UN NETWORKS ಕೊಣಾಜೆ: ವಿಶ್ವ ಜಲ ದಿನಾಚರಣೆಯು ಕೇವಲ ಒಂದು ದಿನಕ್ಕೆ ಮಾತ್ರ ಸೀಮಿತವಾಗಬಾರದು. ಪರಿಸರ ಸಂರಕ್ಷಣೆ ಮತ್ತು ಜಲಸಂರಕ್ಷಣೆಯ ವಿಷಯದಲ್ಲಿ ನಾವು ಸರಕಾರದ ಯಾವುದೇ ಅನುದಾನ ಅಥವಾ ಸಬ್ಸಿಡಿಗಳಿಗೆ ಕಾಯದೆ ಸಂಘಟನಾತ್ಮಕಾಗಿ, ಸ್ವಯಂ ಪ್ರಯತ್ನ ದೊಂದಿಗೆ ಕಾರ್ಯರೂಪಕ್ಕಿಳಿಯಬೇಕು ಎಂದು ಶ್ರೀ ಪಡ್ರೆ ಅವರು ಅಭಿಪ್ರಾಯಪಟ್ಟರು. ಅವರು ಮಂಗಳೂರು ವಿಶ್ವವಿದ್ಯಾನಿಲಯ ಭೂವಿಜ್ಞಾನ ವಿಭಾಗದ ಆಶ್ರಯದಲ್ಲಿ ಮಂಗಳೂರು ವಿವಿಯ ಹಳೆಸೆನೆಟ್ ಸಭಾಂಗಣದಲ್ಲಿ ನಡೆದ ವಿಶ್ವಜಲ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಕರ್ನಾಟಕದ ನಮ್ಮಕರಾವಳಿ ಜಿಲ್ಲೆಯಲ್ಲಿ ಸಾಕಷ್ಟು ಮಳೆ ಇದ್ದರೂ ಜನವರಿ ತಿಂಗಳಲ್ಲಿ ನೀರಿಗೆ ಬರ ಎದುರಾಗುತ್ತಿದೆ. ಅಲ್ಲದೆ ಮಳೆಗಾಲದಲ್ಲಿ ನೆರೆಯ ಸಮಸ್ಯೆಯೂ ಸೃಷ್ಟಿಯಾಗುತ್ತಿದೆ. ಇಂತಹ ಸಮಸ್ಯೆಗೆ ಮಾನವನೇ ನೇರ ಕಾರಣಕರ್ತನಾಗಿದ್ದಾನೆ. ಹಿಂದಿನ ಕಾಲದಲ್ಲಿದ್ದ ನೀರು ಇಂಗುವ ಮದಕ, ಕೆರೆಯಂತಹ ಜಾಗಗಳಲ್ಲಿ ಕಮರ್ಶಿಯಲ್ ಕಟ್ಟಡಗಳು ತಲೆಯೆತ್ತಿ ನಿಲ್ಲುತ್ತಿವೆ. ಅರಣ್ಯಗಳೂ ನಾಶವಾಗುತ್ತಿವೆ. ಪರಿಸ್ಥಿತಿ ಹೀಗೆಯೇ ಮುಂದುವರಿದರೆ ಮುಂದಿನ ಪೀಳಿಗೆಯ ಸ್ಥಿತಿ ಊಹಿಸಲು ಅಸಾಧ್ಯ. ಆದ್ದರಿಂದ ನಾವು ಈಗಲೇ ಎಚ್ಚೆತ್ತುಕೊಂಡು ಪರಿಸರ ಸಂರಕ್ಷಣೆಯೊಂದಿಗೆ ನೀರಿನ…
Author: UllalaVani
