Author: UllalaVani

Kannada News From Coastal Karnataka

UN NETWORKS ತೊಕ್ಕೊಟ್ಟು : ಉಳ್ಳಾಲದಲ್ಲಿ ಕಬಡ್ಡಿ ಸೇರಿದಂತೆ ಕ್ರೀಡಾ ಚಟುವಟಿಕೆಗಳಿಗೆ ಸುಸಜ್ಜಿತ ಕ್ರೀಡಾಂಗಣದ ಅಗತ್ಯವಿದ್ದು, ಉತ್ತಮ ಸ್ಥಳಾವಕಾಶ ಸಿಕ್ಕಿದಲ್ಲಿ ಉಳ್ಳಾಲ ನಗರ ಪಂಚಾಯತ್ ಬೆಂಬಲ ನೀಡಲಿದೆ ಎಂದು ಹುಸೈನ್ ಕುಂಞಮೋನು ಅಭಿಪ್ರಾಯಪಟ್ಟರು. ಮಂಗಳೂರು ತಾಲೂಕು ಗ್ರಾಮಾಂತರ ಅಮೆಚೂರ್ ಕಬಡ್ಡಿ ಅಸೋಸಿಯೇಶನ್ ಉಳ್ಳಾಲ ಇದರ ಆಶ್ರಯದಲ್ಲಿ ದ.ಕ.ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಶನ್ ಮಂಗಳೂರು ಇದರ ಸಹಯೋಗದೊಂದಿಗೆ ತೊಕ್ಕೊಟ್ಟು ಸಿಟಿ ಬಸ್‍ಸ್ಯ್ಟಾಂಡ್ ಬಳಿ ಪುರುಷರ ಮತ್ತು ಮಹಿಳೆಯರ ದ.ಕ.ಜಿಲ್ಲಾ ಕಬಡ್ಡಿ ಚಾಂಪಿಯನ್‍ಶಿಪ್ 2018ಗೆ ಚಾಲನೆ ನೀಡಿ ಮಾತನಾಡಿದರು. ಉಳ್ಳಾಲ ಶ್ರೀ ಚೀರುಂಭ ಭಗವತೀ ಕ್ಷೇತ್ರದ ಪ್ರಧಾನ ಅರ್ಚಕ ಮಂಜಪ್ಪ ಕಾರ್ನವರ್ ಕಬಡ್ಡಿ ಚಾಂಪಿಯನ್‍ಶಿಪ್‍ಗೆ ಚಾಲನೆ ನೀಡಿದರು. ಮಂಗಳೂರು ತಾಲೂಕು ಗ್ರಾಮಾಂತರ ಅಮೆಚೂರ್ ಕಬಡ್ಡಿ ಅಸೋಸಿಯೇಶನ್ ಉಳ್ಳಾಲ ಇದರ ಮಹಾ ಪೋಷಕ ರವೀಂದ್ರ ಶೆಟ್ಟಿ ಉಳಿದೊಟ್ಟು, ಮತ್ತು ಪೋಷಕ ಹರೀಶ್ ಕುಮಾರ್ ಕುತ್ತಾರ್ ಕ್ರೀಡಾಂಗಣಕ್ಕೆ ಚಾಲನೆ ನೀಡಿದರು. ಮಂಗಳೂರು ತಾಲೂಕು ಗ್ರಾಮಾಂತರ ಅಮೆಚೂರ್ ಕಬಡ್ಡಿ ಅಸೋಸಿಯೇಶನ್ ಉಳ್ಳಾಲ ಇದರ ಅಧ್ಯಕ್ಷ ಸುರೇಶ್ ಭಟ್ನಗರ, ಅಸೋಸಿಯೇಷನ್‍ನ…

