UN NETWORKS ಮಂಗಳೂರು: ಜಮಾಅತ್ ಪರಿಸರದಲ್ಲಿ ಇರುವ ಬಡ ಹೆಣ್ಣು ಮಕ್ಕಳನ್ನು ಗುರುತಿಸಿ ಅವರಿಗೆ ಮದುವೆಯಾಗಲು ಸಹಾಯ ಮಾಡುವುದು ಪ್ರತಿಯೊಬ್ಬ ಮುಸ್ಲಿಮನ ಕರ್ತವ್ಯವಾಗಿದೆ. ಇಂತಹ ಕಾರ್ಯದಲ್ಲಿ ಎಲ್ಲರೂ ಕೈಜೋಡಿಸಬೇಕು ಎಂದು ದ.ಕ ಜಿಲ್ಲಾ ಸಂಯುಕ್ತ ಖಾಝಿ ತ್ವಾಖಾ ಅಹ್ಮದ್ ಮುಸ್ಲಿಯಾರ್ ಹೇಳಿದರು. ಅವರು ರಿಫಾಯಿಯ್ಯಾ ದಫ್ಫ್ ಕಮಿಟಿ ಪಕ್ಕಲಡ್ಕ ಇದರ 14ನೇ ವಾರ್ಷಿಕೋತ್ಸವದ ಪ್ರಯುಕ್ತ ಬಜಾಲ್ ಮಿತ್ತಬೈಲ್ ಉಸ್ತಾದ್ ವೇದಿಕೆಯಲ್ಲಿ ಅಯೋಜಿಸಿದ 2 ಜೋಡಿಯ ಸರಳ ವಿವಾಹ ಕಾರ್ಯಕ್ರಮದ ನಿಖಾಹ್ ನೆರವೇರಿಸಿ ಮಾತನಾಡಿದರು.ಪ್ರತಿಯೊಂದು ಜಮಾಅತ್‍ಗಳಲ್ಲಿ ಸಂಘ ಸಂಸ್ಥೆಗಳ ಸಹಕಾರದಿಂದ ಬಡ ಹೆಣ್ಣು ಮಕ್ಕಳ ವಿವಾಹ ಮಾಡುವ ಜವಾಬ್ದಾರಿ ವಹಿಸಿದಾಗ , ಬಡ ಹೆತ್ತವರು ಮದುವೆ ಸಹಾಯಕ್ಕಾಗಿ ಬೇಡುವ ಪರಿಸ್ಥಿತಿ ದೂರವಾಗುತ್ತದೆ ಎಂದರು.ಕಾರ್ಯಕ್ರಮ ಉದ್ಘಾಟಿಸಿದ ಇಹ್ಸಾನ್ ಕರ್ನಾಟಕ ಕನ್‍ವೀನರ್ ಅಬ್ದುರ್ರಹ್ಮಾನ್ ರಝ್ವಿ ಕಲ್ಕಟ್ಟ ಮಾತನಾಡಿ, ರಿಫಾಯಿಯ್ಯಾ ದಫ್ಫ್ ಕಮಿಟಿ 14 ವರ್ಷಗಳಿಂದ ಉತ್ತಮ ಸಮಾಜಸೇವೆ ಮಾಡುತ್ತಾ ಬಂದಿದೆ. ಇಂತಹ ಸಮಾಜಮುಖಿ ಸಂಘಟನೆಗಳು ಪ್ರತಿ ಊರಿನಲ್ಲಿ ಅಗತ್ಯವಿದೆ. ಇಂತಹ ಸಮಾಜಮುಖಿ ಕಾರ್ಯಗಳ ಮೂಲಕ ಕಮಿಟಿ…
Author: UllalaVani
UN NETWORKS ಉಳ್ಳಾಲ: ಬಡ ನಿರ್ಗತಿಕ, ಅನಾರೋಗ್ಯ ಪೀಡಿತರಿಗೆ ಸಹಾಯ ಮಾಡುವ ಮತ್ತು ಉಳ್ಳಾಲ ಪರಿಸರದವರಿಗೆ ಆಂಬ್ಯುಲೆನ್ಸ್ ಸೇವೆ ಒದಗಿಸುವ ಸಲುವಾಗಿ ಕ್ರಿಕೆಟ್ ಪಂದ್ಯಾಟವನ್ನು ನಡೆಸಿದ ಬಿ,ಬಾಯ್ಸ್ ಸ್ಪೋಟ್ರ್ಸ್ ಮತ್ತು ಕಲ್ಚರಲ್ ಅಸೋಸಿಯೇಶನ್ ಅವರ ಸಾಮಾಜಿಕ ಕಾರ್ಯ ನಿರಂತರವಾಗಿ ನಡೆಯಲಿ ಎಂದು ಉಳ್ಳಾಲ ನಗರ ಸಭಾ ಸದಸ್ಯ ಯು.