UN NETWORKS
ಬಂಟ್ವಾಳ: ದಾರುಲ್ ಅಶ್-ಅರಿಯ್ಯಾ ವಿದ್ಯಾ ಸಂಸ್ಥೆ ಶಿಲ್ಪಿ ಮರ್ಹೂಂ ಸುರಿಬೈಲ್ ಉಸ್ತಾದರ 17ನೇ ಆಂಡ್ ನೇರ್ಚೆ ಹಾಗೂ ಇತ್ತಿಚೆಗೆ ಅಗಲಿದ ಸಂಸ್ಥೆ ಪ್ರಾಂಶುಪಾಲ್ ಪಿ.ಎ ಉಸ್ತಾದ್ ಅನು ಸ್ಮರಣಾ ಸಂಗಮ ಜ.3-4ರಂದು ನಡೆಯಲಿದ್ದು ಸ್ವಾಗತ ಸಮಿತಿ ಅಧ್ಯಕ್ಷ ಸಿಂಗಾರಿ ಹಾಜಿ ಗುರುವಾರ ಧ್ವಜಾರೋಹಣಗೈದು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಗೌರವಾಧ್ಯಕ್ಷ ಸಿಹಾಬುದ್ದೀನ್ ತಂಙಳ್ ಮದಕ, ಸಂಸ್ಥೆಯ ಅಧ್ಯಕ್ಷ ಮಹಮುದುಲ್ ಫೈಝಿ, ಚೆಟ್ಟಕಲ್ ತಂಙಳ್, ಕೋಶಾಧಿಕಾರಿ ಅಬೂಬಕ್ಕರ್ ಸಿ.ಎಚ್ ಸಕೆರ್ಳ, ಸಂಸ್ಥೆಯ ಮ್ಯಾನೇಜರ್ ಸಿ.ಎಚ್ ಮುಹಮ್ಮದಾಲಿ ಸಖಾಫಿ, ಉಪಾಧ್ಯಕ್ಷರುಗಳಾದ ಬೋಳ್ಮಾರ್ ಉಸ್ತಾದ್, ಮಂಚಿ ಉಸ್ತಾದ್, ಅಬ್ದುಲ್ ಹಮೀದ್ ಲತೀಫಿ ಸೇರಾಜೆ,ದಾರುನಜಾತ್ ಅಬೂಬಕರ್ ಮುಸ್ಲಿಯಾರ್,ಅಬೂಬಕರ್ ಬಾಖವಿ ಕೊಲಾಕೈ, ವಾಜೀದ್ ಹನೀಫಿ ತಿರ್ವತ್ತೂರು, ಅಬ್ದುಲ್ ರಶೀದ್ ಸ ಅದಿ, ಮುತ್ತಲಿಬ್ ಹಾಜಿ ಮುಂತಾದವರು ಈ ಸಂದರ್ಭ ಉಪಸ್ಥಿತರಿದ್ದರು.


