UN NETWORKS ಹಿಮಾಚಲಪ್ರದೇಶ: ಹಿಮಾಚಲ ಪ್ರದೇಶದ 14ನೇ ಮುಖ್ಯಮಂತ್ರಿಯಾಗಿ ಜೈರಾಮ್ ಠಾಕೂರ್ ಇಂದು ಪ್ರಮಾಣ ವಚನ ಸ್ವೀಕರಿಸಿದರು. ಸಚಿವರು ಹಾಗು ಠಾಕೂರ್ ಅವರಿಗೆ ರಾಜ್ಯಪಾಲ ಆಚಾರ್ಯ ದೇವ್ರತ್ ಪ್ರಮಾಣ ವಚನ ಭೋದಿಸಿದರು. ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ನಾಯಕ ಅಮಿತ್ ಶಾ, ಬಿಜೆಪಿ ಹಿರಿಯ ನಾಯಕ ಎಲ್.ಕೆ.ಅಡ್ವಾಣಿ ಸೇರಿದಂತೆ ಮತ್ತಿತರ ಕೇಂದ್ರ ಸಚಿವರು ಉಪಸ್ಥಿತರಿದ್ದರು. ಮಂಡ್ಯ ಜಿಲ್ಲೆಯಿಂದ ಮೊದಲ ಮುಖ್ಯಮಂತ್ರಿಯಾಗಿರುವ ಠಾಕೂರ್ ಹಿಮಾಚಲ ಪ್ರದೇಶದ 14ನೇ ಸಿಎಂ ಆಗಿದ್ದಾರೆ. ಮೊಹಿಂದರ್ ಸಿಂಗ್, ಕೃಷ್ಣನ್ ಕಪೂರ್, ಸುರೇಶ್ ಭಾರದ್ವಾಜ್, ಅನಿಲ್ ಶರ್ಮಾ, ಸರ್ವೀನ್ ಚೌಧರಿ, ರಾಮ್ ಲಾಲ್ ಮರ್ಕಂಡ, ವಿಪಿನ್ ಪರ್ಮಾರ್, ವಿರೇಂದರ್ ಕನ್ವಾರ್, ಗೋವಿಂದ್ ಠಾಕೂರ್, ರಾಜೀವ್ ಸೈಜಲ್ ಹಾಗು ವಿಕ್ರಮ್ ಸಿಂಗ್ ಹಿಮಾಚಲ ಪ್ರದೇಶದ ನೂತನ ಸಚಿವರುಗಳಾಗಿದ್ದಾರೆ.
Author: UllalaVani
UN NETWORKS ಕಲ್ಲಡ್ಕ : ಕಲ್ಲಡ್ಕದಲ್ಲಿ ಮಂಗಳವಾರ ರಾತ್ರಿ ಕೊಲೆ ಆರೋಪಿಯೋರ್ವನಿಗೆ ಚೂರಿ ಇರಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯೋರ್ವನನ್ನು ಬಂಟ್ವಾಳ ನಗರ ಠಾಣೆ ಪೊಲೀಸರು ಇಂದು ಬಂಧಿಸಿದ್ದಾರೆ.