ContentsForex – Handel walutami na rynku ForexZmienne i stałe kursy walut ForexKurs euro 4 stycznia poniżej 4,7Kurs franka 4 stycznia w okolicach 4,75Ile kosztuje euro 03.01.2023? Kurs euro do złotego (EUR/PLN) we wtorekIle kosztuje frank 05.01.2023? Kurs franka do złotego (CHF/PLN) w czwartek Jego zdaniem przywrócenie stabilności cen, gdy inflacja jest wysoka, może wymagać środków, które nie są popularne w krótkim okresie – mowa tu o podnoszeniu stóp procentowych, które w naturalny sposób spowolnią gospodarkę. Ostatnie miesiące charakteryzowały się wygasającym pesymizmem w strefie euro. Gwałtowny spadek cen gazu ziemnego, optymizm związany z ponownym otwarciem Chin oraz ogólne względne wyniki aktywów…
Author: UllalaVani
UN NETWORKS ಕೊಣಾಜೆ: ವಿಜ್ಞಾನ ಕ್ಷೇತ್ರದಲ್ಲಿ ಸಸ್ಯಗಳ ವಿಕಾಸದಲ್ಲಿ ಸಂಶೋಧನೆ ನಡೆಸಲು ಜಗತ್ತಿನಾದ್ಯಂತ ವಿಪುಲ ಅವಕಾಶಗಳಿದ್ದು ಯುವ ವಿಜ್ಞಾನಿಗಳು ಇಂತಹ ಅವಕಾಶಗಳನ್ನು ಬಳಸಿಕೊಂಡು ಮುನ್ನಡೆಯಬೇಕು ಎಂದು ಹೈದರಾಬಾದ್ ಯೋಗಿ ವೆಮನಾ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ.ಅರ್ಜುಲ ರಾಮಚಂದ್ರ ರೆಡ್ಡಿ ಅವರು ಅಭಿಪ್ರಾಯಪಟ್ಟರು. ಅವರು ಮಂಗಳೂರು ವಿಶ್ವವಿದ್ಯಾಲಯದ ಜೀವವಿಜ್ಞಾನ ವಿಭಾಗದ ಆಶ್ರಯದಲ್ಲಿ ಬುಧವಾರ ಮಂಗಳೂರು ವಿವಿಯ ಮಂಗಳ ಸಭಾಂಗಣದಲ್ಲಿ `ರಿಸರ್ಚ್ ಟ್ರೆಂಡ್ ಇನ್ ಫ್ರಂಟಿಯರ್ ಏರಿಯಾಸ್ ಆಫ್ ಬಯಾಲಾಜಿಕಲ್ ಸೈಯನ್ಸಸ್’ ಎಂಬ ವಿಷಯದಲ್ಲಿ ನಡೆದ ಯುಜಿಸಿ ಪ್ರಾಯೋಜಿತ ರಾಷ್ಟ್ರೀಯ ವಿಚಾರಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಮಾನವನು ಸೇರಿದಂತೆ ಬೇರೆ ಜೀವಿಗಳಿಗೆ ಹೋಲಿಸಿದರೆ ಸಸ್ಯಗಳಲ್ಲಿ ಡಿಎನ್‍ಎ ಪ್ರಮಾಣವು ಅತೀ ಹೆಚ್ಚು ಇರುತ್ತದೆ. ವಿಕಾಸ ಪಥದಲ್ಲಿ ಸಸ್ಯಗಳ ತಳವ್ಯೂಹವು ವಿಸ್ತರಿಸುತ್ತಾ ಸಾಗುತ್ತದೆ. ಅದರಲ್ಲಿ ಹಾರುವ ಜೀನ್‍ಗಳ ಪಾತ್ರವು ಬಹುಮುಖ್ಯವಾದದ್ದು ಎಂದರು.1940ರಲ್ಲಿ ಬಾರ್ಬರ ಮೆಕ್ಲಿನ್‍ಟಾಕ್ ಎಂಬ ವಿಜ್ಞಾನಿಯು ಹಾರುವ ಜೀನಿನ ಬಗ್ಗೆ ಸಂಶೋಧನೆ ನಡೆಸಿ ಅನ್ವಯಿಸಿದಾಗ ವೈಜ್ಞಾನಿಕ ಸಮುದಾಯವು ಅವರನ್ನು ಗೇಲಿ ಮಾಡಿತ್ತು. ಆದರೆ ಅವರ ಸಂಶೋಧನೆಯ…
UN NETWORKS ಕತಾರ್ : ಮೂಲತಃ ಕಡಬ ತಾಲೂಕು ಹೊಸಮಠ ನಿವಾಸಿ ಪ್ರಸ್ತುತ ನೆಲ್ಯಾಡಿಯಲ್ಲಿ ವಾಸವಾಗಿರುವ ಆದಮ್ ಹೊಸಮಠ ಎಂಬವರು ಕತಾರ್ ನಲ್ಲಿ ತಾನು ಉದ್ಯೋಗ ಮಾಡುತಿದ್ದ ಸ್ಥಳದಲ್ಲಿ ಹೃದಯಾಘಾತದಿಂದ ದಿನಾಂಕ 13/03/2019 ರಂದು ಸ್ಥಳೀಯ ಆಸ್ಪತ್ರೆಗೆ ದಾಖಲಾಗಿದ್ದರು.ಆದರೆ ಚಿಕಿತ್ಸೆಗೆ ಸ್ಪಂದಿಸದ ಆದಮ್ ರವರು ಇಹಲೋಕ ತ್ಯಜಿಸಿದರು. ಮೃತರ ಕುಟುಂಬದ ಅಪೇಕ್ಷೆಯಂತೆ ಮೃತದೇಹವನ್ನು ಊರಿಗೆ ಸಾಗಿಸಲು ಮೃತರ ಸ್ನೇಹಿತ ಮುಸ್ತಫಾ ತೋಕೂರ್, ಕತಾರ್ ಇಂಡಿಯನ್ ಸೋಶಿಯಲ್ ಫೋರಮ್ ಸದಸ್ಯ ಅಯ್ಯುಬ್ ಉಳ್ಳಾಲ್ ರವರನ್ನು ಸಂಪರ್ಕಿಸಿದರು,ತಕ್ಷಣ ಕಾರ್ಯ ಪ್ರವೃತ್ತರಾದ ಅಯ್ಯುಬ್ ರವರು ಲತೀಫ್ ಮಡಿಕೇರಿಯವರ ನೇತೃತ್ವದಲ್ಲಿ ಎಲ್ಲಾ ದಾಖಲೆ ಪತ್ರಗಳನ್ನು ಸಂಗ್ರಹಿಸಿ ಮೃತದೇಹವನ್ನು 19/03/2019 ರಂದು ಊರಿಗೆ ಕಳಿಸಿಕೊಡಲಾಯಿತು.