ಉಳ್ಳಾಲ: ಕೋವಿಡ್ ಎರಡನೇ ಅಲೆ ವೇಗವಾಗಿ ಹಬ್ಬುತ್ತಿದ್ದು ಉಳ್ಳಾಲ ನಗರಸಭಾ ವ್ಯಾಪ್ತಿಯಲ್ಲಿ ಸಾಮಾಜಿಕ ಅಂತರ ಮತ್ತು ಮಾಸ್ಕ್ ಧರಿಸದಿದ್ದರೆ ಕಠಿಣಕ್ರಮ ಕೈಗೊಳ್ಳಾಗುವುದು ಬುಧವಾರದಿಂದ ಪ್ರತಿಯೊಬ್ಬರು ಮಾಸ್ಕ್ ಧರಿಸಬೇಕು ಇಲ್ಲದಿದ್ದರೆ ದಂಡ ವಿಧಿಸಲಾಗುವುದು ಎಂದು ಉಳ್ಳಾಲ ನಗರಸಭಾ ಆಯುಕ್ತ ರಾಯಪ್ಪ ಎಚ್ಚರಿಕೆ ನೀಡಿದರು.ದ.ಕ.ಜಿಲ್ಲಾಧಿಕಾರಿ ಆದೇಶದಂತೆ ಉಳ್ಳಾಲ ನಗರಸಭೆ ವ್ಯಾಪ್ತಿಯಲ್ಲಿ ಮಂಗಳವಾರ ನಡೆದ ಕೋವಿಡ್-19 ಜಾಗೃತಿ ಅಭಿಯಾನ ಜಾಥದಲ್ಲಿ ಅವರು ಭಾಗಹಿಸಿ ಎಚ್ಚರಿಕೆ ನೀಡಿದರು.ಜಾಗೃತಿ ಜಾಥಾ ಅಭಿಯಾನವು ಅಬ್ಬಕ್ಕ ಸರ್ಕಲ್‍ನಿಂದ ಆರಂಬಿಸಿ ಉಳ್ಳಾಲ ಪೇಟೆ ಮಾರ್ಗವಾಗಿ ಬಿ.ಯಂ. ಸ್ಕೂಲ್ ಮಾರ್ಗವಾಗಿ ಸಂಚರಿಸಿ ಜಾಗೃತಿ ಮೂಡಿಸಲಾಯಿತು. ಉಳ್ಳಾಲ ನಗರಸಭಾ ಅಧಿಕಾರಿಘಲು, ಪೌರಕಾರ್ಮಿಕರು, ಸಿಬಂದಿಗಳು ಸೇರಿದಂತೆ ಒಟ್ಟು ಐದು ತಂಡಗಳಾಗಿ ರಚಿಸಿ ಎಲ್ಲಾ ವಾಡ್ರಗಳಲ್ಲುಇ ಜಾಗೃತಿ ಮೂಡಿಸಲಾಯಿತು. ಈ ಸಂದರ್ಭದಲ್ಲಿ ಜನಸಾಮಾನ್ಯರು , ಆಟೋ ರಿಕ್ಷಾ ಚಾಲಕರು, ದ್ವಿಚಕ್ರ ಸವಾರರು, ಬಸ್ ಪ್ರಯಾಣಿಕರಿಗೆ ಉಚಿತವಾದ ಮಾಸ್ಕ್ ಗಳನ್ನು ವಿತರಿಸಿ ಆರೋಗ್ಯ ಕಾಪಾಡುವಂತೆ ಮನವಿ ಮಾಡಲಾಯಿತು. ಬಸ್‍ಗಳಲ್ಲಿ ತಪಾಸಣೆ ನಡೆಸಿ ಎಚ್ಚರಿಕೆ ನೀಡಲಾಯಿತು.ನಗರ ಸಭೆಯ ಅಧ್ಯಕ್ಷೆ ಚಿತ್ರಕಲಾ ಚಂದ್ರಕಾಂತ್,…
Author: UllalaVani
