Author: UllalaVani

Kannada News From Coastal Karnataka

UN NETWORKS ಪಾವೂರು: ದುಷ್ಕರ್ಮಿಗಳಿಂದ ಇತ್ತೀಚೆಗೆ ಹಾನಿಗೀಡಾದ ಪಾವೂರು ಉಳಿಯದ ಸೇತುವೆ ದುರಸ್ತಿಗೆ ಗುರುವಾರ ಪಾವೂರು ಗ್ರಾಮ ಯುವ ಕಾಂಗ್ರೆಸ್ ಸಮಿತಿಯು ನೆರವು ನೀಡಿತು. ಸಮಿತಿಯ ಕಾರ್ಯಕರ್ತರು ಮತ್ತು ಮುಖಂಡರನ್ನು ಒಳಗೊಂಡ ನಿಯೋಗವು ಘಟನೆ ನಡೆದ ಸ್ಥಳಕ್ಕೆ ಭೇಟಿ ಹಲಗೆಯನ್ನು ದೋಣಿ ಮೂಲಕ ಸಾಗಿಸಿತಲ್ಲದೆ, ದುರಸ್ತಿ ಕಾರ್ಯದಲ್ಲೂ ತೊಡಗಿಸಿಕೊಂಡಿತು. ಪಾವೂರು ಉಳಿಯದಿಂದ ಅಡ್ಯಾರ್‌ಗೆ ಸಂಪರ್ಕ ಕಲ್ಪಿಸುವ ಸಲುವಾಗಿ ಸುಮಾರು 18 ಲಕ್ಷ ರೂ. ವೆಚ್ಚದಲ್ಲಿ ಸ್ಥಳೀಯ ಇನ್‌ಫೆಂಟ್ ಜೀಸಸ್ ಚರ್ಚ್‌ನ ಧರ್ಮಗುರು ಮತ್ತು ಪಾಲನಾ ಸಮಿತಿ ಹಾಗೂ ಸ್ಥಳೀಯರು ಸೇತುವೆಯನ್ನು ಕೆಲವು ದಿನಗಳ ಹಿಂದೆ ನಿರ್ಮಿಸಿ ಸರಕಾರದ ಗಮನ ಸೆಳೆದಿದ್ದರು. ಈ ಮಧ್ಯೆ ಸಮೀಪದಲ್ಲೇ ನಡೆಯುವ ಮರಳುಗಾರಿಕೆ ಅಡ್ಡೆಗೆ ಕಂದಾಯ ಮತ್ತು ಗಣಿ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಲು ಪಾವೂರು ಉಳಿಯ ನಿವಾಸಿಗಳೇ ಕಾರಣ ಎಂದು ಶಂಕಿಸಿದ್ದ ದುಷ್ಕರ್ಮಿಗಳು ಸೇತುವೆಗೆ ಭಾಗಶಃ ಹಾನಿಗೈಯುವ ಮೂಲಕ ದ್ವೇಷ ಸಾಧಿಸಿದ್ದರು. ಸುದ್ದಿ ತಿಳಿದ ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದರಲ್ಲದೆ,…

