Author: UllalaVani

Kannada News From Coastal Karnataka

UN NETWORKS ತಲಪಾಡಿ: ಮನೆಯೊಂದು ಬೆಂಕಿಗೆ ಆಹುತಿಯಾಗಿರುವ ಘಟನೆ ರಾಷ್ಟ್ರೀಯ ಹೆದ್ದಾರಿ 66ರ ತಲಪಾಡಿ ಮರೋಳಿ ಬಾರಿನ ಸಮೀಪ ಸೋಮವಾರ ತಡರಾತ್ರಿ ವೇಳೆ ಸಂಭವಿಸಿದೆ. ಮನೆಯೊಳಗಿದ್ದ ಒಬ್ಬರು ಅಪಾಯದಿಂದ ಪಾರಾಗಿದ್ದಾರೆ. ಹರಿಪ್ರಸಾದ್ ಶೆಟ್ಟಿ ಎಂಬವರಿಗೆ ಸೇರಿದ ಮನೆ ಬೆಂಕಿಗೆ ಆಹುತಿಯಾಗಿದೆ. ಜಯಲಕ್ಷ್ಮೀ ಅನ್ನುವ ಗ್ಯಾರೇಜ್ ಮಾಲೀಕರಾಗಿರುವ ಇವರ ಮನೆಯೂ ಗ್ಯಾರೇಜಿನ ಜತೆಗಿದೆ. ಅವರು ಕುಟುಂಬ ಸಮೇತ ಬೇರೆ ಪ್ರದೇಶದಲ್ಲಿ ಮನೆಯಲ್ಲಿದ್ದಾರೆ. ಬೆಂಕಿಗೆ ಆಹುತಿಯಾದ ಮನೆಯಲ್ಲಿ ಗ್ಯಾರೇಜ್ ಸಿಬ್ಬಂದಿ ಓರ್ವರೇ ಇದ್ದು, ಅವರು ಅಪಾಯದಿಂದ ಪಾರಾಗಿದ್ದಾರೆ. ಘಟನೆಗೆ ವಿದ್ಯುತ್ ಶಾರ್ಟ್  ಸಕ್ರ್ಯೂಟ್ ಕಾರಣವೆಂದು ಶಂಕಿಸಲಾಗಿದೆ. ಸ್ಥಳಕ್ಕೆ ಅಗ್ನಿ ಶಾಮಕ ಸಿಬ್ಬಂದಿ ದೌಡಾಯಿಸಿ ಬೆಂಕಿ ನಂದಿಸಿದ್ದಾರೆ. ಮನೆ ಸಂಪೂರ್ಣ ಬೆಂಕಿಗೆ ಆಹುತಿಯಾಗಿದೆ. ಉಳ್ಳಾಲ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Read More

UN NETWORKS ಉಳ್ಳಾಲ: ಮೋಟಾರುವಾಹನ ಮಸೂದೆಯನ್ನು ಹಿಂಪಡೆಯಬೇಕು ಹಾಗೂ ಅಸಂಘಟಿತ ವಲಯದ ಸಾರಿಗೆ ಕಾರ್ಮಿಕರಿಗೆ ಸುರಕ್ಷತಾ ಕಾಯ್ದೆ ಜಾರಿಯಾಗಬೇಕು ಎಂದು ವಿವಿಧ ಬೇಡಿಕೆಯನ್ನು ಮುಂದಿಟ್ಟು ಜ.8 ಮತ್ತು 9ರಂದು ಭಾರತ್ ಬಂದ್ ಗೆ ಕರೆ ನೀಡಿದ ಹಿನ್ನೆಲೆ ಇಂದು ಮಂಗಳೂರಿನಲ್ಲಿ ಬಂದ್ ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಅವರು ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆಯನ್ನು ಮಾಡಿದ್ದಾರೆ.ಖಾಸಗಿ ಬಸ್ ಗಳು ಸಂಚಾರಿಸುತ್ತಿದ್ದು ಬಂದ್ ಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕುತ್ತಾರುವಿನಲ್ಲಿ ಟಯರಿಗೆ ಬೆಂಕಿ ಹಚ್ಚಿ ವಾಹನ ತಡೆಗೆ ಯತ್ನ ನಡೆಸಿದ ಘಟನೆ ನಡೆದಿದೆ. ಉಳ್ಳಾಲದಲ್ಲೂ ಎಂದಿನಂತೆ ರಸ್ತೆಗಿಳಿದ ಕೆ ಎಸ್ ಆರ್ ಟಿಸಿ , ಖಾಸಗಿ ಬಸ್ಸುಗಳು ಬಂದ್ ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