Read More

UN NETWORKS ಉಳ್ಳಾಲ: ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ಇಂದು( ಮಾ.20) ಸಂಜೆ 7.00ಕ್ಕೆ ಉಳ್ಳಾಲದ ಇತಿಹಾಸ ಪ್ರಸಿದ್ಧ ಸೈಯ್ಯದ್ ಮದನಿ ದರ್ಗಾ ಭೇಟಿ ನೀಡಲಿದ್ದು, ನಡುವೆ ಅಬ್ಬಕ್ಕ ಪ್ರತಿಮೆಗೆ ಹೂಹಾರ ಹಾಕಿ ತೊಕ್ಕೊಟ್ಟು ಕಲ್ಲಾಪು ವಿನಿಂದ ರೋಡ್ ಷೋ ನಲ್ಲಿ ಭಾಗವಹಿಸಲಿದ್ದಾರೆ. ಕಲ್ಲಾಪು, ತೊಕ್ಕೊಟ್ಟು, ಉಳ್ಳಾಲ ಭಾಗದಲ್ಲಿ ಲೈಟಿಂಗ್, ಬಂಟಿಂಗ್ಸ್ ಗಳ ಮೂಲಕ ರಾಹುಲ್ ಗಾಂಧಿ ಅವರನ್ನು ಸ್ವಾಗತಿಸಲು ಕಾರ್ಯಕರ್ತರು ಮುಂದಾಗಿದ್ದಾರೆ. ಕಲ್ಲಾಪು ಕಣಚೂರು ಮಿಲ್ ಎದುರುಗಡೆಯಿಂದ ಸಹಸ್ರ ಕಾರ್ಯಕರ್ತರು ವಾಹನಗಳಲ್ಲಿ , ರಾಹುಲ್ ಗಾಂಧಿಯವರ ಸಾಥ್ ನೀಡಲಿದ್ದಾರೆ. ವಾಹನದೊಳಕ್ಕೆ ನಿಂತು ರೋಡ್ ಷೋ ನಲ್ಲಿ ಉಳ್ಳಾಲ ಅಬ್ಬಕ್ಕ ವೃತ್ತದವರೆಗೆ ತೆರಳಿ ಅಲ್ಲಿ ವೀರರಾಣಿ ಅಬ್ಬಕ್ಕ ದೇವಿಯ ಪ್ರತಿಮೆಗೆ ಹೂಹಾರ ಹಾಕಿ ಗೌರವಿಸಲಿದ್ದಾರೆ.               ಜಾಹೀರಾತು ಅಲ್ಲಿಂದ ಉಳ್ಳಾಲ ಸೈಯ್ಯದ್ ಮದನಿ ದರ್ಗಾದಲ್ಲಿ ವಿಶೇಷ ಪ್ರಾರ್ಥನೆಯಲ್ಲಿ ಭಾಗವಹಿಸಲಿದ್ದಾರೆ. ದರ್ಗಾ ವಠಾರದಲ್ಲಿ ಸಜ್ಜುಗೊಳಿಸಲಾಗಿರುವ ವೇದಿಕೆಯಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಎಂದು ಕಾಂಗ್ರೆಸ್…

Read More

UN NETWORKS ಹರೇಕಳ: ಹರೇಕಳ ಪ್ರದೇಶಕ್ಕೆ ಸರ್ಕಾರಿ ಬಸ್ ಸೇವೆ ಆರಂಭಿಸಲು,ಪರವಾನಿಗೆ ಇರುವ ಎಲ್ಲಾ ಬಸ್‌ಗಳನ್ನು ಓಡಿಸಲು ಹಾಗೂ ಬಸ್ ರೂಟ್ ವಿಸ್ತರಿಸಲು ಒತ್ತಾಯಿಸಿ DYFI ಹರೇಕಳ ಗ್ರಾಮ ಸಮಿತಿಯ ನಿಯೋಗದಿಂದ ಸಾರಿಗೆ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು. ನಿಯೋಗದಲ್ಲಿ DYFI ಜಿಲ್ಲಾ ಮುಖಂಡರಾದ ರಫೀಕ್ ಹರೇಕಳ,ಪಂಚಾಯತ್ ಸದಸ್ಯರಾದ ಹನೀಫ್,ಅಶ್ರಫ್,ಮುಖಂಡರಾದ ಸಾಧಿಕ್, ಇಸ್ಮಾಹಿಲ್ ಉಪಸ್ಥಿತರಿದ್ದರು.

Read More

UN NETWORKS ಉಳ್ಳಾಲ: ಪೆರ್ಮನ್ನೂರು ಗ್ರಾಮದ ಕಲ್ಲಾಪು ಬೊಡಂಗಿಲದಲ್ಲಿರುವ ಶ್ರೀ ರಾಮ ಮಂದಿರದಲ್ಲಿ ರಾಮ ನವಮಿ ಉತ್ಸವ ಮಾ.25 ರಂದು ನಡೆಯಲಿದೆ. ಆ ಪ್ರಯುಕ್ತ ಸಂಜೆ 6 ರಿಂದ ರಾತ್ರಿ 12.30ರವರೆಗೆ ಭಜನಾ ಕಾರ್ಯಕ್ರಮ ನಡೆಯಲಿದೆ ಎಂದು ಬೊಡಂಗಿಲ ಶ್ರೀ ಬೊಡಂಗಿಲ ಶ್ರೀ ರಾಮ ಮಂದಿರ ದ ಆಡಳಿತ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