Read More

UN NETWORKS ಹರೇಕಳ: ಹರೇಕಳ ಗ್ರಾಮಸ್ಥರ ಬಹುಕಾಲದ ಬೇಡಿಕೆಯಾಗಿದ್ದ ಸರ್ಕಾರಿ ಬಸ್ ಸಂಚಾರ ಬೇಡಿಕೆ ಈಡೇರುವ ಲಕ್ಷಣ ಗೋಚರಿಸುತ್ತಿದೆ. ಗುರುವಾರ ಗ್ರಾಮ ಪಂಚಾಯಿತಿ ನಿಯೋಗ ಆರ್‍ಟಿಓ ಹಾಗೂ ಕೆಎಸ್‍ಆರ್‍ಟಿಸಿ ಅಧಿಕಾರಿಗಳನ್ನು ಭೇಟಿ ಮಾಡಿ ನೀಡಿರುವ ಮನವಿಗೆ ಸೂಕ್ತ ಭರವಸೆ ದೊರಕಿದೆ. ಹರೇಕಳ ಗ್ರಾಮಕ್ಕೆ ಕೆಲವು ಬಸ್ಸುಗಳ ಪರವಾನಿಗೆ ಇದ್ದರೂ ಅದ್ಯಾವುದೂ ಸಂಚರಿಸುತ್ತಿಲ್ಲ. ಸ್ಟೇಟ್‍ಬ್ಯಾಂಕ್‍ಗೆ ಎರಡು ಬಸ್ಸುಗಳ ಪರವಾನಿಗೆ ಇದ್ದರೂ, ಈ ಬಸ್ಸುಗಳು ಮನಬಂದಂತೆ ಸಂಚರಿಸುತ್ತವೆ. ಅಲ್ಲದೆ ಸಂಪೂರ್ಣ ಗುಜರಿಯಾಗಿದ್ದು ಪ್ರಯಾಣಿಕರು ಜೀವಭಯದಲ್ಲಿ ಹೋಗಬೇಕಾಗಿದೆ ಎಂದು ಆರೋಪಿಸಿ ಡಿವೈಎಫ್‍ಐ ಸತತ ಪ್ರತಿಭಟನೆ ನಡೆಸಿದ್ದರೆ, ಎರಡು ಗ್ರಾಮಸಭೆಗಳೂ ಇದೇ ಕಾರಣಕ್ಕೆ ರದ್ದುಗೊಂಡಿದ್ದವು. ಇದಲ್ಲದೆ ಕಳೆದ ತಿಂಗಳು ಒಂದು ಬಸ್ಸಿಗೆ ತಪಾಸಣೆ ಇದ್ದ ಹಿನ್ನೆಲೆಯಲ್ಲಿ ಹಿಂದಿನ ದಿನ ರಾತ್ರಿ ಬಳಿದ ಪೈಂಟು ಮರುದಿವಸ ಪ್ರಯಾಣಿಕರ ಮೈಮೇಲೆ ಮೆತ್ತಿಕೊಂಡ ಹಿನ್ನೆಲೆಯಲ್ಲಿ ಕೊಣಾಜೆ ಪೊಲೀಸರು ಬಸ್ಸನ್ನು ವಶಕ್ಕೆ ಪಡೆದಿದ್ದರು. ಗ್ರಾ.ಪಂ. ನಿಯೋಗದಿಂದ ಮನವಿ ಗ್ರಾಮಸ್ಥರ ಬೇಡಿಕೆಗೆ ಅನುಗುಣವಾಗಿ ಈ ಹಿಂದೆ ಎರಡು ಬಾರಿ ಗ್ರಾಮ ಪಂಚಾಯಿತಿ, ಅಧಿಕಾರಿಗಳಿಗೆ ಮಾಡಿದ…

Read More

UN NETWORKS ತೊಕ್ಕೊಟ್ಟು : ತೊಕ್ಕೊಟ್ಟು ಚೆಂಬುಡ್ಡೆಯಲ್ಲಿ ಹಲವು ವರ್ಷಗಳಿಂದ ಕಾರ್ಯಾಚರಿಸುತ್ತಿದ್ದ ಅನಧಿಕೃತ ಮೀನಿನ ಅಂಗಡಿಗಳನ್ನು ಲೋಕೋಪಯೋಗಿ ಇಲಾಖೆ ಗುರುವಾರ ತೆರವುಗೊಳಿಸಿದೆ. ಐದಕ್ಕೂ ಅಧಿಕ ಅಂಗಡಿಗಳು ಚೆಂಬುಗುಡ್ಡೆ ರಸ್ತೆಬದಿಯಲ್ಲಿ ಕಾರ್ಯಾಚರಿಸುತಿತ್ತು. ಇದರಿಂದ ವಾಹನ ಸವಾರರಿಗೆ ಅಡ್ಡಿಯುಂಟಾಗುತ್ತಲೇ ಇತ್ತು. ಸಾರ್ವಜನಿಕರು ಪೊಲೀಸರು, ಸ್ಥಳಿಯಾಡಳಿತಕ್ಕೆ ದೂರು ನೀಡಿದರೂ, ಯಾವುದೇ ಸ್ಪಂಧನೆ ದೊರೆತಿರಲಿಲ್ಲ. ಲೋಕೋಪಯೋಗಿ ಇಲಾಖೆಯವರು ಜೆಸಿಬಿ ಮೂಲಕ ಸ್ಥಳಕ್ಕಾಗಮಿಸಿ ಎಲ್ಲಾ ಅಂಗಡಿಗಳನ್ನು ತೆರವುಗೊಳಿಸಿದ್ದಾರೆ.

