Author: UllalaVani

Kannada News From Coastal Karnataka

UN NETWORKS ಉಳ್ಳಾಲ : ತಾಪಮಾನ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಮೇ ಕೊನೆಯವಾರ ಜೂನ್ ಮೊದಲ ವಾರದಲ್ಲಿ ಹಿಂಗಾರು ಮಳೆ ಆರಂಭವಾಗುವುದು ಮಾಮೂಲಿಯಾಗಿದ್ದರೂ ಪ್ರಸ್ತುತ ವರ್ಷ ಜೂನ್ ಇಪ್ಪತ್ತಾದರೂ ಇಳೆ ಸರಿಯಾಗಿ ತಂಪಾಗಿಲ್ಲ. ಇದೇ ರೀತಿ ಮುಂದುವರಿದರೆ ಗ್ರಾಮೀಣ ಪ್ರದೇಶದಲ್ಲೂ ನೀರಿಗಾಗಿ ರೇಶನಿಂಗ್ ಆರಂಭವಾಗುವ ಕಾಲ ದೂರವಿಲ್ಲ ಎಂದು ಲಯನ್ಸ್ ಜಿಲ್ಲಾ ಗವರ್ನರ್ ದೇವದಾಸ ಭಂಡಾರಿ ಅಭಿಪ್ರಾಯ ಪಟ್ಟರು. ಅವರು ಅಂತರಾಷ್ಟ್ರೀಯ ಲಯನ್ಸ್ ಕ್ಲಬ್, ಉಳ್ಳಾಲ ಸಯ್ಯದ್ ಮದನಿ ದರ್ಗಾ ಸಮಿತಿ ಹಾಗೂ ಕರ್ನಾಟಕ ಅರಣ್ಯ ಇಲಾಖೆ ಸಹಯೋಗದಲ್ಲಿ ಅಬ್ಬಕ್ಕ ಸಾಲು ಮರ ಯೋಜನೆಗೆ ಉಳ್ಳಾಲದ ಹಝ್ರತ್ ಶಾಲಾ ಮೈದಾನದಲ್ಲಿ ಚಾಲನೆ ನೀಡಿ ಮಾತನಾಡಿದರು. ಉಳ್ಳಾಲ ರಾಣಿ ಅಬ್ಬಕ್ಕ ಸರ್ಕಲ್‍ನಿಂದ ಹಜ್ರತ್ ವಿದ್ಯಾಸಂಸ್ಥೆಯವರೆಗೆ ಸುಮಾರು ಇಪ್ಪತ್ತೈದು ಗಿಡಗಳನ್ನು ನೆಟ್ಟು ವನಮಹೋತ್ಸವಕ್ಕೆ ಚಾಲನೆ ನೀಡಿದ ವಲಯ ಅರಣ್ಯಾಧಿಕಾರಿ ಶ್ರೀಧರ್ ಸಾಲು ಮರದ ತಿಮ್ಮಕ್ಕನಂತೆ ಇಲ್ಲಿನ ಪರಿಸರ ಪ್ರೇಮಿ ಮಾಧವ ಉಳ್ಳಾಲ್ ಈ ಕಾರ್ಯಕ್ರಮದ ಹಿಂದೆ ಇರುವ ಶಕ್ತಿ ಎಂದು ಶ್ಲಾಘಿಸಿದರು. ನಿಯೋಜಿತ ಲಯನ್ಸ್…