ಪಿ.ಅಯ್ಯೂಬ್ ಮಂಚಿಲ ಹೇಳಿದರು. ಅವರು ಮದನಿ ಜೂನಿಯರ್ ಕಾಲೇಜಿನ ವಠಾರದಲ್ಲಿ ಇತ್ತೀಚೆಗೆ ಜರಗಿದ ಅಳೇಕಲ ಬಿ,ಬಾಯ್ಸ್ ಸ್ಪೋಟ್ರ್ಸ್ ಮತ್ತು ಕಲ್ಚರಲ್ ಅಸೋಸಿಯೇಶನ್‍ನ ಕ್ರಿಕೆಟ್ ಪಂದ್ಯಾಟದ ಸಮಾರೋಪ ಸಮಾರಂಭದಲ್ಲಿ ಪ್ರತಿಭಾ ಪುರಸ್ಕಾರ ಮತ್ತು ಸಾಧಕರಿಗೆ ಸನ್ಮಾನ ನೆರವೇರಿಸಿ ಮಾತನಾಡಿದರು.ಈ ವೇಳೆ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಹಝ್ರತ್ ಶಾಲೆಯ ನಫೀಸ, ಮರಿಯ ಬೀವಿ, ಮತ್ತು ಮದನಿ ಹಿರಿಯ ಪ್ರಾಥಮಿಕ ಶಾಲೆಯ ಶಾಹುಲ್ ಹಮೀದ್, ಕುರಾನ್ ಕಂಠ ಪಾಠ ಮಾಡಿ ಹಾಫಿಳ್ ಸಾಧನೆ ಮಾಡಿದ ಸಂಶುದ್ದೀನ್ ಇವರಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಅಲೆಕಳ ಮದನಿ ಶಿಕ್ಷಣ ಸಂಸ್ಥೆಯಲ್ಲಿ ಕಳೆದ…
UN NETWORKS ತಲಪಾಡಿ: ತಾ.ಪಂ.ಸದಸ್ಯ ಸಿದ್ದೀಕ್ ಕೊಳಂಗೆರೆ ಅವರು ಲಕ್ಷ ಅನುದಾನ ನೀಡುವ ಭರವಸೆ ಮೇರೆಗೆ ಎಪಿಎಂಸಿ ಹಾಗೂ ಶಾಸಕರ ವಿಶೇಷ ಅನುದಾನದಲ್ಲಿ ಕಾಮಗಾರಿ ನಡೆಸಲಾಗುತ್ತಿದೆ ಎಂದು ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂತೋಷ್ ಶೆಟ್ಟಿ ಅಸೈಗೋಳಿ ಅಭಿಪ್ರಾಯಪಟ್ಟರು. ತಲಪಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪಂಜಳದಲ್ಲಿ ತಾಲೂಕು ಪಂಚಾಯಿತಿ ಹಾಗೂ ಶಾಸಕರ ವಿಶೇಷ ಅನುದಾನದಲ್ಲಿ ನಡೆಯಲಿರುವ ಒಳಚರಂಡಿ ಮತ್ತು ಕಾಂಕ್ರೀಟ್ ರಸ್ತೆ ಕಾಮಗಾರಿಗೆ ಭಾನುವಾರ ಚಾಲನೆ ನೀಡಿ ಮಾತನಾಡಿದರು.