UN NETWORKS
ಯೆನೆಪೋಯ : ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ದೇರಳಕಟ್ಟೆ ಬಳಿಯ ಸ್ಟೂಡೆಂಟ್ ಹೌಸ್ ಎಂಬ ಕಟ್ಟಡದ ಕೊಠಡಿಗೆ ನುಗ್ಗಿ ಹಲ್ಲೆ ನಡೆಸಿ ಮೊಬೈಲ್ ಫೋನ್ ಗಳನ್ನು ಸುಲಿಗೆ ಮಾಡಿದ ಪ್ರಕರಣದಲ್ಲಿ ಭಾಗಿಯಾದ ಇಬ್ಬರು ಆರೋಪಿಗಳನ್ನು ಮಂಗಳೂರು ಸಿಸಿಬಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಬಂಧಿತರನ್ನು ಯೆನೆಪೋಯ ಆಸ್ಪತ್ರೆ ಬಳಿಯ ಶಾಂತಿಬಾಗ್ ನಿವಾಸಿ ಮೊಹಮ್ಮದ್ ಅಕ್ಬರ್(22), ಶಾಂತಿಬಾಗ್ ಫಾತಿಮಾ ಹಾಸ್ಟೆಲ್ ಬಳಿ ನಿವಾಸಿ ಮೊಹಮ್ಮದ್ ಮುಸಾವಿರ್(23)ಎಂದು ಗುರುತಿಸಲಾಗಿದೆ.ಡಿ.22 ರಂದು ಕೋಟೆಕಾರು ಗ್ರಾಮದ ದೇರಳಕಟ್ಟೆ ಯೇನೆಪೋಯ ಆಸ್ಪತ್ರೆ ಬಳಿಯಿರುವ ಸಹಾಲ್ ಸ್ಟೂಡೆಂಟ್ ಹೌಸ್ ಎಂಬಲ್ಲಿ ಲೆನಿನ್ ಮತ್ತು ಅವರ ಸ್ನೇಹಿತ ವಿಷ್ಣು ಪ್ರಕಾಶನ್ ಪಿ ಪಿ ರವರು ಇದ್ದಾಗ ಆರೋಪಿಗಳಾದ ಲುಕ್ಮಾನ್, ಅಕ್ಬರ್ ಮತ್ತು ಇತರ ಇಬ್ಬರು ಯುವಕರು ರೂಮಿನ ಒಳಗಡೆ ಬಂದು ಲೆನಿನ್ ಮತ್ತು ವಿಷ್ಣು ಪ್ರಕಾಶ್ ಟಿ ಪಿ ರವರಿಗೆ ಕೈಯಿಂದ ಹೊಡೆದು ಕಾಲಿನಿಂದ ತುಳಿದು ರೂ. 8000/- ಮೌಲ್ಯದ ಸ್ಯಾಮ್ ಸಂಗ್ ಮೊಬೈಲ್ ಮತ್ತು ಅದರಲ್ಲಿದ್ದ ಸಿಮ್ ಮತ್ತು ವಿಷ್ಣು ಪ್ರಕಾಶ್ ರವರ ರೂ. 10000/- ಮೌಲ್ಯದ ಮೊಬೈಲ್ ಮತ್ತು ಸಿಮ್ ಕಾರ್ಡ್ ನ್ನು ಆರೋಪಿಗಳು ಬಲತ್ಕಾರವಾಗಿ ಕಸಿದುಕೊಂಡು ಹೋಗಿದ್ದಾರೆ. ಈ ಕುರಿತು ಉಳ್ಳಾಲ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


