Author: UllalaVani

Kannada News From Coastal Karnataka

UN NETWORKS ಸುರತ್ಕಲ್: ಮುಹಿಯುದ್ದೀನ್ ಜುಮಾ ಮಸೀದಿ, ಈದ್ಗಾ ಜುಮಾ ಮಸೀದಿ ಮತ್ತು ಗೌಸಯಾ ಕಾಂಪ್ಲೆಕ್ಸ್ ಇದರ ಅಡಳಿತಕ್ಕೆ ಒಳಪಟ್ಟ ತಡಂಬೈಲಿನ ನೂರಲ್ ಹುದಾ ಮದ್ರಸ ಹಳೆ ವಿದ್ಯಾರ್ಥಿ ಸಂಘದ ವತಿಯಿಂದ ಮೀಲಾದ್ ಸಂದೇಶ ಮುಹಿಯುದ್ದೀನ್ ಜುಮಾ ಮಸೀದಿ ವಠಾರದಲ್ಲಿ ಭಾನುವಾರ ನಡೆಯಿತು. ಮೊಹಮ್ಮದ್ ಇಮ್ತಿಯಾಝ್ ಪ್ರೀತಿಯ ತಾಯಿ ವಿಷಯದಲ್ಲಿ ಮತ್ತು ಅಬ್ದುಲ್ ಜಲೀಲ್ ಸಖಾಫಿ ಪ್ರೀತಿಯ ಪ್ರವಾದಿ ಎಂಬ ವಿಷಯದ ಕುರಿತು ಮಾತನಾಡಿದರು. ಮುಹಿಯುದ್ದೀನ್ ಜುಮಾ ಮಸೀದಿ ಖತೀಬ್ ಇಸ್ಮಾಯಿಲ್ ಸ ಅದಿ ದುಅ ನೆರವೇರಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಮುಹಿಯುದ್ದೀನ್ ಜುಮಾ ಮಸೀದಿ ಸಮಿತಿ ಹಾಗೂ ನೂರಲ್ ಹುದಾ ಮದ್ರಸ ಹಳೆ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷ ಪಿ.ಎ ಮೊಹಮ್ಮದಾಲಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು. ಈ ಸಂದರ್ಭ ವಿಶೇಷ ಮಾಡಿದ ಮಸೀದಿ ಸಿಬ್ಬಂದಿ ಸೇರಿದಂತೆ ಹಲವರನ್ನು ಹಳೆ ವಿದ್ಯಾರ್ಥಿ ಸಂಘದ ವತಿಯಿಂದ ಸನ್ಮಾನಿಸಲಾಯಿತು. ಮುಹಿಯುದ್ದೀನ್ ಜುಮಾ ಮಸೀದಿ ಅಧ್ಯಕ್ಷ ಅಬ್ದುಲ್ ಅಝೀಝ್ ಸುರತ್ಕಲ್, ಪ್ರ.ಕಾರ್ಯದರ್ಶಿ ಐ.ಎಚ್ ಮೊದ್ದೀನಬ್ಬ, ಹಳೆ ವಿದ್ಯಾರ್ಥಿ ಸಂಘದ…