UN NETWORKS ಉಳ್ಳಾಲ: ನಕಲಿ ಅಂಕ ಪಟ್ಟಿ ಜಾಲ ಪ್ರಕರಣಕ್ಕೆ ಸಂಬಂಧಿಸಿ ತಲೆಮರೆಸಿಕೊಂಡಿದ್ದ ಪ್ರಮುಖ ಆರೋಪಿಯನ್ನು ಬಂಧಿಸುವಲ್ಲಿ ಸಿಸಿಬಿ ಪೊಲೀಸರು ಯಶಸ್ವಿಯಾಗಿದ್ದು, ಈತನಿಗೆ ಸಹಕರಿಸಿದ್ದ ಸಹೋದರನನ್ನು ಕೂಡಾ ಬಂಧಿಸಲಾಗಿದೆ. ಪ್ರಕರಣದಲ್ಲಿ ಈವರೆಗೆ ಒಟ್ಟು ಮೂವರನ್ನು ಸಿಸಿಬಿ ತಂಡ ಬಂಧಿಸಿದೆ. ಚೆಂಬುಗುಡ್ಡೆ ನಿವಾಸಿ ಗಳಾದ ಅಸ್ಖಾನ್ ಶೇಖ್ (25) ಮತ್ತು ಅಸ್ರಾರುದ್ದೀನ್ (26) ಬಂಧಿತರು. ತೊಕ್ಕೊಟ್ಟು ಟಿ.ಸಿ ರೋಡಿನಲ್ಲಿ Mangalore institute of management engineering ಶಿಕ್ಷಣ ಸಂಸ್ಥೆ ನಡೆಸುತ್ತಿದ್ದ ಆರೋಪಿ ಅಸ್ಖಾನ್ ಶೇಖ್ ಪ್ರಕರಣದ ಪ್ರಮುಖ ಅರೋಪಿಯಾಗಿದ್ದಾನೆ. ಎರಡು ದಿನಗಳ ಹಿಂದೆ ಅಂಕಪಟ್ಟಿ ತಯಾರಿಸುತ್ತಿದ್ದ ಪ್ರಿಂಟರ್ ಸೊತ್ತುಗಳ ಸಹಿತ ಸಂಸ್ಥೆ ಸಿಬ್ಬಂದಿ ಗಾಡ್ವಿನ್ ಡಿಸೋಜ ಎಂಬಾತ ನನ್ನು ಬಂಧಿಸಲಾಗಿತ್ತು. ಆರೋಪಿಗಳು ಪಿಯುಸಿ, ಡಿಪ್ಲೊಮಾ, ಪದವಿ ಸರ್ಟಿಫಿಕೇಟನ್ನು ನಕಲಿ ತಯಾರಿಸಿ ರೂ.10,000 , ರೂ.45,000 ಕ್ಕೆ ಮಾರಾಟ ಮಾಡುತ್ತಿದ್ದರು. ಈ ಬಗ್ಗೆ ಮಾಹಿತಿ ಪಡೆದ ಪೊಲೀಸ್ ತಂಡ ದಾಳಿ ನಡೆಸಿ ಬಂಧಿಸಿತ್ತು. ರೂ.16,000 ಕ್ಕೆ ಡಿಸ್ಟಿಂಕ್ಷನ್ ಮಾರ್ಕು ಕೊಟ್ಟಿದ್ದ ! 8 ನೇ ತರಗತಿ…

Read More

UN NETWORKS Mangaluru: Manali women’s paying guest facility with all basic amenities, air conditioner, free WiFi and homely atmosphere has been inaugurated at Mallikatta junction. 24 hours water supply, free WiFi, veg and non-veg food are provided in this PG. As the PG is located in the heart of the city it is best suited for professionals and students. As the students and working ladies queuing up to occupy the place interested are asked to contact the following phone numbers. 0824 2223016, 8296440976

