Author: UllalaVani

Kannada News From Coastal Karnataka

UN NETWORKS ಉಳ್ಳಾಲ: ಜಿಲ್ಲೆಯಲ್ಲಿ ಹಲವು ಹಲವು ವೈದ್ಯಕೀಯ ವಿದ್ಯಾಲಯ ಹಾಗೂ ಆಸ್ಪತ್ರೆಗಳು ಇದ್ದರೂ ಜನರು ಇದನ್ನು ಪಡೆಯುವಲ್ಲಿ ವಿಫಲರಾಗಿರುತ್ತಾರೆ.ಆತ್ಮಶಕ್ತಿ ವಿವಿದೋದ್ದೇಶ ಸಹಕಾರ ಸಂಘದಂತಹ ಸಂಸ್ಥೆಗಳು ಶಿಬಿರಗಳನ್ನು ಏರ್ಪಡಿಸಿದಾಗ ಗ್ರಾಮೀಣ ಪ್ರದೇಶದ ಜನರು ಉಪಯೋಗ ಪಡೆದಕೊಳ್ಳಲು ಸಾಧ್ಯ ಎಂದು ಕೆ.ಎಸ್.ಹೆಗ್ಡೆ ಮೆಡಿಕಲ್ ಆಸ್ಪತ್ರೆ ಇದರ ಅರಿವಳಿಕೆ ವಿಭಾಗದ ಮುಖ್ಯಸ್ಥ ಡಾ| ಆನಂದ್ ಬಂಗೇರ ಅಭಿಪ್ರಾಯಪಟ್ಟರು. ಅತ್ಮಶಕ್ತಿ ವಿವಿದೋದ್ದೇಶ ಸಹಕಾರಿ ಸಂಘ ಉಳ್ಳಾಲ ಶಾಖೆ ಹಾಗೂ ಬ್ರಹ್ಮಶ್ರೀ ನಾರಾಯಣಗುರು ಬಿಲ್ಲವ ಸೇವಾ ಸಂಘ ಮತ್ತು ಮಹಿಳಾ ಘಟಕ, ಬಂಡಿಕೊಟ್ಯ, ಉಳ್ಳಾಲ, ವಿದ್ಯಾರಣ್ಯ ಯುವಕ ವೃಂದ ಮತ್ತು ವಿದ್ಯಾರಣ್ಯ ಕಲಾವೃಂದ, ಉಳ್ಳಾಲ, ಮತ್ತು ಶಿವಶಕ್ತಿ ಯುವಕ ಮಂಡಲ ಉಳ್ಳಾಲ ಇದರ ಜಂಟಿ ಸಹಯೋಗದೊಂದಿಗೆ ಗ್ರಾಮೀಣ ಆರೋಗ್ಯ ರಕ್ಷಣೆ ಮತ್ತು ಅಭಿವೃದ್ಧಿ ಕೇಂದ್ರ, ಯೇನೆಪೊಯ ವಿಶ್ವವಿದ್ಯಾನಿಲಯ ಹಾಗೂ ಸಮುದಾಯ ದಂತ ವಿಭಾಗ ಯೇನೆಪೊಯ ದಂತ ಕಾಲೇಜು,ದೇರಳಕಟ್ಟೆ ಇಲ್ಲಿಯ ನುರಿತ ವೈದ್ಯರ ತಂಡದಿಂದ ನಡೆಸಲ್ಪಟ್ಟ ಉಚಿತ ವೈದ್ಯಕೀಯ ತಪಾಸಣಾ ಶಿಬಿರ , ಕಣ್ಣಿನ ತಪಾಸಣೆ ಹಾಗೂ ದಂತ…

