UN NETWORKS ಕೊಣಾಜೆ: ಮಂಗಳೂರು ವಿಶ್ವವಿದ್ಯಾಲಯದ ಡಾ.ಪಿ.ದಯಾನಂದ ಪೈ ಮತ್ತು ಶ್ರೀ ಪಿ.ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರದ ವತಿಯಿಂದ ಮಂಗಳ ಸಭಾಂಗಣದಲ್ಲಿ ನಡೆದ ಯಕ್ಷಮಂಗಳ ಪ್ರಶಸ್ತಿ ಸಮಾರಂಭದಲ್ಲಿ ಯಕ್ಷಮಂಗಳ ವಿದ್ಯಾರ್ಥಿ ತಂಡದಿಂದ `ಮೋಹಿನೀ ಏಕಾದಶಿ’ ಯಕ್ಷಗಾನ ಪ್ರದರ್ಶನ ನಡೆಯಿತು. ದೀವಿತ್ ಎಸ್.ಕೆ. ಪೆರಾಡಿ ಅವರು ನಿರ್ದೇಶನ ನೀಡಿದ್ದು, ಹಿಮ್ಮೇಳದಲ್ಲಿ ಭಾಗವತರಾಗಿ ಶ್ರೀನಿವಾಸ ಬಳ್ಳಮಂಜ, ಚೆಂಡೆಯಲ್ಲಿ ಸವಿನಯ ನೆಲ್ಲಿತೀರ್ಥ, ಮದ್ದಳೆಯಲ್ಲಿ ಮಯೂರ ನಾಯ್ಗ ಮಾಡೂರು, ಚಕ್ರತಾಳದಲ್ಲಿ ಯಜ್ಞೇಶ್ ರೈ ಕಟೀಲು ಸಹಕರಿಸಿದ್ದರು. ಮುಮ್ಮೇಳದಲ್ಲಿ ಯಕ್ಷಮಂಗಳ ವಿದ್ಯಾರ್ಥಿಗಳಾದ ವಿನುತ ಎಂ.ಎಸ್(ಕನ್ನಡ), ಅಭಿಷೇಕ್(ಭೌತಶಾಸ್ತ್ರ), ನಿಖಿತಾ ಕಿಣಿ(ಗಣಕ ವಿಜ್ಞಾನ), ಬೇಬಿ ಎಸ್.(ಇತಿಹಾಸ), ಗ್ರೀಷ್ಮ ಆರ್.(ಭೌತಶಾಸ್ತ್ರ), ಜ್ಯೋತಿ(ಸಮಾಜ ಕಾರ್ಯ), ಸಂಜನಾ(ಸಮಾಜ ಕಾರ್ಯ), ಶ್ರೀ ಹರಿ(ಪ್ರಾಣಿಶಾಸ್ತ್ರ), ಸುರೇಖಾ(ಸಮಾಜ ಕಾರ್ಯ), ಸಮೀಕ್ಷಾ ಶೆಟ್ಟಿ(ಗಣಕ ವಿಜ್ಞಾನ), ಶ್ರೇಯಾ ಶೆಟ್ಟಿ(ಗಣಕ ವಿಜ್ಞಾನ), ಸಹನಾ ಶೆಟ್ಟಿ(ಪ್ರಾಣಿಶಾಸ್ತ್ರ), ಭಾರತಿ ಕೆ.(ಭೌತಶಾಸ್ತ್ರ), ಸೌಭಾಗ್ಯ ಬಿ. ಶೆಟ್ಟಿ(ಭೌತಶಾಸ್ತ್ರ), ಅರ್ಚನ(ರಸಾಯನಶಾಸ್ತ್ರ), ಸಂಪತ್ ಎಂ. ಆರ್(ಫುಡ್ ಸೈನ್ಸ್), ಅಂಜನ್ ಎಂ(ಫುಡ್ ಸೈನ್ಸ್), ಸೌಂದರ್ಯ ಡಿ.(ಕನ್ನಡ), ಕಾವ್ಯ ಎ. ಆರ್.(ಕನ್ನಡ), ದಿವ್ಯ ಪಿ.(ಅರ್ಥಶಾಸ್ತ್ರ),…
Author: UllalaVani
