Author: UllalaVani

Kannada News From Coastal Karnataka

UN NETWORKS ಉಳ್ಳಾಲ: ಇಂದು ಮಹಿಳೆಯರು ಪುರುಷರಿಗೆ ಸಮನಾಗಿ ವಿಶ್ವದಲ್ಲಿ ದೊಡ್ಡ ಸ್ಥಾನ ಅಲಂಕರಿಸುತ್ತಿದ್ದು ಸರ್ಕಾರವೂ ಮಹಿಳೆಯರ ಸಬಲೀಕರಣಕ್ಕೆ ಆದ್ಯತೆ ನೀಡಿದೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ.ಖಾದರ್ ಅಭಿಪ್ರಾಯಪಟ್ಟರು. ಲಯನ್ಸ್ ಕ್ಲಬ್ ಇಂಟರ್‍ನ್ಯಾಷನಲ್ ಜಿಲ್ಲೆ 317ಡಿ ಇದರ ವತಿಯಿಂದ ಉಳ್ಳಾಲ ತಾಜ್‍ಮಹಲ್ ಸಭಾಂಗಣದಲ್ಲಿ ಬುಧವಾರ ನಡೆದ ಮಹಿಳಾ ದಿನಾಚರಣೆ ಪ್ರಯುಕ್ತ ನಡೆದ ಜಾಗೃತಿ ಕಾರ್ಯಕ್ರಮದಲ್ಲಿ ಸಾಧಕರಿಗೆ ಪ್ರಶಸ್ತಿ ಪುರಸ್ಕಾರ ಮಾಡಿ ಮಾತನಾಡಿದರು. ಮಹಿಳೆಯರನ್ನು ಸ್ವಾವಲಂಬಿಯಾಗಿಸುವ ನಿಟ್ಟಿನಲ್ಲಿ ಕಡಿಮೆ ಬಡ್ಡಿದರದಲ್ಲಿ ಸಾಲ, ಸ್ವಸಹಾಯ ಸಂಘಗಳಿಗೆ ಬಡ್ಡಿರಹಿತ ಸಾಲವನ್ನು ನೀಡಲಾಗುತ್ತಿದೆ. ಇದರ ಸದುಪಯೋಗ ಪಡಿಸಿಕೊಂಡು ಮನೆಯಲ್ಲೇ ಸ್ವಉದ್ಯೋಗ ಮಾಡಲು ಲಯನ್ಸ್ ಕ್ಲಬ್‍ನಂತಹ ಸಂಘ-ಸಂಸ್ಥೆಗಳು ಮಾರ್ಗದರ್ಶನ ನೀಡಬೇಕು ಎಂದರು. ಈ ಸಂದರ್ಭದಲ್ಲಿ ಡಾ.ಪ್ರಿಯದರ್ಶಿನಿ ಡಿ’ಸೋಜ, ಮರ್ಸಿ ವೀಣಾ ಡಿ’ಸೋಜ, ಸಬಿತಾ ಮೋನಿಸ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಯೋಜನಾಧಿಕಾರಿ ಸಿ.ಕೆ. ಶ್ಯಾಮಲಾ ಅವರನ್ನು ಸನ್ಮಾನಿಸಲಾಯಿತು. ಲಯನ್ಸ್ ನ ಜಿಲ್ಲಾ ಪ್ರಥಮ ಮಹಿಳೆ ನಮಿತಾ ಡಿ.ಹೆಚ್. ಮತ್ತು ಲಯನ್ಸ್ ಜಿಲ್ಲಾ ರಾಜ್ಯಪಾಲ…