Read More

UN NETWORKS ಕೊಣಾಜೆ : ನೀರು ಒಂದು ಪಾಕೃತಿಕ ಸಂಪತ್ತು ಆಗಿದ್ದು ಇದನ್ನು ಇತಿಮಿತವಾಗಿ ಬಳಸಿ ಸಂರಕ್ಷಿಸಬೇಕಾದದ್ದು ವಿದ್ಯಾರ್ಥಿಗಳ ಕರ್ತವ್ಯ ಎಂದು ಪಿ.ಎ.ಎಜ್ಯುಕೇಶನಲ್ ಟ್ರಸ್ಟ್ ಇದರ ಅಧ್ಯಕ್ಷ ಡಾ| ಪಿ.ಎ.ಇಬ್ರಾಹಿಂ ಅಭಿಪ್ರಾಯಪಟ್ಟರು. ಪಿ.ಎ. ತಾಂತ್ರಿಕ ಮಹಾವಿದ್ಯಾಲಯದಲ್ಲಿ ವಿಶ್ವ ಜಲ ದಿನಾಚರಣೆ ಅಂಗವಾಗಿ ವಿಶ್ವ ಜಲ ದಿನದ ಭಿತ್ತಿ ಪತ್ರವನ್ನು ಬಿಡುಗಡೆ ಮಾಡುವ ಮೂಲಕ ವಿಶ್ವಜಲ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಈ ಕಾರ್ಯಕ್ರಮದಲ್ಲಿ ಪಿ.ಎ.ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ| ಅಬ್ದುಲ್ ಶರೀಫ್, ಶೈಕ್ಷಣಿಕ ನಿರ್ದೇಶಕ ಪ್ರೊ| ಸರ್ಫರಾಜ್ ಹಾಶೀಮ್ ಜೆ., ಎಂ.ಬಿ.ಎ.ವಿಭಾಗದ ಮುಖ್ಯಸ್ಥ ಡಾ| ಬೀರಾನ್ ಮೊೈದೀನ್, ಎಲೆಕ್ಟ್ರಾನಿಕ್ಸ್ ಎಂಡ್ ಕಮ್ಯೂನಿಕೇಷನ್ ವಿಭಾಗದ ಮುಖ್ಯಸ್ಥ ಡಾ| ಅಬ್ದುಲ್ ರಹಿಮಾನ್, ರಾಷ್ಟ್ರೀಯ ಸೇವಾ ಯೋಜನಾ ಘಟಕ ನಾಯಕ ಮೊಹಮ್ಮದ್ ಸಫೀರ್ ಹಾಗೂ ಸ್ವಯಂ ಸೇವಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Read More

UN NETWORKS ದೇರಳಕಟ್ಟೆ: ಕ್ಷಯ ರೋಗ ಅತ್ಯಂತ ಮಹತ್ವದ ರೋಗವಾಗಿದ್ದು, ರೋಗದ ಹೊಸ ವಿಚಾರ, ಸಂಶೋಧನೆಗಳ ಬಗ್ಗೆ ವೈದ್ಯರಲ್ಲಿ ಹೆಚ್ಚಿನ ಆಳವಾದ ಜ್ಞಾನ ಅಗತ್ಯ ಎಂದು ಕೆ.ಎಸ್.ಹೆಗ್ಡೆ ಮೆಡಿಕಲ್ ಅಕಾಡೆಮಿಯ ಡೀನ್ ಡಾ| ಪಿ.ಎಸ್. ಪ್ರಕಾಶ್ ಅಭಿಪ್ರಾಯಪಟ್ಟರು. ಅವರು ದೇರಳಕಟ್ಟೆಯ ಕೆ.ಎಸ್.ಹೆಗ್ಡೆ ಆಸ್ಪತ್ರೆಯಲ್ಲಿ ಕ್ಷೇಮ ಕಾಲೇಜಿನ ಕಮ್ಯುನಿಟಿ ಮೆಡಿಸನ್ ವಿಭಾಗ ಇದರ ಆಶ್ರಯದಲ್ಲಿ ವಿಶ್ವ ಕ್ಷಯ ರೋಗ ದಿನಾಚರಣೆ ಮತ್ತು ನಿರಂತರ ವೈದ್ಯಕೀಯ ಶಿಕ್ಷಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕ್ಷೇಮ ವೈಸ್ ಡೀನ್‍ಗಳಾದ ಡಾ| ಜಯಪ್ರಕಾಶ್ ಶೆಟ್ಟಿ, ಡಾ| ಅಮೃತ್ ಮಿರಾಜ್‍ಕರ್, ದಾವಣಗೆರೆಯ ಜೆಜೆಎಂ ಮೆಡಿಕಲ್ ಕಾಲೇಜಿನ ಕಮ್ಯುನಿಟಿ ಮೆಡಿಸಿನ್ ವಿಭಾಗದ ಪ್ರಾಧ್ಯಾಪಕ ಹಾಗೂ ವಿಭಾಗ ಮುಖ್ಯಸ್ಥ ಡಾ| ಬಾಲು ಪಿ.ಎಸ್., ಸುಳ್ಯ ಕೆವಿಜಿ ಮೆಡಿಕಲ್ ಕಾಲೇಜಿನ ಕಮ್ಯನಿಟಿ ಮೆಡಿಸಿನ್ ವಿಭಾಗದ ಮುಖ್ಯಸ್ಥ ಡಾ| ಎ.ಜಿ.ಕುಲಕರ್ಣಿ, ಕ್ಷಯ ರೋಗ ಜಿಲ್ಲಾ ಅಧಿಕಾರಿ ಡಾ| ಎಂ.ಎನ್.ಬದ್ರುದ್ದಿನ್ ಭಾಗವಹಿಸಿದ್ದರು. ಹೆಲ್ತ್ ಆ್ಯಕ್ಷನ್ ಲರ್ನಿಂಗ್ ಇನ್‍ಶಿಯೇಟಿವ್‍ನ ತಾಂತ್ರಿಕ ಸಂಯೋಜಕಿ ಡಾ| ಶೋಭಾ ಎಕ್ಕಾ, ಕ್ಷೇಮ…

