ್ ಮತ್ತು ಎಸ್ಸೆಸ್ಸೆಫ್ ಇವೆರಡೂ ಒಂದೇ ನಾಣ್ಯದ ಎರಡು ಮುಖ.ಕೆಸಿಎಫ್’ಗೆ ಜನ್ಮ ನೀಡಿದ ನಾಡು ಸೌದಿ ಅರೇಬಿಯಾ ತದನಂತರ ಜಿಸಿಸಿಯ ಆರು ರಾಷ್ಟ್ರ ದಾಟಿ ಇದೀಗ ಯೂರೋಪ್ ರಾಷ್ಟ್ರಗಳಲ್ಲಿ ವ್ಯಾಪಿಸಿ ಅನಿವಾಸಿ ಭಾರತೀಯರಿಗೆ ಆಸರೆಯ ಸಂಘಟನೆಯಾಗಿ ಒಂದು ವಟವೃಕ್ಷವಾಗಿ ಬೆಳೆದಿದೆ ಎಂದು ಕೆಸಿಎಫ್ ಕಾರ್ಯಚಟುವಟಿಕೆಯ ಬಗ್ಗೆ ವಿವರಿಸಿದರು. ಮುಖ್ಯ ಅತಿಥಿಯಾಗಿ ಆಗಮಿಸಿದ ಎಸ್ಸೆಸ್ಸೆಫ್ ಪುತ್ತೂರು ಡಿವಿಶನ್ ಅದ್ಯಕ್ಷ ನ್ಯಾಯವಾದಿ ಶಾಕೀರ್ ಹಾಜಿ ಮಿತ್ತೂರು ಮಾತನಾಡಿ ಕೆಸಿಎಫ್…

