UN NETWORKS ಕೈರಂಗಳ: ಗೋಶಾಲೆಯ ಕೊಟ್ಟಿಗೆಯಲ್ಲಿ ಕಟ್ಟಿ ಹಾಕಿದ ದನವನ್ನು ಕದ್ದೊಯ್ಯಲು ಪ್ರಯತ್ನಿಸುತ್ತಿದ್ದ ದುಷ್ಕರ್ಮಿಗಳನ್ನು ತಡೆಯಲು ಯತ್ನಿಸಿದ ಸ್ಥಳೀಯ ಯುವಕರಿಗೆ ತಲವಾರು ಝಳಪಿಸಿ ಬೆದರಿಕೆ ಹಾಕಿ ಒಂದು ದನವನ್ನು ಕೊಂಡೊಯ್ದ ಘಟನೆ ಬಂಟ್ವಾಳ ತಾಲೂಕಿನ ಕೈರಂಗಳ ಗ್ರಾಮದ ಪುಣ್ಯಕೋಟಿ ನಗರದ ಅಮೃತಧಾರ ಗೋಶಾಲೆಯಲ್ಲಿ ಗುರುವಾರ ಮುಂಜಾನೆ ನಡೆದಿದೆ. ಕಾರಿನಲ್ಲಿ ಬಂದ ಯುವಕರ ತಂಡ ಕೊಟ್ಟಿಗೆಯಲ್ಲಿ ಕಟ್ಟಿಹಾಕಿದ್ದ ಎರಡು ದನವನ್ನು ಕಟ್ಟಿಹಾಕಿದ್ದ ಹಗ್ಗವನ್ನು ತಲವಾರಿನಿಂದ ಕಡಿದು ಬಿಳಿ ಬಣ್ಣದ ರಿಟ್ಜ್ ಕಾರಿಗೆ ತುಂಬಿಸುತ್ತಿದ್ದಾಗ ಎಚ್ಚೆತ್ತುಕೊಂಡ ಸ್ಥಳೀಯ ಯುವಕರು ವಿರೋಧಿಸಿದಾಗ ಅವರಿಗೆ ತಲವಾರು ಝಳಪಿಸಿ ಬೆದರಿಸಿ ದುಷ್ಕರ್ಮಿಗಳು ಕಾರಿನಲ್ಲಿ ತುಂಬಿಸಿ ಸಾಗಿಸಿದ್ದಾರೆ. ಯುವಕರು ತಡೆಯಲು ಹೋದರೂ ˌ ಯುವಕರನ್ನು ತಲವಾರು ಝಳಪಿಸಿ ಬೆದರಿಸಿ ಒಂದು ದನವನ್ನು ಕಾರಿನಲ್ಲಿ ತುಂಬಿಸಿ ಮತ್ತೊಂದನ್ನು ತುಂಬಿಸಲಾಗದೆ ಬಿಟ್ಟು ಹೋಗಿದ್ದಾರೆ. ದನ ಸಾಗಿಸುವುದಕ್ಕೂ ಮುನ್ನ ಮತ್ತೊಮ್ಮೆ ತಲವಾರು ಝಳಪಿಸಿ ಪುನಃ ಬರುತ್ತೇವೆ ˌನಿಮ್ಮ ತಾಕತ್ತು ತೋರಿಸಿ ಅಂಥ ಪಂಥಾಹ್ವಾನ ನೀಡಿದ್ದಾರೆ ಎನ್ಬಲಾಗಿದ್ದು ಆರೋಪಿಗಳು ಪರಾರಿಯಾಗಿದ್ದಾರೆ. ಕೊಣಾಜೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Author: UllalaVani