UN NETWORKS ಉಳ್ಳಾಲ : ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮತದಾರರಲ್ಲಿ ಅರಿವು ಮೂಡಿಸಲು ಮಾನವ ಸರಪಳಿ ಹಾಗೂ ಇತರ ಕಾರ್ಯಕ್ರಮಗಳ ಪೂರ್ವ ಸಿದ್ದತಾ ಸಭೆ ಬುಧವಾರ ಉಳ್ಳಾಲ ನಗರಸಭೆಯ ಸಭಾಂಗಣದಲ್ಲಿ ನಡೆಯಿತು. ದ.ಕ.ಜಿಲ್ಲಾ ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಡಾ.ಸೆಲ್ವಮಣಿ ಅಧ್ಯಕ್ಷತೆ ವಹಿಸಿದ್ದರು. ಉಳ್ಳಾಲ ನಗರಸಭಾ ಪೌರಾಯುಕ್ತೆ ವಾಣಿವಿ.ಆಳ್ವ, ಸಂತ ಸೆಬಾಸ್ಟಿಯನ್ ಧರ್ಮ ಕೇಂದ್ರದ ಪ್ರಧಾನ ಧರ್ಮಗುರು ಫಾ.ಜೆ.ಬಿ.ಸಲ್ದಾನಾ, ಮೊಗವೀರ ಸಮಾಜದ ಮಾಜಿ ಅಧ್ಯಕ್ಷ ಸದಾನಂದ ಬಂಗೇರ, ಮನೋಜ್ ಮೊಗವೀರ ಪಟ್ನ, ಇಸ್ಮಾಯಿಲ್ ಮುಕ್ಕಚ್ಚೇರಿ, ಸುಧಾಕರ್, ಯತೀಶ್ ಬೈಕಂಪಾಡಿ, ಉಳ್ಳಾಲ ಕ್ರಿಕೆಟ್ ಬೋರ್ಡ್ ಅಧ್ಯಕ್ಷ ಖಲೀಲ್, ಮಾಜಿ ನಗರಸಭಾಧ್ಯಕ್ಷ ಹುಸೈನ್ ಕುಂಞಮೋನು, ನಗರಸಭಾ ಸದಸ್ಯರು, ಅಂಗನವಾಡಿ ಕಾರ್ಯಕರ್ತೆಯರು, ಸಂಘ ಸಂಸ್ಥೆಯ ಪ್ರಮುಖರು ಭಾಗವಹಿಸಿದ್ದರು.
UN NETWORKS ಉಳ್ಳಾಲ : ಕಾಂಗ್ರೆಸ್ ಲೋಕಸಭಾ ಅಭ್ಯರ್ಥಿ ಮಿಥುನ್ ರೈ ಅವರು ಶನಿವಾರ ಉಳ್ಳಾಲದಲ್ಲಿರುವ ಸೈಯ್ಯಿದ್ ಮದನಿ ದರ್ಗಾ ಭೇಟಿ ನೀಡಿ ಆಶೀರ್ವಾದ ಪಡೆದರು. ಈ ಸಂದರ್ಭ ಅಬ್ದುಲ್ ರಶೀದ್ ಮಾತನಾಡಿ, ದೇವನ ಕೃಪೆಯಿಂದ ಚುನಾವಣೆಯಲ್ಲಿ ಗೆದ್ದು ಬಂದು ಜಾತಿ, ಧರ್ಮ ನೋಡದೆ ಸರ್ವರನ್ನೂ ಒಂದೇ ನೆಲೆಯಲ್ಲಿ ನೋಡಿಕೊಂಡು ಸೇವೆ ಸಲ್ಲಿಸಲು ಪಣ ಕೊಡಬೇಕು. ಕ್ಷೇತ್ರದ ಅಭಿವೃದ್ಧಿಗೆ ವಿಶೇಷ ಆದ್ಯತೆ ನೀಡಲು ಮುಂದಾಗಬೇಕು ಎಂದು ಹರಸಿದರು. ಮಿಥುನ್ ರೈ ದರ್ಗಾಕ್ಕೆ ಬರುವ ಮಾಹಿತಿ ಸಿಗುತ್ತಲೇ ಭಾರೀ ಸಂಖ್ಯೆಯ ಬೆಂಬಲಿಗರು, ಯುವಕರು ಕಾದು ಕುಳಿತಿದ್ದರು. ಈ ಸಂದರ್ಭ ವಿಶೇಷ ಪ್ರಾರ್ಥನೆ ಸಲ್ಲಿಸಿದ ಬಳಿಕ ದರ್ಗಾ ವತಿಯಿಂದ ಗೌರವಾರ್ಪಣೆ ಸಲ್ಲಿಸಲಾಯಿತು. ಈ ಸಂದರ್ಭ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ತ್ವಾಹ, ಧರ್ಮಗುರು ಉಸ್ಮಾನ್ ಫೈಝಿ ತೊಡಾರ್, ಪ್ರಮುಖರಾದ ಫಾರೂಕ್ ಉಳ್ಳಾಲ್, ಯೂಸುಫ್ ಉಳ್ಳಾಲ್, ಮುಖಂಡರಾದ ಸಂತೋಷ್ ಶೆಟ್ಟಿ ಅಸೈಗೋಳಿ, ಅಹಮ್ಮದ್ ಬಾವಾ ಕೊಟ್ಟಾರ, ಅಬ್ದುಲ್ ರಹ್ಮಾನ್ ಕೋಡಿಜಾಲ್, ಸುರೇಶ್ ಭಟ್ನಗರ, ಈಶ್ವರ್ ಉಳ್ಳಾಲ್,ಎವರೆಸ್ಟ್ ಮುಸ್ತಫಾ,…
UN NETWORKS ದೇರಳಕಟ್ಟೆ : ದೇರಳಕಟ್ಟೆ ನೇತಾಜಿ ಸುಭಾಷ್ ಚಂದ್ರ ಬೋಸ್ ಪ್ರೌಢಶಾಲೆಯಲ್ಲೂ ಪರೀಕ್ಷೆ ಬರೆಯಲು ಬಂದ ವಿದ್ಯಾರ್ಥಿಗಳನ್ನು ಅಲಂಕೃತ ದ್ವಾರ ರಚಿಸಿ ಎರಡು ಗೊಂಬೆಗಳ ಮೂಲಕ ಪ್ರೀತಿಯಿಂದ ಸ್ವಾಗತಿಸಲಾಯಿತು. ವಿವಿಧಶಾಲೆಗಳಿಂದ ಪರೀಕ್ಷೆ ಬರೆಯಲು ಬಂದ ವಿದ್ಯಾರ್ಥಿಗಳಿಗೆ ಶಾಲಾ ಹಳೇ ವಿದ್ಯಾರ್ಥಿ ಸಂಘ ಪೆನ್ ನೀಡಿ, ಶುಭಹಾರೈಸುವ ಮೂಲಕ ಪರೀಕ್ಷಾ ಹಬ್ಬ ವಿಶಿಷ್ಟವಾಗಿ ನಡೆಯಿತು. ಈ ವೇಳೆ ಮಾತನಾಡಿದ ದೇರಳಕಟ್ಟೆ ನೇತಾಜಿ ಸುಭಾಷ್ ಚಂದ್ರ ಬೋಸ್ ಪ್ರೌಢಶಾಲೆ ಮುಖ್ಯ ಶಿಕ್ಷಕಿ ಚಂಚಲಾಕ್ಷಿ , ಶಿಕ್ಷಣ ಇಲಾಖೆಯ ಉಪಉನಿರ್ದೇಶಕರ ಆದೇಶದಂತೆ ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳಲ್ಲಿ ಭಯವನ್ನು ಹೋಗಲಾಡಿಸುವ ಉದ್ದೇಶದಿಂದ ಪ್ರೀತಿ ಪೂರ್ವಕವಾಗಿ ಭಯಭೀತಿಯಿಲ್ಲದೆ ಆತ್ಮೀಯವಾಗಿ ಸ್ವಾಗತಿಸಲಾಗಿದೆ. ಹಳೇ ವಿದ್ಯಾರ್ಥಿಗಳ ಸಂಘದ ಸಹಕಾರದಿಂದ ಪ್ರಮುಖ ದ್ವಾರವನ್ನು ಶೃಂಗರಿಸಿ ಎರಡು ಗೊಂಬೆಗಳನ್ನು ಇರಿಸಿಕೊಂಡು ಸ್ವಾಗತಿಸಲಾಗಿದೆ. ವಿವಿಧ ಶಾಲೆಗಳಿಂದ 259 ವಿದ್ಯಾರ್ಥಿಗಳು ಹಾಜರಾಗಿದ್ದಾರೆ. ಎಲ್ಲರೂ ಉತ್ಸಾಹದಿಂದ ಪರೀಕ್ಷಾ ಕೊಠಡಿಗೆ ತೆರಳಿದ್ದಾರೆ ಹೇಳಿದರು. ಪರೀಕ್ಷೆ ಕುರಿತು ಅಳುಕು ಇರದಂತೆ ಸರಕಾರ ಕೈಗೊಂಡಿರುವ ಪರೀಕ್ಷಾ ಹಬ್ಬಕ್ಕೆ ಹಳೇ ವಿದ್ಯಾರ್ಥಿಗಳು ಪ್ರೋತ್ಸಾಹ…
UN NETWORKS ಉಳ್ಳಾಲ: ಇಲ್ಲಿನ ಧರ್ಮನಗರದ ಹನುಮಾನ್ ಫ್ರೆಂಡ್ಸ್ ಇದರ ನಾಲ್ಕನೇ ವಾರ್ಷಿಕೋತ್ಸವ ಪ್ರಯುಕ್ತ ಜರಗಿದ ಸಭಾ ಮತ್ತು ಸಾಂಸ್ಕೃತಿಕ ಕಾರ್ಯಕ್ರಮವನ್ನು ಶ್ರೀ ವೈದ್ಯನಾಥ ಕ್ಷೇತ್ರ ಉಳ್ಳಾಲಬೈಲಿನ ಪ್ರಧಾನ ಅರ್ಚಕ ದಾಮೋದರ ಪೂಜಾರಿ ಉದ್ಘಾಟಿಸಿದರು. ತೆಂಗಿನಹಿತ್ಲು ಶ್ರೀ ರಾಹು ಗುಳಿಗ ಬನ ಸೇವಾ ಸಮಿತಿಯ ಗೌರವಾಧ್ಯಕ್ಷ ನಾರಾಯಣ ತೆಂಗಿನ ಹಿತ್ಲು ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ನಗರಸಭೆ ಸದಸ್ಯೆ ಸ್ವಪ್ನಾ ಹರೀಶ್, ಉಳ್ಳಾಲ ನಗರಸಭೆ ಮಾಜಿ ಸದಸ್ಯೆ ಮಹಾಲಕ್ಷ್ಮೀ, ಸದಾನಂದ ತೆಂಗಿನಹಿತ್ಲು, ಶೇಖರ್ ಬಂಗೇರ, ಗೋಪಾಲ ಕಲ್ಪನೆ, ಲತೀಶ್ ಕುಮಾರ್, ಸತೀಶ್ ಕುಮಾರ್, ಭಾಸ್ಕರ್ ತೆಂಗಿನಹಿತ್ಲು, ತಿಲಕ್ ತೆಂಗಿನಹಿತ್ಲು , ಶ್ರವಣ್ ಧರ್ಮನಗರ ಉಪಸ್ಥಿತರಿದ್ದರು.ಅರುಣ್ ಉಳ್ಳಾಲ್ ಕಾರ್ಯಕ್ರಮ ನಿರೂಪಿಸಿದರು.