Read More

UN NETWORKS ಉಳ್ಳಾಲ: ಮರದಿಂದ ಬಿದ್ದು ಗಂಭೀರ ಸ್ಥಿತಿಯಲ್ಲಿದ್ದ ಹಿಂದೆ ಖಾಸಗಿ ಬಸ್ಸಿನ ನಿರ್ವಾಹಕರು ಆಗಿದ್ದ ಕುತ್ತಾರು ಮುಂಡೋಳಿ ನಿವಾಸಿ ಗಣೇಶ್ ಕುಮಾರ್ (39) ಗುರುವಾರ ನಸುಕಿನ ಜಾವ ದೇರಳಕಟ್ಟೆ ಕೆ.ಎಸ್ ಹೆಗ್ಡೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಗಣೇಶ್ ಕುಮಾರ್ ಅವರ ಕಣ್ಣನ್ನು ಕುಟುಂಬಸ್ಥರು ದಾನ ಮಾಡುವ ಮೂಲಕ ಸಾವಿನಲ್ಲಿ ಸಾರ್ಥಕತೆ ಮೆರೆದಿದ್ದಾರೆ. ಫೆ.2 ಶನಿವಾರ ಮುನ್ನೂರು ಸುಭಾಷನಗರ ಸಮೀಪ ಸೆಂಟ್ರಿಂಗ್ ಕೆಲಸ ನಿರ್ವಹಿಸುತ್ತಿದ್ದರು. ಮಧ್ಯಾಹ್ನ ಊಟದ ಸಮಯದಲ್ಲಿ ಕೆಲಸ ನಿರ್ವಹಿಸುವ ಸ್ಥಳದ ಎದುರು ಮಾವಿನ ಮರದಲ್ಲಿ ಮಾವಿನಕಾಯಿ ಕೀಳಲು ಮರ ಏರಿದ್ದರು. ಆದರೆ ಮರದ ಗೆಲ್ಲು ಮುರಿದು ಗಣೇಶ್ ಕಳೆಗೆ ಇದ್ದ ಕಲ್ಲಿನ ಮೇಲೆ ಬಿದ್ದು ಗಂಭೀರ ಸ್ಥಿತಿಯಲ್ಲಿ ದೇರಳಕಟ್ಟೆ ಆಸ್ಪತ್ರೆಗೆ ದಾಖಲಿಸಲ್ಪಟ್ಟಿದ್ದರು. ಅಲ್ಲಿ ಇಂದು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಹಲವು ವರ್ಷಗಳಿಂದ ಖಾಸಗಿ ಬಸ್ಸುಗಳಾದ ಮಹೇಶ್ ಟ್ರಾವೆಲ್ಸ್, ದುರ್ಗಾಲಕ್ಷ್ಮೀ ಟ್ರಾವೆಲ್ಸ್ ಹಾಗೂ ಇನ್ನಿತರ ಬಸ್ಸುಗಳಲ್ಲಿ ನಿರ್ವಾಹಕರಾಗಿದ್ದರು. ಕಳೆದೆರಡು ವರ್ಷಗಳಿಂದ ಸೆಂಟ್ರಿಂಗ್ ವೃತ್ತಿಯನ್ನು ನಿರ್ವಹಿಸುತ್ತಿದ್ದರು. ಮೃತರು ಶಾಲೆಗೆ ಹೋಗುತ್ತಿರುವ…