UN NETWORKS ಉಳ್ಳಾಲ: ವಾರದಲ್ಲಿ ಹಲವು ವಾಹನಗಳು ರಸ್ತೆಯಲ್ಲೇ ಬಾಕಿಯಾಗುತ್ತಿದೆ. ತಾಂತ್ರಿಕ ದೋಷವೆಂದು ಗ್ಯಾರೇಜಿಗೆ ಕೊಂಡೊಯ್ದಲ್ಲಿ ಅಲ್ಲಿ ವಾಹನ ಸವಾರರಿಗೆ ಬೆಚ್ಚಿ ಬೀಳಿಸುವ ಅಂಶ ಬೆಳಕಿಗೆ ಬಂದಿದೆ. ಹೌದು ಜಿಲ್ಲೆಯಾದ್ಯಂತ ಕೆಲವು ಪೆಟ್ರೋಲ್ ಪಂಪ್ ಗಳಲ್ಲಿ ಹಾಕುವ ಪೆಟ್ರೋಲಿನಲ್ಲಿ ನೀರು ಮಿಶ್ರಣವಾಗುತ್ತಿದೆ. ಮಂಗಳೂರು, ಬಂಟ್ವಾಳ, ಉಳ್ಳಾಲ, ತೊಕ್ಕೊಟ್ಟು ವ್ಯಾಪ್ತಿಗಳಲ್ಲಿ ಹಲವು ವಾಹನಗಳು ನೀರು ಮಿಶ್ರಿತ ಪೆಟ್ರೋಲಿನಿಂದ ಅರ್ಧದಲ್ಲೇ ನಿಂತು ವಾಹನ ಸವಾರರನ್ನು ಇಕ್ಕಟ್ಟಿಗೆ ಸಿಲುಕಿಸುತ್ತಿದೆ. ಹಲವು ವರ್ಷಗಳಿಂದ ಸಮಸ್ಯೆಯಿದ್ದರೂ, ಇತ್ತೀಚೆಗೆ ಕೆಲ ದಿನಗಳಿಂದ ಹೆಚ್ಚು ಪ್ರಕರಣಗಳು ಬೆಳಕಿಗೆ ಬರುತ್ತಿದೆ. ಟ್ಯಾಂಕ್ ಫುಲ್ ಮಾಡುವ ವಾಹನ ಸವಾರರಲ್ಲೇ ಇಂತಹ ಪ್ರಕರಣ ಹೆಚ್ಚಾಗಿ ಕಂಡುಬರುತ್ತಿದೆ. ಎರಡು ಲೀ ಬಾಟಲಿಯಲ್ಲಿ ಕಾಲು ಭಾಗದಲ್ಲಿ ಮಾತ್ರ ಪೆಟ್ರೋಲ್ ಇದ್ದು, ಮಿಕ್ಕ ಎಲ್ಲವೂ ನೀರು ಇರುತ್ತದೆ. ಇದು ವಾಹನವನ್ನು ಅರ್ಧದಲ್ಲೇ ನಿಲ್ಲಿಸುವುದು ಮಾತ್ರವಲ್ಲ, ಇಂಜಿನ್‍ಗಳ ಸಮಸ್ಯೆಗೂ ಕಾರಣವಾಗುತ್ತಿದೆ. ಹೊಸತಾಗಿ ಖರೀದಿಸಿದ ಬೈಕುಗಳಲ್ಲಿಯೂ ಇಂತಹ ಸಮಸ್ಯೆ ಹಲವು ಬಾರಿ ಕಂಡುಬಂದಿದೆ ಅನ್ನುತ್ತಾರೆ ಗ್ಯಾರೇಜ್ ಮಾಲೀಕರು. ಬಾಟಲಿಯಲ್ಲಿ ಖರೀದಿಸಿದರೆ ಸಿಗುವುದಿಲ್ಲ :…
UN NETWORKS ಉಳ್ಳಾಲ: ಇಂದಿನ ಜಾಗತಿಕ ಸ್ಮರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಕೂಡಾ ಶಿಕ್ಷಣ ಕ್ಷೇತ್ರದಲ್ಲಿ ಸತತ ಪರಿಶ್ರಮದೊಂದಿಗೆ ಮುನ್ನಡೆದು ಜ್ಞಾನ ಕೌಶಲವನ್ನು ಬೆಳೆಸುವುದರೊಂದಿಗೆ ಉತ್ತಮ ಸಮಾಜ ನಿರ್ಮಾಣಕ್ಕೆ ಪಣ ತೊಡಬೇಕು ಎಂದು ಜೈಪುರದ ರಾಜಾಸ್ಥಾನ್ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ಎನ್.ಎ.ಎಸ್.ಐ-ಐ.ಸಿ.ಎಮ್.