Read More

UN NETWORKS ಹರೇಕಳ : ಹರೇಕಳ ಶ್ರೀ ರಾಮಕೃಷ್ಣ ಪ್ರೌಢಶಾಲೆಯಲ್ಲಿ ಕಣಚೂರು ವೈದ್ಯಕೀಯ ಕಾಲೇಜು ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ ಹಾಗೂ ಸಮುದಾಯ ಆರೋಗ್ಯ ವಿಭಾಗದ ವತಿಯಿಂದ ಹೆಣ್ಣು ಮಕ್ಕಳ ಹದಿಹರೆಯದ ಸಮಸ್ಯೆಗಳ ಬಗ್ಗೆ ಮಾಹಿತಿ ಕಾರ್ಯಗಾರ ನಡೆಯಿತು. ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದ ಸಮುದಾಯ ಆರೋಗ್ಯ ವಿಭಾಗದ ಸಹಾಯಕ ಪ್ರೊಫೆಸರ್ ಡಾ. ಚಂದನಾ ಅವರು ಋತುಚಕ್ರವೆಂಬುದು ಒಂದು ನೈಸರ್ಗಿಕ ಪ್ರಕ್ರಿಯೆ. ಈ ಸಂದರ್ಭದಲ್ಲಿ ವಿದ್ಯಾರ್ಥಿನಿಯರು ಮಾನಸಿಕ ಮತ್ತು ಶಾರೀರಿಕ ಬದಲಾವಣೆಯ ಅರಿವನ್ನು ತಿಳಿದುಕೊಳ್ಳುವುದರೊಂದಿಗೆ ವೈಯಕ್ತಿಕ ಸ್ವಚ್ಛತೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕು. ಸ್ವಚ್ಛತೆಯ ವಿಚಾರದಲ್ಲಿ ನಿರ್ಲಕ್ಷ್ಯ ಮಾಡಬಾರದು ಎಂದರು. ಅಧ್ಯಕ್ಷತೆಯನ್ನು ಶಾಲಾ ಮುಖ್ಯೋಪಾಧ್ಯಾಯರಾದ ಕೆ. ರವೀಂದ್ರ ರೈ ಯವರು ವಹಿಸಿ ಮಾತನಾಡಿ ಗ್ರಾಮೀಣ ಪ್ರದೇಶದಲ್ಲಿರುವ ಹೆಣ್ಣು ಮಕ್ಕಳು ದೇಹದಲ್ಲಿ ನಡೆಯುವ ನೈಸರ್ಗಿಕ ಕ್ರಿಯೆಗಳ ಬಗ್ಗೆ ತಿಳಿದುಕೊಳ್ಳಲು ಹಿಂಜರಿಯುತ್ತಾರೆ. ಅದರಿಂದಾಗಿಯೇ ದೈಹಿಕ ಸಮಸ್ಯೆಗಳು ಉಂಟಾಗಬಹುದು. ಈ ರೀತಿಯ ಕಾರ್ಯಗಾರ ಇದಕ್ಕೊಂದು ಅನುಕೂಲತೆ ಒದಗಿಸುತ್ತದೆ ಎಂದರು. ಸಮುದಾಯ ಆರೋಗ್ಯ ವಿಭಾಗದ ಉಪನ್ಯಾಸಕರಾದ ನಾಗರಾಜ್ ಪಿ. ಮುನಿರಾ…