Read More

UN NETWORKS ಉಳ್ಳಾಲ: ಸಮಾಜದ ಬಂಧುಗಳು ಸಂಘಟಿತರಾಗಿ ಕಾರ್ಯ ನಿರ್ವಹಿಸಿದರೆ ಸಮಾಜದ ಅಭಿವೃದ್ಧಿ ಸಾಧ್ಯ ಎಂದು ಕಾಸರಗೋಡು ಬ್ರಹ್ಮಶ್ರೀ ಪುರೋಹಿತ ರತ್ನ ಬಿ. ಕೇಶವ ಆಚಾರ್ಯ ಅಭಿಪ್ರಾಯಪಟ್ಟರು. ಅವರು ನ್ಯಾಶನಲ್ ವಿಶ್ವಕರ್ಮ ಫೆಡರೇಶನ್, ತೊಕ್ಕೊಟ್ಟು ,ದಿವ್ಯಾಸ್ ಹಾಲ್ ಚೆಂಬುಗುಡ್ಡೆ ಇಲ್ಲಿ ನಡೆದ ಪ್ರಥಮ ವಾರ್ಷಿಕೋತ್ಸವದಲ್ಲಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು . ಕಾರ್ಯಕ್ರಮದ ಅಧ್ಯಕ್ಷತೆಯನ್ನು ಟಿ.ಪಿ.ರೂಪೇಶ್ ಭಟ್ನಗರ ಅವರು ವಹಿಸಿದ್ದರು. ಆಹಾರ ಮತ್ತು ನಾಗರಿಕ ಸಚಿವರಾದ ಯು.ಟಿ.ಖಾದರ್, ದೇಶೀಯ ಅಧ್ಯಕ್ಷ ರವಿ ಚೇರ್ಪೆ,ಎನ್. ವಿ.ಎಫ್. ದೇಶೀಯ ಉಪಾಧ್ಯಕ್ಷರಾದ ಸೀತಾರಾಮ ಆಚಾರ್ಯ , ಉತ್ತರ ಕರ್ನಾಟಕ ವಲಯದ ರಾಜ್ಯಾಧ್ಯಕ್ಷ ವೆಂಕಟೇಶ್ ಅನ್ವರಿ, ಎನ್.ವಿ.ಎಫ್. ರಾಜ್ಯ ಸಮಿತಿ ಉಪಾಧ್ಯಕ್ಷ ವಿ.ಉಪೇಂದ್ರ ಆಚಾರಿ ವಯಲಾಂಕುಳಿ ,ಹಾಗೂ ಎನ್.ವಿ.ಎಫ್.ರಾಜ್ಯ ವನಿತಾ ಸಮಿತಿ ಅಧ್ಯಕ್ಷೆ ವಂಸತಿ ಜನಾರ್ದನ ಆಚಾರ್ಯ, ಮಹಿಳಾ ಅಧ್ಯಕ್ಷೆ ಶರ್ಮಿಳಾ ಮಹೇಶ್, ಸದಸ್ಯ ನಂದಕಿಶೋರ್ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಕೃಷ್ಣನ್ ಕೆ ಕುಂಪಲ, ಟಿ.ವಿ.ಕುಂಞರಾಮನ್ ದಡ್ಡಲ್‍ಕಾಡ್ ಹಾಗೂ ಅನಿಲ್ ಕುಮಾರ್ ಮನಿಯಂಪಾರೆ ಅವರನ್ನು ಸನ್ಮಾನಿಸಲಾಯಿತು ಸಮಿತಿಯ ಪ್ರಧಾನ ಕಾರ್ಯದರ್ಶಿ…