ಆರ್ ವಿಭಾಗದ ಮುಖ್ಯಸ್ಥರಾದ ಡಾ.ವಿಶ್ವಮೋಹನ್ ಕಠೋಜ್ ಹೇಳಿದರು. ಅವರು ಯೆನೆಪೋಯ ವಿವಿಯ ಯೆನ್ಡ್ಯೂರೆನ್ಸ್ ಝೋನ್ ಸಭಾಂಗಣದಲ್ಲಿ ಬುಧವಾರ ಯೆನೆಪೋಯ ಮೊಯ್ದಿನ್ ಕುಂಞ ಮೆಮೋರಿಯಲ್ ಎಜ್ಯುಕೇಶನಲ್ ಮತ್ತು ಚಾರಿಟೇಬಲ್ ಟ್ರಸ್ಟ್‍ನ ಘಟಕವಾದ ಯೆನೆಪೋಯ ಫೌಂಡೇಶನ್ ಹಾಗೂ ಯೆನೆಪೋಯ ವಿಶ್ವವಿದ್ಯಾನಿಲಯದ ಸಹಯೋಗದೊಂದಿಗೆ ಎಸ್‍ಎಸ್‍ಎಲ್‍ಸಿ, ಪಿಯುಸಿ ಹಾಗೂ ಸ್ನಾತಕ ಪದವಿ ಮಟ್ಟದಲ್ಲಿ ಅತೀ ಹೆಚ್ಚು ಅಂಕಗಳನ್ನು ಪಡೆದ ಹಾಗೂ ಶೇಖಡಾ ನೂರು ಫಲಿತಾಂಶ ದಾಖಲಿಸಿದ ಶಿಕ್ಷಣ ಸಂಸ್ಥೆಗಳಿಗೆ ಶೈಕ್ಷಣಿಕ ಪ್ರತಿಭಾ ಪುರಸ್ಕಾರ ನೀಡಿ ಮಾತನಾಡಿದರು. ಮಕ್ಕಳಲ್ಲಿ ಎಳವೆಯಲ್ಲಿಯೇ ಚಿಗುರೊಡೆಯುವ ಪ್ರತಿಭೆಗಳನ್ನು ಗುರುತಿಸಿ ಅವುಗಳಿಗೆ ಪೋಷಕರು ಪ್ರೋತ್ಸಾಹ ನೀಡಿದರೆ ಉತ್ತಮ ಮೌಲ್ಯಗಳೊಂದಿಗೆ ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಲು ಸಾಧ್ಯವಾಗುತ್ತದೆ. ಯೆನಪೋಯದಂತಹ ಶಿಕ್ಷಣ ಸಂಸ್ಥೆಗಳು ಇಂದು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಶೈಕ್ಷಣಿಕ…
UN NETWORKS ಉಳ್ಳಾಲ: ಕೊಲೆ ಯತ್ನ ಮತ್ತು ಗಾಂಜಾ ಮಾರಾಟ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿ ಮುಳ್ಳುಗುಡ್ಡೆ ಇಮ್ತಿಯಾಜ್ ಎಂಬಾತನನ್ನು ಕೊಟೆಕಾರು ಗ್ರಾಮದ ಅಜೀನಡ್ಕ ಎಂಬಲ್ಲಿ ಮಂಗಳೂರು ದಕ್ಷಿಣ ಉಪವಿಭಾಗದ ಎಸಿಪಿ ರಾಮ ರಾವ್ ರವರ ನೇತೃತ್ವದ ರೌಡಿ ನಿಗ್ರಹ ದಳದ ಸಿಬ್ಬಂದಿಗಳು ವಶಕ್ಕೆ ಪಡೆಯಲು ಯಶಸ್ವಿಯಾಗಿದ್ದಾರೆ. ಈತ ಹಿಂದೆ ಕೊಣಾಜೆ ಠಾಣಾ ವ್ಯಾಪ್ತಿಯ ಕೇರಳ ಗಡಿ ಪ್ರದೇಶವಾದ ನೆತ್ತಿಲಪದವು