UN NETWORKS
ಉಳ್ಳಾಲ: ಉಳ್ಳಾಲ ಮೊಗವೀರಪಟ್ನದ ವಿಶ್ವ ಹಿಂದೂ ಪರಿಷತ್ ಬಜರಂಗದಳ ವ್ಯಾಘ್ರವಾಹಿನಿ ಶಾಖೆ ವತಿಯಿಂದ, ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಸ್ವಯಂಸೇವಕ ದಿ. ಲೋಕನಾಥ್ ಅಮೀನ್ ಉಳ್ಳಾಲ ಇವರ ಸ್ಮರಣಾರ್ಥ ಉಳ್ಳಾಲ ಶಿವ ಸಾನಿಧ್ಯ (ಹಿಂದೂ ರುದ್ರಭೂಮಿ)ಯಲ್ಲಿ ಸುಮಾರು 4.75 ಲಕ್ಷ ರೂ ಅಂದಾಜು ವೆಚ್ಚದಲ್ಲಿ ” ಸತ್ಯ ಹರಿಶ್ಚಂದ್ರನ ಪ್ರತಿಮೆ ಹಾಗೂ ತ್ರಿಶೂಲ ಸ್ಥಂಭ” ನಿರ್ಮಿಸುವ ಕುರಿತು “ವಿಜ್ಞಾಪನಾ ಪತ್ರ ಬಿಡುಗಡೆ ಸಮಾರಂಭ ಶುಕ್ರವಾರ ಬ್ರದರ್ಸ್ ಸ್ಪೋರ್ಟ್ಸ್ ಕ್ಲಬ್ ನಲ್ಲಿ ಜರಗಿತು.
ಉಳ್ಳಾಲ ಮೊಗವೀರ ಸಂಘದ ಮಾಜಿ ಅಧ್ಯಕ್ಷ ಸದಾನಂದ ಬಂಗೇರ ಅಧ್ಯಕ್ಷತೆ ವಹಿಸಿದ್ದರು. ಉಳ್ಳಾಲ ಹಿಂದೂ ಶವ ಸಂಸ್ಕಾರ ಸೇವಾ ಸಮಿತಿಯ ಅಧ್ಯಕ್ಷ ಲಕ್ಷಣ ಅಬ್ಬಕ್ಕನಗರ ವಿಜ್ಞಾಪನಾ ಪತ್ರ ಬಿಡುಗಡೆಗೊಳಿಸಿದರು. ಮುಖ್ಯ ಅತಿಥಿಗಳಾಗಿ ಉಳ್ಳಾಲ ಮೊಗವೀರ ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಬಂಗೇರ, ಶಾಲಾ ಮಾಜಿ ಸಂಚಾಲಕ ಬಾಬು ಬಂಗೇರ, ಭಾರತ್ ಪ್ರೌಢಶಾಲೆಯ ನಿವೃತ ಪ್ರಾಧ್ಯಾಪಕ ವಾಸುದೇವ ರಾವ್, ಮೊಗವೀರ ಹಿ. ಪ್ರಾ ಶಾಲಾ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ರಾಜೇಶ್ ಪುತ್ರನ್, ಬಜರಂಗದಳ ಉಳ್ಳಾಲ ಪ್ರಖಂಡದ ಸಂಚಾಲಕರಾದ ಪವಿತ್ರ ಕುಮಾರ್, ವಿಶ್ವ ಹಿಂದೂ ಪರಿಷತ್ ವ್ಯಾಘ್ರವಾಹಿನಿ ಶಾಖೆಯ ಅಧ್ಯಕ್ಷ ಯಶಪಲ್ ಪುತ್ರನ್ ಉಪಸ್ಥಿತರಿದ್ದರು. ಹರ್ಷಿತ್ ಸಾಲ್ಯಾನ್ ಸ್ವಾಗತಿಸಿದರು.
ಬಜರಂಗದಳ ಜಿಲ್ಲಾ ಗೋರಕ್ಷಾ ಪ್ರಮುಖ್ ಗುರುಪ್ರಸಾದ್ ಉಳ್ಳಾಲ ಪ್ರಸ್ತಾವನೆಗೈದರು. ಸತ್ಸಂಗ ಪ್ರಮುಖ್ ಶಮಂತ್ ಕರ್ಕೇರ ವಂದಿಸಿದರು.


