Author: UllalaVani

Kannada News From Coastal Karnataka

ಉಳ್ಳಾಲ: ಎ.18 ರಂದು ತಪ್ಪದೇ ಮತದಾನ ಮಾಡಬನ್ನಿ ಅನ್ನುವ ಘೋಷ ವಾಕ್ಯದಡಿ ಜಿಲ್ಲಾಡಳಿತ ವತಿಯಿಂದ, ಉಳ್ಳಾಲ ನಗರಸಭೆ ನೇತೃತ್ವದಲ್ಲಿ ಉಳ್ಳಾಲದ ಸಮುದ್ರ ತೀರದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಳೊಂದಿಗೆ ಮತಾದನ ಜಾಗೃತಿ ಕುರಿತ ಹಬ್ಬ ನಡೆಯಿತು. ಕಿನ್ಯಾ ಶ್ರೀ ದುರ್ಗಾಪರಮೇಶ್ವರಿ ಯಕ್ಷಗಾನ ಮಂಡಲದ ಆಶ್ರಯದಲ್ಲಿ ಮತದಾನ ಜಾಗೃತಿಯ ಯಕ್ಷಗಾನ , ಜಯಪ್ರಸಾದ್ ಆಚಾರ್ಯ ಇವರ ನೇತೃತ್ವದ ಸ್ಪರ್ಶ ಕಲಾವಿದರಿಂದ ಮರಳು ಶಿಲ್ಪಕಲೆ, ಉಳ್ಳಾಲ ಕಡಲ ಕಿನಾರೆಯಲ್ಲಿ ಬಲೆಬೀಸಿ ಮೀನು ಹಿಡಿಯುವ ಸ್ಪರ್ಧೆ , ರೋಷನಿ ನಿಲಯ ಕಾಲೇಜಿನ ವಿದ್ಯಾರ್ಥಿಗಳಿಂದ ಸ್ವಚ್ಛತೆ ಜಾಗೃತಿಗಾಗಿ ಬೀದಿ ನಾಟಕ ಹಾಗೂ ಉಳ್ಳಾಲದಿಂದ ಮುಕ್ಕಚ್ಚೇರಿವರೆಗಿನ ಸಮುದ್ರ ತೀರದಲ್ಲಿ ಸಾರ್ವಜನಿಕರಿಂದ ಮಾನವ ಸರಪಳಿ ನಡೆಯಿತು. ಸಹಾಯಕ ಆಯುಕ್ತ ರವಿಚಂದ್ರ ನಾಯಕ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಜಿಲ್ಲಾ ಸ್ವಚ್ಛತಾ ರಾಯಭಾರಿ ಶೀನ ಶೆಟ್ಟಿ, ನಗರಸಭೆ ಆಯುಕ್ತ ಶ್ರೀನಿವಾಸ ಮೂರ್ತಿ, ಮೊಗವೀರ ಮುಖಂಡರುಗಳಾದ ದಯಾನಂದ, ಮನೋಜ್ ಸಾಲ್ಯಾನ್, ವಾಸುದೇವ ರಾವ್ ಉಪಸ್ಥಿತರಿದ್ದರು. ಉಳ್ಳಾಲ ಪೊಲೀಸರು, ಕರಾವಳಿ ಕಾವಲು ಪೊಲೀಸ್ ಹಾಗೂ ಕರಾವಳಿ ನಿಯಂತ್ರಣ…