Read More

UN NETWORKS ಕೊಣಾಜೆ: ಕೊಣಾಜೆ ಬಳಿಯ ಮೂರು ಅಂಗಡಿಗಳ ಬಾಗಿಲು ಮುರಿದು ಒಳನುಗ್ಗಿರುವ ಕಳ್ಳರು ನುಗ್ಗಿ ನೂರು ರೂಪಾಯಿ ಹಾಗೂ ಎರಡು ಮೊಬೈಲ್ ಸೆಟ್‍ಗಳನ್ನು ಕದ್ದೊಯ್ದ ಘಟನೆ ಬುಧವಾರ ಬೆಳಕಿಗೆ ಬಂದಿದೆ. ಕೊಣಾಜೆಯ ಮಹಮ್ಮದ್ ಎಂಬವರ ಡಿ.ಎಚ್.ಸ್ಟೋರ್, ಸಫಾನ್ ಎಂಬವರ ಸಿ.ಎಂ.ಮೊಬೈಲ್ ಕ್ಲಿನಿಕ್ ಹಾಗೂ ಮಹಮ್ಮದ್ ಎಂಬವರ ಅಂಗಡಿಯ ಬಾಗಿಲು ಮುರಿದು ಕಳ್ಳತನ ನಡೆಸಿದ್ದಾರೆ, ಡಿ.ಎಚ್ .ಸ್ಟೋರ್‍ನಿಂದ ಅಂಗಡಿಯ ವಸ್ತುಗಳನ್ನು ಯಾವುದೇ ವಸ್ತುಗಳನ್ನು ಕಳವು ಮಾಡದೆ ಡ್ರಾವರ್‍ನಲ್ಲಿದ್ದ ನೂರು ರೂಪಾಯಿಯನ್ನು ಕಳವುಗೈದಿದ್ದಾರೆ. ಅಲ್ಲದೆ ಮೊಬೈಲ್ ಅಂಗಡಿಯಿಂದ ಗ್ರಾಹಕರು ರಿಪೇರಿಗೆಂದು ಕೊಟ್ಟಿದ್ದ ಎರಡು ಮೊಬೈಲ್ ಸೆಟ್ ಹಾಗೂ ಹೆಡ್‍ಫೋನ್‍ಗಳನ್ನು ಕಳವು ಗೈದಿದ್ದಾರೆ. ಮೊಬೈಲ್ ಅಂಗಡಿಯಲ್ಲಿ ಲ್ಯಾಪ್‍ಟಾಪ್‍ನಂತಹ ವಸ್ತುಗಳಿದ್ದರೂ ಕಳ್ಳರು ಬಿಟ್ಟುಹೋಗಿರುವುದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಅಲ್ಲದೆ ಇಲ್ಲೇ ಸಮೀಪದ ಮಹಮ್ಮದ್ ಎಂಬವರ ಚುರುಮುರಿ ಅಂಗಡಿಯ ಬಾಗಿಲು ಮುರಿದು ಕಳ್ಳರು ಒಳನುಗ್ಗಿದ್ದರೂ ಯಾವುದೇ ವಸ್ತುಗಳ ಕಳವು ನಡೆಸಿಲ್ಲ. ಅಂಗಡಿಯಲ್ಲಿ ಸಿಗರ್‍ಲೈಟ್ ಬಿಟ್ಟು ಹೋಗಿದ್ದರು! ಮೂರು ಅಂಗಡಿಗಳಿಗೆ ಕಳ್ಳರು ಬಾಗಿಲು ಮುರಿದು ಒಳನುಗ್ಗಿದ್ದರೂ ಯಾವುದೇ ಬೆಲೆ ಬಾಳುವ…

Read More

UN NETWORKS ಕೊಣಾಜೆ: ವಿಶ್ವವಿದ್ಯಾಲಯದ ಶಿಕ್ಷಕೇತರ ಉದ್ಯೋಗಿಗಳಿಗೂ ಸಮಾನ ವೇತನ(ಯುಜಿಸಿ ವೇತನ ನೀಡುವಂತೆ ಹಾಗೂ 2004ರ ನಂತರ ನೇಮಕಗೊಂಡ ಉದ್ಯೋಗಿಗಳಿಗೆ ಹೊಸ ಪೆನ್ಷನ್ ಸ್ಕೀಮ್ ಒದಗಿಸಿಕೊಡುವಂತೆ ಆಗ್ರಹಿಸಿ ಮಂಗಳೂರು ವಿವಿಯ ಶಿಕ್ಷಕೇತರ ಸಿಬ್ಬಂದಿಗಳು ಬುಧವಾರ ವಿವಿ ಕುಲಪತಿಯವರ ಮೂಲಕ ಪ್ರಧಾನಿಯವರಿಗೆ ಮನವಿ ಸಲ್ಲಿಸಿದರು. ದಿ ನೇಷನಲ್ ಎಕ್ಸಿಕ್ಯೂಟಿವ್ ಮೀಟಿಂಗ್ ಮತ್ತು ಗೋಲ್ಡನ್ ಜುಬ್ಲಿ ಸೆಲೆಬ್ರೇಷನ್ ಆಫ್ ಆಲ್ ಇಂಡಿಯಾ ಯುನಿವರ್ಸಿಟಿ ಎಂಪ್ಲಾಯಿಸ್ ಕಾನ್ಪೆಡರೇಶನ್ ಸಭೆಯಲ್ಲಿ ಮಾ.21 ನ್ನು ಬೇಡಿಕೆ ದಿನವನ್ನಾಗಿ ಪರಿಗಣಿಸಿ ವಿವಿಯ ಶಿಕ್ಷಕೇತರ ಸಿಬ್ಬಂದಿಗಳಿಗೆ ಸಮಾನವೇತನ ಹಾಗೂ ಪೆನ್ಷನ್ ಸ್ಕೀಮ್ ಬಗ್ಗೆ ಆಯಾ ವಿವಿ ಕುಲಪತಿಯವರಿಗೆ ಮನವಿ ಸಲ್ಲಿಸುವುದರ ಮೂಲಕ ಪ್ರಧಾನಮಂತ್ರಿಯವರಿಗೆ ತಲುಪಿಸುವ ನಿರ್ಣಯವನ್ನು ತೆಗೆದುಕೊಳ್ಳಲಾಗಿತ್ತು. ಈ ನಿರ್ಣಯದಂತೆ ಮಂಗಳೂರು ವಿವಿಯ ಶಿಕ್ಷಕೇತರ ಸಿಬ್ಬಂದಿಗಳು ವಿಜ್ಞಾನ ಸಂಕೀರ್ಣದಿಂದ ಮೆರವಣಿಗೆ ನಡೆಸಿ ಆಡಳಿತ ಕಚೇರಿಯಲ್ಲಿ ಒಟ್ಟು ಸೇರಿ ಕುಲಪತಿಯವರ ಮುಖಾಂತರ ಪ್ರಧಾನಮಂತ್ರಿಯವರಿಗೆ ಮನವಿಯನ್ನು ಸಲ್ಲಿಸಿದರು. ಈ ಸಂದರ್ಭದಲ್ಲಿ ಮಂಗಳೂರು ವಿವಿ ಶಿಕ್ಷಕೇತರ ಉದ್ಯೋಗಿಗಳ ಸಂಘದ ಅಧ್ಯಕ್ಷರಾದ ಕಮಲಾಕ್ಷಿ ಪಿ.ಶೆಟ್ಟಿ, ಉಪಾಧ್ಯಕ್ಷರಾದ ರವಿಪ್ರಕಾಶ್,…

Read More

UN NETWORKS ತೊಕ್ಕೊಟ್ಟು: ಹೋಬಳಿ ಮಟ್ಟದಲ್ಲಿ ರಾಜ್ಯದ ಪ್ರಥಮ ಇಂದಿರಾ ಕ್ಯಾಂಟೀನ್ ತೊಕ್ಕೊಟ್ಟು ನಗರಸಭೆಯ ನಿಲ್ದಾಣದಲ್ಲಿ ನಿರ್ಮಾಣಗೊಂಡಿದ್ದು ಮಾ. 24ರಂದು ಉದ್ಘಾಟನೆಗೊಳ್ಳಲಿದ್ದು ಬುಧವಾರ ಸಚಿವ ಯು.ಟಿ. ಖಾದರ್ ಅವರು ಕಾಮಗಾರಿ ಪರಿಶೀಲಿಸಿದರು. ಕ್ಯಾಂಟೀನ್ ನಿರ್ಮಾಣ ಕಾಮಗಾರಿಯನ್ನು ಕೆಇಎಫ್ ಸಂಸ್ಥೆ ವಹಿಸಿಕೊಂಡಿದ್ದು ಬಹುತೇಕ ಪೂರ್ಣಗೊಂಡಿದೆ. ಉಡುಪಿ ಮೂಲದ ಪ್ರತಿಷ್ಠಿತ ಸಂಸ್ಥೆ ಅಡುಗೆ ಸಾಮಾಗ್ರಿ ಪರಿಕರ ಪೂರೈಸಲು ಗುತ್ತಿಗೆ ನೀಡಲಾಗಿದೆ. ಆಹಾರ ತಯಾರಿ, ಸರಬರಾಜು ಹಾಗೂ ವಿತರಣೆಗಾಗಿ ಮಂಗಳೂರಿನ ಕ್ಯಾಟರಿಂಗ್ ಸಂಸ್ಥೆ ವ್ಯವಸ್ಥೆ ಮಾಡಲಿದೆ. ಬೆಳಗ್ಗಿನ ಉಪಹಾರಕ್ಕೆ 5ರೂ. , ಮಧ್ಯಾಹ್ನ ಹಾಗೂ ರಾತ್ರಿ ಊಟ 10ರೂ. ಗಳಲ್ಲಿ ಲಭ್ಯವಿರಲಿದ್ದು ಒಬ್ಬ ವ್ಯಕ್ತಿಗೆ ಬೆಳಗ್ಗಿನ ತಿಂಡಿ, ಮಧ್ಯಾಹ್ನ ಹಾಗೂ ರಾತ್ರಿಯ ಊಟಕ್ಕೆ 60ರೂ. ಗಳ ಲೆಕ್ಕಾಚಾರದಲ್ಲಿ ಸರಕಾರ ಕ್ಯಾಟರಿಂಗ್ ಸಂಸ್ಥೆಯ ಜೊತೆಗೆ ಒಡಂಬಡಿಕೆ ಮಾಡಿಕೊಂಡಿದೆ. ಅದರಂತೆ ಫಲಾನುಭವಿಗಳು 25ರೂ. ಪಾವತಿಸಿದರೆ ಉಳಿದ 35ರೂ. ಗಳನ್ನು ಕ್ಯಾಟರಿಂಗ್ ಸಂಸ್ಥೆಗೆ ಸರಕಾರ ಪಾವತಿಸಲಿದೆ. ಮಧ್ಯವರ್ತಿಗಳ ಕಾಟ ತಪ್ಪಲಿದ್ದು ಜೊತೆಗೆ ಆಹಾರದಲ್ಲಿ ಗುಣಮಟ್ಟವನ್ನು ಕಾಪಾಡಲು ಕಡ್ಡಾಯ ಸೂಚನೆ ನೀಡಲಾಗಿದೆ.…

Read More

UN NETWORKS ಬೋಳಿಯಾರ್ : ಎಂದೋ ನಿರ್ಮಿಸಿ ಅನಾಥವಾಗಿದ್ದ ಕಿಂಡಿಅಣೆಕಟ್ಟುಗಳಿಗೆ ಹಲಗೆ ಮೂಲಕ ಜೀವ ನೀಡಲಾಗಿದೆ, ಫಲವಾಗಿ ಎರಡು ಗ್ರಾಮಗಳಲ್ಲಿ ನೀರಿನ ಸಮಸ್ಯೆಗೆ ಪರಿಹಾರ ಸಿಕ್ಕಿದೆ. ಸ್ವಚ್ಛತೆಗೂ ಆದ್ಯತೆ ನೀಡಿ ಪ್ರತೀ ಮನೆಗೂ ಡ್ರೈ ಪಿಟ್ ನಿರ್ಮಾಣ ಯೋಜನೆಯ ಹೊಸ ಯೋಚನೆ. ಇದು ಬೋಳಿಯಾರ್ ಗ್ರಾಮ ಪಂಚಾಯಿತಿ ರೂಪಿಸಿರುವ ಈ ವರ್ಷದ ವಿನೂತನ ಯೋಜನೆ. ಗ್ರಾಮದಲ್ಲಿ ನೂರು ಎಕರೆಗೂ ಮಿಕ್ಕಿ ಅಡಿಕೆ ತೋಟ, ತೆಂಗು, ಗದ್ದೆಗಳಿವೆ. ಆದರೆ ನೀರಿನ ಸಮಸ್ಯೆಯಿಂದ ಕೃಷಿಕರು ವಿಚಲಿತರಾಗಿದ್ದಾರೆ. ನಾಲೆಗಳಲ್ಲಿ ಹರಿಯುವ ನೀರು ನಿಲ್ಲಿಸುವ ನಿಟ್ಟಿನ 2010ರಲ್ಲಿ ಕಿರುನೀರಾವರಿ ಯೋಜನೆಯಡಿ ಕದ್ಕೋಳಿ ಎಂಬಲ್ಲಿ 35 ಲಕ್ಷ ಹಾಗೂ ತಾರಿಪ್ಪಾಡಿ ಎಂಬಲ್ಲಿ 2013ರಲ್ಲಿ 30 ಲಕ್ಷದಲ್ಲಿ ಕಿಂಡಿಅಣೆಕಟ್ಟು ನಿರ್ಮಾಣವಾಗಿದೆ. ಆದರೆ ನೀರು ತಡೆ ಕಾರ್ಯ ನಡೆದಿರಲಿಲ್ಲ. ಕಳೆದ ವರ್ಷದಿಂದ ಗ್ರಾಮ ಪಂಚಾಯಿತಿ ಕೃಷಿಕರ ಹಿತದೃಷಿಯಿಂದ ವಿಶೇಷ ಮುತುವರ್ಜಿ ವಹಿಸಿ ಹಲಗೆ ಅಳವಡಿಸುವ ಕಾರ್ಯ ನಡೆಸಿದೆ. ಇದರ ಫಲವಾಗಿ ಸ್ಥಳೀಯರ ಕೃಷಿಕರು ನೆಮ್ಮದಿ ನಿಟ್ಟುಸಿರು ಬಿಟ್ಟಿದ್ದಾರೆ. ಅಭಿವೃದ್ಧಿಯತ್ತ ಚಿತ್ತ ಗ್ರಾಮದಲ್ಲಿರುವ…

