UN NETWORKS ಉಳ್ಳಾಲ: ಜಿಲ್ಲೆಯಾದ್ಯಂತ ಕುಂಭದ್ರೋಣ ಹಾಗೂ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಸಾರ್ವಜನಿಕ ಸೊತ್ತುಗಳಿಗೆ ಅಪಾರ ಹಾನಿಯಾಗಿದೆ . ರಾಜ್ಯ ಸರಕಾರ ತುರ್ತು ಕ್ರಮಕೈಗೊಂಡು ಶೀಘ್ರವೇ ಸಂತ್ರಸ್ತರಿಗೆ ಪರಿಹಾರ ಒದಗಿಸಬೇಕು ಎಂದು ದಕ್ಷಿಣ ಕನ್ನಡ ಜಿಲ್ಲಾ ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ. ಉಳ್ಳಾಲ ನಗರಸಭೆ ವ್ಯಾಪ್ತಿಯ 23 ನೇ ವಾರ್ಡಿನಲ್ಲಿ ಬುಧವಾರ ಕುಸಿದುಬಿದ್ದ ಶಾರದಾ ಎಂಬವರ ಮನೆಗೆ ಗುರುವಾರ ಭೇಟಿ ನೀಡಿ ಮಾತನಾಡಿದರು. ಕೆರೆಬೈಲುಗುಡ್ಡೆಯಲ್ಲಿ ಮನೆ ಕುಸಿತಗೊಂಡಿರುವ ಕುರಿತು ಜಿಲ್ಲಾಧಿಕಾರಿ ಜತೆಗೆ ಮಾತನಾಡಿ ತ್ವರಿತ ಪರಿಹಾರ ಮತ್ತು ದುರಸ್ತಿ ಕಾರ್ಯಕ್ಕೆ ಸೂಚಿಸುತ್ತೇನೆ. ಈಗಾಗಲೇ ಕಂದಾಯ ಅಧಿಕಾರಿ ಭೇಟಿ ನೀಡಿ ಮಾಹಿತಿಯನ್ನು ಸಂಗ್ರಹಿಸಿದ್ದಾರೆ. ಜಿಲ್ಲೆಯಾದ್ಯಂತ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಅಪಾರ ಸಾರ್ವಜನಿಕ ಸೊತ್ತುಗಳಿಗೆ ಹಾನಿ, ರಸ್ತೆಗಳಿಗೆ ಹಾನಿಯಾಗಿದೆ. ರಾಜ್ಯ ಸರಕಾರ ಕೂಡಲೇ ಸಂತ್ರಸ್ತರ ಹಾಗೂ ಸಾರ್ವಜನಿಕ ಸೊತ್ತುಗಳ ಹಾನಿ ಕುರಿತ ವರದಿ ಸಂಗ್ರಹಿಸಿ ಪರಿಹಾರವನ್ನು ಘೋಷಿಸಿ ತುರ್ತಾಗಿ ಒದಗಿಸಬೇಕಿದೆ ಎಂದರು. ಈ ಸಂದರ್ಭ ಮಂಗಳೂರು ಕ್ಷೇತ್ರ ಬಿಜೆಪಿ ಅಧ್ಯಕ್ಷ ಸಂತೋಷ್ ರೈ…
Author: UllalaVani
UN NETWORKS ತಲಪಾಡಿ: ವಿದ್ಯಾರ್ಥಿಗಳು ಮಾದಕ ದ್ರವ್ಯದ ಸೇವನೆಯಿಂದಾಗುವ ದುಷ್ಪರಿಣಾಮಗಳ ಬಗ್ಗೆ ತಿಳಿದುಕೊಂಡು, ಸಮಾಜ ತಿದ್ದುವ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು ಎಂದು ಯೆನಪೋಯ ಮೆಡಿಕಲ್ ಕಾಲೇಜಿನ ಪೆಥಾಲಜಿ ವಿಭಾಗದ ವೈದ್ಯೆ ಡಾ| ಪಲ್ಲವಿ ಅಭಿಪ್ರಾಯಪಟ್ಟರು. ಅವರು ಶಾರದಾ ವಿದ್ಯಾನಿಕೇತನದಲ್ಲಿ ಹಮ್ಮಿಕೊಳ್ಳಲಾಗಿದ್ದ ಮಾದಕ ವ್ಯಸನ ವಿರೋಧಿ ದಿನಾಚರಣೆಯಲ್ಲಿ ಮುಖ್ಯ ಅಥಿತಿಗಳಾಗಿ ಭಾಗವಹಿಸಿ, ಮಾದಕ ವಸ್ತುಗಳ ಸೇವನೆಗೆ ಕಾರಣ, ಪರಿಣಾಮ ಮತ್ತು ಅದನ್ನು ಹೇಗೆ ತಡೆಗಟ್ಟಬಹುದು ಎಂಬುದರ ಕುರಿತು ವಿದ್ಯಾರ್ಥಿಗಳಿಗೆ ಉಪನ್ಯಾಸವನ್ನು ನೀಡಿದರು. ಮಾದಕ ವಸ್ತುಗಳ ಸೇವನೆಯಿಂದ ವ್ಯಕ್ತಿಯ ಆರೋಗ್ಯದ ಮೇಲೆ ಗಂಭೀರವಾದ ಪರಿಣಾಮ ಉಂಟಾಗಿ ಆತ ಸಮಾಜಕ್ಕೊಂದು ಶಾಪಗ್ರಸ್ತ ವ್ಯಕ್ತಿಯಾಗಿ ಸಮಾಜದ ಅಧಃ ಪತನಕ್ಕೆ ಕಾರಣನಾಗುತ್ತಾನೆ. ಇಂತಹ ಸಂದರ್ಭ ದಲ್ಲಿ ಮಾದಕ ವ್ಯಸನದ ಕುರಿತು ಜಾಗೃತಿ ಮೂಡಿಸುವ ಕಾರ್ಯ ಅತೀ ಅವಶ್ಯಕವಾಗಿದ್ದು, ವಿದ್ಯಾರ್ಥಿಗಳು ಈ ನಿಟ್ಟಿನಲ್ಲಿ ಜಾಗೃತಿ ಮೂಡಿಸುವ ಕಾರ್ಯವನ್ನು ಮಾಡಬೇಕು ಎಂದರು. ಈ ಕಾರ್ಯಕ್ರಮದಲ್ಲಿ ಶಾಲಾ ಪ್ರಾಂಶುಪಾಲೆ ಸುಷ್ಮ ದಿನಕರ್, ಉಪಪ್ರಾಂಶುಪಾಲ ಮೋಹನ್ ದಾಸ್, ಯೆನಪೋಯ ಮೆಡಿಕಲ್ ಕಾಲೇಜಿನ ಪೆಥಾಲಜಿ ವಿಭಾಗದ ಮುಖ್ಯಸ್ಥೆ…
UN NETWORKS ಉಳ್ಳಾಲ: ವಿದ್ಯಾರ್ಥಿಗಳಲ್ಲಿ ಪರಿಸರ ಪ್ರೇಮ ಮೂಡಿಸುವುದರೊಂದಿಗೆ ಸ್ವಸ್ಥ ಸಮಾಜ ನಿರ್ಮಾಣದ ನಿಟ್ಟಿನಲ್ಲಿ ಶಿಕ್ಷಣ ನೀಡುವ ಅಗತ್ಯವಿದ್ದು, ಈ ನಿಟ್ಟಿಲ್ಲಿ ಶಾಲಾ ಶಿಕ್ಷಕರು ಮತ್ತು ವಿದ್ಯಾರ್ಥಿಗಳ ಹೆತ್ತವರು ತಮ್ಮ ವಿದ್ಯಾರ್ಥಿಗಳಿಗೆ ಶಿಕ್ಷಣದೊಂದಿಗೆ ಇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಪ್ರೇರೇಪಿಸಬೇಕು ಎಂದು ಸಾರ್ವಜನಿಕ ಶ್ರೀ ಶಾರದಾ ಮಹೋತ್ಸವ ಸಮಿತಿ ಕೊಲ್ಯ ಇದರ ಗೌರವ ಅಧ್ಯಕ್ಷ ಸೀತಾರಾಮ ಬಂಗೇರ ಅಭಿಪ್ರಾಯಪಟ್ಟರು. ಕೊಲ್ಯ ಶಾರದಾ ಸದನದಲ್ಲಿ ನಡೆದ ಕನ್ನಡ ಮಾದ್ಯಮದಲ್ಲಿ ವ್ಯಾಸಂಗ ಮಾಡುತ್ತಿರುವ ಹಿರಿಯ ಪ್ರಾಥಮಿಕ ಶಾಲೆಯ ಹಿರಿಯ ಪ್ರಾಥಮಿಕ ಶಾಲಾ ಆಯ್ದ ಮಕ್ಕಳಿಗೆ ಸಹಾಯಧನ ಹಾಗೂ ಪರಿಸರ ಪ್ರೀತಿ ಸಂರಕ್ಷಣೆಗಾಗಿ ಸಸಿ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ದ.