UN NETWORKS ಕೊಣಾಜೆ: ಇಂದಿನ ಯುವಜನತೆ ಸಾಮಾಜಿಕ ಜಾಲತಾಣ ಹಾಗೂ ಇನ್ನಿತರ ಮಾಧ್ಯಮಗಳನ್ನು ಪರಸ್ಪರರಲ್ಲಿ ದ್ವೇಷ ಹರಡುವ ಕಾರ್ಯಕ್ಕೆ ಉಪಯೋಗಿಸುತ್ತಿರುವುದು ಕಳವಳಕಾರಿಯಾಗಿದೆ. ಈ ನಿಟ್ಟಿನಲ್ಲಿ ನಾವು ಸಮಸ್ತದ ನೇತಾರರನ್ನು ಮಾದರಿಯಾಗಿಸಬೇಕಾಗಿದೆ ಎಂದು ಖ್ಯಾತ ವಾಗ್ಮಿ ಬಹು ಅಬೂಬಕ್ಕರ್ ಸಿದ್ದೀಕ್ ಅಝ್ಹರಿ ಪಯ್ಯನ್ನೂರು ಹೇಳಿದರು. ಅವರು ನಡುಪದವಿನ ಶಂಸುಲ್ ಉಲಮಾ ಇಸ್ಲಾಮಿಕ್ ಸೆಂಟರ್ ಹಾಗೂ ಎಸ್‍ಕೆಎಸ್‍ಎಸ್‍ಎಫ್ ನಡುಪದವು ಪಟ್ಟೋರಿ ಶಾಖೆ ಇದರ ವತಿಯಿಂದ ಆಯೋಜಿಸಲಾಗಿದ್ದ ಸಾಧಕರಿಗೆ ಸನ್ಮಾನ ಹಾಗೂ ಸಮಸ್ತ ಅಗಲಿದ ನೇತಾರರ ಅನುಸ್ಮರಣಾ ಸಂಗಮದಲ್ಲಿ ಭಾಗವಹಿಸಿ ಮಾತನಾಡಿದರು.ಬಹು ಅಸಯ್ಯಿದ್ ಅಮೀರ್ ತಂಙಳ್ ಅಲ್ ಬುಖಾರಿ ಕಿನ್ಯರವರ ದುವಾದೊಂದಿಗೆ ಆರಂಭಗೊಂಡ ಸಭೆಯಲ್ಲಿ ಶೈಖುನಾ ಅಲ್ ಹಾಜ್ ಎಂಪಿ.ಮಹಮ್ಮದ್ ಮುಸ್ಲಿಯಾರ್ ಪಟ್ಟೋರಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಮಸ್ತ ಕರ್ನಾಟಕ ಜಂಯಿಯ್ಯತುಲ್ ಉಲಮಾ ಇದರ ಪ್ರಧಾನ ಕಾರ್ಯದರ್ಶಿ ಬಿ.ಕೆ.ಅಬ್ದುಲ್ ಖಾದಿರ್ ಅಲ್ ಖಾಸಿಮಿ ಬಂಬ್ರಾಣ ಅವರು ಸಮಾರಂಭವನ್ನು ಉದ್ಘಾಟಿಸಿದರು. ಇಬ್ರಾಹಿಂ ಭಾಖವಿ ಕೆ.ಸಿ.ರೋಡ್, ರಿಯಾಝ್ ರಹ್ಮಾನಿ ಕಿನ್ಯ ಸಭೆಯನ್ನುದ್ದೇಶಿಸಿ ಮಾತನಾಡಿದರು. ಸಮಾರಂಭದಲ್ಲಿ ಸಚಿವ ಯು.ಟಿ.ಖಾದರ್,…
UN NETWORKS ಕೊಣಾಜೆ: ಮಂಗಳೂರು ವಿಶ್ವವಿದ್ಯಾನಿಲಯದ ಡಾ| ಪಿ. ದಯಾನಂದ ಪೈ ಮತ್ತು ಪಿ. ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರದ 2018-19ನೇ ಸಾಲಿನ ಯಕ್ಷಮಂಗಳ ಪ್ರಶಸ್ತಿಯನ್ನು ತೆಂಕುತಿಟ್ಟಿನ ಹಿರಿಯ ಯಕ್ಷಗಾನ ಕಲಾವಿದ, ಅರ್ಥಧಾರಿ ಕುಂಬ್ಳೆ ಸುಂದರ ರಾವ್ ಹಾಗೂ ಬಡಗುತಿಟ್ಟಿನ ಹಿರಿಯ ವೇಷಧಾರಿ ಗೋಡೆ ನಾರಾಯಣ ಹೆಗಡೆ ಹಾಗೂ ಕೃತಿ ಪ್ರಶಸ್ತಿಯನ್ನು ವಿದ್ವಾಂಸ ಪ್ರೊ| ಜಿ.