UN NETWORKS ತೊಕ್ಕೊಟ್ಟು : ರಾಷ್ಟ್ರೀಯ ಹೆದ್ದಾರಿ 66ರ ತೊಕ್ಕೊಟ್ಟು ಜಂಕ್ಷನ್‌ನ ಮೇಲ್ಸೇತುವೆ ಕಾಮಗಾರಿ ರವಿವಾರ ಪೂರ್ಣಗೊಂಡಿದೆ. ಜೂ. 10ಕ್ಕೆ ಉದ್ಘಾಟನೆಗೆ ನಿಗದಿಯಾಗಿದ್ದ ಮುಹೂರ್ತ ತಾಂತ್ರಿಕ ಕಾರಣಗಳಿಂದ ಮುಂದೂಡುವ ಸಾಧ್ಯತೆಯಿದ್ದು, ಜೂ. 14ರಂದು ಜನಪ್ರತಿನಿಧಿಗಳು, ಜಿಲ್ಲಾಡಳಿತ ಮತ್ತು ಹೆದ್ದಾರಿ ಇಲಾಖೆಯ ಅಧಿಕಾರಿಗಳ ಸಭೆಯ ಬಳಿಕ ಉದ್ಘಾಟನೆಯ ದಿನಾಂಕ ನಿಗದಿಯಾಗಲಿದೆ. ಎಂಟು ವರ್ಷಗಳ ಹಿಂದೆ ಆರಂಭಗೊಂಡಿದ್ದ ತೊಕ್ಕೊಟ್ಟು ಮೇಲ್ಸೇತುವೆ ಕಾಮಗಾರಿ ಆರ್ಥಿಕ ಅಡಚಣೆಯಿಂದ ಅಮೆಗತಿಯಲ್ಲಿತ್ತು. ಕಾಮಗಾರಿ ನಡೆ ಸುವ ಸಂಸ್ಥೆಗೆ ಸಂಸದರ ಶಿಫಾರಸ್ಸಿನ ಮೇರೆಗೆ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಹೆಚ್ಚುವರಿ ಹಣವನ್ನು ಬಿಡುಗಡೆ ಮಾಡಿದ್ದರು. ಈಗ ಕಾಮಗಾರಿ ಪೂರ್ಣ ಗೊಂಡಿದ್ದು ಉದ್ಘಾಟನೆಗೆ ದಿನಾಂಕ ನಿಗದಿಯಾಗಬೇಕಿದೆ. ಕಾಮಗಾರಿ ಸಂಪೂರ್ಣ ಮೂರು ತಿಂಗಳಲ್ಲಿ 24 ಗಂಟೆಗಳ ಕಾಲ ನಿರಂತರ ಕಾಮಗಾರಿ ನಡೆದಿದ್ದು, ಇನ್ನೊಂದೆಡೆ ಮಳೆ ಕಾಮಗಾರಿ ಅಡಚಣೆ ನೀಡದ ಕಾರಣ ಸದ್ಯ ಕಾಮಗಾರಿ ಪೂರ್ಣ ಗೊಂಡಿದೆ. ತಡೆಗೋಡೆಗೆ ಪೈಟಿಂಗ್ ಕಾರ್ಯ ಮತ್ತು ಹೆದ್ದಾರಿ ಮದ್ಯೆ ಎರಡು ವಾಹನಗಳು ಸಂಚರಿಸುವ ಮಧ್ಯೆ ಲೈನ್ ಹಾಕುವ…
Author: UllalaVani
UN NETWORKS ಉಳ್ಳಾಲ : ತಾಜುಲ್ ಉಲಮಾ ಮದ್ರಸ ಹಳೆಕೋಟೆ ಇದರ ವಾರ್ಷಿಕ ಮಹಾಸಭೆ ಯೂಸುಫ್ ಹಳೆಕೋಟೆ ರವರ ಅಧ್ಯಕ್ಷತೆಯಲ್ಲಿ ಮದ್ರಸ ಹಾಲ್ ನಲ್ಲಿ ನಡೆಯಿತು. ಎಸ್ ವೈ ಎಸ್ ಉಳ್ಳಾಲ ಸೆಂಟರ್ ಇದರ ಮಾಧ್ಯಮ ಕಾರ್ಯದರ್ಶಿ ನವಾಝ್ ಸಖಾಫಿ ಉಳ್ಳಾಲ ದುಆ ನೆರವೇರಿಸಿದರು. ಮದ್ರಸ ಪ್ರಧಾನ ಕಾರ್ಯದರ್ಶಿ ವರದಿ ಹಾಗೂ ಲೆಕ್ಕ ಪತ್ರ ಮಂಡಿಸಿದರು. 