Read More

UN NETWORKS ಕೋಟೆಕಾರು:. ಶಬರಿಮಲೆಗೆ ಮಹಿಳೆಯರ ಪ್ರವೇಶ, ಸಾಹಿತಿ ಭಗವಾನ್ ಶ್ರೀ ರಾಮಚಂದ್ರನ ವಿರುದ್ಧ ಹಾಗೂ ಪ್ರವಾದಿ(ಸ) ವಿರುದ್ಧದ ಹೇಳಿಕೆ ಖಂಡಿಸಿ ಸೋಮವಾರ ಉಳ್ಳಾಲ ಬ್ಲಾಕ್ ಕಾಂಗ್ರೆಸ್ ವತಿಯಿಂದ ಬೀರಿಯಲ್ಲಿ ಪ್ರತಿಭಟನೆ ನಡೆಯಿತು. ಈ ಸಂದರ್ಭ ವಿಧಾನಪರಿಷತ್ ಸದಸ್ಯ ಹಾಗೂ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್, ಬಂಟ್ವಾಳ ತಾ.ಪಂ.ಮಾಜಿ ಉಪಾಧ್ಯಕ್ಷ ಉಮ್ಮರ್ ಪಜೀರ್ ,ಜಿಲ್ಲಾ ಪಂಚಾಯಿತಿ ಸದಸ್ಯೆ ಮಮತಾ ಗಟ್ಟಿ, , ಮೂಡಾದ ಮಾಜಿ ಅಧ್ಯಕ್ಷ ಇಬ್ರಾಹಿಂ ಕೋಡಿಜಾಲ್, ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂತೋಷ್ ಶೆಟ್ಟಿ ಅಸೈಗೋಳಿ ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಮುಸ್ತಫಾ ಮಲಾರ್,  ಹಿಂದುಳಿದ ವರ್ಗಗಳ ವಿಭಾಗಾಧ್ಯಕ್ಷ ದಿನೇಶ್ ಕುಂಪಲ, ನಗರಸಭಾ ಮಾಜಿ ಸದಸ್ಯ ದಿನೇಶ್ ರೈ, ಅಲ್ಪಸಂಖ್ಯಾತ ವಿಭಾಗ ಅಧ್ಯಕ್ಷ ಆಲ್ವಿನ್ ಡಿಸೋಜ ಉಪಸ್ಥಿತರಿದ್ದರು. ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಹ್ಮಾನ್ ಕೋಡಿಜಾಲ್ ಸ್ವಾಗತಿಸಿದರು.

Read More

UN NETWORKS ಇರಾ: ಶಬರಿಮಲೆಗೆ 40ರ ಹರೆಯದ ಮಹಿಳೆಯರಿಬ್ಬರು ಪ್ರವೇಶಗೈದ ಘಟನೆಯಿಂದ ಮನಸ್ಸಿಗೆ ತೀವ್ರ ಆಘಾತವಾಗಿದ್ದ ನಿರಂತರ 17 ವರ್ಷಗಳ ಕಾಲ ಶಬರಿಮಲೆ ಯಾತ್ರೆ ಕೈಗೊಳ್ಳುತ್ತಿದ್ದ ಗುರುಸ್ವಾಮಿಯೋರ್ವರು ಇರುಮುಡಿ ಕಟ್ಟುತ್ತಿರುವಾಗಲೇ ಸಾವನ್ನಪ್ಪಿರುವ ಘಟನೆ ಇರಾ ಮೂಳೂರಿನಲ್ಲಿ ಇಂದು ನಡೆದಿದೆ. ಮೂಳೂರು ನಿವಾಸಿ ಸುರೇಶ್ ಗುರುಸ್ವಾಮಿ (56) ಮೃತರು. ತಿಂಗಳಿಗೊಮ್ಮೆ ಶಬರಿಮಲೆಗೆ ತೆರಳುವ ಸುರೇಶ್ ಗುರುಸ್ವಾಮಿಯವರು 17 ನೇ ಯಾತ್ರೆಗೆ ಹೋಗುವವರಿದ್ದರು. ಆ ಪ್ರಯುಕ್ತ ಸೋಮವಾರದಂದು ತನ್ನ ಊರಿನ 22 ಮಂದಿ ವೃತಧಾರಿಗಳ ಜೊತೆಗೆ ತೆರಳುವವರಿದ್ದರು. ಇರುಮುಡಿ ಕಟ್ಟುವ ಕಾರ್ಯಕ್ರಮಕ್ಕೆ ಸಹಸ್ರ ಭಕ್ತರು ಆಗಮಿಸುವ ಹಿನ್ನೆಲೆಯಲ್ಲಿ ಅನ್ನದಾನವನ್ನು ಆಯೋಜಿಸಲಾಗಿತ್ತು. ಆದರೆ ಸುರೇಶ್ ಗುರುಸ್ವಾಮಿಯವರು ಇರುಮುಡಿ ಕಟ್ಟುವ ಸಂದರ್ಭದಲ್ಲೇ ಹೃದಯಘಾತಕ್ಕೆ ಒಳಗಾಗಿ ಕುಸಿದುಬಿದ್ದು ಮೃತಪಟ್ಟಿದ್ದಾರೆ. ಮೃತರು ಪತ್ನಿ, ಇಬ್ಬರು ಪುತ್ರರು ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ. ಸದಾ ಅಯ್ಯಪ್ಪನ ಧ್ಯಾನದಲ್ಲೇ ಇರುತ್ತಿದ್ದ ಇವರಿಗೆ ಇತ್ತೀಚೆಗೆ ಸಂಪ್ರದಾಯ ಮುರಿದು ಮಹಿಳೆಯರು ಪ್ರವೇಶಿಸಿರುವುದರಿಂದ ಆಘಾತಕ್ಕೆ ಒಳಗಾಗಿದ್ದರು. ಈ ಕುರಿತು ತನ್ನ ಜತೆಗಿರುವ ಅಯ್ಯಪ್ಪ ವೃತಧಾರಿಗಳ ಜತೆಗೆ ಅಳಲನ್ನು…

