UN NETWORKS ದೇರಳಕಟ್ಟೆ: ದೇರಳಕಟ್ಟೆಯ ನಿಟ್ಟೆ ಪರಿಗಣಿಸಲಾಗಿರುವ ವಿವಿಯ ಅಧೀನದ ನಿಟ್ಟೆ ಉಷಾ ಇನ್‍ಸ್ಟಿಟ್ಯೂಟ್ ಆಫ್ ನರ್ಸಿಂಗ್ ಸೈನ್ಸಸ್‍ನ ಆಶ್ರಯದಲ್ಲಿ ಆರೋಗ್ಯ ಮತ್ತು ಸಂತೋಷ ಕುರಿತಾಗಿ ವಿಚಾರ ಸಂಕಿರಣ ಕೆ.ಎಸ್. ಹೆಗ್ಡೆ ಆಸ್ಪತ್ರೆಯ ಚಿಂತನಾ ಸಭಾಂಗಣದಲ್ಲಿ ಶನಿವಾರ ನಡೆಯಿತು. ಯೂತ್ ರೆಡ್ ಕ್ರಾಸ್ ಸಂಯೋಜಕಿ ಲತಾ ಎಸ್. ಸ್ವಾಗತಿಸಿದರು. ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಪ್ರಕಾಶ್ ವಿ. ಪೈ ಯುವಕರಲ್ಲಿ ಒತ್ತಡ ಕಡಿತ ಮತ್ತು ಸಮಯ ನಿರ್ವಹಣೆಯ ಅಗತ್ಯತೆ ತಿಳಿಸಿ ಸಂತೋಷದಾಯಕ ಬದುಕಿಗೆ ವಿವಿಧ ಮಾರ್ಗೋಪಾಯ ತಿಳಿಸಿದರು. ಆರ್ಥೊಡೋಂಟಿಕ್ಸ್ ವಿಭಾಗ ಮುಖ್ಯಸ್ಥ ಪ್ರೊ.ಎಂ.ಎಸ್. ರವಿ ಉಪಸ್ಥಿತರಿದ್ದರು.ಯೂತ್ ರೆಡ್ ಕ್ರಾಸ್ ಘಟಕದ ಪ್ರೆಸಿಡೆಂಟ್ ರೋಸ್ಮೆರಿ ವಂದಿಸಿದರು. ಸ್ಟೆಪಿ ಬಿ. ಪೆರಿಂಜಿಲ್ ಕಾರ್ಯಕ್ರಮ ನಿರೂಪಿಸಿದರು.
Author: UllalaVani
UN NETWORKS ನರಿಂಗಾನ : ವರ್ಕಾಡಿ-ನರಿಂಗಾನ ಗ್ರಾಮದ ಕಾರಣಿಕ ಕ್ಷೇತ್ರ ಶಾಂತಿಪಳಿಕೆ ಶ್ರೀ ಮಹಾಮಾಯ ದೇವಸ್ಥಾನದ ಜೀರ್ಣೋದ್ಧಾರ ಪ್ರಯುಕ್ತ ಶಿಲಾನ್ಯಾಸ ಕಾರ್ಯಕ್ರಮ ಕ್ಷೇತ್ರದ ತಂತ್ರಿ, ವೇದಮೂರ್ತಿ ವರ್ಕಾಡಿ ಶ್ರೀ ರಾಜೇಶ್ ತಾಳಿತ್ತಾಯರ ನೇತೃತ್ವದಲ್ಲಿ ಸೋಮವಾರ ನಡೆಯಿತು. ಮುಖ್ಯ ಅತಿಥಿಯಾಗಿ ಭಾಗವಹಿಸಿದ ದೇರಳಕಟ್ಟೆಯ ವಿದ್ಯಾರತ್ನ ಆಂಗ್ಲ ಮಾಧ್ಯಮ ಶಾಲೆಯ ಆಡಳಿತ ನಿರ್ದೇಶಕ ಕೆ. ರವೀಂದ್ರ ಶೆಟ್ಟಿ ಉಳಿದೊಟ್ಟು ಮಾತನಾಡಿ ಒಂದು ದೈವಸ್ಥಾನ, ದೇವಸ್ಥಾನ, ಧಾರ್ಮಿಕ ಮಂದಿರ, ಕ್ಷೇತ್ರ ನಿರ್ಮಾಣವಾಗಬೇಕಾದರೆ ಅದಕ್ಕಾಗಿ ಭಗವದ್ಭಕ್ತರು ಪ್ರಾಮಾಣಿಕವಾಗಿ ಶ್ರದ್ಧಾ ಭಕ್ತಿಯಿಂದ ಒಂದೇ ಮನಸ್ಸಿನಿಂದ ಕರ್ತವ್ಯ ಕಾರ್ಯನಿರ್ವಹಿಸಿದಾಗ ಮಾತ್ರ ಅದು ಕ್ಷಿಪ್ರಗತಿಯಲ್ಲಿ ನೆರವೇರಲು ಸಾಧ್ಯ ಎಂದರು. ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ರಾಮಣ್ಣ ಶೆಟ್ಟಿ ಆಳ್ವರಬೆಟ್ಟು ಮಾತನಾಡಿ ಹತ್ತು ಯುವಕರು ಸಿಕ್ಕರೆ ದೇಶ ಕಟ್ಟುತ್ತೇನೆ ಎಂಬ ವಿವೇಕಾನಂದರ ನುಡಿಯಂತೆ ಶ್ರೀಕ್ಷೇತ್ರದಲ್ಲಿ ಯುವಕರು ಹಾಗೂ ಮಾತೆಯರ ತಂಡ ಸ್ವಯಂ ಸೇವಕರಾಗಿ ಹಗಲಿರುಳು ಸೇವೆ ಸಲ್ಲಿಸುತ್ತಾ, ಕ್ಷೇತ್ರಕ್ಕೆ ಬೇಕಾದ ಪರಿಕರಗಳ ಸಂಗ್ರಹಕ್ಕೆ ಬಹಳಷ್ಟು ಕೊಡುಗೆ ನೀಡುವ ಮೂಲಕ ಕ್ಷೇತ್ರ ನಿರ್ಮಾಣದ ಕನಸು ನನಸಾಗುತ್ತಿದೆ…
UN NETWORKS ಮಂಗಳೂರು: ದ.ಕ. ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ -ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿರುವ ಕಾಂಗ್ರೆಸ್ ಯುವ ನಾಯಕ ಮಿಥುನ್ ರೈ ಯವರು ಇಂದು ನಾಮಪತ್ರ ಸಲ್ಲಿಸಿದ್ದಾರೆ.ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳಾದ ಶಶಿಕಾಂತ್ ಸೆಂಥಿಲ್ ನಾಮಪತ್ರವನ್ನು ಸ್ವೀಕರಿಸಿದರು. ಮಿಥುನ್ ರೈ ಜೊತೆ ಉಸ್ತುವಾರಿ ಸಚಿವರಾದ ಯು.ಟಿ.ಖಾದರ್, ಕಾಂಗ್ರೆಸ್ ಪಕ್ಷದ ಮುಖಂಡರಾದ ಜನಾರ್ದನ ಪೂಜಾರಿ, ರಮಾನಾಥ ರೈ, , ಜೆಡಿಎಸ್ ಮುಖಂಡ ಅಮರನಾಥ ಶೆಟ್ಟಿ ಉಪಸ್ಥಿತರಿದ್ದರು.