ಎಸ್. ಭಟ್ಟ ಸಾಗರ ಅವರ “ಯಕ್ಷಗಾನ ಅಂಗೋಪಾಂಗ ಸಮತೋಲನ ವಿಚಾರ’ ಕೃತಿಗೆ ನೀಡಿ ಗೌರವಿಸಲಾಯಿತು. ಮಂಗಳೂರು ವಿ.ವಿ.ಯ ಮಂಗಳ ಸಭಾಂಗಣದಲ್ಲಿ ಪ್ರಭಾರ ಕುಲಪತಿ ಪ್ರೊ| ಕಿಶೋರಿ ನಾಯಕ್ ಕೆ. ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ನಡೆಯಿತು. ಪ್ರೊ| ಎಂ.ಎಲ್. ಸಾಮಗ ಅಭಿನಂದನ ಭಾಷಣ ಮಾಡಿದರು. ಕುಂಬ್ಳೆ ಸುಂದರ ರಾವ್ ಶಾಸಕರಾಗಿದ್ದ ಸಂದರ್ಭ ಯಕ್ಷಗಾನಕ್ಕೆ ಪ್ರತ್ಯೇಕ ಅಕಾಡೆಮಿ ಆರಂಭಗೊಂಡಿತ್ತು. ಕಲಾವಿದರಾಗಿ ಅವರದು ಮಹಾ ಸಾಧನೆಯಾಗಿದೆ. ಅವರ ಪಾತ್ರಗಳು ಪ್ರೇಕ್ಷಕರ ಮನದಲ್ಲಿ ಈಗಲೂ ಭದ್ರವಾಗಿ ನೆಲೆನಿಂತಿವೆ. ಗೋಡೆಯವರು ತನ್ನದೇ ಆದ ಪ್ರತ್ಯೇಕ ಶೈಲಿಯನ್ನು ಸ್ಥಾಪಿಸಿದವರು. ಕುಣಿತ,…
UN NETWORKS ಉಳ್ಳಾಲ: ಲೋಕಸಭಾ ಚುನಾವಣಾ ಹಿನ್ನೆಲೆಯಲ್ಲಿ ಉಳ್ಳಾಲ ಮತ್ತು ಕೊಣಾಜೆ ಭಾಗದಲ್ಲಿ ಸಿ ಆರ್ ಪಿಎಫ್ ಪಡೆ ಮತ್ತು ಸ್ಥಳೀಯ ಪೊಲೀಸರ ನೇತೃತ್ವದಲ್ಲಿ ರೂಟ್ ಮಾರ್ಚ್ ಶುಕ್ರವಾರ ಸಂಜೆ ವೇಳೆ ಜರಗಿತು. ಉಳ್ಳಾಲ ಠಾಣಾ ವ್ಯಾಪ್ತಿಯ ಅಬ್ಬಕ್ಕ ಸರ್ಕಲ್, ಮೊಗವೀರಪಟ್ನ, ಕೋಡಿ, ಕೋಟೆಪುರ, ಪ್ಯಾರೀಸ್ ಜಂಕ್ಷನ್, ತೊಕ್ಕೊಟ್ಟು, ಕುತ್ತಾರು ಮತ್ತು ಕೊಣಾಜೆ ಠಾಣಾ ವ್ಯಾಪ್ತಿಯ ದೇರಳಕಟ್ಟೆ, ನಾಟೆಕಲ್ ,ಮುಡಿಪು ,ಕಾಯರ್ ಗೋಳಿ, ಮೊಂಟೆಪದವು, ಮಂಜನಾಡಿ, ಉರುಮಣೆ ಭಾಗದಲ್ಲಿ ನಡೆಯಿತು. ಸಿಆರ್‍ಪಿಎಫ್ ಬೆಂಗಳೂರು ಪಡೆಯ ಕಮಾಂಡರ್ ಮಾರುತಿ ನಾಯ್ಕ್, ಎಸಿಪಿ ರಾಮರಾವ್, ಠಾಣಾಧಿಕಾರಿ ಗುರುವಪ್ಪ ಕಾಂತಿ, ಕೊಣಾಜೆ ಠಾಣಾಧಿಕಾರಿ ರವಿ ನಾಯ್ಕ್, ಎಸ್. ಐ ಉಮೇಶ್ ನೇತೃತ್ವದಲ್ಲಿ ಮಾರ್ಚ್ ನಡೆಯಿತು.
