Author: UllalaVani

Kannada News From Coastal Karnataka

UN NETWORKS ಮುಡಿಪು: ಈ ಬಾರಿಯ ವಿಧಾನ ಸಭಾ ಚುನಾವಣೆಯಲ್ಲಿ ರಾಜಕೀಯ ಒಳ ಒಪ್ಪಂದ ನಡೆಸಿ ನನ್ನನ್ನು ಸೋಲಿಸಲು ಪ್ರಯತ್ನಿಸಿದರೂ ಅದು ಅವರಿಂದ ಸಾಧ್ಯವಾಗಲಿಲ್ಲ. ನನ್ನ ಗೆಲುವಿನ ಹಿಂದೆ ಕಾರ್ಯಕರ್ತರ ಶ್ರಮ ಬಹಳಷ್ಟಿದೆ. ಅವರ ಸೇವೆಯನ್ನು ನಾನು ಸದಾ ಸ್ಮರಿಸುತ್ತೇನೆ ಎಂದು ಸಚಿವ ಯು.ಟಿ. ಖಾದರ್ ಹೇಳಿದರು. ಅವರು ಮುಡಿಪು ಬ್ಲಾಕ್ ಕಾಂಗ್ರೆಸ್ ವತಿಯಿಂದ ಶನಿವಾರ ಮುಡಿಪುವಿನಲ್ಲಿ ನಡೆದ ಕಾರ್ಯಕರ್ತರಿಗೆ ಕೃತಜ್ಞತೆ ಮತ್ತು ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ರಾಜಕೀಯದಲ್ಲಿ ಬದಲಾವಣೆ ಸಹಜ. ಮಂಗಳೂರು ಕಾಂಗ್ರೆಸ್‍ನ ಭದ್ರಕೋಟೆಯಾಗಿದೆ. ಇಲ್ಲಿ ನನ್ನ ಪ್ರತಿಸ್ಪರ್ಧಿಯಾಗಿದ್ದ ಬಿಜೆಪಿ ಅಭ್ಯರ್ಥಿಗೆ ಅವರ ಊರಿನಲ್ಲೇ ಮುನ್ನಡೆ ಸಾಧಿಸಲು ಆಗಲಿಲ್ಲ. ಬಿಜೆಪಿ ಸೋತರೆ ಚಪ್ಪಲಿ ಹಾಕುವುದಿಲ್ಲ ಎಂದವರಿಗೆ ಚಪ್ಪಲಿ ಹಕಲು ಯೋಗ್ಯತೆ ಇದೆಯಾ ಎಂದು ಪ್ರಶ್ನಿಸಿದ ಅವರು ಧ್ವೇಷ ರಾಜಕೀಯ ಬೇಡ. ಕಾಂಗ್ರೆಸ್ ದ್ವೇಷ ಸಂಸ್ಕೃತಿಯಲ್ಲ. ಪ್ರೀತಿಯ ಸಂಸ್ಕೃತಿ. ಜಿಲ್ಲೆಯಲ್ಲಿ ಕಾಂಗ್ರೆಸ್ ಸೋತಿದೆ ಎಂಬ ಕಾರಣದಿಂದ ರಾಜಕೀಯ ಮುಗಿದು ಹೋಗುವುದಿಲ್ಲ. ಸೋಲು ಈ ಹಿಂದೆಯೋ ಕಂಡಿದೆ. 1994ರಲ್ಲಿ ಕೇವಲ 34…

