Author: UllalaVani

Kannada News From Coastal Karnataka

UN NETWORKS ಮುಡಿಪು: ಕೊಣಾಜೆ ಠಾಣಾ ವ್ಯಾಪ್ತಿಯ ಬಾಳೆಪುಣಿ ಗ್ರಾಮದ ನಾರ್ಯ ಬಳಿ ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದ ಆರೋಪಿಯೊಬ್ಬನನ್ನು ಕೊಣಾಜೆ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ವರ್ಕಾಡಿ ಗ್ರಾಮದ ತಲೆಕ್ಕಿ ಗ್ರಾಮದ ಮಹಮ್ಮದ್ ಬಶೀರ್(21) ಎಂದು ಗುರುತಿಸಲಾಗಿದೆ. ಈತನಿಂದ ಪೊಲೀಸರು 1 ಕೆ.ಜಿ 300 ಗ್ರಾಂ ಗಾಂಜಾವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಪೊಲೀಸರು ನಾರ್ಯ ಬಳಿ ವಾಹನ ತಪಾಸಣೆ ಮಾಡುತ್ತಿದ್ದಾಗ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದಾನೆ. ಅಲ್ಲದೆ ಈತನ ಜೊತೆಗೆ ಇರುವ ಇನ್ನೊರ್ವ ಆರೋಪಿ ತಲೆಮರೆಸಿಕೊಂಡಿದ್ದು ಪೊಲೀಸರು ತನಿಖೆ ನಡೆಸುತಿದ್ದಾರೆ. ಈ ಬಗ್ಗೆ ಕೊಣಾಜೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

UN NETWORKS ಕೊಣಾಜೆ: ಸೇವೆ ಮತ್ತು ತ್ಯಾಗವನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ದೇಶ ತನ್ನಿಂತಾನೆ ಆಬಿವೃದ್ಧಿಯಾಗಲು ಸಾಧ್ಯ ಎಂದು ಮಾಜಿ ಒಂಬುಡ್ಸ್‍ಮೆನ್ ಹಾಗೂ ಜನಶಿಕ್ಷಣ ಟ್ರಸ್ಟ್‍ನ ಮುಖ್ಯಸ್ಥರಾದ ಶೀನ ಶೆಟ್ಟಿ ಅಭಿಪ್ರಾಯಪಟ್ಟರು. ಅವರು ಕೊಣಾಜೆಯ ಗುಡ್ಡುಪಾಲು ಶ್ರೀ ರಾಮಾಂಜನೇಯ ವ್ಯಾಯಾಮ ಶಾಲೆಯ ಸಭಾಂಗಣದಲ್ಲಿ ಮಂಗಳೂರು ರಥಬೀದಿಯ ಡಾ| ಪಿ. ದಯಾನಂದ ಪೈ ಪಿ. ಸತೀಶ್ ಪೈ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾಯೋಜನೆಯ ವಾರ್ಷಿಕ ವಿಶೇಷ ಶಿಬಿರದ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ವಿಶೇಷ ಉಪನ್ಯಾಸ ನೀಡಿದರು. ಎಲ್ಲಾ ಕ್ರಿಯೆಗಳಿಗೆ ಚಿಂತನೆಗಳೇ ಬೀಜಗಳು ಇಂತಹ ಚಿಂತನೆಗಳು ರಾಷ್ಟ್ರೀಯ ಸೇವಾ ಯೋಜನೆಯ ಮೂಲಕ ಕಾಲೇಜಿನ ವಿದ್ಯಾರ್ಥಿಗಳು ಮತ್ತು ಕಾಲೇಜಿನ ಮುಖ್ಯಸ್ಥರು ಆಳವಡಿಸಿಕೊಂಡಿದ್ದು, ಇದರೊಂದಿಗೆ ಎರಡು ಆದರ್ಶಗಳ ಮೂಲಕ ಗ್ರಾಮದ ಅಭಿವೃದ್ಧಿಯ ಚಿಂತನೆಯತ್ತ ಕೊಂಡೊಯ್ಯಲು ಸಾಧ್ಯವಾಗುತ್ತದೆ. ಕೊಣಾಜೆ ಗ್ರಾಮ ಪಂಚಾಯತ್ ಅಧ್ಯಕ್ಷ ಶೌಕತ್ ಆಲಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ ಗ್ರಾಮದ ಆಭಿವೃದ್ಧಿಯ ನಿಟ್ಟಿನಲ್ಲಿ ಕಳೆದ ಆರು ತಿಂಗಳಿನಿಂದ ಉತ್ತಮ ಕಾರ್ಯವನ್ನು ಗ್ರಾಮದಲ್ಲಿ ನಡೆಸುತ್ತಿದ್ದು,…

Read More

UN NETWORKS ಉಳ್ಳಾಲ: ಪಕ್ಷದ ಧ್ವನಿ ಮತ್ತು ಕಣ್ಣಾಗಿರುವ ಕಾರ್ಯಕರ್ತರು ಒಗ್ಗಟ್ಟಿನಿಂದ ಹೋಗುವ ಮನೋಭಾವವನ್ನು ಬೆಳೆಸುವ ಉದ್ದೇಶದಿಂದ ರಾಜ್ಯ ವ್ಯಾಪಿಯಲ್ಲಿ ಕಾರ್ಯಗಾರಗಳನ್ನು ಆಯೋಜಿಸಲಾಗುತ್ತಿದೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ.ಖಾದರ್ ಹೇಳಿದ್ದಾರೆ. ಅವರು ಮಂಗಳೂರು ವಿಧಾನಸಭಾ ಕ್ಷೇತ್ರದ ಮುಡಿಪು ಮತ್ತು ಉಳ್ಳಾಲ ಬ್ಲಾಕ್ ಕಾಂಗ್ರೆಸ್ ವತಿಯಿಂದ ಮುಡಿಪು ಆಡಿಟೋರಿಯಂನಲ್ಲಿ ಗುರುವಾರ ಜರಗಿದ ಬೂತ್ ಮಟ್ಟದ ಪ್ರತಿನಿಧಿ ಮಾಹಿತಿ ಕಾರ್ಯಗಾರದಲ್ಲಿ ಭಾಗವಹಿಸಿ ಮಾತನಾಡಿದರು. ರಾಜಕೀಯ ಎಂದಿಗೂ ಗಣಿತವಾಗಲು ಸಾಧ್ಯವಿಲ್ಲ, ಅದು ರಸಾಯನಶಾಸ್ತ್ರವಿದ್ದಂತೆ, ಕೂಡಿಸಿ ಕಳೆಯುವಂತಹ ಪ್ರಮೇಯ ರಾಜಕೀಯದಲ್ಲಿಲ್ಲ. ಕೇವಲ ಸೂತ್ರಗಳು ಮಾತ್ರ ರಾಜಕೀಯ ವ್ಯವಸ್ಥೆಯನ್ನು ಗಟ್ಟಿಗೊಳಿಸುವುದು. ಕಾರ್ಯಕರ್ತರು ವಿರೋಧ ಪಕ್ಷದವರ ಎದುರಲ್ಲಿ ಧರ್ಯವಾಗಿ ಮಾತನಾಡಲು ಆತ್ಮವಿಶ್ವಾಸ ಮತ್ತು ಸ್ವಾಭಿಮಾನದಿಂದ ರಾಜ್ಯಾದ್ಯಂತ ನಡೆದಿರುವ ಅಭಿವೃದ್ಧಿ ಕಾರ್ಯಗಳನ್ನು ಪರಿಚಯಿಸುವ ಪ್ರಯತ್ನ ಕಾರ್ಯಾಗಾರದಿಂದ ಆಗಲಿದೆ. ಚುನಾವಣೆ ಪೂರ್ವ ಇಟ್ಟಂತಹ ಆಶ್ವಾಸನೆಗಳನ್ನು ಬಹುತೇಕ ಈಡೇರಿಸಲಾಗಿದೆ. ಎಲ್ಲಿಯಾದರೂ ಬಿಟ್ಟುಹೋಗಿದ್ದಲ್ಲಿ ಕಾರ್ಯಕರ್ತರು ಗಮನಕ್ಕೆ ತಂದಲ್ಲಿ , ಅದನ್ನು ನಿರ್ವಹಿಸುವ ಪ್ರಯತ್ನ ಮುಂದುವರಿಸುವುದಾಗಿ ತಿಳಿಸಿದರು. ಸಂಪನ್ಮೂಲ ವ್ಯಕ್ತಿಗಳಾಗಿ ಜಿಲ್ಲಾ ಕಾಂಗ್ರೆಸ್…

Read More

UN NETWORKS ಕಣ್ಣೂರು : ಸಿಪಿಎಂ ಕಾರ್ಯಕರ್ತನೊಬ್ಬನ ಮೇಲೆ ದುಷ್ಕರ್ಮಿಗಳ ತಂಡವೊಂದು ದಾಳಿ ನಡೆಸಿರುವ ಘಟನೆ ಕಣ್ಣೂರಿನಲ್ಲಿ ನಡೆದಿದೆ. ಇದು ಆರೆಸ್ಸೆಸ್ ಕಾರ್ಯಕರ್ತರ ಕೃತ್ಯ ಎಂದು ಸಿಪಿಎಂ ಆರೋಪಿಸಿದೆ. ದಾಳಿಯಿಂದ ಸಿಪಿಎಂ ಕಾರ್ಯಕರ್ತ ಚಂದ್ರನ್ ಎಂಬವರಿಗೆ ಗಂಭೀರ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ನಿನ್ನೆ ಕೇರಳದ ತಿರುವನಂತಪುರಂನಲ್ಲೂ ಅಪರಿಚಿತ ವ್ಯಕ್ತಿಗಳು ಸಿಪಿಎಂ ಕಾರ್ಯಕರ್ತನ ಮೇಲೆ ದಾಳಿ ನಡೆಸಿದ್ದರು. ಅವರನ್ನು ಕಣ್ಣೂರಿನ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ದಾಳಿಗಳ ಹಿಂದೆ ಆರೆಸ್ಸೆಸ್ ಮತ್ತು ಬಿಜೆಪಿ ಕಾರ್ಯಕರ್ತರಿದ್ದಾರೆ ಎಂದು ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಅನವೂರ್ ನಾಗಪ್ಪನ್ ಆರೋಪಿಸಿದ್ದಾರೆ.

Read More

UN NETWORKS ಕಲ್ಲಡ್ಕ: ಕಲ್ಲಡ್ಕ ಸಮೀಪದ ವೀರಕಂಬದ ಮಸೀದಿಗೆ ಬುಧವಾರ ತಡರಾತ್ರಿ ದುಷ್ಕರ್ಮಿಗಳು ಕಲ್ಲು ಎಸೆದಿದ್ದಾರೆ. ಘಟನೆಯಿಂದ ಮಸೀದಿಯ ನಾಲ್ಕು ಕಿಟಕಿಯ ಗಾಜುಗಳಿಗೆ ಹಾನಿಯಾಗಿದೆ. ಇಂದು ಬೆಳಗ್ಗೆ ನಮಾಝ್ ವೇಳೆ ಈ ಕೃತ್ಯ ಬೆಳಕಿಗೆ ಬಂದಿದೆ. ಜಮಾಅತ್ ಹಾಗೂ ಸ್ಥಳೀಯರು ವಿಟ್ಲ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಸ್ಥಳ ಪರಿಶೀಲನೆ ನಡೆಸಿದ್ದಾರೆ.

