ಉಳ್ಳಾಲ: ಸೇತುವೆಯಿಂದ ಜಿಗಿದು ಆತ್ಮಹತ್ಯೆ ನಡೆಸುವವರ ಶೋಧ ಕಾರ್ಯಗಳಿಗೆ ಜಿಲ್ಲಾಡಳಿತದಿಂದ ಲಕ್ಷಾಂತರ ಹೊರೆಯಾಗುತ್ತಿದ್ದು, ಇಂತಹ ಖರ್ಚು ಮಾಡುವುದನ್ನು ಉಳಿಸುವ, ಆತ್ಮಹತ್ಯೆ ನಡೆಸದಂತೆ ಮನಪರಿವರ್ತಿಸುವ ಸಲುವಾಗಿ ನೇತ್ರಾವತಿ ಸೇತುವೆಯುದ್ದಕ್ಕೂ ಫೆನ್ಸಿಂಗ್ ಮತ್ತು ಸಿಸಿಟಿವಿಯನ್ನು ಅಳವಡಿಸಲಾಗಿದೆ ಎಂದು ಮಂಗಳೂರು ಉತ್ತರ ಕ್ಷೇತ್ರ ಶಾಸಕ ವೇದವ್ಯಾಸ ಕಾಮತ್ ಹೇಳಿದ್ದಾರೆ. ಅವರು ಮುಡಾ ಅಭಿವೃದ್ಧಿ ಪ್ರಾಧಿಕಾರ 63 ಲಕ್ಷ ರೂ. ವೆಚ್ಚದಲ್ಲಿ ನೇತ್ರಾವತಿ ಸೇತುವೆಗೆ ನಿರ್ಮಿಸಿದ ಫೆನ್ಸಿಂಗ್ ಮತ್ತು ಸಿಸಿಟಿವಿಯನ್ನು ಬುಧವಾರ ಉದ್ಘಾಟಿಸಿ ಮಾತನಾಡಿದರು. ಜನ ಕೆಟ್ಟ ಸಂದರ್ಭದಲ್ಲಿ ನೇತ್ರಾವತಿ ಸೇತುವೆಯನ್ನೇ ಅವಲಂಬಿಸಿ ಆತ್ಮಹತ್ಯೆ ನಡೆಸುತ್ತಿದ್ದರು. ಒಂದು ವರ್ಷದಲ್ಲಿ ಅಂದಾಜು 10-15 ರಷ್ಟು ಮಂದಿ ಆತ್ಮಹತ್ಯೆಗೈದಿರುವ ಪ್ರಕರಣಗಳು ನಡೆದಿವೆ. ಅಲ್ಲದೆ ಅಂತರಾಷ್ಟ್ರೀಯ ಮಟ್ಟದ ಉದ್ಯಮಿ ಸಿದ್ದಾರ್ಥ್ ಕೂಡಾ ಆತ್ಮಹತ್ಯೆ ನಡೆಸಿರುವುದು , ಮಂಗಳೂರಿನ ಪಾಲಿಗೆ ನೇತ್ರಾವತಿ ಸೇತುವೆ ಕಪ್ಪು ಚುಕ್ಕೆಯಾಗಿ ಪರಿಣಮಿಸಿತ್ತು. ಆತ್ಮಹತ್ಯೆ ಸಂದರ್ಭ ಜಿಲ್ಲಾಡಳಿತ ನೇತೃತ್ವದಲ್ಲಿ ಪೊಲೀಸ್ ಇಲಾಖೆ, ಅಗ್ನಿ ಶಾಮಕ ದಳ, ಕರಾವಳಿ ಕಾವಲು ಪಡೆ , ಮೀನುಗಾರರು ಎಲ್ಲರೂ ಸೇರಿಕೊಂಡು ಶೋಧ ಕಾರ್ಯಕ್ಕರ…
Author: UllalaVani