Read More

UN NETWORKS ದೇರಳಕಟ್ಟೆ: ದಕ್ಷಿಣ ಕನ್ನಡ ಜಿಲ್ಲಾ ಮದರಸ ಮ್ಯಾನೇಜ್ಮೆಂಟ್ ಅಸೋಸಿಯೇಷನ್ ನಲ್ಲಿ ಇದುವರೆಗೆ ಉಪಾಧ್ಯಕ್ಷರಲ್ಲಿ ಓರ್ವನಾಗಿ ಕಾರ್ಯ ನಿರ್ವಹಿಸುತ್ತಿದ್ದ “ಮರಾಠಿಮೂಲೆ ಮೊಯ್ದೀನ್ ಕುಂಞ ಹಾಜಿ”ಯವರು ಹಠಾತ್ ನಿಧನ ಹೊಂದಿದ ಕಾರಣ ಅವರ ತೆರವಾದ ಸ್ನಾನಕ್ಕೆ ದಕ್ಷಿಣ ಕನ್ನಡ ಜಿಲ್ಲಾ ಮದರಸ ಮ್ಯಾನೇಜ್ಮೆಂಟ್ ಅಸೋಸಿಯೇಷನ್ ನ ಉಪಾಧ್ಯಕ್ಷ ರಲ್ಲಿ ಓರ್ವನಾಗಿ ದೇರಳಕಟ್ಟೆ ರೇಂಜ್ ಮದರಸ ಮ್ಯಾನೇಜ್ಮೆಂಟ್ ಅಸೋಸಿಯೇಷನ್ ನ ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಕೊಣಾಜೆ ಯವರನ್ನು ಆಯ್ಕೆ ಮಾಡಲಾಗಿದೆ. ಇಂದು ಮಂಗಳೂರಿನಲ್ಲಿ ಜಿಲ್ಲಾಧ್ಯಕ್ಷರಾದ ಐ. ಮೊಯ್ದಿನಬ್ಬ ಹಾಜಿ ಯವರ ಅಧ್ಯಕ್ಷತೆಯಲ್ಲಿ ನಡೆದ ಜಿಲ್ಲಾ ಮದರಸ ಮ್ಯಾನೇಜ್ಮೆಂಟ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಈ ಆಯ್ಕೆ ಮಾಡಲಾಯ್ತು.