Read More

UN NETWORKS ಉಳ್ಳಾಲ: ದಕ್ಷಿಣ ಕನ್ನಡ ಜಿಲ್ಲಾ ಸಿ.ಎಸ್.ಸಿ., ಸೇವಾಸಿಂಧು ವಿ.ಎಲ್.ಇ ಸೊಸೈಟಿಯ ಸಭೆಯು ನಂತೂರಿನ ಬಬ್ಬುಸ್ವಾಮಿ ಸಭಾಭವನದಲ್ಲಿ ಭಾನುವಾರ ನಡೆಯಿತು. ಅಧ್ಯಕ್ಷರಾಗಿ ರೋಹಿತ್ ಕಮಾರ್ ಕುತ್ತಾರ್ ಆಯ್ಕೆಯಾದರು. ಕಾರ್ಯಾಧ್ಯಕ್ಷರಾಗಿ ಹೇಮಚಂದ್ರ ಬಜ್ಪೆ, ಉಪಾಧ್ಯಕ್ಷರುಗಳಾಗಿ ಆಸೀಫ್ ಮಂಗಳೂರು, ಸರೀತಾ ಪುತ್ತೂರು, ಹೈದರ್ ಅಲಿ ಬೆಳ್ತಂಗಡಿ, ನವೀನ್ ಸುಳ್ಯ, ಶಿವಾನಂದ ಬಂಟ್ವಾಳ, ಕಾರ್ಯದರ್ಶಿಯಾಗಿ ಲಕ್ಷ್ಮೀನಾರಾಯಣ ಪಕ್ಷಿಕೆರೆ, ಜೊತೆ ಕಾರ್ಯದರ್ಶಿಗಳಾಗಿ ಡಾ.ಯಸ್ ಅಬೂಬಕರ್ ಆರ್ಲಪದವು, ಸುನೀಲ್ ಮಂಗಳೂರು, ಕೋಶಾಧಿಕಾರಿಯಾಗಿ ಪ್ರೀತೇಶ್ ಮಂಗಳೂರು, ಮಹಿಳಾ ಪ್ರತಿನಿಧಿಗಳಾಗಿ ನೀತಾ ಬೆಳ್ತಂಗಡಿ, ಚಂದ್ರಾವತಿ ಗಂಜಿಮಠ, ಪೂರ್ಣಿಮಾ ಹಳೆಯಂಗಡಿ, ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ ಆಶ್ರಫ್ ತಲಪಾಡಿ, ಪ್ರಸನ್ನ ಮಲ್ಯ, ಗೌತಮ್ ಕುಕ್ಯಾನ್, ರಘುವೀರ್ ಕಡಬ, ವಿಶ್ವಾಸ್, ಅಬ್ದುಲ್ ರಝಾಕ್ ಸುಳ್ಯ, ವಿನಯ್ ಕುಮಾರ್, ವಿಶಾಲ್ ಶೆಣೈ, ರೂಪಾನಂದ ದಾಸ್, ರಾಜೇಶ್ ಶೆಟ್ಟಿ ಇವರುಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