Read More

UN NETWORKS ಹರೇಕಳ : ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಉಳ್ಳಾಲ ಸ್ಥಳೀಯ ಸಂಸ್ಥೆ, ಶ್ರೀ ರಾಮಕೃಷ್ಣ ಅನುದಾನಿತ ಪ್ರೌಢಶಾಲೆ ಮತ್ತು ಪ್ರಾಥಮಿಕ ಶಾಲಾ ಹಳೇ ವಿದ್ಯಾರ್ಥಿ ಸಂಘ ಹಾಗೂ ಜೆಸಿಐ ಮಂಗಳಗಂಗೋತ್ರಿ ಕೊಣಾಜೆ ಇವುಗಳ ಸಂಯುಕ್ತ ಆಶ್ರಯದಲ್ಲಿ ಹರೇಕಳ ರಾಮಕೃಷ್ಣ ಪ್ರೌಢಶಾಲೆಯಲ್ಲಿ ವಿನೂತನ ಶೈಲಿಯ ಬೇಸಿಗೆ ಶಿಬಿರ “ಚಿಣ್ಣರ ಚಿಲುಮೆ 2019” ಇದರ ಉದ್ಘಾಟನಾ ಸಮಾರಂಭ ನಡೆಯಿತು. ಉದ್ಘಾಟನೆಯನ್ನು ಡ್ರಾಮ ಜೂನಿಯರ್ ಸೀಸನ್ 2 ಇದರ ವಿಜೇತೆ ಜೂನಿಯರ್ ಲಕ್ಷ್ಮೀ ಎಂದೇ ಕೀರ್ತಿ ಪಡೆದಿರುವ ಬಾಲ ನಟಿ ಕುಮಾರಿ ವಂಶಿ ರತ್ನಕುಮಾರ್ ಉದ್ಘಾಟಿಸಿ, ಪ್ರತಿಯೊಬ್ಬರಲ್ಲೂ ಒಂದಲ್ಲ ಒಂದು ಪ್ರತಿಭೆ ಇದ್ದೇ ಇರುತ್ತದೆ. ಅಂತಹ ಪ್ರತಿಭೆಗಳು ಬೆಳಗಬೇಕಾದರೆ ಇಂತಹ ಬೇಸಿಗೆ ಶಿಬಿರಗಳು ಪ್ರಮುಖ ಪಾತ್ರವನ್ನು ವಹಿಸುತ್ತದೆ. ಹಾಗಾಗಿ ವಿದ್ಯಾರ್ಥಿಗಳು ಸಿಕ್ಕಿದ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು. ಅಧ್ಯಕ್ಷತೆಯನ್ನು ಭಾರತ್ ಸ್ಕೌಟ್ ಮತ್ತು ಗೈಡ್ಸ್ ಇದರ ಜಿಲ್ಲಾ ಮುಖ್ಯ ಆಯುಕ್ತರಾದ ಎನ್.ಜಿ.ಮೋಹನ್ ಅವರು ವಹಿಸಿ, ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಸ್ಕೌಟ್ಸ್ ಗೈಡ್ಸ್ ಪೂರಕವಾಗಿ…

Read More

UN NETWORKS ಕೋಟೆಕಾರು : ಕೆಇಬಿ ಉಪಕಚೇರಿಯ ಎಟಿಪಿ ಯಂತ್ರದಲ್ಲಿ ಗ್ರಾಹಕರಿಂದ ಸಂಗ್ರಹಿಸಲಾಗಿದ್ದ ಲಕ್ಷಾಂತರ ರೂ.ಗಳನ್ನು ಕಳ್ಳರು ಕಳವುಗೈದಿರುವ ಘಟನೆ ರಾ.ಹೆ.66ರ ಕೋಟೆಕಾರು ಸಮೀಪವಿರುವ ಕಚೇರಿಯಲ್ಲಿ ಭಾನುವಾರ ಬೆಳಿಗ್ಗೆ ಬೆಳಕಿಗೆ ಬಂದಿದೆ. ಎಟಿಪಿ ಯಂತ್ರದಲ್ಲಿದ್ದ ರೂ. 1,93,000 ನಗದು ಕಳವುಗೈಯ್ಯಲಾಗಿದೆ. ಶುಕ್ರವಾರ ಗ್ರಾಹಕರಿಂದ ಸಂಗ್ರಹಿಸಲಾಗಿದ್ದ ಹಣ ಎಟಿಪಿ ಯಂತ್ರದಲ್ಲಿತ್ತು. ಶನಿವಾರ ಬ್ಯಾಂಕ್ ರಜೆಯಿದ್ದ ಹಿನ್ನೆಲೆಯಲ್ಲಿ ನಗದು ಬ್ಯಾಂಕಿಗೆ ವರ್ಗಾವಣೆಗೊಳಿಸಿರಲಾಗಲಿಲ್ಲ. ಈ ನಡುವೆ ಶನಿವಾರ ತಡರಾತ್ರಿ ಶಟರ್ ಒಡೆದು ಒಳನುಗ್ಗಿದ ಕಳ್ಳರು ಎಟಿಪಿ ಯಂತ್ರದೊಳಗೆ ಇದ್ದ ನಗದು ಕಳವು ನಡೆಸಿದ್ದಾರೆ. ಇದೇ ವೇಳೆ ಕಚೇರಿಯಲ್ಲಿರುವ ಅಧಿಕಾರಿಗಳ ಕೊಠಡಿಯಲ್ಲಿಯೂ ಜಾಲಾಡಿದ ಕಳ್ಳರು ಅದರ ಬಾಗಿಲುಗಳನ್ನು ಮುರಿದಿದ್ದಾರೆ. ಭಾನುವಾರ ಬೆಳಿಗ್ಗೆ ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗುವ ಸಂದರ್ಭ ಪ್ರಕರಣ ಬೆಳಕಿಗೆ ಬಂದಿದೆ. ಕೃತ್ಯಕ್ಕೆ ಬಳಸಿದ ಹತ್ಯಾರುಗಳು ಸ್ಥಳದಲ್ಲಿ ಪತ್ತೆಯಾಗಿದೆ. ಕೆಇಬಿ ಇಂಜಿನಿಯರ್ ಪ್ರವೀಣ್ ಎಂಬವರು ನೀಡಿರುವ ದೂರಿನಂತೆ ಉಳ್ಳಾಲ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸ್ಥಳಕ್ಕೆ ಬೆರಳಚ್ಚು ತಜ್ಞರು, ಶ್ವಾನದಳ ಭೇಟಿ ನೀಡಿ ಪರಿಶೀಲನೆ ನಡೆಸಿದೆ.

Read More

UN NETWORKS ಮಂಗಳೂರು : ಸ್ವಾಮಿ ವಿವೇಕಾನಂದರು ಚಿಕಾಗೋದಲ್ಲಿ ನಡೆದ ಅಂತರಾಷ್ಟ್ರೀಯ ಧಾರ್ಮಿಕ ಸಮ್ಮೇಳನದಲ್ಲಿ ಭಾರತ ಸಂಸ್ಕ್ರತಿಯ ಶ್ರೇಷ್ಠತೆಯನ್ನು ಸಾರಿದ ಸವಿನೆನಪಿಗಾಗಿ “ವಿಶ್ವ ವಿಜೇತ” ಕಾರ್ಯಕ್ರಮವನ್ನು ರಾಮಕೃಷ್ಣ ಆಶ್ರಮದ ಸಹಯೋಗದೊಂದಿಗೆ ಡಾ.ಪಿ ದಯಾನಂದ ಪೈ-ಪಿ ಸತೀಶ ಪೈ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮಂಗಳೂರು ರಥಬೀದಿ ಇಲ್ಲಿ ಆಯೋಜಿಸಲಾಗಿತ್ತು. ಕಾರ್ಯಕ್ರಮವನ್ನು ಕಾಲೇಜಿನ ಪ್ರಾಂಶುಪಾಲರಾದ ಪ್ರೋ.ರಾಜಶೇಖರ ಹೆಬ್ಬಾರ್ ಸಿ ಇವರು ಉದ್ಘಾಟಿಸಿದರು. ದೇಶದ ಏಳಿಗೆಗೆ ಯುವಕರೆಲ್ಲ ಜಾಗೃತರಾಗಬೇಕು, ಸುಭದ್ರ ದೇಶವನ್ನು ಕಟ್ಟಲು ಯುವಕರೆಲ್ಲ ಸ್ವಾಮಿ ವಿವೇಕಾನಂದರ ಆದರ್ಶಗಳನ್ನು ಪಾಲಿಸಬೇಕು.ಈ ನಿಟ್ಟಿನಲ್ಲಿ ವಿಶ್ವವಿಜೇತ ಕಾರ್ಯಕ್ರಮ ಒಂದು ಉತ್ತಮ ಪ್ರಯತ್ನ ಎಂದು ಶ್ಲಾಘಿಸಿದರು. ನಂತರ ಸಂಪನ್ಮೂಲ ವ್ಯಕ್ತಿಗಳಾದ ಅಕ್ಷಯ ಗೋಖಲೆ, ಉಪನ್ಯಾಸಕರು, ಡಾ ಎನ್.ಎಸ್.ಎ ಎಂ.ಪಿ ಯು ಕಾಲೇಜು ನಿಟ್ಟೆ ಇವರು ವಿವೇಕಾನಂದರ ಜೀವನ ಚಿತ್ರಣ, ಜೀವನ ಸಾಧನೆಗಳನ್ನು ವಿವರಿಸಿದರು.ದೇಶಕ್ಕಾಗಿ ಏನನ್ನಾದರೂ ಸಾಧನೆ ಮಾಡುತ್ತೇನೆ ಎಂಬ ಛಲ ಪ್ರತಿಯೊಬ್ಬ ಯುವಕನಲ್ಲಿ ಮೂಡಿ ಬರಬೇಕು. ಸಿನಿಮಾ ನಟ-ನಟಿಯರನ್ನು ಆದರ್ಶವಾಗಿಟ್ಟುಕೊಳ್ಳದೇ ಯುವಜನತೆ ಪ್ರಬುದ್ಧವಾಗಿ ಯೋಚಿಸಬೇಕು. ವಿವೇಕಾನಂದ, ಭಗತ್‍ಸಿಂಗ್, ಜಾನ್ಸಿ…

