UN NETWORKS ಕೊಣಾಜೆ: ನಮ್ಮಲ್ಲಿ ಕೌಶಲ್ಯವನ್ನು ಬೆಳೆಸುವ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಿ ಮುನ್ನಡೆದರೆ ಭವಿಷ್ಯದಲ್ಲಿ ಉತ್ತಮ ಬದುಕನ್ನು ಕಟ್ಟಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಪಿ.ಎ.ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲರಾದ ಡಾ.ಅಬ್ದುಲ್ ಶರೀಫ್ ಅವರು ಅಭಿಪ್ರಾಯ ಪಟ್ಟರು. ಅವರು ಮಂಗಳವಾರ ಕೊಣಾಜೆ ಸಮೀಪದ ನಡುಪದವಿನ ಪಿ.ಎ.ಪಾಲಿಟೆಕ್ನಿಕ್ ಕಾಲೇಜಿನ ವಾರ್ಷಿಕೋತ್ಸವ `ಎಕ್ಸ್ ಫರೇಂಝಾ’ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಕೌಶಲ ಅಭಿವೃದ್ಧಿಗೆ ಸರಕಾರವೂ ಇಂದು ಹೆಚ್ಚಿನ ಪ್ರೋತ್ಸಾಹ ನೀಡುತ್ತಿದೆ. ಶಿಕ್ಷಣ ಸಂಸ್ಥೆಗಳು ಮತ್ತು ವಿದ್ಯಾರ್ಥಿಗಳು ಇಂತಹ ಅವಕಾಶಗಳನ್ನು ಬಳಸಿಕೊಳ್ಳಬೇಕು. ಪಿ.ಎ.ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಕೌಶಲ ಅಭಿವೃದ್ದಿಗೆ ಸಂಬಂಧಿಸಿದಂತೆ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಅಲ್ಲದೆ ಇಲ್ಲಿ ಶಿಕ್ಷಣ ಪಡೆದ ವಿದ್ಯಾರ್ಥಿಗಳು ಹೆಚ್ಚಿನ ಉದ್ಯೋಗಾವಕಾಶವನ್ನು ಪಡೆಯುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದು ಹೇಳಿದರು. ಪಿ.ಎ.ಇಂಜಿನಿಯರಿಂಗ್ ಕಾಲೇಜಿನ ಫಾರ್ಮಸಿ ವಿಭಾಗದ ಪ್ರಾಂಶುಪಾಲರಾದ ಡಾ.ಸಲೀಮುಲ್ಲಾ ಖಾನ್ ಮಾತನಾಡಿ, ಯುವ ಸಮುದಾಯ ದೇಶದ ಸಂಪತ್ತು ಆಗಿದ್ದಾರೆ. ವಿದ್ಯಾರ್ಥಿ ಜೀವನದಲ್ಲೇ ಉತ್ತಮ ಅವಕಾಶಗಳನ್ನು ಬಳಸಿಕೊಂಡು ಮುನ್ನಡೆಯಬೇಕು ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಪಿ.ಎ.ಕಾಲೇಜು ಎಂಬಿಎ ವಿಭಾಗದ ಮುಖ್ಯಸ್ಥರಾದ…
Author: UllalaVani
UN NETWORKS ತೊಕ್ಕೊಟ್ಟು : ಆರ್.ವಿ.ಪ್ರೆಂಡ್ಸ್ ತೊಕ್ಕೊಟ್ಟು ಇದರ ವತಿಯಿಂದ, ದ.ಕ.ಜಿಲ್ಲಾ ಅಮೆಚೂರ್ ಕಬ್ಬಡ್ಡಿ ಎಸೋಸಿಯೇಶನ್ ನ ಸಹಯೋಗದಲ್ಲಿ ದ.ಕ.ಜಿಲ್ಲಾ ಮಟ್ಟದ ಮುಕ್ತ ಪ್ರೋ ಕಬ್ಬಡ್ಡಿ ಪಂದ್ಯಾಟ ತೊಕ್ಕೊಟ್ಟಿನ ಬಿ.ಆರ್.