Read More

UN NETWORKS ಉಳ್ಳಾಲ : ಹಿರಿಯ ಸಾಹಿತಿ ಗಿರೀಶ್ ಕಾರ್ನಾಡ್ ಕನ್ನಡ ಸಾಹಿತ್ಯ ಮತ್ತು ರಂಗಭೂಮಿಗೆ ನೀಡಿದ ಕೊಡುಗೆ ಅನನ್ಯ. ಈ ಮೂಲಕ ಅವರು ರಂಗಭೂಮಿಯ ಪುನಶ್ಚೇತನಕ್ಕೆ ಕಾರಣಕರ್ತರಾಗಿದ್ದರು ಎಂದು ಹಿರಿಯ ರಂಗಕರ್ಮಿ ಚಂದ್ರಹಾಸ ಉಳ್ಳಾಲ ಹೇಳಿದರು. ಮೇಲ್ತೆನೆ ಮತ್ತು ಕಲ್ಲಚ್ಚು ಪ್ರಕಾಶನ ಇತ್ತೀಚೆಗೆ ತೊಕ್ಕೊಟ್ಟಿನಲ್ಲಿ ಹಮ್ಮಿಕೊಂಡ ‘ಕನ್ನಡದ ಹೆಮ್ಮೆ:ಗಿರೀಶ್ ಕಾರ್ನಾಡ್-ಒಂದು ನೆನಪು’ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು. ನಾಟಕ ರಂಗಕ್ಕೆ ಅಂತಾರಾಷ್ಟ್ರೀಯ ಮಣ್ಣನೆ ಒದಗಿಸಿದ ಮಹಾನ್ ನಾಟಕಕಾರ ಕಾರ್ನಾಡ್ ಒಂದು ವೇಳೆ ಲಂಡನ್‌ನಲ್ಲಿ ಜನಿಸಿದ್ದರೆ ಶೇಕ್ಸೃ್ಪಿಯರ್‌ನಂತಹ ಸಾರ್ವಕಾಲಿಕ ಶ್ರೇಷ್ಠ ನಾಟಕಕಾರರ ಸಾಲಿನಲ್ಲಿ ನಿಲ್ಲುತ್ತಿದ್ದರೇನೋ? ಓರ್ವ ಜವಾಬ್ದಾರಿಯುತ ಸಾಹಿತಿ ತನ್ನ ಕಾಲದ ದುರಂತಗಳಿಗೆ ಯಾವ ರೀತಿಯಲ್ಲಿ ಪ್ರತಿ ಸ್ಪಂದಿಸಬೇಕು ಎನ್ನುವುದಕ್ಕೆ ಕಾರ್ನಾಡ್ ನಮ್ಮ ಮುಂದೆ ಒಂದು ಮಾದರಿಯನ್ನು ಬಿಟ್ಟು ಹೋಗಿದ್ದಾರೆ ಎಂದು ಲೇಖಕ ಇಸ್ಮತ್ ಪಜೀರ್ ಹೇಳಿದರು. ಕಲ್ಲಚ್ಚು ಪ್ರಕಾಶನದ ಮುಖ್ಯಸ್ಥ ಮಹೇಶ್ ಆರ್. ನಾಯಕ್ ಮಾತನಾಡಿ ಸಾವಿಗೆ ಸಂಭ್ರಮಿಸುವ ವಿಕೃತಿ ನಮ್ಮ ನೈತಿಕ ಅಧಃಪತನವನ್ನು ತೋರಿಸುತ್ತದೆ. ಇದೊಂದು ಆಧುನಿಕ ರಾಜಕೀಯ…

Read More

UN NETWORKS ಉಳ್ಳಾಲ : ಉಳ್ಳಾಲದ ಇತರ ಕಡಲ್ಕೊರೆತ ಪ್ರದೇಶಗಳಿಗೆ ಎಸ್ ಡಿಪಿಐ ಮುಖಂಡರ ನಿಯೋಗ ಭೇಟಿ ನೀಡಿದರು. ಎಸ್ ಡಿಪಿಐ ರಾಜ್ಯಾಧ್ಯಕ್ಷ ಇಲ್ಯಾಸ್ ತುಂಬೆ, ರಾಜ್ಯಾ ಕಾರ್ಯದರ್ಶಿ ಅಕ್ರಂ ಹಸನ್, ಉಳ್ಳಾಲ ಕ್ಷೇತ್ರಾಧ್ಯಕ್ಷ ಅಬ್ಬಾಸ್ ಕಿನ್ಯಾ,ಉಳ್ಳಾಲ ನಗರ ಸಮಿತಿ ಅಧ್ಯಕ್ಷ ಅಬ್ಬಾಸ್ ಎ.ಆರ್, ಉಪಾಧ್ಯಕ್ಷ ನಿಝಾಂ, ಉಳ್ಳಾಲ ನಗರ ಸಭೆ ಸದಸ್ಯರಾದ ರಮೀಝ್, ಅಝ್ಗರ್ ಅಲಿ, ಎಸ್ ಡಿಪಿಐ ಸದಸ್ಯರಾದ ಅಬ್ದುಲ್ ಲತೀಫ್, ನಝೀರ್ ಕೊಟೆಪುರ, ಬದ್ರುದ್ದೀನ್, ಶಾಫಿ ಬಬ್ಬುಕಟ್ಟೆ, ಪಿಎಫ್ಐ ಉಳ್ಳಾಲ ವಲಯಾಧ್ಯಕ್ಷ ಅಬೂಬಕ್ಕರ್, ಎಸ್ ಡಿಪಿಐ ಅಳೇಕೊಟೆ ಶಾಖಾಧ್ಯಕ್ಷ ಅಬ್ದುಲ್ ರವೂಫ್ ಉಪಸ್ಥಿತರಿದರು.