Read More

UN NETWORKS ಹರೇಕಳ: ಹರೇಕಳ ಆಲಡ್ಕ ಬದ್ರಿಯ ಜುಮಾ ಮಸೀದಿಯ ಮಾಜಿ ಅಧ್ಯಕ್ಷ ಮುಹಮ್ಮದ್ ಉಂಬುದ (70) ನಿಧನರಾದರು. ಅವರು ಇಬ್ಬರು ಪುತ್ರರು, ಇಬ್ಬರು ಪುತ್ರಿಯರು ಮತ್ತು ಅಪಾರ ಬಂಧುಬಳಗವನ್ನು ಅಗಲಿದ್ದಾರೆ.

Read More

UN NETWORKS ಉಳ್ಳಾಲ: ಯುವಕನೋರ್ವ ಕಟ್ಟಡದಿಂದ ಬಿದ್ದು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಕಾಪಿಕಾಡ್ ಎಂಬಲ್ಲಿ ಇಂದು ಬೆಳಗ್ಗೆ ಬೆಳಕಿಗೆ ಬಂದಿದೆ. ಅಂಬಿಕಾ ರೋಡ್ ನಿವಾಸಿ ರಿಕ್ಷಾ ಚಾಲಕ ವಿಜಯ್ ಎಂಬವರ ಪುತ್ರ ನಿಶಾನ್(26) ಮೃತಪಟ್ಟ ಯುವಕನಾಗಿದ್ದಾರೆ.ಕಾಪಿಕಾಡ್‌ನ ಭಗವತಿ ಕ್ಲಾಂಪ್ಲೆಕ್ಸ್ ಎಂಬ ಕಟ್ಟಡದಿಂದ ಬಿದ್ದು ನಿಶಾನ್ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ. ಭಗವತಿ ಕಾಂಪ್ಲೆಕ್ಸ್‌ನ ಪಕ್ಕದ ಮನೆಯೊಂದರ ಅಂಗಳದಲ್ಲಿ ನಿಶಾನ್ ಅವರ ಮೃತದೇಹ ಪತ್ತೆಯಾಗಿದೆ.ಮೃತದೇಹದ ಕೈಯೊಂದು ಮುರಿದಿದ್ದರೆ, ತಲೆ ಸೇರಿದಂತೆ ಬೇರೆಲ್ಲೂ ಗಂಭೀರ ಗಾಯಗಳು ಗೋಚರಿಸುತ್ತಿಲ್ಲ. ಇವರ ಸಾವಿನ ಬಗ್ಗೆ ಸ್ಥಳೀಯರು ಅನುಮಾನ ವ್ಯಕ್ತಪಡಿಸಿದ್ದಾರೆ. ಈ ನಡುವೆ ನಿಶಾನ್ ಮಾದಕ ವ್ಯಸನಿಯಾಗಿದ್ದು, ಮಾನಸಿಕ ಖಿನ್ನತೆಗೆ ಒಳಗಾಗಿದ್ದರು ಎಂದು ಹೇಳಲಾಗುತ್ತಿದೆ. ಘಟನಾ ಸ್ಥಳಕ್ಕೆ ಆಗಮಿಸಿದ ಉಳ್ಳಾಲ ಠಾಣಾ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ತನಿಖೆ ಮುಂದುವರಿದಿದೆ.