UN NETWORKS ಉಳ್ಳಾಲ : ಎಸ್.ಎಸ್.ಎಫ್ ಉಳ್ಳಾಲ ಡಿವಿಸನ್, ಎಸ್.ಎಸ್.ಎಫ್ ದ.ಕ. ಜಿಲ್ಲಾ ಬ್ಲಡ್ ಸೈಬೋ, ಎಸ್.ಎಸ್.ಎಫ್ ಉಳ್ಳಾಲ ಸೆಕ್ಟರ್, ಎಸ್.ಎಸ್.ಎಫ್ ಮುಕ್ಕಚ್ಚೇರಿ ಯುನಿಟ್ ಇದರ ಆಶ್ರಯದಲ್ಲಿ ಕೆ.ಎಮ್.ಸಿ. ಆಸ್ಪತ್ರೆ ಇದರ ಸಹಬಾಗಿತ್ವದಲ್ಲಿ ಬೃಹತ್ ರಕ್ತದಾನ ಶಿಬಿರ ಮುಕ್ಕಚ್ಚೇರಿ ಜಂಕ್ಷನ್ ನಲ್ಲಿ ನಡೆಯಿತು. ಕಾರ್ಯಕ್ರಮವನ್ನು ದ.ಕ.ಜಿಲ್ಲಾ ಎಸ್.ಎಸ್.ಎಫ್ ಉಪಾಧ್ಯಕ್ಷ ಮುನೀರ್ ಅಹ್ಮದ್ ಕಾಮಿಲ್ ಸಖಾಫಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಎಸ್.ಎಸ್.ಎಫ್ ಕಾರ್ಯಕರ್ತರು ಹಮ್ಮಿ ಕೊಳ್ಳುತ್ತಿರುವ ಕಾರ್ಯಕ್ರಮವು ಜಾತಿ ಮತ ಬೇದವಿಲ್ಲದೆ ಎಲ್ಲಾ ರೋಗಿಗಳಿಗೂ ಅವಶ್ಯಕತೆ ಇರುವ ರಕ್ತವನ್ನು ನೀಡಿ ಮಾನವೀಯತೆಯ ಸಂದೇಶವನ್ನು ಇಡೀ ಕರ್ನಾಕ ದಾಂದ್ಯಂತ ಹಬ್ಬುತ್ತಿರುವ ಕಾರ್ಯವು ಶ್ಲಾಘನೀಯ ಕಾರ್ಯಕ್ರಮವಾಗಿದೆ. ಜಿಲ್ಲೆಯ 11 ಡಿವಿಸನ್ ಮತ್ತು ಸೆಕ್ಟರ್ ಗಳಲ್ಲಿ ನಡೆದ ಕಾರ್ಯಕ್ರಮದಲ್ಲಿ 4,500 ಯುನಿಟ್ ಗಿಂತಲೂ ಅಧಿಕ ರಕ್ತ ಶೇಖರಣೆ ಮಾಡಲು ಬ್ಲಡ್ ಸೈಬೋ ದಿಂದ ಸಾದ್ಯವಾಗಿದೆ ಎಂದರು. ಉಳ್ಳಾಲ ಸೆಕ್ಟರ್ ಅಧ್ಯಕ್ಷ ಶಬೀರ್ ಪೇಟೆ ಕಾರ್ಯಕ್ರಮದ ಅಧ್ಯಕ್ಷತೆವಹಿಸಿದರು, ಮುಕ್ಕಚ್ಚೇರಿ ಜುಮಾ ಮಸೀದಿ ಖತೀಬರಾದ ಝೈದ್-ಬಾ-ಅಹ್ಸನ್ ದುಆ ನೆರವೇರಿಸಿದರು.…
UN NETWORKS ಮಂಗಳೂರು : ಲೋಕಸಭಾ ಚುನಾವಣೆಗೆ ಬಿಜೆಪಿ ಅಭ್ಯರ್ಥಿ ನಳಿನ್ ಕುಮಾರ್ ಕಟೀಲ್ ರವರು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳಾದ ಶಶಿಕಾಂತ್ ಸೆಂಥಿಲ್ ರವರಿಗೆ ತಮ್ಮ ನಾಮಪತ್ರವನ್ನು ಸಲ್ಲಿಸಿದರು. ನಾಮಪತ್ರ ಸಲ್ಲಿಸುವ ಮುನ್ನ ಬಂಟ್ಸ್ ಹಾಸ್ಟೆಲ್ ಬಳಿ ಇರುವ ಬಿಜೆಪಿ ಚುನಾವಣಾ ಕಾರ್ಯಾಲಯವನ್ನು ಅವರು ಉದ್ಘಾಟಿಸಿದರು.
