Author: UllalaVani

Kannada News From Coastal Karnataka

UN NETWORKS ಹರೇಕಳ: ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ, ಪಾವೂರು-ಹರೇಕಳ ಇಲ್ಲಿ 2018-19ನೇ ಶೈಕ್ಷಣಿಕ ವರ್ಷದಲ್ಲಿ ಒಂದನೇ ತರಗತಿಗೆ ದಾಖಲಾದ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಉಚಿತ ಸಮವಸ್ತ್ರ, ಪುಸ್ತಕ ಹಾಗೂ ಬ್ಯಾಗ್ ವಿತರಣಾ ಕಾರ್ಯಕ್ರಮವು ಶಾಲಾ ಸಭಾಂಗಣದಲ್ಲಿ ನಡೆಯಿತು. ಶಾಲಾ ಮಕ್ಕಳ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮವು ಪ್ರಾರಂಭಗೊಂಡಿತು. ಸಿ.ಎಸ್.ಐ.ಲೊಂಬಾರ್ಡ್ ಸ್ಮಾರಕ (ಮಿಷನ್) ಆಸ್ಪತ್ರೆ, ಉಡುಪಿ ಇದರ ನಿರ್ದೇಶಕರಾದ ‘ಡಾ| ಸುಶಿಲ್ ಜತ್ತನ್ನ’ ಇವರು ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ದಾನ ಪಡೆದ ವಸ್ತುಗಳನ್ನು ಸದುಪಯೋಗ ಪಡಿಸುವಂತೆ ಕರೆಯಿತ್ತರು. ಮುಖ್ಯ ಅತಿಥಿಗಳಾಗಿದ್ದ ಕೆ.ರವೀಂದ್ರ ರೈ ಮುಖ್ಯೋಪಾಧ್ಯಾಯರು, ಶ್ರೀ ರಾಮಕೃಷ್ಣ ಪ್ರೌಢಶಾಲೆ, ಪಾವೂರು-ಹರೇಕಳ ಇವರು ಮಕ್ಕಳು ತಮ್ಮಲ್ಲಿ ಶಿಸ್ತು, ಏಕಾಗ್ರತೆಯನ್ನು ಬೆಳೆಸಿಕೊಳ್ಳುವಂತೆ ಕರೆಯಿತ್ತರು. ಇನ್ನೋರ್ವ ಮುಖ್ಯ ಅತಿಥಿಯಾಗಿದ್ದ ಗೀತಾ ಶ್ಯಾನುಭಾಗ್ ಕ್ಷೇತ್ರ ಸಮನ್ವಯಾಧಿಕಾರಿ, ಬಿ.ಆರ್.ಸಿ. ಮಂಗಳೂರು ದಕ್ಷಿಣ ವಲಯ ಇವರು ಗ್ರಾಮೀಣ ಪ್ರದೇಶದಲ್ಲಿರುವ ಈ ಶಾಲೆಯ ಸಾಧನೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಅಲ್ಲದೆ ಪುಸ್ತಕ, ಸಮವಸ್ತ್ರ, ಬ್ಯಾಗ್‍ಗಳನ್ನು ದಾನವಾಗಿ ನೀಡಿದವರಿಗೆ ಇಲಾಖಾ ವತಿಯಿಂದ ಕೃತಜ್ಞತೆ ಸಲ್ಲಿಸಿದರು. ಅತಿಥಿಗಳಾಗಿದ್ದ ಕಲ್ಲಾಯಿ…

Read More

UN NETWORKS ತೊಕ್ಕೊಟ್ಟು: ರಾಷ್ಟ್ರೀಯ ಹೆದ್ದಾರಿ66ರ ತೊಕ್ಕೊಟ್ಟು ಜಂಕ್ಷನ್ ಶುಕ್ರವಾರವೂ ಸಂಚಾರ ಅಸ್ತವ್ಯಸ್ತಗೊಂಡಿದ್ದು ಬೆಳಗ್ಗಿನಿಂದ ರಾತ್ರಿವರೆಗೆ ವಾಹನಗಳು ಸರತಿಯಲ್ಲಿ ಸಂಚರಿಸಿತು. ಕಳೆದ ಹಲವು ದಿನಗಳಿಂದ ಸುರಿಯುತ್ತಿರುವ ಮಳೆಗೆ ಕಲ್ಲಾಪುವಿನಿಂದ ತೊಕ್ಕೊಟ್ಟು ಓವರ್‍ಬ್ರಿಡ್ಜ್‍ವರೆಗೆ ಮಳೆ ನೀರು ರಸ್ತೆಯಲ್ಲೇ ಹರಿದು ಸಂಪೂರ್ಣ ಹೊಂಡಮಯವಾಗಿದ್ದು, ಶುಕ್ರವಾರ ಸುರಿದ ಮಳೆಗೆ ಜಂಕ್ಷನ್ ಇನ್ನಷ್ಟು ಹದಗೆಟ್ಟಿದೆ. ಸುಮಾರು ಒಂದು ಕಿ. ಮಿ. ರಸ್ತೆ ಹೊಂಡದಿಂದ ವಾಹನಗಳು ಸುಮಾರು ಅರ್ಧ ಗಂಟೆಗಳ ಕಾಲ ಈ ರಸ್ತೆಯಲ್ಲೇ ನಿಧಾನವಾಗಿ ಸಂಚರಿಸುವಂತಾಗಿದೆ. ನೀರು ಪಾಲಾಗುತ್ತಿರುವ ಜಲ್ಲಿ ಹುಡಿ : ಫ್ಲೈಓವರ್ ಕಾಮಗಾರಿಯಿಂದ ಸಮಸ್ಯೆ ಉದ್ಬವಿಸಿದ್ದು, ಕಾಮಗಾರಿ ನಡೆಸುವ ಸಂಸ್ಥೆ ಕಾರ್ಮಿಕರ ಮೂಲಕ ಜಲ್ಲಿ ಹುಡಿಯನ್ನು ಹೊಂಡಗಳಿಗೆ ಹಾಕಿದರೂ ಜಲ್ಲಿಹುಡಿ ಮಳೆಯ ನೀರಿನೊಂದಿಗೆ ಹರಿದು ಹೋಗುತ್ತಿದ್ದು, ಹೊಂಡ ಹಾಗೇ ಉಳಿದಿದೆ. ವಾಹನ ಚಾಲಕರು ನೀರಿನಿಂದ ತುಂಬಿದ ಹೊಂಡದ ಮಾಹಿತಿ ಇರದೆ ಹೊಂಡಗಳಿಗೆ ಕಾರು, ದ್ವಿಚಕ್ರ ವಾಹನಗಳು ಇಳಿಯುವುದರಿಂದ ಚಾಲಕರು ಇಲ್ಲಿ ಸಂಚಾರ ನಡೆಸುವುದೇ ದುಸ್ತರವಾಗಿದೆ. ಹೊಂಡ ತುಂಬಿಸಿದ ಟ್ರಾಫಿಕ್ ಪೊಲೀಸರು : ತೊಕ್ಕೊಟ್ಟು ಜಂಕ್ಷನ್‍ನಲ್ಲಿ…

Read More

UN NETWORKS ಉಳ್ಳಾಲ: ಉಳ್ಳಾಲ ಮಾಸ್ತಿಕಟ್ಟೆ ಬಳಿ ಅಪರಿಚಿತರಿಬ್ಬರು ಯುವಕನೊಬ್ಬನಿಗೆ ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಿದ ಘಟನೆ ನಡೆದಿದ್ದು, ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಉಳ್ಳಾಲ ಅಕ್ಕರೆಕೆರೆ ನಿವಾಸಿ ವೆಂಕಟೇಶ್(34) ಹಲ್ಲೆಗೊಳಗಾದ ಯುವಕನಾಗಿದ್ದು, ಮಾಸ್ತಿಕಟ್ಟೆ ಬಳಿ ಅಂಗಡಿಯೊಂದರ ಬಳಿ ನಿಂತಿದ್ದಾಗ ಇಬ್ಬರು ಆಗಂತುಕರು ಬಂದು ನಿನ್ನ ತಮ್ಮ ನಮ್ಮ ಮೇಲೆ ಕೊಟ್ಟಿರುವ ಪ್ರಕರಣವನ್ನು ವಾಪಾಸ್ ಪಡೆದುಕೊಳ್ಳಬೇಕು ಇಲ್ಲದಿದ್ದಲ್ಲಿ ನಿನ್ನನ್ನು ಕೊಲ್ಲುತ್ತೇನೆ ಎಂದು ಚೂರಿಯನ್ನು ಎದೆಗೆ ಇಟ್ಟು ಬಳಿಕ ಹಲ್ಲೆ ನಡೆಸಿದ್ದು, ಈ ಸಂದರ್ಭದಲ್ಲಿ ಸ್ಥಳೀಯರು ಸಹಾಯಕ್ಕೆ ಆಗಮಿಸಿದಾಗ ಆರೋಪಿಗಳಿಬ್ಬರು ಪರಾರಿಯಾಗಿದ್ದಾರೆ. ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