UN NETWORKS ಉಳ್ಳಾಲ: ಪಿಲಾರು ಲಕ್ಷ್ಮೀಗುಡ್ಡೆಯ ಶ್ರೀ ನಾಗಬ್ರಹ್ಮ ಕ್ಷೇತ್ರದಲ್ಲಿ 10ನೇ ವಾರ್ಷಿಕ ಪ್ರತಿಷ್ಠಾ ಮಹೋತ್ಸವ ಮಾ.24 ರಂದು ಸುಬ್ರಹ್ಮಣ್ಯ ದೇವಸ್ಥಾನದ ಅರ್ಚಕ ಬ್ರಹ್ಮಶ್ರೀ ಕೇಶವ ಜೋಗಿತ್ತಾಯ ಇವರ ನೇತೃತ್ವದಲ್ಲಿ ನಡೆಯಲಿದೆ. ಬೆಳಿಗ್ಗೆ 8 ರಿಂದ ವೈದಿಕ ಕಾರ್ಯಕ್ರಮಗಳು ಬಳಿಕ ಮಧ್ಯಾಹ್ನ ಮಹಾಪೂಜೆ ಸಂಜೆ ಸ್ಥಳೀಯ ಪ್ರತಿಭೆಗಳ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ. ಸಭಾ ಕಾರ್ಯಕ್ರಮದಲ್ಲಿ ಒಡಿಯೂರು ಶ್ರೀ ಗುರುದೇವಾನಂದ ಸ್ವಾಮಿಗಳು ಆಶೀರ್ವಚನ ನೀಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಯೆನೆಪೋಯ ಸಮೂಹ ಸಂಸ್ಥೆಗಳ ಅಧ್ಯಕ್ಷ ಯೆನೆಪೋಯ ಅಬ್ದುಲ್ಲಾ ಕುಂಞ, ಯೆನೆಪೋಯ ಸಂಸ್ಥೆ ನಿರ್ದೇಶಕ ರಾಮಚಂದ್ರ ಶೆಟ್ಟಿ, ಫಜೀರು ಚರ್ಚ್ ಧರ್ಮಗುರು ಸುನೀಲ್ ವೇಗಸ್, ಪಿಲಾರು ಪಂಜಂದಾಯ ಬಂಟ ವೈದ್ಯನಾಥ ಆಡಳಿತ ಮೊಕ್ತೇಸರ ರವೀಂದ್ರನಾಥ ಪೂಂಜ ಭಾಗವಹಿಸಲಿದ್ದಾರೆ.
UN NETWORKS ಮುಡಿಪು : ಕುರ್ನಾಡು ಪದವಿಪೂರ್ವ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದುತ್ತಿರುವ ಅಷ್ಪಾಕ್ ಅಹ್ಮದ್ ಎ. ಮ್ಯಾಗೇರಿ ಅವರಿಗೆ ಕಾಲೇಜು ಅಭಿವೃದ್ಧಿ ಸಮಿತಿ, ಉಪನ್ಯಾಸಕ ವರ್ಗ, ಬೋಧಕೇತರ ವೃಂದ ಮತ್ತು ವಿದ್ಯಾರ್ಥಿಗಳಿಂದ ಬೀಳ್ಕೊಡುಗೆ ಹಾಗೂ ಸನ್ಮಾನ ಸಮಾರಂಭ ಬುಧವಾರ ನಡೆಯಿತು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮಂಗಳೂರು ವಿಶ್ವವಿದ್ಯಾಲಯದ ಕುಲಸಚಿವ ಪ್ರೊ. ಎ.