ಉಳ್ಳಾಲ: ಬಸ್-ಸ್ಕೂಟರ್ ನಡುವೆ ಸಂಭವಿಸಿದ ಅಪಘಾತದಲ್ಲಿ ಟಯರ್ ಅಂಗಡಿ ಮಾಲೀಕ ಗಂಭೀರವಾಗಿ ಗಾಯಗೊಂಡಿರುವ ಘಟನೆ ತಲಪಾಡಿ ಬಳಿ ಸಂಭವಿಸಿದೆ.ಉದ್ಯಾವರ ಮಾಡ ನಿವಾಸಿ ತುಳಸಿ ((35) ಗಾಯಾಳು. ತಲಪಾಡಿಯಲ್ಲಿ ಟಯರ್ ಅಂಗಡಿ ಹೊಂದಿರುವ ಇವರು ಮನೆಯಿಂದ ಸ್ಕೂಟರಿನಲ್ಲಿ ಬರುತ್ತಿದ್ದ ಸಂದರ್ಭ ಡಿವೈಡರ್ ಇರುವ ಪ್ರದೇಶದಲ್ಲಿ ತಿರುಗಿಸುತ್ತಿದ್ದಾಗ ಮಂಗಳೂರಿನಿಂದ ಕಾಸರಗೋಡು ಬರುತ್ತಿದ್ದ ಕರ್ನಾಟಕ ಸಾರಿಗೆ ಬಸ್ಸು ಢಿಕ್ಕಿ ಹೊಡೆದಿದೆ. ಅಪಘಾತದ ತೀವ್ರತೆಗೆ ಸ್ಕೂಟರ್ ಬಸ್ಸಿನಡಿಗೆ ಸಿಲುಕಿದೆ. ನಾಗುರಿ ಸಂಚಾರಿ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕೂದಲೆಳೆಯ ಅಂತರಲ್ಲಿ ಪಾರಾದ ವಿದ್ಯಾರ್ಥಿ!ಬಸ್ಸು ಡಿಕ್ಕಿ ಹೊಡೆಯುವ ಸಂದರ್ಭದಲ್ಲಿ ಅದೇ ಜಾಗದಲ್ಲಿ ಶಾಲಾ ವಿದ್ಯಾರ್ಥಿಯೊಬ್ಬ ರಸ್ತೆ ದಾಟುತ್ತಿದ್ದು ಅದೃಷ್ಟವಶಾತ್ ಪ್ರಾಣಪಾಯದಿಂದ ಪಾರಾಗಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಗಡಿಭಾಗ ತಲಪಾಡಿಯಲ್ಲಿ ಸ್ಕೂಲ್ ಬಸ್ಸೊಂದು ಇನ್ನೊಂದು ರಸ್ತೆಗೆ ತಿರುವು ಪಡೆಯುವ ಯತ್ನದಲ್ಲಿದ್ದಾಗ ಕೇರಳ ಕಡೆಯಿಂದ ಬರುತ್ತಿದ್ದ ಕೆಎಸ್ಸಾರ್ಟಿಸಿ ಬಸ್ ಮಧ್ಯಕ್ಕೆ ನುಗ್ಗಿ ಬಂದಿದೆ. ಇದೇ ವೇಳೆ, ಮತ್ತೊಂದು ರಸ್ತೆಯಿಂದ ಸ್ಕೂಟರ್ ಸವಾರ ತಿರುವು ಪಡೆಯಲು ಬಂದಿದ್ದು ಕೆಎಸ್ಸಾರ್ಟಿಸಿ ಬಸ್ ನೇರವಾಗಿ ಡಿವೈಡರ್ ಮತ್ತು…
ಉಳ್ಳಾಲ: ಒಗ್ಗಟ್ಟನ್ನು ಮುರಿಯುವ ಉದ್ದೇಶದಿಂದ ಧಾರ್ಮಿಕ ನಂಬಿಕೆಗಳಿಗೆ ಘಾಸಿಗೊಳಿಸುವ ಕಾರ್ಯಗಳಾಗುತ್ತಿದೆ. ನಾವು ನಾವಾಗಿಯೇ ಉಳಿಯಲು ಸಂಸ್ಕೃತದ ಮೇಲಿರುವ ಗೌರವ ನಂಬಿಕೆಗಳೇ ಕಾರಣ. ಇದನ್ನು ಹಾಳುಗೆಡವಲು ದುಷ್ಟ ಶಕ್ತಿಗಳು ಯತ್ನಿಸುತ್ತಿವೆ. ಇದನ್ನು ಎಲ್ಲರೂ ಒಂದಾಗಿ ನಿಂತು ತಡೆಗಟ್ಟಬೇಕು. ಆಕ್ರಮಣ ಬಂದಾಗ ಮಾತ್ರವಲ್ಲ ಇಲ್ಲದಿದ್ದರೂ ಹಿಂದೂ ಸಮಾಜ ಒಗ್ಗಟ್ಟಾಗಿರಬೇಕಿದೆ ಎಂದು ಅಯೋಧ್ಯೆ ಶ್ರೀ ರಾಮಜನ್ಮಭೂಮಿ ಸೇವಾ ಟ್ರಸ್ಟಿನ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಅಭಿಪ್ರಾಯಪಟ್ಟರುಅವರು ವಿಶ್ವ ಹಿಂದೂ ಪರಿಷತ್- ಬಜರಂಗದಳ ವತಿಯಿಂದ ಹಿಂದೂ ಶ್ರಧ್ಧಾ ಕೇಂದ್ರಗಳಲ್ಲಿ ದುಷ್ಕøತ್ಯ ಎಸಗುತ್ತಿರುವ ದುಷ್ಕರ್ಮಿಗಳ ಕೃತ್ಯಗಳ ವಿರುದ್ಧ ಕದ್ರಿ ಶ್ರೀ ಮಂಜುನಾಥೇಶ್ವರ ದೇವಸ್ಥಾನದಿಂದ ಕುತ್ತಾರು ಶ್ರೀ ಕೊರಗಜ್ಜ ಆದಿಕ್ಷೇತ್ರಕ್ಕೆ ಭಾನುವಾರ ಹಮ್ಮಿಕೊಂಡಿದ್ದ ಕೊರಗಜ್ಜನ ಆದಿಕ್ಷೇತ್ರಕ್ಕೆ ನಮ್ಮ ನಡೆ ಕಾರ್ಯಕ್ರಮದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು. ಸಂಸ್ಕೃತಿ ಪ್ರತೀಕವಾಗಿರುವ ಅಯೋಧ್ಯೆ ರಾಮಮಂದಿರ ನಿರಂತರ ಹೋರಾಟದ ಬಳಿಕ ಫಲಪ್ರದವಾಗಿದೆ. ಹಿಂದೂ ಸಂತತಿ ಇರುವಷ್ಟು ಕಾಲ ಮಂದಿರ ಮಂದಿರವಾಗಿಯೇ ಉಳಿಯಲಿದೆ. ದೇಶದಲ್ಲಿ ಮಹಿಳೆಯರು ನರಕ ಸ್ಥಿತಿಯನ್ನು ಅನುಭವಿಸುತ್ತಿದ್ದಾರೆ. ಸರಕಾರವೇ…
ಉಳ್ಳಾಲ : ರೋಗ ಬಂದ ಬಳಿಕ ಚಿಕಿತ್ಸೆ ಪಡೆದು ಗುಣಮುಖರಾಗುವ ಬದಲು ಉತ್ತಮ ಆಹಾರ ಕ್ರಮ ಮತ್ತು ಜೀವನ ಶೈಲಿ ರೂಢಿಸಿಕೊಳ್ಳುವ ಮೂಲಕ ರೋಗ ಬಾರದಂತೆ ತಡೆಯುವುದು ಉತ್ತಮ ಎಂದು ಶಾರದಾ ಸಮೂಹ ಸಂಸ್ಥೆಗಳ ಅಧ್ಯಕ್ಷ ಪೆÇ್ರ| ಎಂ.ಬಿ.ಪುರಾಣಿಕ್ ಅಭಿಪ್ರಾಯಪಟ್ಟರು.ಭಾರತ ಸರ್ಕಾರದ ಆಯುಷ್ ಸಚಿವಾಲಯ ಅಧೀನದಲ್ಲಿರುವ ರಾಷ್ಟ್ರೀಯ ಪ್ರಕೃತಿ ಚಿಕಿತ್ಸಾ ಸಂಸ್ಥೆ, ಶಾರದಾ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಹಾಗೂ ಒಡಿಯೂರು ಷಷ್ಟ್ಯಬ್ಧ ಸಂಭ್ರಮ ಮಂಗಳೂರು ನಗರ ಸಮಿತಿ ಸಂಯುಕ್ತ ಆಶ್ರಯದಲ್ಲಿ ಶಾರದಾ ಆಯುರ್ಧಾಮದಲ್ಲಿ ಆಯೋಜಿಸಿದ್ದ ಎರಡು ದಿನಗಳ ಬೃಹತ್ ಉಚಿತ ಪ್ರಕೃತಿ ಚಿಕಿತ್ಸಾ ಶಿಬಿರದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ರೋಗ ಗುಣಪಡಿಸುವುದಕ್ಕಿಂತ ರೋಗ ಬಾರದಂತೆ ತಡೆಯುವುದು ಉತ್ತಮ. ನಮ್ಮ ಹಿರಿಯರು ಯೋಗ, ಪ್ರಾಣಾಯಾಮ ಅಥವಾ ಪ್ರಾರ್ಥನೆಯಂಥ ಕ್ರಮಗಳ ಮೂಲಕ ಆರೋಗ್ಯವಂತ ಜೀವನ ಸಾಗಿಸುವ ವಿಧಾನವನ್ನು ಕಂಡುಕೊಂಡಿದ್ದರು. ಯೋಗ ಮತ್ತು ಪ್ರಕೃತಿ ಚಿಕಿತ್ಸೆ ಸಂಪೂರ್ಣ ಭಾರತೀಯ ವೈದ್ಯಪದ್ಧತಿಯಾಗಿದ್ದು, ಕನಿಷ್ಠ ಔಷ„ಯಲ್ಲೇ ರೋಗವನ್ನು ಗುಣಪಡಿಸಬಹುದಾದ…
ಉಳ್ಳಾಲ: ಕಿನ್ಯ ಗ್ರಾಮ ಪಂಚಾಯತ್ ಕಚೇರಿಯಲ್ಲಿ ನಡೆದ ತಹಶೀಲ್ದಾರ್ ಮತ್ತು ಕಂದಾಯ ಅಧಿಕಾರಿಗಳ ಗ್ರಾಮವಾಸ್ತವ್ಯ ಯಶಸ್ವಿಯಾಗಿ ನಡೆದಿದ್ದು, ಸ್ಥಳದಲ್ಲಿ ಮೂವರಿಗೆ ವೃದ್ಯಾಪ್ಯ ವೇತನ ಪಿಂಚಣಿ, ವಿಲೇವಾರಿ, ಘನತ್ಯಾಜ್ಯ ವಿಲೇವಾರಿಗೆ ಸ್ಥಳ ಗುರುತಿಸುವಿಕೆ, ರುದ್ರಭೂಮಿ ಮತ್ತು ನಿವೇಶನದ ಸ್ಥಳ ತನಿಖೆ ನಡೆಸುವ ಮೂಲಕ ಕಿನ್ಯ ಗ್ರಾಮದ ಕೆಲವು ಕಡತಗಳ ವಿಲೇವಾರಿಯನ್ನು ತಹಶೀಲ್ದಾರ್ ನೇತೃತ್ವದಲ್ಲಿ ಶನಿವಾರ ನಡೆಸಲಾಯಿತು.ಕಿನ್ಯ ಗ್ರಾಮ ಪಂಚಾಯತ್ ಅಧ್ಯಕ್ಷೆ ಲಕ್ಷ್ಮೀ ತಹಶೀಲ್ದಾರ್ ಗ್ರಾಮ ವಾಸ್ತವ್ಯಕ್ಕೆ ಚಾಲನೆ ನೀಡಿದರು. ತಾಲೂಕು ಪಂಚಾಯತ್ ಅಧ್ಯಕ್ಷ ಮಹಮ್ಮದ್ ಮೋನು, ಕಿನ್ಯ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷೆ ಮಾಲಿನಿ ಪೂಜಾರಿ, ಮಾಜಿ ಉಪಾಧ್ಯಕ್ಷ ಸಿರಾಜುದ್ದೀನ್ ಕಿನ್ಯ, ಮಾಜಿ ಅಧ್ಯಕ್ಷ ಹಮೀದ್ ಕಿನ್ಯ, ಸದಸ್ಯರಾದ ಬಾಗಿ , ಸೈಯದ್ ತ್ವಾಹ ತಂಗಲ್, ನಜೀರ್ ಹುಸೈನ್ , ಸಂತೋಷ್ ಮೊಂತೆರೊ , ಶಾಹಿನಾ,ಫಾರುಕ್ ಕಿನ್ಯ , ಫಯಾಝ್ ಕಿನ್ಯ ಮತ್ತಿತರರು ಉಪಸ್ಥಿತರಿದ್ದರು. ತಹಶೀಲ್ದಾರ್ ಗುರುಪ್ರಸಾದ್ ಮಾತನಾಡಿ ಒಂದು ದಿನಕ್ಕೆ ತಾಲೂಕು ಕಚೇರಿಯೇ ಗ್ರಾಮ ವಾಸ್ತವ್ಯದ ಮೂಲಕ ಕಿನ್ಯ ಗ್ರಾಮಕ್ಕೆ ಬಂದಿದ್ದು, ಸ್ಥಳದಲ್ಲೇ…
ಉಳ್ಳಾಲ: ಉಳ್ಳಾಲದ ನೂತನ ಸುಸಜ್ಜಿತ ಆಸ್ಪತ್ರೆ ಮಮಗಳೂರು ಹೊರತುಪಡಿಸಿದರೆ ಉಡುಪಿವರೆಗೆ ಎಲ್ಲೂ ಕಾಣಲು ಸಿಗುವುದಿಲ್ಲ ಯಾವುದೇ ಹೋರಾಟವುಲ್ಲದೆ ಆರಂಬಗೊಂಡಿರುವ ಈ ಆಸ್ಪತ್ರೆಯ ವ್ಯವಸ್ಥೆಗಳು ವ್ಯವಸ್ಥಿತವಾಗಿ ಆರಂಭಗೊಂಡಾಗ ಮಾತ್ರ ಜನರಿಗೆ ಇದರ ಮಹತ್ವ ಅರಿಯಲು ಸಾಧ್ಯ ಎಂದು ಎಂದು ಶಾಸಕ ಯು.ಟಿ.ಖಾದರ್ ಅಭಿಪ್ರಾಯಪಟ್ಟರು.ನಗರ ಸಮುದಾಯ ಆರೋಗ್ಯ ಕೇಂದ್ರದ ಹಿಂಭಾಗದಲ್ಲಿ ಆಯುಷ್ ಆಯುರ್ವೇದಿಕ್ ಆಸ್ಪತ್ರೆ ಕಟ್ಟಡಕ್ಕೆ ಶಂಕು ಸ್ಥಾಪನೆ ಹಾಗೂ ಹೋಮಿಯೋಪಥಿ ಸೇವೆಗಳಿಗೆಶನಿವಾರ ಚಾಲನೆ ನೀಡಿ ಮಾತನಾಡಿದರು.ಉಳ್ಳಾಲ ಪ್ರಾಥಮಿಕ ಆರೋಗ್ಯ ಕೇಂದ್ರ ಕಿರಿದಾಗಿದ್ದ ಸಂದರ್ಭ ಶೆಡ್ ನಲ್ಲಿ ಸಭೆ ನಡೆಸಲಾಗುತ್ತಿತ್ತು.ಇದೀಗ ಆಯುಶ್ ಇಂಟಗ್ರೇಟೆಡ್ ಆಸ್ಪತ್ರೆಯ ನೂತನ ಕಟ್ಟಡ 56 ಲಕ್ಷದಲ್ಲಿ ನಿರ್ಮಾಣವಾಗಲಿದೆ. ಇತರ ಆಸ್ಪತ್ರೆಗಳಿಗಿಂತ ವಿಭಿನ್ನ ನಕ್ಷೆಯನ್ನೂ ಹೊಂದಿರಲಿದೆ. ಅಲೋಪಥಿ, ಆಯುರ್ವೇದಕ್ಕಿಂತ ರೋಗಿಗಳನ್ನು ಗುಣಪಡಿಸುವ ಔಷಧ ನೀಡುವುದು ಮುಖ್ಯವಾಗಿದ್ದು, ಸಮುದಾಯ ಕೇಂದ್ರದಲ್ಲಿ ಎಲ್ಲಾ ವಿಧದ ಚಿಕಿತ್ಸೆ ಸಿಗುವುದು ದೇಶದಲ್ಲೇ ಪ್ರಥಮ ಆಗಲಿದೆ. ಅಲೋಪಥಿ ಮತ್ತು ಆಯುರ್ವೇದ ವೈದ್ಯರು ಪರಸ್ಪರ ಸಹಕಾರದಿಂದ ಮುಂದುವರಿಯಬೇಕು ಎಂದು ಹೇಳಿದರು.ನಗರಸಭಾಧ್ಯಕ್ಷೆ ಚಿತ್ರಕಲಾ ಕೆ, ಉಪಾಧ್ಯಕ್ಷ ಯು.ಪಿ.ಅಯ್ಯೂಬ್ ಮಂಚಿಲ, ತಾಲೂಕು ಪಂಚಾಯತ್…