Read More

UN NETWORKS ಸೋಮೇಶ್ವರ: ಪ್ರಮುಖ ಇಲಾಖೆ ಅಧಿಕಾರಿಗಳ ಗೈರು, ರಾಜ್ಯದ ಅತಿ ದೊಡ್ಡ ಗ್ರಾಮ ಪಂಚಾಯಿತಿಗೆ ನೇಮಕವಾಗದ ಶಾಶ್ವತ ಪಿಡಿಓ, ಕಾರ್ಯದರ್ಶಿ. ಸ್ಪೋಟಗೊಂಡ ಗ್ರಾಮಸ್ಥರ ಆಕೋಶ. ಸತತ ಮೂರು ಗಂಟೆಗಳ ಪ್ರಯತ್ನವೂ ವಿಫಲವಾದ ಹಿನ್ನೆಲೆಯಲ್ಲಿ ಸೋಮೇಶ್ವರ ಗ್ರಾಮಸಭೆ ರದ್ದುಗೊಂಡಿತು! 2017-18ನೇ ಸಾಲಿನ 2ನೇ ಹಂತದ ಗ್ರಾಮಸಭೆ ಮಂಗಳವಾರ ಕೊಲ್ಯ ನಾರಾಯಣ ಗುರು ಸಭಾ ಭವನದಲ್ಲಿ ಆಯೋಜಿಸಲಾಗಿತ್ತು. ಸಭೆ 11 ಗಂಟೆಗೆ ಆರಂಭಗೊಂಡಾಗ ಹಾಜರಿದ್ದುರು ನಾಲ್ಕು ಇಲಾಖೆಯ ಅಧಿಕಾರಿಗಳು ಮಾತ್ರ. ಈ ಬಗ್ಗೆ ಗ್ರಾಮಸ್ಥ ಸಂಶುದ್ದೀನ್ ಉಚ್ಚಿಲ್ ಪ್ರಶ್ನಿಸಿದಾಗ ಗ್ರಾಮಸ್ಥರಾದ ಸೀತಾರಾಮ ಬಂಗೇರ, ರಮೇಶ್ ಕೊಲ್ಯ, ಉಮೇಶ್ ಉಚ್ಚಿಲ್, ದಾಮೋದರ್ ಉಚ್ಚಿಲ್, ಶಾಂತರಾಮ ಸಹಿತ ಹಲವು ಧ್ವನಿಗೂಡಿಸಿದರು. ಮೂಡಾಕ್ಕೆ ಗ್ರಾಮಸ್ಥರ ತೆರಿಗೆ ಕಟ್ಟುತ್ತಾರೆ. ಆದರೆ ಮೂಡಾದ ಅಧಿಕಾರಿಗಳಿಲ್ಲ. ಮೆಸ್ಕಾಂನಿಂದಲೂ ಬಂದಿಲ್ಲ. ಇನ್ನೂ ಹಲವು ಇಲಾಖೆಯ ಅಧಿಕಾರಿಗಳು ಕಾಣಿಸುತ್ತಿಲ್ಲ. ಅವರಿಲ್ಲದ ಗ್ರಾಮಸಭೆ ಅಗತ್ಯವಿಲ್ಲ ಎಂದು ಎಂದಾಗ ಗ್ರಾಮಸ್ಥರಿಂದಲೂ ಬೆಂಬಲ ವ್ಯಕ್ತವಾಯಿತು. ಅಲ್ಲದೆ ರಾಜ್ಯದ ದೊಡ್ಡ ಗ್ರಾಮ ಸೋಮೇಶ್ವರ ಪಂಚಾಯಿತಿಗೆ ಕಾರ್ಯದರ್ಶಿ, ಪಿಡಿಓ ನೇಮಕವಾಗಿಲ್ಲ. ಇಂತಹ…

