UN NETWORKS ಕೊಣಾಜೆ : ನಮ್ಮ ಶೈಕ್ಷಣಿಕ ವ್ಯವಸ್ಥೆಯೂ ಕೂಡಾ ಕಾಲಕ್ಕೆ ಅನುಗುಣವಾಗಿ ಬದಲಾವಣೆಯನ್ನು ಕಂಡುಕೊಂಡು ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡಬೇಕು. ಪ್ರಸ್ತುತ ವಿದ್ಯಾರ್ಥಿಗಳಿಗೆ ಹಲವು ಅವಕಾಶಗಳಿದ್ದು ಸದುಪಯೋಗ ಪಡಿಸಿಕೊಳ್ಳಬೇಕು. ಶೈಕ್ಷಣಿಕ ಜೀವನದಲ್ಲಿ ನಾವಿಡುವ ಹೆಜ್ಜೆ ಮತ್ತು ಆಯ್ಕೆಗಳ ಬಗ್ಗೆ ಹೆಚ್ಚಿನ ಗಮನ ನೀಡುವುದರೊಂದಿಗೆ ಮಾಹಿತಿ ಪಡೆದುಕೊಂಡು ಉತ್ತಮ ಭವಿಷ್ಯವನ್ನು ಕಂಡುಕೊಳ್ಳಬೇಕು ಎಂದು ನಿಟ್ಟೆ ಪರಿಗಣಿಸಲಾಗಿರುವ ವಿಶ್ವವಿದ್ಯಾಲಯದ ಸಹ ಕುಲಪತಿ ಪ್ರೊ.ಎಂ.ಎಸ್. ಮೂಡಿತ್ತಾಯ ಅಭಿಪ್ರಾಯಪಟ್ಟರು. ಮಂಗಳೂರು ವಿಶ್ವವಿದ್ಯಾಲಯದ ಉಪನ್ಯಾಸ ಸಭಾಂಗಣದಲ್ಲಿ ಶುಕ್ರವಾರ ಓಪನ್ ಹೌಸ್ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಶಿಕ್ಷಣ ಕ್ಷೇತ್ರದಲ್ಲಿ ಬಹಳಷ್ಟು ಬದಲಾವಣೆಯಾಗಿದೆ. ಮಂಗಳೂರು ವಿಶ್ವವಿದ್ಯಾಲಯವು ಶೈಕ್ಷಣಿಕ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಿದ್ದು ಓಪನ್ ಹೌಸ್ ನಂತಹ ಕಾರ್ಯಕ್ರಮಗಳು ವಿದ್ಯಾರ್ಥಿಗಳಿಗೆ ಅವಕಾಶ ಮತ್ತು ಆಯ್ಕೆಗಳ ಬಗ್ಗೆ ಹೆಚ್ಚಿನ ಮಾಹಿತಿ ಒದಗಿಸಿಕೊಡುವಲ್ಲಿ ಸಹಕಾರಿಯಾಗಿದೆ ಎಂದರು. ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಮಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ. .ಪಿ.ಎಸ್.ಯಡಪಡಿತ್ತಾಯ ಹಿಂದಿನ ಕಾಲದಲ್ಲಿ ಶೈಕ್ಷಣಿಕ ವಿಷಯಗಳ ಆಯ್ಕೆ ಮಾಡಿಕೊಳ್ಳುವ ಬಗ್ಗೆ ಸರಿಯಾದ ಮಾಹಿತಿಯೂ…