Read More

UN NETWORKS ಮಂಗಳೂರು : ನಗರದ ಗೋರಿಗುಡ್ಡ 4ನೆ ಅಡ್ಡ ರಸ್ತೆಯ ನಿವಾಸಿ ಮೆಲ್ರಿಕ್ ಅಂತೋನಿ ಡಿಸೋಜ (21) ಎಂಬಾತನನ್ನು ಡಿ. 25ರಂದು ಮಾರಕಾಸ್ತ್ರದಿಂದ ಕಡಿದು ಕೊಲೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಪಾಂಡೇಶ್ವರ ಪೊಲೀಸರು 6 ಮಂದಿ ಆರೋಪಿಗಳನ್ನು ಗುರುವಾರ ಬಂಧಿಸಿದ್ದಾರೆ. ಗೋರಿಗುಡ್ಡ ವೆಲೆನ್ಸಿಯಾದ ನಿಶಾಕ್ ಪೂಜಾರಿ ಯಾನೆ ನಿಶಾಕ್ (28), ಗೋರಿಗುಡ್ಡ ನೆಹರೂ ರಸ್ತೆಯ ವಿನೇಶ್ ಕುಮಾರ್ (30), ಮುಳಿಹಿತ್ಲು ಟೈಲರ್ ರೋಡ್‌ನ ಸಚಿನ್ ಶೆಟ್ಟಿ ಯಾನೆ ಸಚಿನ್ (22), ಜಪ್ಪಿನಮೊಗರು ತಂದೊಳಿಗೆಯ ಗಣೇಶ್ ಕುಲಾಲ್ ಯಾನೆ ಗಣೇಶ್ ಯಾನೆ ಗಂಟೆ (34), ಕಂಕನಾಡಿಯ ಗೋರಿಗುಡ್ಡೆ ನೆಕ್ಕರೆಮಾರ್‌ನ ಪ್ರವೀಣ್ ಪೂಜಾರಿ (42), ಜಪ್ಪು ಕುಡ್ಪಾಡಿಯ ಸಂದೀಪ್ ಶೆಟ್ಟಿ (33) ಬಂಧಿತ ಆರೋಪಿಗಳು. ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ 5 ಮಾರಕಾಸ್ತ್ರ ಮತ್ತು ಮೊಬೈಲ್ ಸಹಿತ 2 ಬೈಕ್ ವಶಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. 2016ರಲ್ಲಿ ಮಾರ್ನಮಿಕಟ್ಟೆಯ ಸಂದೀಪ್ ಶೆಟ್ಟಿಯನ್ನು ಮೆಲ್ರಿಕ್ ಡಿಸೋಜ ಮತ್ತಾತನ ಸಹಚರರು ಕೊಲೆಗೆ ಯತ್ನಿಸಿದ್ದರು. ಈ ಮಧ್ಯೆ ಆರೋಪಿ ನಿಶಾಕ್ ಪೂಜಾರಿ…