Read More

UN NETWORKS ಮಂಗಳೂರು: ನಗರದ ಉರ್ವ ಮಾರಿಗುಡಿ ಬಳಿ ಗಾಂಜಾ ಮಾರಾಟ ಮಾಡುತ್ತಿದ್ದರೆಂಬ ಆರೋಪದಲ್ಲಿ ನಾಲ್ವರು ಯುವಕರನ್ನು ಉರ್ವ ಪೊಲೀಸರು ಬಂಧಿಸಿ, ಬಂಧಿತರಿಂದ ಒಟ್ಟು 1.5 ಕಿ.ಗ್ರಾಂ ಗಾಂಜಾ, 4 ಮೊಬೈಲ್‌ ಫೋನ್‌ ಹಾಗೂ ನಗದು ಸೇರಿದಂತೆ ಒಟ್ಟು 55,000 ರೂ. ಮೊತ್ತದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಬಂಧಿತರನ್ನು ಉರ್ವ ಮಾಡರ್ನ್ ರೈಸ್‌ಮಿಲ್‌ ಬಳಿಯ ನಿವಾಸಿ ಮಹೇಶ್‌ ಯಾನೆ ಮಾಚ (24), ಮಠದಕಣಿ, ಬೊಕ್ಕಪಟ್ಣ ರಸ್ತೆ ನಿವಾಸಿ ರಿತೇಶ್‌ ಯಾನೆ ರೀತು (20), ಉರ್ವ ಲಾಂಗ್‌ ಲೇನ್‌ ನಿವಾಸಿ ಸುದರ್ಶನ್‌ ಎಂ. ಯಾನೆ ಸುಧಾ (24) ಹಾಗೂ ಅಶೋಕನಗರ ನಿವಾಸಿ ರಿತೇಶ್‌ ವಿ. (21) ಎಂದು ಗುರುತಿಸಲಾಗಿದೆ. ಉರ್ವ ಮಾರಿಗುಡಿ ಪರಿಸರದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದಾರೆ ಎಂಬ ಖಚಿತ ಸುಳಿವಿನ ಮೇರೆಗೆ ಉರ್ವ ಠಾಣಾ ಪೊಲೀಸರು ದಾಳಿ ನಡೆಸಿ ಆರೋಪಿಗಳನ್ನು ಬಂದಿಸಿದರು. ಬಂಧಿತರ ಮೇಲೆ ಎನ್‌ಡಿಪಿಎಸ್‌ ಕಾಯ್ದೆಯಡಿ ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಪೊಲೀಸ್‌ ಆಯುಕ್ತ ಟಿ.ಆರ್‌, ಸುರೇಶ್‌, ಡಿಸಿಪಿಗಳಾದ ಹನು ಮಂತರಾಯ…

Read More

UN NETWORKS ಮಂಗಳೂರು: ಭಾರತೀಯ ಜೀವ ವಿಮಾ ನಿಗಮ ಮಂಗಳೂರು ಒಂದನೇ ಶಾಖೆಯಿಂದ ಅಭಿವೃದ್ದಿ ಅಧಿಕಾರಿಯಾಗಿ ಸೇವೆಯಿಂದ ನಿವೃತ್ತಿಯನ್ನು ಹೊಂದುತ್ತಿರುವ ಮೂಲ್ಕಿ ಕೊಲ್ನಾಡುಗುತ್ತು ಎನ್ .ವಿದ್ಯಾಧರ್ ಶೆಟ್ಟಿ ಅವರಿಗೆ ವಿದಾಯ ಕಾರ್ಯಕ್ರಮವು ಮಂಗಳೂರು ಶಾಖೆಯಲ್ಲಿ ಜರಗಿತು. ಸುಮಾರು 35 ವರ್ಷಗಳ ಸಾರ್ಥಕ ಸೇವೆಯನ್ನು ಮುಗಿಸಿ ನಿವೃತ್ತಿ ಪಡೆಯುತ್ತಿದ್ದಾರೆ.ಶಾಖೆಯ ಹಿರಿಯ ಪ್ರಬಂಧಕ ಎ. ರವಿರಾಜ್ ಮತ್ತು ಎಲೈಸಿಯ ಸಿಬ್ಬಂದಿಗಳು , ಅಭಿವೃದ್ದಿ ಅಧಿಕಾರಿಗಳು, ವಿಮಾ ಪ್ರತಿನಿಧಿಗಳು ಅವರನ್ನು ಸನ್ಮಾನಿಸಿದರು. ಉಡುಪಿ,ಕಾಪು ಮೂಲ್ಕಿ,ಬಂಟ್ವಾಳ ಶಾಖೆಯ ಅಭಿವೃದ್ಧಿ ಅಧಿಕಾರಿಗಳಿಂದ ಸನ್ಮಾನವನ್ನು ನೆರವೇರಿಸಲಾಯಿತು. https://www.youtube.com/watch?v=aBSEWqAd_5Q https://www.youtube.com/watch?v=I4pP8Vstwcs ಅಭಿವೃದ್ದಿ ಅಧಿಕಾರಿಗಳಾದ ಅರ್ ಕೆ.ಉಪ್ಪೂರು,ಕೃಷ್ಣ ಹೆಗ್ಡೆ ಕಾರ್ಯಕ್ರಮನಿರ್ವಹಿಸಿ ಆರ್.ರಾಧಾಕೃಷ್ಣ ಅವರು ಕವಿತಾ ವಾಚನ ನಡೆಸಿದರು. ಸಿಬ್ಬಂದಿಗಳಾದ ಸೀತಾ ಲಕ್ಷ್ಮೀ ಅವರ ಪ್ರಾರ್ಥನೆಯೊಂದಿಗೆ, ಕಾರ್ಯಕ್ರಮ ನಿರ್ವಹಣೆಯನ್ನು ಜೋಯ್ಸಿ ಡೇಸಾ ನೆರವೇರಿಸಿ,ಶುಭಾಕರ ಅವರು ವಂದಿಸಿದರು.

Read More

UN NETWORKS ಮಂಗಳೂರು: ಕಾಸರಗೋಡು ಹಾಗೂ ಕಣ್ಣೂರು ಜಿಲ್ಲೆಗಳ ಪ್ರಥಮ ಹೆಲ್ತ್ ಡೈರೆಕ್ಟರಿ “Health Malabar 2018-19” ನ್ನು ದಿನಾಂಕ 30/06/2018 ರಂದು ಮಂಗಳೂರು ಪ್ರೆಸ್ ಕ್ಲಬ್ನಲ್ಲಿ ನಡೆಯುವ ಪತ್ರಿಕಾ ಸಮ್ಮೇಳನದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಗೃಹ ರಕ್ಷಕ ದಳದ ಮುಖ್ಯ ಕಮಾಂಡೆಂಟ್ ಡಾ. ಮುರಳಿ ಮೋಹನ್ ಚೂಂತಾರ್ ಅವರು ಬಿಡುಗಡೆಗೊಳಿಸಿದರು. ಪ್ರಥಮ ಹೊತ್ತಗೆಯನ್ನು ಇಂಡಿಯನ್ ಮೆಡಿಕಲ್ ಅಸ್ಸೋಸಿಯೇಶನ್ ಮಂಗಳೂರು ಅಧ್ಯಕ್ಷ ಪ್ರೊಫೆಸ್ಸರ್ ಡಾ ಕೆ ಆರ್ ಕಾಮತ್ ಅವರಿಗೆ ನೀಡಲಾಯಿತು. ಈ ಸಂದರ್ಭದಲ್ಲಿ ಒನ್ ಸಿಟಿ ಯೆಲ್ಲೋ ಪೇಜಸ್ ಚೀಫ್ ಎಕ್ಸಿಕ್ಯೂಟಿವ್ ಓಫೀಸರ್ ಎಲ್ ಕೆ ಮೋನು ಬೋರ್ಕಳ, “Health Malabar ಪ್ರಧಾನ ಸಂಪಾದಕ Hameed Borkala ಅವರು ಉಪಸ್ಥಿತರಿದ್ದರು. https://www.youtube.com/watch?v=Xb2pAJnYsrg ಮಂಗಳೂರು, ಕಾಸರಗೋಡು ಹಾಗೂ ಕಣ್ಣೂರು ಜಿಲ್ಲೆಗಳ ಅಲ್ಲೋಪತಿ, ಆಯುರ್ವೇದ ಹಾಗೂ ಹೋಮಿಯೋಪತಿ ಡಾಕ್ಟರ್ಸ್, ಹೋಸ್ಪಿಟಲ್ಸ್, ಡೆಂಟಿಸ್ಟ್ಸ್ ಹಾಗೂ ಇತರ ಆರೋಗ್ಯ ಸೇವಾ ವಿವರಗಳ ಸಮಗ್ರ ಮಾಹಿತಿ ಇರುವ ಈ ಡೈರೆಕ್ಟರಿ ಡಾಕ್ಟರ್ಸ್ ಕ್ಲಿನಿಕ್ ಗಳು, ಆಸ್ಪತ್ರೆಗಳು, ವಾಚನಾಲಯಗಳು,…