UN NETWORKS ಮಂಗಳೂರು : ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರ ಕದನ ಕುತೂಹಕ್ಕೆ ಕಾರಣವಾಗುತ್ತಿದೆ. ದಿನಕ್ಕೊಂದರಂತೆ ಟ್ವಿಸ್ಟ್ ಗಳು ಕ್ಷೇತ್ರದಲ್ಲಿ ಕಾಣುತ್ತಿವೆ. ಈಗಾಗಲೇ ನಾಮಪತ್ರ ಸಲ್ಲಿಕೆಗೆ ಅವಕಾಶ ಕಲ್ಪಿಸಲಾಗಿದ್ದು, ಶುಕ್ರವಾರದಂದು ಮತ್ತೆ ಎರಡು ನಾಮಪತ್ರಗಳು ಸಲ್ಲಿಕೆಯಾಗಿವೆ.ಉತ್ತಮ ಪ್ರಜಾಕೀಯ ಪಕ್ಷದಿಂದ ವಿಜಯ ಶ್ರೀನಿವಾಸ ಮತ್ತು ಪಕ್ಷೇತರ ಅಭ್ಯರ್ಥಿಯಾಗಿ ದೀಪಕ್ ರಾಜೇಶ್ ಕುವೆಲ್ಲೋ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಈ ಮೂಲಕ ಮಂಗಳೂರು ಕ್ಷೇತ್ರದಿಂದ ಇದುವರೆಗೆ ಮೂವರು ನಾಮಪತ್ರ ಸಲ್ಲಿಸಿದಂತಾಗಿದೆ. ನಾಮಪತ್ರ ಸಲ್ಲಿಕೆಗೆ ಘೋಷಣೆ ಮಾಡಲಾದ ಮೊದಲ ದಿನದಂದೇ ಲೋಕತಾಂತ್ರಿಕ ಜನತಾ ದಳ ಪಕ್ಷದ ಅಭ್ಯರ್ಥಿಯಾಗಿ ಸುಪ್ರೀತ್ ಪೂಜಾರಿ ನಾಮಪತ್ರ ಸಲ್ಲಿಸಿದ್ದರು. ಬಳಿಕದ ಎರಡು ದಿನಗಳು ನಾಮಪತ್ರ ಸಲ್ಲಿಕೆಯಿಂದ ಬಿಡುವು ಪಡೆದುಕೊಂಡಿದ್ದವು. ಎರಡು ದಿನಗಳಲ್ಲಿ ಯಾವುದೇ ನಾಮಪತ್ರ ಸಲ್ಲಿಕೆಯಾಗಿರಲಿಲ್ಲ. ಆದರೆ ಮಾರ್ಚ್ 22ರ ಶುಕ್ರವಾರದಂದು ಎರಡು ನಾಮಪತ್ರಗಳು ಸಲ್ಲಿಕೆಯಾಗಿವೆ. ಇನ್ನು ನಾಮಪತ್ರ ಸಲ್ಲಿಕೆಗೆ ನಾಲ್ಕು ದಿನಗಳು ಬಾಕಿಯಿದ್ದು, ಮಾರ್ಚ್ 26ರಂದು ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದೆ.
