UN NETWORKS ಪಾನೀರ್: ಪಾನೀರ್ ನಲ್ಲಿರುವ ಅಸ್ಸಿಸಿ ಸೆಂಟ್ರಲ್ ಶಾಲೆಯಲ್ಲಿ ಉಚಿತ ಸರಕು ಮತ್ತು ಸೇವಾ ತೆರಿಗೆ ಸಂಬಂಧಿತ ಮಾಹಿತಿ ಕಾರ್ಯಾಗಾರ ಶನಿವಾರ ಶಾಲೆಯ ಸಭಾಂಗಣದಲ್ಲಿ ನಡೆಯಿತು. ದೇಶದಾದ್ಯಂತ ಜಿಎಸ್‍ಟಿ ಹೊಸದಾಗಿ ಜಾರಿಗೆ ಬಂದಿರುವ ಹಿನ್ನೆಲೆಯಲ್ಲಿ ಅಯೋಜಿಸಲಾಗಿದ್ದ ಕಾರ್ಯಾಗಾರದಲ್ಲಿ ಲೆಕ್ಕ ಪರಿಶೋಧಕ ಮಂಗಳೂರಿನ ಸಿ.ಎ.ಗ್ಯಾವರ್ ಲೋಬೋ ಸಂಪನ್ಮೂಲ ವ್ಯಕ್ತಿಯಾಗಿದ್ದರು. ಶಾಲೆಯ ಪ್ರಾಂಶುಪಾಲೆ ಸಿಸ್ಟರ್ ಜೂಲಿಯಾನ ಪಾಯಸ್, ಶಿಕ್ಷಕರು, ಮಕ್ಕಳ ಪೋಷಕರು, ಹೆತ್ತವರು ಭಾಗವಹಿಸಿದ್ದರು.ಶಿಕ್ಷಕ ಪ್ರಭಾತ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
Author: UllalaVani
UN NETWORKS ಉಳ್ಳಾಲ: ಮೀನು ಸಾಗಾಟದ ಲಾರಿಯಲ್ಲಿ ಅಕ್ರಮವಾಗಿ ಮರಳು ಸಾಗಾಟ ನಡೆಸುತ್ತಿದ್ದ ಜಾಲವನ್ನು ಉಳ್ಳಾಲ ಪೊಲೀಸರು ಕೇರಳ ಗಡಿಭಾಗ ತಲಪಾಡಿ ಹೊಯ್ಗೆಹಿತ್ಲು ಎಂಬಲ್ಲಿಂದ ಶುಕ್ರವಾರ ತಡರಾತ್ರಿ ಪತ್ತೆಹಚ್ಚಿದ್ದು, ಸ್ಥಳದಲ್ಲಿದ್ದ ಕಂಟೈನರ್ ಲಾರಿ, ಟಿಪ್ಪರ್ ಲಾರಿ ಮತ್ತು ನಾಲ್ಕು ಯುನಿಟ್ ಹೊಯ್ಗೆ ಒಟ್ಟು 15 ಲಕ್ಷ ಬೆಲೆಬಾಳುವ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಕೇರಳ ರಾಜ್ಯಕ್ಕೆ ಅಕ್ರಮವಾಗಿ ಮರಳು ಸಾಗಾಟ ನಡೆಸುವ ಉದ್ದೇಶದಿಂದ ಟಿಪ್ಪರ್ ಲಾರಿ ಮೂಲಕ ಉಳ್ಳಾಲ ವ್ಯಾಪ್ತಿಯ ವಿವಿಧ ನದಿ ತೀರದ ದಡದಿಂದ ಮರಳು ತಂದು, ತಲಪಾಡಿ ಸಮೀಪ ದಾಸ್ತಾನಿರಿಸುತ್ತಿದ್ದರು. ಅಲ್ಲಿಂದ ಹಸಿ ಮೀನು ಸಾಗಾಟ ನಡೆಸುವ ಲಾರಿಯೊಳಗೆ ಪ್ಲಾಸ್ಟಿಕ್ ಟ್ರೇ ಬಳಸಿ, ಅದರಲ್ಲಿ ಮರಳು ತುಂಬಿಸಿ ಸಾಗಾಟ ನಡೆಸುತ್ತಿದ್ದರು. ಶುಕ್ರವಾರ ಉಳ್ಳಾಲ ಪೊಲೀಸರಿಗೆ ದೊರೆತ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದಾಗ ಜಾಲ ಪತ್ತೆಯಾಗಿದೆ. ಪೊಲೀಸ್ ದಾಳಿ ವೇಳೆ ಆರೋಪಿಗಳು ಪರಾರಿಯಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಪೊಲೀಸ್ ಕಮೀಷನರ್ ಟಿ.ಆರ್. ಸುರೇಶ್ ಅವರ ನಿರ್ದೇಶನದಂತೆ ಡಿಸಿಪಿ ಹನುಮಂತರಾಯ, ಉಮಾಪ್ರಶಾಂತ್ ಮಾರ್ಗದರ್ಶನದಂತೆ…
UN NETWORKS ಕೊಣಾಜೆ: ಕೇವಲ ಶಾಸನ, ಲಿಪಿ, ಹಳೆಯ ಸಾಹಿತ್ಯದ ಮೂಲಕವೇ ನಾವು ಭಾಷೆಯೊಂದರ ಚರಿತ್ರೆಯನ್ನು ಕಟ್ಟುವ ಪ್ರಯತ್ನವನ್ನು ಮಾಡಲು ಸಾಧ್ಯವಿಲ್ಲ. ಕನ್ನಡದ ಒಳನುಡಿಗಳನ್ನು ಸಾಮಾಜಿಕ ಬಾಷಾ ವಿಜ್ಞಾನದ ನೆಲೆಯಿಂದ ಮಾತ್ರವಲ್ಲದೆ ಅಧ್ಯಯನದ, ಚಾರಿತ್ರಿಕ ನೆಲೆಯಿಂದಲೂ ನೋಡಬೇಕಾಗುತ್ತದೆ ಎಂದು ಬೆಂಗಳೂರು ವಿಶ್ವವಿದ್ಯಾಲಯದ ಡಾ.ಶಶಿಕಲಾ ಅವರು ಅಭಿಪ್ರಾಯ ಪಟ್ಟರು. ಅವರು ಮಂಗಳೂರು ವಿವಿಯ ಎಸ್‍ವಿಪಿ ಕನ್ನಡ ಅಧ್ಯಯನ ಸಂಸ್ಥೆ ಹಾಗೂ ಯುಜಿಸಿ ಸ್ಯಾಪ್ ಯೋಜನೆ ಇದರ ಆಶ್ರಯದಲ್ಲಿ `ಕರಾವಳಿಯ ಬಹುಭಾಷಿಕತೆ, ಸಾಹಿತ್ಯಕ, ಸಾಂಸ್ಕೃತಿಕ ಅಧ್ಯಯನದ ವೈಧಾನಿಕತೆ’ ಎಂಬ ವಿಷಯದಲ್ಲಿ ನಡೆಯುತ್ತಿರುವ ವಿಚಾರಸಂಕಿರಣದಲ್ಲಿ `ಭಾಷಾ ಚರಿತ್ರೆಯ ಪುನರ್ ರಚನೆಯಲ್ಲಿ ಒಳನುಡಿಗಳ ಪಾತ್ರ’ ವಿಷಯದಲ್ಲಿ ಶನಿವಾರ ಉಪನ್ಯಾಸ ನೀಡಿದರು. ಒಂದು ಕಡೆಯ ಜನರು ಬೇರೆ ಬೇರೆ ಕಡೆ ತೆರಳಿ ಅಲ್ಲಿಯ ಭಾಷೆಯೊಂದಿಗೆ ಬೆರೆತಾಗ ಭಾಷೆಯ ಧ್ವನಿಯಲ್ಲಿ ವ್ಯತ್ಯಾಸಗಳಾಗಿರುವುದನ್ನು ನಾವು ಗಮನಿಸಬಹುದು. ಕನ್ನಡದಲ್ಲಿಯೂ ಈ ರೀತಿಯ ವ್ಯತ್ಯಾಸಗಳಾಗಿರುವುದನ್ನು ನಾವು ಗಮನಿಸಬಹುದಾಗಿದೆ. ಕರಾವಳಿಯಲ್ಲಿಯೂ ಹಿಂದೆ ಸಮುದ್ರ ಮಾರ್ಗದ ಮೂಲಕ ಬೇರೆ ಬೇರೆ ಭಾಗದ ಜನರು ಇಲ್ಲಿ ಬಂದು ವಾಸಿಸಿದ…
UN NETWORKS ಉಳ್ಳಾಲ: ಅಲ್ ಇಹ್ಸಾನ್ ಯೂತ್ ಅಸೋಸಿಯೇಶನ್ ಅಡ್ಕರೆ ಪಡ್ಪು ಇದರ ಮಹಾಸಭೆ ಅಲ್ ಇಹ್ಸಾನ್ ಗಲ್ಪ್ ಘಟಕದ ಅಧ್ಯಕ್ಷರಾದ ರಹೀಮ್ ರವರ ಅಧ್ಯಕ್ಷತೆಯಲ್ಲಿ ನಡೆಯಿತು, ಮುಖ್ಯ ಅತಿಥಿಗಳಾಗಿ ಮುಹಿಯುದ್ದೀನ್ ಜುಮಾ ಮಸೀದಿ ಇದರ ಖತೀಬರಾದ ಬಹು ಸುಲೈಮಾನ್ ಸಖಾಫಿ ಅಲ್ ಅಝ್ಹರಿ ಸಭೆಯನ್ನು ದುವಾ ನೆರವೇರಿಸುವುದರ ಮೂಲಕ ಚಾಲನೆ ನೀಡಿದರು. ಸಭೆಯಲ್ಲಿ ನೂತನ ಪಧಾದಿಕಾರಿಗಳ ಆಯ್ಕೆ ನಡೆಯಿತು, ನೂತನ ಅಧ್ಯಕ್ಷರಾಗಿ ಎಂ.ಸಿರಾಜ್ ಅಡ್ಕರೆ ಅವಿರೋಧವಾಗಿ ಆಯ್ಕೆಯಾದರು, ಪ್ರಸ್ತುತ ಇವರು ತುಳುನಾಡ ರಕ್ಷಣಾ ವೇದಿಕೆಯ ಮಂಗಳೂರು ವಿಧಾನ ಸಭಾ ಕ್ಷೇತ್ರದ ಅಧ್ಯಕ್ಷರಾಗಿ, ಅಡ್ಕರೆ ಫೌಂಡೇಶನ್ ಇದರ ಅಧ್ಯಕ್ಷರಾಗಿ, ಹಾಗೂ ವಿವಿಧ ಸಂಘ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಗೌರವ ಅಧ್ಯಕ್ಷರಾಗಿ ಅಬೂಬಕ್ಕರ್, ಉಪಾಧ್ಯಕ್ಷರಾಗಿ ಅಬ್ದುಲ್ ಖಾದರ್, ನಿಯಾಝ್, ಪಾರೂಖ್ ಪಿ.