UN NETWORKS ದೇರಳಕಟ್ಟೆ: ಕಾಲಘಟ್ಟದ ವ್ಯವಸ್ಥೆಯಲ್ಲಿ ಹಲವು ಶಬ್ದಗಳು ಬದಲಾವಣೆಗಳಾಗುತ್ತಿವೆ. ಇಂತಹ ಕಾಲದ ಪ್ರವಾಹದಲ್ಲಿ ಕಳೆದುಕೊಳ್ಳುವ ಶಬ್ದಗಳನ್ನು ಪಡೆದುಕೊಳ್ಳಲು ನಿಘಂಟುಗಳ ಅವಶ್ಯಕತೆ ಅಗತ್ಯ . ಈ ನಿಟ್ಟಿನಲ್ಲಿ ತುಳು ಜ್ಞಾತಿ ಪದಕೋಶ ರಚನೆಗೆ ಪ್ರೋತ್ಸಾಹಿಸಿದ ನಿಟ್ಟೆ ವಿಶ್ವವಿದ್ಯಾಲಯದ ಕಾರ್ಯ ಶ್ಲಾಘನೀಯ ಎಂದು ಎಂದು ಬೆಂಗಳೂರು ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ. ಹಂಪ ನಾಗರಾಜಯ್ಯ ಹೇಳಿದರು. ದೇರಳಕಟ್ಟೆಯ ನಿಟ್ಟೆ ಪರಿಗಣಿಸಲಾಗಿರುವ ವಿಶ್ವವಿದ್ಯಾಲಯದ ತುಳು ಭಾಷಾ ವಿಭಾಗದ ಆಶ್ರಯದಲ್ಲಿ ತುಳುಭಾಷಾ ತಜ್ಞರಾದ ಡಾ. ಪದ್ಮನಾಭ ಕೇಕುಣ್ಣಾಯ ಹಾಗೂ ಡಾ. ಸಾಯಿಗೀತಾ ಸಂಪಾದಕತ್ವದಲ್ಲಿ ರಚಿಸಲಾದ ತುಳು ಭಾಷಾ ನಿಘಂಟು “ತುಳು ಜ್ಞಾತಿ ಪದಕೋಶ’ ವನ್ನು ಶುಕ್ರವಾರ ನಿಟ್ಟೆ ವಿಶ್ವವಿದ್ಯಾಲಯದಲ್ಲಿ ನಡೆದ ಸಮಾರಂಭದಲ್ಲಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು. ಕಾಲದ ಪ್ರವಾಹದಲ್ಲಿ ಅನ್ಯ ಭಾಷೆಗಳನ್ನು ಕೂಡಿಸಿಕೊಂಡು ಕೃತಿಗಳ ರಚನೆಯಾಗುತ್ತಿದೆ. ಈ ವೇಳೆ ಶಬ್ದಗಳನ್ನು ಕಳೆದುಕೊಳ್ಳುವ, ಪಡೆದುಕೊಳ್ಳುವ ಪ್ರಕ್ರಿಯೆಗಳನ್ನು ತಿಳಿದುಕೊಳ್ಳಲು ನಿಘಂಟು ಅತ್ಯವಶ್ಯಕ. ಜಾಗತಿಕವಾಗಿ ನಿಘಂಟಿಗೆ ದೊಡ್ಡ ಇತಿಹಾಸವಿದೆ. ದೀರ್ಘಕಾಲಿಕ ಪ್ರಭಾವ ಬೀರುವ ಕೃತಿಯ ಬಿಡುಗಡೆಯ ಸಮಾರಂಭ ಸಂತಸ ನೀಡಿದೆ.…