Read More

UN NETWORKS ಉಳ್ಳಾಲ: ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ಉಳ್ಳಾಲ ದರ್ಗಾ ಭೇಟಿ ನೀಡಿ ಉಳ್ಳಾಲ ಅಬ್ಬಕ್ ವೃತ್ತದಲ್ಲಿರುವ ವೀರರಾಣಿ ಅಬ್ಬಕ್ಕ ಪ್ರತಿಮೆಗೆ ಹೂಹಾರ ಹಾಕುವ ಮೂಲಕ ಗೌರವಿಸಿದರು. ರಾಜ್ಯದ ಮುಖ್ಯಮಂತ್ರಿ ಸಿದ್ಧರಾಮಯ್ಯ , ಕ್ಷೇತ್ರದ ಶಾಸಕ ಹಾಗೂ ಸಚಿವ ಯು.ಟಿ.ಖಾದರ್ ಜತೆಗಿದ್ದರು. ಜನಸ್ತೋಮ : ಮಂಗಳೂರಿನಿಂದ ಉಳ್ಳಾಲ ಬರುವ ಸಂದರ್ಭ ಕಲ್ಲಾಪು ಸಮೀಪ ರೋಡ್ ಷೋ ನಡೆಸುವುದಾಗಿ ಅಲ್ಲಿ ಸಾವಿರದಷ್ಟು ಸಂಖ್ಯೆಯಲ್ಲಿ ಕಾರ್ಯಕರ್ತರು ರಾಹುಲ್ ಗಾಂಧಿಯವರನ್ನು ಸ್ವಾಗತಿಸಲು ಮುಂದಾಗಿದ್ದರು. ಆದರೆ ಭದ್ರತೆ ದೃಷ್ಟಿಯಿಂದ ಕಮಾಂಡೋಗಳು ರಾಹುಲ್ ಗಾಂಧಿಯವರ ವಾಹನವನ್ನು ನಿಲ್ಲಿಸದಂತೆ ಸೂಚಿಸಿದ ಹಿನ್ನೆಲೆಯಲ್ಲಿ, ನೇರವಾಗಿ ಉಳ್ಳಾಲದ ಇತಿಹಾಸ ಪ್ರಸಿದ್ಧ ಸೈಯ್ಯಿದ್ ಮದನಿ ದರ್ಗಾ ತೆರಳಿ ವಿಶೇಷ ಪ್ರಾರ್ಥನೆ ಸಲ್ಲಿಸಿ ಛಾದರ ಸಮರ್ಪಿಸಿದರು. ಇದರಿಂದ ಕಾರ್ಯಕರ್ತರಲ್ಲಿ ನಿರಾಸೆ ಉಂಟಾಯಿತು. ಕಾರ್ಯಕರ್ತರ ಮೇಲೆ ಲಾಠಿಚಾರ್ಜ್ : ಅಮಾನತು ವದಂತಿ ಅಖಿಲ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ರಾಹುಲ್ ಗಾಂಧಿ ಉಳ್ಳಾಲ ಭೇಟಿ ಸಂದರ್ಭದಲ್ಲಿ ಕಲ್ಲಾಪು, ಓವರ್ ಬ್ರಿಡ್ಜ್, ಉಳ್ಳಾಲ ದರ್ಗಾ…