ತಲಪಾಡಿ ಕಾಂಗ್ರೆಸ್ ಭದ್ರ ಕೋಟೆಯಾದರೂ ಕೆಲವೊಂದು ಕಾರಣಗಳಿಂದ ಪಂಚಾಯಿತಿ ಆಡಳಿತ ಕೈತಪ್ಪಿದೆ. ಮುಂದಿನ ದಿನಗಳಲ್ಲಿ ಗ್ರಾಮದಲ್ಲಿ ಮತ್ತೆ ಕಾಂಗ್ರೆಸ್ ಗೆ ಬೆಂಬಲ ನೀಡುವ ಮೂಲಕ ಹೆಚ್ಚಿನ ಅಭಿವೃದ್ಧಿಗೆ ಕೈಜೋಡಿಸಬೇಕು ಎಂದು ಹೇಳಿದರು.ತಾಲೂಕು ಪಂಚಾಯಿತಿ ಅಧ್ಯಕ್ಷ ಮೊಹಮ್ಮದ್ ಮೋನು ಮಾತನಾಡಿ, ಗಡಿಭಾಗ ತಲಪಾಡಿ ಅಭಿವೃದ್ಧಿ ಹೊಂದುತ್ತಿರುವ ಪ್ರದೇಶವಾಗಿದ್ದು ಶಾಸಕರು ಅನುದಾನ ನೀಡಿದರೂ ಸ್ಥಳೀಯ ಜನಪ್ರತಿನಿದಿಗಳ ಅನುದಾನ ಮೀಸಲಿಡಬೇಕು ಎಂದರು.ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಮುಸ್ತಫಾ ಮಲಾರ್, ಮುಖಂಡರಾದ ಶ್ರೀನಿವಾಸ ಶೆಟ್ಟಿ ಪುಲ್ಲು ಹಾಗೂ ಗಣೇಶ್…
UN NETWORKS ದುಬೈ: ಕಾಂಗ್ರೆಸ್ ಪಕ್ಷದ ರಾಷ್ಟ್ರಾಧ್ಯಕ್ಷ ರಾಹುಲ್ ಗಾಂಧಿ ಇತ್ತೀಚೆಗೆ ದುಬೈ ಭೇಟಿ ನೀಡಿದ್ದ ವೇಳೆ ಮಂಗಳೂರು ಮೂಲದ ಅನಿವಾಸಿ ಉದ್ಯಮಿ ಅಬ್ದುಲ್ ಹಮೀದ್ ಅವರು ಪೈಲಟ್ ( ಪ್ರಮುಖರಾಗಿ) ಪ್ರದೇಶ ವೀಕ್ಷೆಣೆಗೆ ಸಹಕರಿಸಿದ್ದು, ಇದೇ ವೇಳೆ ಅನಿವಾಸಿ ಉದ್ಯಮಿಯಾಗಿ ಯುನೈಟೆಡ್ ಅರಬ್ ಎಮಿರೇಟ್ಸ್ ನಾದ್ಯಂತ ಪ್ರಖ್ಯಾತಿ ಪಡೆದಿರುವ ಅಬ್ದುಲ್ ಹಮೀದ್ ರವರನ್ನು ರಾಹುಲ್ ಗಾಂಧಿ ಪ್ರಶಂಸಿದ್ದಾರೆ. ಅಬ್ದುಲ್ ಹಮೀದ್ ಓರ್ವ ಯಶಸ್ವಿ ಉದ್ಯಮಿಯಾಗಿ ಅನಿವಾಸಿಯಾಗಿದ್ದುಕೊಂಡು ಭಾರತ ದೇಶಕ್ಕೆ ನೀಡುತ್ತಿರುವ ಕೊಡುಗೆಗಳ ಕುರಿತು ರಾಹುಲ್ ಗಾಂಧಿ ಪ್ರಶಂಸೆಯ ಮಾತುಗಳನ್ನಾಡಿದರು. ಅಬ್ದುಲ್ ಹಮೀದ್ ಕರಾವಳಿ ಮೂಲದವರಾಗಿದ್ದಾರೆ. ಸದ್ಯ ಯುನೈಟೆಡ್ ಅರಬ್ ಎಮಿರೇಟ್ಸ್ ನಲ್ಲಿ ತಂತ್ರಜ್ಞಾನದಲ್ಲಿ ಹಾಗೂ ನೂತನ ಆವಿಷ್ಕಾರ ವಿಭಾಗದ ಯಶಸ್ವಿ ಉದ್ಯಮಿಯಾಗಿ ಗುರುತಿಸಿಕೊಂಡಿದ್ದಾರೆ.