UN NETWORKS ಸೋಮೇಶ್ವರ : ಸೋಮೇಶ್ವರ ಉಚ್ಚಿಲ ನಿವಾಸಿ ಕೃಷ್ಣ ಕಾರಂತ್(91) ಜೂ. 29ರಂದು ಶುಕ್ರವಾರ ನಿಧನ ಹೊಂದಿದರು. ಮೃತರು ಇಬ್ಬರು ಪುತ್ರರನ್ನು ಅಗಲಿದ್ದಾರೆ. ಮುಂಬೈಯಲ್ಲಿ ಶಿಕ್ಷಕರಾಗಿದ್ದ ಅವರು ಒಂದು ವರ್ಷ ದೇರಳಕಟ್ಟೆ ಶಾಲೆಯಲ್ಲಿ ಕಾರ್ಯ ನಿರ್ವಹಿಸಿ ಬಳಿಕ ಭಾರತೀಯ ಜೀವ ವಿಮಾ ನಿಗಮದಲ್ಲಿ ಸುಮಾರು 40 ವರ್ಷಗಳ ಕಾಲ ವಿವಿಧ ಹುದ್ದೆಗಳನ್ನು ನಿರ್ವಹಿಸಿ ಪ್ರಬಂಧಕರಾಗಿ ನಿವೃತ್ತಿಹೊಂಡಿದ್ದರು. ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಮತ್ತು ಕ್ರೀಡಾ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದ ಅವರು ಮುಂಬೈ ಫುಟ್‍ಬಾಲ್ ಅಸೋಸಿಯೇಶನ್‍ನಲ್ಲಿ ಸಕ್ರಿಯರಾಗಿದ್ದರು. ಕೋಟೆಕಾರು ಗಣೇಶೋತ್ಸವ ಸಮಿತಿಯಲ್ಲಿ 10 ವರ್ಷಗಳ ಕಾಲ ಅಧ್ಯಕ್ಷರಾಗಿ, ಕೋಟೆಕಾರು ಶಾಲಾ ಹಲೇ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ, ವಿವಿಧ ಸಂಘ ಸಂಸ್ಥೆಗಳಲ್ಲಿ ಮಾರ್ಗದರ್ಶಕರಾಗಿ ಸೇವೆ ಸಲ್ಲಿಸಿದ್ದರು.

Read More

UN NETWORKS ಉಳ್ಳಾಲ: ಶಾಲೆಯಲ್ಲಿ ನೀಡಿದ ಹೋಮ್‍ವರ್ಕ್ ಮಾಡಿಲ್ಲ ಎಂದು ಆರೋಪಿಸಿ ಶಾಲಾ ಮುಖ್ಯ ಶಿಕ್ಷಕಿ ವಿದ್ಯಾರ್ಥಿನಿಗೆ ಹೊಡೆದಿದ್ದು, ಗಾಯಗೊಂಡಿರುವ ವಿದ್ಯಾರ್ಥಿನಿಯನ್ನು ತೊಕ್ಕೊಟ್ಟಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಿನ್ಯ ಗ್ರಾಮದ ಅಜ್ಜಿನಡ್ಕ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ 4ನೇ ತರಗತಿ ವಿದ್ಯಾರ್ಥಿನಿ ಹೊಡೆತ ತಿಂದು ಗಾಯಗೊಂಡಿರುವ ವಿದ್ಯಾರ್ಥಿನಿಯಾಗಿದ್ದು, ಶಾಲೆಯಲ್ಲಿ ನೀಡಿದ ಹೋಮ್‍ವರ್ಕ್ ಮಾಡಿಲ್ಲ ಎಂದು ಆರೋಪಿಸಿ ಶಾಲಾ ಮುಖ್ಯ ಶಿಕ್ಷಕಿ ಬೆನ್ನಿಗೆ ಮತ್ತು ಕೈಗೆ ಬೆತ್ತದಿಂದ ಹೊಡೆದಿದ್ದು, ಗಾಯಗೊಂಡಿರುವ ವಿದ್ಯಾರ್ಥಿನಿಯ ತಂದೆ ಚೈಲ್ಡ್ ಲೈನ್‍ಗೆ ದೂರು ನೀಡಿದ್ದು, ಚೈಲ್ಡ್ ಲೈನ್‍ನ ಅಧಿಕಾರಿಗಳು ಆಗಮಿಸಿ ವಿದ್ಯಾರ್ಥಿನಿಯಿಂದ ಮಾಹಿತಿ ಪಡೆದು ಉಳ್ಳಾಲ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