Read More

UN NETWORKS ಕೊಣಾಜೆ: ಕ್ರೀಯಾಶೀಲರಾಗಿ ಸಕಾರಾತ್ಮಕ ಚಿಂತನೆಯೊಂದಿಗೆ ಪ್ರಮಾಣಿಕ ಸೇವೆಯೊಂದಿಗೆ ಸಮಾಜದ ಋಣ ತೀರಿಸಿ ಎಂದು ನಿಟ್ಟೆವಿಶ್ವವಿದ್ಯಾನಿಲಯದ ಸಹ ಕುಲಪತಿ ಡಾ.ಶಾಂತರಾಮ ಶೆಟ್ಟಿ ತಿಳಿಸಿದ್ದಾರೆ. ಕೊಣಾಜೆಯ ಮಂಗಳೂರು ವಿಶ್ವವಿದ್ಯಾನಿಲಯದ ಮಂಗಳ ಸಭಾಂಗಣದಲ್ಲಿ ಬ್ಯಾರೀಸ್ ಇನ್ಸ್ಟಿಟ್ಯೂಟ್ ಆಪ್ ಟೆಕ್ನಾಲಜಿ ಇದರ 6ನೇ ವರ್ಷ ದ ಪದವಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ಸಮಾಜದಲ್ಲಿ ಸಾಕಷ್ಟು ಜನರು ಅನಕ್ಷರಸ್ಥ ರಿದ್ದಾರೆ.ಶೇ8ರಷ್ಟು ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆಯುತ್ತಿದ್ದಾರೆ. ಈ ಪೈಕಿ ಕೇವಲ 1ರಷ್ಟು ವಿದ್ಯಾರ್ಥಿಗಳು ಮಾತ್ರ ಪಿಎಚ್ ಡಿ ಪಡೆಯುತ್ತಿದ್ದಾರೆ.ನಾವು ಶಿಕ್ಷಣ ಪಡೆಯಲು ಕಾರಣರಾದ ಸಮಾಜ ಹೆತ್ತವರು,ಗುರುಗಳ ಋಣವನ್ನು ಪ್ರಾಮಾಣಿಕವಾಗಿ ತೀರಿಸಲು ಪ್ರಯತ್ನಿಸಬೇಕಾಗಿದೆ ಎಂದರು. ಪ್ರಪಂಚದಲ್ಲಿ ಹಲವಾರು ಮಹಾನ್ ವ್ಯಕ್ತಿ ಗಳು ತಮ್ಮ ಸಾಧನೆಯ ಹಾದಿ ಹಲವಾರು ಬಾರಿ ಸೋಲನ್ನು ಕಂಡರು ಅದನ್ನೇ ಸವಾಲಾಗಿ ಸ್ವೀಕರಿಸಿ ಗೆಲುವು ಸಾಧಿಸಿದ್ದಾರೆ. ವಿಜ್ಞಾನಿ ಥಾಮಸ್ ಆಲ್ವಾ ಎಡಿಸನ್, ಎವರೆಸ್ಟ್ ಏರಿದ ಹಿಲರಿ ಇವರೆಲ್ಲ ಉದಾಹರಣೆಯಾಗಿದ್ದಾರೆ. ಅವರಂತೆ ಸಕಾರಾತ್ಮಕ ಚಿಂತನೆ ಯೊಂದಿಗೆ ಸಾಧಕರಾಗುವಂತೆ ಕರೆ ನೀಡಿದರು. ಬ್ಯಾರೀಸ್ ಅಕಾಡೆಮಿ ಆಫ್…