ಮೃತದೇಹವನ್ನು ಬೆಂಗಳೂರಿನಿಂದ ಊರಿಗೆ ತಲುಪಿಸಲು ನೆಲ್ಯಾಡಿ ಎಸ್ಡಿಪಿಐ ಸದಸ್ಯ ಸುಲೈಮಾನ್ ಕೊಡ್ಲಿಪೇಟೆ ನೆರವಾದರು.ಮೃತದೇಹವನ್ನು ಊರಿಗೆ ಸಾಗಿಸುವಲ್ಲಿ ಕತಾರ್ ಇಂಡಿಯನ್ ಸೋಶಿಯಲ್ ಫೋರಮ್ ಸದಸ್ಯರಾದ ಅಶ್ರಫ್ ಪುತ್ತೂರು,ಖಾಲಿದ್ ಮೊಹಸಿನ್,ಇಬ್ರಾಹಿಂ ಹಳೆಯಂಗಡಿ,ಸಲೀಂ ಬಂಗಾಡಿ,ಮುಸ್ತಫಾ ತೋಕೂರ್,ಹಾಗು ಮಜೀದ್ ಬೆಳ್ತಂಗಡಿ ಸಹಕರಿಸಿದರು.ಮೃತರ ದಫನ ಕ್ರಿಯೆಯು ನಿನ್ನೆ ಅರಸಿನಮಕ್ಕಿ ರಹ್ಮಾನಿಯಾ ಜುಮಾ ಮಸೀದಿ ದಫನ…
UN NETWORKS ಬಾಳೆಪುಣಿ : ಪ್ರಾಕೃತಿಕ ವಿಕೋಪ ಪರಿಹಾರ ನಿಧಿಯಾಗಿ ಕೃಷಿಕರೊಬ್ಬರಿಗೆ ಕಂದಾಯ ಇಲಾಖೆ ನೀಡಿದ ರೂ.800 ಪರಿಹಾರ ಮೊತ್ತದ ಚೆಕ್ ಎರಡು ಬಾರಿ ಬ್ಯಾಂಕಿನಲ್ಲಿ ಬೌನ್ಸ್ ಆಗಿ ರೂ. 472 ದಂಡ ಪಾವತಿಸಿದರೂ ಉಳಿದ ರೂ.300 ಸಿಗದ ಘಟನೆ ಬಾಳೆಪುಣಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆದಿದೆ. ಬಾಳೆಪುಣಿ ಗ್ರಾಮದ ಕೈರಂಗಳ ಕೊಪ್ಪಳ ನಿವಾಸಿ ಕೃಷಿಕ ಭಾಸ್ಕರ್ ಅವರು ಎರಡೆರಡು ಬಾರಿ ಕಂದಾಯ ಇಲಾಖೆಯ ಬೇಜವಾಬ್ದಾರಿಗೆ ಒಳಗಾದವರು. ವಿಪರೀತ ಗಾಳಿ ಮಳೆಗೆ ಭಾಸ್ಕರ್ ಅವರ ತೋಟದ ದಲ್ಲಿರುವ 25 ಅಡಿಕೆ ಮರಗಳು, 2 ತೆಂಗು ಮತ್ತು ಹಟ್ಟಿ ಭಾಗಶ: ಹಾನಿಯಾಗಿತ್ತು. ಈ ಕುರಿತು ಸ್ಥಳೀಯ ಪಂಚಾಯಿತಿ ಸದಸ್ಯರ ಸಲಹೆಯಂತೆ ಗ್ರಾಮ ಪಂಚಾಯಿತಿಗೆ ದೂರು ಸಲ್ಲಿಸುವಂತೆ ಸೂಚಿಸಿದ್ದರು. ಪಂಚಾಯಿತಿ ಗ್ರಾಮಕರಣಿಕರಲ್ಲಿ ದೂರು ದಾಖಲಿಸಿದ ಕೃಷಿಕ ಭಾಸ್ಕರ್ ತಮಗಾದ ಸಾವಿರಾರು ರೂ.ಗಳ ನಷ್ಟದ ಬಗ್ಗೆ ದೂರಿದ್ದರು. ಅದಕ್ಕಾಗಿ ಫೋಟೊ ಸಹಿತ ದೂರಿನ ಪ್ರತಿಯನ್ನು ನೀಡುವಂತೆ ಸೂಚಿಸಿದಾಗ ಅದಕ್ಕಾಗಿ ರೂ. 300 ರಷ್ಟು ಖರ್ಚು ನಡೆಸಿ…