Read More

UN NETWORKS ಉಳ್ಳಾಲ: ವೆಸ್ಟರ್ನ್ ಇನ್‍ಸ್ಟಿಟ್ಯೂಟ್ ಆಫ್ ಮಾರ್ಷಲ್ ಆಟ್ರ್ಸ್ ಇವರ ವತಿಯಿಂದ ಮಂಗಳೂರಲ್ಲಿ ನಡೆಸಿದ ರಾಷ್ಟ್ರಮಟ್ಟದ ಕರಾಟೆ ಸ್ಪರ್ಧೆಯಲ್ಲಿ ನಿತ್ಯಾಧರ್ ಆಂಗ್ಲಮಾಧ್ಯಮ ಶಾಲೆಯ ವಿದ್ಯಾರ್ಥಿ ಆದಿತ್ಯ ಕೆ. ಇವರು ಕಟಾ ಮತ್ತು ಕುಮಿಟೆಯಲ್ಲಿ ಚಿನ್ನದ ಪದಕ ಹಾಗೂ ಕೊಯಮತ್ತೂರಿನಲ್ಲಿ ನಡೆದ ಅಂತರಾಷ್ಟ್ರೀಯ ಓಪನ್ ಕರಾಟೆ ಚಾಂಪಿಯನ್ ಶಿಪ್‍ನ ಕುಮಿಟೆ ಸ್ಪರ್ಧೆಯಲ್ಲಿ ಕಂಚಿನ ಪದಕಗಳಿಸಿರುತ್ತಾರೆ. ಇವರು ಕುತ್ತಾರು ದುರ್ಗಾವಾಹಿನಿ ಮಹಿಳಾ ಮಂಡಲದಲ್ಲಿ ಕರಾಟೆ ಶಿಕ್ಷಕ ದರ್ನಪ್ಪರವರಿಂದ ತರಬೇತಿಯನ್ನು ಪಡೆಯುತ್ತಿದ್ದು, ಆಶಾ ಕುಶಲಪ್ಪ ದಂಪತಿಗಳ ಪುತ್ರ.

Read More

UN NETWORKS ಉಳ್ಳಾಲ: ನವೋದಯ ಫ್ರೆಂಡ್ಸ್ ಉಳ್ಳಾಲ ಬೈಲ್ ಇದರ ವತಿಯಿಂದ ಚಿಣ್ಣರಿಗಾಗಿ ಚಿತ್ರಕಲಾ ಮತ್ತು ಆವೆ ಮಣ್ಣಿನ ಕಲಾಕೃತಿ ತರಬೇತಿ ಶಿಬಿರ ತೊಕ್ಕೊಟ್ಟು ಕ್ಲಿಕ್ ಮ್ಯಾರೇಜ್ ಹಾಲ್‍ನಲ್ಲಿ ಇತ್ತೀಚೆಗೆ ನಡೆಯಿತು. ಹಿರಿಯ ಕಲಾವಿದ ಉಮೇಶ್ ಬೋಳಾರ್ ತರಬೇತಿ ಶಿಬಿರವನ್ನು ನಡೆಸಿಕೊಟ್ಟರು. ಕಾರ್ಯಕ್ರಮದಲ್ಲಿ ಪ್ರವೀಣ್ ಕುಮಾರ್, ಯೋಗೇಶ್ ಉಳ್ಳಾಲ್, ಭಾಸ್ಕರ್ ಉಳ್ಳಾಲಬೈಲ್, ನಾರಾಯಣ ಉಳ್ಳಾಲ್, ಶ್ರೀಲತಾ ಉಳ್ಳಾಲ್ ಬೈಲ್, ಮಹೇಶ್ ಉಳ್ಳಾಲ್ ಬೈಲ್, ಸದಾಶಿವ ಉಳ್ಳಾಲ್ ಬೈಲ್, ನವೋದಯ ತಂಡದ ಅಧ್ಯಕ್ಷ ಹಾಗೂ ಸರ್ವ ಸದಸ್ಯರು ಮತ್ತು ಚಿಣ್ಣರು ಉಪಸ್ಥಿತರಿದ್ದರು. ಈ ಸಂದರ್ಭ ಕಲಾವಿದ ಉಮೇಶ್ ಬೋಳಾರ್ ಇವರನ್ನು ಸನ್ಮಾನಿಸಲಾಯಿತು. ವಿನಯ್ ಉಳ್ಳಾಲ್ ಕಾರ್ಯಕ್ರಮ ನಿರೂಪಿಸಿದರು.