Read More

UN NETWORKS ಉಳ್ಳಾಲ: ಟೋಲ್ ಸಂಗ್ರಹ ವೇಳೆ ಮಹಿಳಾ ಸಿಬ್ಬಂದಿಯೊಂದಿಗೆ ಕಾರು ಚಾಲಕರು ಅನುಚಿತವಾಗಿ ವರ್ತಿಸುತ್ತಿದ್ದಾರೆ. ಇದನ್ನು ಇತರೆ ಸಿಬ್ಬಂದಿ ಪ್ರಶ್ನಿಸಿದಾಗ ನಡೆಯುವ ಗಲಾಟೆಗೆ ಬಣ್ಣ ಹಚ್ಚುವ ಮೂಲಕ ಮಾಸಿಕ ವೇತನಕ್ಕೆ ದುಡಿಯುವ ಸಿಬ್ಬಂದಿಯನ್ನೇ ಗೂಂಡಾಗಳೆಂದು ಕರೆಯಲಾಗುತ್ತಿದೆ ಎಂದು ಟೋಲ್ ಸಿಬ್ಬಂದಿಯೇ ಆಗಿರುವ ತಲಪಾಡಿ ಗ್ರಾಮ ಪಂಚಾಯಿತಿ ಸದಸ್ಯೆ ಅಕ್ಷತಾ ಆರೋಪಿಸಿದರು. ತಲಪಾಡಿ ಗ್ರಾಮ ಪಂಚಾಯಿತಿನ 2018-19ರ ಸಾಲಿನ ಪ್ರಥಮ ಹಂತದ ಶುಕ್ರವಾರ ನಡೆದ ಗ್ರಾಮಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ರಸ್ತೆ ಸರಿಯಿಲ್ಲದೇ ಟೋಲ್ ಪಡೆಯುವುದು ತಪ್ಪು ಎಂದು ಗೊತ್ತಿದೆ. ಸಂಬಂಧಪಟ್ಟ ಗುತ್ತಿಗೆ ವಹಿಸಿಕೊಂಡ ಸಂಸ್ಥೆಯವರೊಡನೆ ಹೋರಾಟ ನಡೆಸುವವರು ಮಾತನಾಡಬೇಕಿದೆ. ಆದರೆ ತಿಂಗಳ ವೇತನಕ್ಕೆ ದುಡಿಯುವ ಸಿಬ್ಬಂದಿ ಮೇಲೆ ಹೋರಾಟ ನಡೆಸುವವರು ಆರೋಪಗಳನ್ನು ಮಾಡುತ್ತಿರುವುದು ಸರಿಯಲ್ಲ. ಕರ್ತವ್ಯ ನಿರ್ವಹಣೆ ಸಂದರ್ಭ ಕೇರಳ ಭಾಗದಿಂದ ಬರುವ ಮತ್ತು ಹೋಗುವ ಕಾರುಗಳಲ್ಲಿರುವ ಯುವಕರು ಹಣ ಪಡೆದುಕೊಳ್ಳುವಾಗ ಮಹಿಳಾ ಸಿಬ್ಬಂದಿ ಜೊತೆಗೆ ಅನುಚಿತವಾಗಿ ವರ್ತಿಸುವ ಕೆಲಸ ಮಾಡುತ್ತಿದ್ದಾರೆ. ಇದನ್ನು ವಿರೋಧಿಸಿದರೆ ಗಲಾಟೆಯನ್ನೇ ನಡೆಸುವ ಕೆಲಸವಾಗುತ್ತಿದೆ ಎಂದು ಆರೋಪಿಸಿದರು.…