Read More

UN NETWORKS ಉಳ್ಳಾಲ : ಹೊಟ್ಟೆನೋವಿನಿಂದ ಅಸ್ವಸ್ಥಳಾದ ಯುವತಿ ಸಾವನ್ನಪ್ಪಿರುವ ಘಟನೆ ಉಳ್ಳಾಲ ಠಾಣಾ ವ್ಯಾಪ್ತಿಯ ಕೊಲ್ಯ ಎಂಬಲ್ಲಿ ಸಂಭವಿಸಿದೆ. ಕೊಲ್ಯ ನಿವಾಸಿ ಹರೀಶ್ ಹರ್ಷಿತಾ (20) ಸಾವನ್ನಪ್ಪಿರುವಾಕೆ. ಹೊಟ್ಟೆನೋವು ಎಂದು ಯುವತಿಯನ್ನು ಆಸ್ಪತ್ರೆಗೆ ದಾಖಲಿಸುವಷ್ಟರಲ್ಲಿ ಹರ್ಷಿತಾ ಸಾವನ್ನಪ್ಪಿದ್ದಾಳೆ. ಹಿಮೋಗ್ಲೋಬಿನ್ ನಲ್ಲಿ ತೀರಾ ವ್ಯತ್ಯಾಸ ಉಂಟಾಗಿ ಸಾವನ್ನಪ್ಪಿರುವುದಾಗಿ ಸ್ಥಳೀಯರು ತಿಳಿಸಿದ್ದಾರೆ. ಈ ಕುರಿತು ಉಳ್ಳಾಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಶವ ಮಹಜರು ವರದಿ ಬಂದ ಬಳಿಕವಷ್ಟೇ ಕಾರಣ ಬೆಳಕಿಗೆ ಬರಲಿದೆ. ಆರು ತಿಂಗಳ ಹಿಂದೆಯಷ್ಟೇ ಹರ್ಷಿತಾ ತಾಯಿಯೂ ಸಾವನ್ನಪ್ಪಿದ್ದರು. ತಂದೆ, ಸಹೋದರಿ ಹಾಗೂ ಸಹೋದರನ ಜತೆಗೆ ವಾಸಿಸುತ್ತಿದ್ದರು.