2019 ನೇ ಸಾಲಿನ ಮದ್ರಸದ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು. ಗೌರವಾಧ್ಯಕ್ಷರಾಗಿ ಅಬ್ದುಲ್ ರಹ್ಮಾನ್, ಅಧ್ಯಕ್ಷರಾಗಿ ಯೂಸುಫ್ ಹಳೆಕೋಟೆ, ಉಪಾಧ್ಯಕ್ಷರಾಗಿ ಇಸ್ಮಾಯಿಲ್ ತೊಕ್ಕೋಟು, ಪ್ರಧಾನ ಕಾರ್ಯದರ್ಶಿಯಾಗಿ ಅಬೂಬಕರ್ ಹಳೆಕೋಟೆ, ಜೊತೆ ಕಾರ್ಯದರ್ಶಿಯಾಗಿ ಸತ್ತಾರ್ ಹಳೆಕೋಟೆ, ಕೋಶಾಧಿಕಾರಿಯಾಗಿ ಅಶ್ರಫ್ ಹಳೆಕೋಟೆ, ಸಂಚಾಲಕರಾಗಿ ಹಂಝ ಹಳೆಕೋಟೆ ರವರನ್ನು ಆಯ್ಕೆ ಮಾಡಲಾಯಿತು. ಸ್ವಾಲಿಹ್ ಹಳೆಕೋಟೆ, ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ, ಬಶೀರ್ ಹಳೆಕೋಟೆ, ರಫೀಕ್ ಹಳೆಕೋಟೆ, ಹಮೀದಾಕ ಹಳೆಕೋಟೆ, ಅಬ್ದುಲ್ ರಹೀಂ ಮಂಚಿಲ, ಇರ್ಫಾನ್ ಹಳೆಕೋಟೆ ಇವರುಗಳನ್ನು ಕಾರ್ಯಕಾರಿ ಸಮಿತಿ ಸದಸ್ಯರಾಗಿ ಆರಿಸಲಾಯಿತು.
UN NETWORKS ತೊಕ್ಕೊಟ್ಟು : ಎಂಟು ವರ್ಷಗಳಿಂದ ನಿಧಾನಗತಿಯಲ್ಲಿ ಸಾಗಿದ್ದ ರಾಷ್ಟ್ರೀಯ ಹೆದ್ದಾರಿ 66ರ ತೊಕ್ಕೊಟ್ಟು ಮೇಲ್ಸೇತುವೆಯ ಕಾಮಗಾರಿ ಶೇ. 98 ಪೂರ್ಣಗೊಂಡಿದೆ. ಕೊನೆಯ ಹಂತದ ಫಿನಿಶಿಂಗ್ ಕಾಮಗಾರಿ ಬಾಕಿ ಉಳಿದಿದ್ದು ಎರಡು ದಿನಗಳಲ್ಲಿ ಪೂರ್ಣಗೊಂಡು ಜೂ. 10 ರಂದು ಸಂಚಾರಕ್ಕೆ ಮುಕ್ತವಾಗಲಿದೆ. ರಾಜಕೀಯ ಕೆಸರೆರಚಾಟದೊಂದಿಗೆ ಹೆದ್ದಾರಿಯ ಪಂಪ್‌ವೆಲ್ ಮತ್ತು ತೊಕ್ಕೊಟ್ಟು ಮೇಲ್ಸೇತುವೆ ಎರಡು ವರ್ಷಗಳಿಂದ ಪ್ರಸಿದ್ಧಿ ಪಡೆದು, ಕಳೆದ ಲೋಕಸಭಾ ಚುನಾವಣೆಯಲ್ಲಿ ಪ್ರಚಾ ರದ ವಸ್ತುವಾಗಿತ್ತು. ಮೇಲ್ಸೇತುವೆ ಸಂಚಾರಕ್ಕೆ ಮುಕ್ತ ಮಾಡುವ ವಿಚಾರದಲ್ಲಿ ಆರು ತಿಂಗಳಿಂದ ಸಂಸದ ನಳಿನ್ ಕುಮಾರ್ ಕಟೀಲು ಅವರ ಹಲವಾರು ನಿಗದಿಯಾದ ದಿನಾಂಕಗಳು ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಆಗಿದ್ದವು. ಖಾಸಗಿ ಸಹಭಾಗಿತ್ವದಲ್ಲಿ ನವಯುಗ್ ಸಂಸ್ಥೆ ಆರ್ಥಿಕ ಅಡಚಣೆಯಿಂದ ಕಾಮಗಾರಿ ವಿಳಂಬವಾಗಿತ್ತು.ಕೇಂದ್ರ ಸರಕಾರ ಹಣಕಾಸಿನ ನೆರವು ನೀಡಿದ ಅನಂತರ ಕಾಮಗಾರಿ ವೇಗಪಡೆದು ಈಗ ಅಂತಿಮಗೊಳ್ಳುತ್ತಿದೆ. ಜೂ. 8ಕ್ಕೆ ಕಾಮಗಾರಿ ಪೂರ್ಣಗೊಳ್ಳಲಿದ್ದು,ಜೂ. 10ಕ್ಕೆ ಸಂಚಾರಕ್ಕೆ ಮುಕ್ತವಾಗಲಿದೆ. ಸಸ್ಪೆನ್ಶನ್ ಜಾಯಿಂಟ್ ಕಾಮಗಾರಿ ಪೂರ್ಣ ಮೇಲ್ಸೇತುವೆ ಜಂಕ್ಷನ್‌ನ ಅಂಡರ್‌ಪಾಸ್ ಬಳಿ ಪಿಲ್ಲರ್‌ಗಳ…
UN NETWORKS ಕೊಣಾಜೆ : ಕಳೆದ ವರ್ಷ ಕ್ಯಾಂಪಸ್‌ನ್ನು ಪ್ಲಾಸ್ಟಿಕ್ ನಿಷೇಧಿತ ಪ್ರದೇಶವನ್ನಾಗಿ ಘೋಷಿಸಿ, ಈ ವರ್ಷ ಕೆ.ಎಸ್.ಆರ್.ಪಿ. ವಸತಿ ಸಮುಚ್ಚಯದಲ್ಲಿ ಕಸವನ್ನು ಮನೆಮನೆಯಲ್ಲಿ ವಿಂಗಡಿಸಿ ಸಮರ್ಪಕವಾಗಿ ನಿರ್ವಹಿಸುವುದರ ಮೂಲಕ ಸ್ವಚ್ಚ ಪ್ರದೇಶವೆಂದು ಘೋಷಿಸಲು ಸಾಧ್ಯವಾಗಿದೆ ಎಂದು ರಾಜ್ಯ ಮೀಸಲು ಪೊಲೀಸ್ 7ನೇ ಪಡೆ ಕಮಾಂಡೆಂಟ್ ಜನಾರ್ದನ ಹೇಳಿದರು. ಕರ್ನಾಟಕ ರಾಜ್ಯ ಮೀಸಲು ಪೋಲಿಸ್ 7ನೇ ಪಡೆ ಕ್ಯಾಂಪಸ್‌ನಲ್ಲಿ ಕಸ ವಿಲೇವಾರಿ ಆಂದೋಲನದೊಂದಿಗೆ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಏರ್ಪಡಿಸಲಾದ ಕಾರ್ಯಕ್ರಮದಲ್ಲಿ ಗಿಡವನ್ನು ನೆಟ್ಟು ಹಸಿ ಕಸ ಹಾಗೂ ಒಣ ಕಸವನ್ನು ವಿಂಗಡಿಸುವ ಕೇಂದ್ರವನ್ನು ಉದ್ಘಾಟಿಸಿ ಕಸ ವಿಲೇವಾರಿ ವಾಹನಕ್ಕೆ ಚಾಲನೆ ನೀಡಿ ಮಾತನಾಡಿದರು. ಸಹಾಯಕ ಕಮಾಂಡೆಂಟ್ ಶರತ್ ಎಂ.