ಅಂಬೇಡ್ಕರ್ ಮೈದಾನದಲ್ಲಿ ಭಾನುವಾರ ನಡೆಯಿತು. ಕಬ್ಬಡ್ಡಿ ಪಂದ್ಯಾಟದ ಉದ್ಘಾಟನೆಯನ್ನು ಚಿರುಂಭ ಭಗವತಿ ಕ್ಷೇತ್ರದ ಅರ್ಚಕ ಮಂಜಪ್ಪ ಕಾರ್ನವರ್, ಕ್ರೀಡಾಂಗಣ ಉದ್ಘಾಟನೆಯನ್ನು ವೀರ ಮಾರುತಿ ವ್ಯಾಯಾಮ ಶಾಲಾ ಶಿಕ್ಷಕ ವಿಠಲ್ ಶ್ರೀಯಾನ್ ನೆರವೇರಿಸಿದರು. ಸಮಾರೋಪ ಸಮಾರಂಭದ ಅದ್ಯಕ್ಷತೆಯನ್ನು ಚಿರುಂಭ ಭಗವತಿ ಕ್ಷೇತ್ರದ ಅದ್ಯಕ್ಷರಾದ ಚಂದ್ರಹಾಸ್ ಉಳ್ಳಾಲ್, ಮುಖ್ಯ ಅತಿಥಿಗಳಾಗಿ ದ.ಕ ಜಿಲ್ಲಾ ಅಮೆಚೂರ್ ಕಬ್ಬಡ್ಡಿ ಎಸೋಸಿಯೇಶನ್ ನ ಕಾರ್ಯಾದ್ಯಕ್ಷ ರತನ್ ಕುಮಾರ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಪೂಜಾರಿ, ಉಪಾದ್ಯಕ್ಷರಾದ ಕೆ.ಟಿ.ಸುವರ್ಣ, ಉಳ್ಳಾಲ ಗ್ರಾಮಾಂತರ ಅದ್ಯಕ್ಷರಾದ ಸುರೇಶ್ ಭಟ್ನಗರ, ಯುವ ಜನ ಸೇವಾ ಕ್ರೀಡಾ ಇಲಾಖೆಯ ಉಪನಿರ್ದೇಶಕ ಪ್ರದೀಪ್ ಡಿ ಸೋಜ, ಪುರಸಭೆಯ ಮಾಜಿ ಅದ್ಯಕ್ಷ ಫಾರೂಕ್ ಯು.ಹೆಚ್, ಕುಂಪಲ ಆದಿಶಕ್ತಿ ಕ್ರಿಕೆಟರ್ಸ್ ನ ಅದ್ಯಕ್ಷ ಪ್ರಕಾಶ್ ಕುಂಪಲ, ಗುತ್ತಿಗೆದಾರ ಜಯಂತ್ ಕೊಂಡಾಣ,…
UN NETWORKS ತೊಕ್ಕೊಟ್ಟು : ಎಪ್ರಿಲ್ 18 ರಂದು ನಡೆಯುವ ಲೋಕಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿಲು ಕಾರ್ಯಕರ್ತರು ಶಕ್ತಿಮೀರಿ ಕೆಲಸ ಮಾಡಬೇಕು.ನರೇಂದ್ರ ಮೋದಿಯವರ ಸರಕಾರದ ಸಾಧನೆ, ಬಡಜನರಿಗೆ ನೀಡಿದ ಸವಲತ್ತುಗಳನ್ನು, ಯೋಜನೆಯನ್ನು ಮತದಾರರಿಗೆ ತಿಳಿಸಬೇಕು.ಉಳ್ಳಾಲ ಮಹಾಶಕ್ತಿ ಕೇಂದ್ರದಲ್ಲಿ ಪಕ್ಷಕ್ಕೆ ಅತೀ ಹೆಚ್ಚು ಮತ ಬರುವಂತಾಗಲು ತಂತ್ರ ರೂಪಿಸಬೇಕೆಂದು ಬಿ.ಜೆ.ಪಿ.ಮಂಗಳೂರು ಕ್ಷೇತ್ರದ ಅಧ್ಯಕ್ಷರಾದ ಸಂತೋಷ್ ಕುಮಾರ್ ರೈ ಬೋಳಿಯಾರ್ ಹೇಳಿದರು.ಅವರು ತೊಕ್ಕೊಟಿನ ಬಿ.ಜೆ.ಪಿ. ಕಛೇರಿಯಲ್ಲಿ ಉಳ್ಳಾಲ ಮಹಾ ಶಕ್ತಿಕೇಂದ್ರದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕ್ಷೇತ್ರದ ಪ್ರ.ಕಾರ್ಯದರ್ಶಿ ಮೋಹನ್ ರಾಜ್ ಕೆ.ಆರ್., ಉಪಾಧ್ಯಕ್ಷರಾದ ಯಶವಂತ್ ಅಮೀನ್, ಪ್ರಕಾಶ್ ಸಿಂಫೋನಿ, ಕಾರ್ಯದರ್ಶಿ ಗಳಾದ ರಾಮಕೃಷ್ಣ ಪಟ್ಟೊರಿ, ಹೇಮಂತ್ ಶೆಟ್ಟಿ, ಶಕ್ತಿ ಕೇಂದ್ರದ ಅಧ್ಯಕ್ಷರಾದ ಸುರೇಂದ್ರ ಶೆಟ್ಟಿ, ಪ್ರ.ಕಾರ್ಯದರ್ಶಿ ಪ್ರಶಾಂತ್ ಕಾಪಿಕಾಡ್, ಶಕ್ತಿ ಕೇಂದ್ರದ ಪ್ರಮುಖರು, ನಗರಸಭಾ ಸದಸ್ಯರು ಉಪಸ್ಥಿತರಿದ್ದರು.