ಕ.ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ಕುಂಪಲ ಇದರ ನಿವೃತ ಮುಖ್ಯೋಪಾಧ್ಯಾಯ ವಿಶ್ವನಾಥ ಎಮ್. ಕೆ. ಪರಿಸರ ಪ್ರೇಮಿ ಮಾದವ ಉಳ್ಳಾಲ್, ಕೊಲ್ಯ ಆದರ್ಶ ಮಿತ್ರ ಮಂಡಳಿಯ ಅಧ್ಯಕ್ಷ ಸತೀಶ್ ಕುಮಾರ್,ಸಾರ್ವಜನಿಕ ಶ್ರೀ ಶಾರದಾ ಮಹೋತ್ಸವ ಸಮಿತಿ ಕೊಲ್ಯ ಸೋಮೇಶ್ವರ ಇದರ ಅಧ್ಯಕ್ಷ ಯಶೋಧರ…
UN NETWORKS ಮಂಗಳೂರು : ಶೈಕ್ಷಣಿಕ ಕ್ಷೇತ್ರದಲ್ಲಿ ಹೆಣ್ಣು ಮಕ್ಕಳ ಶಿಕ್ಷಣ ಮತ್ತು ಹೆಣ್ಣು ಮಕ್ಕಳ ರಕ್ಷಣೆ ಬಹಳ ಪ್ರಮುಖ ಪಾತ್ರ ವಹಿಸುತ್ತದೆ. ಮುಸ್ಲಿಂ ಹೆಣ್ಣು ಮಕ್ಕಳು ಧರಿಸುವ ಸ್ಕಾರ್ಫ್ ಅದು ಅವರ ಹಕ್ಕು ಅದನ್ನು ಕಸಿದುಕೊಳ್ಳುತ್ತಿರುವ ಆಗ್ನೆಸ್ ಕಾಲೇಜು ಆಡಳಿತ ಮಂಡಳಿಯ ನೀತಿ ಖಂಡನೀಯ ಎಂದು ಮಂಗಳೂರು ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಅಧ್ಯಕ್ಷ ರವೂಫ್ ಸಿ ಎಂ ತಿಳಿಸಿದ್ದಾರೆ. ಸ್ಕಾರ್ಫ್ ಕಾರಣ ಮುಂದಿಟ್ಟುಕೊಂಡು ಕೆಲವು ವಿದ್ಯಾರ್ಥಿನಿಯರನ್ನು ಅಮಾನತು ಮಾಡಲಾಗಿದ್ದು ಕಾಲೇಜು ಮಂಡಳಿಯ ಈ ನಡವಳಿಕೆ ಹೆಣ್ಣು ಮಕ್ಕಳ ಶಿಕ್ಷಣವನ್ನು ಕಸಿದುಕೊಳ್ಳುವಂತಿದೆ. ಈ ತೀರ್ಮಾನ ವಿದ್ಯಾರ್ಥಿನಿಯರ ಉಜ್ವಲ ಭವಿಷ್ಯವನ್ನು ಹಾನಿಗೊಳಿಸುವಂತಿದೆ. ಈ ನಿಟ್ಟಿನಲ್ಲಿ ಸ್ಕಾರ್ಫ್ ವಿವಾದವನ್ನು ಆಡಳಿತ ಮಂಡಳಿ ಹಾಗೂ ವಿದ್ಯಾರ್ಥಿಗಳ ಪೋಷಕರ ಜೊತೆ ಚರ್ಚೆ ನಡೆಸಿ ಬಗೆಹರಿಸಿಕೊಳ್ಳಬೇಕು, ಈ ವಿವಾದದಲ್ಲಿ ಬಡ ವಿದ್ಯಾರ್ಥಿನಿಯರ ಶಿಕ್ಷಣ ಕಸಿದು ಕೊಳ್ಳದೆ ಶಿಕ್ಷಣ ಮುಂದುವರಿಸಲು ಅವಕಾಶ ಮಾಡಿ ಕೊಡಬೇಕು ಎಂದು ರವೂಫ್ ಸಿ ಎಂ ಆಗ್ರಹಿಸಿದರು.