UN NETWORKS ನಾಟೆಕಲ್: ನಾಟೆಕಲ್ ಕಣಚೂರು ಆಸ್ಪತ್ರೆ ಎದುರುಗಡೆ ಎರಡನೇ ದಿನವೂ ಲೋಕೋಪಯೋಗಿ ಇಲಾಖೆ, ಕೋಟೆಕಾರು ಪಟ್ಟಣ ಪಂಚಾಯಿತಿ ವ್ಯಾಪ್ತಿಯಿಂದ ತೆರವು ಕಾರ್ಯಾಚರಣೆ ಮುಂದುವರಿದಿದೆ. ಗುರುವಾರ ಸಂಜೆವರೆಗೂ ಅಂಗಡಿ ಮಾಲೀಕರು ಸಮಯವಕಾಶ ಕೇಳಿದ ಹಿನ್ನೆಲೆಯಲ್ಲಿ ಕೆಲವು ಅಂಗಡಿಗಳನ್ನು ಹಾಗೆಯೇ ಬಿಡಲಾಗಿದೆ. ಇಂದು ತೆರವುಗೊಳಿಸುವುದಾಗಿ ತಿಳಿಸಿದ್ದ ಅಂಗಡಿ ಮಾಲೀಕರ ಶೀಟುಗಳನ್ನು ಜೆಸಿಬಿ ಮೂಲಕ ತೆರವುಗೊಳಿಸಲಾಗಿದೆ. ಅಂಗಡಿ ಮಾಲೀಕರು ವಿರೋಧ ವ್ಯಕ್ತಪಡಿಸಿದರೂ, ಲೋಕೋಪಯೋಗಿ ಇಲಾಖೆ ಅಧಿಕಾರಿ ಚುನಾವಣಾ ಅಧಿಕಾರಿ ಆದೇಶ ಇರುವುದರ ಹಿನ್ನೆಲೆಯಲ್ಲಿ ತೆರವು ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದಿದ್ದಾರೆ. ಗುರುವಾರ ಸಂಜೆಯೊಳಗೆ ತೆರವುಗೊಳಿಸದೇ ಇದ್ದಲ್ಲಿ ತಡರಾತ್ರಿ ಮತ್ತೆ ಜೆಸಿಬಿ ಮೂಲಕ ತೆರವು ಕಾರ್ಯಾಚರಣೆ ನಡೆಸುವುದಾಗಿ ಲೋಕೋಪಯೋಗಿ ಇಲಾಖೆ ಇಂಜಿನಿಯರ್ ದಾಸ್ ಪ್ರಕಾಶ್ ತಿಳಿಸಿದ್ದಾರೆ. ಸ್ಥಳದಲ್ಲಿ ಕೊಣಾಜೆ ಸಿಪಿಐ ರವಿ ನಾಯಕ್, ಎಸ್.ಐ ಉಮೇಶ್, ಕೋಟೆಕಾರು ಪಟ್ಟಣ ಪಂಚಾಯಿತಿ ಪೌರಾಯುಕ್ತೆ ರೂಪಕಲಾ ಕಾರ್ಯಾಚರಣೆ ವೇಳೆ ಉಪಸ್ಥಿತರಿದ್ದರು.
UN NETWORKS ಸೌದಿ ಅರೇಬಿಯಾ : ಕೆಸಿಎಫ್ ರಿಯಾದ್ ಝೋನ್ ಗೋರ್ನಾಥ ಸೆಕ್ಟರ್ ಅಧೀನದಲ್ಲಿ ಕೆಸಿಎಫ್ ಮಲ್ಗಾ ನೂತನ ಯೂನಿಟ್ ಸಿತಾರ್ ಮುಹಮ್ಮದ್ ಹಾಜಿಯವರ ಅಧ್ಯಕ್ಷತೆಯಲ್ಲಿ ನಡೆಯಿತು.KCF ಸೌದಿ ಅರೇಬಿಯಾ ಸಂಘಟನೆ ವಿಭಾಗ ಅಧ್ಯಕ್ಷರು ಸಿದ್ದೀಖ್ ಸಖಾಫಿ ಪೆರುವಾಯಿಯವರು ಕೆ.ಸಿ.