Read More

UN NETWORKS ದೇರಳಕಟ್ಟೆ: ಪ್ರಮಾಣ ಪತ್ರ ಪಡೆಯುವುದೆಂದರೆ ಪದವಿಯ ಕನಸು ನನಸಾದಂತೆ, ಇಷ್ಟಕ್ಕೇ ಓದು ನಿಲ್ಲಿಸದೆ ಶಿಕ್ಷಣ ಪಡೆದ ಕ್ಷೇತ್ರದಲ್ಲಿ ಇನ್ನಷ್ಟು ಜ್ಞಾನ ಸಂಪಾದನೆಗೆ ಆದ್ಯತೆ ನೀಡಿ ತಮ್ಮಲ್ಲಿರುವ ಪ್ರತಿಭೆ ದೇಶವೇ ಗುರುತಿಸುವಂತೆ ಮಾಡಬೇಕು ಎಂದು ಮಂಗಳೂರು ವಿವಿ ಉಪಕುಲಪತಿ ಪ್ರೊ.ಕೆ.ಭೈರಪ್ಪ ಅಭಿಪ್ರಾಯಪಟ್ಟರು. ದೇರಳಕಟ್ಟೆ ಕೆ.ಎಸ್.ಹೆಗ್ಡೆ ಅಡಿಟೋರಿಯಂನಲ್ಲಿ ಶನಿವಾರ ನಡೆದ ನಿಟ್ಟೆ ವಿಶ್ವವಿದ್ಯಾಲಯದ ಪಾನೀರ್ ಕ್ಯಾಂಪಸ್‍ನಲ್ಲಿರುವ ನಿಟ್ಟೆ ವಾಕ್‍ಶ್ರವಣ ಸಂಸ್ಥೆಯ ಎಂಟನೇ ಪದವಿ ಹಾಗೂ ಪ್ರಶಸ್ತಿ ವಿತರಿಸಿ ಮಾತನಾಡಿದರು. ಜೀವನದ ಮುಂದಿನ ಹಂತದ ಆಯ್ಕೆಗಾಗಿ ಸಾಕಷ್ಟು ಅವಕಾಶಗಳಿದ್ದು ಜಾಗರೂಕತೆಯ ಆಯ್ಕೆ ನಮ್ಮದಾಗಿರಬೇಕು. ಕಷ್ಟದಲ್ಲಿರುವವರಿಗೆ ಸಹಕಾರ ನೀಡುವ, ವರ್ಷಕ್ಕೊಮ್ಮೆಯಾದರೂ ಗ್ರಾಮೀಣ ಭಾಗಕ್ಕೆ ಭೇಟಿ ನೀಡಿ ಸ್ಥಳೀಯರೊಂದಿಗೆ ಬೆರೆತು ನಗುಮುಖದ ಸೇವೆ ನೀಡುವ ಗುಣ ಬೆಳೆಸಿಕೊಳ್ಳಬೇಕು. ರೋಗಿಯ ಪೂರ್ಣ ಪ್ರಮಾಣದ ನಂಬಿಕೆ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಶಿಸ್ತು, ತಾಳ್ಮೆ ಬೆಳೆಸಿಕೊಳ್ಳಬೇಕು. ಬದುಕಿನಲ್ಲಿ ಸಾಕಷ್ಟು ಸಮಸ್ಯೆಗಳು ಎದುರಾಗುವುದು ಸಾಮಾನ್ಯ, ಅದನ್ನು ಸರಳವಾಗಿ ಬಗೆಹರಿಸುವ ಛಾತಿ ಹೊಂದಿರಬೇಕು ಎಂದು ಹೇಳಿದರು. ಅಧ್ಯಕ್ಷತೆ ವಹಿಸಿದ್ದ ನಿಟ್ಟೆ ವಿಶ್ವವಿದ್ಯಾಲಯದ ಕುಲಾಧಿಪತಿ ಎನ್.ವಿನಯ್…

