UN NETWORKS ಕೊಣಾಜೆ : ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ಕೊಣಾಜೆ ಪೊಲೀಸ್ ಠಾಣೆಯಲ್ಲಿ ಕಳೆದ ನಾಲ್ಕೈದು ತಿಂಗಳಿಂದ ಖಾಲಿ ಇರುವ ಕಾನೂನು ಸುವ್ಯವಸ್ಥೆ ಹಾಗು ಕ್ರೈಂ ವಿಭಾಗದ ಉಪನಿರೀಕ್ಷಕರು ಹಾಗೂ ಇತರ ಖಾಲಿ ಹುದ್ದೆಗಳಿಗೆ ಅಧಿಕಾರಿಗಳನ್ನು ನೇಮಿಸುವಂತೆ ಒತ್ತಾಯಿಸಿ ಡಿವೈಎಫ್‍ಐ ನಿಯೋಗ ಪೊಲೀಸ್ ಆಯುಕ್ತರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದಾರೆ. ಕೊಣಾಜೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಾನೂನು ಬಾಹಿರ ಚಟುವಟಿಕೆಗಳು ನಿರಂತರವಾಗಿ ನಡೆಯುತ್ತಿದ್ದು, ಅಕ್ರಮ ಮರಳುಗಾರಿಕೆ ರಾಜಾರೋಷವಾಗಿ ನಡೆಯುತ್ತಿದೆ. ಕಳ್ಳತನ, ಗಾಂಜಾ ಸಾಗಾಟ, ಸುಲಿಗೆಯಂತಹ ಚಟುವಟಿಕೆಗಳಿಂದ ಜನರು ಭೀತಿಯಿಂದ ಬದುಕುವಂತಾಗಿದೆ. ಆದ್ದರಿಂದ ಕೂಡಲೇ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಕ್ರಮಕೈಗೊಳ್ಳುವಂತೆ ನಿಯೋಗ ಒತ್ತಾಯಿಸಿತು. ನಿಯೋಗದಲ್ಲಿ ಡಿವೈಎಫ್‍ಐ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್, ಉಳ್ಳಾಲ ವಲಯ ಉಪಾಧ್ಯಕ್ಷ ರಫೀಕ್ ಹರೇಕಳ, ಮುಖಂಡರಾದ ಅಶ್ರಫ್ ಕೆ.ಸಿ.ರೋಡ್, ಸುನೀಲ್ ತೇವುಲ ಹಾಗೂ ಶಾಕಿರ್ ಹರೇಕಳ ಉಪಸ್ಥಿತರಿದ್ದರು.
Author: UllalaVani
UN NETWORKS ಬಬ್ಬುಕಟ್ಟೆ: ಪೆರ್ಮನ್ನೂರು ಬಬ್ಬುಕಟ್ಟೆಯ ಹಿರಾ ಮಹಿಳಾ ಕಾಲೇಜು ವಿದ್ಯಾರ್ಥಿನಿಯರಿಗಾಗಿ ಪ್ರಥಮ ಚಿಕಿತ್ಸೆ ಮತ್ತು ಸುರಕ್ಷತೆ ಕುರಿತ ಪ್ರಾತ್ಯಕ್ಷಿಕೆ ಹಾಗೂ ಮಾಹಿತಿ ಕಾರ್ಯಕ್ರಮ ಮಂಗಳೂರಿನ ಹ್ಯುಮಾನಿಟೇರಿಯನ್ ರಿಲೀಫ್ ಸೊಸೈಟಿ ಸಹಭಾಗಿತ್ವದಲ್ಲಿ ನಡೆಯಿತು. ಸೊಸೈಟಿಯ ಅಮೀರ್ ಸಿದ್ದೀಕ್ ಮತ್ತು ತಂಡ ಮಾಹಿತಿ ಕಾರ್ಯಾಗಾರ ನಡೆಸಿಕೊಟ್ಟರು. ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಿನ್ಸಿಪಾಲ್ ಭಾರತಿ ಎಂ.ಆರ್. ಮತ್ತು ಉಪನ್ಯಾಸಕಿಯರು ಉಪಸ್ಥಿತರಿದ್ದರು.