ಸಿ, ಮುಸ್ತಫಾ, ಪ್ರಧಾನ ಕಾರ್ಯದರ್ಶಿಯಾಗಿ ಮುಸ್ತಫಾ ಬೆಳ್ಮ , ಜೊತೆ ಕಾರ್ಯದರ್ಶಿಯಾಗಿ ಸಿದ್ಧೀಕ್ ಬಿ.ಪಿ., ಉಸ್ಮಾನ್‍ಬಿ.ಎಂ, ಹನೀಫ್ ಕಟ್ಟೆಮನೆ, ಕೋಶಾಧಿಕಾರಿಯಾಗಿ ಅಶ್ರಫ್ ಬಿ.ಎಂ., ಪತ್ರಿಕಾ ಕಾರ್ಯದರ್ಶಿಯಾಗಿ ತಯ್ಯುಬ್ ಮುಲಾರ, ಸಂಘಟನಾ ಕಾರ್ಯದರ್ಶಿಯಾಗಿ ಬದ್ರುದ್ದೀನ್,…
UN NETWORKS ಮುಡಿಪು: ಕೊಣಾಜೆ ಠಾಣಾ ವ್ಯಾಪ್ತಿಯ ಮುಡಿಪು ಸಮೀಪದ ನವಗ್ರಾಮ ಸೈಟ್‍ನಲ್ಲಿ ಬಾವಿನಲ್ಲಿ ಸತ್ತಿದ್ದ ಬೆಕ್ಕನ್ನು ತೆಗೆಯಲೆಂದು ಇಳಿದಿದ್ದ ವ್ಯಕ್ತಿಯು ಆಕಸ್ಮಿಕವಾಗಿ ಬಾವಿಗೆ ಬಿದ್ದು ಮೃತಪಟ್ಟ ಘಟನೆ ಶುಕ್ರವಾರ ನಡೆದಿದೆ. ನವಗ್ರಾಮ ಸೈಟ್‍ನ ಸುಮತಿ ಎಂಬವರ ಪುತ್ರ ರಮೇಶ್ (38) ಎಂಬವರೇ ಮೃತಪಟ್ಟ ದುರ್ಧೈವಿಯಾಗಿದ್ದಾರೆ. ಇವರು ತಮ್ಮ ಮನೆಯ ಬಳಿಯ ಬಹಳ ಆಳವಾದ ಬಾವಿಗೆ ಕಳೆದ ಕೆಲವು ದಿನಗಳ ಹಿಂದೆ ಬೆಕ್ಕು ಬಿದ್ದು ಸತ್ತು ಹೋಗಿತ್ತು. ಅಲ್ಲದೆ ಬಾವಿಯ ನೀರು ವಾಸನೆ ಬರುತ್ತಿದ್ದುದರಿಂದ ಬಳಕೆ ಮಾಡಲೂ ಆಗುತ್ತಿರಲಿಲ್ಲ. ಅಲ್ಲದೆ ಮನೆಯ ಅಂಗಳದಲ್ಲಿಯೇ ಇರುವ ದೇವಸ್ಥಾನವೊಂದರ ಪೂಜಾ ಕಾರ್ಯಕ್ರಮವು ಶನಿವಾರ ನಡೆಯಲಿತ್ತು. ಆದ್ದರಿಂದ ನೀರಿನ ಅಗತ್ಯತೆಗಾಗಿ ಸತ್ತ ಬೆಕ್ಕನ್ನು ತೆಗೆಯಲೆಂದು ಶುಕ್ರವಾರ ಹಗ್ಗದ ಮೂಲಕ ಬಾವಿಗೆ ಇಳಿದಿದ್ದರು. ಈ ಸಂದರ್ಭದಲ್ಲಿ ಬೆಕ್ಕನ್ನು ಮೇಲಕ್ಕೆ ತೆಗೆದು ವ್ಯವಸ್ಥೆ ಮಾಡಲಾಗಿತ್ತು. ಬಳಿಕ ತಾನು ಬಾವಿಯಿಂದ ಮೇಲೇರುವ ಸಂದರ್ಭದಲ್ಲಿ ಅರ್ಧದಲ್ಲಿ ಆಕಸ್ಮಿಕವಾಗಿ ಕಾಲು ಜಾರಿ ಬಾವಿಗೆ ಬಿದ್ದರು ಎನ್ನಲಾಗಿದೆ. ಈ ಸಂದರ್ಭದಲ್ಲಿ ಬಾವಿಯು ಬಹಳ ಆಳವಾಗಿ…
UN NETWORKS ಕೊಣಾಜೆ: ಮಂಗಳೂರು ವಿಶ್ವವಿದ್ಯಾಲಯ ಸಿಂಡಿಕೇಟ್ ಪ್ರಾಧಿಕಾರದ ಸದಸ್ಯರಾಗಿ ಬಾದುಶಾ ಸಾಂಬಾರ್‍ತೋಟ ನೇಮಕಗೊಂಡಿದ್ದಾರೆ. ವಿದ್ಯಾರ್ಥಿ ಜೀವನದಲ್ಲಿ ಸಾಮಾಜಿಕ ಚಟುವಟಿಕೆ, ಹೋರಾಟದಲ್ಲಿ ಗುರುತಿಸಿಕೊಂಡಿದ್ದ ಅವರು, ಜೆಸಿಐ ಮಂಗಳ ಗಂಗೋತ್ರಿ ಅಧ್ಯಕ್ಷರಾಗಿ, ಅಬ್ಬಕ್ಕ ಉತ್ಸವ ಸಮಿತಿ ಪದಾಧಿಕಾರಿಯಾಗಿ, ಸೌಹಾರ್ದ ಯೂತ್‍ಕ್ಲಬ್ ಸ್ಥಾಪಕಾಧ್ಯಕ್ಷರಾಗಿ ಹಲವು ಸಂಘ-ಸಂಸ್ಥೆಗಳಲ್ಲಿ ತೊಡಗಿಸಿಕೊಂಡು ಸಾಮಾಜ ಸೇವೆಯಲ್ಲಿ ನಿರತರಾಗಿದ್ದಾರೆ.
UN NETWORKS ಕುವೈತ್: ಕೊಲ್ಲಿ ರಾಷ್ಟ್ರಗಳಲ್ಲಿ ಬಳ್ಳಿ ಬಳ್ಳಿಯಾಗಿ ಹರಡಿದೆ ಕೆಸಿಎಫ್. ಗಲ್ಫ್ ರಾಷ್ಟ್ರಗಳಲ್ಲಿ ಒಂಟಿಯಾಗಿ ಚಿಂತಿಸುವ ದುಃಖದ ಹೃದಯಕ್ಕೆ ಸಾಂತ್ವಾನವಾಗಿ ಜವಾಬ್ದಾರಿಯುತ ಕುಟುಂಬಕ್ಕೆ ಹೆಗಲಾಗಿ ಪೊನಿನ ಮೂಲಕ ಮಾತ್ರ ಆನಂದಿಸುವ ಕ್ಷಣಕ್ಕಾಗಿ ಪರಿತಪಿಸುವ ಪ್ರವಾಸಿ ತನ್ನ ನಗುವಿನ ಹಿಂದೆ ಬತ್ತಿದ ಕಣ್ನೀರು,ಹಲವಾರು ಕನಸಿನೊಂದಿಗೆ ಜೀವಿಸುವ ಜೀವಕ್ಕೆ ಜೀವ ನೀಡಿದ ಕೆಸಿಎಫ್ ಕುಟುಂಬದವರ ನೆನಪುಗಳೊಂದಿಗೆ ನಾಲ್ಕು ಗೋಡೆಗಳ ಮಧ್ಯೆ ಸಾಲದ ಹೊರೆ ಹೊತ್ತು ಮಲಗಿ ಕಾಲ ಕಳೆಯುವ ನಮಗೆ ಉಡುಗೊರೆಯಾಗಿ ಸಿಕ್ಕಿದ ಕೆಸಿಎಫ್ ಕಮರಿ ಹೋದ ಮನಸ್ಸಿಗೆ ಸಾಂತ್ವಾನ ನೀಡಿದ ಕೆಸಿಎಫ್ ಇದೀಗ ನಮ್ಮ ದೇಹದ ನರ ನಾಡಿಯಲ್ಲೂ ಸುನ್ನಿ ಆಶಯವನ್ನು ಬಿತ್ತಿದೆ.