ಉಳ್ಳಾಲ : ಆಶ್ರಮ ಶಾಲೆಗೆ ದಾನದ ಹಣ ನೀಡಲು ತೆರಳಿದ್ದ ಗರ್ಭಿಣಿ ನಿಗೂಢ ರೀತಿಯಲ್ಲಿ ನಾಪತ್ತೆಯಾಗಿರುವ ಘಟನೆ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಕಲ್ಲಾಪುವಿನಲ್ಲಿ ಮಂಗಳವಾರ ಮಧ್ಯಾಹ್ನ ವೇಳೆ ಸಂಭವಿಸಿದೆ. ಈ ಕುರಿತು ಉಳ್ಳಾಲ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿದೆ. ಸೋಮೇಶ್ವರ ಒಂಭತ್ತುಕೆರೆ ನಿವಾಸಿ ಇಬ್ರಾಹಿಂ ಎಂಬವರ ಪುತ್ರಿ ಹಿನಾಝ್ (25) ನಾಪತ್ತೆಯಾದವರು. ವಿದೇಶದಲ್ಲಿರುವ ಪತಿಯ ಜತೆಗೆ ನೆಲೆಸಿದ್ದ ಹಿನಾಝ್ ವಾರಗಳ ಹಿಂದೆ ಮನೆಗೆ ಬಂದಿದ್ದರು. ಮಾ.2 ರ ಮಧ್ಯಾಹ್ನ 12ರ ಹೊತ್ತಿಗೆ ಕಲ್ಲಾಪು ಒಳರಸ್ತೆಯಲ್ಲಿರುವ ಆಶ್ರಮ ಸಹಿತ ಶಾಲೆಗೆ ತಾನು ಹರಕೆ ಹೊತ್ತಿದ್ದ ನಗದು ನೀಡಲೆಂದು ಹಿನಾಝ್ ಮನೆಯಿಂದ ಹೊರಟಿದ್ದರು. ಒಂಭತ್ತುಕೆರೆಯಿಂದ ಬಸ್ ಮೂಲಕ ಬಂದಿದ್ದ ಅವರು ಕಲ್ಲಾಪು ಬಳಿ ಇಳಿದು ರಿಕ್ಷಾದಲ್ಲಿ ತೆರಳಿರುವವರು ನಿಗೂಢ ರೀತಿಯಲ್ಲಿ ನಾಪತ್ತೆಯಾಗಿದ್ದಾರೆ. ಹಿನಾಝ್ ಅವರಿಗೆ ಒಂದರ ಹರೆಯದ ಮಗುವೊಂದಿದ್ದು, ಇದೀಗ ತುಂಬು ಗರ್ಭಿಣಿಯಾಗಿದ್ದಾರೆ. ರಿಕ್ಷಾದಲ್ಲಿ ತೆರಳಿರುವ ಅವರು ಶಾಲೆಗೂ ತೆರಳದೆ ನಾಪತ್ತೆಯಾಗಿರುವ ಕುರಿತು ಮನೆಮಂದಿ ಆತಂಕ ವ್ಯಕ್ತಪಡಿಸಿದ್ದಾರೆ. ಹಿನಾಝ್ ಅವರಲ್ಲಿ ರೂ.7,000…
ಉಳ್ಳಾಲ: ತಲಪಾಡಿ ರೂಟ್ ಬಸ್ಸುಗಳು ತಲಪಾಡಿ ಬಸ್ ನಿಲ್ದಾಣಕ್ಕೆ ತೆರಳದೆ ಒಂದು ಕಿ.ಮೀ ಉದ್ದಕ್ಕೆ ಪ್ರಯಾಣಿಕರು ನಡೆದುಕೊಂಡು ಸಾಗುತ್ತಾ ತೊಂದರೆಗೀಡಾಗುತ್ತಿರುವುದರ ವಿರುದ್ಧ ತಲಪಾಡಿ ನಾಗರಿಕರು ಮತ್ತು ಕೇರಳದಿಂದ ಬರುವ ಪ್ರಯಾಣಿಕರು ಟೋಲ್ ಗೇಟ್ , ರಾ.