UN NETWORKS
ಬಾಯಾರ್ : ಸಹಸ್ರಾರು ಜನರು ಬಹಳಷ್ಟು ಸಂಖ್ಯೆಯಲ್ಲಿ ಸೇರಲಿರುವ ಮುಜಮ್ಮಉಸ್ಸಖಾಫತಿ ಸುನ್ನಿಯ್ಯ ಸಂಸ್ಥೆಯಲ್ಲಿ ಪ್ರತೀ ತಿಂಗಳು ನಡೆಯಲಿರುವ ಬೃಹತ್ ಸ್ವಲಾತ್ ಮಜ್ಲಿಸ್ ಹಾಗೂ ಸಾಮೂಹಿಕ ಕೂಟು ಪ್ರಾರ್ಥನೆ ಫೆಬ್ರವರಿ 15 ಶುಕ್ರವಾರ ಮಗ್ರಿಬ್ ನಮಾಝಿನ ನಂತರ ನಡೆಯಲಿದೆ.
ಇನ್ಶಾಅಲ್ಲಾಹ್ ಅಸ್ಸಯ್ಯಿದ್ ಅಬ್ದುಲ್ ರಹ್ಮಾನ್ ಇಂಬಿಚ್ಚಿಕ್ಕೋಯ ತಂಙಳ್ ಅಲ್-ಬುಖಾರಿ ಬಾಯಾರ್ ಸ್ವಲಾತ್ ಮಜ್ಲಿಸ್ ಹಾಗೂ ಸಾಮೂಹಿಕ ಕೂಟು ಪ್ರಾರ್ಥನೆಗೆ ನೇತೃತ್ವ ನೀಡುವರು. ದೇಶ ವಿದೇಶಗಳಲ್ಲಿ ಖ್ಯಾತಿ ಹೊಂದಿ ತನ್ನ ವಾಕ್ಚಾತುರ್ಯದಿಂದ ಜನಮನ ಗೆದ್ದ ಧೀಮಂತ ನಾಯಕ ಮರ್ಕಝ್ ಸ್ಸಖಾಫತಿ ಸ್ಸುನ್ನಿಯ್ಯಾ ಇದರ ವೈಸ್ ಚಾಂಸ್ಲೆರ್ ನೂತನ ವಾದಿಗಳ ಸಿಂಹ ಸ್ವಪ್ನ ಸಾವಿರಾರು ಮದನಿಗಳ, ಸಖಾಫಿಗಳ ಗುರುವರ್ಯಾ ಡಾ, ಚುಲ್ಲಿಕ್ಕೋಡು ಹುಸೈನ್ ಸಖಾಫಿ ಅಲ್ ಅಝ್ಹರಿ ಮರ್ಕಝ್ ಮುಖ್ಯ ಪ್ರಭಾಷಣೆ ಗೈಯ್ಯಲಿರುವರು.
ಸಯ್ಯಿದ್ ನಿಝಾಮುದ್ದೀನ್ ಬಾಫಖಿ ತಂಙಳ್ ಮಲ್ಲೂರು ಶರಫುಲ್ ಉಲಮಾ ಅಬ್ಬಾಸ್ ಉಸ್ತಾದ್ ,ಬಿ ಎಸ್ ಅಬ್ದುಲ್ಲಾ ಕುಂಞಿ ಪೈಝಿ, ಪಳ್ಳಂಗೋಡ್ ಅಬ್ದುಲ್ ಖಾದರ್ ಮದನಿ, ಅಬ್ದುಲ್ಲತೀಫ್ ಸಅದಿ ಪಝಶ್ಶಿ, ಹಂಝ ಮಿಸ್ಬಾಹಿ ಒಟಪಡವು, ಅಶ್ರಫ್ ಸಅದಿ ಮಲ್ಲೂರು , ಜಬ್ಬಾರ್ ಸಖಾಫಿ ಪಾತೂರ್ ಸಮೇತ ಇರುವ ಅನೇಕ ಉಲಮಾ ಉಮರಾರು ಸಾದಾತುಗಳು ರಾಜಕೀಯ ಮುಖಂಡರು ಶಿಕ್ಷಣ ತಜ್ಞರು ಸಮಾಜ ಸೇವಕರು ಭಾಗವಹಿಸುವರು.