Read More

UN NETWORKS ತೊಕ್ಕೊಟ್ಟು: ಜಮಾಅತೆ ಇಸ್ಲಾಮಿ ಹಿಂದ್ ಸಾಮಾಜಿಕ ಸೇವಾ ಘಟಕ ಉಳ್ಳಾಲ ಇದರ ಆಶ್ರಯದಲ್ಲಿ ಕರ್ನಾಟಕ ವಕ್ಫ್ ಇಲಾಖೆ ಅಲ್ಪಶಂಖ್ಯಾತರ ಆರೋಗ್ಯ ಪರಿಹಾರ ನಿಧಿಯಿಂದ ರೋಗಿಗಳಿಗೆ ಧನ ಸಹಾಯ ಮತ್ತು 23 ವಿದ್ಯಾರ್ಥಿಗಳಿಗೆ ಶೈಕ್ಷಣಿಕ ನೆರವು ನೀಡುವ ಕಾರ್ಯಕ್ರಮ ತೊಕ್ಕೊಟ್ಟುವಿನ ಜಮಾಅತೆ ಇಸ್ಲಾಮಿ ಹಿಂದ್ ಕಚೇರಿಯಲ್ಲಿ ಶನಿವಾರ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಮಾಅತೆ ಇಸ್ಲಾಮಿ ಹಿಂದ್ ಉಳ್ಳಾಲ ಸ್ಥಾನೀಯ ಘಟಕ ಅಧ್ಯಕ್ಷ ಅಬ್ದುಲ್ ಕರೀಂ ಮಾತನಾಡಿ ಬಡವರಿಗೆ, ರೋಗಿಗಳಿಗೆ ಆರ್ಥಿಕ ನೆರವು ನೀಡುವುದು ಉತ್ತಮ ಯೋಜನೆ. ಕಷ್ಟದಲ್ಲಿ ರುವವರಿಗೆ ನೆರವು ಆಗಬೇಕೆಂಬ ಉದ್ದೇಶದಿಂದ ಹಮ್ಮಿಕೊಂಡಿದ್ದೇವೆ. ಇದನ್ನು ಎಲ್ಲರೂ ಸದುಯೋಗ ಮಾಡಿಕೊಳ್ಳಬೇಕು ಎಂದು ಕರೆ ನೀಡಿದರು.ಈ ಸಂದರ್ಭ ಕರ್ನಾಟಕ ವಕ್ಫ್ ಇಲಾಖೆ ಅಲ್ಪಶಂಖ್ಯಾತರ ಆರೋಗ್ಯ ಪರಿಹಾರ ನಿಧಿಯಿಂದ ತೃತೀಯ ಹಂತದ 125 ರೋಗಿಗಳಿಗೆ ಒಟ್ಟು 32,55000 ರೂ. ನೆರವು ಮತ್ತು ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಅತ್ಯಧಿಕ ಅಂಕ ಪಡೆದ 23 ವಿದ್ಯಾರ್ಥಿಗಳಿಗೆ 53000 ರೂ. ಶೈಕ್ಷಣಿಕ ನೆರವು ನೀಡಲಾಯಿತು. ಜಮಾಅತೆ…