UN NETWORKS ತೊಕ್ಕೊಟ್ಟು: ಹಾಸನದಲ್ಲಿ ದೇವೇಗೌಡ ಮಾತ್ರ ಇರಬೇಕು, ಮತ್ತೊಬ್ಬ ಗೌಡ ಅಲ್ಲಿ ಬೆಳೆಯಬಾರದು ಎನ್ನುವುದೇ ದೊಡ್ಡ ಗೌಡರ ಕುಟುಂಬದ ಗುರಿಯಾಗಿದೆ. ಇದೇ ಉದ್ದೇಶದಿಂದ ಯುವನಾಯಕ ಶಾಸಕ ಪ್ರೀತಂ ಗೌಡ ಮನೆಮೇಲೆ ಮತ್ತು ಬಿಜೆಪಿ ಕಾರ್ಯಕರ್ತನ ಮೇಲೆ ಮುಖ್ಯಮಂತ್ರಿ ಕುಮಾರಸ್ವಾಮಿ ಕುಮ್ಮಕ್ಕಿನಿಂದ ದಾಳಿ ನಡೆದಿದೆ ಎಂದು ಮಾಜಿ ಶಾಸಕ ಕೆ.ಜಯರಾಮ ಶೆಟ್ಟಿ ಹೇಳಿದ್ದಾರೆ. ಹಾಸನದಲ್ಲಿ ಜೆ.ಡಿ.ಎಸ್. ಕಾರ್ಯಕರ್ತರು ಬಿ.ಜೆ.ಪಿ. ಕಾರ್ಯಕರ್ತನ ಮೇಲೆ ನಡೆಸಿದ ಹಲ್ಲೆ ಮತ್ತು ಶಾಸಕರಾದ ಪ್ರೀತಮ್ ಗೌಡ ಅವರ ಮನೆಗೆ ಕಲ್ಲು ತೂರಾಟ ನಡೆಸಿರುವ ಘಟನೆಯನ್ನು ವಿರೋಧಿಸಿ ಮುಖ್ಯಮಂತ್ರಿ ಕುಮಾರಸ್ವಾಮಿ ರಾಜೀನಾಮೆಗೆ ಒತ್ತಾಯಿಸಿ ತೊಕ್ಕೊಟ್ಟು ಜಂಕ್ಷನ್ನಿನಲ್ಲಿ ಹಮ್ಮಿಕೊಂಡ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು. ಘಟನೆ ಪ್ರಜಾತಂತ್ರ ವ್ಯವಸ್ಥೆಯನ್ನು ಹತ್ತಿಕ್ಕುವ ಪ್ರಯತ್ನ ವಾಗಿದೆ. ಪ್ರತಿಪಕ್ಷಗಳು ಬಿಜೆಪಿಯ ಶಕ್ತಿಯನ್ನು ಕುಗ್ಗಿಸುವ ಪ್ರಯತ್ನದಿಂದ ವಿವಿಧ ರೀತಿಯಲ್ಲಿ ಅಪಪ್ರಚಾರದಲ್ಲಿ ತೊಡಗಿದೆ. ಕ್ಷೇತ್ರದ ಶಾಸಕರು ತಮ್ಮದೇ ಪಕ್ಷದ ಕಾರ್ಯಕರ್ತರ ಜಾಗ ಉಳಿಸಲು ಹಿಂದೆ ಫ್ಲೈಓವರ್ ಕಾಮಗಾರಿ ನಡೆಸುವ ಸಂದರ್ಭದಲ್ಲಿ ತಡೆಯೊಡ್ಡಿ ವಿಳಂಬವಾಗುವಂತೆ ಮಾಡಿದ್ದಾರೆ. ಇದೀಗ ಅವರೇ ತೊಕ್ಕೊಟ್ಟು…
UN NETWORKS ಉಳ್ಳಾಲ: ಕುದ್ರೋಳಿ ಗೊಕರ್ಣನಾಥ ಕ್ಷೇತ್ರದ ನೂತನ ಧ್ವಜ ಸ್ತಂಭ ಪ್ರತಿಷ್ಠೆ ಹಾಗೂ ಬ್ರಹ್ಮಕಲಶೋತ್ಸವದ ಪೂರ್ವಭಾವಿಯಾಗಿ ಉಳ್ಳಾಲ ಕ್ಷೇತ್ರ ವ್ಯಾಪ್ತಿಯ ಬಿಲ್ಲವ ಸಂಘಟನೆಗಳು, ವಿವಿಧ ದೇವಸ್ಥಾನ, ದೈವಸ್ಥಾನ ಸಂಘ ಸಂಸ್ಥೆಗಳ ವತಿಯಿಂದ ನಡೆದ ಹೊರೆಕಾಣಿಕೆ ಮೆರವಣಿಗೆಯು ಕೊಲ್ಯ ಶ್ರೀನಾರಾಯಣ ಗುರು ಮಂದಿರದಿಂದ ಹೊರಟಿತು. ಕೊಲ್ಯದಲ್ಲಿ ಶ್ರೀ ನಾರಾಯಣ ಗುರು ದೇವರಿಗೆ ಪೂಜೆ ನಡೆದು ಪ್ರಾರ್ಥನೆ ಸಲ್ಲಿಸಿದ ಬಳಿಕ ಹೊರೆಕಾಣಿಕೆ ಸಮಿತಿಯ ಗೌರವಾಧ್ಯಕ್ಷ ಕೆ.ಟಿ. ಸುವರ್ಣ ಚಾಲನೆ ನೀಡಿದರು. ಹೊರೆಕಾಣಿಕೆ ಸಮಿತಿ ಪ್ರ. ಕಾರ್ಯದರ್ಶಿ ರವೀಂದ್ರ ಬಂಗೇರ, ಈಶ್ವರ ಉಳ್ಳಾಲ್, ಎ.ಜೆ. ಶೇಖರ್, ಚಂದ್ರಶೇಖರ್ ಉಚ್ಚಿಲ್, ಸತೀಶ್ ಕುಂಪಲ, ಕೆ.ಪಿ. ಸುರೇಶ್, ಬಾಬು ಶ್ರೀಶಾಸ್ತ ಕಿನ್ಯ, ಆನಂದ್ ಕೊಂಡಾಣ, ಸುರೇಶ್ ಭÀಟ್ನಗರ, ಲಕ್ಷ್ಮಣ ಕೋಟ್ಯಾನ್, ಚಂದ್ರಹಾಸ್ ಪೂಜಾರಿ ಅಂಬ್ಲಮೊಗರು, ಈಶ್ವರ್ ಕನೀರುತೋಟ ಗಂಗಾಧರ ಪೂಜಾರಿ ಕೊಣಾಜೆ, ಹರೀಶ್ ಪೂಜಾರಿ ಕೊಣಾಜೆ, ಮೊದಲಾದವರು ಉಪಸ್ಥಿತರಿದ್ದರು.
UN NETWORKS ಉಳ್ಳಾಲ: ಮಲ್ಪೆ ಬಂದರಿನಿಂದ ಹೊರಟು 64 ದಿನಗಳಾದರೂ ಪತ್ತೆಯಾಗದ ಏಳು ಮಂದಿ ಮೀನುಗಾರರು ಇದ್ದ ಸುವರ್ಣ ತ್ರಿಭುಜ ಬೋಟಿನ ನಿಖರತೆಯನ್ನು ತನಿಖೆ ಕೈಗೆತ್ತಿಕೊಂಡಿರುವ ಕೇಂದ್ರ ಹಾಗೂ ರಾಜ್ಯ ಸರಕಾರದ ತಂಡಗಳು ನಾಪತ್ತೆಯಾದ ಮೀನುಗಾರರ ಕುಟುಂಬಗಳಿಗೆ ನೀಡುವಂತೆ ಕಡಲತೀರ ಉಳ್ಳಾಲದ ಪತ್ರಕರ್ತರ ತಂಡ ಪಣಂಬೂರು ಸಮುದ್ರ ತೀರದಲ್ಲಿ ಮರಳು ಕಲಾಕೃತಿ ರಚಿಸುವ ಮೂಲಕ ಜಾಗೃತಿ ಮೂಡಿಸಿತು. `ಸೇವ್ ಸುವರ್ಣ ತ್ರಿಭುಜ’ ಅನ್ನುವ ಸಂದೇಶದ ಜೊತೆಗೆ ಎರಡು ಮತ್ಸ್ಯದ ಆಕಾರಗಳ ಒಳಗೆ ಇಬ್ಬರು ಮಲಗಿರುವ ಸ್ಥಿತಿಯಲ್ಲಿ ಮರಳು ಶಿಲ್ಪವನ್ನು ರಚಿಸಲಾಗಿತ್ತು. ಘಟನೆ ನಡೆದ ಸಂದರ್ಭದಲ್ಲಿ ಪ್ರಕರಣವನ್ನು ಸರಕಾರಗಳು ಲಘುವಾಗಿ ಪಡೆದುಕೊಂಡಿತ್ತು. ಬಳಿಕ ಮೀನುಗಾರರ ಬೃಹತ್ ಹೋರಾಟದ ಪರಿಣಾಮವಾಗಿ ಸರಕಾರ ಜಾಗೃತವಾಗಿ ತನಿಖಾ ತಂಡಗಳನ್ನು ರಚಿಸಿ ಮೀನುಗಾರರ ಮತ್ತು ಬೋಟಿನ ಶೋಧ ಕಾರ್ಯ ನಡೆಸಲು ಆರಂಭಿಸಿತ್ತು. ಕೇಂದ್ರ ಸರಕಾರವೂ ಇತ್ತೀಚೆಗೆ ಆಧುನಿಕ ತಂತ್ರಜ್ಞಾನವುಳ್ಳ ನೌಕಾಸೇನೆಯ ಹಡಗಿನ ಮೂಲಕ ಶೋಧ ಕಾರ್ಯ ಆರಂಭಿಸಿದೆ. ಈ ನಡುವೆ ಮಹಾರಾಷ್ಟ್ರ ರತ್ನಗಿರಿ ಸಹಿತ ವಿವಿದೆಡೆ ಪತ್ತೆಯಾಗಿದೆ ಅನ್ನುವ…
UN NETWORKS ಉಳ್ಳಾಲ: ತುಳುನಾಡ ರಕ್ಷಣಾ ವೇದಿಕೆಯ ಮಂಗಳೂರು ವಿಧಾನ ಸಭಾ ಕ್ಷೇತ್ರದ ಅಧ್ಯಕ್ಷ ಹಾಗೂ ಯುವ ಹೋರಾಟಗಾರ ಎಂ. ಸಿರಾಜ್ ಅಡ್ಕರೆಗೆ “ಟೈಮ್ಸ್ ಆಫ್ ಕುಡ್ಲ ತುಳುನಾಡ ಬಲಿಪೆ (ತುಳುನಾಡ ಹುಲಿ) ಬಿರುದು” ಹಾಗೂ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ನಡೆಯಿತು. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಎ.ಸಿ. ಭಂಡಾರಿಯವರು ಪ್ರಶಸ್ತಿ ಪ್ರಧಾನಗೈದರು. ತುರವೇ ಸ್ಥಾಪಕಾಧ್ಯಕ್ಷರಾದ ಯೋಗೀಶ್ ಶೆಟ್ಟಿ ಜೆಪ್ಪು, ಧರ್ಮದರ್ಶಿ ಹರಿಕೃಷ್ಣ ಪುನರೂರು, ಪತ್ರಿಕೆಯ ಸಂಪಾದಕರಾದ ಶಶಿ ಬಂಡಿಮಾರ್, ಸಾಹಿತಿ ಮಹೇಂದ್ರನಾಥ ಸಾಲೆತ್ತೂರು ಮುಂತಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಅಡ್ಕರೆ ಪಡ್ಪು ಕೆ.ಬಿ ಹುಸೈನ್ ಹಾಗೂ ರುಖಿಯಾ ದಂಪತಿಯ ದ್ವಿತೀಯ ಪುತ್ರರಾದ ಇವರು ತನ್ನ ಪಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ಗ್ರೀನ್ ವೀವ್ ಹಿರಿಯ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯಲ್ಲಿ ಪೂರೈಸಿ, ನಂತರ ಪಿ.ಯು.ಸಿ ಹಾಗೂ ಬಿ.ಬಿ.ಎಮ್ ಪದವಿಯನ್ನು ಟಿಪ್ಪು ಸುಲ್ತಾನ್ ಪದವಿ ಪೂರ್ವ ಹಾಗೂ ಪ್ರಥಮ ದರ್ಜೆ ಕಾಲೇಜ್‍ನಲ್ಲಿ ವ್ಯಾಸಾಂಗ ಮಾಡಿರುತ್ತಾರೆ. ವಿದ್ಯಾರ್ಥಿ ಜೀವನದಲ್ಲಿ ಸಮಾಜ ಸೇವೆಯ ಗುರಿಯನ್ನು ಇಟ್ಟುಕೊಂಡು ತುಳುನಾಡ…