Read More

UN NETWORKS ಉಳ್ಳಾಲ: ಡೈಮಂಡ್ ಸ್ಪೋಟ್ಸ್ ಕ್ಲಬ್ ಮುಕ್ಕಚ್ಚೇರಿ ಇದರ ಅಧ್ಯಕ್ಷರಾಗಿ ಖಲೀಲ್ ಮುಕ್ಕಚೇರಿ ಆಯ್ಕೆಯಾದರು. ಮಾಸ್ಕ್ ಫುಟ್ ಬಾಲ್ ಮೈದಾನದಲ್ಲಿ ಖಲೀಲ್ ಇಬ್ರಾಹಿಂ ಅವರ ಅಧ್ಯಕ್ಷತೆಯಲ್ಲಿ ನಡೆದ ವಾರ್ಷಿಕ ಮಹಾಸಭೆಯಲ್ಲಿ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷರಾಗಿ ಖಾಲಿದ್ ಮುಕ್ಕಚೇರಿ, ಪ್ರಧಾನ ಕಾರ್ಯದರ್ಶಿಯಾಗಿ ಅಬ್ದುಲ್ ರಝಾಕ್ ಸರ್ಮದ್, ಕೋಶಾಧಿಕಾರಿಯಾಗಿ ಇಕ್ಬಲ್ ಇವರುಗಳನ್ನು ಆಯ್ಕೆಮಾಡಲಾಯಿತು.

Read More

UN NETWORKS ಉಳ್ಳಾಲ: ಬಂಟ ಸಮಾಜದ ಪ್ರತಿಷ್ಠಿತ ಹೇರೂರು ಮನೆತನದ ದಿ. ಗುಡ್ಡಣ್ಣ ಅಳ್ವ ಅವರ ಪುತ್ರ ಡಾ| ಹೇರೂರು ಮನಮೋಹನ ಆಳ್ವ (84) ಡಿ. 24ರಂದು ನಿಧನ ಹೊಂದಿದರು. ಮೃತರು ಮೂವರು ಪುತ್ರಿಯರನ್ನು ಅಗಲಿದ್ದಾರೆ. ತಮಿಳುನಾಡಿನಲ್ಲಿ ವೈದ್ಯಕೀಯ ಪದವಿ ಪಡೆದ ಬಳಿಕ ಸುಮಾರು 55 ವರ್ಷಗಳ ಕಾಲ ಖಾಸಾಗಿ, ಸರಕಾರಿ ವೈದ್ಯರಾಗಿ ತಮಿಳುನಾಡಿನ ವಿವಿಧ ಪ್ರದೇಶಗಳಲ್ಲಿ ಸೇವೆ ಸಲ್ಲಿಸಿದ್ದರು. ತಮಿಳುನಾಡಿನ ತಿರುಚಿ ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ ಸಾವಿರಾರು ಬಡ ರೋಗಿಗಳಿಗೆ ವೈದ್ಯಕೀಯ ಸೇವೆ ನೀಡಿದ್ದ ಅವರು `ಆಳ್ವ ಡಾಕ್ಟರ್’ ಎಂದೇ ಪ್ರಸಿದ್ದಿಯನ್ನು ಪಡೆದಿದ್ದರು. ಇವರ ಗ್ರಾಮೀಣ ವೈದ್ಯಕೀಯ ಸೇವೆಯನ್ನು ಗುರುತಿಸಿ ಇಂಡಿಯನ್ ಮೆಡಿಕಲ್ ಅಸೋಸಿಯೇಶನ್ (ಐಎಂಎ) ಪ್ರಶಸ್ತಿಯನ್ನು ನೀಡಿ ಗೌರವಿಸಿತ್ತು. ವೈದ್ಯಕೀಯ ಜೀವನದೊಂದಿಗೆ ಸಾಮಾಜಿಕವಾಗಿ, ಧಾರ್ಮಿಕವಾಗಿ ಶೈಕ್ಷಣಿಕವಾಗಿ ತೊಡಗಿಸಿಕೊಂಡಿದ್ದ ಅವರು ಕೊಡುಗೈದಾನಿಯಾಗಿದ್ದರು.