ಸಿಹಿಯಾದ ಮೂರು ಅಕ್ಷರಗಳಲ್ಲಿ ಅಮೃತ ಧಾರೆಯಾಗಿ ಮನಸ್ಸಿಗೆ ಮುದ ನೀಡುವ,ಕಮರಿ ಹೋದ ಕನಸ್ಸುಗಳಿಗೆ ಧಾರ್ಮಿಕ ಬೋಧನೆ ನೀಡಿದ ಅಸ್ಸುಫಾ ತರಗತಿ.ಗತ ವೈಭವದ ಮಹಾತ್ಮರ,ಉಲಮಾ ನಾಯಕರ ಬಂಧ ಇರುವ ಕೆಸಿಎಫ್ ಕುವೈತ್ ನಲ್ಲಿ ಇತಿಹಾಸ ನಿರ್ಮಿಸಿದೆ. ಕೆಸಿಎಫ್ ಕುವೈತ್ ರಾಷ್ಟ್ರೀಯ ಸಮಿತಿಯ ವಾರ್ಷಿಕ ಮಹಾಸಭೆಯು ದಿನಾಂಕ 23/03/2018 ಶುಕ್ರವಾರ ಅಸರ್…
UN NETWORKS ತೊಕ್ಕೊಟ್ಟು: ತೊಕ್ಕೊಟ್ಟು ಒಳಪೇಟೆಯ ದತ್ತಾ ಕೃಪಾ ಕಟ್ಟಡದಲ್ಲಿ ಶ್ರೀ ಮೂಕಾಂಬಿಕಾ ಕನ್‍ಸ್ಟ್ರಕ್ಷನ್ಸ್ ಮಾಲೀಕರಾದ ಚಂದ್ರಹಾಸ್ ಪಂಡಿತ್‍ಹೌಸ್ ಇವರ ಶ್ರೀ ಮೂಕಾಂಬಿಕಾ ಕ್ಲೋತಿಂಗ್ಸ್ ಬೃಹತ್ ಬಟ್ಟೆ ಕೈಗಾರಿಕಾ ಸಂಸ್ಥೆ ಶುಕ್ರವಾರ ಆರಂಭಗೊಂಡಿತು. ಸಂಸ್ಥೆಗೆ ಚಾಲನೆ ನೀಡಿದ ಉಪ್ಪಳ ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮದ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ ಮಾತನಾಡಿ ಹಲವರಿಗೆ ಉದ್ಯೋಗ ನೀಡುವ ಉದ್ದೇಶದೊಂದಿಗೆ ಸ್ಥಾಪನೆಯಾದ ಸಂಸ್ಥೆ ದೇಶಕ್ಕೆ ಕೊಡುಗೆ ನೀಡುವ ಮಾದರಿ ಸಂಸ್ಥೆಯಾಗಿ ಅಭಿವೃದ್ಧಿಗೊಳ್ಳಲಿ. ದೇಶದ ಆಚಾರ, ವಿಚಾರ, ಸಾಮರಸ್ಯ, ವಸ್ತ್ರವಿನ್ಯಾಸಕ್ಕೆ ಜಗತ್ತಿನಲ್ಲಿ ಉತ್ತಮ ಗೌರವವಿದೆ. ಎಲ್ಲಾ ಧರ್ಮದವರನ್ನು ಸೇರಿಕೊಂಡು ಸಾಮರಸ್ಯದ ವೇದಿಕೆಯ ನಿರ್ಮಾಣ ಸಮಾಜದಲ್ಲಿ ನಿರಂತರವಾಗಿ ನಡೆಯಬೇಕಿದೆ. ಸಂಸ್ಥೆ ಮಾಲೀಕರು ಎಲ್ಲರ ಹಿತವನ್ನು ಬಯಸುತ್ತಾ ತಾನು ಬದುಕಬೇಕು ಅನ್ನುವ ಉದ್ದೇಶ ಹೊಂದಿದವರಾಗಿದ್ದಾರೆ. ಈ ಮೂಲಕ ಸಂಸ್ಥೆ ಉತ್ತಮ ಅಭಿವೃದ್ಧಿ ಕಾಣಲಿ ಎಂದರು. ತೊಕ್ಕೊಟ್ಟು ಸಂತ ಸೆಬೆಸ್ತಿಯನ್ನರ ಚರ್ಚಿನ ಧರ್ಮಗುರು ಫಾ. ಡಾ ಜಾನ್ ಬ್ಯಾಪ್ಟಿಸ್ ಸಲ್ದಾನ್ಹ ಮಹಿಳೆಯರಿಗೆ ಉದ್ಯೋಗ ನೀಡಿ ಅವರಿಗೂ ಶಕ್ತಿ ತುಂಬುವ ಕಾರ್ಯ…
UN NETWORKS ಇನೋಳಿ : ಪ್ರತಿ ಧರ್ಮದಲ್ಲೂ ಜೀವ ಉಳಿಸಲು ಹೆಚ್ಚಿನ ಮಹತ್ವವಿದೆ. ಧರ್ಮಗ್ರಂಥಗಳಲ್ಲಿ ಅದರದೇ ಉಲ್ಲೇಖವಿದೆ. ಅದಕ್ಕಾಗಿ ರಕ್ತದಾನದಂತಹ ಶಿಬಿರಗಳು ಹೆಚ್ಚು ನಡೆಯಬೇಕಿದೆ ಎಂದು ಹೋಪ್ ಫೌಂಡೇಷನ್ನಿನ ಸ್ಥಾಪಕ ಸೈಫ್ ಸುಲ್ತಾನ್ ಹೇಳಿದ್ದಾರೆ. ಅವರು ಇನೋಳಿ ಬ್ಯಾರೀಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಹಾಗೂ ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ ಹಾಗೂ ಯೆನೆಪೋಯ ಆಸ್ಪತ್ರೆ ದೇರಳಕಟ್ಟೆ ಇದರ ಜಂಟಿ ಆಶ್ರಯದಲ್ಲಿ ಬ್ಯಾರೀಸ್ ನಾಲೆಜ್ ಕ್ಯಾಂಪಸ್ಸಿನಲ್ಲಿ ಗುರುವಾರ ಜರಗಿದ ರಕ್ತದಾನ ಶಿಬಿರದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಒಂದು ಯುನಿಟ್ ರಕ್ತ ಮೂರು ಜೀವಗಳನ್ನು ಉಳಿಸಬಹುದು. ಅದಕ್ಕಾಗಿ ಎಲ್ಲರೂ ಜಾಗೃತರಾಗಿ ರಕ್ತದಾನದಲ್ಲಿ ಪಾಲ್ಗೊಳ್ಳುವ ಮೂಲಕ ಧರ್ಮಗ್ರಂಥಗಳಲ್ಲಿ ಉಲ್ಲೇಖಿಸಿರುವಂತೆ ಇನ್ನೊಬ್ಬರ ಜೀವವನ್ನು ಉಳಿಸುವವರಂತಾಗಬೇಕಿದೆ ಎಂದರು. ಇನೋಳಿ ಬ್ಯಾರಿಸ್ ತಾಂತ್ರಿಕ ಸಂಸ್ಥೆಯ ಹಿರಿಯ ಸಲಹೆಗಾರ ಡಾ|. ಎಸ್.ಕೆ.