ಎಂಬಲ್ಲಿ ಸ್ಕೂಟರ್ ನಲ್ಲಿ ತಿರುಗಾಡುತ್ತಾ ಗಾಂಜಾ ಮಾರಾಟ ಮಾಡುತ್ತಿದ್ದಾರೆ ಎಂಬ ಮಾಹಿತಿಯ ಮೇರೆಗೆ ಮಹಮ್ಮದ್ ಅಜೀಜ್ ಯಾನೆ ಅಬ್ದುಲ್ ಅಜೀಜ್ ಮತ್ತು ಇಮ್ತಿಯಾಜ್ ಇಬ್ಬರನ್ನು ರೌಡಿನಿಗ್ರಹದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸಿ, ನೆತ್ತಿಲ ಪದವು ಕಲ್ಲರಕೋಡಿ ಎಂಬಲ್ಲಿ ಸುಮಾರು 10.250 ಕೆ.ಜಿ. ಗಾಂಜಾ ಮತ್ತು ಸ್ಕೂಟರನ್ನು ವಶಪಡಿಸಿಕೊಂಡಿದ್ದರು. ಸ್ಥಳದಲ್ಲಿ ಗಾಂಜಾ ಪೊಟ್ಟಣಗಳೊಂದಿಗೆ ಕಾಯುತ್ತಿದ್ದಾಗ ದಾಳಿ ಮಾಡಿದಾಗ ಇಮ್ತಿಯಾಝ್ ತಲೆಮರೆಸಿಕೊಂಡಿದ್ದ. ಇದರಲ್ಲಿ ಅಜೀಜ್ ಎಂಬಾತನನ್ನು ವಶಕ್ಕೆ ಪಡೆದಿದ್ದು, ಈಗಾಗಲೇ ಜೈಲಿನಲ್ಲಿದ್ದಾನೆ. ಈತ ಈ ಹಿಂದೆ ಉಳ್ಳಾಲ ಠಾಣಾ ವ್ಯಾಪ್ತಿಯ ಮುಳ್ಳುಗುಡ್ಡೆ ಎಂಬಲ್ಲಿ ಪಚ್ಚಿಲ ಅಜೀಜ್…
UN NETWORKS ಕೊಣಾಜೆ: ಬಹುಭಾಷಿಕತೆ ಕೇವಲ ಭಾಷೆಗೆ ಸಂಬಂಧಿಸಿದುದಲ್ಲ. ಅದು ಪರಿಸರ ಸಂಸ್ಕೃತಿ ಮತ್ತು ಜೀವ ವೈವಿಧ್ಯಗಳ ಸಂಕೇತ. ಅವಿಭಜಿತ ದಕ್ಷಿಣಕನ್ನಡದ ಪರಿಸರದಲ್ಲಿ ಮೂಡಿ ಬಂದ ಸಾಹಿತ್ಯ ಬಹುಭಾಷಾ ನೆಲೆಯಿಂದಲೇ ತನ್ನ ಸತ್ವವನ್ನು ಪಡೆದುಕೊಂಡಿರುವಂತದ್ದುಎಂದು ಹೈದರಾಬಾದ್ ಕೇಂದ್ರೀಯ ವಿಶ್ವವಿದ್ಯಾನಿಲಯದ ಪ್ರೊ.ಶಿವರಾಮ ಪಡಿಕಲ್ ಹೇಳಿದರು. ಅವರು ಮಂಗಳೂರು ವಿಶ್ವವಿದ್ಯಾನಿಲಯದ ಯುಜಿಸಿ ಸ್ಯಾಪ್ ಯೋಜನೆಯ ಆಶ್ರಯದಲ್ಲಿ `ಕರಾವಳಿಯ ಬಹುಭಾಷಿಕ, ಸಾಹಿತ್ಯಕ ಸಾಂಸ್ಕೃತಿಕ ಅಧ್ಯಯನದ ವೈಧಾನಿಕತೆ’ ಎಂಬ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಮಾತನಾಡಿದರು. ಬಹುಸಾಂಸ್ಕೃತಿಕ, ಆರೋಗ್ಯ, ಬಹುಭಾಷಾ ಒಡನಾಟ ಮತ್ತು ರಾಜಕೀಯಗಳನ್ನು