ಉಳ್ಳಾಲ: ತೊಕ್ಕೊಟ್ಟು ಸಮೀಪದ ಕಲ್ಲಾಪುವಿನಲ್ಲಿ ಶನಿವಾರ ಮಧ್ಯಾಹ್ನದ ವೇಳೆ ಶಾರ್ಟ್ ಸರ್ಕ್ಯೂಟ್‍ನಿಂದ ಗುಜರಿ ಅಂಗಡಿಯಲ್ಲಿ ಬೆಂಕಿ ಹಿಡಿದು ಗುಜರಿ ವಸ್ತುಗಳು ಭಸ್ಮವಾಗಿವೆ, ಈ ಸಂದರ್ಭ ಕಾರ್ಮಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.ಕಲ್ಲಾಪು ಸಮೀಪದ ಆಡಂಕುದ್ರು ನಿವಾಸಿ ಐವನ್ ಡಿಸೋಜಾ ಎಂಬವರ ಜಾಗದಲ್ಲಿ ಬಾಡಿಗೆ ಆಧಾರದಲ್ಲಿ ನಡೆಸಲ್ಪಡುತ್ತಿರುವ ಅನ್ವರ್ ಎಂಬವರ ಗುಜರಿ ಅಂಗಡಿಯಲ್ಲಿ ಬೆಂಕಿ ಆಕಸ್ಮಿಕ ಉಂಟಾಗಿದೆ. ಅಂಗಡಿಯೊಳಗೆ ಸಣ್ಣ ಮಟ್ಟಿನ ಶಾರ್ಟ್ ಸರ್ಕ್ಯೂಟ್ ಉಂಟಾಗಿ ಏಕಾಏಕಿ ಬೆಂಕಿ ವ್ಯಾಪಿಸಿದೆ. ಘಟನೆ ನಡೆದಾಗ ಅಪಾಯ ಅರಿತ ಕಾರ್ಮಿಕರು ಅಂಗಡಿಯಿಂದ ಹೊರಬಂದು ಸಾಮಾನುಗಳನ್ನು ಹೊರಗಡೆ ಸಾಗಿಸಿದ್ದಾರೆ. ಕಾರ್ಮಿಕರು ಸಾಧ್ಯವಾದಷ್ಟು ಸಾಮಾಗ್ರಿಗಳನ್ನು ಹೊರಹಾಕುವ ಪ್ರಯತ್ನ ಮಾಡಿದ್ದರೂ ಬೆಂಕಿಯ ಕೆನ್ನಾಲಗೆಗೆ ಅಂಗಡಿ ಹೊತ್ತಿ ಉರಿದು ಒಳಗಡೆ ಉಳಿದ ಅಪಾರ ಪ್ರಮಾಣದ ಗುಜರಿ ವಸ್ತುಗಳು ಭಸ್ಮವಾಗಿವೆ. ಅಲ್ಲದೆ ಜನರೇಟರ್ ಮತ್ತು ಅಂಗಡಿಗೆ ತಾಗಿಕೊಂಡಿದ್ದ ತೆಂಗಿನ ಮರವೂ ಸುಟ್ಟು ಹೋಗಿದೆ.ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಕಂಕನಾಡಿ ನಗರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಉಳ್ಳಾಲ: ದ.