ಎಂ. ಖಾನ್ ಪದವಿಪೂರ್ವ ಕಾಲೇಜುಗಳ ಪ್ರಾಂಶುಪಾಲರ ವಿಭಾಗದಲ್ಲಿ ಕರ್ನಾಟಕ ಸರಕಾರದ ಶಿಕ್ಷಣ ಇಲಾಖೆಯಿಂದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರಾಗಿ ವೃತ್ತಿಯಿಂದ ನಿವೃತ್ತರಾಗುತ್ತಿರುವ ಸನ್ಮಾನಿತರ ವ್ಯಕ್ತಿತ್ವ, ಆದರ್ಶಗಳು ಇಂದಿನ ವಿದ್ಯಾರ್ಥಿಗಳಿಗೆ ಆದರ್ಶಪ್ರಾಯವಾದುದು ಎಂದರು. ಗ್ರಾಮೀಣ ಪ್ರದೇಶದಲ್ಲಿರುವ ಆ ಸರಕಾರಿ ಪದವಿಪೂರ್ವ ಕಾಲೇಜನ್ನು ತಮ್ಮ ದೂರದೃಷ್ಟಿ, ಸಂಘಟನಾತ್ಮಕ ಶಕ್ತಿ, ಬದ್ಧತೆ, ಪರಿಶ್ರಮದ ಮೂಲಕ ಮಾದರಿ ಶಿಕ್ಷಣ ಸಂಸ್ಥೆಯಾಗಿ ರೂಪಿಸಿದ ಅವರ ಈ ಪರಿಶ್ರಮ ಶ್ಲಾಘನೀಯ ಎಂದರು. ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಅಮೂಲ್ಯ ಸಮಯವನ್ನು ಕಳೆಯುತ್ತಿರುವ ಇಂದಿನ ವಿದ್ಯಾರ್ಥಿಗಳು ಬದಲಿಗೆ ಮಾನವೀಯ ಸಂಬಂಧಗಳನ್ನು, ಉನ್ನತ ಮೌಲ್ಯಗಳನ್ನು, ಗುರು ಹಿರಿಯರನ್ನು ಗೌರವಿಸುವ…
UN NETWORKS ತೊಕ್ಕೊಟ್ಟು : ಳ್ಳಾಲ: ಸಮಾಜವನ್ನು ಲೂಟಿಗೈದವರಿಗೆ ಮಾತ್ರ ನೋಟ್ ಬ್ಯಾನ್ ನಿಂದ ತೊಂದರೆಯಾಗಿದೆ ಹೊರತು ಅಸಹಾಯಕರಿಗೆ, ಸಣ್ಣ ಉದ್ದಿಮೆಗಾರರಿಗೆ, ಸರಕಾರಿ ಕೆಲಸ ನಿರ್ವಹಿಸುವವರಿಗೆ ಹಾಗೂ ಜನಸಾಮಾನ್ಯರಿಗೆ ತೊಂದರೆಯಾಗಿಲ್ಲ ಎಂದು ವಿಧಾನಪರಿಷತ್ ಸದಸ್ಯ ಕೋಟ ಶ್ರೀ ನಿವಾಸ ಪೂಜಾರಿ ಹೇಳಿದರು. ತೊಕ್ಕೊಟ್ಟು ಕಾಪಿಕಾಡಿನ ಖಾಸಗಿ ಕಟ್ಟಡದಲ್ಲಿ ಮಂಗಳೂರು ವಿಧಾನಸಭಾ ಕ್ಷೇತ್ರದ ವತಿಯಿಂದ ಲೋಕಸಭಾ ಚುನಾವಣಾ ಕಾರ್ಯಾಲಯವನ್ನು ಗುರುವಾರ ಉದ್ಘಾಟಿಸಿ ಮಾತನಾಡಿದರು. ಕೇಂದ್ರ ಸರಕಾರ ರಾಷ್ಟ್ರವಾದದ ಕುರಿತು ಕೈಗೊಂಡ ನಿರ್ಣಯಗಳು ಹಾಗೂ ಜನಸಾಮಾನ್ಯರಿಗೆ ಜಾರಿಗೆ ತಂದಿರುವ ಯೋಜನೆಗಳನ್ನು ಜನರು