Read More

UN NETWORKS ಮುಡಿಪು: ಯುವಕರಿಗೆ ಗಾಂಜಾ ಮಾರಾಟ ಮಾಡಲು ಒಯ್ಯುತ್ತಿದ್ದ ವ್ಯಕ್ತಿಯೋರ್ವನನ್ನು ಪೊಲೀಸರು ಸೆರೆ ಹಿಡಿದು, ಆತನಿಂದ ಗಾಂಜಾ ವಶಪಡಿಸಿಕೊಂಡ ಘಟನೆ ಬಂಟ್ವಾಳ ತಾಲೂಕಿನ ಬಾಳೆಪುಣಿ ಗ್ರಾಮದ ಮುಡಿಪು ನವಗ್ರಾಮದಲ್ಲಿ ಗುರುವಾರ ನಡೆದಿದೆ.ಆರೋಪಿಯನ್ನು ಬಂಟ್ವಾಳ ತಾಲೂಕಿನ ಕೈರಂಗಳ ಗ್ರಾಮದ ಮುಡಿಪುವಿನ ಇಕ್ಬಾಲ್ ಎಂದು ಗುರುತಿಸಲಾಗಿದೆ. ಆತನಿಂದ 680 ಗ್ರಾಂ ಗಾಂಜಾ ಮತ್ತು ಸ್ಕೂಟರ್‌ನ್ನು ವಶಪಡಿಸಿಕೊಳ್ಳಲಾಗಿದೆ. ಮುಡಿಪು ನವಗ್ರಾಮದಿಂದ ಸ್ಕೂಟರ್‌ನಲ್ಲಿ ಬರುತ್ತಿದ್ದ ಇಕ್ಬಾಲ್ ಪೊಲೀಸರ ವಾಹನ ಕಂಡ ತಕ್ಷಣ ತಪ್ಪಿಸಿಕೊಂಡು ಹೋಗಲು ಯತ್ನಿಸಿದ್ದಾನೆ. ಬೆನ್ನಟ್ಟಿದ ಪೊಲೀಸರು ಆತನನ್ನು ಹಿಡಿದು ತಪಾಸಣೆ ಮಾಡಿದಾಗ ಗಾಂಜಾ ಇರುವುದು ಪತ್ತೆಯಾಗಿದೆ. ಆರೋಪಿಯನ್ನು ವಿಚಾರಿಸಿದಾಗ ಮೀಯಪದವಿನ ಅರ್ಷಾದ್ ಎಂಬಾತನಿಂದ ಗಾಂಜಾ ಖರೀದಿಸಿಕೊಂಡು ಯುವಕರಿಗೆ ಮಾರಾಟ ಮಾಡಲು ಕೊಂಡೊಯ್ಯುತ್ತಿರುವುದಾಗಿ ಮಾಹಿತಿ ನೀಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಯನ್ನು ವಶಕ್ಕೆ ಪಡೆದ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಈ ಕುರಿತು ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