Read More

UN NETWORKS ಪಾನೀರ್: ವಿನಾಯಿತಿ ಪತ್ರ ಕೇಳುವುದು ಭಿಕ್ಷೆ ಬೇಡುವುದಕ್ಕೆ ಸಮ. ಸರ್ಕಾರಕ್ಕೆ ನಾವು ಕಟ್ಟುವ ತೆರಿಗೆಗೆ ಪ್ರತಿಯಾಗಿ ನಮ್ಮ ಹಕ್ಕು ಕೇಳಿ ಪಡೆಯುವ ಮೂಲಕ ಸರ್ಕಾರದ ಸವಲತ್ತು ಪೂರ್ಣ ಪ್ರಮಾಣದಲ್ಲಿ ಪಡೆಯುವ ಪ್ರಯತ್ನ ಅಗತ್ಯ ಎಂದು ಬಿಷಪ್ ಹೌಸ್‍ನ ಅತಿಥಿ ಧರ್ಮಗುರು ಫಾ.ಮ್ಯಾಕ್ಸ್ಮಿಂ ರೊಜಾರಿಯೋ ಅಭಿಪ್ರಾಯಪಟ್ಟರು. ಕೆಥೊಲಿಕ್ ಸಭಾ ಪಾನೀರ್ ಘಟಕದ ವತಿಯಿಂದ ಭಾನುವಾರ ಪಾನೀರ್ ಮೆರ್ಸಿಯಮ್ಮನವರ ಇಗರ್ಜಿಯಲ್ಲಿ ನಡೆದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದರು. ಇಂದು ಅಲ್ಪಸಂಖ್ಯಾತ ಮಕ್ಕಳ ಶಿಕ್ಷಣಕ್ಕಾಗಿ ಸಾಕಷ್ಟು ಯೋಜನೆಗಳಿವೆ. ಆದರೆ ಅಲ್ಪಸಂಖ್ಯಾತ ವರ್ಗಕ್ಕೆ ಸೇರಿರುವ ಕ್ರೈಸ್ತರು ಈ ವಿಷಯದಲ್ಲಿ ನಿರ್ಲಕ್ಷ್ಯ ಭಾವನೆ ಹೊಂದಿರುವುದರಿಂದ ಕಳೆದ ವರ್ಷ ಶೇ.8.7 ಸ್ಕಾಲರ್ಶಿಪ್ ಮಾತ್ರ ಸಿಕ್ಕಿದೆ. ಈ ಬಗ್ಗೆ ಕೆಥೊಲಿಕ್ ಸಭಾ ಜಾಗೃತಿ ಮೂಡಿಸುತ್ತಿದ್ದು ಇದರ ಪ್ರಯೋಜನ ಮುಂದಿನ ದಿನಗಳಲ್ಲಾದರೂ ಸಮುದಾಯಕ್ಕೆ ಸಿಗುವಂತಾಗಬೇಕು ಎಂದು ಕಿವಿಮಾತು ಹೇಳಿದರು. ಕಾರ್ಯಕ್ರಮದಲ್ಲಿ ಎಸ್ಸೆಸ್ಸೆಎಲ್ಸಿ ಮತ್ತು ಪಿಯುಸಿಯಲ್ಲಿ ಅತ್ಯಧಿಕ ಅಂಕ ಪಡೆದ 19 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಪಾನೀರ್ ಮೆರ್ಸಿಯಮ್ಮನವರ ಇಗರ್ಜಿಯ…

Read More

UN NETWORKS ಉಳ್ಳಾಲ : `ದರ್ಗಾಕ್ಕೆ ಟೆಂಪೋ, ಲಾರಿಯಲ್ಲಿ ಜನ ಬರುವುದನ್ನು ತಪ್ಪಿಸಲು ಉಳ್ಳಾಲ, ಧರ್ಮಸ್ಥಳ ಮೂಲಕ ಜಾವಗಲ್ ತಲುಪುವ ಸೌಹಾರ್ದ ಸರ್ಕಾರಿ ಬಸ್ ವ್ಯವಸ್ಥೆ ಆರಂಭಿಸುವ ಯೋಜನೆ ರೂಪಿಸಲಾಗಿದ್ದು ಈ ಬಗ್ಗೆ ಸರ್ಕಾರದೊಂದಿಗೆ ಮಾತುಕತೆ ನಡೆಸಿ ಶೀಘ್ರ ಕ್ರಮ ಕೈಗೊಳ್ಳಲಾಗುವುದು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಹೇಳಿದರು. ಉಳ್ಳಾಲ ಜುಮಾ ಮಸೀದಿ ಮತ್ತು ಸಯ್ಯಿದ್ ಮದನಿ ದರ್ಗಾ ಬಳಿ ರಾಜ್ಯ ಸರ್ಕಾರದ ಪ್ರವಾಸೋದ್ಯಮ ಇಲಾಖೆಯ ಅನುದಾನದಲ್ಲಿ ನಿರ್ಮಾಣಗೊಳ್ಳಲಿರುವ ಯಾತ್ರೀ ನಿವಾಸಕ್ಕೆ ಭಾನುವಾರ ಶಂಕುಸ್ಥಾಪನೆ ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಉಳ್ಳಾಲಕ್ಕೆ ಬರುವ ಹೊರ ಊರಿನವರಿಗೆ ಯಾತ್ರಿಕರಿಗೆ ಸಮಸ್ಯೆಯಾಗುವುದನ್ನು ತಡೆಯುವ ಉದ್ದೇಶದಿಂದ ಅತ್ಯುತ್ತಮ ವ್ಯವಸ್ಥೆ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಯಾತ್ರಿ ನಿವಾಸಕ್ಕೆ 75 ಲಕ್ಷ ಅನುದಾನ ಬಿಡುಗಡೆಗೊಳಿಸಲಾಗಿದ್ದು ಅಗತ್ಯವಿದ್ದರೆ ಮುಂದೆ ಮತ್ತೆ 75 ಲಕ್ಷ ಅನುದಾನ ಬಿಡುಗಡೆಗೊಳಿಸಲಾಗುವುದು .ಉಳ್ಳಾಲದಲ್ಲೂ ಮಂಗಳೂರಿನಂತೆ ದೊಡ್ಡ ಕಟ್ಟಡಗಳು ಬರಬೇಕಿದ್ದರೆ ಒಳಚರಂಡಿ, ಕುಡಿಯುವ ನೀರಿನ ಸಮಸ್ಯೆ ಇರಬಾರದು ಎನ್ನುವ ಕಾರಣಕ್ಕೆ ಶಾಶ್ವತ ಪರಿಹಾರಕ್ಕಾಗಿ ಪ್ರಯತ್ನಿಸಲಾಗುತ್ತಿದೆ. ಈಗಾಗಲೇ…