UN NETWORKS ತೊಕ್ಕೊಟ್ಟು : ಎಸ್ಸೆಸ್ಸೆಫ್ ತೊಕ್ಕೊಟ್ಟು ಸೆಕ್ಟರ್ ವ್ಯಾಪ್ತಿಗೊಳಪಡುವ ಎಲ್ಲಾ ಶಾಖೆಗಳ ಪ್ರಧಾನ ಕಾರ್ಯದರ್ಶಿ ಹಾಗೂ ಶಾಖಾ ಉಸ್ತುವಾರಿಗಳಿಗೆ ‘ಸಂಘ ಸ್ಫೂರ್ತಿ ಕಾರ್ಯಾಗಾರ’ವು ಮಾರ್ಚ್ 22ರಂದು ಸೆಕ್ಟರ್ ಕಚೇರಿಯಲ್ಲಿ ನಡೆಯಿತು. ರಾಜ್ಯ ವಿಸ್ಡಂ ಸಮಿತಿಯ ಕನ್ವೀನರ್ ಮುಸ್ತಫಾ ಮಾಸ್ಟರ್ ಉಳ್ಳಾಲ ಶಾಖೆಯ ಕಡತಗಳ ನಿಭಾಯಿಸುವಿಕೆಯ ಬಗ್ಗೆ ಮಾಹಿತಿ ನೀಡಿದರು.ಈ ಸಂದರ್ಭದಲ್ಲಿ ಸೆಕ್ಟರ್ ಕೋಶಾಧಿಕಾರಿ ಶೌಕತ್ ಪಟ್ಲ, ರೈಟೀಂ ಟ್ಯೂಟರ್ ಇಮ್ರಾನ್ ಸ್ವಲಾತ್ ನಗರ, ಕಾರ್ಯದರ್ಶಿ ಶಫೀಕ್ ಅಳೇಕಲ, ಉಳಿದಂತೆ ಸೆಕ್ಟರ್ ಹಾಗೂ ಶಾಖೆಯ ನಾಯಕರುಗಳು ಭಾಗವಹಿಸಿದ್ದರು. ಸೆಕ್ಟರ್ ಪ್ರಧಾನ ಕಾರ್ಯದರ್ಶಿ ಅನ್ಸಾರ್ ಅಳೇಕಲ ಸ್ವಾಗತಿಸಿ, ವಂದಿಸಿದರು.
UN NETWORKS ದೇರಳಕಟ್ಟೆ: ರೋಗಿಗಳಿಗೆ ಸಹಾಯಕವಾಗುವ ರೀತಿಯಲ್ಲಿ ಕೆ.ಎಸ್. ಹೆಗ್ಡೆ ಆಸ್ಪತ್ರೆಯಲ್ಲಿ ತೆರೆಯಲಾದ ನೂತನ ಚಿಕಿತ್ಸಾ ಘಟಕದ ಮೂಲಕ ಕ್ಲಪ್ತ ಸಮಯದಲ್ಲಿರೋಗಿಗಳಿಗೆ ಸೇವೆ ದೊರಕುವಂತಾಗಲಿ. ನಿಟ್ಟೆ ವಿಶ್ವವಿದ್ಯಾಲಯದ ಈ ಸೇವೆ ಮನಮುಟ್ಟುವ ಕಾರ್ಯವಾಗಿದ್ದು ಆ ಮೂಲಕ ಪದವೀಧರರಿಗೆ ಕೌಶಲ್ಯ ವೃದ್ಧೀಗೆ ಅವಕಾಶ ಕೊಟ್ಟಂತಾಗಿದೆ ಎಂದು ಬೆಂಗಳೂರಿನ ನಿಮ್ಹಾನ್ಸ್‍ನ ನಿರ್ದೇಶಕ, ಇಂಡಿಯನ್ ಮೆಡಿಕಲ್ ಕೌನ್ಸಿಲ್ ಬೋರ್ಡ್ ಆಫ್ ಗವರ್ನರ್ಸ್ ಸದಸ್ಯ ಡಾ. ಗಂಗಾಧರ್ ಹೇಳಿದರು. ದೇರಳಕಟ್ಟೆ ನಿಟ್ಟೆ ಪರಿಗಣಿಸಲಾಗಿರುವ ವಿವಿಯ ಅಧೀನದ ಕೆ.