Read More

UN NETWORKS ಉಳ್ಳಾಲ: ಸಮಾಜವನ್ನು ಕಟ್ಟುವ ಕೆಲಸ ನಾವು ಒಗ್ಗಟ್ಟಿನಿಂದ ಮಾಡಬೇಕು. ಪ್ರವಾದಿಯವರ ಕಾಲದಲ್ಲಿ ಶಾಂತಿ, ಸೌಹಾರ್ದತೆ, ಏಕತೆಗೆ ಒತ್ತುಕೊಡಲಾಗಿತ್ತು. ಅದನ್ನು ನಾವು ಉಳಿಸಿಕೊಂಡು ಬರಬೇಕೆಂದು ಖಲೀಲ್ ಹುದವಿ ಅಲ್ ಮಾಲಿಕಿ ಹೇಳಿದರು. ಅವರು ದೇರಳಕಟ್ಟೆಯಲ್ಲಿ ಭಾನುವಾರ ಸುನ್ನಿ ಸಂದೇಶ ಮತ್ತು ಎಸ್‍ಕೆ ಎಸ್ಸೆಸೆಫ್‍ ರೆಂಜಾಡಿ ಶಾಖೆಯ ವಾರ್ಷಿಕೋತ್ಸವದ ಪ್ರಯುಕ್ತ ಮಾದಕ ದ್ರವ್ಯದ ವಿರುದ್ಧ ಜನಾಂದೋಲನ ಮತ್ತು ಧಾರ್ಮಿಕ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ಸಚಿವ ಯು.ಟಿ ಖಾದರ್ ಮಾತನಾಡಿ ಶುಭಹಾರೈಸಿದರು. ಶಂಸುದ್ದೀನ್ ತಂಙಳ್ ಲಕ್ಷದ್ವೀಪ್ ದುವಾ ನೆರವೇರಿಸಿದರು. ಎಂ.ಎ. ಅಬ್ದುಲ್ಲ ಬೆಳ್ಮ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕೆ.ಎಸ್. ಹೈದರ್ ದಾರಿಮಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಿತಾರ್ ಅಬ್ದುಲ್ ಮಜೀದ್ ಕಣ್ಣೂರು ಮಾತನಾಡಿದರು. ಕಣಚೂರು ಮೋನು, ಇಸ್ಮಾಯಿಲ್ ಹಾಜಿ, ಕುಂಬಳೆ ಕಾಸಿಂ ಉಸ್ತಾದ್, ಅಬ್ದುಲ್ ಖಾಸರ್ ಅಲ್ ಕಾಸಿಮಿ, ಅಬ್ದುಲ್ ರಹ್ಮಾನ್ ದಾರಿಮಿ, ಇಬ್ರಾಹಿಂ ಬಾಖವಿ ಕೆಸಿರೋಡ್, ಸುಲೈಮಾನ್ ಫೈಝಿ ಕನ್ಯಾನ, ಮೊಯಿದಿನಬ್ಬ ಹಾಜಿ, ಅಬ್ಬಾಸ್ ಹಾಜಿ, ಕಾಸಿಂ ದಾರಿಮಿ, ಅಬ್ಬಾಸ್ ಹಾಜಿ ಆನೇಕಲ್,…

Read More

UN NETWORKS ಉಳ್ಳಾಲ: ಉಳ್ಳಾಲ ಪುರಸಭಾ ವ್ಯಾಪ್ತಿಯ ಅಬ್ಬಂಜರ ಪ್ರದೇಶದ ದಲಿತ ಕಾಲೊನಿಯ ನಿವಾಸಿಗಳು ಶುದ್ಧ ಕುಡಿಯುವ ನೀರಿಗೆ ಆಗ್ರಹಿಸಿ ಹಾಗೂ ರಸ್ತೆ ಮಧ್ಯೆ ಇರುವ ವಿದ್ಯುತ್ ಕಂಬವನ್ನು ತೆರವುಗೊಳಿಸಲು ಒತ್ತಾಯಿಸಿ ಇಂದು DYFI ಹಾಗೂ ದಲಿತ ಹಕ್ಕುಗಳ ಸಮಿತಿಯ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು. ಗೇಟು ಮುಚ್ಚಿದರು: ದಲಿತರಿಗೆ‌ ಕುಡಿಯಲು ಯೋಗ್ಯವಾದ ನೀರು ಕೊಡಿ ಎಂದು ಕೇಳಿ ಹೋರಾಟ ನಡೆಸಲು ಬಂದ ದಲಿತರನ್ನು ಪುರಸಭೆಯ ಆಡಳಿತ ಪುರಸಭೆಯ ಆವರಣ ಪ್ರವೇಶಿಸದಂತೆ ಗೇಟನ್ನು ಹಗ್ಗದಿಂದ ಕಟ್ಟಿದ್ದು ಇದನ್ನು ಲೆಕ್ಕಿಸದೆ ಪ್ರತಿಭಟನಾಕಾರರು ಒಳ ಪ್ರವೇಶಿಸಿದರು. ಅಧ್ಯಕ್ಷರ ಕಛೇರಿಗೆ ಪ್ರತಿಭಟನೆ ಶಿಫ್ಟ್: ಪ್ರತಿಭಟನಾ ನಿರತರು ಪುರಸಭೆಯ ಅಧ್ಯಕ್ಷರು ಸ್ಥಳಕ್ಕೆ ಆಗಮಿಸಬೇಕು ಎಂದು ಮನವಿ‌ ಮಾಡಿದರೂ ಸ್ಥಳಕ್ಕೆ ಆಗಮಿಸದೇ ಇದ್ದ ಕಾರಣ ನೇರವಾಗಿ ಅಧ್ಯಕ್ಷರ ಕಛೇರಿಗೆ ನುಗ್ಗಿದ್ದು ಈ ಸಂಧರ್ಭ ಪೊಲೀಸರು ತಡೆದರೂ ಯಶಸ್ವಿಯಾಗಲಿಲ್ಲ. ಪ್ರತಿಭಟನೆಯ ನೇತ್ರತ್ವವನ್ನು ಮಂಗಳೂರು ವಿಧಾನ ಸಭಾ ಕ್ಷೇತ್ರದ CPIM ಅಭ್ಯರ್ಥಿ ನಿತಿನ್ ಕುತ್ತಾರ್ ವಹಿಸಿದ್ದರು. ಪ್ರತಿಭಟನೆಯಲ್ಲಿ DYFI ಅಬ್ಬಂಜರ ಘಟಕ ಅಧ್ಯಕ್ಷರಾದ ಪುರಂದರ, ಕಾರ್ಯದರ್ಶಿ…