Read More

UN NETWORKS ಉಳ್ಳಾಲ : ಕಲ್ಕಟ್ಟ ಇಲ್ಯಾಸ್ ಜುಮುಅ ಮಸೀದಿಯ ಖಾಝಿಯಾಗಿ ದಕ್ಷಿಣ ಕನ್ನಡ ಜಿಲ್ಲೆ ಸಹಿತ ನೂರಾರು ಮೊಹಲ್ಲಾಗಳ ಖಾಝಿಯಾಗಿರುವ ಖುರ್ರತುಸ್ಸಾದಾತ್ ಅಸ್ಸಯ್ಯಿದ್ ಫಝಲ್ ಕೋಯಮ್ಮ ತಂಙಳ್ ಕೂರತ್ ರವರನ್ನು ಖಾಝಿ ಸ್ವೀಕಾರ ಸಮಾರಂಭ ಕಲ್ಕಟ್ಟ ಮಸೀದಿ ವಠಾರದಲ್ಲಿ ನಡೆಯಿತು. ಇಲ್ಯಾಸ್ ಜುಮಾ ಮಸೀದಿಯ ಖತೀಬ್ ಹಂಝ ಮದನಿ ಮಿತ್ತೂರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು. ಸಮಸ್ತ ಮುಶಾವರ ಉಪಾಧ್ಯಕ್ಷ ಉಸ್ತಾದುಲ್ ಅಸಾತೀದ್ ತಾಜುಶ್ಶರೀಅ ಎಮ್ ಅಲಿ ಕುಂಞೆ ಉಸ್ತಾದ್ ಖಾಝಿ ಸ್ವೀಕಾರ ಸಮಾರಂಭದ ಉಧ್ಘಾಟನೆ ಹಾಗೂ ಖಾಝಿ ಸಮರ್ಪಣೆಯನ್ನು ನೆರವೇರಿಸಿದರು.ಸುರಿಬೈಲ್ ದಾರುಲ್ ಅಶ್-ಅರಿಯ್ಯಾ ಸಂಸ್ಥೆಯ ಮ್ಯಾನೇಜರ್ ಮುಹಮ್ಮದಾಲಿ ಸಖಾಫಿ ಸಂದೇಶ ಭಾಷಣ ಮಾಡಿದರು. ಮಂಜನಾಡಿ ಮುದರ್ರಿಸ್ ಅಹ್ಮದ್ ಬಾಖವಿ, ಕಲ್ಕಟ್ಟ ಇಲ್ಯಾಸ್ ಜುಮಾ ಮಸೀದಿ ಅಧ್ಯಕ್ಷ ಪಿ.ಐ ಮನ್ಸೂರು ರಕ್ಷಿದಿ ,ಕೆ.ಎಚ್ ಇಸ್ಮಾಯಿಲ್ ಸಅದಿ ಕಿನ್ಯ, ಅಬ್ದುಲ್ ಮಜೀದ್ ಹಾಜಿ ಉಚ್ಚಿಲ, ಅಲ್ ಮದೀನ ಮುಹಮ್ಮದ್ ಕುಂಞ ಅಂಜದಿ,ಶರೀಫ್ ಸಅದಿ ಕಿನ್ಯ,ಹಸ್ಸನ್ ಸಅದಿ ಅಸೈ,ಅಬ್ದುರ್ರಝಾಖ್ ಸಅದಿ ವಿಟ್ಲ.ಇಸ್ಹಾಖ್ ಸಅದಿ ಸೆರ್ಕಳ,ಇಲ್ಯಾಲ್…