Read More

UN NETWORKS ಕೊಣಾಜೆ: ಸರ್ಕಾರಿ ಶಾಲೆಯೆಂಬ ಕೀಳರಿಮೆಯನ್ನು ಬಿಟ್ಟು ಸರ್ಕಾರದ ಸೌಲಭ್ಯಗಳನ್ನು ಬಳಸಿಕೊಂಡು ವಿದ್ಯಾರ್ಥಿಗಳು ದೇಶದ ಉತ್ತಮ ಪ್ರಜೆಯಾಗಿ ರೂಪುಗೊಳ್ಳುವುದರಿಂದಿಗೆ ಸಮಾಜದ ಸಂಪತ್ತಾಗಬೇಕಿದೆ ಎಂದು ಕೊಣಾಜೆ ಪಂಚಾಯಿತಿ ಅಧ್ಯಕ್ಷರಾದ ನಝರ್ ಷಾ ಪಟ್ಟೋರಿ ಅವರು ಅಭಿಪ್ರಾಯಪಟ್ಟರು. ಅವರು ಕೊಣಾಜೆ ಪದವು ಸರ್ಕಾರಿ ಪ್ರೌಢಶಾಲೆಯಲ್ಲಿ ಮಂಗಳವಾರ ವಿದ್ಯಾರ್ಥಿಗಳಿಗೆ ಸರ್ಕಾರ ವತಿಯಿಂದ ಸಿಗುವ ಸೈಕಲನ್ನು ವಿತರಿಸಿ ಮಾತನಾಡಿದರು.ಹಿಂದೆ ಸರ್ಕಾರಿ ಶಾಲೆಗಳಲ್ಲಿ ಕಲಿತವರು ಇಂದು ದೇಶದಲ್ಲಿ ಉತ್ತಮ ಗೌರವಾನ್ವಿತ ಹುದ್ದೆಯೊಂದಿಗೆ ಸೇವೆ ಸಲ್ಲಿಸುತ್ತಿದ್ದಾರೆ. ಆದ್ದರಿಂದ ವಿದ್ಯಾರ್ಥಿಗಳು ಮಾತ್ರವಲ್ಲದೆ ಪೋಷಕರು ಕೂಡಾ ಸರ್ಕಾರಿ ಶಾಲೆಯ ಬಗ್ಗೆ ಇರುವ ಕೀಳರಿಮೆಯನ್ನು ಬಿಟ್ಟು ಪ್ರೋತ್ಸಾಹಿಸುವ ಕಾರ್ಯ ಮಾಡಬೇಕು ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಉದ್ಯಮಿ ಅಬ್ದುಲ್ ನಾಸೀರ್ ಕೆ.ಕೆ, ಕೊಣಾಜೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಲಲಿತಾ ಎಸ್ ರಾವ್, ಪಂಚಾಯಿತಿ ಮಾಜಿ ಉಪಾಧ್ಯಕ್ಷ ಅಚ್ಯುತಗಟ್ಟಿ ಕೊಣಾಜೆ, ಶಾಲಾ ಮುಖ್ಯೋಪಾಧ್ಯಾಯಿನಿ ಮೀನಾ ಗಾಂವ್ಕರ್, ದೈಹಿಕ ಶಿಕ್ಷಕ ರಾಜೀವ್ ನಾಯ್ಕ್, ಎಸ್‍ಡಿಎಂಸಿ ಅಧ್ಯಕ್ಷ ಹಸೈನಾರ್ ಮೊದಲಾದವರು ಉಪಸ್ಥಿತರಿದ್ದರು.