Read More

UN NETWORKS ಬೆಳ್ತಂಗಡಿ:ಸಮಾಜದ ಸಾಂತ್ವನ ಕೇಂದ್ರ ಮಲ್ಜಹ್ ಉಜಿರೆ ಇಲ್ಲಿಗೆ ಕರ್ನಾಟಕ ಕಲ್ಚರಲ್ ಫೌಂಡೇಶನ್(KCF)ಕಾರ್ಯಕರ್ತರು 23/12/017 ನಿನ್ನೆ ಬೇಟಿ ಕೊಟ್ಟರು. ಬೆಳ್ತಂಗಡಿ ತಾಲೂಕಿನ ಸುತ್ತಮುತ್ತಲಿನ ಪ್ರದೇಶ ಹಾಗೂ ಕರ್ನಾಟಕ,ಕೇರಳದ ಅಸಹಾಯಕ,ಬಡ,ನಿರ್ಗತಿಕ,ರೋಗಿಗಳ ಸಮೀಕ್ಷೆ ನಡೆಸಿ ಮಲ್ಜಹ್ ಸಂಸ್ಥೆಯ ರೂವಾರಿ ಸೆಯ್ಯಿದ್ ಅಲವಿ ಜಲಾಲುದ್ದೀನ್ ತಙಳ್ ಮದನಿ ಅಲ್ ಹಾದಿ ರವರು ಹಣ,ವಸತಿಗಳನ್ನು ನೀಡಿ ಪೋಷಿಸುತ್ತಾ ಬಂದಿರುತ್ತಾರೆ. ಈ ಕುರಿತು ಸಮಲೋಚನೆ ಸಭೆ ಕೆಸಿಎಫ್ ನಾಯಕರುಗಳಿಂದ ನಡೆಯಿತು.ಮಲ್ಜಹ್ ಸಂಸ್ಥೆ ಈ ವರೆಗೆ ಮಾಡಿದ ಅದ್ವಿತೀಯ ಸೇವೆಯ ಸಮಗ್ರ ಮಾಹಿತಿಯನ್ನು ಕಲೆ ಹಾಕಿ ಕೃತಿ ರಚಿಸುವುದಾಗಿ ಯುವ ಬರಹಗಾರ ಸಿ.ಐ.ಇಸ್ಹಾಕ್ ಫಜೀರ್ ತಿಳಿಸಿದರು. ಇದನ್ನು ಸ್ವಲಾತ್ ಕಾರ್ಯಕ್ರಮದಲ್ಲಿ ಸೈಯ್ಯಿದ್ ಜಲಾಲುದ್ದೀನ್ ತಙಳ್ ಉಜಿರೆ ಸಭಾ ಕಾರ್ಯಕ್ರಮದಲ್ಲಿ ಘೋಷಿಸಿದರು. ಮಲ್ಜಹ್ ಸಂಸ್ಥೆಯ ಮ್ಯಾನೇಜರ್ ಮೆಹಬೂಬ್ ಸಖಾಫಿ ಕಿನ್ಯ ಅವರೊಂದಿಗೆ ಕೆಸಿಎಫ್ ನಾಯಕರುಗಳದ ಸಲೀಂ ಕನ್ಯಾಡಿ,ಮೆಹಮೂದ್ ಉಳ್ಳಾಲ್,ಸಿ.ಐ.ಇಸ್ಹಾಕ್ ಫಜೀರ್, ಇಬ್ರಾಹಿಂ ಕಲ್ಕಟ್ಟ ಮತ್ತು ಅಶ್ರಫ್ ಸರಳಿಕಟ್ಟೆ ಕೆಲ ನಿಮಿಷಗಳ ಕಾಲ ಚರ್ಚೆ ನಡೆಸಿದರು.