UN NETWORKS ತೊಕ್ಕೊಟ್ಟು: ರಾಜ್ಯದ ಮುಖ್ಯಮಂತ್ರಿ ಜಿಲ್ಲೆಯ ಮಹತ್ವಾಕಾಂಶೆ ಯೋಜನೆಯಾಗಿರುವ ಮಣಿಪಾಲದಿಂದ ಕೊಣಾಜೆಗೆ ಶೈಕ್ಷಣಿಕ ಕಾರಿಡಾರ್ ನಿರ್ಮಾಣಕ್ಕೆ ಬಜೆಟಿನಲ್ಲಿ ಅಸ್ತು ನೀಡಿರುವುದು ದೊಡ್ಡ ಸಾಧನೆ. ಈ ಮೂಲಕ ರಾಜ್ಯದ ಸಮ್ಮಿಶ್ರ ಸರಕಾರ ಅಭಿವೃದ್ಧಿಪರ ಕಾರ್ಯಸಾಧನೆಗಳಲ್ಲಿ ಮುಂಚೂಣಿಯಲ್ಲಿರುವುದರಿಂದ ಲೋಕಸಭೆ ಚುನಾವಣೆಯಲ್ಲಿ ಅಭ್ಯರ್ಥಿಗಳು ಜಯಭೇರಿ ಬಾರಿಸಲಿದ್ದಾರೆ ಎಂದು ಜಾತ್ಯಾತೀತ ಜನತಾದಳದ ರಾಜ್ಯ ಉಪಾಧ್ಯಕ್ಷ ಎಂ.ಬಿ ಸದಾಶಿವ ಹೇಳಿದರು. ತೊಕ್ಕೊಟ್ಟುವಿನಲ್ಲಿ ಸೋಮವಾರ ಜಾತ್ಯಾತೀತ ಜನತಾದಳ ಮಂಗಳೂರು ವಿಧಾನಸಭಾ ಕ್ಷೇತ್ರ ಹಮ್ಮಿಕೊಂಡ ಸುದ್ಧಿಗೋಷ್ಠಿಯಲ್ಲಿ ಮಾತನಾಡಿ ಮಣಿಪಾಲದಲ್ಲಿ ಉನ್ನತ ವ್ಯಾಸಾಂಗದ ಕಾಲೇಜುಗಳಿಂದ ಮಂಗಳೂರು ವಿಶ್ವವಿದ್ಯಾನಿಲಯದವರೆಗೆ ಸಂಪರ್ಕ ಕಲ್ಪಿಸುವ ಮೂಲಕ ಜಿಲ್ಲೆಯ ಶೈಕ್ಷಣಿಕ ಅಭಿವೃದ್ಧಿಗೆ ಬಹಳಷ್ಟು ಸಹಕಾರಿಯಾಗಲಿದೆ ಎಂದರು. ರಾಜ್ಯದಲ್ಲಿ ಸಮ್ಮಿಶ್ರ ಸರಕಾರ ಎಂಟು ತಿಂಗಳಲ್ಲಿ ನಡೆಸಿರುವ ಕಾರ್ಯಸಾಧನೆಗಳಿಂದ ರಾಜ್ಯದ ಪ್ರತಿ ಲೋಕಸಭಾ ಸ್ಥಾನಗಳಲ್ಲಿ ಸಮ್ಮಿಶ್ರ ಬೆಂಬಲಿತ ಅಭ್ಯರ್ಥಿಗಳು ಜಯಭೇರಿ ಸಾಧಿಸಲಿದ್ದಾರೆ. ಸಾಮರಸ್ಯ, ಸೌಹಾರ್ದ ಸೃಷ್ಟಿಸುವ ಅನುಭವವುಳ್ಳ ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಕೇಂದ್ರ ಸರಕಾರದ ನೀತಿಗಳಿಂದ ಅತೀ ಹೆಚ್ಚು ಸಾಲಗಾರರು ದೇಶದಲ್ಲಿದ್ದಾರೆ. ಸಿಬಿಐ ಒಡೆದ ಮನೆಯಾಗಿದೆ. ಸರ್ವೋಚ್ಛ ನ್ಯಾಯಾಲಯದ ಪ್ರತಿನಿಧಿಗಳು ಮಾಧ್ಯಮಗಳ…
