UN NETWORKS ತೊಕ್ಕೊಟ್ಟು: ಕ್ಯಾಂಟೀನ್‌ನಲ್ಲಿ ಊಟ ಮಾಡಿದ ಬಳಿಕ ಅದರ ಮಾಲಕ ಹಣ ಕೇಳಿದಕ್ಕೆ ತಂಡವೊಂದು ಕ್ಯಾಂಟೀನ್‌ಗೇ ಬೆಂಕಿ ಹಚ್ಚಿದ ಘಟನೆ ತೊಕ್ಕೊಟ್ಟು ಸಮೀಪ ಕಾಪಿಕಾಡ್‌ನಲ್ಲಿ ಗುರುವಾರ ರಾತ್ರಿ ನಡೆದಿದೆ. ಉಳ್ಳಾಲ ಹಳೆಕೋಟೆಯ ಅಬೀದ್ ಎಂಬವರಿಗೆ ಸೇರಿದ ಕಾಪಿಕಾಡಿನಲ್ಲಿರುವ ಕ್ಯಾಂಟಿನ್‌ನಲ್ಲಿ ಈ ಘಟನೆ ನಡೆದಿದೆ. ಬೆಂಕಿಯಿಂದ ಕ್ಯಾಂಟೀನ್ ಭಾಗಶ: ಹಾನಿಗೀಡಾಗಿದೆ. ಕುಂಪಲ ನಿವಾಸಿ ರವೂಫ್ ಹಾಗೂ ತಂಡ ಈ ಕೃತ್ಯ ಎಸಗಿದೆ ಎಂದು ಪೊಲೀಸ್ ದೂರಿನಲ್ಲಿ ತಿಳಿಸಲಾಗಿದೆ. ಘಟನೆ ವಿವರ: ಕುಂಪಲ ನಿವಾಸಿ ರವೂಫ್ ಮತ್ತು ಆತನ ತಂಡ ನಿನ್ನೆ ರಾತ್ರಿ ಕ್ಯಾಂಟೀನ್‌ಗೆ ಆಗಮಿಸಿ ಹೊಟ್ಟೆ ತುಂಬ ಊಟ ಮಾಡಿದ್ದರೆನ್ನಲಾಗಿದೆ. ಬಳಿಕ ಊಟದ ಬಿಲ್ ಕೊಡದೆ ಜಾಗ ಖಾಲಿ ಮಾಡಲು ಮುಂದಾದರು ಎನ್ನಲಾಗಿದೆ. ಈ ಸಂದರ್ಭ ಕ್ಯಾಂಟೀನ್ ಮಾಲಕ ಹಣ ನೀಡುವಂತೆ ಕೇಳಿದ್ದಾರೆ. ಇದರಿಂದ ಕೋಪಗೊಂಡ ತಂಡ ಕ್ಯಾಂಟೀನ್‌ಗೆ ಬೆಂಕಿ ಹಚ್ಚಿದೆ ಎಂದು ದೂರಲಾಗಿದೆ. ಈ ಬಗ್ಗೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Author: UllalaVani
UN NETWORKS ಕುರ್ನಾಡು: ಜಿಲ್ಲಾ ಪಂಚಾಯಿತಿ, ಬಂಟ್ವಾಳ ತಾಲೂಕು ಪಂಚಾಯಿತಿ, ಸ್ವಚ್ಛ ಭಾರತ ಮಿಷನ್ ಸಹಕಾರದಲ್ಲಿ ಕುರ್ನಾಡು ಗ್ರಾಮ ಪಂಚಾಯಿತಿ ವತಿಯಿಂದ ಬುಧವಾರ ಕುರ್ನಾಡು ಗ್ರಾ.ಪಂ. ಸಭಾಂಗಣದಲ್ಲಿ ನಡೆದ ಸ್ವಚ್ಛ ಸರ್ವೇಕ್ಷಣ ಗ್ರಾಮೀಣ ಕಾರ್ಯಕ್ರಮ ನಡೆಯಿತು. ಜಿಲ್ಲಾ ಸ್ವಚ್ಛತಾ ರಾಯಭಾರಿ ಶೀನ ಶೆಟ್ಟಿ ಸ್ವಚ್ಛತೆ ಬಗ್ಗೆ ಮಾಹಿತಿ ನೀಡಿದರು. ಕುರ್ನಾಡು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶೈಲಜಾ ಮಿತ್ತಕೋಡಿ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ನಿತಿನ್ ಗಟ್ಟಿ, ಸದಸ್ಯರಾದ ಶಿವಶಂಕರ್, ಗೋಪಾಲ ಬಂಗೇರ, ಜನಶಿಕ್ಷಣ ಟ್ರಸ್ಟ್ ನಿರ್ದೇಶಕ ಕೃಷ್ಣ ಮೂಲ್ಯ ಉಪಸ್ಥಿತರಿದ್ದರು.ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕೇಶವ ಸ್ವಾಗತಿಸಿದರು.