Read More

UN NETWORKS ಉಳ್ಳಾಲ: ಬೂತ್ ಮಟ್ಟದ ಪ್ರಮುಖರ ಶಕ್ತಿ, ಒಗ್ಗಟ್ಟಿನಿಂದ ಪಕ್ಷ ಬಲ ಹೆಚ್ಚಾಗಿ ಚುನಾವಣೆಗಳಲ್ಲಿ ಅಭ್ಯರ್ಥಿ ಜಯ ಗಳಿಸಲು ಸಾಧ್ಯ ಎಂದು ಮಹರಾಷ್ಟ್ರ ಸಂಸದ ಗೋಪಾಲ ಶೆಟ್ಟಿ ಅಭಿಪ್ರಾಯಪಟ್ಟರು. ಭಾನುವಾರ ಕೊಲ್ಯ ಸೌಭಾಗ್ಯ ಸಭಾ ಭವನದಲ್ಲಿ ನಡೆದ ಮಂಗಳೂರು ಕ್ಷೇತ್ರ ಬಿಜೆಪಿ ಕಾರ್ಯಕರ್ತರ ಸಭೆ ಉದ್ಘಾಟಿಸಿ ಮಾತನಾಡಿದರು. ಕಳೆದ ಬಾರಿ ಹಲವು ಕ್ಷೇತ್ರಗಳಲ್ಲಿ ಅಲ್ಪ ಮತಗಳಿಂದ ಪಕ್ಷದ ಅಭ್ಯರ್ಥಿಗಳು ಸೋತಿದ್ದಾರೆ. ಪುತ್ತೂರಿನಲ್ಲಿ 200 ಮತಗಳಿಂದ ಪಕ್ಷ ಸೋಲು ಕಂಡಿದೆ. ಅಂತಹ ಕ್ಷೇತ್ರಗಳಲ್ಲಿ ಈ ಬಾರಿ ಗೆಲುವು ಸಾಧಿಸುವುದು ಕಷ್ಟವಲ್ಲ. ಹಿಂದು, ಮುಸ್ಲಿಮರು ಬಿಜೆಪಿಗೆ ಮತ ಹಾಕುವುದಿಲ್ಲ ಎನ್ನುವ ಭಾವನೆ ಲೋಕಸಭಾ ಚುನಾವಣೆಯ ಫಲಿತಾಂಶ ಸುಳ್ಳಾಗಿಸಿದೆ ಎಂದು ಹೇಳಿದರು. ಸಂಸದ ನಳಿನ್ ಕುಮಾರ್ ಕಟೀಲ್, ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಸತೀಶ್ ಕುಂಪಲ, ಮಂಗಳೂರು ಕ್ಷೇತ್ರ ಬಿಜೆಪಿ ಅಧ್ಯಕ್ಷ ಸಂತೋಷ್ ಕುಮಾರ್ ರೈ, ಜಿಲ್ಲಾ ಉಪಾಧ್ಯಕ್ಷ ಚಂದ್ರಹಾಸ ಉಳ್ಳಾಲ್, ಕಾರ್ಯದರ್ಶಿ ನಮಿತಾ ಶ್ಯಾಂ, ಮಾಜಿ ಶಾಸಕ ಕೆ.ಜಯರಾಮ ಶೆಟ್ಟಿ, ಕ್ಷೇತ್ರ ಪ್ರಭಾರಿ…