UN NETWORKS ಉಳ್ಳಾಲ: ಬಂಟರ ಸಂಘ ಉಳ್ಳಾಲ ವಲಯ ಇದರ ಉಳ್ಳಾಲ ಗ್ರಾಮ ಸಮಿತಿಯ ನೂತನ ಅಧ್ಯಕ್ಷರಾಗಿ ಆನಂದ ಶೆಟ್ಟಿ ಎಂ. ಆಯ್ಕೆಯಾಗಿದ್ದಾರೆ. ಗ್ರಾಮ ಸಮಿತಿಯ ಮಹಾಸಭೆಯಲ್ಲಿ 2018-20ನೇ ಸಾಲಿನ ಎರಡು ವರ್ಷಗಳ ಅವಧಿಗೆ ನೂತನ ಪದಾಧಿಕಾರಿಗಳನ್ನು ಆಯ್ಕೆಮಾಡಲಾಯಿತು. ಗೌರವಾಧ್ಯಕ್ಷರಾಗಿ ರವೀಂದ್ರ ಶೆಟ್ಟಿ ಮೂನ್‍ಲೈಟ್, ಮಾರ್ಗದರ್ಶಕರಾಗಿ ಗಂಗಾಧರ ಶೆಟ್ಟಿ, ಡಾ| ಆರ್.ಕೆ. ಶೆಟ್ಟಿ, ಗೌರವ ಸಲಹೆಗಾರರಾಗಿ ವೈ. ಜಯರಾಮ ಶೆಟ್ಟಿ, ನಾರಾಯಣ ಶೆಟ್ಟಿ, ಹರೀಶ್ ಆಳ್ವ, ವಿದ್ಯಾಧರ್ ಶೆಟ್ಟಿ, ಶಾಂತಾ ಆರ್.ಶೆಟ್ಟಿ, ಉಪಾಧ್ಯಕ್ಷರುಗಳಾಗಿ ಪ್ರಕಾಶ್ ಶೆಟ್ಟಿ, ರೇಣುಕಾ ಆರ್. ಶೆಟ್ಟಿ, ಪ್ರಧಾನ ಕಾರ್ಯದರ್ಶಿಯಾಗಿ ಸುಜಾತ ಭಂಡಾರಿ, ಕೋಶಾಧಿಕಾರಿಯಾಗಿ ಇಂದಿರಾ ಕೆ. ಶೆಟ್ಟಿ, ಜೊತೆ ಕಾರ್ಯದರ್ಶಿಯಾಗಿ ಗೋಪಾಲ ಶೆಟ್ಟಿ, ಉಮಾವತಿ ಶೆಟ್ಟಿ, ಸಂಘಟನಾ ಕಾರ್ಯದರ್ಶಿಯಾಗಿ ಪದ್ಮನಾಭ ಶೆಟ್ಟಿ, ಅಶೋಕ ಶೆಟ್ಟಿ, ಕಾರ್ಯಕಾರಿ ಸದಸ್ಯರುಗಳಾಗಿ ಇಂದಿರಾ ಅಶೋಕ್ ಶೆಟ್ಟಿ, ಸುಜೀರ್ ಶೆಟ್ಟಿ, ಲೀಲಾ ಜಯಂತ್ ಶೆಟ್ಟಿ, ಸಮಿತಾ ಶೆಟ್ಟಿ ಇವರುಗಳನ್ನು ಆಯ್ಕೆಮಾಡಲಾಯಿತು. ಯುವ ವಿಭಾಗಕ್ಕೆ ಆಕಾಶ್ ಎ. ಶೆಟ್ಟಿ, ಸೃಜನ್ ಶೆಟ್ಟಿ, ಕ್ರೀಡಾ ವಿಭಾಗಕ್ಕೆ…
UN NETWORKS ಉಳ್ಳಾಲ: ಕಳೆದ ಕೆಲವು ದಿನಗಳಿಂದ ಎಡೆಬಿಡದೆ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ತೊಕ್ಕೊಟ್ಟು ಜಂಕ್ಷನ್ ಸಂಪೂರ್ಣ ಹದಗೆಟ್ಟಿದ್ದು, ರಸ್ತೆಗಳಲ್ಲಿ ಮಳೆ ನೀರು ಹರಿದು ಹೊಂಡ ನಿರ್ಮಾಣವಾಗಿ ಹೆದ್ದಾರಿ66ರ ನೇತ್ರಾವತಿ ಸೇತುವೆಯಿಂದ ಉಳ್ಳಾಲ ಕಾಪಿಕಾಡ್ ವರೆಗೆ ಸಂಚಾರ ಆಸ್ತವ್ಯಸ್ತವಾಯಿತು. ತೊಕ್ಕೊಟ್ಟು ಜಂಕ್ಷನ್‍ನಲ್ಲಿ ಫ್ಲೈಓವರ್ ಕಾಮಗಾರಿಯಿಂದ ಸುಮಾರು ಒಂದು ಕಿ. ಮೀ ಹೆದ್ದಾರಿಯಲ್ಲಿ ನಿರ್ಮಾಣಗೊಂಡಿರುವ ಸರ್ವೀಸ್ ರಸ್ತೆ ಇಕ್ಕಾಟ್ಟಾಗಿದ್ದು, ಹೆದ್ದಾರಿ ಕಾಮಗಾರಿ ನಡೆಸುತ್ತಿರುವ ಸಂಸ್ಥೆ ನಿರ್ಮಿಸಿದ್ದ ಚರಂಡಿ ಹೊಂಡ ಬಿದ್ದು ಸಂಪೂರ್ಣ ಚರಂಡಿ ಮಣ್ಣು ತುಂಬಿದೆ. ಚೆಂಬುಗುಡ್ಡೆ ಕಡೆಯಿಂದ ಹರಿಯುವ ಮಳೆ ನೀರು ಸಂಪೂರ್ಣ ಹೆದ್ದಾರಿಯಲ್ಲಿ ಹರಿದ ಪರಿಣಾಮ ಸರ್ವೀಸ್ ರಸ್ತೆ ಸಂಪೂರ್ಣ ಹೊಂಡ ಮಯವಾಗಿದೆ. ಮಳೆಗಾಲ ಆರಂಭದಲ್ಲಿ ತೊಕ್ಕೊಟ್ಟು ಜಂಕ್ಷನ್ ಮುಳುಗಡೆಯಾಗಿದ್ದು, ಬಳಿಕ ರಸ್ತೆ ಹೊಂಡಗಳು ಹೆಚ್ಚಾಗಿ ಸಂಚಾರಕ್ಕೆ ತಡೆಯಾಗಿದ್ದು ವಾಹನಗಳು ಬ್ಲಾಕ್‍ನಲ್ಲೇ ನಿಂತು ಸರದಿ ಸಾಲಿನಲ್ಲಿ ಸಂಚರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದ್ದು, ಇದರಿಂದ ಪ್ರಯಾಣಿಕರು ಸಂಕಷ್ಟ ಅನುಭವಿಸುವಂತಾಯಿತು. ಬ್ಲಾಕ್ ಸಮಸ್ಯೆಯಿಂದ ಕೆಲವು ಬಸ್‍ಗಳು ನಿಗದಿತ ಸಮಯಕ್ಕೆ ಉಳ್ಳಾಲ, ಮತ್ತು ತಲಪಾಡಿಗೆ ತಲುಪಲು…
UN NETWORKS ಉಳ್ಳಾಲ: ಮನೆಯೊಂದು ಕುಸಿದು ಬಿದ್ದು ವ್ಯಕ್ತಿಯೋರ್ವರು ಗಾಯಗೊಂಡಿರುವ ಘಟನೆ ಉಳ್ಳಾಲ ನಗರಸಭೆ ವ್ಯಾಪ್ತಿಯ 23 ನೇ ವಾರ್ಡಿನ ಕೆರೆಬೈಲು ಎಂಬಲ್ಲಿ ಬುಧವಾರ ತಡರಾತ್ರಿ ವೇಳೆ ಸಂಭವಿಸಿದೆ. ಘಟನೆಯಲ್ಲಿ ಮಹಿಳೆಯೊಬ್ಬರು ಗಾಯಗೊಂಡಿದ್ದಾರೆ. ಕೆರೆಬೈಲು ಗುಡ್ಡೆ ನಿವಾಸಿ ಶಾರದಾ (50) ಗಾಯಗೊಂಡವರು. ಇವರಿಗೆ ಸೇರಿದ ಮನೆಯಲ್ಲಿ ಸೊಸೆ ಮತ್ತು ಮೊಮ್ಮಗ ಇದ್ದು, ಮನೆ ಮುರಿದು ಬೀಳುವ ಸದ್ದು ಕೇಳುತ್ತಿದ್ದಂತೆ ಇಬ್ಬರು ಹೊರ ಓಡಿಬಂದರೆ, ಶಾರದಾ ಅವರು ಮನೆಯೊಳಗೆ ಸಿಲುಕಿಕೊಂಡು ಗಾಯಗೊಂಡಿದ್ದಾರೆ. ಅವರನ್ನೂ ಕೂಡಲೇ ದೇರಳಕಟ್ಟೆ ಕೆ.ಎಸ್ ಹೆಗ್ಡೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಮನೆ ಸಂಪೂರ್ಣವಾಗಿ ಕುಸಿದು ಬಿದ್ದಿದ್ದು ಲಕ್ಷಾಂತರ ನಷ್ಟ ಸಂಭವಿಸಿದೆ.
UN NETWORKS ಉಳ್ಳಾಲ: ಧಾರ್ಮಿಕ ಶಿಕ್ಷಣ ಓರ್ವ ಉತ್ತಮ ಮನುಷ್ಯನ್ನಾಗಿ ಪರಿವರ್ತಿಸುತ್ತದೆ. ಧಾರ್ಮಿಕ ವಿದ್ಯಾಭ್ಯಾಸ ಪಡೆಯುವುದು ಸಮಾಜದ ಎಲ್ಲಾ ವಿದ್ಯಾರ್ಥಿಗಳ ಆದ್ಯ ಕರ್ತವ್ಯ ಎಂದು ಉಳ್ಳಾಲ ಖಾಝಿ ಅಸ್ಸಯ್ಯದ್ ಫಝಲ್ ಕೋಯಮ್ಮ ಅಲ್-ಬುಖಾರಿ ಕೂರತ್ ತಂಙಳ್ ಹೇಳಿದರು. ಅವರು ಉಳ್ಳಾಲ ಹಳೆಕೋಟೆಯಲ್ಲಿ ಯಶಸ್ವಿ 2ನೇ ವರ್ಷಕ್ಕೆ ಪಾದಾರ್ಪಣೆಗೈದ ತಾಜುಲ್ ಉಲಮಾ ಮದ್ರಸ ಪಾರಂಭೋತ್ಸವದ ಕಾರ್ಯಕ್ರಮದ ನೇತೃತ್ವ ವಹಿಸಿ ಮಾತನಾಡಿದರು. ಧಾರ್ಮಿಕ ವಿದ್ಯೆಗೆ ಮಹತ್ವ ಕಡಿಮೆಯಾಗುತ್ತಿದ್ದು ಪೋಷಕರು ಲೌಕಿಕ ವಿದ್ಯಾಭ್ಯಾಸಕ್ಕೆ ನೀಡುವ ಮಹತ್ವವನ್ನು ಧಾರ್ಮಿಕ ವಿದ್ಯೆಗೂ ನೀಡಬೇಕು ಎಂದು ಹೇಳಿದರು.ಅಧ್ಯಕ್ಷ ಯು.ಎಚ್ ಯುಸೂಫ್, ಕಾರ್ಯದರ್ಶಿ ಅಬೂಬಕ್ಕರ್, ಉಪಾಧ್ಯಕ್ಷ ಅಬುಸಾಲಿ,ಕೋಶಾಧಿಕಾರಿ ರಫೀಕ್, ಸಂಚಾಲಕ ಅಬ್ದುಲ್ ಸತ್ತಾರ್, ಅಬ್ಬಾಸ್ ಕೊಟೆಪುರ, ಜಮಾಲ್ ಮುಸ್ಲಿಯಾರ್, ರಫೀಕ್ ಮದನಿ, ಹಮೀದ್ ಮುಸ್ಲಿಯಾರ್, ಸಲೀಂ ಸಅದಿ ಹೊನ್ನಾವರ, ಇಸ್ಮಾಯಿಲ್ ತೊಕ್ಕೋಟ್ಟು ಮುಂತಾದವರು ಉಪಸ್ಥಿತರಿದರು.