Read More

UN NETWORKS ಕೊಣಾಜೆ : ಇಂದಿನ ವಿದ್ಯಾರ್ಥಿಗಳೇ ಮುಂದಿನ ಭಾರತದ ಭವಿಷ್ಯವಾಗಿದ್ದು, ವಿದ್ಯಾರ್ಥಿಗಳು ಮೌಲ್ಯಯುತ ಶಿಕ್ಷಣದೊಂದಿಗೆ ಮುನ್ನಡೆಯಬೇಕು. ವಿದ್ಯಾರ್ಥಿ ಸಂಸತ್ತಿನ ಮೂಲಕ ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣ ಸೇರಿದಂತೆ ಜವಾಬ್ಧಾರಿಗಳನ್ನು ನಿರ್ವಹಿಸಲು ಸಾಧ್ಯವಾಗುತ್ತದೆ. ಇಂತಹ ಚಟುವಟಿಕೆಗಳು ವಿಧ್ಯಾರ್ಥಿಗಳ ಬೆಳವಣಿಗೆಗೆ ಪೂರಕವಾಗಿದೆ ಎಂದು ನಗರಾಭಿವೃದ್ಧಿ ಮತ್ತು ವಸತಿ ಸಚಿವ ಯು.ಟಿ.ಖಾದರ್ ಅವರು ಹೇಳಿದರು. ಅವರು ಸರಕಾರಿ ಪ್ರೌಢಶಾಲೆ ಕೊಣಾಜೆ ಪದವು ಇಲ್ಲಿಯ ವಿದ್ಯಾರ್ಥಿ ಸಂಸತ್ತು ಉದ್ಘಾಟನೆ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಶನಿವಾರ ಉದ್ಘಾಟಿಸಿ ಮಾತನಾಡಿದರು. ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದ ಮೂಡದ ಮಾಜಿ ಅಧ್ಯಕ್ಷ ಇಬ್ರಾಹಿಂ ಕೋಡಿಜಾಲ್ ಅವರು, ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯು ಮಾದರಿಯಾಗಿದ್ದು ಇದರಿಂದಾಗಿಯೇ ಭಾರತ ಸದೃಢವಾಗಿ ಬೆಳೆದು ನಿಂತಿದೆ. ವಿದ್ಯಾರ್ಥಿ ಜೀವನದಲ್ಲೇ ನಾವು ಪ್ರಜಾತಂತ್ರ ವ್ಯವಸ್ಥೆ ಸೇರಿದಂತೆ ವಿವಿಧ ಚಟುವಟಿಕೆಗಳಿಗೆ ಪಾಲ್ಗೊಳ್ಳಲು ಇಂತಹ ವಿದ್ಯಾರ್ಥಿ ಸಂಸತ್ತು ನಮಗೆ ಬಹಳಷ್ಟು ಅನುಕೂಲ ಮಾಡಿಕೊಡುತ್ತದೆ. ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಕೊಣಾಜೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಶೌಕತ್ ಆಲಿ ಮಾತನಾಡಿ, ಕೊಣಾಜೆ ಪದವು…

Read More

UN NETWORKS ಕೊಣಾಜೆ: ಉತ್ತಮ ಪರಿಸರ ಇದ್ದರೆ ಮಾತ್ರ ಆರೋಗ್ಯಕರ ಬದುಕನ್ನು ಕಟ್ಟಿಕೊಳ್ಳಲು ಸಾಧ್ಯ. ವನಸಂರಕ್ಷಣೆ, ಪರಿಸರಪರ ಕಾಳಜಿಯು ಪ್ರತಿಯೊಬ್ಬರಲ್ಲೂ ಬೆಳೆಯಬೇಕು. ಈ ನಿಟ್ಟಿನಲ್ಲಿ ಸಂಘ ಸಂಸ್ಥೆಗಳು ಜಾಗೃತಿ ಮೂಡಿಸುವ ಕೆಲಸ ಮಾಡಬೇಕು ಎಂದು ಹಿರಿಯರಾದ ಕೃಷ್ಣ ಭಟ್ ಕುಂಟಾಳಗುಳಿ ಅವರು ಅಭಿಪ್ರಾಯಪಟ್ಟರು. ಅವರು ಕುಂಟಾಳಗುಳಿಯ ಶ್ರೀ ಮಹಾಕಾಳಿ ವನಸಾನಿಧ್ಯದ ಬಳಿ ಮಹಾಕಾಳಿ ಮಿತ್ರಮಂಡಳಿ ವತಿಯಿಂದ ಭಾನುವಾರ ನಡೆದ ವನಮಹೋತ್ಸವ ಹಾಗೂ ಸಸಿ ವಿತರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.ಇಂದು ಹೆಚ್ಚಿನ ಕಡೆ ಮರಗಿಡಗಳನ್ನು ನಾಶ ಮಾಡಿ ಕಾಂಕ್ರೀಟು ಕಾಡನ್ನು ನಿರ್ಮಿಸಲಾಗುತ್ತಿದ್ದು ಇದು ಅಪಾಯಕಾರಿಯಾಗಿದೆ. ಆದ್ದರಿಂದ ಯುವ ಸಮುದಾಯ ಎಚ್ಚೆತ್ತುಕೊಂಡು ಇಂತಹ ಕಾರ್ಯಕ್ರಮಗಳಿಗೆ ಹೆಚ್ಚು ಪ್ರೋತ್ಸಾಹ ನೀಡುತ್ತಾ ಮುನ್ನಡೆಯಬೇಕು ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಮಹಾಕಾಳಿ ಮಿತ್ರ ಮಂಡಳಿ ಅಧ್ಯಕ್ಷರಾದ ಸುದಾಕರ ಕಾನ, ಕಾರ್ಯದರ್ಶಿ ಮಧುಸೂದನ್, ಶ್ರೀಧರ್ ಭಟ್, ಸತ್ಯನಾರಾಯಣ ಭಟ್ ಕೊಣಾಜೆ, ಡಾ.ಎಸ್.ಎನ್.ಭಟ್, ವೆಂಕಪ್ಪ, ಪ್ರದೀಪ್ ಭಟ್ ಕೊಣಾಜೆ, ವಿಜಯ ಕಾನ, ಉದಯ ಕುಮಾರ್ ಶೆಟ್ಟಿ, ಲಿಂಗಪ್ಪ ನಾಯ್ಕ್, ಪದ್ಮನಾಭ, ಪ್ರವೀಣ್ ಭಟ್,…