UN NETWORKS ಪಾವೂರು: ವಿದ್ಯಾರ್ಥಿಗಳು ತಮ್ಮ ಪೋಷಕರಿಂದ ಒಂದು ವಾರಗಳ ಕಾಲ ದೂರವಾಗಿ ಮನೆ ಬಿಟ್ಟು ಯಾವುದೋ ಊರಿನಲ್ಲಿ ಜೀವನ ಸಾಗಿಸುವುದು ಕಷವಾದರೂ ಒಂದು ಶಾಲೆಯನ್ನು ಅಭಿವೃದ್ಧಿಪಡಿಸುವ ಕಾರ್ಯದಲ್ಲಿ ಸ್ವಲ್ಪ ಸೇವೆ ಮಾಡಿದ ತೃಪ್ತಿಯ ಜೊತೆಗೆ ಈ ಅವಧಿಯಲ್ಲಿ ಸಿಗುವ ಅನುಭವ ಮುಂದಿನ ಜೀವನಕ್ಕೆ ಸಿಗುವ ಪಾಠವಾಗಿರುತ್ತದೆ ಎಂದು ಪಾವೂರು ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಉಷಾ ಅಭಿಪ್ರಾಯಪಟ್ಟರು. ಪಾವೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಮಂಗಳೂರಿನ ಶ್ರೀ ಗೋಕಣಾರ್ಥೇಶ್ವರ ಕಾಲೇಜಿನ ಎನ್‍ಎಸ್‍ಎಸ್ ವಾರ್ಷಿಕ ಶಿಬಿರದ ಸಮಾರೋಪದಲ್ಲಿ ಅವರು ಮಾತನಾಡಿದರು.ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಂಘದ ಮಾಜಿ ಕೋಶಾಧಿಕಾರಿ ನಾರಾಯಣ ಪೂಜಾರಿ ಮಾತನಾಡಿ, ಎನ್‍ಎಸ್‍ಎಸ್ ಶಿಬಿರದಲ್ಲಿ ಭಾಗಿಯಾಗುವುದು ಎಂದರೆ ಜೀವನದ ಮುಂದಿನ ಮೆಟ್ಟಿಲು ಏರಿದಂತಾಗುತ್ತದೆ. ನಮ್ಮ ಮುಂದೆ ನಿರ್ದಿಷ್ಟ ಗುರಿ ಇರಬೇಕು. ಅದಕ್ಕೆ ತಕ್ಕಂತೆ ಮಾರ್ಗದರ್ಶನ ನೀಡುವ ಗುರು ಇದ್ದರೆ ಸಾಧನೆ ಸುಲಭ ಸಾಧ್ಯ ಎಂದು ನುಡಿದರು. ಸಂತ ಅಲೋಶಿಯಸ್ ಕಾಲೇಜಿನ ಉಪನ್ಯಾಸಕಿ ಚಿತ್ರಾವತಿ ಮಾತನಾಡಿ, ಸ್ವಯಂಸೇವೆ ಇನ್ನೊಬ್ಬರಿಗೆ ಉಪಯೋಗ ಆಗಬೇಕು ಎನ್ನುವುದು ಎನ್‍ಎಸ್‍ಎಸ್ ಧ್ಯೇಯ.…