ಎಸ್. ಹೆಗ್ಡೆ ಆಸ್ಪತ್ರೆಯಲ್ಲಿ ನೂತನವಾಗಿ ಆರಂಭಿಸಲಾದ ಎನ್‍ಸಿಐಯು, ಪಿಐಸಿಯು, ಸುಟ್ಟ ಗಾಯ ಚಿಕಿತ್ಸಾ ಘಟಕ ಹಾಗೂ ಡಾ. ಶಾಂತಾರಾಮ ಶೆಟ್ಟಿ ಟಿಶ್ಯೂ ಬ್ಯಾಂಕ್ ಉದ್ಘಾಟಿಸಿ ಅವರು ಮಾತನಾಡಿದರು.ದೇಶದಲ್ಲಿ ಸೂಪರ್ ಸ್ಪೆಷಾಲಿಟಿ ವೈದ್ಯರ ಸೇವೆ ಸಾಕಷ್ಟು ಲಭ್ಯವಿದ್ದರೂ ಸಾಮಾನ್ಯ ಕಾಯಿಲೆ, ಸಾಮಾನ್ಯ ಜನರ ರೋಗಕ್ಕೆ ಚಿಕಿತ್ಸೆ ಕೊಡುವ ವೈದ್ಯರ ಸಂಖ್ಯೆ ಕಡಿಮೆ ಇದ್ದು ಆ ನಿಟ್ಟಿನಲ್ಲಿ ಗಮನ ಹರಿಸಬೇಕಿದೆ ಎಂದು ದೇರಳಕಟ್ಟೆಯ ನಿಟ್ಟೆ ಪರಿಗಣಿಸಲಾಗಿರುವ ವಿಶ್ವವಿದ್ಯಾಲಯದ ಕುಲಾಧಿಪತಿ ಎನ್. ವಿನಯ್ ಹೆಗ್ಡೆ…
UN NETWORKS ದೇರಳಕಟ್ಟೆ: ಪದವಿ ಪ್ರದಾನವಾದಾಗ ಪದವೀಧರರಿಗಿಂತಲೂ ಪೋಷಕರು ತಮ್ಮ ಅದೆಷ್ಟೋ ವರ್ಷಗಳ ಶ್ರಮಕ್ಕೆ ಸಾರ್ಥಕ್ಯ ಕಾಣುವಂತಹ ದಿನವಾಗಿದ್ದು, ಪದವೀಧರು ಉನ್ನತ ಶಿಕ್ಷಣ ಹಾಗೆಯೇ ವೃತ್ತಿ ಬದುಕಿನಲ್ಲಿ ಶಿಸ್ತು ಹಾಗೂ ಮಾನವೀಯ ಮೌಲ್ಯಗಳನ್ನು ಕಾಪಾಡುತ್ತಾ ಪೋಷಕರು, ಶಿಕ್ಷಣ ನೀಡಿದ ಗುರುಗಳು ಹಾಗೂ ಶಿಕ್ಷಣ ಪಡೆದ ವಿದ್ಯಾಸಂಸ್ಥೆಯ ಹೆಸರು ಬೆಳಗಿಸುವ ಕಾರ್ಯ ಮಾಡಬೇಕು ಎಂದು ಮಂಗಳೂರು ವಿವಿಯ ಕುಲಸಚಿವ ಪ್ರೊ.ಎ.ಎಂ. ಖಾನ್ ಹೇಳಿದರು. ದೇರಳಕಟ್ಟೆಯ ಕೆ.ಎಸ್. ಹೆಗ್ಡೆ ಆಡಿಟೋರಿಯಂನಲ್ಲಿ ಶನಿವಾರ ನಡೆದ ನಿಟ್ಟೆ ಪರಿಗಣಿಸಲಾಗಿರುವ ವಿವಿಯ ಅಧೀನದ ನಿಟ್ಟೆ ವಾಕ್ ಮತ್ತು ಶ್ರವಣ ಕಾಲೇಜು ಒಂಬತ್ತನೇ ಪದವಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು. ವಾಕ್ ಮತ್ತು ಶ್ರವಣ ಸಂಬಂಧಿ ಶಿಕ್ಷಣ ಪಡೆಯುವುದರಿಂದ ಅಶಕ್ತರ ಸೇವೆ ಮಾಡುವಂತಹ ಅವಕಾಶ ಲಭಿಸುತ್ತದೆ. ಹಾಗೆಯೇ ಪದವೀಧರರು ತಾವು ಗೈದ ಪ್ರತಿಜ್ಞೆಗೆ ಬದ್ಧವಾಗಿ ಬದುಕಬೇಕು. ಡಾ. ಎ.