UN NETWORKS ಕುರ್ನಾಡು: ಅಧ್ಯಕ್ಷರು, ಉಪಾಧ್ಯಕ್ಷರು , ಪಂಚಾಯತ್ ಸದಸ್ಯರು, ತಾಲೂಕು ಪಂಚಾಯತ್ ಸದಸ್ಯರು ಎಲ್ಲರ ಒಮ್ಮತದ ಅಭಿಪ್ರಾಯದಂತೆ ಕುರ್ನಾಡುವಿನ ಪ್ರತಿ ಮೂಲೆಗಳಲ್ಲಿ ರಸ್ತೆ ಕಾಂಕ್ರೀಟಿಕರಣ ಕಾಮಗಾರಿ ನಡೆಯುತ್ತಿದೆ. ಇದೊಂದು ಜಿಲ್ಲೆಗೆ ಮಾದರಿಯಾದ ಪಂಚಾಯತ್ ಎಂದು ಬಿಜೆಪಿ ಮಂಗಳೂರು ವಿಧಾನಸಭಾ ಕ್ಷೇತ್ರ ಅಧ್ಯಕ್ಷ ಸಂತೋಷ್ ರೈ ಬೋಳಿಯಾರ್ ಹೇಳಿದರು. ಅವರು ಕುರ್ನಾಡು ಗ್ರಾಮ ಪಂಚಾಯತ್ ವತಿಯಿಂದ ಕಟ್ಟೆಮಾರು ಕಿನ್ನಾಜೆ ರಸ್ತೆ ಕಾಂಕ್ರೀಟಿಕರಣಕ್ಕೆ ಸೋಮವಾರ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು.ಹಲವು ವರ್ಷಗಳಿಂದ ಕಟ್ಟೆಮಾರು ಪ್ರದೇಶದಲ್ಲಿ ರಸ್ತೆ ನಿರ್ಮಾಣ ಸಾಧ್ಯವಾಗಿರಲಿಲ್ಲ. ಈ ಬಾರಿ ಸ್ಥಳೀಯರ ಬೆಂಬಲದಿಂದ ರಸ್ತೆ ಕಾಮಗಾರಿ ಸಾಧ್ಯವಾಗಿದೆ. ರಸ್ತೆಯ ಅಭಿವೃದ್ಧಿಗೆ ಹೆಚ್ಚಿನ ಸ್ಥಳಾವಕಾಶ ಬೇಕಾದಲ್ಲಿ ತನ್ನ ವೈಯಕ್ತಿಕ ಜಾಗವನ್ನು ಬಿಟ್ಟುಕೊಡುವುದಾಗಿ ತಿಳಿಸಿದರು. ಬಿಜೆಪಿ ಕುರ್ನಾಡು ಶಕ್ತಿಕೇಂದ್ರದ ಅಧ್ಯಕ್ಷ ಟಿ.ಜಿ ರಾಜಾರಾಂ ಭಟ್ ಮಾತನಾಡಿ ಗ್ರಾ.ಪಂ ಜನರ ಸಮಸ್ಯೆಗಳನ್ನು ನಿಯಂತ್ರಿಸಲು ಸಾಧ್ಯವಾದಲ್ಲಿ ಮಾತ್ರ ಗಾಂಧಿಯ ರಾಮರಾಜ್ಯದ ಕನಸು ನನಸಾಗುವುದು. ಇದಕ್ಕೆ ಕುರ್ನಾಡು ಗ್ರಾ.ಪಂ ಸಾಕ್ಷಿಯಾಗಿದೆ ಎಂದರು. ಸ್ಥಳೀಯರಾದ ನಾಗರಾಜ್ ಭಟ್ ಮಾತನಾಡಿ ಹಿಂದೆ ನೀರು…
UN NETWORKS ಮುಡಿಪು : ಕೇಂದ್ರ ಸರ್ಕಾರ ರಾಜ್ಯಕ್ಕೆ ಏನೂ ಕೊಟ್ಟಿಲ್ಲ ಎಂದು ಹೇಳುತ್ತಿರುವವರು ಪ್ರಧಾನಿ ಮೋದಿ ರಾಜ್ಯಕ್ಕೆ ಎರಡು ಲಕ್ಷ ಕೋಟಿ ರೂ. ಅನುದಾನ ಕೊಟ್ಟಿದ್ದು, ಮಂಗಳೂರು ಕ್ಷೇತ್ರದಲ್ಲಿ ತೆಂಗಿನಕಾಯಿ ಒಡೆದವರು ಖಾದರ್ ಆಗಿದ್ದಾರೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಲೇವಡಿ ಮಾಡಿದರು. ಮುಡಿಪುವಿನಲ್ಲಿ ಭಾನುವಾರ ನಡೆದ ಬೈಕ್ ರ್ಯಾಲಿ, ಬಿಜೆಪಿ ಚುನಾವಣಾ ಕಚೇರಿ ಉದ್ಘಾಟನೆ ಹಾಗೂ ಬಿಜೆಪಿ ಕಾರ್ಯಕರ್ತರ ಸಮಾವೇಶದಲ್ಲಿ ಅವರು ಮಾತನಾಡಿದರು.ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಖಾದರ್ ಅವರಂತೆ ಸಾರಾಯಿ ಕೊಡುತ್ತೇವೆ, ಅಕ್ಕಿ ಕೊಡುತ್ತೇವೆ ಎಂದು ಭರವಸೆ ನೀಡದೆ ಕೇವಲ ಮೂರು ವಿಚಾರಗಳಲ್ಲಿ ಚುನಾವಣೆ ಎದುರಿಸಿ ಅಧಿಕಾರಕ್ಕೆ ಬಂದಿದೆ. ಮೋದಿ ಎದೆಯ ಇಂಚು ತೋರಿಸಲಿಲ್ಲ, ವಿಶ್ವಕ್ಕೆ ಎದೆಗಾರಿಕೆ ತೋರಿಸಿದರು. ಆಮಿಷ, ಅವೇಶ ಇಲ್ಲದೆ ಭಯೋತ್ಪಾದನೆ ನಿಗ್ರಹ, ಸಬ್‍ಕಾ ಸಾಥ್ ಸಬ್‍ಕಾ ವಿಕಾಸ್ ಹಾಗೂ ಕಪ್ಪು ಹಣ ನಿಯಂತ್ರಿಸುತ್ತೇವೆ ಎಂದು ಮಾತು ಕಟ್ಟಂತೆ ಸರ್ಜಿಕಲ್ ಸ್ಟ್ರೈಕ್, ಭಯೋತ್ಪಾದನೆ ನಿಗ್ರಹವಾಗಿದೆ. 2014ರಿಂದ 2018ರ ತನಕ ಈ ದೇಶದಲ್ಲಿ ಯಾವ…
UN NETWORKS ತೊಕ್ಕೊಟ್ಟು: ರಸ್ತೆ ದಾಟುತ್ತಿದ್ದ ಮಹಿಳೆಯೊಬ್ಬರಿಗೆ ಅಪರಿಚಿತ ವಾಹನವೊಂದು ಢಿಕ್ಕಿ ಹೊಡೆದು ಸಾವನ್ನಪ್ಪಿರುವ ಘಟನೆ ತೊಕ್ಕೊಟ್ಟು ಜಂಕ್ಷನ್ನಿನಲ್ಲಿ ಶನಿವಾರ ನಡೆದಿದೆ. ರಾಣಿಪುರ ಸಂತೋಷನಗರ ನಿವಾಸಿ ದಿ. ರತ್ನಾಕರ್ ಎಂಬವರ ಪತ್ನಿ ಜಯಂತಿ (67) ಮೃತರು. ತೊಕ್ಕೊಟ್ಟು ಬ್ಯಾಂಕಿಗೆ ತೆರಳುತ್ತಿದ್ದ ಸಮಯ ರಾ.ಹೆ.66ರ ತೊಕ್ಕೊಟ್ಟು ಜಂಕ್ಷನ್ನಿನಲ್ಲಿ ರಸ್ತೆ ದಾಟುತ್ತಿದ್ದ ಸಮಯ ಅಪರಿಚಿತ ವಾಹನ ಢಿಕ್ಕಿ ಹೊಡೆದಿದೆ. ಪರಿಣಾಮ ತಲೆಗೆ ಗಂಭೀರ ಗಾಯಗೊಂಡು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೃತರು ಮೂವರು ಪುತ್ರರು, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಕಿರಿಯ ಪುತ್ರ ಮಿಥುನ್ ಎಂಬವರು ಶನಿವಾರ ಬೆಳಿಗ್ಗೆ ದುಬೈ ತೆರಳುವವರಿದ್ದರು. ಅಪಘಾತ ಸಂಭವಿಸಿದಾಗ ಅವರು ಬೆಂಗಳೂರು ತಲುಪಿದ್ದು, ವಿಷಯ ತಿಳಿದು ವಾಪಸ್ಸಾಗಿದ್ದಾರೆ. ಅಪಘಾತ ನಡೆಸಿದ ವಾಹನದ ಸುಳಿವು ಸಿಸಿಟಿವಿ ಮೂಲಕ ಪತ್ತೆಯಾಗಿದ್ದು, ನಾಗುರಿ ಸಂಚಾರಿ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ವಾಹನದ ಹುಡುಕಾಟ ಆರಂಭಿಸಿದ್ದಾರೆ.
