UN NETWORKS
ತೊಕ್ಕೊಟ್ಟು : ದ.ಕ. ಜಿಲ್ಲೆ ಬ್ಯಾಂಕ್‍ಗಳ ತವರೂರು ಎಂಬ ಹೆಗ್ಗಳಿಕೆಯನ್ನು ಪಡೆದಿದೆ. ರಾಷ್ಟ್ರೀಕೃತ ಬ್ಯಾಂಕ್‍ಗಳಲ್ಲಿ ಒಂದಾಗಿರುವ ವಿಜಯಾ ಬ್ಯಾಂಕ್‍ನ್ನು ಬ್ಯಾಂಕ್ ಆಫ್ ಬರೋಡ ಜತೆ ವಿಲೀನ ಮಾಡುವ ಕೇಂದ್ರ ಸರಕಾರದ ಕ್ರಮ ಖಂಡನೀಯ. ಈ ಕ್ರಮದ ವಿರುದ್ಧ ಭಾರೀ ಪ್ರತಿಭಟನೆ ನಡೆಯುತ್ತಿದೆ. ಅಖಿಲ ಭಾರತ ಕಾಂಗ್ರೆಸ್ ಪಕ್ಷ ಕೂಡಾ ಈ ಕ್ರಮವನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿದೆ.
ವಿಜಯಾ ಬ್ಯಾಂಕ್‍ನ್ನು ಬ್ಯಾಂಕ್ ಆಫ್ ಬರೋಡ ಜತೆ ವಿಲೀನ ಮಾಡುವ ಕೇಂದ್ರ ಸರಕಾರದ ಕ್ರಮವನ್ನು ಖಂಡಿಸಿ ಕಾಂಗ್ರೆಸ್ ನೇತೃತ್ವದಲ್ಲಿ ತೊಕ್ಕೊಟ್ಟು ವಿಜಯಾಬ್ಯಾಂಕ್ ಕಚೇರಿ ಮುಂಭಾಗದಲ್ಲಿ ಭಾರೀ ಪ್ರತಿಭಟನೆ ನಡೆಯಿತು.ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿಯವರ ಅಸೈಗೋಳಿ ಮತ್ತು ಉಪಾಧ್ಯಕ್ಷ ಸುರೇಶ್ ಭಟ್ನಗರ ರವರ ನೇತೃತ್ವದಲ್ಲಿ ನಡೆದ ಈ ಪ್ರತಿಭಟನೆಯಲ್ಲಿ ಕೇಂದ್ರ ಸರಕಾರ ಮತ್ತು ಮೋದಿಯವರ ವಿರುದ್ಧ ಘೋಷಣೆ ಕೂಗಿದರು.ಪ್ರತಿಭಟನೆಯ ಅಧ್ಯಕ್ಷತೆಯನ್ನು ವಹಿಸಿದ್ದ ಸುರೇಶ್ ಭಟ್ನಗರ ಮಾತನಾಡಿ ಕೇಂದ್ರ ಸರಕಾರ ಇಂದು ಜನರ ಭಾವನೆಗಳಿಗೆ ಧಕ್ಕೆ ಬರುತ್ತಿದೆ. ಯಾವುದೇ ಕಾರಣಕ್ಕೆ ವಿಜಯಾ ಬ್ಯಾಂಕ್ ವಿಲೀನ ಮಾಡಬಾರದು. ಇದರ ವಿರುದ್ಧ ಕಾಂಗ್ರೆಸ್ ಪಕ್ಷ ಇನ್ನು ಮುಂದೆಯೂ ದೊಡ್ಡ ಮಟ್ಟದಲ್ಲಿ ಹೋರಾಟ ಮಾಡಲಿದೆ ಎಂದರು.
ಲಾಭದಲ್ಲಿರುವ ವಿಜಯಾ ಬ್ಯಾಂಕ್‍ನ್ನು ನಷ್ಟದಲ್ಲಿರುವ ಬ್ಯಾಂಕ್ ಆಫ್ ಬರೋಡ ಜತೆ ವಿಲೀನ ಮಾಡುವ ಕ್ರಮ ಸರಿಯಲ್ಲ ಎಂದ ಕಾಂಗ್ರೆಸ್ ಹಿಂದುಳಿದ ವರ್ಗದ ಅಧ್ಯಕ್ಷ ದಿನೇಶ್ ಕುಂಪಲ ಅವರು ಕೇಂದ್ರ ಸರಕಾರದ ಈ ನಿರ್ಧಾರವನ್ನು ಖಂಡಿಸಿದರು.ಉಳ್ಳಾಲ ನಗರ ಸಭ ಸದಸ್ಯ ಮಹಮ್ಮದ್ ಮೋನು ಮುಕ್ಕಚ್ಚೇರಿ ಕೇಂದ್ರದ ನಿರ್ಧಾರವನ್ನು ಖಂಡಿಸಿದರು. ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಈಶ್ವರ ಉಳ್ಳಾಲ್, ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷ ದೇವಕಿ ಬಂಡಿಕೊಟ್ಯ, ನಗರಸಭಾ ಮಾಜಿ ಸದಸ್ಯ ದಿನೇಶ್ ರೈ, ಕೇಂದ್ರ ಸರಕಾರದ ತಪ್ಪು ನಿರ್ಧಾರದ ಬಗ್ಗೆ ಮಾತನಾಡಿ ಖಂಡನೆ ವ್ಯಕ್ತಪಡಿಸಿದರು. ಉಳ್ಳಾಲ ನಗರ ಸಭಾ ಮಾಜಿ ಅಧ್ಯಕ್ಷ ಹುಸೈನ್ ಕುಂಞಮೋನು, ಸದಸ್ಯ ಯು.ಎ ಇಸ್ಮಾಯಿಲ್, ಭಾರತೀ, ಸೋಮೇಶ್ವರ ವಲಯ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಕಿಶೋರ್ ಗಟ್ಟಿ, ಸೋಮೇಶ್ವರ ಗ್ರಾ.ಪಂ. ಸದಸ್ಯ ಮಾಧವ ಗಟ್ಟಿ, ದೀಪಕ್ ಪಿಲಾರ್, ಮಾಜಿ ಸದಸ್ಯ ಧನಂಜಯ ಕೊಲ್ಯ, ಅಳೇಕಲ ವಲಯ ಸಮಿತಿ ಅಧ್ಯಕ್ಷ ಕರೀಂ, ಮೆಸ್ಕಾಂ ಸಲಹಾ ಸಮಿತಿ ಸದಸ್ಯ ಸೀನಾ ಪೂಜಾರಿ ಬೋಳಿಯಾರ್, ದಿನೇಶ್ ಪಿಲಾರ್, ಬ್ಲಾಕ್ ಕಾಂಗ್ರೆಸ್ ಸದಸ್ಯ ಮನ್ಸೂರು, ಯುವ ಕಾಂಗ್ರೆಸ್‍ನ ಪ್ರಕಾಶ್ ಪಿಂಟೋ, ನಾಸಿರ್ ಟಿ.ಎಸ್, ರೂಪೆಶ್ ಭಟ್ನಗರ, ಸಂಜೀವ ಸುವರ್ಣ, ಲತೀಶ್ ಪಿಲಾರ್, ಪ್ರೇಮನಾಥ ಕನೀರುತೋಟ, ರಾಜೇಶ್ ಭಂಡಾರಿ, ಮಧವ ಗಟ್ಟಿ, ಕ್ಲೇರಾ ಮೊದಲಾದವರು ಉಪಸ್ಥಿತರಿದ್ದರು.