ಮೆಚ್ಚಿ ಹಿಂದೆಂದು ಮಾಡದ ದಾಖಲೆ ಮತಗಳ ಮೂಲಕ ಕ್ಷೇತ್ರದ ಸಂಸದರನ್ನು ಆಯ್ಕೆ ಮಾಡಲಿದ್ದಾರೆ. ಉಗ್ರದಾಳಿಯ ಹಿಂದಿನ ಸರಕಾರದ ಪ್ರತಿಕ್ರಿಯೆ ಮತ್ತು ಮೋದಿ ಭಾರತದಲ್ಲಿ ಹತ್ತೇ ದಿನಗಳಲ್ಲಿ ಪ್ರತಿದಾಳಿಯಂತಹ ನಿರ್ಣಯಗಳ ಮತ್ತೊಮ್ಮೆ ಮೋದಿ ಪ್ರಧಾನಿಯಾಗುವ ಮೂಲಕ ಸಮರ್ಥ ಭಾರತ ನಿರ್ಮಾಣವಾಗಲಿದೆ ಎಂದರು. ನೀರವ್ ಮೋದಿ ಬಂಧನ, ಪಾಕಿಸ್ತಾನದ ಸೈನ್ಯದಿಂದ ವೀರ ಯೋಧ ಅಭಿನಂದನ್ ಕರೆತರುವಂತಹ ದೇಶ ಮೆಚ್ಚುವ ಕಾರ್ಯ ದೇಶದ ಪ್ರಧಾನಿಯಿಂದ ಆಗಿದೆ. ಇದೆಲ್ಲವನ್ನು…
UN NETWORKS ಉಳ್ಳಾಲ : ಶಿಕ್ಷಕ ವೃತ್ತಿಯು ಪವಿತ್ರವಾದುದು. ಶಿಕ್ಷಕರು ತಮ್ಮ ಬಳಿಗೆ ಬರುವ ಪ್ರತಿಯೊಂದು ಮಗುವಿನಲ್ಲೂ ಹೊಸತನವನ್ನು ಕಾಣುವರು. ತಾನು ಶಿಕ್ಷಕ ವೃತ್ತಿ ಪ್ರಾರಂಭಿಸಿದಗಿನಿಂದ ತನ್ನ ನಿವೃತ್ತಿಯವರೆಗೆ ತನ್ನ ಬಳಿ ಬರುತ್ತಿರುವ ಪ್ರತಿಯೊಂದು ವಿಧ್ಯಾರ್ಥಿಯಲ್ಲೂ ತನ್ನ ಮಕ್ಕಳನ್ನು ಕಾಣುವ ಶಿಕ್ಷಕ ವೃತ್ತಿಗೆ ನಿವೃತ್ತಿಯೇ ಇಲ್ಲ ಎಂದು ಸಯ್ಯಿದ್ ಮದನಿ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷ ಹಾಜಿ ಅಬ್ದುಲ್ ರಶೀದ್ ಹೇಳಿದರು. ಉಳ್ಳಾಲ ಕ್ಲಸ್ಟರಿನಲ್ಲಿ ನಿವೃತ್ತರಾದ ಶಿಕ್ಷಕರಿಗೆ ಸನ್ಮಾನ ಸಮಾರಂಭದ ಅಧ್ಯಕ್ಷ ಸ್ಧಾನದಿಂದ ಮಾತನಾಡುತ್ತಾ ಇಂತಹ ಪವಿತ್ರ ವೃತಿಯಿಂದ ಸರಕಾರದ ನಿಯಮದಂತೆ ನಿಯಮದ ಚೌಕಟಿನಿಂದ ಹೊರಬಂದ ಶಿಕ್ಷಕರು ತಮ್ಮ ಪರಿಸರದ ದುಷ್ಠ ಶಕ್ತಿಗಳನ್ನು ಶಿಷ್ಟಾರನ್ನಾಗಿ ಮಾಡುವ ಜವಾಬ್ದಾರಿ ತೆಗೆದುಕೊಂಡು ಸುಂದರ ಸೌಹಾರ್ದತೆ ಬಾಳಿಗೆ, ಭಾರತ ನಿರ್ಮಾಣಕ್ಕೆ ಕಾರಣರಾಗಿರಿ ಎಂದರು.