ಮನಸ್ಸಿನಲ್ಲಿ ಇರಿಸಿಕೊಂಡೇ ನಾವು ಸಾಂಸ್ಕ್ರತಿಕ ಭಾಷಾಂತರವನ್ನು ಅರ್ಥಮಾಡಿಕೊಳ್ಳಬೇಕು ಎಂದು ಹೇಳಿದ ಅವರು ಕರ್ನಾಟಕದ ಆಧುನಿಕತೆಯ ಹಿನ್ನೆಲೆಯಲ್ಲಿ ಬಹುಭಾಷಿಕತೆ, ಸಾಹಿತ್ಯ, ಸಂಸ್ಕ್ರತಿಗಳನ್ನು ಅನುಸಂಧಾನಿಸಬಹುದಾದ ರೀತಿಗಳ ಬಗ್ಗೆ ಚರ್ಚಿಸಿದರು. ಕಾರ್ಯಕ್ರಮದಲ್ಲಿ ಶಿವಮೊಗ್ಗ ಸಹ್ಯಾದ್ರಿ ಕಾಲೇಜಿನ ಪ್ರೊ.ಅವಿನಾಶ್.ಟಿ. ಸ್ಯಾಪ್ ಯೋಜನೆಯ ಸಂಯೋಕರಾದ ಪ್ರೊ.ಬಿ.ಶಿವರಾಮ ಶೆಟ್ಟಿ, ಪ್ರಾದ್ಯಾಪಕ ಡಾ.ನಾಗಪ್ಪ ಗೌಡ ಉಪಸ್ಥಿತರಿದ್ದರು. ಡಾ.ಧನಂಜಯ ಕುಂಬ್ಳೆ ಕಾರ್ಯಕ್ರಮ ನಿರೂಪಿಸಿದರು.
UN NETWORKS ಉಳ್ಳಾಲ: ನಗರೋತ್ಥಾನ ನಿಧಿಯಡಿ ಮಂಜೂರಾದ ಅನುದಾನದಿಂದ ನಡೆಯುತ್ತಿದ್ದ ಮಾಡೂರಿನಿಂದ ಕೊಂಡಾಣ ದೈವಸ್ಥಾನ ರಸ್ತೆಯ ಕಾಮಗಾರಿಯನ್ನು ಸಚಿವರು ತಡೆಹಿಡಿದಿದ್ದು, ಇದನ್ನು ಖಂಡಿಸಿ ಕೊಂಡಾಣ ಮಾಡೂರು ನಾಗರಿಕರು ಬೀರಿ ಜಂಕ್ಷನ್ನಿನಲ್ಲಿ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದ ಘಟನೆ ಮಂಗಳವಾರ ನಡೆದಿದೆ. ಒಂದು ವರ್ಷದ ಹಿಂದೆ ರಸ್ತೆ ಅವ್ಯವಸ್ಥೆ ಕುರಿತು ಮಾಡೂರಿನ ಯುವಕನ ಪತ್ರಕ್ಕೆ ಪ್ರಧಾನಿ ಸಚಿವಾಲಯ ಸ್ಪಂಧಿಸಿತ್ತು. ಈ ಬಗ್ಗೆ ಕೋಟೆಕಾರು ಪಟ್ಟಣ ಪಂಚಾಯಿತಿ ಪೌರಾಯುಕ್ತರು ನಗರೋತ್ಥಾನದಡಿ ರೂ. 50 ಲಕ್ಷ ಮಂಜೂರಾಗಿರುವ ಕುರಿತು ಹಿಂಬರಹ ನೀಡಿದ್ದರು. ಈ ನಡುವೆ ಸುದ್ಧಿ ಮಾಧ್ಯಮಗಳಲ್ಲಿ ಸುದ್ಧಿ ಪ್ರಚಾರವಾಗುತ್ತಿದ್ದಂತೆ ಪ್ರಧಾನಿ ಮೋದಿ ಸ್ಪಂಧಿಸಿ ರಸ್ತೆ ಕಾಮಗಾರಿ ನಡೆಯುತ್ತಿದೆ ಅನ್ನುವ ಫ್ಲೆಕ್ಸ್ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಸುದ್ಧಿ ಹಬ್ಬಿತ್ತು. ಇದರಿಂದ ಅನುದಾನ ಮಂಜೂರುಗೊಳಿಸಿದ ಸಚಿವ ಯು.