ಎಫ್ ನ ಕುರಿತು ಸವಿಸ್ತಾರವಾದ ವಿಷಯಗಳನ್ನು ಮಂಡಿಸಿ ಸಭೆಯನ್ನು ಉಧ್ಘಾಟಿಸಿದರು. ಝೋನ್ ನಿಂದ ರೀ-ಓರ್ಗನೈಸಿಂಗ್ ಆಫೀಸರಾಗಿ ಆಗಮಿಸಿದ ಇಸ್ಮಾಯಿಲ್ ಕನ್ನಂಗಾರ್ ರವರ ನೇತೃತ್ವದಲ್ಲಿ ನೂತನ ಸಮಿತಿಯನ್ನು ಆಯ್ಕೆ ಮಾಡಲಾಯಿತು . ಅಧ್ಯಕ್ಷರಾಗಿ ಗಫೂರ್ ಯೂಮಾರ್ಚ್, ಉಪಾಧ್ಯಕ್ಷರಾಗಿ ಅಬ್ದುಲ್ ರಹ್ಮಾನ್ ನೇರಳಕಟ್ಟೆ ಮತ್ತು ಅಬ್ದುಲ್ ಅಝೀಝ್ ಬೆಳ್ಳಾರೆ, ಪ್ರ.ಕಾರ್ಯದರ್ಶಿಯಾಗಿ ಅಬ್ದುಲ್ಲಾ ಅಮ್ಚಿನಡ್ಕ, ಜೊತೆ ಕಾರ್ಯದರ್ಶಿಗಳಾಗಿ ಮುಸ್ತಾಖ್ UP, ಮುಹಮ್ಮದ್ ಸಾಗರ್, ಕೋಶಾಧಿಕಾರಿಯಾಗಿ ಖಾಸಿಂ ಕುಕ್ಕಾಜೆ, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಫಾರೂಖ್ ಕಕ್ಕಿಂಜೆ, ಅಬ್ದುಲ್ ರಹ್ಮಾನ್ ಕಕ್ಕಿಂಜೆ, ಮುಹಮ್ಮದ್ ಕಾಪು, ಅಬ್ಬಾಸ್ ಯು.ಪಿ, ನಝೀರ್ ಕಕ್ಕಿಂಜೆ, ರಮೀಝ್ ಕುಲಾಯಿ, ರಶೀದ್ ಮದನಿ, ಮುಝಮ್ಮಿಲ್. ಸೆಕ್ಟರ್ ಕೌಂಸಿಲರುಗಳಾಗಿ ರಶೀದ್ ಮದನಿ, ರಮೀಝ್ ಕುಲಾಯಿ, ನಝೀರ್ ಕಕ್ಕಿಂಜೆ,…
UN NETWORKS ಸೋಮೇಶ್ವರ : ಕೃಷಿ ಪ್ರಧಾನ ಸಮಾಜವಾಗಿರುವ ಗಟ್ಟಿ ಸಮಾಜ ಅನಾದಿಕಾಲದಿಂದಲೂ ಶ್ರೀ ಸೋಮನಾಥ ದೇವರನ್ನು ಆರಾಧನೆ ಮಾಡಿಕೊಂಡು ಬರುವುದರೊಂದಿಗೆ ಜಾತ್ರಾ ಸಂದರ್ಭದಲ್ಲಿ ಕೃಷಿಯಲ್ಲಿ ಬೆಳೆದ ವಸ್ತುಗಳನ್ನು ದೇವರಿಗೆ ಅರ್ಪಣೆ ಮಾಡಿಕೊಂಡು ಬಂದಿದ್ದು, ಹಿರಿಯರ ನಂಬಿಕೆಗಳನ್ನು ಮುಂದುವರೆಸಿಕೊಂಡು ಹೋಗುತ್ತಿರುವುದು ಶ್ರೀ ಸೋಮನಾಥನಿಗೆ ನೀಡುವ ಗೌರವ ಎಂದು ಸೋಮೇಶ್ವರ ಸೋಮನಾಥ ದೇವಸ್ಥಾನದ ಅಧ್ಯಕ್ಷ ವಿಶ್ವನಾಥ ಗಟ್ಟಿ ವಗ್ಗ ಅಭಿಪ್ರಾಯಪಟ್ಟರು. ಸೋಮೇಶ್ವರ ಸೋಮನಾಥ ದೇವಸ್ಥಾನದ ವಾರ್ಷಿಕ ಉತ್ಸವದ ಅಂಗವಾಗಿ ಗಟ್ಟಿ ಸಮಾಜ ಸೇವಾ ಸಂಘ ಅಂಬಿಕಾರಸ್ತೆ ಇಲ್ಲಿ ಗಟ್ಟಿ ಸಮಾಜ ಭವನದಲ್ಲಿ ಗಟ್ಟಿ ಸಮಾಜದ ವತಿಯಿಂದ ಕುಲಸ್ವಾಮಿ ಸೋಮನಾಥ ದೇವರಿಗೆ ಹೊರೆಕಾಣಿಕೆ ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿದರು. ಗಟ್ಟಿ ಸಮಾಜ ಸೇವಾ ಸಂಘದ ಅಧ್ಯಕ್ಷ ಪವಿತ್ರ ಕುಮಾರ್ ಗಟ್ಟಿ, ನಾಯ್ಗರಾದ ಪದ್ಮನಾಭ ಗಟ್ಟಿ ಕಟ್ಟಪುಣಿ, ಧಾರ್ಮಿಕ ಪರಿಷತ್ ಸದಸ್ಯ ಕೃಷ್ಣ ಗಟ್ಟಿ ಸೋಮೇಶ್ವರ, ಸೋಮನಾಥ ಸೇವಾ ಸಮಿತಿ ಅಧ್ಯಕ್ಷ ಕೆ.ಆರ್. ಗಟ್ಟಿ ಕೊರಂತೋಡಿ, ಯುವಜನ ವಿಭಾಗದ ಅಧ್ಯಕ್ಷ ರಾಜೇಶ್ ಗಟ್ಟಿ ಕುಂಪಲ, ಮಹಿಳಾ…
UN NETWORKS ದೇರಳಕಟ್ಟೆ : ದೇರಳಕಟ್ಟೆಯ ನಿಟ್ಟೆ ಉಷಾ ಇನ್‍ಸ್ಟಿಟ್ಯೂಟ್ ಆಫ್ ನರ್ಸಿಂಗ್ ಸೈನ್ಸ್‍ನ ಸಮುದಾಯ ಶುಶ್ರೂಷ ವಿಭಾಗದ ಬೋಧಕರು ಹಾಗೂ ಮೊದಲ ವರ್ಷದ ಸ್ನಾತಕೋತ್ತರ ನಸಿಂಗ್ ವಿದ್ಯಾರ್ಥಿಗಳ ಸಹಭಾಗಿತ್ವದಲ್ಲಿ ಕೆ.ಎಸ್. ಹೆಗ್ಡೆ ಆಸ್ಪತ್ರೆಯ ಚಿಂತನಾ ಸಭಾಂಗಣದಲ್ಲಿ ಬೇಸಿಕ್ಸ್ ಆಫ್ ರಿಸರ್ಚ್ ಬಗ್ಗೆ ಪ್ರಾದೇಶಿಕ ಮಟ್ಟದ ವಿಚಾರಗೋಷ್ಠಿ ನಡೆಯಿತು. ಸಮುದಾಯ ವಿಭಾಗದ ಪ್ರೊಫೆಸರ್ ಡಾ. ಅಂಕಿತಾ ಮೆನೊನಾ ಮಾತನಾಡಿ ಉನ್ನತ ಶಿಕ್ಷಣದಲ್ಲಿ ನವೀಕೃತ ಸಂಶೋಧನೆ ಹಾಗೂ ಜ್ಞಾನ ಹೆಚ್ಚಿಸಿಕೊಳ್ಳುವ ಕೌಶಲ್ಯದ ಬಗ್ಗೆ ಮಾಹಿತಿ ನೀಡಿದರು.ಮೂಡುಬಿದಿರೆಯ ಆಳ್ವಾಸ್ ನರ್ಸಿಂಗ್ ಕಾಲೇಜಿನ ಪ್ರೊ. ಗಾನಾವತಿ ವೀಕ್ಷಕರಾಗಿ ಭಾಗವಹಿಸಿದ್ದರು.ಪ್ರಿನ್ಸಿಪಾಲ್ ಪ್ರೊ. ಡಾ. ಫಾತಿಮ ಡಿಸಿಲ್ವ ಅಧ್ಯಕ್ಷತೆ ವಹಿಸಿದ್ದರು. ಉಪ ಪ್ರಿನ್ಸಿನ್ಸಿಪಾಲ್ ಪ್ರೊ. ಬಿ. ಸಬಿತಾ ನಾಯಕ್, ಸಮುದಾಯ ಶುಶ್ರೂಷ ವಿಭಾಗ ಮುಖ್ಯಸ್ಥೆ ಡಾ. ನೀತಾ ಕಾಮತ್ ಹಾಗೂ ಉಪನ್ಯಾಸಕಿ ಜಿನ್ಸ್ ವಿ. ಜಾನ್ ಉಪಸ್ಥಿತರಿದ್ದರು. ನರ್ಸಿಂಗ್ ವಿದ್ಯಾರ್ಥಿನಿ ಜೋಯ್ಸ್ ಸ್ವಾಗತಿಸಿದರು. 85ಶುಶ್ರೂಷಾ ಸಿಬ್ಬಂದಿ ಪಾಲ್ಗೊಂಡಿದ್ದರು.