Read More

UN NETWORKS ಉಳ್ಳಾಲ : ಕರಾವಳಿ ಬಿಜೆಪಿಯನ್ನು ಎಂದಿಗೂ ಕೈಬಿಟ್ಟಿಲ್ಲ, ಮಂಗಳೂರಿನಲ್ಲಿ ಪೂರ್ಣ ಬಿಜೆಪಿ ಹವಾ ಇದೆ. ಎಲ್ಲಿ ಹೋದರೂ ಮೋದಿ ಯವರ ಗುಣಗಾನ ಕೇಳಿಬರುತ್ತಿದೆ ಎಂದು ವಿಧಾನಪರಿಷತ್ ಸದಸ್ಯೆ ಹಾಗೂ ಚಿತ್ರನಟಿ ತಾರಾ ಹೇಳಿದರು. ಅವರು ಮಂಗಳೂರು ಕ್ಷೇತ್ರದ ಮಾಡೂರು ಸಮೀಪದ ಸೋವೂರು ತಿಂಡಿ ಕಾರ್ಖಾನೆಯ ಕಾರ್ಮಿಕರ ಜತೆಗೆ ಲೋಕಸಭಾ ಚುನಾವಣಾ ಪ್ರಚಾರಾರ್ಥವಾಗಿ ಗುರುವಾರ ಹಮ್ಮಿಕೊಂಡ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಜಿಲ್ಲೆಯ ಸಂಸದರು ಎಲ್ಲಾ ಅಭಿವೃದ್ಧಿ ಕಾರ್ಯಗಳನ್ನು ನಡೆಸಿದ್ದಾರೆ. ತೊಕ್ಕೊಟ್ಟು ಮತ್ತು ಪಂಪ್ ವೆಲ್ ಫ್ಲೈಓವರ್ ಅನುಷ್ಠಾನಗೊಳಿಸುವುದೇ ದೊಡ್ಡ ಸಾಧನೆಯಾಗಿತ್ತು. ಅದನ್ನು ಸಂಸದರು ಮಾಡಿ ತೋರಿಸಿದ್ದಾರೆ. ಆದರೆ ಕೆಲವು ತೊಂದರೆಗಳಿಂದ ಕಾಮಗಾರಿ ವಿಳಂಭಾವಾಗಿದೆ. ಕೈ ಎಂದರೆ ಕೈಕೊಟ್ಟು ಹೋಗುವ ಪಕ್ಷವಾಗಿದೆ. ಕಮಲ ಅಂದರೆ ಲಕ್ಷ್ಮೀ, ಲಕ್ಷ್ಮೀ ಮನೆಗೆ ಬರಬೇಕಾದರೆ ಬಿಜೆಪಿಯನ್ನು ಮತದಾರರು ಬೆಂಬಲಿಸಬೇಕಿದೆ. ಈ ಮೂಲಕ ದೇಶದ ಅಭಿವೃದ್ಧಿಯ ಹರಿಕಾರ ಮೋದಿಯವರನ್ನು ಮತ್ತೊಮ್ಮೆ ಪ್ರಧಾನಿಯನ್ನಾಗಿಸಬೇಕಿದೆ ಎಂದ ಅವರು ಮಂಡ್ಯ ಕ್ಷೇತ್ರದಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಜಯಗಳಿಸುವ ವಿಶ್ವಾಸ ಹೆಚ್ಚಿದೆ…