Read More

UN NETWORKS ಕೊಣಾಜೆ :ಸಮಾಜಕ್ಕೆ ರಚನಾತ್ಮಕವಾದ ಉತ್ತಮ ಕೊಡುಗೆ ನೀಡುವ ಪದವೀಧರರಾಗಿ ಎಂದು ಮಂಗಳೂರು ವಿಶ್ವ ವಿದ್ಯಾನಿಲಯದ ಕುಲಪತಿ ಡಾ. ಪಿ.ಎಸ್. ಯಡಪಡಿತ್ತಾಯ ಯುವ ಇಂಜಿನಿಯರಿಂಗ್ ಪದವೀಧರರಿಗೆ ಕರೆ ನೀಡಿದ್ದಾರೆ. ವಿಶ್ವ ವಿದ್ಯಾನಿಯ ಕಾಲೇಜಿನ ಮಂಗಳ ಸಭಾಂಗಣದಲ್ಲಿಂದು ಬ್ಯಾರೀಸ್ ಇನ್‍ಸ್ಟಿ ಟ್ಯೂಟ್ ಆಫ್ ಟೆಕ್ನಾಲಜಿ (ಬಿಐಟಿ)ಯ 7ನೆಪದವಿ ಪ್ರದಾನ ಸಮಾರಂಭವನ್ನು ಅವ ರು ಇಂದು ಉದ್ಘಾಟಿಸಿ,ಬಿಐಟಿ ಸ್ಮರಣ ಸಂಚಿಕೆ ಬಿಡುಗಡೆಮಾಡಿ ಮಾತನಾಡುತ್ತಿದ್ದರು. ಬಿಐಟಿ ಉತ್ತಮ ಶಿಸ್ತು ಬದ್ಧ ಹಾಗೂ ಶೈಕ್ಷಣಿಕ ಮೌಲ್ಯಗಳೊಂದಿಗೆ ಪ್ರತಿಷ್ಠಿತ ಸಂಸ್ಥೆಯಾಗಿ ಸೈಯ್ಯದ್ ಮುಹಮ್ಮದ್ ಬ್ಯಾರಿಯವರ ನೇತ್ರತ್ವದಲ್ಲಿ ಬೆಳೆದು ಬಂದಿರುವುದು ಅಭಿನಂದನಾರ್ಹ ಎಂದು ಪಿ.ಎಸ್ . ಎಡಪಡಿತ್ತಾಯ ಶುಭಹಾರೈಸಿ ದರು.ವಿದ್ಯಾರ್ಥಿ ಗಳು ಪದವಿಯ ಜೊತೆ ಸಮಾಜದ ಶಾಂತಿ,ಸೌಹಾರ್ದತೆ ಹಾಗೂ ನಮಗೆಲ್ಲಾ ಆಸರೆಯಾಗಿರುವ ಪ್ರಕ್ರತಿಯ ಸಂರಕ್ಷಣೆ ತೊಡಗಿಸಿಕೊಳ್ಳಬೇಕು ಎಂದು ಕರೆ ನೀಡಿದರು. ಸಮಾರಂಭದಲ್ಲಿ ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ನ ನಿರ್ದೇಶಕ ರ ಸಲಹೆಗಾ ರರಾದ ಪ್ರೊ .ಬಿ.ಎನ್. ರಘು ನಂದನ್ ಪ್ರದಾನ ಭಾಷಣಕಾರ ರಾಗಿ ಭಾಗವ ಹಿಸಿದ್ದರು.…