UN NETWORKS ಉಳ್ಳಾಲ: ಪರಿಸರ ಸ್ನೇಹಿಯಾಗುವ ಉದ್ದೇಶದಿಂದ ಯೆನೆಪೋಯ ವಿಶ್ವವಿದ್ಯಾನಿಲಯದ ಕ್ಯಾಂಪಸ್ಸಿನಲ್ಲಿ ಶೇ.20 ರಷ್ಟು ವಿದ್ಯುತ್ ಉಳಿಸುವ ಸಲುವಾಗಿ 498 ಕಿಲೋ ವಾಟ್ಸ್ ವಿದ್ಯುತ್ ಉತ್ಪಾದಿಸುವ ಸೌರ ಫಲಕವನ್ನು ಅಳವಡಿಸಲಾಗಿದೆ ಎಂದು ದೇರಳಕಟ್ಟೆ ಯೆನೆಪೋಯ ವಿಶ್ವವಿದ್ಯಾಲಯದ ಕುಲಪತಿ ಡಾ|.ಎಂ ವಿಜಯಕುಮಾರ್ ಹೇಳಿದರು. ಅವರು ಯೆನೆಪೋಯ ಕ್ಯಾಂಪಸ್ಸಿನಲ್ಲಿ ಅಳವಡಿಸಲಾದ ಸೌರ ಫಲಕದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು. ಸೌರ ಫಲಕದ ಅಳವಡಿಕೆಯಿಂದಾಗಿ ಕ್ಯಾಂಪಸ್ಸಿನಲ್ಲಿ ಶೇ. 20 ರಷ್ಟು ವಿದ್ಯುತ್ ಉಳಿಸಲು ಸಾಧ್ಯವಾಗಿದೆ. ಪರಿಸರ ಸ್ನೇಹಿಯಾಗಿ ಬೆಳೆಯುತ್ತಿರುವ ವಿಶ್ವವಿದ್ಯಾಲಯಕ್ಕೆ ಇದೊಂದು ಹಿರಿಮೆ ತಂದಿದೆ. ಸದ್ಯ ಅಳವಡಿಸಿರುವ ಸೌರ ಫಲಕದಿಂದ 498 ಕಿಲೋ ವಾಟ್ಸ್ ವಿದ್ಯುತ್ ಉತ್ಪಾದನೆಯಾಗಲಿದೆ. ಬರುವ ದಿನಗಳಲ್ಲಿ ಶೇ. 100 ರಷ್ಟು ವಿದ್ಯುತ್ ಸೌರಶಕ್ತಿಯಿಂದಲೇ ದೊರೆಯುವಂತಹ ಪ್ರಯತ್ನವನ್ನು ಮುಂದುವರಿಸಲಾಗುವುದು ಎಂದರು. https://www.youtube.com/watch?v=GDXxBzvXnZo ಯೆನೆಪೋಯ ವಿ.ವಿ ಹಣಕಾಸು ವಿಭಾಗದ ನಿರ್ದೇಶಕ ಫರ್ಹಾದ್ ಯೆನೆಪೋಯ ಅಧ್ಯಕ್ಷತೆ ವಹಿಸಿದ್ದರು. ಕುಲಸಚಿವ ಶ್ರೀಕುಮಾರ್ ಮೆನನ್, ಹಣಕಾಸು ಅಧಿಕಾರಿ ಮಹಮ್ಮದ್ ಬಾವಾ.ಪಿ, ದಂತ ವೈದ್ಯಕೀಯ ಕಾಲೇಜಿನ ಡೀನ್ ಡಾ|.ಬಿ.ಹೆಚ್.ಶ್ರೀಪತಿ ರಾವ್, ವೈದ್ಯಕೀಯ…

Read More

UN NETWORKS ಉಳ್ಳಾಲ: ಕರ್ನಾಟಕ ರಾಜ್ಯ ವಕ್ಫ್ ಮಂಡಳಿಯಿಂದ, ಜಿಲ್ಲೆಯ ಆಯ್ದ ಧಾರ್ಮಿಕ ಸಂಸ್ಥೆಯಡಿ ಸರ್ಕಾರದ ವಿವಿಧ ಯೋಜನೆ ಬಗ್ಗೆ ಮತ್ತು ಆರ್ಥಿಕ, ಶೈಕ್ಷಣಿಕ ಹಾಗೂ ಸಾಮಾಜಿಕವಾಗಿ ಅಭಿವೃದ್ದಿಗೊಳ್ಳುವಂತಹ ಕಾರ್ಯಗಳ ಬಗ್ಗೆ ಜನರಿಗೆ ತಲುಪಲು ಸಹಾಯಕವಾಗುವಂತೆ ಮಾಹಿತಿ ಕೇಂದ್ರ ಸ್ಥಾಪಿಸುವ ಯೋಜನೆಯಡಿ ದ.ಕ ಜಿಲ್ಲೆಯ 5ಧಾರ್ಮಿಕ ಸಂಸ್ಥೆಯ ಪೈಕಿ ಉಳ್ಳಾಲ ಕೇಂದ್ರ ಜುಮಾ ಮಸೀದಿ ಮತ್ತು ಸಯ್ಯಿದ್ ಮದನಿ ದರ್ಗ ಕಮಿಟಿಯು ಆದರ್ಶ (ಮಿಸಾಲಿ) ಮಸೀದಿಯಾಗಿ ಆಯ್ಕೆಗೊಂಡಿರುತ್ತದೆ. ಮಿಸಾಲಿ ಮಸೀದಿ ಕಾರ್ಯನಿರ್ವಹಣೆಗೆ ಉಳ್ಳಾಲ ಸಯ್ಯಿದ್ ಮದನಿ ದರ್ಗಾ ಸಮಿತಿಗೆ, ದಕ್ಷಿಣ ಕನ್ನಡ ಜಿಲ್ಲಾ ವಕ್ಫ್ ಸಲಹಾ ಸಮಿತಿಯ ವತಿಯಿಂದ ಅಧ್ಯಕ್ಷರಾದ ಅಲ್‍ಹಾಜಿ ಕನಚೂರು ಮೋನುರವರು 80ಸಾವಿರ ರುಪಾಯಿಯ ಚೆಕ್ಕ್ ನ್ನು ವಕ್ಫ್ ಕಛೇರಿಯಲ್ಲಿ ವಿತರಿಸಿದರು. ಈ ಸಂದರ್ಭ ದರ್ಗಾ ಉಪಾಧ್ಯಕ್ಷರಾದ ಯು.ಕೆ ಮೋನು ಇಸ್ಮಾಯೀಲ್, ಬಾವ ಮುಹಮ್ಮದ್, ಜತೆ ಕಾರ್ಯದರ್ಶಿ ನೌಷಾದ್ ಮೇಲಂಗಡಿ ಉಪಸ್ಥಿತರಿದ್ದರು. ಉಳ್ಳಾಲ ಕೇಂದ್ರ ಜುಮಾ ಮಸೀದಿ ಮತ್ತು ಸಯ್ಯಿದ್ ಮದನಿ ದರ್ಗಾ ಆಡಳಿತ ಕಮಿಟಿ ಆದರ್ಶ ಮಸೀದಿಯಾಗಿ…