Read More

UN NETWORKS ಉಳ್ಳಾಲ: ಸಮಗ್ರ ಔಷಧ ಪದ್ಧತಿ ಜನರಿಗೆ ಒಂದೇ ಸ್ಥಾನದಲ್ಲಿ ಸಿಗುವಂತಹ ಕೇಂದ್ರಗಳನ್ನು ಸ್ಥಾಪಿಸಲು ಸರಕಾರ ಚಿಂತನೆ ನಡೆಸುತ್ತಿದೆ. ಜನರಿಗೆ ಉಪಯುಕ್ತವಾಗುವ ಉದ್ದೇಶದಿಂದ ಇಂತಹ ಕೇಂದ್ರಗಳ ಸ್ಥಾಪನೆಗೆ ಆಯುಷ್ ಸಚಿವಾಲಯ ಹೆಚ್ಚಿನ ಒತ್ತು ನೀಡಲಿದೆ ಎಂದು ಕೇಂದ್ರ ಆಯುಶ್ ಸಚಿವ ಶ್ರೀಪಾದ್ ಎಸ್ಸೋ ನಾಯಕ್ ಅಭಿಪ್ರಾಯಪಟ್ಟರು.ತಲಪಾಡಿ ದೇವಿನಗರದಲ್ಲಿ ಭಾನುವಾರ ತುಳುನಾಡು ಎಜ್ಯುಕೇಶನ್ ಟ್ರಸ್ಟ್ ವತಿಯಿಂದ ನಿರ್ಮಾಣಗೊಂಡ ಶಾರದಾ ಆಯುರ್ವೇದ ಆಸ್ಪತ್ರೆ ಉದ್ಘಾಟಿಸಿ ಮಾತನಾಡಿದರು. ಆಯುಷ್ ಸಚಿವಾಲಯದಿಂದ ಕಡ್ಡಾಯ ನೀತಿಗಳನ್ನು ಜಾರಿಗೊಳಿಸಲಾಗಿದ್ದು, ಆಯುಷ್ ಸರಕಾರಿ ಕಾಲೇಜು ಮತ್ತು ಆಸ್ಪತ್ರೆಗಳಲ್ಲಿ ಆಧುನಿಕ ತಂತ್ರಜ್ಞಾನಗಳ ಸ್ಥಾಪನೆ ಮತ್ತು ಸಿಬ್ಬಂದಿ ಮತ್ತು ಸಿಬ್ಬಂದಿಯೇತರರಿಗೆ ಕಡ್ಡಾಯ ಹಾಜರುವಿಕೆಗಾಗಿ ಬಯೋಮೆಟ್ರಿಕ್ ವ್ಯವಸ್ಥೆ ಸೇರಿದಂತೆ ಜನರಿಗೆ ಅನುಕೂಲಕರ ಸೇವೆ ಒದಗಿಸುವ ಸಲುವಾಗಿ ಆಧುನಿಕ ಸಲಕರಣೆಗಳ ವ್ಯವಸ್ಥೆಯನ್ನು ಪೂರೈಸಲಾಗಿದೆ . 2018-19 ಸಾಲಿನಲ್ಲಿ ಭಾರತೀಯ ಔಷಧ ಪದ್ಧತಿ (ಆಯುರ್ವೇದ, ಹೋಮಿಯೋಪತಿ, ಯುನಾನಿ) ಕಾಲೇಜು ಪ್ರವೇಶಾತಿಗೆ ನೀಟ್ ಪರೀಕ್ಷೆಯನ್ನು ಕಡ್ಡಾಯಗೊಳಿಸಲಾಗಿದೆ. ಪ್ರತಿಭಾನ್ವಿತರು ಶಿಕ್ಷಣ ಪಡೆಯುವವರಂತಾಗಬೇಕು ಅನ್ನುವ ಉದ್ದೇಶದಿಂದ ನೀತಿಯನ್ನು ಕೇಂದ್ರ ಸರಕಾರ ಜಾರಿಗೊಳಿಸಿದೆ…