Read More

UN NETWORKS ಉಳ್ಳಾಲ : ತೊಕ್ಕೊಟ್ಟು ಫ್ಲೈಓವರ್ ತುರಾತುರಿಯಲ್ಲಿ ಉದ್ಘಾಟನೆಗೊಳಿಸಿರುವ ಹಿಂದೆ ಷಡ್ಯಂತ್ರ ಇದೆ. ಸಮರ್ಪಕವಾಗಿ ಕಾಮಗಾರಿ ಮುಗಿಯದೆ ಉದ್ಘಾಟನೆ ನಡೆದ ದಿನದಂದೇ ಮೂರು ಅಪಘಾತಗಳು ನಡೆದು ಓರ್ವ ಗಾಯಾಳು ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ರಾಷ್ಟ್ರೀಯ ಹೆದ್ದಾರಿ ಹೋರಾಟ ಸಮಿತಿಯ ಸದಾಶಿವ ಉಳ್ಳಾಲ್ ಆರೋಪಿಸಿದರು. ತೊಕ್ಕೊಟ್ಟುವಿನಲ್ಲಿ ರಾಷ್ಟ್ರೀಯ ಹೆದ್ದಾರಿ ಹೋರಾಟ ಸಮಿತಿ ಆಶ್ರಯದಲ್ಲಿ ನಡೆಸಿದ ಸುದ್ಧಿಗೋಷ್ಠಿಯಲ್ಲಿ ಭಾಗವಹಿಸಿ ಮಾತನಾಡಿದರು. ಫ್ಲೈಓವರ್ ಜನರಿಗೆ ಸುರಕ್ಷಿತವಾಗಿ ಪ್ರಯಾಣಿಸುವ ಉದ್ದೇಶದಿಂದ ಶಾಸಕರು, ಸಂಸದರು ಸಭೆ ನಡೆಸಿ ಸುರಕ್ಷಿತ ಕ್ರಮಗಳನ್ನು ಕೈಗೊಂಡ ಬಳಿಕ ಉದ್ಘಾಟನೆ ನಡೆಸಬೇಕಿತ್ತು. ಆದರೆ ಉಳ್ಳಾಲದತ್ತ ಹೋಗುವ ಸಮಸ್ಯೆ ಗಂಭೀರವಾಗಿದ್ದರೂ ತುರಾತುರಿಯಲ್ಲಿ ಸಂಸದರು ಉದ್ಘಾಟನೆ ನಡೆಸಿದ್ದಾರೆ. ಗುತ್ತಿಗೆದಾರರಿಗೆ ಬಿಲ್ ಪಾವತಿಗೆ ಸಹಕಾರಿಯಾಗುವಂತೆ ಉದ್ಘಾಟಿಸಲಾಯಿತೇ ಅನ್ನುವ ಸಂಶಯವಿದೆ. ಕೇಂದ್ರ ಸರಕಾರದ ಯೋಜನೆಯಾದರೂ, ರಾಜ್ಯ ಸರಕಾರದ ಪಾಲೂ ಕಾಮಗಾರಿಯಲ್ಲಿದೆ. ಜನರ ತೆರಿಗೆ ಹಣದಿಂದ ಕಾಮಗಾರಿ ನಡೆದಿದೆ. ಭೂಸ್ವಾಧೀನ ಪ್ರಕ್ರಿಯೆ ರಾಜ್ಯ ಸರಕಾರದ ಸಹಕಾರದಿಂದ ಆಗಿದೆ ಅನ್ನುವುದನ್ನು ಸಂಸದರು ಗಮನದಲ್ಲಿರಿಸಬೇಕಿದೆ. ನಿರ್ದೇಶಕರ ವರ್ಗ ತಡೆಯದ ಸಂಸದ…

Read More