UN NETWORKS ದೇರಳಕಟ್ಟೆ: ದೇರಳಕಟ್ಟೆಯ ನಿಟ್ಟೆ ಪರಿಗಣಿಸಲಾಗಿರುವ ವಿವಿಗೆ ಆಮೇರಿಕಾದ ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯದ ಸಾಮಾಜಿಕ ನೀತಿ ಮತ್ತು ತರಬೇತಿ ಶಾಲೆಯ 11 ವಿದ್ಯಾರ್ಥಿಗಳ ತಂಡ ಭಾರತದಲ್ಲಿ ಮೆಕ್ರೋ ಫೈನಾನ್ಸ್ ಎಕ್ಸರಿಮೆಂಟ್ಸ್ ಅಧ್ಯಯನ ಮಾಡಲು ಕ್ಯಾಂಪಸ್‍ಗೆ ಭೇಟಿ ನೀಡಿದೆ. ನಿಟ್ಟೆ ವಿವಿಯ ಸಹ ಕುಲಪತಿ ಪ್ರೊಫೆಸರ್ ಡಾ. ಎಂ.ಎಸ್. ಮೂಡಿತ್ತಾಯ ಮೈಕ್ರೋ ಫೈನಾನ್ಸ್ ಮತ್ತು ಗ್ರಾಮೀಣಾಭಿವೃದ್ಧಿ ಕುರಿತು ಉಪನ್ಯಾಸ ನೀಡಿದರು. ಪ್ರೊಫೆಸರ್ ಡಾ. ಫೆಮಿಂಡಾ ಹ್ಯಾಂಡಿ ಮಾರ್ಗದರ್ಶನದಲ್ಲಿ ಎರಡು ವಾರ ಭೇಟಿ ನೀಡಲಿರುವ ಈ ತಂಡ ಪ್ಲ್ಯಾನರ್ಗಳು, ಪಾಲಿಸಿ ಮೇಕರ್ಸ್, ಪ್ರಾಕ್ಟೀಷನರ್ಸ್ ಮತ್ತು ಮೆ`ಕ್ರೋ ಫೈನಾನ್ಸ್ ಫಲಾನುಭವಿಗಳೊಂದಿಗೆ ಸಂವಹನ ನಡೆಸುತ್ತಿದೆ.
UN NETWORKS ಕೈರಂಗಳ: ಬಂಟ್ವಾಳ ತಾಲೂಕಿನ ಕೈರಂಗಳ ಗ್ರಾಮದ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಸಂಘದ ವಾರ್ಷಿಕೋತ್ಸವ ಯಕ್ಷಗಾನ ಸಂಘದ ವಠಾರದಲ್ಲಿ ಭಾನುವಾರ ನಡೆಯಿತು.