Read More

UN NETWORKS ಮಂಗಳೂರು: ಉಚಿತ ವೈಫೈ ಸೇರಿದಂತೆ ವಿವಿಧ ಅನುಕೂಲಗಳ ಜತೆಗೆ ಸುಸಜ್ಜಿತ ಹವಾನಿಯಂತ್ರಿತ, ವಿಶಾಲವಾದ ಮನೆಯನ್ನೇ ನೆನಪಿಸುವ ಮಹಿಳೆಯರ ಪೇಯಿಂಗ್ ಗೆಸ್ಟ್ ಇದೀಗ ಮಲ್ಲಿಕಟ್ಟೆ ಜಂಕ್ಷನ್ನಿನಲ್ಲಿ ಆರಂಭವಾಗಿದೆ. ಮನಾಲಿ ಲೇಡಿಸ್ ಪೇಯಿಂಗ್ ಗೆಸ್ಟ್ (ಎ.ಸಿ) ಮಲ್ಲಿಕಟ್ಟೆ ಜಂಕ್ಷನ್ನಿನ ರಸ್ತೆ ಪಕ್ಕದಲ್ಲೇ ಆರಂಭವಾಗಿದೆ. 24 ಗಂಟೆಗಳ ಕಾಲ ನೀರು ಪೂರೈಕೆ, ಉಚಿತ ವೈಫೈ ಸೌಲಭ್ಯವನ್ನು ಒದಗಿಸಲಾಗುತ್ತಿದೆ. ಬಹುಮುಖ್ಯವಾಗಿ ಸಸ್ಯಹಾರಿ ಮತ್ತು ಮಾಂಸಹಾರಿ ತಿಂಡಿ ವ್ಯವಸ್ಥೆಯೂ ಕಲ್ಪಿಸಲಾಗುವುದು. ನಗರದ ಹೃದಯಭಾಗದಲ್ಲೇ ಇರುವ ಪೇಯಿಂಗ್ ಗೆಸ್ಟ್ ವ್ಯವಸ್ಥೆ ವೃತ್ತಿಪರ ಯುವತಿಯರಿಗೆ, ವಿದ್ಯಾರ್ಥಿನಿಯರಿಗೆ 24 ಗಂಟೆಗಳ ಕಾಲವೂ ಬಹಳ ಅನುಕೂಲಕರವಾಗಲಿದೆ. ಪೇಯಿಂಗ್ ಗೆಸ್ಟ್ ಇರುವ ಜಾಗದ ಅನುಕೂಲತೆಯನ್ನು ಕಂಡು ಯುವತಿಯರು ಹಾಗೂ ವಿದ್ಯಾರ್ಥಿನಿಯರು ಈಗಾಗಲೇ ಮುಗಿಬೀಳುತ್ತಿದ್ದು, ಆಸಕ್ತರು ಕೂಡಲೇ 0824 2223016, 8296440976 ಸಂಪರ್ಕಿಸಲು ಕೋರಲಾಗಿದೆ.

Read More

UN NETWORKS ಉಳ್ಳಾಲ: ದೇರಳಕಟ್ಟೆಯ ಅನ್ಸಾರುಲ್ ಮುಸ್ಲಿಮೀನ್ ಅಸೋಸಿಯೇಷನ್ ಸಂಸ್ಥೆ ಕಳೆದ 35 ವರ್ಷಗಳಿಂದ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುತ್ತಾ ಬಂದಿದ್ದು, 75 ವರ್ಷಗಳ ಇತಿಹಾಸವಿರುವ ದೇರಳಕಟ್ಟೆ ಸರಕಾರಿ ಶಾಲೆಯ ಅಭಿವೃದ್ಧಿಗೆ ಇದೀಗ ಕೊಡುಗೆಯನ್ನು ನೀಡುವ ಮೂಲಕ ಶೈಕ್ಷಣಿಕ ಅಭಿವೃದ್ಧಿಯಲ್ಲಿ ತೊಡಗಿಸಿಕೊಳ್ಳುತ್ತಿದೆ ಎಂದು ಅನ್ಸಾರುಲ್ ಮುಸ್ಲಿಮೀನ್ ಅಸೋಸಿಯೇಷನ್ ನ ಉಪಾಧ್ಯಕ್ಷ ಸಿದ್ದೀಖ್ ಡಿ.ಎಂ ಹೇಳಿದ್ದಾರೆ. ಅವರು ದೇರಳಕಟ್ಟೆಯ ಬದ್ರಿಯಾ ಜುಮಾ ಮಸೀದಿಯ ಅಂಗ ಸಂಸ್ಥೆಯಾದ ಅನ್ಸಾರುಲ್ ಮುಸ್ಲಿಮೀನ್ ಅಸೋಸಿಯೇಷನ್ ಇವರು ದೇರಳಕಟ್ಟೆ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ಗೆ ಪೀಠೋಪಕರಣಗಳನ್ನು ಹಸ್ತಾಂತರಿಸುವ ಸಂದರ್ಭ ಮಾತನಾಡಿದರು. ಸಂಸ್ಥೆ ಸಮಾಜದಲ್ಲಿ ಹಿಂದುಳಿದ ವರ್ಗ, ಪ್ರತಿ ಧರ್ಮದಲ್ಲಿ ಆರ್ಥಿಕವಾಗಿ ಹಿಂದುಳಿದವರಿಗೆ ಸಹಕಾರ ನೀಡುತ್ತಾ ಬಂದಿದೆ. 75 ವರ್ಷ ಇತಿಹಾಸವಿರುವ ಸರಕಾರಿ ಶಾಲೆ ಅಭಿವೃದ್ಧಿಯಲ್ಲಿ ಹಿಂದಿದೆ. ಮುಂದಿನ ಸಾಲಿನಲ್ಲಿ ಹಳೇ ವಿದ್ಯಾರ್ಥಿ ಸಂಘ 75ನೇ ವರ್ಷಾಚಣೆಯನ್ನು ಆಚರಿಸಲು ಮುಂದಾಗಿದ್ದು, ಈ ಮೂಲಕ ಹಲವು ಅಭಿವೃದ್ಧಿ ಯೋಜನೆಗಳನ್ನು ಕೈಗೊಂಡಿದೆ. ಅದರಂತೆ ಸಂಸ್ಥೆ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ಉದ್ದೇಶದಿಂದ…