Read More

UN NETWORKS ಕೊಲ್ಯ: ಶಾಲೆ, ಕಾಲೇಜುಗಳು, ಗ್ರಾಮ ಪಂಚಾಯಿತಿಗಳು, ಸಾರ್ವಜನಿಕ ಸ್ಥಳಗಳಲ್ಲಿ ನಿರಂತರ ಜಾಗೃತಿ ಕಾರ್ಯಕ್ರಮಗಳು ನಡೆಸಲಾಗುತ್ತಿದೆಯಾದರೂ ರಸ್ತೆಬದಿ ಬೀಳುವ ಕಸಕ್ಕೆ ಮುಕ್ತಿ ಸಿಗುತ್ತಿಲ್ಲ, ನಾವು ಮಾಡುವ ಕಾರ್ಯಕ್ರಮಗಳೆಲ್ಲವೂ ನಿಷ್ಪ್ರಯೋಜಕವಾಗುತ್ತಿದೆ ಎಂದು ಜಿಲ್ಲಾ ಪಂಚಾಯಿತಿ ಸ್ವಚ್ಛ ಭಾರತ ಮಿಷನ್ ಅಧಿಕಾರಿ ಮಂಜುಳಾ ಜಿ. ಖೇದ ವ್ಯಕ್ತಪಡಿಸಿದರು. ಜಿಲ್ಲಾ ಪಂಚಾಯಿತಿ ಸ್ವಚ್ಛ ಭಾರತ ಮಿಷನ್, ಜಿಲ್ಲಾ ನೆರವು ಘಟಕದ ಆಶ್ರಯದಲ್ಲಿ ಕರಾವಳಿ ಕಲ್ಯಾಣ ಪರಿಷತ್‍ನ ಕೌಶಲ್ಯ ವತಿಯಿಂದ ಕೋಟೆಕಾರ್ ಪಟ್ಟಣ ಪಂಚಾಯಿತಿ, ಸೋಮೇಶ್ವರ ಹಾಗೂ ತಲಪಾಡಿ ಗ್ರಾಮ ಪಂಚಾಯಿತಿಗಳ ಸಹಭಾಗಿತ್ವದಲ್ಲಿ ಭಾನುವಾರ ಕೊಲ್ಯ ಶಾರದಾ ಸಭಾ ಭವನದಲ್ಲಿ ನಡೆದ `ನಮ್ಮ ತ್ಯಾಜ್ಯ, ನಮ್ಮ ಹೊಣೆ’ ಮಾಹಿತಿ ಕಾರ್ಯಕ್ರಮದಲ್ಲಿ ಪರಿಸರ ಸ್ನೇಹಿ ತ್ಯಾಜ್ಯ ನಿರ್ವಹಣೆ ಬಗ್ಗೆ ಮಾತನಾಡಿದರು. ನಮ್ಮ ಮನೆಯಲ್ಲಿ ಸಂಗ್ರಹವಾಗಿ ರಸ್ತೆಬದಿ ನಾವು ಬಿಸಾಡುವ ಕಸ ಗ್ರಾಮ ಪಂಚಾಯಿತಿಗಳು ತೆಗೆಯಬೇಕು ಎನ್ನುವ ಸ್ಥಿತಿಯಲ್ಲಿ ನಾವಿದ್ದೇವೆ. ಇದರಿಂದಾಗಿ ಬುದ್ಧಿವಂತ ಜಿಲ್ಲೆಯಾದ್ಯಂತ ರಸ್ತೆಬದಿ ತ್ಯಾಜ್ಯರಾಶಿ ಕಾಣುತ್ತಿದೆ. ಘನತ್ಯಾಜ್ಯ ವಿಲೇವಾರಿ ಘಟಕ ಸ್ಥಾಪನೆಗೆ ಜಮೀನು ಗುರುತಿಸಿದರೆ ನೂರಾರು…

Read More