UN NETWORKS ನಾಟೆಕಲ್ : ನಾಟೆಕಲ್ ವಿಜಯನಗರದಲ್ಲಿ ಸಬೀಲುಲ್ ರಶಾದ್ ಇಸ್ಲಾಮಿಕ್ ಟ್ರಸ್ಟಿನ ಅಧೀನದಲ್ಲಿ ನಿರ್ಮಿಸಲಾದ ಮಸೀದಿಯ ವಕ್ಫ್ ಕಾರ್ಯಕ್ರಮ ಬುಧವಾರ ನಡೆಯಿತು. ಸಯ್ಯದ್ ಜಲಾಲ್ ತಂಙಳ್ ಮಳ್ಹರ್ ಪೊಸೋಟು ದುಅ ನೆರವೇರಿಸಿ ವಕ್ಫ್ ಗೈದರು.ನಂತರ ಮಾತನಾಡಿದ ಅವರು ಮಸೀದಿಯ ಮಹತ್ವವನ್ನು ತಿಳಿಸುತ್ತಾ,ಮಸೀದಿ ನಿರ್ಮಾಣಕ್ಕಾಗಿ ನೆರವು ನೀಡುವಂತಹದ್ದು ಪುಣ್ಯಕಾರ್ಯ,ಮಸೀದಿಯಲ್ಲಿ ಧಾರ್ಮಿಕ ಇತಿ ಮಿತಿಯೊಳಗೆ ಸಲ್ಲಿಸಬೇಕಾದ ಆರಾಧನಾ ಕ್ರಮಗಳನ್ನು ಮಹಲ್ಲಿನ ಪ್ರತಿಯೊಬ್ಬರೂ ಚಾಚೂ ತಪ್ಪದೆ ಪಾಲಿಸಬೇಕೆಂದರು ಎಂದು ಹೇಳಿದರು.ಸಬೀಲುಲ್ ರಶಾದ್ ಇಸ್ಲಾಮಿಕ್ ಚಾರಿಟೇಬಲ್ ಟ್ರಸ್ಟಿನ ಅಧ್ಯಕ್ಷ ಇಸ್ಮಾಯಿಲ್ ಜಾಸ್ಮೀನ್, ಜಿ.ಪಂ ಮಾಜಿ ಸದಸ್ಯ ಹಾಜಿ ಎನ್.ಎಸ್ ಕರೀಂ, ಮೊಯ್ಯದ್ದೀನ್ ಜುಮಾ ಮಸ್ಜಿದ್ ಉರುಮಣೆ ಅಧ್ಯಕ್ಷ ಅಬ್ಬಾಸ್ ಮದ್ಪಾಡಿ, ಸ್ಥಳೀಯ ಮುಖಂಡರಾದ ಹಾಜಿ ಹಮ್ಮಬ್ಬ, ಹಾಜಿ ಅಬ್ದುಲ್ ರಝಾಕ್, ಹಾಜಿ ಅಬ್ದುಲ್ ಖಾದರ್ ಕಲ್ಪಾದೆ, ಮುಹಮ್ಮದ್ ಶರೀಫ್, ಅಬ್ದುಲ್ ಖಾದರ್ ಅಡ್ಯಾರ್, ಕೆ.ಎಸ್ ಇಸ್ಮಾಯಿಲ್ ಕಿನ್ಯ, ಖಾದರ್ ಇನೊಳಿ, ಮುಹಮ್ಮದ್ ಕಮಾಲ್, ಎ.ಎಂ ಅಬ್ದುಲ್ ಅಝೀಝ್ , ಅಬ್ದುಲ್ ಹಕೀಂ ಡ್ಯಾನಿಶ್,ಅಬ್ಬಾಸ್ ಸಫರ್ ಫೂಟ್ ವಿಯರ್,ಮೂಸಾ…
UN NETWORKS ರಥಬೀದಿ : ಮಂಗಳೂರು ರಥಬೀದಿಯ ಡಾ. ಪಿ. ದಯಾನಂದ ಪೈ-ಪಿ. ಸತೀಶ ಪೈ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳ ಸಂಘದ ವಾರ್ಷಿಕೋತ್ಸವದ ಪ್ರಯುಕ್ತ ದ.ಕ ಜಿಲ್ಲಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಆಯ್ದ ಖಾಸಗಿ ಕಾಲೇಜುಗಳ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಲಾಗಿದ್ದ ” ತೆಲಿಕೆ 2019 ” ಎಂಬ ಹಾಸ್ಯ ಪ್ರಹಸನ ಸ್ಪರ್ಧೆಯಲ್ಲಿ ಕಲ್ಲಡ್ಕ ಶ್ರೀ ರಾಮ ಪ್ರಥಮ ದರ್ಜೆ ಕಾಲೇಜು ತಂಡ `ತೆಲಿಕೆ 2019′ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದೆ. ದ.