Read More

UN NETWORKS ಕುತ್ತಾರು : ಪ್ರಧಾನಿ ಮೋದಿಯವರ ಕಲ್ಪನೆಯಂತೆ ಸ್ವಚ್ಛ ಭಾರತ ಶ್ರೇಷ್ಟ ಭಾರತ ಅನ್ನುವ ಧ್ಯೇಯ ವಾಕ್ಯದಂತೆ ಕುತ್ತಾರಿನಲ್ಲಿ ಶೌಚಾಲಯ ನಿರ್ಮಾಣಗೊಂಡಿದೆ, ಶೌಚಾಲಯ ನಿರ್ಮಾಣಕ್ಕೆ ಕಾರಣವಾದ ಜಿ.ಪಂ ಹಾಗೂ ಪಂ. ಆಡಳಿತ ಕಾರ್ಯ ಶ್ಲಾಘನೀಯ ಎಂದು ಬಿಜೆಪಿ ಮಂಗಳೂರು ವಿಧಾನಸಭಾ ಕ್ಷೇತ್ರ ಅಧ್ಯಕ್ಷ ಸಂತೋಷ್ ಕುಮಾರ್ ರೈ ಬೋಳಿಯಾರ್ ಹೇಳಿದ್ದಾರೆ. ಅವರು ಕುತ್ತಾರು ಜಂಕ್ಷನ್ನಿನಲ್ಲಿ ಮುನ್ನೂರು ಗ್ರಾ.ಪಂ ನ ಸಂಪೂರ್ಣ ಸ್ವಚ್ಛತಾ ಅನುದಾನದಲ್ಲಿ ನಿರ್ಮಾಣಗೊಂಡ ಸಾರ್ವಜನಿಕ ಶೌಚಾಲಯದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು. ಹಲವು ವರ್ಷಗಳ ಬೇಡಿಕೆ ಹಾಗೂ ಸಾರ್ವಜನಿಕರ ತೊಂದರೆಗೆ ಶೌಚಾಲಯ ನಿರ್ಮಾಣದ ಮೂಲಕ ಮುಕ್ತಿ ಸಿಕ್ಕಿದೆ. ವಾಣಿಜ್ಯ, ವಸತಿ ಹಾಗೂ ಪ್ರಯಾಣಿಕರು ತಂಗುವ ಪ್ರದೇಶ ಕುತ್ತಾರ್ ಆಗಿದೆ. ಅಭಿವೃದ್ಧಿ ಪಡೆಯುತ್ತಿರುವ ಜಂಕ್ಷನ್ನಿನಲ್ಲಿ ಶೌಚಾಲಯವಿಲ್ಲದೆ ಸಾರ್ವಜನಿಕರು ಬಹಳ ತೊಂದರೆ ಅನುಭವಿಸುತ್ತಿದ್ದರು. ಇದನ್ನು ಮನಗಂಡು ಮುನ್ನೂರು ಗ್ರಾಮ ಪಂಚಾಯತ್ ಸಾರ್ವಜನಿಕ ಶೌಚಾಲಯವನ್ನು ಆರಂಭಿಸಿದೆ. ಇದನ್ನು ಸರಿಯಾಗಿ ಉಪಯೋಗಿಸಿ ನಿರ್ವಹಿಸುವ ಜವಾಬ್ದಾರಿಯೂ ಸಾರ್ವಜನಿಕರದ್ದಾಗಿದೆ ಎಂದರು. ಜಿಲ್ಲಾ ಪಂಚಾಯಿತಿ ಸದಸ್ಯೆ ಧನಲಕ್ಷ್ಮೀ ಗಟ್ಟಿ,…