UN NETWORKS ಕೊಣಾಜೆ: ಸಾವಿರಾರು ದೇವಸ್ಥಾನ, ದೈವಸ್ಥಾನಗಳಿರುವ ನೆಲೆಬೀಡಾಗಿರುವ ಪರಶುರಾಮನ ಸೃಷ್ಠಿಯ ಈ ತುಳುನಾಡಿನಲ್ಲಿ ಸಂಪ್ರದಾಯ, ಆಚರಣೆಗಳಿಗೆ ಮಹತ್ವದ ಸ್ಥಾನವಿದೆ. ಧಾರ್ಮಿಕ ದತ್ತಿ ಇಲಾಖೆಯಡಿ ಬರುವ ದೇವಸ್ಥಾನದ ಅರ್ಚಕರಿಗೆ ಸರ್ಕಾರದಿಂದ ವೇತನ ನೀಡಲಾಗುತ್ತಿದ್ದು, ದೈವದ ಸೇವಕರಿಗೂ ಸರ್ಕಾರದಿಂದ ಶೀಘ್ರ ವೇತನ ವ್ಯವಸ್ಥೆ ಜಾರಿಗೆ ತರಲು ಪ್ರಯತ್ನಿಸಲಾಗುವುದು ಎಂದು ರಾಜ್ಯ ಧಾರ್ಮಿಕ ಪರಿಷತ್ ಸದಸ್ಯ ಪದ್ಮನಾಭ ಕೋಟ್ಯಾನ್ ಹೇಳಿದರು. ಅವರು ಕೊಣಾಜೆ ಗ್ರಾಮದ ಬೊಲ್ಮ ಶ್ರೀ ಉಳ್ಳಾಲ್ತಿ ಅಮ್ಮನವರ ಕ್ಷೇತ್ರ, ಶ್ರೀ ಉಳ್ಳಾಲ್ತಿ ಹಾಗೂ ಪರಿವಾರ ದೈವಗಳ ದೈವಸ್ಥಾನದ ಪ್ರತಿಷ್ಠಾ ಬ್ರಹ್ಮ ಕಲಶೋತ್ಸವದ ಅಂಗವಾಗಿ ಗುರುವಾರ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಧಾರ್ಮಿಕ ಕ್ಷೇತ್ರಗಳ ಬ್ರಹ್ಮ ಕಲಶೋತ್ಸವ ಆಗಲು ಐದಾರು ವರ್ಷ ಹಿಡಿಯುತ್ತದೆ. ಆದರೆ ಉಳ್ಳಾಲ್ತಿ ಅಮ್ಮನವರ ಕ್ಷೇತ್ರದ ಬ್ರಹ್ಮಕಲಶೋತ್ಸವ ಕೇವಲ ಆರು ತಿಂಗಳಲ್ಲಿಯೇ ನಡೆಯುತ್ತಿರುವುದು ವಿಶೇಷವಾಗಿದ್ದು, ದೇವರ ಆಶೀರ್ವಾದ ಹಾಗೂ ಈ ಭಾಗದ…
UN NETWORKS ಕೊಣಾಜೆ: ಕೊಣಾಜೆ ಗ್ರಾಮದ ಬೊಲ್ಮದ ಶ್ರೀ ಉಳ್ಳಾಲ್ತಿ ಅಮ್ಮನವರ ಕ್ಷೇತ್ರ ಹಾಗೂ ಪರಿವಾರ ದೈವಗಳ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಬ್ರಹ್ಮಶ್ರೀ ಎಡಪದವು ವೇದಮೂರ್ತಿ ವೆಂಕಟೇಶ್ ತಂತ್ರಿಗಳ ಪೌರೋಹಿತ್ಯ ಹಾಗೂ ಕೊಣಾಜೆ ಶ್ಯಾನುಬೋಗರ ಮನೆಯ ಸುದರ್ಶನ ಭಟ್ ಅವರ ಮಾರ್ಗದರ್ಶನದಲ್ಲಿ ನಡೆಯಿತು.