Read More

UN NETWORKS ಕೊಂಚಾಡಿ: ವಿಶ್ವ ಬಾಯಿ ಆರೋಗ್ಯ ದಿನಾಚರಣೆ ಅಂಗವಾಗಿ ಮಾರ್ಚ್ 20ರಂದು ಕೊಂಚಾಡಿಯ ಶ್ರೀ ರಾಮಾಶ್ರಮ ಸರಕಾರಿ ಅನುದಾನಿತ ಪ್ರಾಥಮಿಕ ಶಾಲೆಯಲ್ಲಿ ದಂತ ಆರೋಗ್ಯ ಮಾಹಿತಿ ಶಿಬಿರ ಜರುಗಿತು. ಚೂಂತಾರು ಸರೋಜಿನಿ ಭಟ್ ಪ್ರತಿಷ್ಠಾನ ವತಿಯಿಂದ ಈ ಮಾಹಿತಿ ಶಿಬಿರ ನಡೆಯಿತು. ಪ್ರತಿಷ್ಠಾನದ ಕಾರ್ಯದರ್ಶಿಯಾದ ಡಾ|| ಮುರಲೀ ಮೋಹನ್ ಚೂಂತಾರು ಇವರು ಶಾಲಾ ಶಿಕ್ಷಕ, ಶಿಕ್ಷಕಿಯರು ಮತ್ತು ಮಕ್ಕಳಿಗೆ ದಂತ ಆರೋಗ್ಯದ ರಕ್ಷಣೆ ಹಾಗೂ ಹಲ್ಲಿನ ಸ್ವಾಸ್ಥ್ಯ ರಕ್ಷಣೆ ಬಗ್ಗೆ ಮಾಹಿತಿ ನೀಡಿದರು. ಬಾಯಿ ನಮ್ಮ ದೇಹದ ಹೆಬ್ಬಾಗಿಲು ಇದ್ದಂತೆ. ದೇಹದಲ್ಲಿನ ಆರೋಗ್ಯದ ಏರುಪೇರು ಬಾಯಿಯಲ್ಲಿ ಕಂಡು ಬರುತ್ತದೆ. ಆರೋಗ್ಯವಂತ ಬಾಯಿ ಮತ್ತು ಸದೃಢವಾದ ಹಲ್ಲುಗಳು ದೇಹದ ಆರೋಗ್ಯಕ್ಕೆ ಅತೀ ಅಗತ್ಯ. ಆರೋಗ್ಯದಂಥ ಬಾಯಿ ದೇಹದ ಆರೋಗ್ಯದ ಕನ್ನಡಿ ಎಂದು ಅಭಿಪ್ರಾಯ ಪಟ್ಟರು. ಜಾಹೀರಾತು ಮಾಹಿತಿ ಶಿಬಿರದ ಬಳಿಕ ಶಾಲಾ ಗ್ರಂಥಾಲಯಕ್ಕೆ ಹಾಗೂ ಶಾಲಾ ಶಿಕ್ಷಕ ಶಿಕ್ಷಕಿಯರಿಗೆ ದಂತ ಆರೋಗ್ಯದ ಬಗ್ಗೆ ಸಂಪೂರ್ಣ ಮಾಹಿತಿ ಇರುವ “ಸುರಕ್ಷಾ ದಂತ ಆರೋಗ್ಯ…

Read More

UN NETWORKS ಉಳ್ಳಾಲ: ಮನೆಯೊಂದಕ್ಕೆ ನುಗ್ಗಿದ ಕಳ್ಳನೋರ್ವ ಮನೆ ಮಾಲೀಕರಿಗೆ ಚೂರಿಯಿಂದ ಇರಿದು ಖಾಲಿ ಪರ್ಸಿನೊಂದಿಗೆ ಪರಾರಿಯಾಗಿರುವ ಘಟನೆ ಕುಂಪಲದ ಪಿಲಾರು ಲಕ್ಷ್ಮೀಗುಡ್ಡೆ ಎಂಬಲ್ಲಿ ಸೋಮವಾರ ತಡರಾತ್ರಿ ವೇಳೆ ಸಂಭವಿಸಿದೆ. ಸಂಜೀವ ಗಟ್ಟಿ ಎಂಬವರ ಮನೆಯಲ್ಲಿ ಕೃತ್ಯ ನಡೆದಿದೆ. ತಡರಾತ್ರಿ 2 ರ ಹೊತ್ತಿಗೆ ಹಿಂಬಾಗಿಲು ಮುರಿದು ಒಳನುಗ್ಗಿದ ಕಳ್ಳನೋರ್ವ ಮನೆಯೊಳಗೆ ಹುಡುಕಾಡಿದ್ದ. ಅಲ್ಲಿ ಸಿಕ್ಕ ಪರ್ಸನ್ನು ಕಳವುಗೈದ ಕಳ್ಳ ವಾಪಸ್ಸಾಗುವಾಗ ಎಚ್ಚೆತ್ತ ಮನೆ ಮಾಲೀಕ ಸಂಜೀವ ಗಟ್ಟಿಯವರು ತಡೆಯಲು ಮುಂದಾದಾಗ ಕಳ್ಳ ಚೂರಿಯಿಂದ ಅವರಿಗೆ ಇರಿದಿದ್ದಾನೆ. ಜಾಹೀರಾತು ಬಳಿಕ ಮನೆಯಿಂದ ಓಡಿ ಪರಾರಿಯಾಗಿದ್ದಾನೆ, ಸಂಜೀವ ಅವರ ಪುತ್ರ ಮನೆಯಲ್ಲಿದ್ದು, ಆತ ಮಲಗಿದ್ದ ಕೋಣೆಗೆ ಕಳ್ಳ ಚಿಲಕ ಹಾಕಿದ್ದನು. ಹಿಂಬದಿಯ ಬಾಗಿಲು ಒಡೆಯುವ ಸಂದರ್ಭವೂ ಕಳ್ಳನ ಕೈಗಳಿಗೆ ಗಾಯವಾಗಿದ್ದು, ರಕ್ತದ ಕುರುಹು ಸ್ಥಳದಲ್ಲಿ ಕಂಡುಬಂದಿದೆ. ಕಳವುಗೈದ ಖಾಲಿ ಪರ್ಸನ್ನು ರಸ್ತೆ ಮಧ್ಯೆ ಎಸೆದು ಪರಾರಿಯಾಗಿದ್ದಾನೆ. ಈ ಕುರಿತು ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕ್ರಣ ದಾಖಲಾಗಿದೆ.