UN NETWORKS ಮಕ್ಕಾ: ಜಿ ಸಿ ಸಿ ಸುನ್ನಿ ಫ್ರೆಂಡ್ಸ್ ಬನ್ನೂರು ವತಿಯಿಂದ ಖ್ವಾಜಾ ಗರೀಭ್ ನವಾಜ್ ಅಲ್-ಹಿಂದ್ ಅಜ್ಮೀರ್ (ಖ.ಸಿ), ತಾಜುಲ್ ಉಲಮಾ (ಖ.ಸಿ) ಅನುಸ್ಮರಣೆ ಹಾಗೂ ಸ್ವಲಾತ್ ಮಜ್ಲಿಸ್ ಕಾರ್ಯಕ್ರಮ ಜಬಲನ್ನೂರ್ ಮಕ್ಕತುಲ್ ಮುಕರ್ರಮದಲ್ಲಿ ಉಮ್ಮರ್ ಹಾಜಿ ಕರ್ವೇಲ್ ರವರ ಅಧ್ಯಕ್ಷತೆಯಲ್ಲಿ ನಡೆಯಿತು. ಕಾರ್ಯಕ್ರಮವನ್ನು ಕೆ.ಸಿ.ಎಫ್ ಜಿದ್ದಾ ಝೋನ್ ಅಧ್ಯಕ್ಷರಾದ ಹಾಫಿಲ್ ಉಒ ಸುಲೈಮಾನ್ ಹನೀಫೀ ಉದ್ಘಾಟಿಸಿದರು.ಸ್ವಲಾತ್ ಮಜ್ಲಿಸ್ ಗೆ ನೇತೃತ್ವವನ್ನು ವಹಿಸಿ ಪ್ರಾಸ್ತಾವಿಕವಾಗಿ ಮಾತನಾಡಿದ ಸಯ್ಯಿದ್ ಇಂಬಿಚ್ಚಿಕೋಯ ಜಮುಲ್ಲೈಲಿ ತಂಙಳ್ ಕಾಟುಕುಕ್ಕೆ ಯಾವುದೇ ಒಂದು ಸಂಘಟನೆಯು, ಯಶಸ್ವಿಯಾಗಿ ಮುನ್ನಡೆಯಲು ಅದರ ಪ್ರತಿಯೊಬ್ಬ ಸದಸ್ಯರ ಪರಿಶ್ರಮವು ಅತ್ಯಗತ್ಯ ಪ್ರತಿಯೊಬ್ಬ ಸದಸ್ಯ ಕಾರ್ಯಚರಿಸಿದರೆ ಮಾತ್ರ ಒಂದು ಸಂಘಟನೆ ಯಶಸ್ವಿಯಾಗಿ ಮುನ್ನಡೆಯುತ್ತದೆ ಎಂದು ತಿಳಿಸಿ, ಜಿ ಸಿ ಸಿ ಸುನ್ನಿ ಫ್ರೆಂಡ್ಸ್ ನಡೆಸುತ್ತಿರುವ ಕಾರ್ಯಗಳನ್ನು ಶ್ಲಾಘಿಸಿದರು.ತ್ವೈಬಾ ಎಜ್ಯುಕೇಶನಲ್ ಸೆಂಟರ್ ಈಶ್ವರಮಂಗಿಲ ಹಾಗೂ ವೈಸ್ ಪ್ರಿನ್ಸಿಪಾಲ್ ಮುಹಿಮ್ಮಾತ್ ಕುರ್’ಆನ್ ರಿಸರ್ಚ್ ಸೆಂಟರ್ ಇದರ ಮುದರ್ರಿಸ್ ಅಬ್ದುಲ್ ಅಝೀಝ್ ಮಿಸ್ಬಾಹಿ ಈಶ್ವರಮಂಗಿಲ ಅನುಸ್ಮರಣಾ ಭಾಷಣ…
UN NETWORKS ಉಳ್ಳಾಲ: ಕೇರಳ ಭಾಗದಿಂದ ಗಾಂಜಾ ಖರೀದಿಸಿ ಮಂಗಳೂರು ಕಡೆಗೆ ಮಾರಾಟ ನಡೆಸಲೆಂದು ತರುತ್ತಿರುವ ಖಚಿತ ಮಾಹಿತಿ ಪಡೆದ ಉಳ್ಳಾಲ ಪೊಲೀಸರು ದ್ವಿಚಕ್ರ ವಾಹನ ಸೇರಿದಂತೆ ಆರೋಪಿಯನ್ನು ಗಡಿಪ್ರದೇಶ ತಲಪಾಡಿಯಿಂದ ಬಂಧಿಸಿದ್ದಾರೆ. ಕೆ.