UN NETWORKS
ಉಳ್ಳಾಲ: ಯುವತಿಯೋರ್ವಳು ಮೊಬೈಲಿನಲ್ಲಿ ಸಂಭಾಷಣೆ ನಡೆಸುತ್ತಾ, ಕಣ್ಣೀರಿಡುತ್ತಾ ನೇತ್ರಾವತಿ ಸೇತುವೆಯಿಂದ ನದಿಗೆ ಹಾರಿದ ಘಟನೆ ಬುಧವಾರ ತಡರಾತ್ರಿ ವೇಳೆ ಸಂಭವಿಸಿದೆ.
ತೊಕ್ಕೊಟ್ಟುವಿನಿಂದ ಮಂಗಳೂರು ಕಡೆಗೆ ತೆರಳುತ್ತಿದ್ದ ಬೈಕ್ ಸವಾರರಿಬ್ಬರು ನೇತ್ರಾವತಿ ಸೇತುವೆಯಲ್ಲಿ ಒಂಟಿ ಯುವತಿ ಅಳುತ್ತಾ ಇರುವುದನ್ನು ಗಮನಿಸಿ ಬೈಕನ್ನು ನಿಲ್ಲಿಸಿದ್ದರು. ಇದೇ ವೇಳೆ ಯುವತಿ ಜತೆಗೆ ` ಏನಾದ್ರೂ ಸಹಾಯ ಮಾಡಬೇಕಾ’ ಎಂದು ಕೇಳುವಷ್ಟರಲ್ಲಿ ಮೊಬೈಲಿನಲ್ಲಿ ಅಳುತ್ತಲೇ ಸಂಭಾಷಣೆ ನಡೆಸುತ್ತಿದ್ದ ಯುವತಿ ಏಕಾಏಕಿ ನದಿಗೆ ಹಾರಿ ಆತ್ಮಹತ್ಯೆ ನಡೆಸಿದ್ದಾರೆ.
ಕತ್ತಲು ಆವರಿಸಿದ್ದರಿಂದಾಗಿ ನದಿಗೆ ಹಾರುವ ಧೈರ್ಯ ಆಗಲಿಲ್ಲ ಎಂದು ಬೈಕ್ ಸವಾರರು ತಿಳಿಸಿದ್ದಾರೆ. ಸುಮಾರು 22ರ ಹರೆಯದ ಯುವತಿ ಆಕೆಯಾಗಿದ್ದು, ಹೆಗಲಿನಲ್ಲಿ ಬ್ಯಾಗ್ ಮತ್ತು ಯೂನಿಫಾರಂ ಧರಿಸಿದ್ದ ರೀತಿಯಲ್ಲಿ ಕಂಡುಬಂದಿದ್ದರು. ಕೆಲಸದ ಯೂನಿಫಾರಂ ಅಥವಾ ಕಾಲೇಜು ವಿದ್ಯಾರ್ಥಿನಿಯಾಗಿದ್ದಳೋ? ಎಂಬುದು ಸ್ಪಷ್ಟವಾಗಿಲ್ಲ ಎಂದು ಬೈಕ್ ಸವಾರರು ತಿಳಿಸಿದ್ದಾರೆ. ಈ ಕುರಿತು ಮಂಗಳೂರು ಗ್ರಾಮಾಂತರ ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ.