ಪ್ರಗತಿಪರ ಕೃಷಿಕ ಕಾಂತಿಲ ಲಕ್ಷೀ ನಾರಾಯಾಣ ಭಟ್ ಅಧ್ಯಕ್ಷತೆ ವಹಿಸಿದ್ದರು. ಹೂ ಹಾಕುವ ಕಲ್ಲಿನ ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ನಾಗರಾಜ ಪದಕಣ್ಣಾಯ, ಬಾಳೆಪುಣಿ ಗ್ರಾಮ ಪಂಚಾಯಿತಿ ಸದಸ್ಯೆ ಸಂಧ್ಯಾ ಕಿಶೋರ್ ಗಟ್ಟಿ ಹಾಗೂ ಕೂಟತ್ತಜೆ ಶ್ರೀ ಉಳ್ಳಾಲ್ತಿ ಅಮ್ಮನವರ ಸೇವಾ ಸಮಿತಿಯ ಅಧ್ಯಕ್ಷ ಸತೀಶ್ ಜೋಗಿ ಬದಿಯಾರು ಉಪಸ್ಥಿತರಿದ್ದರು.ಭಾಗವತ ರಾಜಾರಾಮ ಹೊಳ್ಳ ಸ್ವಾಗತಿಸಿದರು. ಪತ್ರಕರ್ತ ಚಂದ್ರಹಾಸ ಕಣಂತೂರು ಕಾರ್ಯಕ್ರಮ ನಿರೂಪಿಸಿದರು. ಕೆಎಸ್‍ಆರ್‍ಟಿಸಿ ಸಿಬ್ಬಂದಿ ಪದ್ಮನಾಭ ಗಟ್ಟಿ ವಂದಿಸಿದರು. ಸಾಂಸ್ಕೃತಿಕ ಕಾರ್ಯಕ್ರಮ ಅಂಗವಾಗಿ ಸಂಘದ ಬಾಲ ಕಲಾವಿದರಿಂದ ನರಕಾಸುರ ಮೋಕ್ಷ ಹಾಗೂ ಸಂಘದ ಸದಸ್ಯರು ಹಾಗೂ ಅತಿಥಿ ಕಲಾವಿದರ ಕೂಡುವಿಕೆಯಲ್ಲಿ ಕಾಯಕಲ್ಪ ಯಕ್ಷಗಾನ ಬಯಲಾಟ ಪ್ರದರ್ಶನ ನಡೆಯಿತು.
UN NETWORKS ಮುಂಬಯಿ: ಮುಲುಂಡ್ ಪೂರ್ವದ ಗಾವನಪಾಡದ ಶಾಂತಿವನ ಅಪಾರ್ಟ್‍ಮೆಂಟ್ ನಿವಾಸಿ ಉದ್ಯಾವರ ವಿಠಲ ಪೂಜಾರಿ (69.) ಡಿ.27 ರಂದು ಸಂಜೆ ಹೃದಯಾಘಾತದಿಂದ ನಿಧನರಾದರು. ಮೂಲತಃ ಉಡುಪಿ ಉದ್ಯಾವರ ಮನೆತನದವರಾಗಿದ್ದ ಎಲ್‍ಐಸಿಯಲ್ಲಿ 25 ವರ್ಷಗಳ ಸೇವೆ ಸಲ್ಲಿಸಿ ನಿವೃತರಾಗಿದ್ದರು. ಎಲ್‍ಐಸಿ ಕ್ಲಬ್ ಸದಸ್ಯತ್ವದ ಕಾರ್ಯಾಧ್ಯಕ್ಷರು ಆಗಿದ್ದ ಮೃತರು ಪತ್ನಿ, ಒಂದು ಗಂಡು, ಒಂದು ಹೆಣ್ಣು ಸೇರಿದಂತೆ ಬಂಧು-ಬಳಗವನ್ನು ಅಗಲಿದ್ದಾರೆ.