Read More

UN NETWORKS ಕುಂಪಲ‌ : ನಾವು ಮಾಡುವ ಪೂಜೆ , ಕೆಲಸ ಧರ್ಮದ ದಾರಿಯಲ್ಲಿರಬೇಕು. ಮನುಷ್ಯ ತನ್ನ ಇಷ್ಟಾರ್ಥ ಈಡೇರಿಸುವಂತೆ ದೇವರನ್ನು ಮೆಚ್ಚಿಸಲು ನೋಡುತ್ತಾನೆ. ಆದರೆ ನಿಜವಾದ ಭಕ್ತಿಯಲ್ಲಿ ಪ್ರತಿಫಲಾಪೇಕ್ಷೆ ಇರಲೇಬಾರದು ಎಂದು ಉಚ್ಚಿಲ ಬೋವಿ ಶಿಕ್ಷಣ ಸಂಸ್ಥೆಯ ಸಂಚಾಲಕ ದೇವದಾಸ ಉಚ್ಚಿಲ್ ಹೇಳಿದರು.‌ ಕುಂಪಲ‌ ಶ್ರೀ ಬಾಲಕೃಷ್ಣ ಮಂದಿರದ 12ನೇ ಪ್ರತಿಷ್ಠಾ ಮಹೋತ್ಸವ ಪ್ರಯುಕ್ತ ಭಾನುವಾರ ನಡೆದ ಧಾರ್ಮಿಕ ಸಭೆಯಲ್ಲಿ ಮಾತನಾಡಿದ ಅವರು ನಾವು ಮಾಡುವ ಎಲ್ಲ ಸೇವೆ ದೇವರು ಕೊಟ್ಟ ಸೇವೆ ಎಂದು ಪರಿಗಣಿಸಿ ಮೋಕ್ಷದ ದಾರಿ ಕಂಡುಕೊಳ್ಳಬೇಕು. ಪ್ರಾಪಂಚಿಕ ಬದುಕಿನಲ್ಲಿ ಮೋಕ್ಷದ ಗುರಿಯನ್ನು‌ ಇಟ್ಟುಕೊಂಡು ಬದುಕಬೇಕಾದುದನ್ನು‌ ಭಗವದ್ಗೀತೆಯಲ್ಲಿ ವಿವರಿಸಿದಂತೆ ಧರ್ಮದಲ್ಲಿ ಬದುಕಿದರೆ ಮಾತ್ರ ಮೋಕ್ಷ ಸಾಧ್ಯ ಎಂದು‌ ನುಡಿದರು. ಮಂಗಳೂರಿನ‌ ಖ್ಯಾತ ನ್ಯಾಯವಾದಿ ಅರುಣ್ ಬಂಗೇರ ಮಾತನಾಡಿ ಭಜನೆ ಮನುಷ್ಯನ‌ಲ್ಲಿ ಶಾಂತಿ ನೆಮ್ಮದಿ ಕರುಣಿಸುತ್ತದೆ. ನಿರಂತರ 22ವರ್ಷ ಭಜನೆ ಸಂಸ್ಕಾರ ಕೊಟ್ಟಿರುವ ಶ್ರೀ ಬಾಲಕೃಷ್ಣ ಮಂದಿರದ ಸೇವಾಕಾರ್ಯ ವೈಖರಿ ಶ್ಲಾಘನೀಯ ಎಂದರು. ಜನರು ದೇವರು ಬಡವ ಎಂದು…