Read More

UN NETWORKS ದೇರಳಕಟ್ಟೆ: ದೇರಳಕಟ್ಟೆಯ ಯೆನೆಪೋಯ ಪರಿಗಣಿಸಲಾದ ವಿಶ್ವವಿದ್ಯಾಲಯದ ಯೆನೆಪೋಯ ನರ್ಸಿಂಗ್ ಕಾಲೇಜಿನ ವೈದ್ಯಕೀಯ ಹಾಗೂ ಶಸ್ತ್ರ ಚಿಕಿತ್ಸಾ  ಶುಶ್ರೂಷಾ ವಿಭಾಗ ಹಾಗೂ ಪ್ರಸೂತಿ ಹಾಗೂ ಸ್ತ್ರೀ ರೋಗ ಶುಶ್ರೂಷಾ ವಿಭಾಗದ ವತಿಯಿಂದ ವಿಶ್ವ ಕ್ಯಾನ್ಸರ್ ದಿನದ ಪ್ರಯುಕ್ತ ವಿಚಾರಗೋಷ್ಠಿಯನ್ನು ಸೋಮವಾರ ಆಯೋಜಿಸಲಾಯಿತು. ಯೇನೆಪೊಯ ವಿಶ್ವವಿದ್ಯಾಲಯದ ಕುಲಸಚಿವ ಡಾ. ಗಂಗಾಧರ ಸೋಮಯಾಜಿ, ಯೇನೆಪೊಯ ನರ್ಸಿಂಗ್ ಕಾಲೇಜು ಪ್ರಾಂಶುಪಾಲೆ ಡಾ. ಲೀನಾ ಕೆ.ಸಿ. , .ವೈದ್ಯಕೀಯ ಹಾಗೂ ಶಸ್ತ್ರ ಚಿಕಿತ್ಸ ಶುಶ್ರೂಷಾ ವಿಭಾಗದ ಮುಖ್ಯಸ್ಥ ಡಾ. ಶಶಿಕುಮಾರ್ ಜವದಗಿ, ಪ್ರಸೂತಿ ಹಾಗು ಸ್ತ್ರೀರೋಗ ಶುಶ್ರೂಷಾ ವಿಭಾಗದ ಮುಖ್ಯಸ್ಥೆ ಜನೆಟ್ ಮಿರಾಂಡಾ ಕಾರ್ಯಕ್ರಮ ಉದ್ಘಾಟಿಸಿದರು.ಗಿರೀಶ್ ಜಿ ಆರ್, ಜನೆಟ್ ಮಿರಾಂಡಾ ಹಾಗು ಡಾ. ಗುರುಪ್ರಸಾದ್ ಭಟ್ ಸಂಪನ್ಮೂಲ ವ್ಯಕ್ತಿ ಸ್ಥಾನದಿಂದ ಅರ್ಬುದ ರೋಗ ಹಾಗೂ ಚಿಕಿತ್ಸಾ ವಿಧಾನ ಮತ್ತು ತಡೆಗಟ್ಟುವಿಕೆ ಹಾಗೂ ದಾದಿಯರ ಪಾತ್ರದ ಬಗ್ಗೆ ಮಾಹಿತಿ ನೀಡಿದರು.ಸಂತೋಷ್ ಸ್ವಾಗತಿಸಿದರು. ವಿನಿತಾ ಡಿಸೋಜ ವಂದಿಸಿದರು.

Read More

UN NETWORKS ಮುಡಿಪು: ಮುಡಿಪು ಸಮೀಪದ ಸಾಂಬಾರ್‍ತೋಟ ಬಳಿ ಬಸ್ಸೊಂದು ಬ್ರೇಕ್ ಪೈಲ್ ಆಗಿ ಕಾರು, ಬಸ್ಸು ಹಾಗೂ ವಿದ್ಯುತ್ ಕಂಬಗಳಿಗೆ ಡಿಕ್ಕಿ ಹೊಡೆದ ಘಟನೆ ಮಂಗಳವಾರ ಸಂಭವಿಸಿದೆ. ಮಂಗಳೂರಿನಿಂದ ಮುಡಿಪು ಮಾರ್ಗವಾಗಿ ಬಿ.ಸಿ.ರೋಡ್‍ಗೆ ಸಂಚರಿಸುವ ಬಸ್ಸೊಂದು ಸಾಂಬಾರ್‍ತೋಟ ಬಳಿ ಬ್ರೇಕ್ ನಿಯಂತ್ರಣ ತಪ್ಪಿದ ಪರಿಣಾಮ ಮುಂಭಾಗದಲ್ಲಿ ಸಂಚರಿಸುತ್ತಿದ್ದ ಸರ್ಕಾರಿ ಬಸ್‍ಗೆ ಹಾಗೂ ಇನ್ನೋವಾ ಕಾರಿಗೆ ಡಿಕ್ಕಿ ಹೊಡೆದಿದೆ. ಬಳಿಕ ರಸ್ತೆಯ ಎಡಬದಿಗೆ ಸಂಚರಿಸಿ ರಸ್ತೆಯ ಬದಿಯ ವಿದ್ಯುತ್ ಕಂಬಗಳಿಗೂ ಡಿಕ್ಕಿ ಹೊಡೆದಿದೆ. ಘಟನೆಯಿಂದ ವಿದ್ಯುತ್ ಕಂಬಗಳು ಮುರಿದಿದ್ದು ಬಸ್ಸು ಹಾಗೂ ಕಾರು ಜಖಂಗೊಂಡಿದೆ.