Read More

UN NETWORKS ತಲಪಾಡಿ : ತಲಪಾಡಿ ಕೆ.ಸಿರೋಡ್ ನ ಸ್ಕೂಲ್ ಆಫ್ ಕುರಾನಿಕ್ ಸ್ಟಡೀಸ್ ಹಾಗು ಝೀನತ್ ಎಜ್ಯುಕೇಶನಲ್ ಟ್ರಸ್ಟ್( ರಿ) ಇದರ ಆಶ್ರಯದಲ್ಲಿ ವಿಶ್ವ ಅರಭಿ ಭಾಷಾ ದಿನದ ಪ್ರಯುಕ್ತ ಅರಭಿ ಬಾಷಾ ಮತ್ತು ಸಾಹಿತ್ಯ ವಿಚಾರ ಸಂಕಿರಣವು ಕೆ.ಸಿ.ರೋಡ್‍ನಲ್ಲಿ ಗುರುವಾರ ನಡೆಯಿತು. ವಿಚಾರಸಂಕಿರಣದ ಉದ್ಘಾಟನೆಯನ್ನು ಮಂಗಳೂರು ವಿಶ್ವವಿದ್ಯಾನಿಲಯದ ಪರೀಕ್ಷಾಂಗ ಕುಲಸಚಿವರಾದ ಪ್ರೊ.ಎ.ಎಂ.ಖಾನ್ ಅವರು ನೆರವೇರಿಸಿದರು. ಬಳಿಕ ಮಾತನಾಡಿದ ಅವರು ಅರಭಿ ಭಾಷೆಯು ವಿಶ್ವದ ಪ್ರಮುಖ ಸುಂದರ ಸುಲಲಿತ ಭಾಷೆಗಳಲ್ಲಿ ಒಂದಾಗಿದೆ. ಭಾಷೆಗಳಿಗೆ ಧಾರ್ಮಿಕತೆಯ ಬಣ್ಣವನ್ನು ಯಾವತ್ತೂ ಬಲಿಯಬಾರದು. ಅರಭಿ ಭಾಷೆಯು ಇಸ್ಲಾಂ ಧರ್ಮದ ಭಾಷೆ ಮುಸ್ಲಿಮರ ಭಾಷೆಯೂ ಅಲ್ಲ. ಸೃಷ್ಟಿಕರ್ತನು ಅರಭೀ ಬಾಷೆಯಲ್ಲಿ ಕುರಾನನ್ನು ಅವತೀರ್ಣಗೊಳಿಸಿದನು. ಹಾಗೂ ಆ ಕುರಾನ್‍ನಿಂದಾಗಿ ಲೋಕಕ್ಕೆ ಪ್ರಕಾಶ ಲಭಿಸಿತು ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಶಾಸಕ ಮೊಯ್ದಿನ್ ಬಾವಾ ಅವರು, ನಮ್ಮ ಜೀವನಕ್ಕೆ ಒಂದು ಸ್ಪಷ್ಟವಾದ ಗುರಿಯಿರಬೇಕು. ನಮ್ಮನ್ನು ವ್ಯರ್ಥವಾಗಿ ಇಲ್ಲಿ ಸೃಷ್ಟಿಸಲಾಗಿಲ್ಲ. ಬದಲಾವಣೆಯ ಮಾರ್ಗ ಪವಿತ್ರ ಕುರಾನ್‍ನಲ್ಲಿ…