Read More

UN NETWORKS ಮುಡಿಪು: ಗಡಿಕಾಯುವ ಸೈನಿಕರು ಕೊರೆಯುವ ಚಳಿಗೂ ಎದೆಗುಂದದೆ ನಮ್ಮ ರಕ್ಷಣೆಗಾಗಿ ಹಗಲಿರುಳು ಸೇವೆ ಸಲ್ಲಿಸುತ್ತಿದ್ದಾರೆ. ಅವರಿಂದಾಗಿಯೇ ನಾವು ನೆಮ್ಮದಿಯುತವಾದ ಜೀವನವನ್ನು ನಡೆಸುತ್ತಿದ್ದೇವೆ. ಆದ್ದರಿಂದ ನಾವು ಪ್ರತಿನಿತ್ಯ ದೇವರಲ್ಲಿ ನಮಗಾಗಿ ಪ್ರಾರ್ಥನೆ ಸಲ್ಲಿಸುತ್ತೇವೆ ಇದರ ಜೊತೆ ದೇಶ ಪ್ರೇಮದೊಂದಿಗೆ ಗಡಿಕಾಯುವ ಸೈನಿಕರಿಗೂ ಪ್ರತಿದಿನ ಪ್ರಾರ್ಥನೆ ಸಲ್ಲಿಸಿ ಪುಣ್ಯ ಕಟ್ಟಿಕೊಳ್ಳೋಣ ಎಂದು ಭಾರತೀಯ ಸೇನೆಯ ನಿವೃತ್ತ ಬ್ರಿಗೇಡಿಯರ್ ಐ.ಎನ್.ರೈ ಅವರು ಹೇಳಿದರು. ಅಸೈಗೋಳಿಯಲ್ಲಿರುವ ಅಭಯ ಆಶ್ರಯದ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ಬುಧವಾರ ಅಭಯಾಶ್ರಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಇತ್ತೀಚಿನ ದಿನಗಳಲ್ಲಿ ಹಿರಿಯರು ಒಬ್ಬಂಟಿಗಳಾಗುತ್ತಿರುವ ಪ್ರಕರಣಗಳು ಹೆಚ್ಚುತ್ತಿರುವುದನ್ನು ನಾವು ನೋಡುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಹೆಚ್ಚಬಹುದು. ಆದ್ದರಿಂದ ಅನಾಥರಿಗೆ, ಅಥವಾ ಹಿರಿಯ ನಾಗರಿಕರಿಗೆ ವಾತ್ಸಲ್ಯದೊಂದಿಗೆ ಆಶ್ರಯವನ್ನು ಕೊಡುವ ಇಂತಹ ಅಭಯಾಶ್ರಗಳು ಬಹಳ ಮಹತ್ವದ್ದಾಗಿದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಭಾರತೀಯ ಸೇನೆಯ ನಿವೃತ್ತ ಬ್ರಿಗೇಡಿಯರ್ ಐ.ಎನ್.ರೈ, ನಿಟ್ಟೆ ವಿವಿಯ ಎನ್. ವಿನಯ್ ಹೆಗ್ಡೆ ಹಾಗೂ ಆಳ್ವಾಸ್ ಶಿಕ್ಷಣ ಸಂಸ್ಥೆಯ ಮೋಹನ್ ಆಳ್ವ ಅವರನ್ನು…

Read More

UN NETWORKS ಉಳ್ಳಾಲ: ದೇರಳಕಟ್ಟೆ ನೇತಾಜಿ ಸೂಭಾಷ್ ಚಂದ್ರ ಭೋಸ್ ಸರಕಾರಿ ಪ್ರೌಢಶಾಲೆಯ ಹಳೆ ವಿದ್ಯಾರ್ಥಿ ಸಂಘದ ಗೌರವಾಧ್ಯಕ್ಷರಾಗಿ ನಿವೃತ್ತ ಶಿಕ್ಷಕ ರಮೇಶ್ ಸಲ್ಯಾನ್, ಸಲಹೆಗಾರರಾಗಿ ಬೆಳ್ಮ ಗ್ರಾ.ಪಂ ಅಧ್ಯಕ್ಷ ವಿಜಯ ಕೃಷ್ಣ ಪೂಜಾರಿ, ಪಂಚಾಯತ್ ಉಪಾಧ್ಯಕ್ಷ ಬಿ.ಎಂ ಅಬ್ದುಲ್ ಸತ್ತಾರ್, ಪಂಚಾಯತ್ ಸದಸ್ಯರಾದ ಯೂಸುಫ್ ಬಾವ, ಕಬೀರ್.ಡಿ, ನಿವೃತ್ತ ಅಧಿಕಾರಿ ನಾರಾಯಣ ಶೆಟ್ಟಿ, ಶಾಲಾ ಮುಖ್ಯೋಪಾಧ್ಯಾರು ಚಂಚಲಾಕ್ಷಿ, ನಯನರಾಜ್, ಇಸ್ಮಾಯಿಲ್ ಪಿ.ಐ, ಅಧ್ಯಕ್ಷರಾಗಿ ಶಿಹಾಬುದ್ದೀನ್.ಡಿ, ಉಪಾಧ್ಯಕ್ಷರುಗಳಾಗಿ ಶಿವಪ್ರಸಾದ್, ಅನಿಲ್ ಲೋಬೋ,ಕಾರ್ಯದರ್ಶಿಯಾಗಿ ಸಂದೀಪ್ ಪೂಜಾರಿ, ಜೊತೆ ಕಾರ್ಯದರ್ಶಿಯಾಗಿ ಇರ್ಷಾದ್ ಟಿ.ಎಂ, ಕೋಶಾಧಿಕಾರಿಯಾಗಿ ಸಂದೀಪ್ ಅಚಾರ್ಯ, ಜೊತೆಕೋಶಾಧಿಕಾರಿಯಾಗಿ ಉಬೈದುಲ್ಲಾ.ಡಿ, ಸಂಘಟನಾ ಕಾರ್ಯದರ್ಶಿಯಾಗಿ ಮಿಥುನ್ ರಾಜ್.ಬಿ, ಜೊತೆ ಸಂಘಟನೆ ಕಾರ್ಯದರ್ಶಿಯಾಗಿ ನೌಫಲ್.ಬಿ, ಮಾಧ್ಯಮ ಕಾರ್ಯದರ್ಶಿಗಳಾಗಿ ಅರೀಫ್ ಕಲ್ಕಟ್ಟ, ಸಿದ್ದಾನಂದ, ಕ್ರೀಡಾ ಕಾರ್ಯದರ್ಶಿಗಳಾಗಿ ಅಕ್ರಂ ಯು.ಬಿ, ಬಾಲಕೃಷ್ಣ, ಸದಸ್ಯರಾದ ನಿತಿನ್ ಬಿ.ಎ, ಸಂದೇಶ್, ಮುಹಮ್ಮದ್ ರಫೀಕ್, ಮುಹಮ್ಮದ್ ಇಲ್ಯಾಸ್, ರಾಜೇಶ್, ಅತುಲ್ ಕುಮಾರ್, ಮಹಾಂತೇಶ್, ಅಬ್ದುಲ್ ನಾಸೀರ್ ಮುಂತಾದವರು ಈ ಸಂದರ್ಭ ಆಯ್ಕೆ ಮಾಡಲಾಯಿತು.

Read More

UN NETWORK ಮಂಗಳೂರು: ಹೊಸ ವರುಷದ ಹೆಸರಿನಲ್ಲಿ ಡಿ. 31 ನಗರದ ಹಲವು ಹೋಟೆಲ್, ಪಬ್ ಮತ್ತು ಕೆಲವು ಸಾರ್ವಜನಿಕ ಸ್ಥಳಗಳಲ್ಲಿ ಡಿ ಜೆ ಪಾರ್ಟಿ, ಅಶ್ಲೀಲ ನೃತ್ಯ ಮತ್ತು ಮಾದಕ ದ್ರವ್ಯಗಳ ಪಾನ ಪಾರ್ಟಿ ಆಯೋಜನೆ ಮಾಡಿದ್ದು ಇದನ್ನು ವಿಶ್ವಹಿಂದೂ ಪರಿಷದ್ – ಬಜರಂಗದಳ ತೀವ್ರವಾಗಿ ಖಂಡಿಸಿದೆ. ಈಗಾಗಲೇ ಲವ್ ಜಿಹಾದ್ ಜಿಲ್ಲೆಯಲ್ಲಿ ತೀವ್ರವಾಗಿದ್ದು ಮುಗ್ದ ಹೆಣ್ಣುಮಕ್ಕಳನ್ನು ಇಂತಹ ಕಾರ್ಯಕ್ರಮಗಳಿಗೆ ಭಾಗವಹಿಸಲು ಪ್ರಚೋದನೆ ನೀಡಲಾಗುತ್ತಿದೆ. ಆದುದರಿಂದ ಯಾವುದೇ ಹೋಟೆಲ್, ಪಬ್ ಗಳಿಗೆ ಯಾವುದೇ ಡಿ ಜೆ ಪಾರ್ಟಿ ನಡೆಸಲು ಅನುಮತಿ ಪೊಲೀಸ್ ಇಲಾಖೆ ನೀಡಬಾರದು . ಎಲ್ಲಾ ಬಾರ್ ಪಬ್ ಗಳು ರಾತ್ರಿ 11:00ಗಂಟೆ ಒಳಗೆ ಮುಚ್ಚಬೇಕು ಎಂದು ಪೊಲೀಸ್ ಕಮೀಷನರಿಗೆ ಬಜರಂಗದಳ ಮನವಿ ಮಾಡಿತು. ಒಂದು ವೇಳೆ ಯಾವುದೇ ಅಹಿತಕರ ಘಟನೆ ನಡೆದರೆ ಪೊಲೀಸ್ ಇಲಾಖೆ ನೇರ ಹೊಣೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

