UN NETWORKS
ತೊಕ್ಕೊಟ್ಟು: ತೊಕ್ಕೊಟ್ಟು ಒಳಪೇಟೆಯ ದತ್ತಾ ಕೃಪಾ ಕಟ್ಟಡದಲ್ಲಿ ಶ್ರೀ ಮೂಕಾಂಬಿಕಾ ಕನ್ಸ್ಟ್ರಕ್ಷನ್ಸ್ ಮಾಲೀಕರಾದ ಚಂದ್ರಹಾಸ್ ಪಂಡಿತ್ಹೌಸ್ ಇವರ ಶ್ರೀ ಮೂಕಾಂಬಿಕಾ ಕ್ಲೋತಿಂಗ್ಸ್ ಬೃಹತ್ ಬಟ್ಟೆ ಕೈಗಾರಿಕಾ ಸಂಸ್ಥೆ ಶುಕ್ರವಾರ ಆರಂಭಗೊಂಡಿತು.
ಸಂಸ್ಥೆಗೆ ಚಾಲನೆ ನೀಡಿದ ಉಪ್ಪಳ ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮದ ಶ್ರೀ ಯೋಗಾನಂದ ಸರಸ್ವತಿ
ಸ್ವಾಮೀಜಿ ಮಾತನಾಡಿ ಹಲವರಿಗೆ ಉದ್ಯೋಗ ನೀಡುವ ಉದ್ದೇಶದೊಂದಿಗೆ ಸ್ಥಾಪನೆಯಾದ ಸಂಸ್ಥೆ ದೇಶಕ್ಕೆ ಕೊಡುಗೆ ನೀಡುವ ಮಾದರಿ ಸಂಸ್ಥೆಯಾಗಿ ಅಭಿವೃದ್ಧಿಗೊಳ್ಳಲಿ. ದೇಶದ ಆಚಾರ, ವಿಚಾರ, ಸಾಮರಸ್ಯ, ವಸ್ತ್ರವಿನ್ಯಾಸಕ್ಕೆ ಜಗತ್ತಿನಲ್ಲಿ ಉತ್ತಮ ಗೌರವವಿದೆ. ಎಲ್ಲಾ ಧರ್ಮದವರನ್ನು ಸೇರಿಕೊಂಡು ಸಾಮರಸ್ಯದ ವೇದಿಕೆಯ ನಿರ್ಮಾಣ ಸಮಾಜದಲ್ಲಿ ನಿರಂತರವಾಗಿ ನಡೆಯಬೇಕಿದೆ. ಸಂಸ್ಥೆ ಮಾಲೀಕರು ಎಲ್ಲರ ಹಿತವನ್ನು ಬಯಸುತ್ತಾ ತಾನು ಬದುಕಬೇಕು ಅನ್ನುವ ಉದ್ದೇಶ ಹೊಂದಿದವರಾಗಿದ್ದಾರೆ. ಈ ಮೂಲಕ ಸಂಸ್ಥೆ ಉತ್ತಮ ಅಭಿವೃದ್ಧಿ ಕಾಣಲಿ ಎಂದರು.
ತೊಕ್ಕೊಟ್ಟು ಸಂತ ಸೆಬೆಸ್ತಿಯನ್ನರ ಚರ್ಚಿನ ಧರ್ಮಗುರು ಫಾ. ಡಾ ಜಾನ್ ಬ್ಯಾಪ್ಟಿಸ್ ಸಲ್ದಾನ್ಹ ಮಹಿಳೆಯರಿಗೆ ಉದ್ಯೋಗ ನೀಡಿ ಅವರಿಗೂ ಶಕ್ತಿ ತುಂಬುವ ಕಾರ್ಯ ಸಂಸ್ಥೆಯಿಂದ ಆಗಿದೆ. ಈ ಮೂಲಕ ಉತ್ತಮ ಅಭಿವೃದ್ಧಿ ಕಾಣಲಿ ಎಂದು ಹಾರೈಸಿದರು.
ಮಾತೃಭೂಮಿ ಸೇವಾ ಪ್ರತಿಷ್ಠಾನದ ಕೆ.ಟಿ.ಸುವರ್ಣ, ಬಿಜೆಪಿ ಮಂಗಳೂರು ಕ್ಷೇತ್ರ ಅಧ್ಯಕ್ಷ ಸಂತೋಷ್ ಕುಮಾರ್ ರೈ ಬೋಳಿಯಾರ್, ದ.ಕ ಜಿಲ್ಲಾ ಪದವಿಪೂರ್ವ ಕಾಲೇಜುಗಳ ಪ್ರಾಚಾರ್ಯರ ಸಂಘದ ಅಧ್ಯಕ್ಷೆ ಎಲ್ವಿರಾ ಫಿಲೋಮಿನಾ, ಉಳ್ಳಾಲ ನಗರಸಭೆ ಸದಸ್ಯೆ ರಝಿಯಾ ಇಬ್ರಾಹಿಂ, ಸರಿತಾ ಚಂದ್ರಹಾಸ್, ಕರ್ಣಾಟಕ ಬ್ಯಾಂಕ್ ದೇರಳಕಟ್ಟೆ ಶಾಖಾ ಪ್ರಬಂಧಕ ಸಂದೀಪ್ ಮುಖ್ಯ ಅತಿಥಿಗಳಾಗಿದ್ದರು.
ಪ್ರವೀಣ್.ಯಸ್ ಕುಂಪಲ ಕಾರ್ಯಕ್ರಮ ನಿರೂಪಿಸಿದರು. ಸಂಸ್ಥೆ ಮಾಲೀಕ ಚಂದ್ರಹಾಸ್ ಪಂಡಿತ್ ಹೌಸ್ ಸ್ವಾಗತಿಸಿದರು. ಸಿಬ್ಬಂದಿ ಮಿತೇಶ್. ಎಂ ವಂದಿಸಿದರು.

ತೊಕ್ಕೊಟ್ಟುವಿನ ಮೊದಲ ಕೈಗಾರಿಕ ಘಟಕ
ಅಭಿವೃದ್ಧಿ ಪಥದಲ್ಲಿರುವ ತೊಕ್ಕೊಟ್ಟು ಪ್ರದೇಶದಲ್ಲಿ ಶ್ರೀ ಮೂಕಾಂಬಿಕಾ ಕ್ಲೋತಿಂಗ್ಸ್ ಮೊದಲ ರೆಡಿಮೇಡ್ ಬಟ್ಟೆ ತಯಾರಿಕಾ ಘಟಕವಾಗಿ ಆರಂಭಗೊಂಡಿದೆ. 45 ಸಿಬ್ಬಂದಿಯನ್ನು ಹೊಂದಿರುವ ಸಂಸ್ಥೆ ಈಗಾಗಲೇ ವಿವಿಧ ಶಾಲೆಗಳ ಯುನಿಫಾರಂ ಹಾಗೂ ರೆಡಿಮೇಡ್ ಬಟ್ಟೆ ತಯಾರಿಕೆಯಲ್ಲಿ ತೊಡಗಿಸಿಕೊಂಡಿದೆ.