ಪಿ.ಜೆ. ಕಲಾಂ, ವಿವೇಕಾನಂದ ಅವರಂತೆ ಶಾಶ್ವತವಾದ ವ್ಯಕ್ತಿತ್ವ ಉಳಿಸಿಕೊಳ್ಳುವತ್ತ ಕಠಿಣ ಶ್ರಮ ವಹಿಸಿ ಉದ್ದೇಶಿತ ಗುರಿ ತಲುಪಬೇಕು. ಸಮಾಜದಲ್ಲಿ ಅಶಕ್ತರಿಗೆ ಸೇವೆ…
UN NETWORKS ಉಳ್ಳಾಲ : ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಷನ್, ಶ್ರೀಮತಿ ಟಿ.ವಿಮಲಾ ವಿ. ಪೈ ಪ್ರಾಯೋಜಿತ, ರಾಷ್ಟ್ರಕವಿ ಗೋವಿಂದ ಪೈ ಸ್ಮಾರಕ ಈ ಸಾಲಿನ ಪ್ರಶಸ್ತಿಯನ್ನು ಜನಪದ ವಿದ್ವಾಂಸ , ಯಕ್ಷಗಾನ ಸಂಶೋಧಕ , ಸಾಹಿತಿ ಡಾ. ಅಮೃತ್ ಸೋಮೇಶ್ವರ್ ಅವರಿಗೆ ತಮ್ಮ ಸ್ವಗೃಹ ಸೋಮೇಶ್ವರದ `ಒಲುಮೆ’ಯಲ್ಲಿ ಶನಿವಾರ ಪ್ರದಾನ ಮಾಡಲಾಯಿತು. ಪ್ರಶಸ್ತಿ ಪ್ರಧಾನ ಮಾಡಿದ ಮಾಹೆ ಸಹಕುಲಾಧಿಪತಿ ಡಾ.ಹೆಚ್,ಎಸ್ ಬಲ್ಲಳ್ ಮಾತನಾಡಿ , ಹಲವು ಕ್ಷೇತ್ರಗಳಲ್ಲಿ ಸಾಧನೆಗೈದಿರುವ ಡಾ. ಸೋಮೇಶ್ವರ ಅವರ ಸಾಹಿತ್ಯ ಸೇವೆಯನ್ನು ಗುರುತಿಸಿ ಬಹಳಷ್ಟು ಪ್ರಶಸ್ತಿ ಸಂದಿದ್ದರೂ, ರಾಷ್ಟ್ರಕವಿ ಗೋವಿಂದ ಪೈ ಸ್ಮಾರಕ ಪ್ರಶಸ್ತಿ ಉಲ್ಲೇಖನೀಯ. ಈ ಮೂಲಕ ಪ್ರಶಸ್ತಿಯ ಗರಿಮೆಯನ್ನು ಹೆಚ್ಚಿಸಿದೆ. ಮಾಹೆ ಕೇವಲ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಕ್ಕೆ ಮಾತ್ರ ಗಮನಹರಿಸದೆ ಕಲೆ ಮತ್ತು ಸಾಹಿತ್ಯ ಕ್ಷೇತ್ರವನ್ನು ಬೆಳೆಸುವ ಉದ್ದೇಶದಿಂದ ಕಲೆ, ಸಾಹಿತ್ಯ ಕ್ಷೇತ್ರದ ಸಾಧಕರನ್ನು ಗುರುತಿಸಿ ಟಿ.ವಿ ಮೋಹನದಾಸ್ ಪೈ ಪ್ರಾಯೋಜಿತ ಶ್ರೀಮತಿ ಟಿ.ವಿಮಲಾ ವಿ. ಪೈ ಅವರ ಹೆಸರಿನಲ್ಲಿ…