ಕ ಜಿಲ್ಲೆಯಾದ್ಯಂತ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಗಡಿಭಾಗ ತಲಪಾಡಿಯಲ್ಲಿ ಶುಕ್ರವಾರ ಬೆಳಗ್ಗಿನಿಂದ ಕೋವಿಡ್ ಚೆಕ್ ಪಾಯಿಂಟ್ ಆರಂಭಿಸಲಾಗಿದೆ. ಬೆಳಗ್ಗಿನ ಸಮಯದಲ್ಲಿ ಬಸ್ಸುಗಳನ್ನು ನಿಲ್ಲಿಸಿದ ಜಿಲ್ಲಾ ಆರೋಗ್ಯ ಅಧಿಕಾರಿ ನೇತೃತ್ವದ ನಿಯೋಗ ಪರಿಶೀಲನೆಗೆ ಇಳಿದಾಗ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಯಿತು.ತಲಪಾಡಿ ರೂಟ್ ಬಸ್ಸು, ಕೇರಳ ಸಾರಿಗೆ ಬಸ್ಸುಗಳು, ಕರ್ನಾಟಕ ಸಾರಿಗೆ ಬಸ್ಸುಗಳನ್ನು ಅಧಿಕಾರಿಗಳು ತಡೆಹಿಡಿದು ಆರ್‍ಟಿಪಿಸಿಆರ್ ವರದಿಯನ್ನು ಕೇಳಿದರು. ಆದರೆ ಬಹುತೇಕ ಮಂದಿಯಲ್ಲಿ ವರದಿ ಇಲ್ಲದೇ ಇದ್ದಾಗ, ಮಂಗಳೂರಿಗೆ ತೆರಳಲು ಅವಕಾಶ ಮಾಡಿಕೊಡುವುದಿಲ್ಲ ಎಂದು ತರಾಟೆಗೆ ತೆಗೆದುಕೊಂಡರು. ಈ ಸಂದರ್ಭ ಸ್ಥಳದಲ್ಲಿ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಯಿತು. ಪೊಲೀಸರು ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ಹತೋಟಿಗೆ ತಂದರು. ಮಾ.20 ರಿಂದ ಕಡ್ಡಾಯವಾಗಿ ಕೇರಳದಿಂದ ಬರುವ ಮಂದಿ ಆರ್ ಟಿಪಿಸಿ ಆರ್ ವರದಿ ತರುವಂತೆಯೂ, ವರದಿ ಇಲ್ಲದೇ ಇದ್ದಲ್ಲಿ ವಾಪಸ್ಸು ಕಳುಹಿಸುವ ಎಚ್ಚರಿಕೆಯನ್ನು ನೀಡಿದರು.ಸ್ಥಳದಲ್ಲಿ ಪರಿಶೀಲನೆ ನಡೆಸುತ್ತಿದ್ದ ಜಿಲ್ಲಾ ಆರೋಗ್ಯ ಅಧಿಕಾರಿ ಡಾ. ರಾಮಕೃಷ್ಣ ಬಾಯರಿ ಮಾಧ್ಯಮದ ಜತೆಗೆ ಮಾತನಾಡಿ, ಜಿಲ್ಲೆಯಲ್ಲಿ ಹೆಚ್ಚುತ್ತಿರುವ…