Read More

UN NETWORKS ಧಾರವಾಡ : ಗ್ರಾಮೀಣ ಪ್ರದೇಶದ ಮಸೀದಿಗಳಲ್ಲಿ ಶೌಚಾಲಯ, ಕುಡಿವ ನೀರಿನ ಸೌಲಭ್ಯವಿಲ್ಲ ಎಂಬ ಮನವಿಗೆ ಸ್ಪಂದಿಸಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ, ತಕ್ಷಣ ಆ ಸೌಲಭ್ಯ ವ್ಯವಸ್ಥೆ ಮಾಡುವಂತೆ ಕರ್ನಾಟಕದ ಮುಖ್ಯ ಕಾರ್ಯದರ್ಶಿಗೆ ಸೂಚಿಸಿರುವುದು ಧಾರವಾಡ ಜಿಲ್ಲೆಯ ಅಧಿಕಾರಿ ವರ್ಗದಲ್ಲಿ ತೀವ್ರ ಸಂಚಲನಕ್ಕೆ ಕಾರಣವಾಗಿದೆ. ಧಾರವಾಡ ಜಿಲ್ಲೆ ಅಂಜುಮಾನ್ ಎ ಇಸ್ಲಾಂ ಸಂಸ್ಥೆ ಅಧ್ಯಕ್ಷರಾದ ಎಚ್.ಎಂ. ಕೊಪ್ಪದ ಅವರು ಗ್ರಾಮೀಣ ಭಾಗದ ಮಸೀದಿಗಳಲ್ಲಿ ಮೂಲಭೂತ ಸೌಕರ್ಯಗಳ ಕೊರತೆಯಿರುವ ಬಗ್ಗೆ ಪತ್ರ ಬರೆದು ಸಮಸ್ಯೆ ನಿವೇದಿಸಿ ಕೊಂಡಿದ್ದರು. ಮುಸ್ಲಿಮರು ನಿತ್ಯ ನಮಾಜು ಮಾಡುವ ಬಹುತೇಕ ಮಸೀದಿಗಳಲ್ಲಿ ಶೌಚಾಲಯ, ನೀರಿನ ವ್ಯವಸ್ಥೆ ಅಷ್ಟಕಷ್ಟೆ. ನೂರಾರು ಸಂಖ್ಯೆಯಲ್ಲಿ ಸಾಮೂಹಿಕ ಪ್ರಾರ್ಥನೆಗೆ ಬರುವವರಿಗೆ ಈ ಮೂಲಸೌಕರ್ಯಗಳ ಕೊರತೆ ಎದ್ದು ಕಾಣುತ್ತಿದೆ. ಇಲ್ಲೂ ಸ್ವಚ್ಛ ಭಾರತ ಅಭಿಯಾನದಡಿ ಶೌಚಾಲಯ ನಿರ್ಮಿಸಿ, ನೀರಿನ ವ್ಯವಸ್ಥೆ ಕಲ್ಪಿಸಿದರೆ ಉತ್ತಮವಾಗುತ್ತದೆ ಎಂದು ಎಚ್.ಎಂ. ಕೊಪ್ಪದ ಅವರು ಪ್ರಧಾನಿಗೆ ಪತ್ರದಲ್ಲಿ ತಿಳಿಸಿದ್ದರು. ಈ ಮನವಿಗೆ ಪ್ರಧಾನ ಮಂತ್ರಿ ಕಾರ್ಯಾಲಯದಿಂದ ಎರಡೇ ದಿನಗಳಲ್ಲಿ…

Read More