ಎ, ಇನ್ಸ್‌ಪೆಕ್ಟರ್ ರಾಜು ಹಾಗೂ ಜನ ಶಿಕ್ಷಣ ಟ್ರಸ್ಟ್ ನಿರ್ದೇಶಕ ಕೃಷ್ಣ ಮೂಲ್ಯ, ಘಟಕಾಧಿಕಾರಿ, ಸಿಬಂದಿ ವರ್ಗ ಹಾಗೂ ಪೊಲೀಸ್ ಕುಟುಂಬದ ಸದಸ್ಯರು ಉಪಸ್ಥಿತರಿದ್ದರು. ಸಮರ್ಪಕ ನಿರ್ವಹಣೆ ಜಿಲ್ಲಾ ಸ್ವಚ್ಚತಾ ರಾಯಭಾರಿ ಶೀನ ಶೆಟ್ಟಿ ಮಾತ ನಾಡಿ, ಸ್ವಚ್ಛತೆಯೇ ಸಮೃದ್ಧಿ,ಸ್ವಚ್ಛತೆಯೇ ಸಂಸ್ಕೃತಿ ಎಂಬ…
UN NETWORKS ಮಂಜನಾಡಿ : ಅಲ್ ಮದೀನ ಮಂಜನಾಡಿ ವತಿಯಿಂದ ಮಕ್ಕತುಲ್ ಮುಕರ್ರಮಃ ನೂತನ ಸಮಿತಿ ಅಸ್ತಿತ್ವಕ್ಕೆ ತರಲಾಯಿತು.ಅಬ್ಬಾಸ್ ಹಾಜಿ ಎಲಿಮಲೆ ಗೌರವ ಅಧ್ಯಕ್ಷತೆಯಲ್ಲಿ , ಮೂಸಾ ಹಾಜಿ ಕಿನ್ಯ ಅವರ ಸ್ವಾಗತದೊಂದಿಗೆ ಕೆ.ಪಿ. ಅಬ್ದುಲ್ಹಾ ಮಂಜನಾಡಿ ಅವರ ಉಪಸ್ಥಿತಿಯಲ್ಲಿ ನೂತನ ಸಮಿತಿಯನ್ನು ಅಸ್ತಿತ್ವಕ್ಕೆ ತರಲಾಯಿತು. ಗೌರವ ಅಧ್ಯಕ್ಷರಾಗಿ ಅಬ್ಬಾಸ್ ಹಾಜಿ ಎಲಿಮಲೆ, ಸಂಚಾಲಕರಾಗಿ ಮೂಸಾ ಹಾಜಿ ಕಿನ್ಯ, ಅಬ್ದುಲ್ ಹಮೀದ್ ಉಳ್ಳಾಲ, ಅಧ್ಯಕ್ಷರಾಗಿ ಹಾರಿಸ್ ಕಿನ್ಯ, ಪ್ರಧಾನ ಕಾರ್ಯದರ್ಶಿಯಾಗಿ ಕಲಂದರ್ ಅಸೈಗೋಳಿ, ಕೋಶಾಧಿಕಾರಿಯಾಗಿ ನಝೀರ್ ಸೂರಿಂಜೆ, ಉಪಾಧ್ಯಕ್ಷರಾಗಿ ಹನೀಫ್ ಸಖಾಫಿ ಬೊಳ್ಮಾರ್, ಜೊತೆ ಕಾರ್ಯದರ್ಶಿಯಾಗಿ ಮಹಮ್ಮದ್ ಗಂಟಲ್ಕಟ್ಟೆ ಹಾಗು ಸದಸ್ಯರುಗಳಾಗಿ ಉಮರ್ ಸಖಾಫಿ ಪರಪ್ಪು, ಇಕ್ಬಾಲ್ ಕಕ್ಕಿಂಜೆ, ಮುಸ್ತಪಾ ಉಚ್ಚಿಲ, ಅಬ್ಬಾಸ್ ಸಾಲ್ಮರ, ಇಕ್ಬಾಲ್ ಗಫೂರ್ ಕಿನ್ಯ, ಕಬೀರ್ ಬಾಚಾರ್, ನವಾಝ್ ಇಮ್ದಾದಿ, ಫಾರೂಕ್ ಹನೀಫೀ ಬೋವು, ಆರ್ ಕೆ ರಝಾಕ್ ರಂತಡ್ಕ, ಅಬ್ದುಲ್ಲಾ ಮುಸ್ಲಿಯಾರ್ ಕಡಬ ಆಯ್ಕೆಯಾದರು.