Read More

UN NETWORKS ಉಳ್ಳಾಲ: ವೈದ್ಯಕೀಯ ಶಿಕ್ಷಣದ ವೇಳೆ ನೈತಿಕವಾಗಿ ಅಭ್ಯಾಸ ನಡೆಸಿದಾಗ ವೃತ್ತಿಯಲ್ಲಿ ಸಮರ್ಥನೀಯತೆಯನ್ನು ಗಳಿಸಬಹುದು. ಈ ಮೂಲಕ ನ್ಯಾಯಬದ್ಧವಾಗಿ ಕರ್ತವ್ಯ ನಿರ್ವಹಿಸುವುದರಿಂದ ಜನಮಾನಸದಲ್ಲಿ ಶಾಶ್ವತವಾದ ಗೌರವ ಪಡೆಯಲು ಸಾಧ್ಯ ಎಂದು ದೇರಳಕಟ್ಟೆಯ ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ಉಪ ಕುಲಪತಿ ಪ್ರೊ. ಡಾ. ಸತೀಶ್ ಕುಮಾರ್ ಭಂಡಾರಿ ಹೇಳಿದರು. ವೈದ್ಯರ ದಿನಾಚರಣೆ ಪ್ರಯುಕ್ತ ದೇರಳಕಟ್ಟೆಯ ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ಅಧೀನದ ಕ್ಷೇಮ ಚಿಂತನಾ ಸಭಾಂಗಣದಲ್ಲಿ ಶನಿವಾರ ನಡೆದ ಕಾರ್ಯಕ್ರಮದ ಅಧ್ಯಕಕ್ಷತೆ ವಹಿಸಿ ಅವರು ಮಾತನಾಡಿದರು. ವೈದ್ಯರೆಂದರೆ ನಾಯಕರು, ಜೀವಮಾನ ಕಲಿಯುವವರು, ಸಂವಹನವುಳ್ಳವರು ಹಾಗೂ ವೃತ್ತಿಪರರಾಗಿರುತ್ತಾರೆ. ಇದೆಲ್ಲರ ಜೊತೆಗೆ ವೃತ್ತಿಯಲ್ಲಿ ಸಮಗ್ರತೆ ಮತ್ತು ಬದ್ಧತೆಯನ್ನು ಕಾಪಾಡುವುದರ ಮೂಲಕ ಯಶಸ್ವಿ ವೈದ್ಯನಾಗಬಹುದು. ಇಂತಹ ಬದ್ಧತೆಯನ್ನು ಇಟ್ಟುಕೊಂಡು ದೂರದ ಪಯ್ಯನ್ನೂರಿನಲ್ಲಿ ಕೋಪಿಷ್ಠ ರೋಗಿಗಳ ನಡುವೆ ಯಶಸ್ವಿಯಾಗಿ ಡಾ|.ಎ.ಹೆಚ್ ಶೆಣೈ ಮತ್ತು ಗ್ರಾಮೀಣ ಪ್ರದೇಶದಲ್ಲಿ ಬಹಳ ಕಷ್ಟದಿಂದ ಸೇವೆ ನಡೆಸಿ ಜನಮಾನಸದಲ್ಲಿ ಇಂದಿಗೂ ಶಿರಸಿಯ ಡಾ| ಅರುಣ್ ಪ್ರಭು ದಂಪತಿಗಳಿದ್ದಾರೆ ಎಂದರು. ಕಾರ್ಯಕ್ರಮದಲ್ಲಿ ವೈದ್ಯಕೀಯ ಕ್ಷೇತ್ರದಲ್ಲಿ ಗಣನೀಯ…