UN NETWORKS ಮುಡಿಪು: ಜನವರಿ 27 ರಂದು ಬೆಂಗಳೂರಿನ ಖುದ್ದೂಸ್ ಈದ್ಗಾ ಮೈದಾನದಲ್ಲಿ ನಡೆಯುವ ಕರ್ನಾಟಕ ಮುಸ್ಲಿಂ ಜಮಾಅತ್ ಘೋಷಣೆ ಮತ್ತು 26 ಹಾಗೂ 27ರಂದು ನಡೆಯುವ ಉಂದುಲುಸ್ ಎಸ್ಸೆಸ್ಸೆಫ್ ರಾಜ್ಯ ಪ್ರತಿನಿಧಿ ಸಮಾವೇಶದ ಪ್ರಚಾರಾರ್ಥ ಎಸ್ಸೆಸ್ಸೆಫ್ ಮುಡಿಪು ಡಿವಿಶನ್ ವತಿಯಿಂದ “ಡಿವಿಶನ್ ಪಬ್ಲಿಸಿಟಿ ಕನ್ವೆನ್ಶನ್” ಮುಡಿಪುವಿನ ಮಜ್ಲಿಸ್ ಎಜ್ಯು ಪಾರ್ಕ್ ನಲ್ಲಿ ನಡೆಯಿತು. ಎಸ್ಸೆಸ್ಸೆಫ್ ಮುಡಿಪು ಡಿವಿಶನ್ ಅಧ್ಯಕ್ಷ ತೌಸೀಫ್ ಸಅದಿ ಹರೇಕಳರವರು ಅಧ್ಯಕ್ಷತೆ ವಹಿಸಿದ್ದರು.ಡಿವಿಶನ್ ಉಪಾಧ್ಯಕ್ಷ ಸಿದ್ದೀಕ್ ಸಖಾಫಿ ಕಾಯಾರ್ ಸಭೆಯನ್ನು ಉದ್ಘಾಟಿಸಿದರು. ಎಸ್ಸೆಸ್ಸೆಫ್ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯದರ್ಶಿ ಜಮಾಲ್ ಸಖಾಫಿ ಮುದುಂಗಾರ್ ಕಟ್ಟೆ, ಇಬ್ರಾಹಿಂ ಅಹ್ಸನಿ ಮಂಜನಾಡಿ ಸಂದೇಶ ಭಾಷಣ ಮಾಡಿದರು. ಎಸ್ಸೆಸ್ಸೆಫ್ ರಾಜ್ಯ ಸಮಿತಿಯ ನಾಯಕರಾದ ಸಿರಾಜುದ್ದೀನ್ ಸಖಾಫಿ ಕನ್ಯಾನ ಮುಖ್ಯ ಭಾಷಣ ಮಾಡಿದರು.ಈ ಸಂದರ್ಭದಲ್ಲಿ ಎಸ್ಸೆಸ್ಸೆಫ್ ದಕ್ಷಿಣ ಕನ್ನಡ ಜಿಲ್ಲಾ ಸಮಿತಿಯ ಅಧ್ಯಕ್ಷರಾಗಿ ಎರಡು ವರ್ಷಗಳ ಕಾಲ ಯಶಸ್ವಿಯಾಗಿ ಮುನ್ನಡೆಸಿದ ಸಿರಾಜುದ್ದೀನ್ ಸಖಾಫಿ ಕನ್ಯಾನ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯದರ್ಶಿಯಾಗಿ ಆಯ್ಕೆಯಾದ…