ಕ. ಮತ್ತು ಉಡುಪಿ ಜಿಲ್ಲೆಯ 14ಕಾಲೇಜು ತಂಡಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಬಂಟ್ವಾಳ ದ್ವಿತೀಯ ಸ್ಥಾನ, ಮಿಲಾಗ್ರಿಸ್ ಕಾಲೇಜು ಕಲ್ಯಾಣಪುರ ತೃತೀಯ, ಮಂಗಳೂರಿನ ಪದುವಾ ಪ್ರಥಮದರ್ಜೆ ಕಾಲೇಜು ಚತುರ್ಥ ಸ್ಥಾನ ಪಡೆದುಕೊಂಡು ಖಾಸಗಿ ವಾಹಿನಿ ನಡೆಸುವ ಸ್ಪರ್ಧೆಗೆ ನೇರ ಪ್ರವೇಶ ಪಡೆದುಕೊಂಡಿದೆ.ಖ್ಯಾತ ಹಾಸ್ಯ ನಟ ಕಾಮಿಡಿ ಕಿಲಾಡಿಗಳು ಖ್ಯಾತಿಯ ಸೂರಜ್ ಪಾಂಡೇಶ್ವರ್ ತೆಲಕೆ- 2019 ಚಾಲನೆ ನೀಡಿದರು.ಪ್ರಿನ್ಸಿಪಾಲ್ ಪ್ರೊ. ರಾಜಶೇಖರ್ ಹೆಬ್ಬಾರ್ ಸಿ. ಅಧ್ಯಕ್ಷತೆ…
UN NETWORKS ಸೋಮೇಶ್ವರ : ಸೋಮೇಶ್ವರ ಬಾಸ್ರಿತ್ತಾಯರಬೈಲ್ ಶ್ರೀ ರಕ್ತೇಶ್ವರೀ ದೈವಸ್ಥಾನದ ವಾರ್ಷಿಕ ನೇಮೋತ್ಸವ, ರಕ್ತೇಶ್ವರಿ ಬಳಗದ ವಾರ್ಷಿಕೋತ್ಸವ ಇತ್ತೀಚೆಗೆ ನಡೆಯಿತು. ಗೋಪಾಲಕೃಷ್ಣ ಮಂಗಳೂರು ದ್ವಜಾರೋಹಣಗೈದರು. ರಕ್ತೇಶ್ವರಿ ಬಳಗದ ಹಿರಿಯ ಸದಸ್ಯ ಲಕ್ಷ್ಮಣ್ ಸೋಮೇಶ್ವರ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು.ಪ್ರೊ. ಕಬಡ್ಡಿ ಕ್ರೀಡಾಪಟು ಸಚಿನ್ ಕೊಲ್ಯ, ಕರಾಟೆ ತರಬೇತುದಾರ ಹರೀಶ್ ಉಳಿಯ ಹಾಗೂ ಹರೀಶ್ ಉಳಿಯರ ಶಿಷ್ಯ ಕರಾಟೆಯಲ್ಲಿ ಸಾಧನೆ ಮಾಡಿದ ಮೋಹನ್ ಕೋಟೆಕಾರು ಅವರನ್ನು ಸನ್ಮಾನಿಸಲಾಯಿತು.