ರಾಯ್ಕರ್ ಮಾತನಾಡಿ ಬ್ಯಾರೀಸ್ ಶಿಕ್ಷಣ ಸಂಸ್ಥೆ ಅನೇಕ ಸಮಾಜಮುಖಿ ಕಾರ್ಯಗಳಲ್ಲಿ ವಿದ್ಯಾರ್ಥಿಗಳನ್ನು ತೊಡಗಿಸಿಕೊಳ್ಳುತ್ತಾ ಬಂದಿದೆ. ರಕ್ತದಾನ ಶಿಬಿರದಲ್ಲಿಯೂ ನೂರಕ್ಕೂ ಅಧಿಕ ವಿದ್ಯಾರ್ಥಿಗಳು ರಕ್ತದಾನ ಮಾಡುವ ಮೂಲಕ ಸಮಾಜಕ್ಕೆ ಉತ್ತಮ…
UN NETWORKS ತೊಕ್ಕೊಟ್ಟು: ರಾಜ್ಯದಲ್ಲಿ ಶೇಖರಣೆಯಾದ ಸಂಪತ್ತನ್ನು ಕೆಲವರು ಮಾತ್ರ ಬಳಸಿಕೊಳ್ಳುವುದು ಬೇಡ, ಅದು ಎಲ್ಲ ವರ್ಗದ ಎಲ್ಲರಿಗೂ ಸಂದಬೇಕು ಎಂಬ ನೆಲೆಯಲ್ಲಿ ಸಿದ್ದರಾಮಯ್ಯ ಅವರ ನೇತೃತ್ವದ ರಾಜ್ಯಸರಕಾರ ಮೊತ್ತ ಮೊದಲ ಬಾರಿಗೆ ಅನ್ನಭಾಗ್ಯ ಯೋಜನೆ ಜಾರಿಗೆ ತಂದಿದ್ದು ಹಸಿವು ಮುಕ್ತ ಕರ್ನಾಟಕವೇ ನಮ್ಮ ಗುರಿ ಎಂದು ಆಹಾರ ಹಾಗೂ ನಾಗರಿಕ ಪೂರೈಕೆ ಸಚಿವ ಯು.ಟಿ. ಖಾದರ್ ಹೇಳಿದರು. ರಾಜ್ಯ ಸರಕಾರದ ಮಹತ್ವಾಕಾಂಕ್ಷಿ ಯೋಜನೆ ಆಗಿರುವ ಹೋಬಳಿ ಮಟ್ಟದಲ್ಲಿ ರಾಜ್ಯದ ಪ್ರಥಮ, ಉಳ್ಳಾಲ ಪುರಸಭೆ ವ್ಯಾಪ್ತಿಯ ತೊಕ್ಕೊಟ್ಟು ಬಸ್ ನಿಲ್ದಾಣದಲ್ಲಿ ನಿರ್ಮಾಣಗೊಂಡಿರುವ ‘ಇಂದಿರಾ ಕ್ಯಾಂಟಿನ್’ ನ್ನು ಗುರುವಾರ ಉದ್ಘಾಟಿಸಿ ಅವರು ಮಾತನಾಡಿದರು. ಕಡಿಮೆ ವೇತನಕ್ಕೆ ದುಡಿಯುವವರ ಹೊಟ್ಟೆ ತುಂಬಬೇಕು. ಗುಣಮಟ್ಟದ ಕಟ್ಟಡ ಹಾಗೂ ಆಹಾರದಲ್ಲಿ ಗುಣಮಟ್ಟ ಕಾಪಾಡಲಾಗಿದೆ. ಈ ಭಾಗದಲ್ಲಿ ಕುಚ್ಚಲ ಅಕ್ಕಿ, ಪಲ್ಯ, ಉಪ್ಪಿನ ಕಾಯಿ ಜೊತೆ ಅನ್ನಸಾಂಬಾರು ಒದಗಿಸಲಿದ್ದಾರೆ. ಇಮೋಫೇಲಿಯಾಕ್ಕೆ ಬಿಪಿಎಲ್ ಪಡಿತರ ಚೀಟಿ ಹೊಂದಿದವರಿಗೆ ಉಚಿತ ಹಾಗೂ ಎಪಿಎಲ್ ನವರಿಗೆ ಎಪ್ಪತ್ತು ಶೇ. ರಿಯಾಯಿತಿ ದರದಲ್ಲಿ ಚಿಕಿತ್ಸೆ…