Read More

UN NETWORKS ತೊಕ್ಕೊಟ್ಟು: ಮಂಗಳೂರು ತಾಲೂಕು ಗ್ರಾಮಾಂತರ ಅಮೆಚೂರ್ ಕಬಡ್ಡಿ ಅಸೋಸಿಯೇಶನ್ ಉಳ್ಳಾಲ ಇದರ ಆಶ್ರಯದಲ್ಲಿ ದ.ಕ.ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಶನ್ ಮಂಗಳೂರು ಇದರ ಸಹಯೋಗದೊಂದಿಗೆ ತೊಕ್ಕೊಟ್ಟು ಸಿಟಿ ಬಸ್‍ಸ್ಯ್ಟಾಂಡ್ ಬಳಿ ಪುರುಷರ ಮತ್ತು ಮಹಿಳೆಯರ ದ.ಕ. ಜಿಲ್ಲಾ ಕಬಡ್ಡಿ ಚಾಂಪಿಯನ್‍ಶಿಪ್ 2018ನ ಪುರುಷರ ವಿಭಾಗದಲ್ಲಿ ವಿದ್ಯಾಂಜನೇಯ ಉಳ್ಳಾಲ ಪ್ರಶಸ್ತಿಯನ್ನು ಪಡೆದುಕೊಂಡರೆ. ಮಹಿಳೆಯರ ವಿಭಾಗದಲ್ಲಿ ಮಂಗಳೂರು ರಥಬೀದಿಯ ಡಾ| ಪಿ.ದಯಾನಂದ ಪೈ ಮತ್ತು ಸತೀಶ್ ಪೈ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿನಿಯರ ತಂಡ ಪ್ರಶಸ್ತಿಯನ್ನು ಪಡೆದುಕೊಂಡಿದೆ. ಪುರುಷರ ವಿಭಾಗದಲ್ಲಿ ವಿದ್ಯಾಂಜನೇಯ ಉಳ್ಳಾಲ ತಂಡವು ಬೆಳ್ತಂಗಡಿಯ ವರುಣ್ ಟ್ರಾವೆಲ್ಸ್ ತಂಡವನ್ನು ರೋಚಕ ಪಂದ್ಯಾಟದಲ್ಲಿ ಒಂದು ಅಂಕದಲ್ಲಿ ಸೋಲಿಸಿ ಪ್ರಶಸ್ತಿಯನ್ನು ಪಡೆದುಕೊಂಡರೆ, ತೃತೀಯ ಸ್ಥಾನವನ್ನು ತತ್ವಮಸಿ ಬಗಂಬಿಲ ಪಡೆದುಕೊಂಡರೆ, ವೆಲ್‍ಕಮ್ ಯೂತ್ ಪ್ರೆಂಡ್ಸ್ ತೊಕ್ಕೊಟ್ಟು ತಂಡವು ಚತುರ್ಥ ಸ್ಥಾನವನ್ನು ಪಡೆದುಕೊಂಡಿತು. ಪಂದ್ಯಾಟದಲ್ಲಿ ಉತ್ತಮ ದಾಳಿಗಾರ ಪ್ರಶಸ್ತಿಯನ್ನು ವರುಣ್ ಟ್ರಾವೆಲ್ಸ್‍ನ ಆಶಿಕ್ ಪಡೆದುಕೊಂಡರೆ, ಉತ್ತಮ ಹಿಡಿತಗಾರ ಪ್ರಶಸ್ತಿಯನ್ನು ವಿದ್ಯಾಂಜನೇಯ ಉಳ್ಳಾಲದ ಸೂರಜ್ ಪಡೆದುಕೊಂಡರು. ಉತ್ತಮ…

Read More