ಸನ್ಮಾನ ಸ್ವೀಕರಿಸಿ ಮಾತನಾಡಿದ ಸಚಿನ್ ಕೊಲ್ಯ ಅವರು ಮಕ್ಕಳಲ್ಲಿರುವ ಪ್ರತಿಭೆ ಬೆಳೆಯಲು ಅವಕಾಶ ಕ್ರೀಡಾಕೂಟದಿಂದ ಸಾಧ್ಯವಾಗುತ್ತದೆ. ಕಬಡ್ಡಿ ಪಂದ್ಯಾಟದಲ್ಲೂ ಅವಕಾಶ ಇದೆ. ಇದರಿಂದ ಒಳ್ಳೆಯ ಕೆಲಸ ಸಿಗುವ ಅವಕಾಶ ಕೂಡಾ ಇರುತ್ತದೆ ಎಂದು ಹೇಳಿದರು. ಮಕ್ಕಳ ಬೆಳವಣಿಗೆಗೆ ಕರಾಟೆಯಂತಹ ಕ್ರೀಡೆಯು ಸಹಕಾರ ಆಗಿದೆ. ಮಕ್ಕಳಲ್ಲಿರುವ ಆಸಕ್ತಿಗೆ ಅವಕಾಶ ನೀಡಬೇಕು, ಅವರ ಪ್ರತಿಭೆಯನ್ನು ಬೆಳೆಸಬೇಕು ಎಂದು ಹರೀಶ್ ಉಳಿಯ ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರಕ್ತೇಶ್ವರಿ ದೇವಸ್ಥಾನದ ತಂತ್ರಿ ವೇದಮೂರ್ತಿ ಬ್ರ್ರಹ್ಮಶ್ರೀ ಸುಬ್ರಹ್ಮಣ್ಯ ಬಾಸ್ರಿತಾಯರು, ರಕ್ತೇಶ್ವರಿ ದೇವಸ್ಥಾನದ…
UN NETWORKS ಕೊಲ್ಯ: ಮಂಗಳೂರು ವಿಧಾನಸಭಾ ಕ್ಷೇತ್ರ ಭಾರತೀಯ ಜನತಾ ಪಾರ್ಟಿಯಿಂದ ಪ್ರಬುದ್ಧರ ಕೊಲ್ಯ ಸೌಭಾಗ್ಯ ಭವನದಲ್ಲಿ ಗುರುವಾರ ಗೋಷ್ಠಿ ನಡೆಯಿತು. ಮಾಜಿ ಶಾಸಕ ಕೆ.ಜಯರಾಮ ಶೆಟ್ಟಿ ಉದ್ಘಾಟಿಸಿದರು. ಬಿಜೆಪಿ ಕ್ಷೇತ್ರಧ್ಯಕ್ಷ ಸಂತೋಷ್ ರೈ ಬೋಳಿಯಾರ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಭಾಷಣಗಾರರಾಗಿ ರಾಜ್ಯ ಬಿ.ಜೆ.ಪಿ.ಸಹ ವಕ್ತಾರೆ ಮಾಳವಿಕ ಭಾಗವಹಿಸಿದ್ದರು. ಕ್ಷೇತ್ರ ಚುನಾವಣಾ ಪ್ರಭಾರಿ ರಾಧಾಕೃಷ್ಣ ರೈ, ರಾಜ್ಯ ಕಾರ್ಯಕಾರಿಣಿ ಸದಸ್ಯ ಕೆ.ರವೀಂದ್ರ ಶೆಟ್ಟಿ ಉಳಿದೊಟ್ಟು, ಜಿಲ್ಲಾ ಉಪಾಧ್ಯಕ್ಷ ಚಂದ್ರಹಾಸ ಉಳ್ಳಾಲ್, ಕಾರ್ಯದರ್ಶಿ ಸತೀಶ್ ಕುಂಪಲ, ನಮಿತಾ ಶ್ಯಾಮ್, ಚುನಾವಣಾ ಸಂಚಾಲಕ ಚಂದ್ರಶೇಖರ ಉಚ್ಚಿಲ್, ಮಹಿಳಾ ಮೊರ್ಚಾ ಜಿಲ್ಲಾಧ್ಯಕ್ಷೆ ಪೂಜಾ ಪೈ, ಪ್ರ.ಕಾರ್ಯದರ್ಶಿ ಮೋಹನ್ ರಾಜ್ ಮೊದಲಾದವರು ಉಪಸ್ಥಿತರಿದ್ದರು.ಕ್ಷೇತ್ರ ವ್ಯಾಪ್ತಿಯ ವಿವಿಧ ಕ್ಷೇತ್ರದ ಪ್ರಮುಖರು ಭಾಗವಹಿಸಿದ್ದರು.