ಕಲ್ಲಡ್ಕದ ನಿವಾಸಿ ಖಲೀಲ್ ಬಂಧಿತ ಆರೋಪಿ ಎಂದು ತಿಳಿದುಬಂದಿದೆ. ಕರೋಪಾಡಿ ಗ್ರಾಮ ಪಂಚಾಯತ್‌ನ ಉಪಾಧ್ಯಕ್ಷರಾಗಿದ್ದ ಜಲೀಲ್ ಕರೋಪಾಡಿ ಕೊಲೆ ಪ್ರಕರಣದ ಅರೋಪಿಗಳ ಪೈಕಿ ಓರ್ವನಾದ ವೀರ ಕಂಬದ ಕೇಶವ ಮಂಗಳವಾರ ರಾತ್ರಿ ಮನೆಯಿಂದ ತನ್ನ ದ್ವಿಚಕ್ರ ವಾಹನದಲ್ಲಿ ಕಲ್ಲಡ್ಕಕ್ಕೆ ಆಗಮಿಸಿ ಅಂಗಡಿಯೊಂದರ ಸಮೀಪ ನಿಂತಿದ್ದ ಸಂದರ್ಭ ಹೆಲ್ಮೆಟ್ ಧರಿಸಿದ್ದ ತಂಡವೊಂದು ಈತನ ಮೇಲೆ ದಾಳಿ ನಡೆಸಿ, ಚೂರಿಯಿಂದ ಇರಿದಿತ್ತು. ಗಾಯಾಳು ಮಂಗಳೂರಿನ ಆಸ್ಪತ್ರೆಯೊಂದಕ್ಕೆ ದಾಖಲಾಗಿದ್ದು, ಅಪಾಯದಿಂದ ಪಾರಾಗಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಚೂರಿ ಇರಿತ ಘಟನೆಯಿಂದ ಸ್ಥಳದಲ್ಲಿ ಆತಂಕದ ಸ್ಥಿತಿ ಉಂಟಾಗಿತ್ತು. ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದ್ದು, ಮುಂಜಾಗ್ರತ ಕ್ರಮವಾಗಿ ಹೆಚ್ಚುವರಿ ಪೊಲೀಸರನ್ನು ಕರೆಸಿ, ಕಲ್ಲಡ್ಕ, ವಿಟ್ಲದಾದ್ಯಂತ ಬಿಗು ಬಂದೋಬಸ್ತು ಏರ್ಪಡಿಸಲಾಗಿತ್ತು. ಇದೀಗ ಕಲ್ಲಡ್ಕ ಪೊಲೀಸರ ನಿಯಂತ್ರಣದಲ್ಲಿದ್ದು, ಶಾಂತವಾಗಿದೆ ಎಂದು ಅಧಿಕಾರಿಗಳು…
UN NETWORKS ಮಂಗಳೂರು: ಸುರತ್ಕಲ್ ರಾಷ್ಟ್ರೀಯ ಹೆದ್ದಾರಿ ದುರಸ್ತಿ ಮಾಡದ ಹೆದ್ದಾರಿ ಪ್ರಾಧಿಕಾರದ ನಡೆಯನ್ನು ಖಂಡಿಸಿ ಅಣಕು ಶವ ಯಾತ್ರೆಯನ್ನು ಬೈಕಂಪಾಡಿ ಬಳಿ ನಡೆಸಲಾಯಿತು. ಬೈಕಂಪಾಡಿ ಎ ಪಿ ಎಂ ಸಿ ಮಾರುಕಟ್ಟೆಯ ಬಳಿಯಿಂದ ದೀಪಕ್ ಪೆಟ್ರೊಲ್ ಪಂಪ್ ವರಗೆ ಶವಯಾತ್ರೆ ಕೊಡೊಯ್ಯಲಾಯಿತು. ಬಳಿಕ ಬೃಹತ್ ಹೆದ್ದಾರಿ ಗುಂಡಿಯಲ್ಲಿ ಅಣಕು ಶವವನ್ನು ಸಾರ್ವಜನಿಕರ ದರ್ಶನಕ್ಕೆ ಇಟ್ಟು ರಸ್ತೆ ತಡೆ ನಡೆಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಅನೇಕ ಮುಖಂಡರುಗಳು ರಾಷ್ಟ್ರೀಯ ಹೆದ್ದಾರಿ 66 ಸಂಪೂರ್ಣ ಹೊಂಡಮಯವಾಗಿದೆ. ಅನೇಕ ಬೃಹತ್ ಹೊಂಡಗಳಿಂದ ಹೆದ್ದಾರಿಯಲ್ಲಿ ಪ್ರತಿ ನಿತ್ಯ ಹತ್ತಾರು ಅಪಘಾತಗಳು ನಿರಂತವಾಗಿ ನಡೆಯುತ್ತಿವೆ, ಗುಂಡಿಗಳನ್ನು ಮುಚ್ಚಲು ಕ್ರಮ ಕೈಗೊಳ್ಳಬೇಕಾದ ಹೆದ್ದಾರಿ ಪ್ರಾಧಿಕಾರ ಕಣ್ಮುಚ್ಚಿ ಕುಳಿತಿದೆ. ಹೆದ್ದಾರಿ ದುರುಸ್ಥಿ ಮಾಡದೇ ಟಾಲ್ ಸಂಗ್ರಹ ಕೂಡ ಮಾಡಲಾಗುತ್ತಿದೆ. ಈ ಕೂಡಲೇ ಕ್ರಮ ಕಯಗೊಳ್ಳದಿದ್ದಲ್ಲಿ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಸಿದರು. ಪ್ರತಿಭಟನಾರ್ಥವಾಗಿ ಪ್ತತಿಟನಕಾರರು ಅದೇ ಹೆದ್ದಾರಿ ಗುಂಡಿಯಲ್ಲಿ ಶವ ದಹನ ನಡೆಸಿ ಅಂತ್ಯ ಸಂಸ್ಕಾರ ನೆರವೇರಿಸಲಾಯಿತು. ಮುನೀರ್ ಕಾಟಿಪಳ್ಳ, ಬಿ…
UN NETWORKS ಮಂಗಳೂರು : ಕಾಂಗ್ರೇಸ್ ಹಿರಿಯ ಮುಖಂಡ ಹಾಗೂ ಮಾಜಿ ಕೇಂದ್ರ ಸಚಿವ ಬಿ.ಜನಾರ್ಧನ ಪೂಜಾರಿ ಕಾರ್ಯಕ್ರಮವೊಂದರಲ್ಲಿ ಕಣ್ಣೀರು ಹಾಕಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಅಗಿದೆ. ಬಿಲ್ಲವ ಸಮಾಜದ ಕಾರ್ಯಕ್ರಮವೊಂದರಲ್ಲಿ ಬಿಲ್ಲವ ಮುಖಂಡ ಹರಿಕೃಷ್ಣ ಬಂಟ್ವಾಳ್ ಭಾಷಣ ಮಾಡುತ್ತಿದ್ದ ಸಂದರ್ಭದಲ್ಲಿ ಪೂಜಾರಿ ಕಣ್ಣೀರು ಹಾಕುತ್ತಿರುವುದು ಕಂಡು ಬಂದಿದೆ. ಅರಣ್ಯ ಸಚಿವ ಹಾಗೂ ದಕ್ಷಿಣಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಪೂಜಾರಿಯವರನ್ನು ಹೀನಾಯವಾಗಿ ನಿಂದಿಸಿರುವ ವಿಚಾರವನ್ನು ಹೇಳುತ್ತಿರುವ ಸಂದರ್ಭದಲ್ಲಿ ಜನಾರ್ಧನ ಪೂಜಾರಿ ಕಣ್ಣೀರು ಹಾಕಿದ್ದಾರೆ.