ಸಿ ರೋಡು ನಿವಾಸಿ ಮುನಾವರ್ (32) ಬಂಧಿತ. ಈತನ ಬಳಿಯಿದ್ದ ಒಂದು ಕೆ.ಜಿ 50 ಗ್ರಾಂ ಗಾಂಜಾ ಸಹಿತ ಸಾಗಾಟಕ್ಕೆ ಬಳಸಿದ ಏವಿಯೇಟರ್ ಸ್ಕೂಟರನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಆರೋಪಿತ ಕೇರಳ ಭಾಗದಿಂದ ಗಾಂಜಾ ಖರೀದಿಸಿ ಮಂಗಳೂರು ಕಡೆಯತ್ತ ಮಾರಾಟ ನಡೆಸಲೆಂದು ಸಾಗಾಟ ನಡೆಸುವಾಗ ಬಂಧಿಸಲಾಗಿದೆ. ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಉಳ್ಳಾಲ ಠಾಣಾಧಿಕಾರಿ ಗೋಪಿಕೃಷ್ಣ ಕೆ.ಆರ್ ನೇತೃತ್ವದಲ್ಲಿ ನಡೆದ ದಾಳಿಯಲ್ಲಿ ಎಸ್.ಐ ಗುರುವಪ್ಪ ಕಾಂತಿ ಹಾಗೂ ಸಿಬ್ಬಂದಿಗಳಾದ ದಯಾನಂದ, ಶರೀಫ್, ಪ್ರಶಾಂತ್, ಲಿಂಗರಾಜು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
UN NETWORKS ಸೌದಿ ಅರೇಬಿಯಾ : ಕೆಸಿಎಫ್ ಮದೀನಾ ಮುನವ್ವರ ಸೆಕ್ಟರ್ ನ ಮಹಾಸಭೆಯು ಇತ್ತೀಚೆಗೆ ಮದೀನಾ ಮುನವ್ವರದ ಕೆಸಿಎಫ್ ಭವನದಲ್ಲಿ ನಡೆಯಿತು. ಇಸ್ಮಾಯಿಲ್ ಸಅಃದಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಸಾಂತ್ವನ ಪ್ರವರ್ತನೆಗಳಲ್ಲಿ ಮದೀನಾ ಮುನವ್ವರದ ಕೆಸಿಎಫ್ ಕಾರ್ಯಕರ್ತರ ಕೆಲಸ ಶ್ಲಾಘನೀಯವಾಗಿದೆ. ನಬಿ ಸ್ವಲ್ಲಲ್ಲಾಹು ಅಲೈಹಿವಸಲ್ಲಂ ಹಾಗೂ ಸ್ವಹಾಬಿಗಳ ಚರ್ಯೆಯನ್ನು ಪಾಲಿಸುವ ಅಹ್ಲ್ ಸುನ್ನತ್ ಜಮಾತ್ ಅಡಿಸ್ಥಾನದಲ್ಲಿ ಉತ್ತಮ ನಿಯ್ಯತ್ ನೊಂದಿಗೆ ಕಾರ್ಯಕರ್ತರು ಕೆಲಸವನ್ನು ಮಾಡಬೇಕೆಂದರು. ಮದೀನಾ ಸೆಕ್ಟರ್ ಕಾರ್ಯದರ್ಶಿ ಅಶ್ರಫ್ ದೇರಳಕಟ್ಟೆ ವಾರ್ಷಿಕ ವರದಿ ಹಾಗೂ ಲೆಕ್ಕ ಪತ್ರ ಮಂಡಿಸಿದರು. ಕಾರ್ಯಕ್ರಮ ದ ಅಧ್ಯಕ್ಷತೆ ವಹಿಸಿದ್ದ ಕೆಸಿಎಫ್ ಮದೀನಾ ಸೆಕ್ಟರ್ ಅಧ್ಯಕ್ಷ, ಅಶ್ರಫ್ ಸಖಾಫಿ ನೂಜಿ ಮಾತನಾಡಿ ಧರ್ಮ ಪ್ರಬೋಧನೆ ಪ್ರತಿಯೊಬ್ಬ ಮುಸ್ಲಿಮನ ಕರ್ತವ್ಯವಾಗಿದ್ದು, ಒಬ್ಬ ತಾನು ಉತ್ತಮನಾಗುದರೊಂದಿಗೆ ಇತರರನ್ನು ಉತ್ತಮಗೊಳಿಸಲು ಪ್ರಯತ್ನಿಸಬೇಕು. ನಮ್ಮಿಂದಾಗಿ ಒಬ್ಬ ತಪ್ಪಿನಿಂದ ದೂರ ಸರಿದಲ್ಲಿ ಇಹ-ಪರ ಲೋಕದಲ್ಲಿರುವ ಎಲ್ಲದಕ್ಕಿಂತಲೂ ಉತ್ತಮವಾಗಿದೆ ಎಂದು ನಬಿ ಸ.ಅ ತಿಳಿಸಿದ್ದು, ಹಬೀಬರ ಸನ್ನಿಧಿಯಲ್ಲಿ ಜೀವಿಸುವುದು ನಮ್ಮ ಭಾಗ್ಯ ವಾಗಿದೆ. ಈ ಅವಕಾಶವನ್ನು…
UN NETWORKS ಪಜೀರ್ : ಸಿ.ಒ.ಡಿ.ಪಿ. ಮಂಗಳೂರು ಪ್ರವರ್ತಿತ ಮಹಾಸಂಘದ ಆಶ್ರಯದಲ್ಲಿ ವಿಶ್ವ ಮಹಿಳಾ ದಿನಾಚರಣೆಯ ಪ್ರಯುಕ್ತ ಪರಿಸರ ಸ್ವಚ್ಛತಾ ಕಾರ್ಯಕ್ರಮ ಪಜೀರ್ ನಲ್ಲಿ ಶುಕ್ರವಾರ ನಡೆಯಿತು. ಪಜೀರ್ ಮೆರ್ಸಿಯಮ್ಮ ಮಾತಾ ದೇವಾಲಯದ ಧರ್ಮಗುರು ವಂ. ಸುನಿಲ್ ವೇಗಸ್ ಅವರು ಪ್ಲಾಸ್ಟಿಕ್ ಬ್ರಿಕ್ ಬೆಂಚನ್ನು ಉದ್ಘಾಟಿಸುವ ಮೂಲಕ ಚಾಲನೆ ನೀಡಿದರು.ಫ್ರಾನ್ಸಿಸ್ ಅಸ್ಸಿಸಿ ದಲ್ಮೇಡ ಮಾತನಾಡಿ, ಮಹಿಳೆ ಇಲ್ಲದ ಮನೆ ವ್ಯವಸ್ಥಿತವಾಗಿರಲು ಸಾಧ್ಯವಿಲ್ಲ. ಮಹಿಳೆಗೆ ಶಿಕ್ಷಣ ನೀಡಿದರೆ ಇಡೀ ಕುಟುಂಬಕ್ಕೆ ಹೋಗುತ್ತದೆ. ಪುರುಷನಿಗೆ ಶಿಕ್ಷಣ ನೀಡಿದರೆ ಅದು ಒಬ್ಬರಲ್ಲೇ ಉಳಿಯುತ್ತದೆ ಎಂದರು.