UN NETWORKS ಕೊಣಾಜೆ: ಪ್ಲಾಸ್ಟಿಕ್ ಹಾಗೂ ತ್ಯಾಜ್ಯಗಳ ಸರಿಯಾದ ನಿರ್ವಹಣೆ ಇಲ್ಲದ ಪರಿಣಾಮ ಇಂದು ಅನೇಕ ಕಡೆಗಳಲ್ಲಿ ಪರಿಸರ ಮಾಲಿನ್ಯಗಳಾಗುತ್ತಿವೆ. ಪರಿಸರದ ಸಂರಕ್ಷಣೆಯ ಬಗ್ಗೆ ನಾವೆಲ್ಲರೂ ಎಚ್ಚೆತ್ತುಕೊಂಡು ಸಮಾಜದಲ್ಲಿ ಈ ನಿಟ್ಟಿನಲ್ಲಿ ಜಾಗೃತಿ ಮೂಡಿಸಬೇಕಾದ ಅಗತ್ಯವಿದೆ ಎಂದು ಬ್ಯಾಂಕ್ ಆಫ್ ಬರೋಡಾದ ವಲಾಯಧ್ಯಕ್ಷರಾದ ಎಂ.ಜೆ.ನಾರಾಯಣ ಅವರು ಹೇಳಿದರು. ಅವರು ಕೊಣಾಜೆಯ ಬ್ಯಾಂಕ್ ಆಫ್ ಬರೋಡ(ವಿಜಯಾ ಬ್ಯಾಂಕ್) ಹಾಗೂ ಕೊಣಾಜೆ ಗ್ರಾಮ ಪಂಚಾಯಿತಿ ಆಶ್ರಯದಲ್ಲಿ ಶುಕ್ರವಾರ ಗ್ರಾಮ ಪಂಚಾಯಿತಿ ಕಚೇರಿ ಬಳಿ ನಡೆದ ವಿಶ್ವಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಪ್ರಮುಖವಾಗಿ ಪರಿಸರ ಸಂರಕ್ಷಣೆಯ ಬಗ್ಗೆ ವಿದ್ಯಾರ್ಥಿಗಳಲ್ಲಿ ಹಾಗೂ ಯುವ ಸಮುದಾಯಗಳಲ್ಲಿ ಅರಿವು ಮೂಡಿಸುವ ಪ್ರಯತ್ನ ಮಾಡಬೇಕಿದೆ ಎಂದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಮೂಡಾದ ಮಾಜಿ ಅಧ್ಯಕ್ಷ ಇಬ್ರಾಹಿಂ ಕೋಡಿಜಾಲ್ ಅವರು, ಪರಿಸರವು ಸಮತೋಲನವಾಗಿರಬೇಕಾದರೆ ಮರ ಗಿಡಗಳ ಸಂರಕ್ಷಣೆಯೂ ಅಗತ್ಯವಾಗಿದೆ. ವನಸಂಪತ್ತನ್ನು ರಕ್ಷಿಸುವುದರೊಂದಿಗೆ ಪ್ರತಿಯೊಬ್ಬರೂ ಪರಿಸರ ಸಂರಕ್ಷಣೆಯ ಬಗ್ಗೆ ಸ್ವಯಂ ಕಾಳಜಿ ಬೆಳೆಸಿಕೊಳ್ಳಬೇಕು ಎಂದರು. ಕಾರ್ಯಕ್ರಮದಲ್ಲಿ ಕೊಣಾಜೆ ಗ್ರಾಮ ಪಂಚಾಯಿತಿ…
UN NETWORKS ಹರೇಕಳ : ಲೋಕಸಭೆ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ ಐತಿಹಾಸಿಕ ಜಯ ಗಳಿಸಿದ ಹಿನ್ನೆಲೆಯಲ್ಲಿ ಬಿಜೆಪಿ ಹರೇಕಳ ಗ್ರಾಮ ಸಮಿತಿಯಿಂದ ಕಾರ್ಯಕರ್ತರಿಗೆ ಅಭಿನಂದನೆ ಹಾಗೂ ವಿಜಯೋತ್ಸವ ದೆಬ್ಬೇಲಿಮಾರ್ ಗದ್ದೆಯಲ್ಲಿ ನಡೆಯಿತು. ಕೊಣಾಜೆ ಮಹಾಶಕ್ತಿ ಕೇಂದ್ರದ ಹರೇಕಳ ಗ್ರಾಮ ಸಮಿತಿಯಿಂದ ನಡೆದ ಕಾರ್ಯಕ್ರಮದ ನೇತೃತ್ವ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ರವೀಂದ್ರ ಶೆಟ್ಟಿ ಉಳಿದೊಟ್ಟು ವಹಿಸಿದ್ದರು. ಬಿಜೆಪಿ ಹರೇಕಳ ಶಕ್ತಿ ಕೇಂದ್ರದ ಅಧ್ಯಕ್ಷ ಶ್ರೀಧರ ಆಳ್ವ ದೆಬ್ಬೇಲಿ ಲಚ್ಚಿಲ್ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಬಿಜೆಪಿ ಮಂಗಳೂರು ವಿಧಾನಸಭಾ ಕ್ಷೇತ್ರಾಧ್ಯಕ್ಷ ಸಂತೋಷ್ ಕುಮಾರ್ ರೈ ಬೋಳಿಯಾರ್, ಜಿಲ್ಲಾ ಪಂಚಾಯಿತಿ ಸದಸ್ಯೆ ಧನಲಕ್ಷ್ಮೀ ಗಟ್ಟಿ, ಪಕ್ಷದ ಪ್ರಮುಖರಾದ ಚಂದ್ರಹಾಸ್ ಪಂಡಿತ್ ಹೌಸ್, ತಾ.ಪಂ.ಸದಸ್ಯ ನವೀನ್ ಪಾದಲ್ಪಾಡಿ, ಮುನ್ನೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೂಪ ಶೆಟ್ಟಿ, ದಾಮೋದರ ಗಟ್ಟಿ ಬೈತಾರ್, ರಾಮಣ್ಣ ರೈ ಕುಪ್ಪಿಲ, ಭಾಸ್ಕರ ರೈ ಸಂಪಿಗೆದಡಿ, ಲೋಲಾಕ್ಷಿ ಆಚಾರ್ಯ, ಕೊಣಾಜೆ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಸುರೇಶ ಶೆಟ್ಟಿ ಅಂಬ್ಲಮೊಗರು, ಕಾರ್ಯದರ್ಶಿ ವೇಣುಗೋಪಾಲ್…
UN NETWORKS ಉಳ್ಳಾಲ : ಉಳ್ಳಾಲ ಭಾಗದಲ್ಲಿ ಶಾಶ್ವತ ನೀರು ಪೂರೈಕೆ ನಿಟ್ಟಿನಲ್ಲಿ 200 ಕೋಟಿಯ ಯೋಜನೆ ರೂಪಿಸಲಾಗಿದ್ದು, ಶೀಘ್ರ ಕಾಮಗಾರಿ ಆರಂಭಗೊಳ್ಳಲಿದೆ. ಮಂಚಿಲದಲ್ಲಿ ನಿರ್ಮಿಸಲಾಗಿರುವ ಕೊಳವೆಬಾವಿಯಲ್ಲಿ ಉತ್ತಮ ನೀರು ಲಭಿಸಿ ಸ್ಥಳೀಯರ ಬಾಯಾರಿಕೆ ನೀಗಿಸುವಲ್ಲಿ ಸಹಕಾರಿಯಾಗಲಿ ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಯು.ಟಿ.