ಟಿ.ಖಾದರ್ ಅವರು ಮುಂದಕ್ಕೆ ಪ್ರಧಾನಿಯವರೇ ರಸ್ತೆ ಕಾಂಕ್ರೀಟಿಕರಣಗೊಳಿಸಲಿ ಎಂದು ಕಾಮಗಾರಿಯನ್ನು ಅರ್ಧಕ್ಕೆ ತಡೆಹಿಡಿದಿದ್ದರು. ಇದನ್ನು ಖಂಡಿಸಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಜಿ.ಪಂ ಮಾಜಿ ಉಪಾಧ್ಯಕ್ಷ ಸತೀಶ್ ಕುಂಪಲ ಮಾತನಾಡಿ…
UN NETWORKS ದೇರಳಕಟ್ಟೆ: ವೈದ್ಯಕೀಯ ವಿದ್ಯಾರ್ಥಿಗಳು ಮತ್ತು ತುವ ವೈದ್ಯರು ವೈದ್ಯಕೀಯ ಲೇಖನಗಳು, ಗ್ರಂಥಗಳ ಅಧ್ಯಯನದ ಹವ್ಯಾಸದೊಂದಿಗೆ ಉನ್ನತ ಜ್ಞಾನ ಸಂಪಾದಿಸುವತ್ತ ಚಿತ್ತ ಹರಿಸಬೇಕು ಎಂದು ಇಂಡಿಯನ್ ಅಕಾಡೆಮಿ ಆಫ್ ಪಿಡಿಯಾಟ್ರಿಕ್ಸ್-2018ರ ಸಾಲಿನ ರಾಷ್ಟ್ರೀಯ ಅಧ್ಯಕ್ಷ, ಮಂಗಳೂರಿನ ಖ್ಯಾತ ಮಕ್ಕಳ ತಜ್ಞ ಡಾ| ಸಂತೋಷ್ ಟಿ. ಸೋನ್ಸ್ ಅಭಿಪ್ರಾಯಪಟ್ಟರು. ದೇರಳಕಟ್ಟೆಯ ಯೇನೆಪೊಯ ಮೆಡಿಕಲ್ ಕಾಲೇಜಿನಲ್ಲಿ ಇಂಡಿಯನ್ ಮೆಡಿಕಲ್ ಅಕಾಡೆಮಿ ಆಫ್ ಪಿಡಿಯಾಟ್ರಿಕ್ಸ್ ದಕ್ಷಿಣ ಕನ್ನಡ ಜಿಲ್ಲಾ ಶಾಖೆಯ ವಾರ್ಷಿಕ ರಾಜ್ಯ ಸಮ್ಮೇಳನದ ಅಂಗವಾಗಿ ಯೇನೆಪೊಯ ಮೆಡಿಕಲ್ ಕಾಲೇಜಿನ ಮಕ್ಕಳ ವಿಭಾಗದ ಅಶ್ರಯದಲ್ಲಿ ನಡೆದ `ಮಂಗಳೂರು ಪಿಡಿಕಾನ್ ಮತ್ತು ಎಂ.ಆರ್. ಶೆಣೈ ಉಪನ್ಯಾಸ’-2018ರ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಬಹಳಷ್ಟು ಸಂಖ್ಯೆಯಲ್ಲಿ ತಜ್ಞರು ತಾವು ಅಧ್ಯಯನ ಮಾಡಿರುವ ವಿಷಯಗಳನ್ನು ಪುಸ್ತಕ ರೂಪದಲ್ಲಿ ಪ್ರಕಟಿಸಿದ್ದು ಅದು ಧೂಳು ಹಿಡಿಯುವಂತಾಗಿದೆ. ಯುವ ವೈದ್ಯರು ಕಂಪ್ಯೂಟರ್ ಪ್ರತಿಗೆ ಮಾತ್ರವೇ ಮೊರೆ ಹೋಗದೆ, ಪುಸ್ತಕಗಳನ್ನು ಅಧ್ಯಯನ ನಡೆಸಬೇಕು ಮತ್ತು ಲೇಖನಗಳನ್ನು ಪ್ರಕಟಿಸಬೇಕು ಎಂದ ಅವರು ಮಕ್ಕಳಲ್ಲಿ ಕಂಡುಬರುವ ಸಾಮಾನ್ಯ ಆರೋಗ್ಯ…