UN NETWORKS ತೊಕ್ಕೊಟ್ಟು: ಟೈಲರ್ ಕೆಲಸ ಗೌರವಾನ್ವಿತವಾಗಿದ್ದು ಅದನ್ನು ಕಾಯಕವಾಗಿಸಿಕೊಂಡವರಿಗೆ ಅವರನ್ನು ನಂಬಿದ ಕುಟುಂಬಕ್ಕೆ ಉತ್ತಮ ಸಾರ್ಥಕ ಬದುಕು ಕಟ್ಟಿಕೊಡುವಲ್ಲಿ ಟೈಲರ್ ವೃತ್ತಿ ಯಾವತ್ತೂ ಹಿಂದೆ ಬಿದ್ದಿಲ್ಲ. ಟೈಲರ್ ಕೆಲಸ ಅದೆಷ್ಟೋ ಕುಟುಂಬದ ಕಣ್ಣೀರು ಒರೆಸಿದೆ ಎಂದು ಕರ್ನಾಟಕ ಸ್ಟೇಟ್ ಟೈಲರ್ಸ್ ಎಸೋಸಿಯೇಶನ್ (ಕೆಎಸ್ ಟಿಎ) ರಾಜ್ಯಾಧ್ಯಕ್ಷ ಕೆ.ಎಸ್.ಆನಂದ ಹೇಳಿದರು. ತೊಕ್ಕೊಟ್ಟು ಒಳಪೇಟೆಯ ಆಮಂತ್ರಣ ಹಾಲ್ ನಲ್ಲಿ ಮಂಗಳವಾರ ನಡೆದ ಕರ್ನಾಟಕ ಸ್ಟೇಟ್ ಟೈಲರ್ಸ್ ಎಸೋಸಿಯೇಶನ್ ಉಳ್ಳಾಲ ಕ್ಷೇತ್ರ ಸಮಿತಿ ಏಳನೇ ಮಹಾಸಭೆಯಲ್ಲಿ ಮುಖ್ಯ ಅತಿಥಿ ಸ್ಥಾನದಿಂದ ಅವರು ಮಾತನಾಡಿದರು.ಹಿರಿಯ ಟೈಲರ್ ಗಳನ್ನು ಗೌರವಿಸುವ ಕೆಲಸ ನಿಜಕ್ಕೂ ಅಭಿನಂದನೀಯ.ಆರಂಭದಿಂದಲೂ ಸಂಘಟನೆಯ ಮೇಲೆ ಅಭಿಮಾನ ಇಟ್ಟು ದುಡಿದ ಎಲ್ಲ ಸದಸ್ಯರ ಶ್ರಮದ ಫಲ ಇಂದು ಸಂಘಟನೆ ಹೆಮ್ಮರವಾಗಿ ಬೆಳೆದಿದ್ದು ಅವರೆಲ್ಲರಿಗೂ ನಾವು ಕೃತಜ್ಞರಾಗಿದ್ದೇವೆ ಎಂದು ನುಡಿದರು.ರಾಜ್ಯ ಕಾರ್ಯದರ್ಶಿ ಅಫ್ರಫುನ್ನೀಸ ಮಾತನಾಡಿ ಪ್ರತಿಯೊಬ್ಬರ ಮಾನ ಮುಚ್ಚುವಂತಹ ಕೆಲಸ ಮಾಡುವ ಶ್ರೇಷ್ಠ ಕಾರ್ಯ ಮಾಡುವುದು ಟೈಲರ್ ಗಳದ್ದು ಎಂದು ನುಡಿದರು. ಕೊಡಗಿನಲ್ಲಿ ಭೂ ಕುಸಿತ ಜಲಪ್ರಳಯ…
UN NETWORKS ತಲಪಾಡಿ : ತಲಪಾಡಿ ಕೆ.ಸಿ. ರೋಡ್ ಅಲಂಕಾರಗುಡ್ಡೆ ಬಳಿಯ ಪೂಮಣ್ಣುವಿನ ಮನೆಯೊಂದರ ಕೆಲಸದಾಕೆ ದೆಹಲಿ ಮೂಲದ ರೇಶ್ಮಾ (17) ನೇಣುಬಿಗಿದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾದ ಘಟನೆ ಬುಧವಾರ ಸಂಜೆ ಘಟನೆ ಬೆಳಕಿಗೆ ಬಂದಿದ್ದು ಸ್ಥಳೀಯರು ರೇಶ್ಮಾ ಸಾವಿನ ಬಗ್ಗೆ ಕೊಲೆ ಶಂಕೆ ವ್ಯಕ್ತ ಪಡಿಸಿ ಪೊಲೀಸರ ಮೃತದೇಹ ತೋರಿಸಲು ಅವಕಾಶ ಕೊಡಲಿಲ್ಲ ಎಂದು ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಫೊರೋನ್ಸಿಕ್ ತಜ್ಞ ಡಾ. ಮಹಾಬಲೇಶ್ ಶೆಟ್ಟಿ ಅವರು ರೇಶ್ಮಾ ಸಾವು ಆತ್ಮಹತ್ಯೆ ಎಂದು ದೃಢಪಡಿಸಿದ ಬಳಿಕ ರಾತ್ರಿ ಸುಮಾರು 9.00ರ ಹೊತ್ತಿಗೆ ಹೊತ್ತಿನಲ್ಲಿ ಶವ ತೆಗೆಯಲಾಯಿತು.ಮನೆಯ ಮಾಲೀಕ ಮಹಮ್ಮದ್ ವಿದೇಶದಲ್ಲಿದ್ದು ಮನೆಯಲ್ಲಿ ಸಹೋದರ ಸಂಬಂಧಿ ಹಮೀದ್ ಕುಟುಂಬ ವಾಸವಿದ್ದಾರೆ. ಬುಧವಾರ ಮಧ್ಯಾಹ್ನ ಮನೆಮಂದಿ ಹೊರಗೆ ಹೋಗಿದ್ದಾಗ ರೇಶ್ಮಾ ಆತ್ಮಹತ್ಯೆಗೈದಿದ್ದಾರೆ ಎನ್ನಲಾಗಿದೆ. ಒಂದು ವರ್ಷ ಒಂಬತ್ತು ತಿಂಗಳಿಂದ ಮನೆ ಕೆಲಸ ಮಾಡುತ್ತಿದ್ದ ರೇಶ್ಮಾಳ ಅಕ್ಕ ಕೂಡಾ ಇದೇ ಸಂಬಂಧಿಕರ ಮನೆಯಲ್ಲಿ ಕೆಲಸಕ್ಕಿದ್ದು ಆಕೆಗೆ ಅವರು ಮದುವೆ ಮಾಡಿ ಕೊಟ್ಟಿದ್ದರು ಎನ್ನಲಾಗಿದೆ.…
UN NETWORKS ಮುಡಿಪು : ಶುಭ ಕೆ.ಎಚ್. ಅವರು ಆಂಧ್ರಪ್ರದೇಶದ ಗುಂಟೂರಿನಲ್ಲಿ ನಡೆದ ರಾಷ್ಟ್ರಮಟ್ಟದ ಮಾಸ್ಟರ್ ಅಥ್ಲೆಟಿಕ್ಸ್ ನಲ್ಲಿ ಭಾಗವಹಿಸಿ ತ್ರಿಪಲ್ ಜಂಪ್‍ನಲ್ಲಿ ಬೆಳ್ಳಿ ಪದಕ, ಲಾಂಗ್ ಜಂಪ್‍ನಲ್ಲಿ ಚತುರ್ಥ ಸ್ಥಾನ, 4×100ಮೀಟರ್ ರಿಲೇ ಹಾಗೂ 4×400 ಮೀಟರ್ ರಿಲೇಯಲ್ಲಿ ಬೆಳ್ಳಿ ಪದಕವನ್ನು ಪಡೆದಿರುತ್ತಾರೆ. ಇವರು ಮಲೇಶಿಯಾದಲ್ಲಿ ನಡೆಯಲಿರುವ ಏಷ್ಯನ್ ಮಾಸ್ಟರ್ ಅಥ್ಲೆಟಿಕ್ಸ್ ನಲ್ಲಿ ಭಾಗವಹಿಸಲು ಆಯ್ಕೆಯಾಗಿರುತ್ತಾರೆ. ಪ್ರಶಾಂತ್ ನುಳ್ಳಿಪಾಡಿಯವರ ಪತ್ನಿಯಾಗಿರುವ ಇವರು ಜೆಪ್ಪು ಮಾರ್ಕೆಟ್ ಮಂಗಳೂರಿನ ನಿವಾಸಿಯಾಗಿರುತ್ತಾರೆ. ಪ್ರಸ್ತುತ ಸರಕಾರಿ ಪ್ರಥಮ ದರ್ಜೆ ಕಾಲೇಜು ಮುಡಿಪು ಇಲ್ಲಿ ದೈಹಿಕ ಶಿಕ್ಷಣ ನಿರ್ದೇಶಕಿಯಾಗಿ ಸೇವೆ ಸಲ್ಲಿಸುತಿದ್ದಾರೆ.