UN NETWORKS ಕೊಣಾಜೆ: ಇಂದಿನ ಯುವಸಮುದಾಯ ಕ್ಷಣಸುಖಕ್ಕಾಗಿ ಮಾದಕ ವ್ಯಸನಕ್ಕೆ ಬಲಿಯಾಗುತ್ತಿದೆ, ಇಂತಹ ಸಂದರ್ಭದಲ್ಲಿ ನಿರಂತರ ಜಾಗೃತಿ ಕಾರ್ಯಕ್ರಮಗಳನ್ನು ಸಂಘಟಿಸುವುದರಿಂದ ವ್ಯಸನಮುಕ್ತ ಸಮಾಜ ನಿರ್ಮಾಣ ಸಾಧ್ಯ ಎಂದು ವಿಜಯ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನ ನಿರ್ದೇಶಕ ಪ್ರಸಾದ್ ರೈ ಕಲ್ಲಿಮಾರ್ ಅಭಿಪ್ರಾಯಪಟ್ಟರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮತ್ತು ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಕೊಣಾಜೆ ವಲಯ ಇದರ ಆಶ್ರಯದಲ್ಲಿ ಮಂಗಳವಾರ ಕೊಣಾಜೆ ಪದವು ಸರ್ಕಾರಿ ಸಂಯುಕ್ತ ಪ್ರೌಢಶಾಲೆಯಲ್ಲಿ ನಡೆದ ಮಾದಕ ದ್ರವ್ಯ ವಿರೋಧ ದಿನ ಕಾರ್ಯಕ್ರಮದಲ್ಲಿ ಮಾತನಾಡಿದರು. ಮಾದಕ ವ್ಯಸನಿಗಳಿಂದ ಮನೆ ಅಥವಾ ಸಮಾಜಕ್ಕೆ ಯಾವುದೇ ರೀತಿಯಲ್ಲೂ ಲಾಭವಿಲ್ಲ, ಅಂತಹವರನ್ನು ಸಮಾಜ ಕೆಟ್ಟ ದೃಷ್ಟಿಯಿಂದಲೇ ನೋಡುತ್ತದೆ. ಈ ಪಿಡುಗು ನಿವಾರಣೆಗಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಶಿಬಿರಗಳ ಮೂಲಕ ಶ್ರಮಿಸುತ್ತಿದೆ ಎಂದರು. ಸಂಪನ್ಮೂಲ ವ್ಯಕ್ತಿ ಅಚ್ಚುತ ಗಟ್ಟಿ ಮಾತನಾಡಿ, ಮನೆಯಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ ಹೆತ್ತವರು, ಪೋಷಕರು ಮಕ್ಕಳನ್ನು ಜೊತೆ ಸೇರಿಸಿ ಅಮಲು ಪದಾರ್ಥ ಸೇವಿಸುವುದರಿಂದ ಮನೆಯಿಂದಲೇ ಅಮಲು ವ್ಯಸನಕ್ಕೆ ಪ್ರೋತ್ಸಾಹ…
UN NETWORKS ಹರೇಕಳ: ಜ್ಞಾನ ವೃದ್ಧಿ ಮತ್ತು ಉದ್ಯೋಗಕ್ಕಾಗಿ ನಾವು ಎಷ್ಟು ಭಾಷೆ ಬೇಕಾದರೂ ಕಲಿಯಬಹುದು, ಆದರೆ ಮಾತೃ ಮತ್ತು ನಾಡಿನ ಭಾಷೆ ಮರೆಯಬಾರದು ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎ.ಸಿ.ಭಂಡಾರಿ ಅಭಿಪ್ರಾಯಪಟ್ಟರು. ಹರೇಕಳ ಶ್ರೀ ರಾಮಕೃಷ್ಣ ಅನುದಾನಿತ ಪ್ರೌಢಶಾಲೆಯ ಸಭಾಂಗಣದಲ್ಲಿ ನಡೆದ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗೆ ಸನ್ಮಾನ ಹಾಗೂ ಶಾಲಾ ಪಠ್ಯೇತರ ಚಟುವಟಿಕೆಯ ವಿವಿಧ ಸಂಘಗಳನ್ನು ಉದ್ಘಾಟಿಸಿ ಮಾತನಾಡಿದರು. ಕನ್ನಡ ಶಾಲೆಗಳಲ್ಲಿ ಕಲಿತ ಅದೆಷ್ಟೋ ಮಂದಿ ಉನ್ನತ ಸ್ಥಾನಕ್ಕೇರಿ ದೇಶ, ನಾಡಿಗೆ ಕೀರ್ತಿ ತಂದಿದ್ದಾರೆ. ಈ ನಿಟ್ಟಿನಲ್ಲಿ ಶಿಕ್ಷಣದ ಮಾಧ್ಯಮದ ಬಗ್ಗೆ ಚಿಂತಿಸದೆ ವಿದ್ಯಾರ್ಥಿಗಳು ಕಠಿಣ ಪರಿಶ್ರಮದಿಂದ ಶೈಕ್ಷಣಿಕ ಚಟುವಟಿಕೆಯಲ್ಲಿ ತೊಡಗಿಸಿಕೊಂಡರೆ ಯಶಸ್ಸು ಪಡೆಯಬಹುದು ಎಂದರು. ನಿಟ್ಟೆ ಇಂಜಿನಿಯರಿಂಗ್ ಕಾಲೇಜಿನ ನಿವೃತ್ತ ಪ್ರಾಚಾರ್ಯ ಪ್ರೊ| ರಘುನಾಥ ರೈ ಮಾತನಾಡಿ ಯಾವುದೇ ಕಾರ್ಯ ಯಶಸ್ಸುಗೊಳ್ಳಬೇಕಾದರೆ ಎಲ್ಲರೂ ಒಟ್ಟು ಸೇರಬೇಕು, ಶಿಕ್ಷಣ ಸಂಸ್ಥೆಗಳೂ ಸಾಧನೆ ಮಾಡಬೇಕಾದರೆ ವಿವಿಧ ಸಂಘಗಳನ್ನು ಸ್ಥಾಪಿಸಿ ಅವುಗಳ ಮೂಲಕ ಕಾರ್ಯಕ್ರಮ ಅಯೋಜಿಸುವುದು…