ಸಂತ ಜೋಸೆಫ್ ಶಾಲಾ ಮುಖ್ಯ ಶಿಕ್ಷಕಿ ಸಿಸ್ಟರ್ ಇನೆಟ್ ಸಿಸ್ಟರ್ ವಿಜಯ್, ಪಜೀರ್ ಗ್ರಾಮ ಪಂಚಾಯಿತಿ ಸದಸ್ಯರಾದ ಶಾಫಿ ಮತ್ತು ಫ್ಲೋರಿನ್, ಸಿಒಡಿಪಿ ಸಂಯೋಜಕಿ ರೀಟಾ ಡಿಸೋಜ ಹಾಗೂ ಕಾರ್ಯಕರ್ತೆ ಗುಲಾಬಿ ಮೊಂತೆರೋ ಉಪಸ್ಥಿತರಿದ್ದರು. ಬೆನಾರ್ಡ್ ಸ್ವಾಗತಿಸಿದರು. ಸ್ನೇಹಾ ಮಹಾಸಂಘದ ಅಧ್ಯಕ್ಷೆ ಲವಿನದಾಂತಿ ಕಾರ್ಯಕ್ರಮ ನಿರೂಪಿಸಿದರು.
UN NETWORKS ದೇರಳಕಟ್ಟೆ : ಪ್ರಸ್ತುತ ಸಮಾಜದಲ್ಲಿ ಮಾನವೀಯ ಮೌಲ್ಯಗಳು ಬೆಲೆ ಕಳೆದುಕೊಂಡಿದೆ. ಮನುಷ್ಯ ತೃಪ್ತಿ ಹಾಗೂ ಮಾನವೀಯ ಮೌಲ್ಯಗಳಿಗೆ ಮಹತ್ವ ಕೊಡದಿದ್ದರೆ ಸೌಹಾರ್ದಯುತ ಸಮಾಜವನ್ನು ನಾವು ಖಂಡಿತ ನಿರೀಕ್ಷಿಸಲು ಸಾಧ್ಯವಿಲ್ಲ ಎಂದು ನಿವೃತ್ತ ನ್ಯಾಯಮೂರ್ತಿ, ಕರ್ನಾಟಕ ಮಾಜಿ ಲೋಕಾಯುಕ್ತ ಎನ್. ಸಂತೋಷ್ ಹೆಗ್ಡೆ ಅಭಿಪ್ರಾಯಪಟ್ಟರು. ನಿಟ್ಟೆ ಎಜ್ಯುಕೇಶನ್ ಟ್ರಸ್ಟ್ ಹಾಗೂ ದೇರಳಕಟ್ಟೆಯ ನಿಟ್ಟೆ ಪರಿಗಣಿಸಲಾಗಿರುವ ವಿಶ್ವವಿದ್ಯಾಲಯದ ಸಹಭಾಗಿತ್ವದಲ್ಲಿ ದೇರಳಕಟ್ಟೆಯ ನಿಟ್ಟೆ ವಿವಿ ಕ್ಯಾಂಪಸ್‍ನ ಕೆ.ಎಸ್. ಹೆಗ್ಡೆ ಆಡಿಟೋರಿಯಂನಲ್ಲಿ ಶನಿವಾರ ನಡೆದ ಡಾ. ನಿಟ್ಟೆ ಶಂಕರ ಅಡ್ಯಂತಾಯ ಸ್ಮಾರಕ ಅತ್ಯುತ್ತಮ ಶಾಲಾ ಪ್ರಶಸ್ತಿ-2018 ಪ್ರಶಸ್ತಿ ವಿತರಣೆ ಸಮಾರಂಭದಲ್ಲಿ ಅವರು ಪ್ರಶಸ್ತಿ ವಿತರಿಸಿ ಮಾತನಾಡಿದರು.ನ್ಯಾಯಮೂರ್ತಿಯಾಗಿದ್ದ ಅವಧಿಯಲ್ಲಿ ತಿಳಿದುಕೊಂಡದ್ದಕ್ಕಿಂತ ಹೆಚ್ಚು ಕರ್ನಾಟಕ ಲೋಕಾಯುಕ್ತನಾದ ಬಳಿಕ ಈ ಸಮಾಜದಲ್ಲಿ ಬಹಳಷ್ಟು ಅನ್ಯಾಯ ನಡೆಯುವುದು ಗಮನಕ್ಕೆ ಬಂತು. ಶ್ರೀಮಂತಿಕೆ ಹಾಗೂ ಅಧಿಕಾರ ಪೂಜಿಸುವ ಸಮಾಜದಲ್ಲಿದ್ದೇವೆ ಎಂಬುದನ್ನು ಅರಿತುಕೊಂಡೆನು. ಸಮಾಜದಲ್ಲಿ ಶಾಂತಿ ಸೌಹಾರ್ದತೆ ಕಾಪಾಡಲು ಮೌಲ್ಯಗಳನ್ನು ಕಾಪಾಡಬೇಕು. ಯುವ ವಿದ್ಯಾರ್ಥಿಗಳೇ ಉತ್ತಮ ಸಮಾಜ ಈ ದೇಶವನ್ನು ಕಟ್ಟಿ ಬೆಳೆಸುವ…