UN NETWORKS ಕೊಣಾಜೆ : ಮಂಗಳೂರು ವಿವಿ ಸಂಯೋಜಿತ 10ಕಾಲೇಜುಗಳಲ್ಲಿಈ ಸಾಲಿನಲ್ಲಿ 14ಕಾಲೇಜಿನಿಂದ ಮರು ಸಂಯೋಜನೆಗೆ ಅರ್ಜಿ ಬಂದಿಲ್ಲವಾದರೂ 13ನೂತನ ಕಾಲೇಜುಗಳಿಗೆ ಅನುಮೋದನೆ ನೀಡಲಾಗಿದೆ. ಆ ಮೂಲಕ ಸರಕಾರಿ 37, ಖಾಸಗಿ 138, ಶಾಶ್ವತ 11, ಅಟೋನೋಮಸ್ 5, ಸಂಯೋಜಿತ 5 ಹಾಗೂ 13ನೂತನ ಕಾಲೇಜುಗಳಿಗೆ ಅನುಮೋದನೆ ನೀಡಲಾಗಿದೆ ಎಂದು ಮಂಗಳೂರು ವಿಶ್ವವಿದ್ಯಾಲಯದ ಆಡಳಿತ ಸೌಧದ ಹೊಸ ಸೆನೆಟ್ ಸಭಾಂಗಣದಲ್ಲಿಮಂಗಳವಾರ ನಡೆದ ವಿವಿಯ ಶೈಕ್ಷಣಿಕ ಮಂಡಳಿಯ 2018-19ನೇ ಸಾಲಿನ ನಾಲ್ಕನೇ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿದ ಪ್ರಭಾರ ಕುಲಪತಿ ಡಾ. ಕಿಶೋರಿ ನಾಯಕ್ ಹೇಳಿದರು. ಮಂಗಳೂರು ವಿವಿಗೊಳಪಟ್ಟ 210ಕಾಲೇಜುಗಳಲ್ಲಿ14ಕಾಲೇಜುಗಳು ಸಂಯೋಜನೆಗೆ ಅರ್ಜಿ ಹಾಕಿಲ್ಲ. ಅದರಲ್ಲಿಐದು ಸಂಯೋಜಿತ ಹಾಗೂ ಐದು ಸ್ವಾಯತ್ತ ಕಾಲೇಜುಗಳು ಸೇರಿದ್ದು ನಾಲ್ಕು ಕಾಲೇಜುಗಳು ಇನ್ನೂ ಅಸ್ತಿತ್ವ ಸಾರಿಲ್ಲ. ಸರಕಾರದ ಅದೇಶದಂತೆ ಉನ್ನತ ಶಿಕ್ಷಣದ ಪ್ರವೇಶಾತಿಯಲ್ಲಿಮುಂದಿನ ಶೈಕ್ಷಣಿಕ ವರ್ಷದಿಂದ ವಿಕಲಚೇತನರಿಗೆ ಕನಿಷ್ಠ ಐದು ಶೇ. ಮೀಸಲಾತಿ ಹಾಗೂ ಶೈಕ್ಷಣಿಕ ಪ್ರವೇಶದ ವಯೋಮಿತಿಯಲ್ಲಿ ಐದು ವರ್ಷಗಳ ರಿಯಾಯಿತಿ ಅವಕಾಶ ಕಲ್ಪಿಸಲು ನಿರ್ಣಯಿಸಲಾಯಿತು.…