Read More

UN NETWORKS ಮಂಗಳೂರು: ಮಂಗಳೂರಿನಲ್ಲಿ ಶ್ರೀ ರಾಮಕೃಷ್ಣ ಮಿಶನ್ ವತಿಯಿಂದ ಜಿಲ್ಲೆಯಲ್ಲಿ ಹಮ್ಮಿಕೊಳ್ಳಲಾದ ಶುಚಿತ್ವಕ್ಕಾಗಿ ಜಾದು ಕಾರ್ಯಕ್ರಮಕ್ಕೆ ಸಯ್ಯದ್ ಮದನಿ ಉರ್ದು ಹಿರಿಯ ಪ್ರಾಥಮಿಕ ಶಾಲೆ ಮತ್ತು ಸಯ್ಯದ್ ಮದನಿ ಫ್ರೌಡ ಶಾಲೆ ಹಳೆಕೋಟೆಯಲ್ಲಿ ಶಾಲಾ ಮಖ್ಯ ಶಿಕ್ಷಕರಾದ ಕೆ.ಎಂ .ಕೆ ಮಂಜನಾಡಿಯವರು ಚಾಲನೆ ನೀಡಿದರು. ಕಳೆದ ಶೈಕ್ಷಣೆಕ ವರ್ಷ ದಲ್ಲಿ ನಮ್ಮ ಶಾಲೆಯಲ್ಲಿ ರಾಮಕೃಷ್ಣ ಮಿಷನ್ ವತಿಯಿಂದ ಸ್ವಚ್ಚತೆಗಾಗಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು ವಿದ್ಯಾರ್ಥಿಗಳು ಶಿಕ್ಷಕರೆಲ್ಲರೂ ಸಕ್ರೀಯರಾಗಿ ಭಾಗವಹಿಸಿರುವರೆಂದು ತಿಳಿಸಿದರು. ಪ್ರಸಿದ್ಧ ಜಾದುಗಾರರಾದ ಕುದ್ರೋಳಿ ಗಣೇಶ್ ತಂಡದಿಂದ ರಂಜನೀಯವಾದ ಜಾದು ಪ್ರದರ್ಶನದೊಂದಿಗೆ ಮಕ್ಕಳ ಮನಸ್ಸನ್ನು ಕೇಂದ್ರೀಕರಿಸಿ ಸ್ವಚ್ಚತೆ, ಕಸ ಪೊರಕೆಯ ಬಳಕೆ , ಕಸ ತೊಟ್ಟಿಯ ಬಳಕೆ ಹಾಗೂ 3 ಆರ್‍ಗಳ ಬಗ್ಗೆ ಮಕ್ಕಳಿಗೆ ಬಹಳ ಸ್ವಾರಸ್ಯವಾಗಿ ತಿಳಿಸಿ ಮಕ್ಕಳು ಸಂತಸ ಪಟ್ಟರು. ಈ ಸಂದರ್ಭದಲ್ಲಿ ಶಾಲಾ ಸಂಚಾಲಕರಾದ ಮಹಮ್ಮದ್ ಇಸ್ಮಾಯಿಲ್ ಹಾಜಬ್ಬ, ಶಾಲೆಯಲ್ಲಿ ಸ್ವಚ್ಚತಾ ಕಾರ್ಯದ ಉಸ್ತುವಾರಿ ಶಕೀಲಾ ಹಗೂ ಶಿಕ್ಷಕರು ಉಪಸ್ಥಿತರಿದ್ದರು.

Read More