Read More

UN NETWORKS ಉಳ್ಳಾಲ: ಕಾರ್ಪೊರೇಶನ್ ಬ್ಯಾಂಕ್‍ನಲ್ಲಿ ಮೂವತ್ತೈದು ವರ್ಷ ಉದ್ಯೋಗಿಯಾಗಿ ಸದ್ಯ ಅಸಿಸ್ಟೆಂಟ್ ಮ್ಯಾನೇಜರ್ ಹುದ್ದೆಯನ್ನು ಅಲಂಕರಿಸಿ ನಿವೃತ್ತರಾದ ಕೆ. ಸಂತೋಷ್ ಕುಮಾರ್ ಗೆ ಬೀಳ್ಕೊಡುಗೆ ಕಾರ್ಯಕ್ರಮವು ಇತ್ತೀಚೆಗೆ ನಡೆಯಿತು. ಇವರು ಉತ್ತಮ ಸೇವೆಗಾಗಿ ಠೇವಣಿ ಸಂಗ್ರಹಕ್ಕಾಗಿ ಅನೇಕ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ. ಉತ್ತಮ ಕ್ರಿಕೆಟ್ ಪಟುವಾಗಿ ಬ್ಯಾಂಕ್‍ನ ತಂಡದ ನಾಯಕರಾಗಿ ಹಲವಾರು ಪಂದ್ಯಗಳಲ್ಲಿ ಭಾಗವಹಿಸಿದ್ದಾರೆ. ಚಿಕ್ಕ ಮಗಳೂರು, ಮುಂಬೈ, ಮೈಸೂರು, ಮಂಗಳೂರು, ಉಡುಪಿ ಯಲ್ಲಿ ಸೇವೆ ಸಲ್ಲಿಸಿದ ಇವರು ದೇರಳಕಟ್ಟೆ ಶಾಖೆ ಯಲ್ಲಿ ಸೇವೆ ಮಾಡಿ ನಿವೃತ್ತರಾಗುತ್ತಿದ್ದಾರೆ. ಇವರ ಬೀಳ್ಕೊಡುಗೆ ಸಮಾರಂಭ ಕಾರ್ಯ ಕ್ರಮದಲ್ಲಿ ಕಾರ್ಪೋರೇಷನ್ ಬ್ಯಾಂಕ್‍ನ ಡಿಜಿಎಂ ಎ.ಕೆ. ವಿನೋದ್, ಶಾಖಾ ಮ್ಯಾನೇಜರ್ ಶೇಖರ ನಾಯ್ಕ್ ಮತ್ತಿತರರು ಉಪಸ್ಥಿತರಿದ್ದರು.

Read More

UN NETWORKS ಕೊಲ್ಲರಕೋಡಿ: ನರಿಂಗಾನ ಗ್ರಾಮ ಪಂಚಾಯತ್ ವತಿಯಿಂದ ಮತ್ತು ರಾಮಕೃಷ್ಣ ಮಿಷನ್ ಮಂಗಳೂರು ಹಾಗೂ ದ.ಕ. ಜಿಲ್ಲಾ ಪಂಚಾಯತ್ ಇದರ ಸಹಯೋಗದೊಂದಿಗೆ ‘ಸ್ವಚ್ಛ ನರಿಂಗಾನ’ ಕಾರ್ಯಕ್ರಮವು ನರಿಂಗಾನ ಗ್ರಾಮ ಪಂಚಾಯತ್ ಸದಸ್ಯ ಅಬ್ದುಲ್ ಖಾದರ್ ಅವರ ನೇತೃತ್ವದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಕೊಲ್ಲರಕೋಡಿಯ ನಾಗರಿಕರು ಜೊತೆಗೂಡಿ ಕೊಲ್ಲರಕೋಡಿಯ ಮುರತಂಗುಡಿ ತೋಡಿನ ತ್ಯಾಜ್ಯಗಳನ್ನು ಮತ್ತು ರಸ್ತೆಬದಿಯ ಗಿಡ ಗಂಟುಗಳನ್ನು ಕಡಿದು ಸ್ವಚ್ಛ ಗೊಳಿಸಿದರು.ಈ ಸಂದರ್ಭ ನರಿಂಗಾನ ಗ್ರಾಮ ಪಂಚಾಯತ್ ಅಧ್ಯಕ್ಷ ಇಸ್ಮಾಯಿಲ್ ಮೀನಂಕೋಡಿ, ಉಪಾಧ್ಯಕ್ಷೆ ನಳಿಣಾಕ್ಷಿ, ನೂರುಲ್ ಹುದಾ ಮಸ್ಜಿದ್ ತಖ್ವಾ ಅಧ್ಯಕ್ಷ ಇಬ್ರಾಹಿಂ ಪಾರೆ, ಕಾರ್ಯದರ್ಶಿ ಲತೀಫ್ ಎಮ್.ಎಚ್, ಗ್ರಾಪಂ ಸದಸ್ಯ ಸಿ. ಎಚ್. ರಹಿಮಾನ್ ಚಂದಹಿತ್ತುಲು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ರಜನಿ .ಡಿ, ಗ್ರಾಪಂ ಸದಸ್ಯೆ ಸುಜಾತ, ಗ್ರಾಪಂ ಸಿಬ್ಬಂದಿ ಖಾಸಿಂ, ಮುಹಮ್ಮದ್ ಎನ್.ಐ, ರಫೀಕ್ ಎಮ್. ಜಿ, ಅಶ್ರಫ್ ಮೀನಂಕೋಡಿ ಮೊದಲಾದವರು ಉಪಸ್ಥಿತರಿದ್ದರು.

Read More

UN NETWORKS ಉಳ್ಳಾಲ: ಉಳ್ಳಾಲ ಮೊಗವೀರಪಟ್ನದ ವಿಶ್ವ ಹಿಂದೂ ಪರಿಷತ್ ಬಜರಂಗದಳ ವ್ಯಾಘ್ರವಾಹಿನಿ ಶಾಖೆ ವತಿಯಿಂದ, ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಸ್ವಯಂಸೇವಕ ದಿ. ಲೋಕನಾಥ್ ಅಮೀನ್ ಉಳ್ಳಾಲ ಇವರ ಸ್ಮರಣಾರ್ಥ ಉಳ್ಳಾಲ ಶಿವ ಸಾನಿಧ್ಯ (ಹಿಂದೂ ರುದ್ರಭೂಮಿ)ಯಲ್ಲಿ ಸುಮಾರು 4.75 ಲಕ್ಷ ರೂ ಅಂದಾಜು ವೆಚ್ಚದಲ್ಲಿ ” ಸತ್ಯ ಹರಿಶ್ಚಂದ್ರನ ಪ್ರತಿಮೆ ಹಾಗೂ ತ್ರಿಶೂಲ ಸ್ಥಂಭ” ನಿರ್ಮಿಸುವ ಕುರಿತು “ವಿಜ್ಞಾಪನಾ ಪತ್ರ ಬಿಡುಗಡೆ ಸಮಾರಂಭ ಶುಕ್ರವಾರ ಬ್ರದರ್ಸ್ ಸ್ಪೋರ್ಟ್ಸ್ ಕ್ಲಬ್ ನಲ್ಲಿ ಜರಗಿತು. ಉಳ್ಳಾಲ ಮೊಗವೀರ ಸಂಘದ ಮಾಜಿ ಅಧ್ಯಕ್ಷ ಸದಾನಂದ ಬಂಗೇರ ಅಧ್ಯಕ್ಷತೆ ವಹಿಸಿದ್ದರು. ಉಳ್ಳಾಲ ಹಿಂದೂ ಶವ ಸಂಸ್ಕಾರ ಸೇವಾ ಸಮಿತಿಯ ಅಧ್ಯಕ್ಷ ಲಕ್ಷಣ ಅಬ್ಬಕ್ಕನಗರ ವಿಜ್ಞಾಪನಾ ಪತ್ರ ಬಿಡುಗಡೆಗೊಳಿಸಿದರು. ಮುಖ್ಯ ಅತಿಥಿಗಳಾಗಿ ಉಳ್ಳಾಲ ಮೊಗವೀರ ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಬಂಗೇರ, ಶಾಲಾ ಮಾಜಿ ಸಂಚಾಲಕ ಬಾಬು ಬಂಗೇರ, ಭಾರತ್ ಪ್ರೌಢಶಾಲೆಯ ನಿವೃತ ಪ್ರಾಧ್ಯಾಪಕ ವಾಸುದೇವ ರಾವ್, ಮೊಗವೀರ ಹಿ. ಪ್ರಾ ಶಾಲಾ ಹಳೆ ವಿದ್ಯಾರ್ಥಿ…