UN NETWORKS ಕೋಟೆಕಾರ್: ಎಸ್ ವೈ ಎಸ್ ಕೆ ಸಿ ರೋಡ್ ಸೆಂಟರ್,ಎಸ್ಸೆಸ್ಸೆಫ್ ತಲಪಾಡಿ ಸೆಕ್ಟರ್ ಹಾಗೂ ಎಸ್ಸೆಸ್ಸೆಫ್ ಕೋಟೆಕಾರ್ ಸೆಕ್ಟರ್ ವತಿಯಿಂದ ಪ್ರವಾದಿ(ಸ.ಅ) ರನ್ನು ನಿಂದಿಸಿ ಅವಹೇಳನಕಾರಿ ಹೇಳಿಕೆ ನೀಡಿ ಸಮಾಜದ ಸಾಮರಸ್ಯ ಕದಡಲು ಯತ್ನಿಸಿ ಧಾರ್ಮಿಕ ಭಾವನೆಗೆ ದಕ್ಕೆ ತಂದ ಸುವರ್ಣ ಚಾನಲ್ ನಿರೂಪಕ ಅಜಿತ್ ಹನುಮಕ್ಕನ್ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ಆಗ್ರಹಿಸಿ ಬೃಹತ್ ಪ್ರತಿಭಟನೆ ಜ.01 ರಂದು ಕೆ.ಸಿ.ರೋಡ್ ಜಂಕ್ಷನ್ ನಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಅಲ್ ಮುಬಾರಕ್ ಜುಮಾ ಮಸೀದಿ ಖತೀಬರಾದ ಮುನೀರ್ ಸಖಾಫಿ ಉಸ್ತಾದರು ದುವಾ ನೆರವೇರಿಸಿದರು. ಯಾಸೀನ್ ಸಖಾಫಿ ಕಾರ್ಯಕ್ರಮ ಉದ್ಘಾಟನೆಗೈದರು. SSF ಉಳ್ಳಾಲ ಡಿವಿಜನ್ ಅಧ್ಯಕ್ಷರಾದ ಮುನೀರ್ ಸಖಾಫಿ ಮುಖ್ಯ ಪ್ರಭಾಷಣಗೈದರು. ಸಲಾಂ ಉಚ್ಚಿಲ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಪ್ರತಿಭಟನೆ ಬಳಿಕ ಉಳ್ಳಾಲ ಪೊಲೀಸ್ ಠಾಣೆಗೆ ತೆರಳಿ ಅಜಿತ್ರನ್ನು ಬಂದಿಸಬೇಕೆಂದು ಕೋರಿ SYS ಹಾಗು SSF ಸಂಘಟನೆಗಳಿಂದ ದೂರು ದಾಖಲಿಸಲಾಯಿತು. ಪ್ರತಿಭಟನೆಯಲ್ಲಿ ಎಸ್ ವೈ ಎಸ್ ಕೆ ಸಿ ರೋಡ್ ಸೆಂಟರ್ ಅಧ್ಯಕ್ಷರಾದ…
UN NETWORKS ಉಳ್ಳಾಲ: ಉಳ್ಳಾಲ ಕೇಂದ್ರ ಜುಮಾ ಮಸೀದಿ ಖತೀಬರಾದ ಅಬ್ದುಲ್ ಅಝೀಝ್ ಬಾಖವಿ ಮಹಿಳಾ ತರ್ಬಿಯತ್ ಕಾಲೇಜು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಧಾರ್ಮಿಕ ಶಿಕ್ಷಣದ ಕೊರತೆಯಿಂದ ನಮ್ಮ ಹೆಣ್ಣು ಮಕ್ಕಳು ದಾರಿ ತಪ್ಪುತ್ತಿದ್ದಾರೆ ಈ ನಿಟ್ಟಿನಲ್ಲಿ ಮಹಿಳಾ ತರ್ಬಿಯತ್ ಕಾಲೇಜು ಪ್ರಾರಂಬಿಸಿ ಯುವತಿಯರಿಗೆ ಧಾರ್ಮಿಕ ಶಿಕ್ಷಣ ನೀಡುತ್ತಿರುವ ನುಸ್ರತುಲ್ ಮಸಾಕೀನ್ ಚಾರಿಟೇಬಲ್ ಟ್ರಸ್ಟ್ ಅವರ ಕಾರ್ಯವು ಶ್ಲಾಘನೀಯ ಎಂದರು. ಉಳ್ಳಾಲ ಸಯ್ಯದ್ ಮದನಿ ದರ್ಗಾದ ಅಧ್ಯಕ್ಷ ಹಾಜಿ ಅಬ್ದುಲ್ ರಶೀದ್ ಅಧ್ಯಕ್ಷತೆವಹಿದ್ದರು, ಉಳ್ಳಾಲ ಸಯ್ಯದ್ ಮದನಿ ಅರಬಿಕ್ ಟ್ರಸ್ಟ್ ಪ್ರಾಂಶುಪಾಲ ಉಸ್ಮಾನ್ ಫೈಝಿ ತೋಡಾರ್ ದುಆ ನೆರವೇರಿಸಿದರು. ದಅವಾ ಕಾಲೇಜು ಪ್ರಾಂಶುಪಾಲ ಇಬ್ರಾಹಿಂ ಅಹ್ಸನಿ, ಸಯ್ಯದ್ ಮದನಿ ಅರಬಿಕ್ ಕಾಲೇಜು ಪ್ರೊಫೆಸರ್ ಇಬ್ರಾಹಿಂ ಮದನಿ, ಹಿಫ್ಝುಲ್ ಖುರಾನ್ ಕಾಲೇಜ್ ಪ್ರಾಂಶುಪಾಲ ಝೈನ್ ಸಖಾಫಿ, ಅರಬಿಕ್ ಕಾಲೇಜು ಮುದರ್ರಿಸ್ ಸ್ವಾದಿಖ್ ಸಖಾಫಿ, ಸಯ್ಯದ್ ಮದನಿ ಅರಬಿಕ್ ಎಜುಕೇಶನ್ ಟ್ರಸ್ಟ್ ಕಾರ್ಯದರ್ಶಿ ಆಸೀಫ್ ಅಬ್ದುಲ್ಲ, ಚಾರಿಟೇಬಲ್ ಟ್ರಸ್ಟ್ ಉಪಾಧ್ಯಕ್ಷ ಮುಸ್ತಫ ಅಬ್ದುಲ್ಲ,…
UN NETWORKS ಉಳ್ಳಾಲ: ಉಳ್ಳಾಲ ಕ್ರಿಕೆಟ್ ಬೋರ್ಡ್ ಆಯೋಜಿಸಿದಂತಹ 8 ತಂಡದ ಮಾಸ್ಟರ್ ಕ್ರಿಕೆಟ್ ಲೀಗ್‍ನ ಸಮಾರೋಪ ಸಮಾರಂಭ ಉಳ್ಳಾಲ ಸೀ ಮೈದಾನದಲ್ಲಿ ನಡೆಯಿತು. ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಉಳ್ಳಾಲ ನಗರ ಸಭಾ ಹಿರಿಯ ಸದಸ್ಯರಾದ ಮೊಹಮ್ಮದ್ ಮುಕ್ಕಚ್ಚೇರಿ ಮಾತನಾಡಿ ಕ್ರೀಡೆಯಲ್ಲಿ ಸೋಲು ಗೆಲುವು ಒಂದೇ ನಾಣ್ಯದ ಮುಖ ಇದ್ದಂತೆ, ಕ್ರೀಡಾ ಸ್ಪೂರ್ತಿಯಿಂದ ಭಾಗವಹಿಸಿ ಐಕ್ಯತೆ ಸಹೋದರತೆಯನ್ನು ಎತ್ತಿ ಹಿಡಿಯಬೇಕು ಎಂದರು.ಉಳ್ಳಾಲ ನಗರ ಸಭಾ ಸದಸ್ಯರಾದ ಯು.ಎ.ಇಸ್ಮಾಯಿಲ್, ಅಬ್ದುಲ್ ಜಬ್ಬಾರ್,ಅಬ್ದುಲ್ ಅಝೀಝ್, ಮಾಜಿ ಸದಸ್ಯ ಅಶ್ರಫ್ ಬಾವ, ಉಳ್ಳಾಲ ಕ್ರಿಕೆಟ್ ಬೋರ್ಡ್ ಅಧ್ಯಕ್ಷ ಖಲೀಲ್ ಉಳ್ಳಾಲ್, ಉಪಾಧ್ಯಕ್ಷ ಫಯಾಝ್ ಪಟ್ಲ, ಸಂಚಾಲಕ ಸಾಜಿದ್ ಉಳ್ಳಾಲ್ ಉಪಸ್ಥಿತರಿದ್ದರು. ಆಲ್ಫಾ ಸ್ಪೋಟ್ರ್ಸ್ ಕ್ಲಬ್ ಫ್ರಥಮ ಮತ್ತು ಕೋಟೆಪುರ,ಕೋಡಿ ಫ್ರೆಂಡ್ಸ್ ಸರ್ಕಲ್ ದ್ವಿತೀಯ ಸ್ಥಾನಪಡೆಯಿತು.ಉಳ್ಳಾಲ ಕ್ರಿಕೆಟ್ ಬೋರ್ಡ್ ಅಧ್ಯಕ್ಷ ಖಲೀಲ್ ಉಳ್ಳಾಲ್ ಸ್ವಾಗತಿಸಿದರು, ಅಬ್ದುಲ್ ಸಮದ್ ಕಾರ್ಯಕ್ರಮ ನಿರೂಪಿಸಿದರು.