Read More

UN NETWORKS ಪಾನೀರ್ : ಪಾನೀರ್ ಚರ್ಚ್ ಕೆಥೋಲಿಕ್ ಸಭಾ ವತಿಯಿಂದ ಚರ್ಚ್ ವ್ಯಾಪ್ತಿಯ ವಾರ್ಡ್‍ಗಳ ಗುರಿಕಾರರಿಗೆ ಸನ್ಮಾನ ಹಾಗೂ ಮಾಹಿತಿ ಕಾರ್ಯಕ್ರಮ ಭಾನುವಾರ ಚರ್ಚ್‍ನ ಸಭಾಂಗಣದಲ್ಲಿ ನಡೆಯಿತು. ಎಸ್‍ಸಿಸಿ ಸಂಸ್ಥೆಯ ನಿರ್ದೇಶಕ ರೆ.ಫಾ.ಜೋಕಿಮ್ ಫೆರ್ನಾಂಡಿಸ್, ಚರ್ಚ್‍ನ ಧರ್ಮಗುರು ರೆ.ಫಾ.ಡೆನ್ನಿಸ್ ಸುವಾರಿಸ್, ಉಪಾಧ್ಯಕ್ಷ ಎಲಿಯಾಸ್ ಡಿಸೋಜ, ಕೆಥೋಲಿಕ್ ಸಭಾ ಉಳ್ಳಾಲ ವಲಯಾಧ್ಯಕ್ಷ ಅರುಣ್ ಮೊಂತೆರೋ ಮುಖ್ಯ ಅತಿಥಿಗಳಾಗಿದ್ದರು. ಕೆಥೋಲಿಕ್ ಸಭಾ ಪಾನೀರ್ ಘಟಕಾಧ್ಯಕ್ಷ ಸ್ಟ್ಯಾನಿ ರೋಡ್ರಿಗಸ್, ಕಾರ್ಯದರ್ಶಿ ರುವಿತಾ ಮೆನೇಜಸ್, ನಿಯೋಜಿತ ಅಧ್ಯಕ್ಷ ಫ್ರಾಂಕಿ ಫ್ರಾನ್ಸಿಸ್ ಕುಟಿನ್ಹಾ ಉಪಸ್ಥಿತರಿದ್ದರು. ಸಿಒಡಿಪಿ ಕಾರ್ಯಕರ್ತೆ ವಾಣಿ ಸಂಪನ್ಮೂಲ ವ್ಯಕ್ತಿಗಳಾಗಿದ್ದರು.

Read More

UN NETWORKS ಕುರ್ನಾಡು: ನಮ್ಮ ಸಂಸ್ಕೃತಿ, ಪರಂಪರೆ, ಧಾರ್ಮಿಕ ಚಿಂತನೆಗಳನ್ನು ದೇಶದ ಸರ್ಕಾರಿ ವ್ಯವಸ್ಥೆ ಉಳಿಸಿ, ಬೆಳೆಸುವ ವಿಶ್ವಾಸವಿಲ್ಲ. ಜನರೇ ಆ ಕೆಲಸ ಮಾಡಬೇಕು ಎಂದು ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಹೇಳಿದ್ದಾರೆ. ಬಂಟ್ವಾಳ ತಾಲೂಕು ಅಮ್ಮೆಂಬಳದ ಕುರ್ನಾಡು ಶ್ರೀ ಸೋಮನಾಥೇಶ್ವರ ದೇವಸ್ಥಾನದ ಅಷ್ಟಬಂಧ ಸಹಸ್ರಕುಂಭಾಭಿಷೇಕ ಉತ್ಸವ ಪ್ರಯುಕ್ತ ಸೋಮವಾರ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದ ಅಧ್ಯಕ್ಷ ಸ್ಥಾನದಿಂದ ಅವರು ಮಾತನಾಡಿದರು. ನಮ್ಮ ನಾಡಿನಲ್ಲಿ ನಾಗರಿಕತೆಯೊಂದಿಗೇ ಶಾಸ್ತ್ರೀಯ, ಜನಪದ ಚಿಂತನೆಗಳು ಬೆಳೆದುವ ಬಂದಿವೆ. ಆದರೂ ಜಾಗತಿಕ ಚಿಂತನೆ ಎದುರು ಪರಂಪರೆಯ ಚಿಂತನೆ, ಭಾಷೆಯ ಚಿಂತನೆ ಮಾಯವಾಗ್ತಾ ಬರುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದ ಡಾ.ಆಳ್ವ, ಜಪಾನ್‍ನಂತಹ ದೇಶದಲ್ಲೂ ಇಂದು ಧಾರ್ಮಿಕ ಚಿಂತನೆಗಳು ಮರೆಯಾಗುತ್ತಾ ಇವೆ. ಅಮೆರಿಕಾದಂತಹ ದೇಶಗಳಲ್ಲೂ ಆರಾಧನಾ ಕೇಂದ್ರಗಳಿಗೆ ಆಸ್ತಿಕರ ಭೇಟಿಯ ಸಂಖ್ಯೆ ಇಳಿಮುಖವಾಗುತ್ತಿದೆ. ಏನೇ ಆದರೂ ಭಾರತೀಯ ರಕ್ತದಿಂದ ಧಾರ್ಮಿಕ ಚಿಂತನೆಯನ್ನು ತೆಗೆಯಲು ಯಾರಿಗೂ ಸಾಧ್ಯವಿಲ್ಲ ಎಂದರು. ಧಾರ್ಮಿಕ ಉಪನ್ಯಾಸ ನೀಡಿದ ಕಲಾವಿದ, ವಿದ್ವಾಂಸ ಕದ್ರಿ…

Read More

UN NETWORKS ಕೋಟೆಕಾರ್ : ಮನೆ ಕಾಯುವ ಮಹಿಳೆ ದೇಶ ಕಾಯ ಬಲ್ಲಳು ಎಂದು ತೋರಿಸಿದ ಪ್ರಧಾನಿ ನರೇಂದ್ರ ಮೋದಿಯವರು ರಕ್ಷಣಾ ಇಲಾಖೆಯಂತಹ ಮಹತ್ವದ ,ಸವಾಲಿನ ಸಚಿವ ಸ್ಥಾನವನ್ನು ಮಹಿಳೆಗೆ ನೀಡಿ ಸ್ತ್ರೀ ಶಕ್ತಿಗೆ ಗೌರವ ನೀಡಿದವರು. ಎಂದು ರಾಜ್ಯ ಬಿ.ಜೆ.ಪಿ. ಸಹ ವಕ್ತಾರೆ ಸುಲೋಚನ ಜಿ.ಕೆ.ಭಟ್ ರವರು ತಿಳಿಸಿದರು. ಅವರು ಮಂಗಳೂರು ವಿಧಾನ ಸಭಾ ಕ್ಷೇತ್ರದ ಕೋಟೆಕಾರ್ ಶಕ್ತಿ ಕೇಂದ್ರದ ಮಹಿಳಾ ಮೋರ್ಚಾದ ಸಮಾವೇಶ ಉದ್ಘಾಟಿಸಿ ಮಾತನಾಡಿದರು.ನರೇಂದ್ರ ಮೋದಿಯವರು ಅಧಿಕಾರ ಚುಕ್ಕಾಣಿ ಹಿಡಿದ ಬಳಿಕ ಮಹಿಳಾ ಕಲ್ಯಾಣಕ್ಕಾಗಿ ಹಲವಾರು ಕಾರ್ಯಕ್ರಮ ಮುಖೇನ ಸಬಲೀಕರಣಕ್ಕೆ ಆದ್ಯತೆ ನೀಡಿದ್ದಾರೆ. ಮುದ್ರಾ ಯೋಜನೆ ಮೂಲಕ ಸ್ವ ಉದ್ಯೋಗ, ಉಜ್ವಲಾ ಯೋಜನೆ ಮೂಲಕ ಗ್ಯಾಸ್ ಸ್ಟವ್ ವಿತರಣೆ, ಗರ್ಭಿಣಿ ಮಹಿಳೆಯರಿಗೆ 6000 ರೂ , ಉದ್ಯೋಗಸ್ಥ ಗರ್ಭಿಣಿ ಮಹಳೆಯರ ಬಾಣಂತಿ ರಜೆ ಆರು ತಿಂಗಳಿಗೆ ವಿಸ್ತರಣೆ ಇಂತ ಹತ್ತು ಹಲವು ಯೋಜನೆ ನೀಡಿರುತ್ತಾರೆ ಎಂದರು. ಕ್ಷೇತ್ರಧ್ಯಕ್ಷರಾದ ಸಂತೋಷ್ ಕುಮಾರ್ ರೈ ಬೋಳಿಯಾರ್ ರವರು ಮಹಿಳಾ ಮೋರ್ಚಾದ…