ಉಳ್ಳಾಲ: ಮಕ್ಕಳಿಗೆ ಶಿಕ್ಷಣ ನೀಡುವ ಜೊತೆಗೆ ಅವರನ್ನು ಅನಗತ್ಯ ಕಾರ್ಯ ಚಟುವಟಿಕೆ ಗಳಲ್ಲಿ ಭಾಗಿಯಾಗದಂತೆ ರಕ್ಷಿಸುವ ಕಾರ್ಯ ಪೆÇೀಷಕರದ್ದಾಗಿದೆ ಎಂದು ಸಯ್ಯಿದ್ ಬಾತಿಷ್ ತಂಙಳ್ ಹೇಳಿದರು.ಅವರು ಕಿನ್ಯ ದಲ್ಲಿ ಹಝ್ರತ್ ಹುಸೈನ್ ವಲಿಯುಲ್ಲಾಹಿ ದರ್ಗಾ ಶರೀಫ್ ಕಿನ್ಯ ಇದರ ಆಶ್ರಯದಲ್ಲಿ ನಡೆಯುವ ಕೂಟು ಝಿಯಾರತ್ ನ ಸಮಾರೋಪ ಕಾರ್ಯಕ್ರಮದಲ್ಲಿ ಮಾತನಾಡಿದರು.ಸಯ್ಯಿದ್ ಶಿಹಾಬುದ್ದೀನ್ ತಂಙಳ್ ಅಲ್ ಉಮೈದಿ ದುವಾ ನೆರವೇರಿಸಿದರು.ಸಯ್ಯಿದ್ ಸಾಬಿಕ್ ಅಲಿ ಶಿಹಾಬ್ ತಂಙಳ್ ಪಾಣಕ್ಕಾಡ್ ಕೂಟು ಝಿಯಾರತ್ ನೇತೃತ್ವ ವಹಿಸಿದ್ದರು.ಕಾರ್ಯಕ್ರಮ ದಲ್ಲಿ ನೌಫಲ್ ಫೈಝಿ ಕೊಡುವಳ್ಳಿ,ಕುತುಬಿಯ್ಯನಗರ ಮಸೀದಿ ಖತೀಬ್ ಮುಸ್ತಫಾ ಸ ಅದಿ,ಉಕ್ಕುಡ ಮಸೀದಿ ಖತೀಬ್ ಅಬ್ದುಲ್ ನಾಸೀರ್ ಅಝ್ ಅರಿ ಸಯ್ಯಿದ್ ಬಾತಿಷ್ ತಂಙಳ್, ಸದ್ ರ್ ಫಾರೂಕ್ ದಾರಿಮಿ, ಜಮಾಅತ್ ಅಧ್ಯಕ್ಷ ಇಸ್ಮಾಯಿಲ್ ಹಾಜಿ ,ಕಾರ್ಯದರ್ಶಿ ಅಬ್ದುಲ್ ಖಾದರ್ ಹಾಜಿ, ಕೋಶಾಧಿಕಾರಿ ಸಾಧುಕುಂಞು ಸಾಗ್ ಬಾಗ್, ಉಪಾಧ್ಯಕ್ಷ ಇಬ್ರಾಹಿಂ ಕೂಡಾರ, ಕುಂಞÂ ಹಾಜಿ, ಅಶ್ರಫ್ ಮಾರಾಠಿಮೂಲೆ, ಜೊತೆ ಕಾರ್ಯದರ್ಶಿ ಇಸ್ಮಾಯಿಲ್ ಸಾಗ್, ಹಮೀದ್ ಕಿನ್ಯ, ಮಾಜಿ ಅಧ್ಯಕ್ಷ…
ಉಳ್ಳಾಲ : ತೊಕ್ಕೊಟ್ಟು ಒಳಪೇಟೆಯ ಮನೆಯಿಂದ 15 ಪವನ್ ಚಿನ್ನ ಹಾಗೂ ರೂ.5000 ನಗದು ಕಳವುಗೈದಿರುವ ಘಟನೆ ಮಧ್ಯರಾತ್ರಿ ನಡೆದಿದೆ.ತೊಕ್ಕೊಟ್ಟು ಒಳಪೇಟೆ ಓವರ್ ಬ್ರಿಡ್ಜ್ ಬಳಿಯ ಜಯರಾಜ್ ಎಂಬವರ ಮನೆಯಲ್ಲಿ ಕಳವು ನಡೆದಿದೆ. ಮನೆಮಂದಿ ಮಲಗಿದ್ದ ಸಂದರ್ಭ ಹಂಚು ತೆಗೆದು ಒಳನುಗ್ಗಿರುವ ಕಳ್ಳರು ಕಳವು ನಡೆಸಿದ್ದಾರೆ. ಸದ್ದು ಕೇಳಿದ ಮನೆಯಲ್ಲಿದ್ದ ಮಹಿಳೆಯೊಬ್ಬರು ಬೊಬ್ಬಿಡುವ ಸಂದರ್ಭ ಕಳ್ಳರು ಪರಾರಿಯಾಗಿದ್ದಾರೆ. ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