Read More

UN NETWORKS ಉಳ್ಳಾಲ: ತಾಜುಲ್ ಉಲಮಾ ಚಾರಿಟೇಬಲ್ ಟ್ರಸ್ಟ್ ಇದರ ವತಿಯಿಂದ ಮಹಿಳೆಯರಿಗಾಗಿ ಒಂದು ವರ್ಷದ ವಿಶೇಷ ಕೋರ್ಸ್ ಮಹಿಳಾ ಶರೀಅತ್ ಕಾಲೇಜ್” ಗೆ ಜೂನ್ 28 ಗುರುವಾರ ಚಾಲನೆ ನೀಡಲಾಯಿತು.ಟ್ರಸ್ಟ್ ಅಧ್ಯಕ್ಷರಾದ ಏಷ್ಯನ್ ಅಹ್ಮದ್ ಬಾವಾ ಹಾಜಿ ಯವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಸಯ್ಯಿದ್ ಇಸ್ಮಾಈಲ್ ಅಲ್ ಅಹ್ ದಲ್ ತಂಙಳ್ ಆದೂರು, ಕೇರಳ ರವರು ಉಧ್ಘಾಟಿಸಿದರು. ಮಹಿಳಾ ಶರೀಅತ್ ಕಾಲೇಜಿನ ಪ್ರಾಂಶುಪಾಲರಾದ ವಿ.ಯು ಇಸ್ಹಾಖ್ ಝುಹ್ರಿ ಸೂರಿಂಜೆ ವಿಷಯ ಮಂಡಿಸಿದರು.ಕಾಲೇಜ್ ನ ಪ್ರೊಫೆಸರುಗಳಾದ ಅಬೂಬಕರ್ ಸಿದ್ದೀಖ್ ಅಹ್ಸನಿ ಹಾಗೂ ಆಯಿಶಾ ಫರ್ವೀನ ಕಾಲೇಜ್ ನ ನೀತಿ, ನಿಯಮಗಳನ್ನು ವಿವರಿಸಿದರು.ತಾಜುಲ್ ಉಲಮಾ ಮಸ್ಜಿದ್ ನ ಇಮಾಮ್ ಅಶ್ರಫ್ ಸ ಅದಿ, ಟ‍್ರಸ್ಟ್ ಕೋಶಾಧಿಕಾರಿ ಹಾಜಿ ಬಶೀರ್ ಅಹ್ಮದ್ ದೇರಳಕಟ್ಟೆ,ಸದಸ್ಯರಾದ ಯೂಸುಫ್ ರಝ್ವಿ, ಹಾಜಿ ಅಹ್ಮದ್ ಕಬೀರ್ ಆ, ಹಮೀದ್ ಹಾಜಿ ದೇರಳಕಟ್ಟೆ ಭಾಗವಹಿಸಿದ್ದರು.

Read More