UN NETWORKS ಕೋಟೆಕಾರ್ : ಶಾಂತಿ, ಸೌಹಾರ್ದತೆಯ ಪ್ರತೀಕವಾಗಿರುವ ಕ್ರೀಡೆಗಳಲ್ಲಿ ಭಾಗವಹಿಸುವವರು ಕ್ರೀಡಾ ಮನೋಬಾವದಿಂದ ಆಡಿದರೆ ಮುಂದೆ ಉನ್ನತ ಮಟ್ಟದ ಕ್ರೀಡಾ ಪಟುವಾಗಿ ಹೊರೆಹೊಮ್ಮಲು ಸಾಧ್ಯ ಎಂದು ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ ಅಭಿಪ್ರಾಯಪಟ್ಟರು. ಕೋಟೆಕಾರ್ ಮಾಡೂರು ಗೋಲ್ಡನ್ ಕ್ರಿಕೆಟರ್ಸ್ ಬೆಳ್ಳಿ ಹಬ್ಬದ ಪ್ರಯುಕ್ತ ಮಾಡೂರಿನಲ್ಲಿ ನಡದ ಸೌಹಾರ್ದ ಕ್ರಿಕೆಟ್ ಪಂದ್ಯಾಟದ ಸಮಾರೋಪ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಕಾರ್ಯಕ್ರಮದಲ್ಲಿ ನಿವೃತ ಯೋದರಾದ ಸದಾಶಿವ ಶೆಟ್ಟಿ, ತಾರನಾಥ ಪೂಜಾರಿ, ಕೃಷಿಕರಾದ ನಾರಾಯಣ ರೈ ಕೊಂಡಾಣಗುತ್ತು, ನಾರಾಯಣ ಪೂಜಾರಿ ಸೋವೂರು ಮತ್ತು ಗೋಲ್ಡನ್ ಕ್ರಿಕೆಟರ್ಸ್ ಅಧ್ಯಕ್ಷ ಬಶೀರ್ ಮಾಡೂರು ಅವರನ್ನು ಸನ್ಮಾನಿಸಲಾಯಿತು.ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಸುರೇಶ್ ಭಟ್ನಗರ, ದೇರಳಕಟ್ಟೆ ರೋಟರಿ ಕ್ಲಬ್ ಅಧ್ಯಕ್ಷ ಪುರುಷೋತ್ತಮ ಅಂಚನ್, ಕೋಟೆಕಾರ್ ವಲಯ ಕಾಂಗ್ರೆಸ್ ಅಧ್ಯಕ್ಷ ಉಮೇಶ್ ಗಾಂಭೀರ್, ಕೋಟೆಕಾರ್ ಪಂಚಾಯಿತಿ ಮಾಜಿ ಸದಸ್ಯ ಸಂತೋಷ್ ಶೆಟ್ಟಿ ಮಾಡೂರು, ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಹ್ಮಾನ್ ಕೋಡಿಜಾಲ್, ಸಂಘಟನಾ ಕಾರ್ಯದರ್ಶಿ ಸಲೀಮ್…

