UN NETWORKS
ದೇರಳಕಟ್ಟೆ: ದೇರಳಕಟ್ಟೆಯ ನಿಟ್ಟೆ ಪರಿಗಣಿಸಲಾಗಿರುವ ವಿವಿಗೆ ಆಮೇರಿಕಾದ ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯದ ಸಾಮಾಜಿಕ ನೀತಿ ಮತ್ತು ತರಬೇತಿ ಶಾಲೆಯ 11 ವಿದ್ಯಾರ್ಥಿಗಳ ತಂಡ ಭಾರತದಲ್ಲಿ ಮೆಕ್ರೋ ಫೈನಾನ್ಸ್ ಎಕ್ಸರಿಮೆಂಟ್ಸ್ ಅಧ್ಯಯನ ಮಾಡಲು ಕ್ಯಾಂಪಸ್ಗೆ ಭೇಟಿ ನೀಡಿದೆ.
ನಿಟ್ಟೆ ವಿವಿಯ ಸಹ ಕುಲಪತಿ ಪ್ರೊಫೆಸರ್ ಡಾ. ಎಂ.ಎಸ್. ಮೂಡಿತ್ತಾಯ ಮೈಕ್ರೋ ಫೈನಾನ್ಸ್ ಮತ್ತು ಗ್ರಾಮೀಣಾಭಿವೃದ್ಧಿ ಕುರಿತು ಉಪನ್ಯಾಸ ನೀಡಿದರು. ಪ್ರೊಫೆಸರ್ ಡಾ. ಫೆಮಿಂಡಾ ಹ್ಯಾಂಡಿ ಮಾರ್ಗದರ್ಶನದಲ್ಲಿ ಎರಡು ವಾರ ಭೇಟಿ ನೀಡಲಿರುವ ಈ ತಂಡ ಪ್ಲ್ಯಾನರ್ಗಳು, ಪಾಲಿಸಿ ಮೇಕರ್ಸ್, ಪ್ರಾಕ್ಟೀಷನರ್ಸ್ ಮತ್ತು ಮೆ`ಕ್ರೋ ಫೈನಾನ್ಸ್ ಫಲಾನುಭವಿಗಳೊಂದಿಗೆ ಸಂವಹನ ನಡೆಸುತ್ತಿದೆ.