UN NETWORKS ತೊಕ್ಕೊಟ್ಟು : ತೊಕ್ಕೊಟ್ಟು-ಮಂಗಳೂರು ವಿಶ್ವವಿದ್ಯಾನಿಲಯ ರಸ್ತೆಯ ನಾಟೆಕಲ್ ಸರ್ಕಲ್ ನಿಂದ ದೇರಳಕಟ್ಟೆ ಯೆನೆಪೋಯ ಆಸ್ಪತ್ರೆವರೆಗಿನ ರಸ್ತೆಯ ಎರಡು ಬದಿಯಲ್ಲಿರುವ ಅಂಗಡಿ ಮುಗ್ಗಟ್ಟುಗಳನ್ನು ಲೋಕೋಪಯೋಗಿ ಇಲಾಖೆ, ಪೊಲೀಸ್ ಇಲಾಖೆ, ಬೆಳ್ಮ ಪಂಚಾಯಿತಿ ಹಾಗೂ ಕೋಟೆಕಾರು ಪಟ್ಟಣ ಪಂಚಾಯಿತಿ ಜತೆಯಾಗಿ ಮಂಗಳವಾರ ತೆರವು ಕಾರ್ಯಾಚರಣೆ ನಡೆಸಿತು.ರಸ್ತೆ ಬದಿ ಸರಕಾರಿ ಜಾಗದಲ್ಲಿ ನಿರ್ಮಿಸಲಾಗಿದ್ದ ಅನಧಿಕೃತ ಗೂಡಂಗಡಿಗಳ ತೆರವಿಗೆ 15 ದಿನಗಳ ಹಿಂದೆಯೇ ಎಚ್ಚರಿಸಲಾಗಿದೆ. ಬೆಳ್ಮ ಗ್ರಾಮ ಪಂಚಾಯಿತಿ ವತಿಯಿಂದ ಬ್ಯಾನರ್ ಅಳವಡಿಸಿ ಎಚ್ಚರಿಕೆಯನ್ನು ನೀಡಲಾಗಿತ್ತು. ಇದನ್ನು ಗಣನೆಗೆ ತೆಗೆದುಕೊಳ್ಳದೇ ಹಿನ್ನೆಲೆಯಲ್ಲಿ ಕಾರ್ಯಾಚರಣೆ ನಡೆಸಿ ಹಲವು ಅನಧಿಕೃತ ಗೂಡಂಗಡಿಗಳನ್ನು ತೆರವುಗೊಳಿಸಲಾಗಿದೆ. ಒಂದು ದಿನದ ಎಚ್ಚರಿಕೆ : ಕೋಟೆಕಾರು, ಬೆಳ್ಮ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ರಾಜ್ಯ ಹೆದ್ದಾರಿ ಬದಿಯಲ್ಲಿ ಇನ್ನೂ ಹಲವು ಅಂಗಡಿಗಳಿವೆ. ಅಂಗಡಿ ಮಾಲೀಕರ ಮನವಿ ಮೇರೆಗೆ ಒಂದು ದಿನದ ಅವಕಾಶವನ್ನು ನೀಡಲಾಗಿದೆ. ಅದರೊಳಗೆ ಅಂಗಡಿಗಳನ್ನು ಸ್ವಯಂಪ್ರೇರಿತವಾಗಿ ತೆರವುಗೊಳಿಸಿ ರಸ್ತೆ ಕಾಮಗಾರಿಗೆ ಅವಕಾಶ ಕಲ್ಪಿಸುವಂತೆ ತೆರವುಕಾರ್ಯಾಚರಣೆಯಲ್ಲಿ ಭಾಗವಹಿಸಿರುವ ಅಧಿಕಾರಿಗಳು ಸೂಚಿಸಿದ್ದಾರೆ. ಪಂಚಾಯಿತಿ ಅಂಗಡಿಗಳ…