UN NETWORKS ಬಾಯಾರ್ : ಸಹಸ್ರಾರು ಜನರು ಬಹಳಷ್ಟು ಸಂಖ್ಯೆಯಲ್ಲಿ ಸೇರಲಿರುವ ಮುಜಮ್ಮಉಸ್ಸಖಾಫತಿ ಸುನ್ನಿಯ್ಯ ಸಂಸ್ಥೆಯಲ್ಲಿ ಪ್ರತೀ ತಿಂಗಳು ನಡೆಯಲಿರುವ ಬೃಹತ್ ಸ್ವಲಾತ್ ಮಜ್ಲಿಸ್ ಹಾಗೂ ಸಾಮೂಹಿಕ ಕೂಟು ಪ್ರಾರ್ಥನೆ ಫೆಬ್ರವರಿ 15 ಶುಕ್ರವಾರ ಮಗ್ರಿಬ್ ನಮಾಝಿನ ನಂತರ ನಡೆಯಲಿದೆ. ಇನ್ಶಾಅಲ್ಲಾಹ್ ಅಸ್ಸಯ್ಯಿದ್ ಅಬ್ದುಲ್ ರಹ್ಮಾನ್ ಇಂಬಿಚ್ಚಿಕ್ಕೋಯ ತಂಙಳ್ ಅಲ್-ಬುಖಾರಿ ಬಾಯಾರ್ ಸ್ವಲಾತ್ ಮಜ್ಲಿಸ್ ಹಾಗೂ ಸಾಮೂಹಿಕ ಕೂಟು ಪ್ರಾರ್ಥನೆಗೆ ನೇತೃತ್ವ ನೀಡುವರು. ದೇಶ ವಿದೇಶಗಳಲ್ಲಿ ಖ್ಯಾತಿ ಹೊಂದಿ ತನ್ನ ವಾಕ್ಚಾತುರ್ಯದಿಂದ ಜನಮನ ಗೆದ್ದ ಧೀಮಂತ ನಾಯಕ ಮರ್ಕಝ್ ಸ್ಸಖಾಫತಿ ಸ್ಸುನ್ನಿಯ್ಯಾ ಇದರ ವೈಸ್ ಚಾಂಸ್ಲೆರ್ ನೂತನ ವಾದಿಗಳ ಸಿಂಹ ಸ್ವಪ್ನ ಸಾವಿರಾರು ಮದನಿಗಳ, ಸಖಾಫಿಗಳ ಗುರುವರ್ಯಾ ಡಾ, ಚುಲ್ಲಿಕ್ಕೋಡು ಹುಸೈನ್ ಸಖಾಫಿ ಅಲ್ ಅಝ್ಹರಿ ಮರ್ಕಝ್ ಮುಖ್ಯ ಪ್ರಭಾಷಣೆ ಗೈಯ್ಯಲಿರುವರು. ಸಯ್ಯಿದ್ ನಿಝಾಮುದ್ದೀನ್ ಬಾಫಖಿ ತಂಙಳ್ ಮಲ್ಲೂರು ಶರಫುಲ್ ಉಲಮಾ ಅಬ್ಬಾಸ್ ಉಸ್ತಾದ್ ,ಬಿ ಎಸ್ ಅಬ್ದುಲ್ಲಾ ಕುಂಞಿ ಪೈಝಿ, ಪಳ್ಳಂಗೋಡ್ ಅಬ್ದುಲ್ ಖಾದರ್ ಮದನಿ, ಅಬ್ದುಲ್ಲತೀಫ್ ಸಅದಿ ಪಝಶ್ಶಿ,…