UN NETWORKS ಉಳ್ಳಾಲ: ರಸ್ತೆ ಡಾಮರೀಕರಣಕ್ಕೆ ಅನುದಾನ ಒದಗಿಸಿದ ಸಚಿವ ಖಾದರ್ ಅವರಿಗೆ ಅಭಿನಂಧಿಸಿ ಹಾಕಲಾದ ಬ್ಯಾನರನ್ನು ಹರಿದ ಕಿಡಿಗೇಡಿಗಳಿಗೆ ದೇವರು ಒಳ್ಳೆಯ ಬುದ್ದಿ ಕೊಡುವಂತೆ ಕಾಂಗ್ರೆಸ್ ಕಾರ್ಯಕರ್ತರು ದೈವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಘಟನೆ ಕೊಲ್ಯ ಕನೀರುತೋಟದಲ್ಲಿ ನಡೆದಿದೆ. ಕೊಲ್ಯ ಕನೀರುತೋಟ ಲೋಕಯ್ಯಪಾಲು ರಸ್ತೆಗೆ ಸಚಿವ ಯು.ಟಿ.ಖಾದರ್ ಅವರ 20 ಲಕ್ಷ ಅನುದಾನದಲ್ಲಿ ಡಾಮರೀಕರಣ ನಡೆಸಲಾಗಿತ್ತು. ಇದಕ್ಕೆ ಕೃತಜ್ಞತಾಪೂರ್ವಕವಾಗಿ ಅಭಿಮಾನಿಗಳು ಅಭಿನಂಧನೆ ಸಲ್ಲಿಸಿದ ಬ್ಯಾನರನ್ನು ಈ ಭಾಗದಲ್ಲಿ ಅಳವಡಿಸಿದ್ದರು. ಆದರೆ ಕಿಡಿಗೇಡಿಗಳು ಎರಡು ಬಾರಿ ಬ್ಯಾನರ್ ಹರಿದು ದುಷ್ಕøತ್ಯ ಎಸಗಿದ್ದಾರೆ ಎಂದು ಆರೋಪಿಸಿದ ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಕಾರ್ಯಕರ್ತರು ಘಟನೆಯನ್ನು ಖಂಡಿಸಿ ಬುಧವಾರ ಕೊಲ್ಯ ಕನೀರುತೋಟದ ಲೋಕಯ್ಯಪಾಲು ಬಳಿಯಿರುವ ಶ್ರೀ ನಾಗಬ್ರಹ್ಮ ಮಹಾಕಾಳಿ ಹಾಗೂ ಪರಿವಾರ ದೈವಗಳ ದೈವಸ್ಥಾನದಲ್ಲಿ ಬ್ಯಾನರ್ ಹಾನಿಗೊಳಿಸಿದವರಿಗೆ ದೇವರು ಬುದ್ಧಿ ಕೊಡುವಂತೆ ಬೇಡಿಕೆ ಮುಂದಿರಿಸಿ ಕಾಂಗ್ರೆಸ್ ಕಾರ್ಯಕರ್ತರು ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ ಅಸೈಗೋಳಿ ಮಾತನಾಡಿ ಕೊಲ್ಯ…
UN NETWORKS ಉಳ್ಳಾಲ: ದೇರಳಕಟ್ಟೆಯ ವಿದ್ಯಾರತ್ನ ಆಂಗ್ಲ ಮಾಧ್ಯಮ ಶಾಲೆಯ ಆರನೇ ವರ್ಷದ ನಾಡು ನುಡಿ ವೈಭವದ ರತ್ನೋತ್ಸವ -2017 ಡಿ.29ರ ಶುಕ್ರವಾರ ಸಂಜೆ 3 ಗಂಟೆಯಿಂದ ರಾತ್ರಿ 10ರ ವರೆಗೆ ದೇರಳಕಟ್ಟೆಯ ಗ್ರೀನ್ ಗ್ರೌಂಡಿನಲ್ಲಿ ಜರಗಲಿದೆ ಎಂದು ರತ್ನ ಎಜ್ಯುಕೇಷನ್ ಟ್ರಸ್ಟಿನ ಅಧ್ಯಕ್ಷ ಕೆ.