Read More

UN NETWORKS ಉಳ್ಳಾಲ:ದೇರಳಕಟ್ಟೆ ನಿಟ್ಟೆಯ ಕೆ.ಎಸ್.ಹೆಗ್ಡೆ ಮೆಡಿಕಲ್ ಅಕಾಡೆಮಿ ವತಿಯಿಂದ ಕ್ಷೇಮ ಆಡಿಟೋರಿಯಂನಲ್ಲಿ “ಕ್ಷೇಮ ಸ್ಟೆಮ್ಕಾನ್ -2017″ರಾಷ್ಟ್ರೀಯ ಕಾರ್ಯಾಗಾರವನ್ನು ನಿಟ್ಟೆ ಕುಲಾಧಿಪತಿ ಎನ್.ವಿನಯ್ ಹೆಗ್ಡೆ ಶುಕ್ರವಾರದಂದು ಉದ್ಘಾಟಿಸಿದರು.ಬಳಿಕ ಮಾತನಾಡಿದ ಅವರು ಇಂದು ಸಂಶೋಧನಾ ಕ್ಷೇತ್ರವು ವಿಸ್ತಾರವಾಗಿ ಬೆಳೆಯುತ್ತಿದ್ದು, ಈ ನಿಟ್ಟಿನಲ್ಲಿ ಯುವ ಸಮುದಾಯ ಅವಕಾಶಗಳನ್ನು ಬಳಸಿಕೊಂಡು ಮುನ್ನಡೆಯಬೇಕು. ಸರಕಾರವು ಕೂಡಾ ಸಂಶೋಧನಾ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡಿದರೆ ವೈದ್ಯಕೀಯ ಕ್ಷೇತ್ರದಲ್ಲಿ ಹಲವಾರು ಬದಲಾವಣೆಗಳನ್ನು ಕಂಡುಕೊಳ್ಳಲು ಸಾಧ್ಯವಿದೆ ಎಂದರು. ನಿಟ್ಟೆ ವಿವಿಯು ಕುಲಪತಿಗಳಾದ ಡಾ.ಸತೀಶ್ ಕುಮಾರ್ ಭಂಡಾರಿ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.ಕಾರ್ಯಕ್ರಮದಲ್ಲಿ ನಿಟ್ಟೆಯ ಸಹಕುಲಾಧಿಪತಿ ಡಾ.ಶಾಂತಾರಾಮ ಶೆಟ್ಟಿ, ಯು.ಕೆ.ಯ ಕ್ಯಾಂಟ್‍ಬರ್ರಿ ಕ್ರಿಸ್ಟ್‍ಚರ್ಚ್ ವಿ.ವಿಯ ಮುಖ್ಯಸ್ಥರಾದ ಪ್ರೊ.ಡಾ.ಎ.ಅನಂತರಾಮ್ ಶೆಟ್ಟಿ, ಸೌತ್ ಕೊರಿಯಾದ ಸೆಲ್ ಥೆರಫಿ ಸೆಂಟರ್‍ನ ದಿ ಕೆಥೋಲಿಕ್ ವಿ.ವಿಯ ನಿರ್ದೇಶಕ ಸಿಯೊಕ್ ಜಂಗ್ ಕಿಮ್, ಕ್ಷೇಮದ ಡೀನ್ ಪ್ರೊ..ಪಿ.ಎಸ್.ಪ್ರಕಾಶ್, ವೈಸ್ ಡೀನ್ ಡಾ.ಕೆ.ಜಯಪ್ರಕಾಶ್ ಶೆಟ್ಟಿ, ಡಾ.ಅಲ್ಕ ಕುಲಕರ್ಣಿ, ಡಾ.ಲಾರೆನ್ಸ್ ಮ್ಯಾಥ್ಯೂಸ್, ಡಾ.ಜಿ.ಕೆ.ಸ್ವಾಮಿ, ಡಾ.ಶೇಷಾದ್ರಿ ಮೊದಲಾದವರು ಉಪಸ್ಥಿತರಿದ್ದರು. ಡಾ.ಪಿ.ಎಸ್. ಪ್ರಕಾಶ್ ಸ್ವಾಗತಿಸಿ, ಡಾ.ಲಾರೆನ್ಸ್…

