UN NETWORKS
ಮಂಜನಾಡಿ: ಮಂಜನಾಡಿಯಲ್ಲಿ ಧಾರ್ಮಿಕ ಕಾರ್ಯಕ್ರಮಗಳು ಸದಾ ನಡೆಯುತ್ತಿದೆ. ಹಳೇ ಸಂಪ್ರದಾಯಗಳ ಪ್ರಕಾರ ಕಾರ್ಯಕ್ರಮಗಳು ಮಂಜನಾಡಿಯಲ್ಲಿ ನಡೆಯುತ್ತಿರುವುದು ಸ್ವಾಗತಾರ್ಹ. ಇದೀಗ ಹಮ್ಮಿಕೊಂಡಿರುವ ಉರೂಸ್ ಕಾರ್ಯಕ್ರಮ ಯಶಸ್ವಿಯಾಗಲಿ ಎಂದು ಎಪಿ ಅಬೂಬಕರ್ ಮುಸ್ಲಿಯಾರ್ ಹೇಳಿದರು.
ಅವರು ಮಂಜನಾಡಿಯಲ್ಲಿ ಹಝ್ರತ್‍ಅಸ್ಸಯ್ಯದ್ ಇಸ್ಮಾಯಿಲ್ ಮುಸ್ಲಿಯಾರ್ ರವರ ಹೆಸರಿನಲ್ಲಿ ಆರಂಭಗೊಂಡ ಉರೂಸ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಉರೂಸ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಅಸ್ಸಯ್ಯದ್ ಮಹಮ್ಮದ್ ಶಮೀಮ್ ತಂಙಳ್ ಅವರು ಪ್ರವಾದಿಯವರ ಮೇಲೆ ನಂಬಿಕೆ ವಿಶ್ವಾಸ ಸದಾ ಇರಬೇಕು. ಔಲಿಯಾಗಳನ್ನು ಗೌರವಿಸುವ ಜತೆಗೆ ಇಸ್ಲಾಂನ ಚೌಕಟ್ಟು ಮೀರದಂತೆ ಕಾರ್ಯಕ್ರಮ ನಡೆಸಬೇಕಾಗಿದೆ. ಧಾರ್ಮಿಕ ಶ್ರದ್ಧೆ, ಭಕ್ತಿ ನಮ್ಮಲ್ಲಿದ್ದರೆ ಇದ್ದರೆ ಮಾತ್ರ ಧರ್ಮದ ಬಗ್ಗೆ ಅರಿವು ಮೂಡಲು ಸಾಧ್ಯ ಎಂದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಿ.ಎಂ. ಅಬ್ಬಾಸ್ ಮುಸ್ಲಿಯಾರ್ ವಹಿಸಿದ್ದರು. ಇಸ್ಮಾಯಿಲ್ ಮಿಸ್ಬಾಯಿ ಚೆರ್ಮೋತು, ಮತ್ತು ಅಹ್ಮದ್ ಬಾಖವಿ ಮುಖ್ಯ ಭಾಷಣ ಮಾಡಿದರು. ಜಮಾಅತ್ ಕಾರ್ಯದರ್ಶಿ ಅಝೀಝ್ ಪರ್ತಿಪ್ಪಾಡಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ನುಡಿದರು.
ಕಾರ್ಯಕ್ರಮದಲ್ಲಿ ಮಹಮ್ಮದ್ ಮಸೂದ್ ಸಅದಿ, ಕರೀಂ ಫೈಝಿ, ಕುಂಞಬಾವಾ ಹಾಝಿ, ಕೆಎಂಕೆ ಮಂಜನಾಡಿ ಮೊದಲಾದವರು ಇದ್ದರು.