Read More

UN NETWORKS ಕುರ್ನಾಡು : ಅಮ್ಮೆಂಬಳ ಕುರ್ನಾಡು ಶ್ರೀ ಸೋಮನಾಥೇಶ್ವರ ದೇವಸ್ಥಾನದ ಅಷ್ಟಬಂಧ ಸಹಸ್ರಕುಂಭಾಭಿಷೇಕ ಪ್ರಯುಕ್ತ ಹೊರೆಕಾಣಿಕೆ ಮೆರವಣಿಗೆ ಬುಧವಾರ ಸಂಜೆ ನಡೆಯಿತು.ಬೋಳ್ಯಾರು ಜಂಕ್ಷನ್ ನಲ್ಲಿ ನಾರ್ಯಗುತ್ತು ತಿಮ್ಮಪ್ಪ ಕೊಂಡೆ ಯಾನೆ ಮಂಜು ಭಂಡಾರಿ ಶೋಭಾಯಾತ್ರೆಗೆ ಚಾಲನೆ ನೀಡಿದರು.ಸುತ್ತಮುತ್ತಲ ಹತ್ತಾರು ಗ್ರಾಮಗಳ ಭಕ್ತಾದಿಗಳು ಸಹಸ್ರಾರು ಸಂಖ್ಯೆಯಲ್ಲಿ ಆಗಮಿಸಿ ಹೊರೆಕಾಣಿಕೆ ಶೋಭಾಯಾತ್ರೆಯಲ್ಲಿ ಪಾಲ್ಗೊಂಡರು. ಬಳಿಕ ದೇವಸ್ಥಾನದ ರಥಗದ್ದೆಯಲ್ಲಿ ಉಗ್ರಾಣ ಮುಹೂರ್ತವನ್ನು ದೇವಸ್ಥಾನದ ಆಡಳಿತ ಮೊಕ್ತೇಸರ ಕುರ್ನಾಡುಗುತ್ತು ಡಾ.ಎಚ್.ಬಾಲಕೃಷ್ಣ ನಾಯ್ಕ್ ನೆರವೇರಿಸಿದರು.ದೇವಸ್ಥಾನದ ಆಡಳಿತ ಮೊಕ್ತೇಸರ ಡಾ.ಎಚ್.ಬಾಲಕೃಷ್ಣ ನಾಯ್ಕ್, ಹೊರೆಕಾಣಿಕೆ ಸಮಿತಿ ಸಂಚಾಲಕ ಸಂತೋಷ್ ಕುಮಾರ್ ರೈ ಬೋಳ್ಯಾರು, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಶಿವಶಂಕರ ಭಟ್ ಕಾಡಿಮಾರು, ಸ್ವಾಗತ ಸಮಿತಿ ಪ್ರಧಾನ ಸಂಚಾಲಕ ಟ.ಜಿ‌.ರಾಜಾರಾಮ ಭಟ್, ಜೀರ್ಣೋದ್ಧಾರ ಸಮಿತಿಯ ಗೌರವಾಧ್ಯಕ್ಷ ವೆಂಕಪ್ಪ ಕಾಜವ ಮಿತ್ತಕೋಡಿ, ಕಾರ್ಯಾಧ್ಯಕ್ಷ ನರಸಿಂಹ ಹೆಗ್ಡೆ ಕುರ್ನಾಡುಗುತ್ತು, ಜೀರ್ಣೋದ್ಧರ ಸಮಿತಿ ಕಾರ್ಯಾಧ್ಯಕ್ಷ ರಾಜೇಶ್ ಶೆಟ್ಟಿ ಫಜೀರುಗುತ್ತು ಸಹಿತ ಸಮಿತಿ ಪ್ರಮುಖರು, ಸಹಸ್ರಾರು ಗ್ರಾಮಸ್ಥರು ಪಾಲ್ಗೊಂಡರು. ತಂತ್ರಿಗಳ ಆಗಮನ: ಸಂಜೆ 7 ಗಂಟೆಗೆ ತಂತ್ರಿವರ್ಯರ…

Read More