Read More

UN NETWORKS ಕೊಣಾಜೆ: ವಿಜಾಪುರದ ಧಾನಮ್ಮ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕೈಗೊಳ್ಳದಿದ್ದಲ್ಲಿ ಎಲ್ಲಾ ಸಮಾನ ಮನಸ್ಕರು ಸೇರಿಕೊಂಡು ಕರ್ನಾಟಕ ಬಂದ್ ನಡೆಸುವ ಅನಿವಾರ್ಯ ಎದುರಾಗಬಹುದು, ಈ ನಡುವೆ ಸಂಭವಿಸುವ ದುರತಂತಗಳಿಗೆ ಕೇಂದ್ರ ಮತ್ತು ರಾಜ್ಯ ಸರಕಾರವೇ ನೇರ ಹೊಣೆ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಸಂಶೋಧನಾ ವಿದ್ಯಾರ್ಥಿ ಸಂತೋಷ್ ಹೇಳಿದ್ದಾರೆ. ಅವರು ಮಂಗಳೂರು ವಿಶ್ವವಿದ್ಯಾನಿಲಯದ ಪರಿಶಿಷ್ಟ ಜಾತಿ /ಪಂಗಡದ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ, ಸಂಶೋಧನಾ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳು ಕೊಣಾಜೆ ಮಂಗಳೂರು ವಿ.ವಿ ಮುಖದ್ವಾರದಲ್ಲಿ ಶನಿವಾರ ಹಮ್ಮಿಕೊಂಡ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು. ಹಿಂದೂ ಗಳ ಬೇರೆ ಜಾತಿಯವರಾಗುತ್ತಿದ್ದಲ್ಲಿ ಹಿಂದು ಸಂಘಟನೆಗಳು ಒಗ್ಗೂಡಿ ಪ್ರತಿಭಟನೆ ನಡೆಸುತ್ತಿದ್ದರು. ಆದರೆ ಮಾನವೀಯತೆ ದೃಷ್ಟಿಯಿರದೆ ಸಾಮಾಜಿಕ ಕಳಕಳಿಯೇ ಇಲ್ಲದ ಹಿಂದು ಮುಖಂಡರು ದಲಿತರ ಬಗ್ಗೆ ಕೇವಲ ವೇದಿಕೆಗಳಲ್ಲಿ ಮಾತನಾಡಿ ಮರುಳು ಮಾಡುತ್ತಿದ್ದೀರಿ. ದಲಿತರನ್ನು ಕೇವಲ ಮತಕ್ಕಾಗಿ ಬಳಸುವ ಪಕ್ಷಗಳು ಅಮಾಯಕ ಯುವತಿ ಹತ್ಯೆ ಬಗ್ಗೆ ನಿರ್ಲಕ್ಷ್ಯ ತಾಳುತ್ತಿರುವುದರ ಹಿಂದಿನ ಸಂಚು ಏನೆಂಬುದು…

Read More

UN NETWORKS ಉಳ್ಳಾಲ: ಇನ್‍ಸ್ಟಿಟ್ಯೂಟ್ ಅಫ್ ಕರಾಟೆ ಆಂಡ್ ಅಲೈಡ್ ಆಟ್ರ್ಸ್ ಬುಡೋಕಾನ್ ಕರಾಟೆ ದೋ ಇಂಡಿಯಾ ಇದರ ವತಿಯಿಂದ ಕೋರಮಂಗಳದ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ 35ನೇ ರಾಷ್ಟ್ರಮಟ್ಟದ ಕರಾಟೆ ಚಾಂಪಿಯನ್ ಶಿಪ್, ಮಂಗಳೂರಿನ ನೆಹರು ಮೈದಾನದಲ್ಲಿ ನಡೆದ ರಾಷ್ಟ್ರಮಟ್ಟದ ಕರಾಟೆ ಚಾಂಪಿಯನ್ ಶಿಪ್ ಹಾಗೂ ಪಡುಬಿದ್ರೆಯಲ್ಲಿ ನಡೆದ 28ನೇ ರಾಜ್ಯ ಮಟ್ಟದ ಅಂತರ್ ಶಾಖಾ ಕರಾಟೆ ಚಾಂಪಿಯನ್ ಶಿಪ್‍ನಲ್ಲಿ ದಿಶಾ ಜಿ. ಉಳ್ಳಾಲ್ ಇವರು 3 ಚಿನ್ನ, 1 ಬೆಳ್ಳಿ, ಹಾಗೂ 1 ಕಂಚಿನ ಪದಕ ಪಡೆದುಕೊಂಡಿದ್ದಾರೆ. ಇವರು ಅನಿಲ್ ರಾಜ್ ಉಳ್ಳಾಲ್ ಇವರಿಂದ ತರಬೇತಿಯನ್ನು ಪಡೆಯುತ್ತಿದ್ದು, ಗಿರೀಶ್ ಉಳ್ಳಾಲ್ ಹಾಗೂ ಶ್ರೀದೇವಿ ದಂಪತಿಯ ಪುತ್ರಿ.

Read More