UN NETWORKS
ದೇರಳಕಟ್ಟೆ: ಕಾವೂರಿನ ಯಶ ಟ್ರಸ್ಟ್, ಸರಕಾರಿ ಪ್ರಥಮ ದರ್ಜೆ ಕಾಲೇಜಿನ ರಾಷ್ಟೀಯ ಸೇವಾ ಯೋಜನೆ ಘಟಕ ಮತ್ತು ರೋವರ್ಸ್ ದಳದ ಸಹಯೋಗದೊಂದಿಗೆ ಕಾಲೇಜಿನ ಆವರಣದಲ್ಲಿ ಆಟಿಸಂ ಮಕ್ಕಳ ಕ್ರೀಡಾ ಕೂಟವನ್ನು ನಡೆಸಲಾಯಿತು.
ಈ ಕಾರ್ಯಕ್ರಮದಲ್ಲಿ ಯೆನೆಪೋಯ ದಂತ ವ್ಯೆದ್ಯಕೀಯ ಕಾಲೇಜಿನ ಉಪ ಪ್ರಾಂಶುಪಾಲೆ ಡಾ| ಶ್ಯಾಮ್ ಎಸ್. ಭಟ್ ಮುಖ್ಯ ಅತಿಥಿಯಾಗಿದ್ದರು. ಆಡಳಿತ ಟ್ರಸ್ಟ್ ನ ದುರ್ಗಾಲಕ್ಷ್ಮಿ ಹಾಗೂ ಸುನಿಲ್, ಕಾಲೇಜಿನ ಪ್ರಾಂಶುಪಾಲ ಡಾ. ತಾರಾ ರಾವ್, ಸುಧೀರ್ ಸಂಯೋಜನಾಧಿಕಾರಿ, ರೇಖಾ, ಆಟಿಸ್‍ಂ ಮಕ್ಕಳ ಪೋಷಕರು ಮೊದಲಾದವರು ಉಪಸ್ಥಿತರಿದ್ದರು.