Read More

UN NETWORKS ಪಾನೀರ್: ನಮ್ಮ ಜೀವಿತಾವಯಲ್ಲಿ ಧಾರ್ಮಿಕ ಹಬ್ಬಗಳನ್ನು ಮಾತ್ರವೇ ಆಚರಿಸಿದರೆ ಸಾಲದು, ಹಬ್ಬದ ಹಿಂದಿರುವ ಸಂದೇಶಗಳ ಪಾಲನೆಯನ್ನೂ ಅನುಷ್ಠಾನಗೊಳಿಸಬೇಕಾಗಿದೆ ಎಂದು ಪ್ರಧಾನ ಧರ್ಮಗುರು ರೆ.ಫಾ. ಜೋಸೆಫ್ ಮಾರ್ಟಿಸ್ ಹೇಳಿದರು. ಪಾನೀರ್ ದಯಾಮಾತೆ ಮರ್ಸಿಯಮ್ಮನವರ ಇಗರ್ಜಿಯ ಪರಮಪ್ರಸಾದದ ಮೆರವಣಿಗೆ ಹಾಗೂ ದಿವ್ಯ ಬಲಿಪೂಜೆ ನೆರವೇರಿಸಿ ಸಂದೇಶ ನೀಡಿದ ಅವರು ನಮ್ಮ ಜೀವನದಲ್ಲಿ ದೇವ ಸ್ಮರಣೆ ಸದಾ ಇರಬೇಕು, ಧಾರ್ಮಿಕ ಭಾವನೆಯೊಂದಿಗೆ, ಸಂಸ್ಕಾರ, ನಾವೆಲ್ಲರೂ ಒಂದೇ ಎನ್ನುವ ಭಾವನೆ ಮುಖ್ಯ. ಸಾಮಾಜಿಕ ಸೇವಾ ಮನೋಭಾವ, ಚಿಂತನೆ ಅಗತ್ಯ ಎಂದರು. ಕಾರ್ಯಕ್ರಮದ ಪ್ರಯುಕ್ತ ಚರ್ಚ್ ವ್ಯಾಪ್ತಿಯ ಕ್ರೈಸ್ತರು ನೂತನ ಬೆಂಚುಗಳು ಹಾಗೂ ಐದು ಎಲ್‍ಇಡಿ ಟಿವಿಗಳನ್ನು ಕೊಡುಗೆಯಾಗಿ ನೀಡಿದರು. ಪಾನೀರ್ ಚರ್ಚ್‍ನ ಧರ್ಮಗುರು ರೆ.ಫಾ. ಡೆನ್ನಿಸ್ ಸುವಾರಿಸ್, ಅತಿಥಿ ಧರ್ಮಗುರು ಫಾ. ವಿಜಯಾ ಟೆಲ್ಲಿಸ್, ಫಾ. ವಿಲ್ಸನ್ ಮೋರಾಸ್, ಫಾ. ಜೋಯ್ ಪಾಯ್ಸ್, ಫಾ. ಬಾಲರಾಜ್, ಫಾ. ಬರ್ನಾಡ್, ಚರ್ಚ್‍ನ ದಿಯಾಕೋನ್ ಲ್ಯಾರಿ ಫ್ರಾಂಕ್ಲಿನ್ ಪಿಂಟೋ, ಉಪಾಧ್ಯಕ್ಷ ಎಲಿಯಾಸ್ ಡಿಸೋಜ, ಕಾರ್ಯದರ್ಶಿ ಡೆನ್ನಿಸ್ ಗೋನ್ಸಾಲ್ವೀಸ್…

Read More