ರವೀಂದ್ರ ಶೆಟ್ಟಿ ಉಳಿದೊಟ್ಟು ಹೇಳಿದ್ದಾರೆ. ದೇರಳಕಟ್ಟೆ ಶಾಲೆಯಲ್ಲಿ ಬುಧವಾರ ನಡೆಸಿದ ಸುದ್ಧಿಗೋಷ್ಠಿಯಲ್ಲಿ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದರು. ಸಮ್ಮೇಳನ ಅಧ್ಯಕ್ಷರಾಗಿ ಹಿರಿಯ ಪತ್ರಕರ್ತರು, ಸಾಹಿತಿ ಮಲಾರು ಜಯರಾಮ ರೈ ಆಯ್ಕೆಯಾಗಿದ್ದಾರೆ. ಮಧ್ಯಾಹ್ನ 3 ಗಂಟೆಯಿಂದ ಬೆಳ್ಮ ಗ್ರಾಮ ಪಂಚಾಯತ್ ವಠಾರದಿಂದ ಸಮ್ಮೇಳನದ ಅಧ್ಯಕ್ಷರ ಭವ್ಯ ಮೆರವಣಿಗೆ ವೀರಗಾಸೆ, ಚೆಂಡೆ ವಾದನ, ಗೊಂಬೆ ಕುಣಿತದ ಜತೆಗೆ ನಡೆಯಲಿದೆ. ಧ್ವಜಾರೋಹಣವನ್ನು ಟ್ರಸ್ಟ್ ಕೋಶಾಧಿಕಾರಿ ರತ್ನಾವತಿ ಕೆ.ಶೆಟ್ಟಿ ವಹಿಸಲಿದ್ದಾರೆ. ರತ್ನೋತ್ಸವದ ಉದ್ಘಾಟನೆಯನ್ನು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎ.ಸಿ.ಭಂಡಾರಿ ನೆರವೇರಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಶೃಂಗೇರಿ ಶ್ರೀ ಶಂಕರ ಮಠದ ಧರ್ಮಾಧಿಕಾರಿ ಬೊಳ್ಳಾವ ಸತ್ಯಶಂಕರ, ಜಿಲ್ಲಾ ಧಾರ್ಮಿಕ ಪರಿಷತ್ ಮಾಜಿ…
UN NETWORKS ಮಂಗಳೂರು: ಕರಾವಳಿ ಕೋಮು ಸೂಕ್ಷ್ಮ ಪ್ರದೇಶ. ಇದೀಗ ಭಿನ್ನ ಕೋಮಿನ ಪ್ರೇಮಿಗಳ ಮೇಲೆ ಕಣ್ಣು ಇಡಲು ಕರಾವಳಿಯಲ್ಲಿ ಹೊಸ ಕಾರ್ಯಪಡೆಯೊಂದು ಸಜ್ಜಾಗಿದೆ. ಮಂಗಳೂರು ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಲವ್ ಜಿಹಾದ್ ಪ್ರಕರಣಗಳು ನಡೆಯುತ್ತಿದೆ ಅನ್ನುವ ಆರೋಪಗಳು ಕೇಳಿ ಬರುತ್ತಿದೆ. ಇದಕ್ಕೆ ಸಾಕ್ಷಿ ಮೂಡಬಿದ್ರೆ ನಿವಾಸಿ ಪ್ರಿಯಾಂಕ ಪ್ರಕರಣ. ಈ ಪ್ರಕರಣದಿಂದ ಹಿಡಿದು ಇಲ್ಲಿ ಅನೇಕ ಭಿನ್ನ ಕೋಮಿನ ಪ್ರೇಮಿಗಳ ನಡುವೆ ಹಲವು ಪ್ರಕರಣಗಳು ವರದಿಯಾಗಿದೆ. ಸದ್ಯ ಇಂತಹ ಲವ್ ಜಿಹಾದ್ ನಿಂದ ಹಿಂದು ಯುವತಿಯರು ಮೋಸ ಹೋಗದಂತೆ ತಡೆಯುವುದಕ್ಕೆ ಕರಾವಳಿಯಲ್ಲಿ ಟಾಸ್ಕ್ ಫೋರ್ಸ್ ನಿರ್ಮಾಣವಾಗುತ್ತಿದೆ. ಮುಸ್ಲಿಂ ಯುವಕರು ಹಿಂದೂ ಯುವತಿಯನ್ನು ಪ್ರೇಮದ ಹೆಸರಿನಲ್ಲಿ ಲವ್ ಜಿಹಾದ್ ಮಾಡುತ್ತಿದ್ದಾರೆ ಅನ್ನುವುದು ಹಿಂದೂ ಪರ ಸಂಘಟನೆಗಳ ವಾದ. ಈ ಕಾರಣಕ್ಕಾಗಿ ಲವ್ ಜಿಹಾದ್ ತಡೆಗೆ ಮಂಗಳೂರಿನ ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ ನೇತ್ರತ್ವದಲ್ಲಿ ಹಿಂದೂ ಟಾಸ್ಕ್ ಫೋರ್ಸ್ ರಚನೆಯಾಗಲಿದೆ. ಈ ಟಾಸ್ಕ್ ಫೋರ್ಸ್ ನಲ್ಲಿ ವಕೀಲರು, ಮನಶಾಸ್ತ್ರಜ್ಷರು, ಸಾಮಾಜಿಕ ಕಾರ್ಯಕರ್ತರು…