ಖಾದರ್ ಹೇಳಿದರು. ಉಳ್ಳಾಲ ನಗರಸಭಾ ವ್ಯಾಪ್ತಿಯ 14ನೇ ವಾರ್ಡ್ ಮಂಚಿಲದಲ್ಲಿ 12.5ಲಕ್ಷ ವೆಚ್ಚದಲ್ಲಿ ಕೊಳವೆ ಬಾವಿ ಮತ್ತು ಮಂಚಿಲದಿಂದ ಮಾರ್ಗತಲೆವರೆಗೆ ಪೈಪ್‍ಲೈನ್ ವ್ಯವಸ್ಥೆ ಬುಧವಾರ ಸಾರ್ವಜನಿಕರಿಗೆ ಸಮರ್ಪಿಸಿ ಮಾತನಾಡಿದರು. ಮಂಚಿಲ, ಮಾರ್ಗತ್ತಲೆ, ಅಲೇಕಳ ಮತ್ತು ಉಳಿಯ ಪರಿಸರದಲ್ಲಿ ಶೈಕ್ಷಣಿಕ, ಧಾರ್ಮಿಕ ಕೇಂದ್ರಗಳಿದ್ದು ಅಭಿವೃದ್ಧಿ ಹೊಂದುತ್ತಿರುವ ಪ್ರದೇಶ. ಈ ಪ್ರದೇಶದಲ್ಲಿ ಹಿಂದೆ ನೀರಿದ್ದರೂ ಸಮರ್ಪಕವಾಗಿಲ್ಲದ ಕಾರಣ ಸ್ಥಳೀಯ ಕೌನ್ಸಿಲರ್ ಅಯೂಬ್ ಹಾಗೂ ಇತರರ ಮನವಿ ಮೇರೆಗೆ ಸಮರ್ಪಕ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು. ಮಂಚಿಲ ಮಸೀದಿಯ ಖತೀಬ್ ಇಸ್ಮಾಯಿಲ್ ಬುಖಾರಿ ದುವಾ ಮಾಡಿದರು. ವಾರ್ಡಿನ ಸದಸ್ಯರಾದ ಅಯ್ಯೂಬ್ ಮಂಚಿಲ, ನಗರಸಭೆ ಸದಸ್ಯರಾದ ವೀಣಾ, ಬಾಝಿಲ್ ಡಿಸೋಜ, ಮಂಚಿಲ ಜುಮಾ ಮಸೀದಿ…
UN NETWORKS ದೇರಳಕಟ್ಟೆ: ಇಂದಿನ ಆಧುನಿಕತೆಯಲ್ಲಿ ಪ್ಲಾಸ್ಟಿಕ್ ಹಾಗೂ ವಾಯುಮಾಲಿನ್ಯದ ಸಮಸ್ಯೆ ಹೆಚ್ಚಾಗುತ್ತಿದ್ದು ಕೂಡಲೇ ನಾವು ಎಚ್ಚೆತ್ತುಕೊಳ್ಳದಿದ್ದರೆ ಮುಂದೆ ಅಪಾಯದ ದಿನಗಳು ಎದುರಾಗಲಿವೆ. ಪರಿಸರ ಸಂರಕ್ಷಣೆಯ ಬಗ್ಗೆ ಇಡೀ ಸಮಾಜವೇ ಜಾಗೃತವಾಗಬೇಕಿದೆ ಎಂದು ದ.ಕ. ಜಿಲ್ಲಾ ನಾಯಾಧೀಶ ಕಡ್ಲೂರು ಸತ್ಯನಾರಾಯಣ ಆಚಾರ್ಯ ಅವರು ಹೇಳಿದರು. ಅವರು ದೇರಳಕಟ್ಟೆಯ ನಿಟ್ಟೆ ಪರಿಗಣಿಸಲ್ಪಟ್ಟ ವಿಶ್ವವಿದ್ಯಾಲಯದ ನಿಟ್ಟೆ ವಿವಿ ಹಸಿರು ಯೋಜನೆ ಸಮಿತಿಯ ಆಶ್ರಯದಲ್ಲಿ ವಿವಿಯ ಪನೀರು ಕ್ಯಾಂಪಸ್‍ನಲ್ಲಿ ಗುರುವಾರ ನಡೆದ ವಿಶ್ವಪರಿಸರ ದಿನಾಚಣೆಯ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಪಾಸ್ಟಿಕ್‍ನಿಂದ ಅದೆಷ್ಟೋ ಅನಾಹುತಗಳು ಎದುರಾದರೂ ನಾವು ಇನ್ನೂ ಜಾಗರೂಕರಾಗಿಲ್ಲ. ಪ್ಲಾಸ್ಟಿಕ್ ಸಂಪೂರ್ಣವಾಗಿ ನಿಷೇದವಾದರೆ ಪರಿಸರ ಮಾಲಿನ್ಯದ ಸುಮಾರು 60% ಸಮಸ್ಯೆ ನಿವಾರಣೆಯಾದಂತೆ. ಪ್ಲಾಸ್ಟಿಕ್ ಸಮಸ್ಯೆಯ ಕುರಿತು ಜನಸಾಮನ್ಯರು ಸೇರಿದಂತೆ ಸರಕಾರವೂ ಜಾಗೃತಗೊಂಡು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಬೇಕಾದ ಅನಿವಾರ್ಯತೆ ಇದೆ ಎಂದರು. ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಪರಿಸರ ಅಧಿಕಾರಿ ರಾಜಶೇಖರ್ ಪುರಾಣಿಕ್ ಅವರು ಮಾತನಾಡಿ, ಕೈಗಾರಿಕಾ…
UN NETWORKS ಉಳ್ಳಾಲ : ಎಸ್ಸೆಸ್ಸೆಫ್ ಶಾಂತಿಭಾಗ್ ಶಾಖೆ ವತಿಯಿಂದ ಈದ್ ಹಬ್ಬದ ಪ್ರಯುಕ್ತ ದೇರಳಕಟ್ಟೆ ಯೆನೇಪೋಯ ಅಸ್ಪತ್ರೆಯ ಒಳ ರೋಗಿಗಳಿಗೆ ಮಧ್ಯಾಹ್ನದ ಊಟವನ್ನು ವಿತರಿಸಲಾಯಿತು.ಎಸ್ಸೆಸ್ಸೆಫ್ ಶಾಂತಿಭಾಗ್ ಶಾಖೆ 7 ವರ್ಷಗಳಿಂದ ನಿರಂತರವಾಗಿ ಯೆನೇಪೊಯ ಅಸ್ಪತ್ರೆಯ ರೋಗಿಗಳಿಗೆ ಊಟ ವಿತರಿಸುತ್ತಾ ಬಂದಿದೆ. ದ.ಕ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ ಖಾದರ್ ರೋಗಿಗಳಿಗೆ ಊಟ ವಿತರಿಸಿದರು. ನಂತರ ಮಾತನಾಡಿ ಅವರು ಯುವಕರು ಎಸ್ಸೆಸ್ಸೆಫ್ ಸಂಘಟನೆಗೆ ಸೇರಿಕೊಂಡು ಬಡವರಿಗೆ ಮಧ್ಯಾಹ್ನದ ಊಟ ವಿತರಿಸುವ ಮೂಲಕ ಈದ್ ಹಬ್ಬದ ನಿಜವಾದ ಸಂದೇಶವನ್ನು ಜನತೆಗೆ ತಿಳಿಸುವಂತಾಗಿದೆ. ಬಡವರ ಕಣ್ಣೀರು ಒರೆಸುವ ಕಾರ್ಯ ಯುವಕರಿಂದ ಪ್ರಾರಂಭ ವಾಗಬೇಕಾಗಿದೆ. ಎಸ್ಸೆಸ್ಸೆಫ್ ಸಂಘಟನೆ ಸಾಮಾಜಿಕ ಕಾರ್ಯದಲ್ಲಿ ತೊಡಗಿಸುವ ಮೂಲಕ ಬೇರೆ ಸಂಘನೆಗಳಿಗೆ ಮಾದರಿಯಾಗಿದೆ ಎಂದು ಹೇಳಿದರು. ಎಸ್ಸೆಸ್ಸೆಫ್ ಉಳ್ಳಾಲ ಡಿವಿಷನ್ ಅಧ್ಯಕ್ಷ ಸೈಯ್ಯದ್ ಖುಬೈಬ್ ತಂಙಳ್, ಉದ್ಯಮಿ ರಶೀದ್ ಹಾಜಿ, ಎಸ್ಸೆಸ್ಸೆಫ್ ಶಾಂತಿಭಾಗ್ ಗೌರವಾಧ್ಯಕ್ಷ ಇಲ್ಯಾಸ್ ಸಖಾಫಿ, ಎಸ್ಸೆಸ್ಸೆಫ್ ಮುಖಂಡರಾದ ಅಲ್ತಾಫ್ ಕುಂಪಲ, ಜಾಫರ್ ಅಳೇಕಲ ಮುಂತಾದವರು ಉಪಸ್ಥಿತರಿದರು.