UN NETWORKS ಸೋಮೇಶ್ವರ: ಸೋಮೇಶ್ವರ ಮಾಗಣೆಯ ಶ್ರೀ ಸೋಮನಾಥ ದೇವರಿಗೆ ಗಾಣಿಗ ಸಮಾಜದಿಂದ ಸೇವಾರೂಪದಲ್ಲಿ ಚಂದ್ರಮಂಡಲ ರಥ ಸಮರ್ಪಣೆ ಕಾರ್ಯಕ್ರಮ ನಡೆಯಿತು. ರಥ ಸಮರ್ಪಣೆಯ ಪೂರ್ವಭಾವಿಯಾಗಿ ಉಳ್ಳಾಲ ಉಳಿಯ ಶ್ರೀ ಉಳ್ಳಾಲ್ತಿ ಧರ್ಮಅರಸರ ಕ್ಷೇತ್ರದಲ್ಲಿ ಸಾಮೂಹಿಕ ಪ್ರಾರ್ಥನೆ, ತೊಕ್ಕೊಟ್ಟು ಜೈ ವೀರಮಾರುತಿ ವ್ಯಾಯಾಮ ಶಾಲೆಯಲ್ಲಿ ಉಳ್ಳಾಲ ಉಳಿಯ ಶ್ರೀ ಉಳ್ಳಾಲ್ತಿ ಧರ್ಮ ಅರಸರ ಕ್ಷೇತ್ರದ ಧರ್ಮದರ್ಶಿ ಹಾಗೂ ದರ್ಶನ ಪಾತ್ರಿ ದೇವು ಮೂಲ್ಯಣ್ಣ ಇವರು ಗಣ್ಯರ ಉಪಸ್ಥಿತಿಯಲ್ಲಿ ಚಂದ್ರ ಮಂಡಲ ರಥದ ವೈಭವದ ಶೋಭಾಯಾತ್ರೆಗೆ ಚಾಲನೆ ನೀಡಿದರು. ಶೋಭಾಯಾತ್ರೆಯು ವ್ಯಾಯಾಮ ಶಾಲೆಯಿಂದ ಕೊಲ್ಯ, ಕೋಟೆಕಾರು, ಬೀರಿ ಮಾರ್ಗವಾಗಿ ಸೋಮೇಶ್ವರ ಶ್ರೀ ಸೋಮನಾಥ ದೇವರ ಸನ್ನಿಧಿಯಲ್ಲಿ ಸಮಪನ್ನಗೊಂಡಿತು.
UN NETWORKS ಪಜೀರು : ಸ್ವಚ್ಛ ಪಜೀರು ಗ್ರಾಮ ನಿರ್ಮಾಣ ಕಾರ್ಯದಲ್ಲಿ ಗ್ರಾಮಸ್ಥರು ಪಕ್ಷಭೇದ ಮರೆತು ಭಾಗವಹಿಸುತ್ತಿದ್ದು, ಗ್ರಾಮಸ್ಥರ ಬೆಂಬಲವಿದ್ದರೆ ಸ್ವಚ್ಛ ಗ್ರಾಮದೊಂದಿಗೆ ಮಾದರಿ ಗ್ರಾಮ ನಿರ್ಮಾನ ಸಾಧ್ಯ ಎಂದು ಪಜೀರು ಗ್ರಾಮ ಪಂಚಾಯತ್ ಅದ್ಯಕ್ಷ ಸೀತಾರಾಮ ಶೆಟ್ಟಿ ಮುಗುಳಿ ಅಭಿಪ್ರಾಯಪಟ್ಟರು. ಅವರು ಪಜೀರು ಗ್ರಾಮ ಪಂಚಾಯತ್ ವ್ಯಾಪ್ತಿಯ ಕಂಬಳಪದವು ಶ್ರೀ ದೇವಿನಗರ ನಾಗರಿಕರ ಹಿತರಕ್ಷಣಾ ಸಮಿತಿ ಇದರ ಆಶ್ರಯದಲ್ಲಿ ಸ್ವಚ್ಛ ಭಾರತದಡಿಯಲ್ಲಿ ` ನಮ್ಮ ಗ್ರಾಮ – ಸ್ವಚ್ಛ ಪಜೀರು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ನಮ್ಮ ಗ್ರಾಮ- ಸ್ವಚ್ಛ ಪಜೀರು ಸ್ವಚ್ಛತಾ ಆಂದೋಲನಕ್ಕೆ ಈಗಾಗಲೇ ಚಾಲನೆಯನ್ನು ನೀಡಿ ಪ್ರತೀ ವಾರ ಗ್ರಾಮದ ಒಂದೊಂದು ವಾರ್ಡ್‍ಗಳಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಪ್ರತೀ ವಾರ್ಡ್‍ಗಳ ಜನರು ಸ್ವ ಇಚ್ಚೆಯೊಂದಿಗೆ ಈ ಕಾರ್ಯಕ್ರಮದಲ್ಲಿ ತೊಡಗಿಸಿಕೊಳ್ಳುತ್ತಿದ್ದು, ಮುಂದಿನ ದಿನಗಳಲ್ಲಿ ಕಸ ರಹಿತ ಪಜೀರು ಗ್ರಾಮದ ಕನಸನ್ನು ನನಸು ಮಾಡಲಾಗುವುದು ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಜೀರು ಗ್ರಾಮ ಪಂಚಾಯತ್ ಅಧ್ಯಕ್ಷೆ ಡಾ| ಸ್ಮೃತಿ ಯು. ವಹಿಸಿದ್ದರು, ತಾಲೂಕು…
UN NETWORKS ಕೊಣಾಜೆ: ಕೋಟಿಪದವು ಶ್ರೀ ರಾಮ ಭಜನಾ ಮಂದಿರದ 53ನೇ ವಾರ್ಷಿಕ ಏಕಹಾ ಭಜನಾ ಹಾಗೂ ರಾಮನವಮಿ ಉತ್ಸವಕ್ಕೆ ಮಂದಿರದ ಗೌರವಾಧ್ಯಕ್ಷ ದೇವಪ್ಪ ಗಟ್ಟಿ ಕಂಬ್ಲಪದವು ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಂದಿರದ ಅರ್ಚಕ ಹೊನ್ನಪ್ಪ ಕುಲಾಲ್, ರಾಘವೇಂದ್ರ ಭಟ್ ತಲಪಾಡಿ, ಅಧ್ಯಕ್ಷ ವಿಶ್ವನಾಥ ಗಟ್ಟಿ ಕೋಟಿಪದವು, ಮಾಜಿ ಅಧ್ಯಕ್ಷರಾದ ಸೀತಾರಾಮ ಸಣ್ಣಪದವು, ಸುಂದರ ಕೋಟ್ಯಾನ್ ತಾಕಟೆ, ಉಪಾಧ್ಯಕ್ಷ ಚಂದ್ರಹಾಸ ಬಿ., ಕಾರ್ಯದರ್ಶಿ ಉಮೇಶ್ ಗಟ್ಟಿ ಕೋಟಿಪದವು, ಜೊತೆ ಕಾರ್ಯದರ್ಶಿ ರಾಜೇಶ್ ಬೊಸ್ತುಕೋಡಿ, ಸಂಘಟನ ಕಾರ್ಯದರ್ಶಿಗಳಾದ ಮಹೇಶ್ ಗ್ರಾಮಚಾವಡಿ, ಭಾಸ್ಕರ ಕೊಟಿಪದವು, ನಾಗೇಶ್ ಗಟ್ಟಿ ಕೋಟಿಪದವು, ಪುರುಷೋತ್ತಮ ಗಟ್ಟಿ ಕೋಟಿಪದವು, ಪ್ರವೀಣ್ ಗಟ್ಟಿ ಕಂಬಳಪದವು ಲಕ್ಷ್ಮಣ ಗಟ್ಟಿ ಕೋಟಿಪದವು ಮತ್ತಿತರರು ಉಪಸ್ಥಿತರಿದ್ದರು.