Author: UllalaVani
UN NETWORKS ಮಂಗಳೂರು: ಕೋಟೆಕಾರ್ ಹಿದಾಯತ್ ನಗರ ಇಹ್ಸಾನುಲ್ ವಹ್ಹಾಬ್ ಅಲ್ ಮದ್ರಸತುಲ್ ಹಿದಾಯ ಮದ್ರಸ ಪ್ರಾರಂಭೋತ್ಸವ ಕಾರ್ಯಕ್ರಮ ಇತ್ತೀಚೆಗೆ ಜರಗಿತು. NS ಉಮರ್ ಮಾಸ್ಟರ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಹು ಅಹ್ಮದ್ ಕಬೀರ್ ಸಅದಿ ಉಳ್ಳಾಲ ದುವಾ ನೆರವೇರಿಸಿದರು ಮದ್ರಸ ಸದರ್ ಮುಅಲ್ಲಿಂ ಯು.ಎ.ಅಬ್ದುಲ್ ಅಝೀಝ್ ಸಖಾಫಿ ಸಾಂದರ್ಭಿಕ ಮಾತುಗಳನ್ನಾಡಿದರು ಬಹು ಅಶ್ರಫ್ ಅಮ್ಜದಿ ಕಾರ್ಯಕ್ರಮ ನಿರೂಪಣೆಗೈದು ಎಸ್ಸೆಸ್ಸೆಫ್ ಅಧ್ಯಕ್ಷರಾದ ಬಹು ಸಬೀರ್ ಅಶ್ಅರಿ ಬಾಗವಹಿಸಿದರು ಹಲವಾರು ಮಂದಿ ಭಾಗವಹಿಸಿದರು ಕಾರ್ಯಕ್ರಮದಲ್ಲಿ ಸಿಹಿ ವಿತರಿಸಲಾಯಿತು. ಮದ್ರಸವನ್ನು ಅಲಂಕಾರ ಗೊಳಿಸಿ ಮಕ್ಕಳನ್ನು ವಿಷೇಷ ರೀತಿಯಲ್ಲಿ ಸ್ವಾಗತಿಸಲಾಯಿತು.
UN NETWORKS ದೇರಳಕಟ್ಟೆ : ದೇರಳಕಟ್ಟೆಯ ಯೇನೆಪೊಯ ದಂತ ವಿದ್ಯಾಲಯದ ಓರಲ್ ಮೆಡಿಸಿನ್ ಮತ್ತು ರೇಡಿಯೋಲೋಜಿ ವಿಭಾಗದಲ್ಲಿ ಜಿಲ್ಲೆಯ ಮೊದಲ ತಂಬಾಕು ಸೇವನೆ ನಿಲುಗಡೆ ಕೇಂದ್ರವನ್ನು ಶುಕ್ರವಾರ ಯೇನೆಪೊಯ ದಂತ ವಿದ್ಯಾಲಯದಲ್ಲಿ ಉದ್ಘಾಟಿಸಲಾಯಿತು. ಕೇಂದ್ರವನ್ನು ಯೇನೆಪೊಯ ದಂತ ವಿದ್ಯಾಲಯದ ಪ್ರಾಂಶುಪಾಲ ಡಾ.ಬಿ.ಎಚ್. ಶ್ರೀಪತಿ ರಾವ್ ತಂಬಾಕು ಸೇವನೆಯ ಅಭ್ಯಾಸವನ್ನು ತಡೆಗಟ್ಟುವ ಪ್ರಯತ್ನವನ್ನು ಮಾಡಲು ಈ ವಿಭಾಗವು ವಿಧ್ಯಾರ್ಥಿಗಳಿಗೆ, ರೋಗಿಗಳಿಗೆ ಹಾಗೂ ಸಾಮಾನ್ಯ ಜನರಿಗೆ ಸಹಾಯ ಮಾಡುತ್ತದೆ ಎಂದು ನುಡಿದರು.
UN NETWORKS ನಿಟ್ಟೆ : ರಕ್ತದ ಆವಶ್ಯಕತೆಯನ್ನು ಮನಗಂಡು ರಕ್ತದಾನದಲ್ಲಿ ಎಲ್ಲರೂ ತೊಡಗಿಸುಕೊಳ್ಳುವುದು ಹಾಗೂ ಜಾಗೃತಿ ಮೂಡಿಸುವಂತಹ ಕಾರ್ಯ ಪ್ರಸ್ತುತ ಕಾಲದಲ್ಲಿ ಅಗತ್ಯ ಎಂದು ಮಂಗಳೂರು ದಕ್ಷಿಣ ಉಪ ವಿಭಾಗ ಸಹಾಯಕ ಪೊಲೀಸ್ ಆಯುಕ್ತ ರಾಮರಾವ್ ಅಭಿಪ್ರಾಯಪಟ್ಟರು. ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ , ಪೊಲೀಸ್ ಇಲಾಖೆಯ ದಕ್ಷಿಣ ಉಪ ವಿಭಾಗ ಹಾಗೂ ಬ್ಲಡ್ ಬ್ಯಾಂಕ್ ಆಶ್ರಯದಲ್ಲಿ ದೇರಳಕಟ್ಟೆ ಕ್ಷೇಮ ಆಸ್ಪತ್ರೆಯ ಚಿಂತನ ಸಭಾಂಗಣದಲ್ಲಿ ಶುಕ್ರವಾರ ಜರುಗಿದ ವಿಶ್ವ ರಕ್ತದಾನಿಗಳ ದಿನಾಚರಣೆಯನ್ನು ಉದ್ದೇಶಿಸಿ ಮಾತನಾಡಿದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕ್ಷೇಮ ಡೀನ್ ಡಾ. ಪ್ರಕಾಶ್ ಮಾತನಾಡಿ ರಕ್ತ ಮಾರುಕಟ್ಟೆಯಲ್ಲಿ ದೊರೆಯುವಂತದ್ದಲ್ಲ, ದಾನದಿಂದಲೇ ನೀಡಬೇಕಾಗಿದೆ. ಜೀವನ ಉಳಿಸಲು ನೀಡುವ ಉಡುಗೊರೆಯಾಗಿರುತ್ತದೆ. ಹಿಂದೆ ವೈದ್ಯರು, ಸಿಬ್ಬಂದಿ ರಕ್ತ ಒದಗಿಸುವಂತಹ ವಾತಾವರಣವಿತ್ತು. ಈಗ ಕಾಲ ಬದಲಾವಣೆಯಾಗಿದೆ. ರಕ್ತದ ಬಣ್ಣ ಒಂದೇ ಬೇಧವಿಲ್ಲದೆ ಎಲ್ಲರೂ ಮಾಡಬೇಕಾದ ಮಹತ್ಕಾರ್ಯ ಎಂದರು. ಕಾರ್ಯಕ್ರಮದಲ್ಲಿ ಕಳೆದ 24ವರ್ಷಗಳಿಂದ ರಕ್ತದಾನ ಶಿಬಿರ, ಆರೋಗ್ಯ ಶಿಬಿರವನ್ನು ನಡೆಸಿಕೊಂಡು ಬರುತ್ತಿರುವ, ರಾಜ್ಯ ಪ್ರಶಸ್ತಿ ಪುರಸ್ಕೃತ…
UN NETWORKS ಮಂಗಳೂರು : ವಿಶ್ವ ರಕ್ತದಾನಿಗಳ ದಿನದ ಅಂಗವಾಗಿ ಚೂಂತಾರು ಸರೋಜಿನಿ ಭಟ್ ಪ್ರತಿಪ್ಠಾನ ಆಶ್ರಯದಲ್ಲಿ ಮಂಗಳೂರಿನ ಜಿಲ್ಲಾ ವೆನ್‍ಲಾಕ್ ಆಸ್ಪತ್ರೆಯ ಸಹಕಾರದೊಂದಿಗೆ ಹೊಸಂಗಡಿಯ ಸುರಕ್ಷಾ ದಂತ ಚಿಕಿತ್ಸಾಲಯದಲ್ಲಿ ಶುಕ್ರವಾರ ನಡೆಯಿತು. ಶಿಬಿರವನ್ನು ಉದ್ಘಾಟಿಸಿದ ಸಾಮಾಜಿಕ ಮುಂದಾಳು ಗೊಪಾಲ ಶೆಟ್ಟಿ ಅರಿಬೈಲು ಮಾತನಾಡಿ ರಕ್ತದಾನ ಬಹಳ ಪವಿತ್ರವಾದ ದಾನವಾಗಿದ್ದು, ರಕ್ತದಾನದಿಂದ ಮಾತ್ರ ಹೃದಯಗಳನ್ನು ಬೆಸೆಯಲು ಸಾಧ್ಯ ಎಂದರು. ಡಾ. ಮುರಲೀ ಮೋಹನ್ ಹಾಗೂ ಡಾ. ರಾಜಶ್ರೀ ಬಿಡುವಿಲ್ಲದ ವೃತ್ತಿಯ ನಡುವೆಯೂ ಸಾಮಾಜಿಕ ಕಳಕಳಿಯಿಂದ ರಕ್ತದಾನ ಶಿಬಿರವನ್ನು ದಂತ ಚಿಕಿತ್ಸಾಲಯದಲ್ಲಿ ಆಯೋಜಿಸಿರುವುದು ದಂಪತಿಗಳ ಸಾಮಾಜಿಕ ಬದ್ಧತೆಯನ್ನು ತೋರಿಸುತ್ತದೆ ಎಂದರು. ಕಾಸರಗೋಡು ಜಿಲ್ಲಾ ಪಂಚಾಯಿತಿ ಸ್ಥಾಯಿ ಸಮಿತಿಯ ಅಧ್ಯಕ ಹರ್ಷದ್ ವರ್ಕಾಡಿ ಮಾತನಾಡಿ ಕಳೆದ 22ವರ್ಷಗಳಿಂದ ಡಾ. ಮುರಲೀ ದಂತ ಚಿಕಿತ್ಸಾಲಯ ನಡೆಸುವುದರ ಜೊತೆಗೆ ವೈದ್ಯಕೀಯ ಶಿಬಿರ, ರಕ್ತದಾನ ಶಿಬಿರ, ವನಮಹೋತ್ಸವ, ಬಾಯಿ ಕ್ಯಾನ್ಸರ್ ತಪಾಸಣೆ ಶಿಬಿರ ನಡೆಸಿ ವೈದ್ಯಕೀಯ ವೃತ್ತಿಯ ಸಾಮಾಜಿಕ ಕಳಕಳಿಯನ್ನು ತೋರ್ಪಡಿಸಿದ್ದಾರೆ. ವೃತ್ತಿಯ ರಾಜಧರ್ಮವನ್ನು ಪಾಲಿಸುತ್ತಾ ಸಮಾಜಮುಖಿ ಕೆಲಸ…
UN NETWORKS ಕಿನ್ಯ : ಕಳೆದೆರಡು ದಿನಗಳಿಂದ ಸುರಿದ ಭಾರೀ ಮಳೆಯಿಂದಾಗಿ ಕಿನ್ಯ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮುಖ್ಯ ರಸ್ತೆಗಳಲ್ಲಿ ತ್ಯಾಜ್ಯ ತುಂಬಿದ್ದು ಗ್ರಾಮ ಪಂಚಾಯಿತಿ ನಿರ್ಲಕ್ಷ್ಯ ತೋರಿದೆ ಎನ್ನುವ ಆರೋಪ ಕೇಳಿ ಬಂದಿದೆ. ಕಿನ್ಯ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮುಖ್ಯ ರಸ್ತೆಗಳಲ್ಲಿ ಎಲ್ಲೆಂದರಲ್ಲಿ ತ್ಯಾಜ್ಯ ಎಸೆಯಲಾದ್ದು ಮೊದಲೇ ಗಬ್ಬೆದ್ದು ನಾರುತ್ತಿತ್ತು. ಆದರೂ ಈ ಬಗ್ಗೆ ಗ್ರಾಮ ಪಂಚಾಯಿತಿ ಗಂಭೀರವಾಗಿ ಪರಿಗಣಿಸಿರಲೇ ಇಲ್ಲ. ಇದೀಗ ನಾಟೆಕಲ್‍ನಿಂದ ಸಂಕೇಶವರೆಗೆ ತೋಡಿನಲ್ಲಿ ಕೊಳೆತು ಕಾರುತ್ತಿದ್ದ ತ್ಯಾಜ್ಯ ಮುಖ್ಯ ರಸ್ತೆಯಲ್ಲೇ ನೀರಿನೊಂದಿ ಹರಿದು ಹೋಗಿದೆ. ಅಷ್ಟಕ್ಕೂ ನಿಲ್ಲದೆ ಕೆಳಭಾಗದಲ್ಲಿರುವ ಮನೆಗಳ ಆವರಣವನ್ನೂ ಸೇರಿಕೊಂಡಿದೆ ಎನ್ನಲಾಗಿದೆ. ಈ ತ್ಯಾಜ್ಯದಿಂದ ಸ್ಥಳೀಯವಾಗಿ ರೋಗಭೀತಿ ಹರಡಿದ್ದು, ಶಾಲೆಗೆ ಹೋಗುವ ಮಕ್ಕಳು, ಸಾರ್ವಜನಿಕರು ನಡೆದಾಡಲೂ ಕಷ್ಟ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಬಗ್ಗೆ ಕಿನ್ಯ ಗ್ರಾಮ ಪಂಚಾಯಿತಿ ಪ್ರತಿನಿಧಿಗಳಿಗೆ ಮಾಹಿತಿ ನೀಡಲಾಗಿದ್ದರೂ ಯಾವುದೇ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ತಾಳಿದ್ದಾರೆ ಎನ್ನುವ ಆರೋಪ ಸಾರ್ವಜನಿಕರಿಂದ ವ್ಯಕ್ತವಾಗಿದೆ. ಈ ಪ್ರದೇಶದ ಸಮೀಪದಲ್ಲೇ ವೈದ್ಯಕೀಯ ಕಾಲೇಜು,…
UN NETWORKS ಅಸೈಗೋಳಿ : ಅಸೈಗೋಳಿ ಸಮೀಪ ಶುಕ್ರವಾರ ಮಧ್ಯಾಹ್ನದ ವೇಳೆ ಸರಣಿ ಅಪಘಾತ ಸಂಭವಿಸಿದ್ದು, ಕಾರು ಚಾಲಕ ಪವಾಡ ಸದೃಶ್ಯವಾಗಿ ಪ್ರಾಣಪಾಯದಿಂದ ಪಾರಾಗಿದ್ದಾರೆ. ಪಾವೂರು ಗ್ರಾಮದ ಇನೋಳಿ ಕಂಬಳಪದವು ನಿವಾಸಿ ನಝೀರ್ ಅಪಾಯದಿಂದ ಪಾರಾದವರು. ಅವರು ಎಂದಿನಂತೆ ಶುಕ್ರವಾರ ಮಧ್ಯಾಹ್ನದ ವೇಳೆ ತಮ್ಮ ಈಟಿಯೋಸ್ ಕಾರಿನಲ್ಲಿ ಮನೆಯಿಂದ ದೇರಳಕಟ್ಟೆಯಲ್ಲಿರುವ ತಮ್ಮ ಬಟ್ಟೆ ಅಂಗಡಿಗೆ ಹೋಗುತ್ತಿದ್ದರು. ಅಸೈಗೋಳಿ ದಾಟಿ ತಿಬ್ಲೆಪದವು ತಲುಪಿದಾಗ ಎದುರಿನಲ್ಲಿ ಜೆಸಿಬಿ ರಸ್ತೆಬದಿ ಕಾಮಗಾರಿಯಲ್ಲಿ ನಿರತವಾಗಿದ್ದರಿಂದ ಕಾರಿನ ಮುಂದಿನಿಂದ ಹೋಗುತ್ತಿದ್ದ ಸರಕಾರಿ ಬಸ್ಸು ನಿಲ್ಲಿಸಲಾಯಿತು. ಈ ಸಂದರ್ಭ ನಝೀರ್ ಕಾರನ್ನು ನಿಲ್ಲಿಸಿದ್ದಾರೆ. ಹಿಂದಿನಿಂದ ವೇಗವಾಗಿ ಬಂದ ಖಾಸಗಿ ಬಸ್ಸು ಕಾರಿನ ಹಿಂಭಾಗಕ್ಕೆ ಬಲವಾಗಿ ಢಿಕ್ಕಿ ಹೊಡೆದಿದೆ. ಢಿಕ್ಕಿಯ ರಭಸಕ್ಕೆ ಕಾರು ಮುಂದಕ್ಕೆ ಚಲಿಸಿ ಸರಕಾರಿ ಬಸ್ಸಿಗೆ ಢಿಕ್ಕಿ ಹೊಡೆದಿದೆ. ಅದರಿಂದಾಗಿ ಕಾರಿನ ಮುಂಭಾಗ ಮತ್ತು ಹಿಂಭಾಗ ಸಂಪೂರ್ಣ ನುಜ್ಜು ಗುಜ್ಜಾಗಿದೆ. ಚಾಲನೆ ಮಾಡುತ್ತಿದ್ದ ನಝೀರ್ ಅದೃಷ್ಟವಶಾತ್ ಯಾವುದೇ ಅಪಾಯವಿಲ್ಲದೆ ಪಾರಾಗಿದ್ದಾರೆ. ಆ ಬಗ್ಗೆ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
UN NETWORKS ಬೋಳಿಯಾರ್ : ಸ್ವಾಗತ್ ಗ್ರೂಪ್ ಆಪ್ ಕಂಪೆನಿಯ ನೂತನ ಸಂಸ್ಥೆ ಸ್ವಾಗತ್ ಆಡಿಟೋರಿಯಂ ಬೋಳಿಯಾರ್ ನಲ್ಲಿ ಶುಭಾರಂಭಗೊಂಡಿತು. ಮುಡಿಪು ಎಜ್ಯು ಪಾರ್ಕ್ ನ ವಿದ್ಯಾಸಂಸ್ಥೆ ಸ್ಥಾಪಕಾಧ್ಯಕ್ಷ ಸಯ್ಯದ್ ಮುಹಮ್ಮದ್ ಅಶ್ರಫ್ ಸಖಾಫತ್ ತಂಙಳ್ ಆದೂರು ಉದ್ಘಾಟಿಸಿದರು. ಸಯ್ಯದ್ ಪಾಣಕ್ಕಾಡ್ ಹಾರಿಸ್ ಅಲೀ ಶಿಹಾಬ್ ತಂಙಳ್ ದುಅ ನೆರವೇರಿಸಿ ಶುಭಹಾರೈಸಿದರು. ಸ್ವಾಗತ್ ಗ್ರೂಪ್ ಆಫ್ ಕಂಪೆನಿಯ ಅಡಳಿತ ನಿರ್ದೇಶಕ ಹಾಜಿ ಅಬೂಬಕ್ಕರ್ ಹಾಜಿ ಸ್ವಾಗತ್ ಕಾರ್ಯಕ್ರಮದ ಅಧ್ಯಕ್ಷತೆ ವಹಿದರು. ಬಿಜೆಪಿ ಮಂಗಳೂರು ವಿಧಾನ ಸಭಾ ಕ್ಷೇತ್ರ ಅಧ್ಯಕ್ಷ ಸಂತೋಷ್ ಕುಮಾರ್ ರೈ ಬೋಳಿಯಾರು, ರಘುರಾಮ ತಂತ್ರಿಗಳು, ಮಂಗಳೂರು ತಾ.ಪಂ ಸದಸ್ಯ ಜಬ್ಬಾರ್ ಬೋಳಿಯಾರು, ಬೋಳಿಯಾರು ಗ್ರಾ.ಪಂ ಸದಸ್ಯ ಅಬ್ದುಲ್ ಶುಕೂರು, ಪಾರ್ಟಿಕ್ ಸ್ಟಾನಿ ವಾಝ್, ಬೋಳಿಯಾರು ಜುಮಾ ಮಸೀದಿಯ ಅಧ್ಯಕ್ಷ ಹನೀಫ್, ಗೌಸಿಯಾ ಜುಮಾ ಮಸೀದಿ ಕುಕ್ಕೋಟ್ಟು ಅಧ್ಯಕ್ಷ ಅಬ್ದುಲ್ ಲತೀಫ್, ಬದ್ರಿಯ ಜುಮಾ ಮಸೀದಿ ರಂತಡ್ಕ ಅಧ್ಯಕ್ಷ ಅಬ್ದುಲ್ ಖಾದರ್, ಶರೀಫ್ ಅರ್ಶದಿ, ಎಸ್ಕೆಎಸ್ಸೆಸ್ಸೆಫ್ ಮುಖಂಡ ಅಬ್ದುಲ್ ರಹ್ಮಾನ್…