Read More

UN NETWORKS ಹರೇಕಳ: ಹರೇಕಳ ಶ್ರೀ ರಾಮಕೃಷ್ಣ ಪ್ರೌಢಶಾಲೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ದ.ಕ. ಹಾಗೂ ಮಂಗಳೂರಿನ ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್‍ನ ಜಂಟಿ ಆಶ್ರಯದಲ್ಲಿ ಎಸ್‍ಎಸ್‍ಎಲ್‍ಸಿಯ ಮಕ್ಕಳಿಗೆ ವಿಷಯವಾರು ತರಬೇತಿ ನಡೆಯಿತು. ತರಬೇತಿ ಶಿಬಿರ ಉದ್ಘಾಟಿಸಿ ಮಾತನಾಡಿದ ಟ್ಯಾಲೆಂಟ್ ರಿಸರ್ಚ್ ಫೌಂಡೇಷನ್‍ನ ಸಲಹೆಗಾರರಾದ ರಫೀಕ್ ಮಾಸ್ಟರ್ ಪರೀಕ್ಷೆ ಎಂದ ತಕ್ಷಣ ಭಯ ಪಡುವ ಅಗತ್ಯವಿಲ್ಲ. ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಪಾಸಾಗಲು ಪೂರ್ವಸಿದ್ಧತೆ ಬಹಳ ಮುಖ್ಯ. ಓದುವಾಗ ಅರ್ಥಮಾಡಿಕೊಂಡು ಓದುವುದು ಮತ್ತು ಅರ್ಥವಾಗದೇ ಇರುವುದನ್ನು ಹಿಂಜರಿಕೆ ಇಲ್ಲದೆ ಅಧ್ಯಾಪಕರಲ್ಲಿ ಕೇಳುವುದು ಕೂಡ ಅಷ್ಟೇ ಮುಖ್ಯ. ಮುಂದಿನ ಯಾವುದೇ ವಿದ್ಯಾಭ್ಯಾಸಕ್ಕಾಗಲಿ, ವೃತ್ತಿಗಾಗಲೀ ಎಸ್.ಎಸ್.ಎಲ್.ಸಿ ಪಾಸಾಗಲೇ ಬೇಕಾಗುತ್ತದೆ. ಹಾಗಾಗಿ ಇದೊಂದು ಜೀವನವನ್ನು ರೂಪಿಸುವ ಪರೀಕ್ಷೆಯಾಗಿದೆ ಎಂದರು. ಬಳಿಕ ನಡೆದ ವಿಷಯವಾರು ತರಬೇತಿಯಲ್ಲಿ ದೇರಳಕಟ್ಟೆ ಸರಕಾರಿ ಪ್ರೌಢಶಾಲೆಯ ಗಣಿತ ಅಧ್ಯಾಪಕಿ ನಯನ, ಪಾವೂರು ಸರಕಾರಿ ಪ್ರೌಢಶಾಲೆಯ ವಿಜ್ಞಾನ ಶಿಕ್ಷಕ ಕರುಣಾ ಹಾಗೂ ದೇರಳಕಟ್ಟೆ ಶಾಲೆಯ ವಿಜಯ ತರಬೇತಿ ನೀಡಿದರು.ಮುಖ್ಯ ಶಿಕ್ಷಕ ಕೆ. ರವೀಂದ್ರ ರೈ ಸ್ವಾಗತಿಸಿದರು.ದೈಹಿಕ ಶಿಕ್ಷಕ ತ್ಯಾಗಂ…

Read More