UN NETWORKS
ಬೋಳಿಯಾರು: ಸಮಾಜದ ಕಟ್ಟಕಡೆಯ ಜನ ಸಾಮಾನ್ಯರು ಉತ್ತಮವಾದ ಮೂಲಭೂತ ಸೌಕರ್ಯ ಪಡೆಯಬೇಕೆಂದು ಸರಕಾರದ ಉದ್ದೇಶವಾಗಿದೆ ಎಂದು ಉಸ್ತುವಾರಿ ಸಚಿವ ಯು.ಟಿ ಖಾದರ್ ಹೇಳಿದರು.ಅವರು ಬೋಳಿಯಾರು ಗ್ರಾಮದ ಫರೀದ್ ನಗರ ಸಂಪರ್ಕ ರಸ್ತೆಗೆ ಶಿಲಾ ನ್ಯಾಸಗೈದು ಮಾತನಾಡಿದರು.
ನಗರ ಪ್ರದೇಶದ ನಾಗರಿಕರು ಪಡೆಯುತ್ತಿರುವ ಮೂಲಭೂತ ಸೌಕರ್ಯಗಳು ಗ್ರಾಮೀಣ ಪ್ರದೇಶವಾದ ನನ್ನ ಕ್ಷೇತ್ರಕ್ಕೆ ತರುವಲ್ಲಿ ಕ್ಷಮ ಪಡುತ್ತೆನೆ.ಮಂಗಳೂರು ವಿಧಾನ ಸಭಾ ಕ್ಷೇತ್ರದ ಕ್ಕೆ ಶಾಶ್ವತ ಕುಡಿಯುವ ನೀರಿನ ವ್ಯವಸ್ಥೆಗಾಗಿ 480ಕೋಟಿ ರೂಪಾಯಿ ಯಲ್ಲಿ 178ಕೋಟಿ ಬ್ರಿಜ್ ನಿರ್ಮಾಣ ಹಾಗೂ198 ಕುಡಿಯುವ ನೀರಿನ ಯೋಜನೆಯ ಸಂಬಂಧಿಸಿ ಅನುದಾನ ಬಿಡುಗಡೆಯಾಗಿದೆ. ಶ್ರೀಘದಲ್ಲಿ ಟೆಂಡರ್ ಕರೆದು 3 ವರ್ಷದೊಳಗೆ ಕಾಮಗಾರಿ ಸಂಪೂರ್ಣಗೊಳಲಿದೆ ಎಂದು ಹೇಳಿದರು.
ತಾ.ಪಂ ಸದಸ್ಯ ಜಬ್ಬಾರ್ ಬೋಳಿಯಾರು, ಗ್ರಾ.ಪಂ ಸದಸ್ಯ ರಾಮೇಶ್ ಶೆಟ್ಟಿ, ಅಬ್ದುಲ್ ಶಕೂರು, ಬೋಳಿಯಾರು ಕಾಂಗ್ರೆಸ್ ವಲಯ ಅಧ್ಯಕ್ಷ ಉಸ್ಮಾನ್ ಬಿ.ಎಂ, ಹಿಂದೂಳಿದ ವರ್ಗದ ಗ್ರಾ ಉ ವಲಯಾಧ್ಯಕ್ಷ ಸೀನಾ ಪೂಜಾರಿ, ನಾರಾಯಣ ಗುರು ಮಂದಿರದ ಸದಸ್ಯ ಸುಂದರ್ ಪೂಜಾರಿ, ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ನಝೀರ್ ಅಹ್ಮದ್, ವಲಯ ಉ.ಉಪಾಧ್ಯಕ್ಷರುಗಳಾದ ಆರ್.ಎಚ್ ಮೋನು, ಅಝೀಝ್ ರಂತಡ್ಕ, ಮೋನು ಕೊಕ್ಕೋಟು, ಕಾರ್ಯದರ್ಶಿ ಶರೀಫ್ ಬೋಳಿಯಾರು ಉಪಸ್ಥಿತರಿದ್ದರು.