Read More

UN NETWORKS ಉಳ್ಳಾಲ: ರಾಜ್ಯ ಸರಕಾರದ ತಾರತಮ್ಯ ಧೋರಣೆಯಿಂದ, ಪಂಚಾಯಿತಿಗೆ ಅನುದಾನದ ಕೊರತೆಯುಂಟಾಗಿದ್ದು, ಬಿಜೆಪಿ ಸರಕಾರ ಆಡಳಿತಕ್ಕೆ ಬಂದ ತಕ್ಷಣವೇ ಈ ಭಾಗದ ಸಮಸ್ಯೆಗಳ ಪಟ್ಟಿ ನಡೆಸಿ ಅಭಿವೃದ್ಧಿ ಕಾರ್ಯಗಳನ್ನು ನಡೆಸಲಾಗುವುದು ಎಂದು ಮಂಗಳೂರು ವಿಧಾನಸಭಾ ಕ್ಷೇತ್ರ ಬಿಜೆಪಿ ಅಧ್ಯಕ್ಷ ಸಂತೋಷ್ ಕುಮಾರ್ ರೈ ಬೋಳಿಯಾರ್ ಹೇಳಿದ್ದಾರೆ. ಅವರು ಮುನ್ನೂರು ಗ್ರಾಮದ ಸಂತೋಷನಗರ 6ನೇ ವಾರ್ಡಿನ 5ನೇ ಅಡ್ಡರಸ್ತೆ ಕಾಂಕ್ರೀಟಿಕರಣಗೊಳಿಸಿರುವುದನ್ನು ಉದ್ಘಾಟಿಸಿ ಮಾತನಾಡಿದರು. ಮಹಿಳೆಯರಿಂದ ಹಲವು ಬೇಡಿಕೆಗಳಿದ್ದು, ಬಿಜೆಪಿ ಸರಕಾರ ಆಡಳಿತಕ್ಕೆ ಬಂದ ತಕ್ಷಣ ಸಮಸ್ಯೆಗಳ ಪಟ್ಟಿ ಮಾಡಿ ಕಾಮಗಾರಿಗಳನ್ನು ಪೂರೈಸಲಾಗುವುದು. ಅಭಿವೃದ್ಧಿಯ ಚಿಂತನೆ ನಡೆಸುವಂತಹ ಜಿ.ಪಂ ಸದಸ್ಯರು ಹಾಗೂ ಮುನ್ನೂರು ಪಂಚಾಯತ್ ಅಧ್ಯಕ್ಷರು ಹಾಗೂ ಸದಸ್ಯರಿದ್ದಾರೆ. ಆದರೆ ರಾಜ್ಯ ಸರಕಾರ ಅನುದಾನವನ್ನು ಪೂರೈಸದೆ ಅಭಿವೃದ್ಧಿ ಕಾಮಗಾರಿಗಳು ನೆರವೇರಿಸಲು ತೊಂದರೆಯಾಗಿದೆ. ಆದರೆ ಬಿಜೆಪಿ ಸರಕಾರ ಬಂದಲ್ಲಿ ಪಂಚಾಯಿತಿ ಹಾಗೂ ಜಿ.ಪಂ ಸದಸ್ಯರ ಉದ್ದೇಶಗಳು ಈಡೇರುವುದು ಎಂದರು. ಜಿಲ್ಲಾ ಪಂಚಾಯಿತಿ ಸದಸ್ಯೆ ಧನಲಕ್ಷ್ಮೀ ಗಟ್ಟಿ, ಮುನ್ನೂರು ಗ್ರಾ.ಪಂ ಅಧ್ಯಕ್ಷೆ ರೂಪ.ಆರ್.ಶೆಟ್ಟಿ, ಗುತ್ತಿಗೆದಾರ ಮಾಧವ…

Read More