UN NETWORKS ಪೆರ್ಮನ್ನೂರು: ಶಾಂತಿದೂತ ಯೇಸು ಕ್ರಿಸ್ತ ಜಯಂತಿಯ ಕ್ರಿಸ್ ಮಸ್ ಹಬ್ಬದ ಶುಭಾಶಯವನ್ನು ಪೆರ್ಮನ್ನೂರು ಇಗರ್ಜಿಯ ಧರ್ಮಗುರುಗಳಾದ ಜೆ.ಬಿ.ಸಲ್ದಾಣ ಮತ್ತು ಕಿರಿಯ ಗುರುಗಳನ್ನು ಜಿಲ್ಲಾ ಪಂ.ಮಾಜಿ ಉಪಾಧ್ಯಕ್ಷರಾದ ಸತೀಶ್ ಕುಂಪಲ ನೇತೃತ್ವದಲ್ಲಿ ಬೇಟಿ ಮಾಡಿ ಶುಭ ಕೋರಲಾಯಿತು. ಈ ಸಂಧರ್ಭದಲ್ಲಿ ಭಗತ್ ಸಿಂಗ್ ಸೇವಾ ಪ್ರತಿಷ್ಠಾನದ ಅಧ್ಯಕ್ಷರಾದ ಜೀವನ್ ಕುಮಾರ್ ತೊಕ್ಕೊಟು, ಮಾಜಿ ಕೌನ್ಸಿಲರ್ ದಯಾನಂದ ತೊಕ್ಕೊಟು, ಬಿ.ಜೆ.ಪಿ. ಅಲ್ಪಸಂಖ್ಯಾತ ಮೋರ್ಛದ ಅಧ್ಯಕ್ಷರಾದ ಅಶ್ರಫ್ ಹರೇಕಳ, ಬಿ.ಜೆ.ಪಿ.ಪ್ರಮುಖರಾದ ರಾಜೇಶ್ ಪಿಲಾರ್ ಉಪಸ್ಥಿತರಿದ್ದರು.
UN NETWORKS ಹೊಸದಿಲ್ಲಿ : ಭಾರತದ ಭದ್ರತಾ ಪಡೆಗಳು ಸೋಮವಾರ ತಡರಾತ್ರಿ ಪಾಕಿಸ್ತಾನ ಆಕ್ರಮಿತ ಕಾಶ್ಮೀರದ(ಪಿಒಕೆ) ಗಡಿ ನಿಯಂತ್ರಣ ರೇಖೆಯನ್ನು ದಾಟಿ ಪಾಕ್‍ನ ಮೂವರು ಸೈನಿಕರನ್ನು ಹೊಡೆದುರುಳಿಸಿದೆ. ಕಳೆದ ವರ್ಷದ ಸರ್ಜಿಕಲ್ ಸ್ಟ್ರೈಕ್‍ನ್ನು ನೆನಪಿಸುವ ರೀತಿಯಲ್ಲಿ ಮಂಗಳವಾರ ಮುಂಜಾನೆ ಪಿಒಕೆಯನ್ನು ದಾಟಿದ ಭಾರತೀಯ ಸೇನೆ ಮೂವರು ಪಾಕ್ ಸೈನಿಕರನ್ನು ಹತ್ಯೆಗೈದಿದೆ ಎಂದು ಮೂಲಗಳ ತಿಳಿಸಿವೆ. ಮತ್ತೊಂದು ಪ್ರತ್ಯೇಕ ಕಾರ್ಯಾಚರಣೆಯಲ್ಲಿ ಜಮ್ಮು-ಕಾಶ್ಮೀರ ಪೊಲೀಸರು ಪುಲ್ವಾಮಾ ಜಿಲ್ಲೆಯ ಸಂಬೂರಾ ಪ್ರದೇಶದಲ್ಲಿ ಜೈಶ್-ಇ-ಮೊಹಮ್ಮದ್ ಸಂಘಟನೆಯ ಇಬ್ಬರು ಭಯೋತ್ಪಾದಕರನ್ನು ಎನ್‍ಕೌಂಟರ್ ನಡೆಸಿ ಸಾಯಿಸಿದ್ದಾರೆ. ಎನ್‍ಕೌಂಟರ್‍ಗೆ ಬಲಿಯಾದ ಓರ್ವ ಉಗ್ರ ಈ ವರ್ಷಾರಂಭದಲ್ಲಿ ಶ್ರೀನಗರದ ಏರ್‍ಪೋರ್ಟ್‍ಗೆ ಆತ್ಮಹತ್ಯಾ ದಾಳಿ ನಡೆಸಿದ ಮಾಸ್ಟರ್‍ಮೈಂಡ್ ಆಗಿದ್ದ ಎನ್ನಲಾಗಿದೆ.