ಟಿಪ್ಪು ಸುಲ್ತಾನ್ ವಿದ್ಯಾ ಸಂಸ್ಥೆಯಿಂದ ನಿವೃತ್ತಿಯಾದ ಆಲಿಸ್ ಮೊಂತೇರೋ ಹಾಗೂ ಶೀತಾ ಮತ್ತು ಬಿ. ಎಂ. ವಿದ್ಯಾ ಸಂಸ್ಧೆಯಿಂದ ನಿವೃತ್ತರಾದ ಸಿಂಥಿಯಾ ಲಸ್ರಾದೋ, ಕ್ಲಮೆಂಟಿನ ಪ್ರಭಾವತಿ, ವಿಮಲಾ ಮಾರ್ಗರೇಟ್ ಕರ್ಕೇರಾ, ನೂತನ್ ಜ್ಯೋತಿ…
UN NETWORKS ಮೊಂಟೆಪದವು : ಎಸ್‍ಎಸ್‍ಎಲ್‍ಸಿ ಪರೀಕ್ಷೆಯನ್ನು ಎದುರಿಸುವ ಪರೀಕ್ಷಾರ್ಥಿಗಳ ದುಗುಡ, ಆತಂಕ, ಆವರಿಸುವ ಭಯವನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಕೆಲವು ಪ್ರೌಢಶಾಲೆಗಳಲ್ಲಿ ಹೊಸ ಕಾರ್ಯಕ್ರಮವೊಂದನ್ನು ಅಳವಡಿಸಿಕೊಂಡಿದ್ದು ಅದರಂತೆ ಗುರುವಾರ ಬೆಳಗ್ಗೆ 2019ರ ಎರ್ಸ ಎರ್ಸ ಎಲ್‍ಸಿ ಪರೀಕ್ಷೆಗೆ ಹಾಜರಾಗುತ್ತಿದ್ದ ಮುನ್ನೂರು ಪರೀಕ್ಷಾರ್ಥಿಗಳನ್ನು ಪರೀಕ್ಷೆ ನಡೆಯುವ ಶಾಲೆಗಳಿಗೆ ಸ್ವಾಗತಿಸುವ ವಿನೂತನ ಕಾರ್ಯಕ್ರಮ “ಪರೀಕ್ಷಾ ಹಬ್ಬ” ಮಂಗಳೂರು ವಿಧಾನ ಸಭಾ ಕ್ಷೇತ್ರದ ಬಂಟ್ವಾಳ ತಾಲೂಕು ವ್ಯಾಪ್ತಿಯ ನರಿಂಗಾನ ಗ್ರಾಮದ ಮೊಂಟೆಪದವು ಸರಕಾರಿ ಪ್ರೌಢಶಾಲೆ ಹಾಗೂ ದೇರಳಕಟ್ಟೆಯ ನೇತಾಜಿ ಸುಭಾಸ್ ಚಂದ್ರ ಭೋಸ್ ಪ್ರೌಢಶಾಲೆಯಲ್ಲಿ ನಡೆಯಿತು. ಮೊದಲ ದಿನದ ಕನ್ನಡ ಪರೀಕ್ಷೆ ಆಗಿರುವುದರಿಂದ ಪರೀಕ್ಷಾರ್ಥಿಗಳು ಬೆಳಗ್ಗೆ 8.15ಕ್ಕೆ ಮೊಂಟೆಪದವು ಪ್ರೌಢಶಾಲೆ ದ್ವಾರದ ಬಳಿ ಜಮಾಯಿಸಿದ್ದರು. ಮೊಂಟೆಪದವು ಸರಕಾರಿ ಪ್ರೌಢಶಾಲಾ ಆವರಣದ ದ್ವಾರದ ಸಮೀಪ ಮಾವಿನ ಎಲೆಯ ತಳಿರು ತೋರಣ, ಬಲೂನ್ ಹಾಗೂ ಬಣ್ಣದ ಕಾಗದಗಳನ್ನು ಹಗ್ಗಕ್ಕೆ ಕಟ್ಟಿ ಅಲಂಕರಿಸಲಾಗಿತ್ತು. ಪರೀಕ್ಷಾರ್ಥಿಗಳು ಹಾಗೂ ಪರೀಕ್ಷಾ ಹಬ್ಬಕ್ಕೆ ಸ್ವಾಗತ ಎಂಬ ಸಣ್ಣ ಫ್ಲೆಕ್ಸ್ ಅಳವಡಿಸಲಾಗಿತ್ತು.…