UN NETWORKS ಮುಡಿಪು : ಮುಡಿಪಿನ ಕುರ್ನಾಡು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಯುವ ರೆಡ್ ಕ್ರಾಸ್ ಘಟಕದ ವತಿಯಿಂದ ಅಂತರ್ ಕಾಲೇಜು ಮಟ್ಟದ ಒಂದು ದಿನದ ಕಾರ್ಯಗಾರ ಮುಡಿಪು ಶ್ರೀ ಗೋಪಾಲಕೃಷ್ಣ ಸಂಭಾಗಣದಲ್ಲಿ ನಡೆಯಿತು. ಮಂಗಳೂರಿನ ಸಹ್ಯಾದ್ರಿ ತಾಂತ್ರಿಕ ಹಾಗೂ ಆಡಳಿತಾತ್ಮಕ ಕಾಲೇಜಿನ ವಿದ್ಯಾರ್ಥಿ ಸಮಾಲೋಚಕ ಅಂಕಿತ್ ಎಸ್. ಕುಮಾರ್ ಕಾರ್ಯಕ್ರಮ ಉದ್ಘಾಟಿಸಿದರು.ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಂಶುಪಾಲ ಡಾ. ಗಿರಿಧರ್ ರಾವ್ ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿರುವಾಗಲೇ ಮಾನವೀಯ ಮೌಲ್ಯಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ಹೇಳಿದರು. ರೆಡ್ ಕ್ರಾಸ್ ಸಂಚಾಲಕ ಮಾಳವಿಕ ಕ್ಯಾತರಿನ್ ಸ್ವಾಗತಿಸಿದರು. ಡಾ. ರಿತೇಶ್ ಡಿ ಕುನ್ಹಾ ಪ್ರಥಮ ಚಿಕಿತ್ಸೆಯ ಬಗ್ಗೆ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಿದರು.ಅಂತರ್ ಕಾಲೇಜು ಮಟ್ಟದ ರಸ ಪ್ರಶ್ನೆ ಹಾಗೂ ಬೀದಿ ನಾಟಕ ಸ್ಪರ್ಧೆಗಳು ನಡೆಯಿತು. ರಂಗಭೂಮಿ ಹಾಗೂ ಚಲನ ಚಿತ್ರನಟ ದೀಕ್ಷಿತ್ ಕೆ, ಉಪನ್ಯಾಸಕ ಪ್ರದೀಪ್ ಬಂಗೇರ ಹಾಗೂ ಅರ್ಥಶಾಸ್ತ್ರ ಸಹಾಯಕ ಪ್ರಾಧ್ಯಾಪಕ ಶೋಭಾಮಣಿ ಬೀದಿ ನಾಟಕ ಸ್ಪರ್ಧೆಯ ತೀರ್ಪುಗಾರರಾಗಿ ಸಹಕರಿಸಿದರು.ವಿದ್ಯಾರ್ಥಿಗಳಾದ ಪ್ರಮೀಳಾ ಡಿಸೋಜ ಪರಿಚಯಿಸಿದರು.…