UN NETWORKS ಉಳ್ಳಾಲ: ಕೊಲ್ಯ ಮಲಯಾಳಕೋಡಿ ನೇಮೋತ್ಸವ ಮಂಗಳವಾರ ವಿಜೃಂಭಣೆಯಿಂದ ನಡೆಯಿತು. ಬೆಳಿಗ್ಗೆ ಭಂಡಾರ ಆಗಮನದ ನಂತರ ಬಂಟ ದೈವದ ನೇಮೋತ್ಸವದಲ್ಲಿ ಜಾತ್ರೋತ್ಸವ ಆರಂಭಗೊಂಡಿತು. ಈ ಬಾರಿ ಪ್ರಥಮವಾಗಿ ಮಲಯಾಳ ಚಾಮುಂಡಿ ನೇಮೋತ್ಸವ ವೇದಮೂರ್ತಿ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಗಳ ಭಾಗವಹಿಸುವಿಕೆಯಿಂದ ನಡೆದಿರುವುದು ವಿಶೇಷವಾಗಿತ್ತು. ರಾತ್ರಿ ಶ್ರೀ ವೈದ್ಯನಾಥ ದೈವದ ವಾಳಸ್ಸರಿ ಉತ್ಸವದ ಮೂಲಕ ಜಾತ್ರೋತ್ಸವ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಸಮಾಪನಗೊಂಡಿತು. ಕೇರಳದ ದೈವ ದೈವದ ನುಡಿ (ಪರಪು) ವಿನಂತೆ ಕೇರಳದಿಂದ ಬಂದಿರುವ ದೈವವಾಗಿದ್ದು, ನಂದಿನಿ ಗಟ್ಟಿದಿ ಅನ್ನುವ ಸಾತ್ವಿಕ ಮಹಿಳೆಯ ಪ್ರಾರ್ಥನೆಗೆ ಒಲಿದು ಬಂದ ದೈವ . ಕನೀರುತೋಟದ ಕೆರೆಯಲ್ಲಿ ಬಟ್ಟೆ ಒಗೆಯುವ ಸಂದರ್ಭದಲ್ಲಿ ದೈವದ ಮೂರ್ತಿ ಸಿಕ್ಕಿದ್ದು, ಆನಂತರ ಪ್ರತಿಷ್ಠಾಪನೆಗೊಂಡು ಇದೀಗ ಪ್ರತಿವರ್ಷವೂ ವಿಜೃಂಭಣೆಯ ಜಾತ್ರೋತ್ಸವ ನಡೆಯುತ್ತಿದೆ. ಸೋಮೇಶ್ವರ, ಕೊಲ್ಯ, ಕೋಟೆಕಾರು, ಬೀರಿ, ಮಾಡೂರು, ಕುಂಪಲ, ಬಗಂಬಿಲ ಭಾಗದ ಜನ ಜಾತ್ರೋತ್ಸವವನ್ನು ಆಚರಿಸುತ್ತಾ ಬಂದಿದ್ದಾರೆ.