UN NETWORKS ಧಾರ್ಮಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ಕ್ಷೇತ್ರದಲ್ಲಿ ಸಾಧನೆ ಮಾಡಿದ ಧಾರ್ಮಿಕ ಪರಿಷತ್‍ನ ಮಾಜಿ ಸದಸ್ಯ ಹಾಗೂ ಉಳ್ಳಾಲ ಬ್ರಹ್ಮಶ್ರೀ ಬಿಲ್ಲವ ವೇದಿಕೆ ಅಧ್ಯಕ್ಷ ಕೆ.ಟಿ. ಸುವರ್ಣ ಅವರಿಗೆ ಕೋಟಿ ಚೆನ್ನಯ್ಯ ಪ್ರಶಸ್ತಿ ಪ್ರದಾನ ಮಾಡಲಾಯಿತು. ತೊಕ್ಕೊಟ್ಟು ಜಂಕ್ಷನ್ ಬಾಯ್ಸ್ ಹಾಗೂ ತೊಕ್ಕೊಟ್ಟು ನಾಗರಿಕ ಸಮಿತಿ ಆಶ್ರಯದಲ್ಲಿ ತೊಕ್ಕೊಟ್ಟು ಅಂಬೇಡ್ಕರ್ ಮೈದಾನದಲ್ಲಿ ನಡೆದ ದ.ಕ. ಜಿಲ್ಲಾ ಮಟ್ಟದ 70ಕೆ.ಜಿ. ವಿಭಾಗದ ಕೋಟಿ ಚೆನ್ನಯ ಟ್ರೋಫಿ ಪ್ರೊ ಕಬಡ್ಡಿ ಪಂದ್ಯಾಟದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಕಾರ್ಯಕ್ರಮದಲ್ಲಿ ಬಿಜೆಪಿ ಮಂಗಳೂರು ಕ್ಷೇತ್ರಾಧ್ಯಕ್ಷ ಸಂತೋಷ್ ಕುಮಾರ್ ರೈ ಬೋಳಿಯಾರ್, ಉಳ್ಳಾಲ ಶ್ರೀ ಚೀರುಂಭ ಭಗವತೀ ಕ್ಷೇತ್ರದ ಅಧ್ಯಕ್ಷ ಚಂದ್ರಹಾಸ ಉಳ್ಳಾಲ, ದೇವಿ ಬೈದೆದಿ ಕೋಟಿ ಚೆನ್ನೆಯ ಗೆಜ್ಜೆಗಿರಿ ಮೂಲಕ್ಷೇತ್ರದ ಮೊಕ್ತೇಸರ ಚಂದ್ರಶೇಖರ ಉಚ್ಚಿಲ್, ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಸತೀಶ್ ಕುಂಪಲ, ಉಳ್ಳಾಲ ಶ್ರೀ ಚೀರುಂಭ ಭಗವತೀ ಕ್ಷೇತ್ರದ ಉಪಾಧ್ಯಕ್ಷ ಸುರೇಶ್ ಭಟ್ನಗರ, ಬ್ರಹ್ಮಶ್ರೀ ಬಿಲ್ಲವ ವೇದಿಕೆಯ ಕಾರ್ಯಾಧ್ಯಕ್ಷ ಸತೀಶ್ ಕರ್ಕೇರ, ಭವಾನಿ ಸ್ಯಾನಿಟರಿ…