UN NETWORKS ಉಳ್ಳಾಲ : ಕಳೆದ ಕೆಲವು ದಿನಗಳಿಂದ ತೀವ್ರ ಕಡಲ್ಕೊರೆತದಿಂದ ತತ್ತರಿಸಿರುವ ಉಳ್ಳಾಲಕ್ಕೆ ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಶುಕ್ರವಾರ ಬೆಳಗ್ಗೆ ಭೇಟಿ ನೀಡಿದರು. ಕಡಲ್ಕೊರೆತ ತೀವ್ರಗೊಂಡಿರುವ ಕೈಕೋ, ಕಿಲೇರೀಯ, ಸೋಮೇಶ್ವರ, ಉಚ್ಚಿಲ ಪ್ರದೇಶಗಳಿಗೆ ತೆರಳಿದ ಸಚಿವರು ಪರಿಶೀಲನೆ ನಡೆಸಿದರು. ಸಂತ್ರಸ್ತರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸುವ ಭರವಸೆಯನ್ನು ಇದೇ ಸಂದರ್ಭ ಸಚಿವರು ನೀಡಿದರು. ಈ ಸಂದರ್ಭ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಅವರು ಜೊತೆಗಿದ್ದರು. ಕಳೆದ 3-4 ದಿನಗಳಿಂದ ಉಳ್ಳಾಲ ಪ್ರದೇಶದಲ್ಲಿ ಕಡಲ್ಕೊರೆತ ತೀವ್ರ ಸ್ವರೂಪ ಪಡೆದಿದ್ದು, ಈಗಾಗಲೇ ಹಲವು ಮನೆಗಳು ಸಮುದ್ರಪಾಲಾಗಿವೆ. ಕೆಲವೆಡೆ ಮಸೀದಿ ಕೂಡಾ ಅಪಾಯದಂಚಿಗೆ ಸಿಲುಕಿವೆ.
UN NETWORKS ಕಿನ್ಯಾ : ಕಿನ್ಯಾ ಗ್ರಾಮದ ತಟ್ಟಾಜೆ ಎಂಬಲ್ಲಿ ಹೊನ್ನಯ್ಯ ಎಂಬವರ ಮನೆಗೆ ಸಿಡಿಲು ಬಡಿದು ಮನೆಗೆ ಸಂಪೂರ್ಣ ಹಾನಿಯಾಗಿದೆ. ತಕ್ಷಣ ಸ್ಥಳಕ್ಕೆ ಪಂಚಾಯತ್ ಅಧ್ಯಕ್ಷರಾದ ಮಾಲಿನಿ ಉಪಾಧ್ಯಕ್ಷ ರಾದ ಸಿರಾಜುದ್ದೀನ್ ಸದಸ್ಯರಾದ ಅಬೂಸಾಲಿ ಹಾಗೂ ಪಂಚಾಯತ್ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ ಸಿಡಿಲು ಬಡಿದು ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಿ ತುರ್ತು ಕಾರ್ಯಪ್ರವೃತರಾದರು.