ಹೆ ಪ್ರಾಧಿಕಾರ ಮತ್ತು ಸಿಟಿ ಬಸ್ ಮಾಲೀಕರ ವಿರುದ್ದ ಟೋಲ್ ಎದುರು ನಿಂತು ಪ್ರತಿಭಟನೆ ನಡೆಸಿ, ಮಾನವ ಸರಪಳಿಯನ್ನು ರಚಿಸಿ, ಒಂದು ದಿನ ಟೋಲ್ ರಹಿತ ಬಸ್ ತೆರಳುವಂತೆ ಮಾಡಿದ್ದಾರೆ. ಪ್ರತಿಭಟನೆ ನೇತೃತ್ವ ವಹಿಸಿದ್ದ ಜಿ.ಪಂ ಮಾಜಿ ಸದಸ್ಯ ವಿನಯ ನಾಯ್ಕ್ ಮಾತನಾಡಿ, ಟೋಲ್ ನಿರ್ಮಿಸುವ ಸಂದರ್ಭ ಗ್ರಾಮದ ಜನರಲ್ಲಿದ್ದ 8 ಎಕರೆ ಪ್ರದೇಶವನ್ನು ಸೆಂಟ್ಸ್ ಗೆ 12,000 ರೂ. ನೀಡಿ ಖರೀದಿಸಿದರು. ಅದರ ಜೊತೆಗೆ ಸರಕಾರಿ ಜಾಗವನ್ನು ಗುಳುಂ ಮಾಡಿದರು. ಇದೀಗ ಗ್ರಾಮದ ಜನರಿಗೆ ಇರುವ ಬಸ್ ವ್ಯವಸ್ಥೆಗೆ ಅಡ್ಡಿಯುಂಟು ಮಾಡುತ್ತಿದ್ದಾರೆ. ಸಾಮಾನ್ಯ ಜನ ಟೋಲ್ ಎದುರು ನಿಂತರೆ ಬೊಬ್ಬಿಡುವ ಸಿಬ್ಬಂದಿ, ಒಂದು ವರ್ಷದಿಂದ ಸಿಟಿ ಬಸ್ ಗಳು ಎದುರಲ್ಲೇ ನಿಂತರೂ ಮಾತನಾಡುತ್ತಿಲ್ಲ. ಟೋಲ್…
ಉಳ್ಳಾಲ: ಹಳೆ ವೈಷಮ್ಯಕ್ಕೆ ಸಂಬಂಧಿಸಿ ಯುವಕನಿಗೆ ತಂಡವೊಂದು ಹಲ್ಲೆ ನಡೆಸಿರುವ ಘಟನೆ ಉಳ್ಳಾಲ ಠಾಣಾ ವ್ಯಾಪ್ತಿಯ ಕೆ.ಸಿರೋಡ್ ಸಮೀಪ ಶುಕ್ರವಾರ ತಡರಾತ್ರಿ ವೇಳೆ ನಡೆದಿದೆ. ಮೂಲತ: ಪುತ್ತೂರು ನಿವಾಸಿ , ಸದ್ಯ ತಲಪಾಡಿಯಲ್ಲಿ ಇರುವ ಶಿವರಾಮ (38) ಹಲ್ಲೆಗೊಳಗಾದವರು. ಕೆ.ಸಿರೋಡ್ ಸಮೀಪ ನಡೆಯುತ್ತಿದ್ದ ದೈವಸ್ಥಾನದ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದ ಸಂದರ್ಭ ಕುಂಜತ್ತೂರು ನಿವಾಸಿ ಆದಿ ಮತ್ತು ಐವರ ತಂಡ ಸ್ಥಳಕ್ಕಾಗಮಿಸಿ ಶಿವರಾಮನಿಗೆ ಹಲ್ಲೆ ನಡೆಸಿದ್ದಾರೆ. ಕುಂಜತ್ತೂರು ಕ್ಲಬ್ ವಿಚಾರಕ್ಕೆ ಸಂಬಂಧಿಸಿ ಶಿವರಾಮ ಮತ್ತು ಕುಂಜತ್ತೂರು ನಿವಾಸಿ ಯುವಕರಿಗೆ ವೈಷಮ್ಯ ಇತ್ತು ಎನ್ನಲಾಗಿದೆ. ಈ ಸಂಬಂಧ ಹಲ್ಲೆ ನಡೆದಿದೆ. ಶಿವರಾಮ ಹಿಂದೆ ಬಸ್ ನಲ್ಲು ನಿರ್ವಾಹಕನಾಗಿದ್ದು, ಸದ್ಯ ಮರೋಳಿ ಬಾರ್ ನಲ್ಲಿ ಕಾರ್ಮಿಕನಾಗಿದ್ದಾನೆ. ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಉಳ್ಳಾಲ: ರಾಷ್ಟ್ರೀಯ ಹೆದ್ದಾರಿಯನ್ನು ತಪ್ಪಿಸಿ ಕಳ್ಳ ದಾರಿಯಾಗಿ ಒಳರಸ್ತೆ ಮೂಲಕ ಮರಳು ಸಾಗಾಟ ನಡೆಸುತ್ತಿದ್ದ ಟಿಪ್ಪರ್ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ತೆಂಗಿನ ಮರಕ್ಕೆ ಗುದ್ದಿದ ಪರಿಣಾಮ ಮರ ಉರುಳಿ ಬಿದ್ದು ಟಿಪ್ಪರ್ ಪಲ್ಟಿಯಾಗಿರುವ ಘಟನೆ ಇಂದು ಮದ್ಯಾಹ್ನ ವೇಳೆ ಸಂಭವಿಸಿದೆ. ಟಿಪ್ಪರ್ ದೇವಿಪುರ ದೇವಸ್ಥಾನಕ್ಕೆ ಢಿಕ್ಕಿ ಹೊಡೆಯುವುದರಿಂದ ಸ್ವಲ್ಪದರಲ್ಲೇ ತಪ್ಪಿದ್ದು ದೇವಸ್ಥಾನದಿಂದ ಹೊರಬರುತ್ತಿದ್ದ ಮಹಿಳೆಯೊಬ್ಬರು ಪವಾಡಸದೃಶವಾಗಿ ಪಾರಾಗಿದ್ದಾರೆ. ಕೇರಳ ಕಡೆಯತ್ತ ಅಕ್ರಮವಾಗಿ ಮರಳು ಸಾಗಾಟ ನಡೆಸುವ ಸಂದರ್ಭ ಘಟನೆ ನಡೆದಿದೆ ಅನ್ನುವ ಆರೋಪ ಸ್ಥಳೀಯರಿಂದ ಕೇಳಿಬಂದಿದೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಇಂದು ಕೋವಿಡ್ ಚೆಕ್ ಪಾಯಿಂಟ್ ಆರಂಭಗೊಂಡಿದ್ದು, ಪೊಲೀಸರು ಹೆಚ್ಚಿನ ಸಂಖ್ಯೆಯಲ್ಲಿದ್ದರು. ಇದನ್ನು ತಪ್ಪಿಸಿ ಚಾಲಕ ಒಳರಸ್ತೆಯ ಮುಖೇನ ಮರಳು ಸಾಗಾಟ ನಡೆಸುತ್ತಿದ್ದ ಅನ್ನುವ ಆರೋಪ ಕೇಳಿಬಂದಿದೆ. ರಾತ್ರಿ ವೇಳೆ ಹೆಚ್ಚಿನ ಸಂಖ್ಯೆಯಲ್ಲಿ ದೇವಿಪುರ ರಸ್ತೆಯಾಗಿ ತೆರಳುವ ಮರಳು ಲಾರಿಗಳು ಇದೀಗ ಹಗಲು ಹೊತ್ತಿನಲ್ಲಿಯೂ ಸಂಚರಿಸಲು ಆರಂಭವಾಗಿದೆ. ಸ್ಥಳೀಯರು ಮರಳು ಮಾಫಿಯಾ ವಿರುದ್ಧ ದೂರು ನೀಡಲು ಹೆದರುತ್ತಿದ್ದು, ಇದರಿಂದ ಮರಳು ಮಾಫಿಯಾದವರ …
ಉಳ್ಳಾಲ: ಕೇರಳದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾದ ಹಿನ್ನೆಲೆಯಲ್ಲಿ ರಾಜ್ಯಗಳ ಗಡಿಭಾಗ ತಲಪಾಡಿಯಲ್ಲಿ ಆರೋಗ್ಯ ಅಧಿಕಾರಿಗಳ ಪರಿಶೀಲನಾ ಕೇಂದ್ರ ಇಂದಿನಿಂದ ಮತ್ತೆ ಆರಂಭಗೊಂಡಿದೆ. ಆರ್ ಟಿ ಪಿಸಿ ಆರ್ ವರದಿ ಕೈಯಲ್ಲಿದ್ದಲ್ಲಿ ಮಾತ್ರ ನಾಳೆಯಿಂದ ಕರ್ನಾಟಕ ಪ್ರವೇಶಕ್ಕೆ ಅವಕಾಶ ಎಂದು ಅಧಿಕಾರಿಗಳು ತಿಳಿಸಿದರು. ಬೆಳಿಗ್ಗೆ 7 ರಿಂದ ಜಿಲ್ಲಾ ಆರೋಗ್ಯ ಅಧಿಕಾರಿ ರಾಮಕೃಷ್ಣ ಬಾಯರಿ, ತಹಸೀಲ್ದಾರ್ ಗುರುಪ್ರಸಾದ್ ನೇತೃತ್ವದ ತಂಡ ತಲಪಾಡಿ ಗಡಿಭಾಗದಲ್ಲಿ ನಿಂತು ಕೇರಳದಿಂದ ಬರುವವರನ್ನು ತಡೆದು ಟೆಸ್ಟ್ ರಿಮೋಟ್೯ ನೀಡುವಂತೆ ಸೂಚಿಸಿದರು. ಬರುವವರ ಪೈಕಿ ಯಾರಲ್ಲಿಯೂ ರಿಪೋರ್ಟ್ ಇಲ್ಲದೇ ಇದ್ದು, ನಾಳೆಯಿಂದ ಕಡ್ಡಾಯವಾಗಿ ಆರ್ ಟಿ ಪಿಸಿಆರ್ ವರದಿ ತರುವಂತೆ ಸೂಚಿಸಿದರು. ನಾಳೆಯಿಂದ ವರದಿ ಇಲ್ಲದೇ ಇದ್ದಲ್ಲಿ ಮಂಗಳೂರು ಪ್ರವೇಶ ಬಿಡುವುದಿಲ್ಲ ಎಂದು ಎಚ್ಚರಿಸಿದರು. ಪರೀಕ್ಷೆಗಳ ಆರಂಭವಾಗ್ತಾ ಇದೆ. ಕೆಲಸ ಈಗಷ್ಟೇ ಕೆಲ ದಿನಗಳಿಂದ ಆರಂಭವಾಗಿದೆ. ಆದರೆ ಏಕಾಏಕಿ ಮತ್ತೆ ಕಾನೂನುಗಳನ್ನು ಜಾರಿ ಮಾಡುವುದರಿಂದ ಗಡಿನಾಡ ಜನ ಸಂಕಷ್ಟಕ್ಕೀಡಾಗಲಿದ್ದಾರೆ ಎಂದರು ನ್ಯಾಯಾಲಯಕ್ಕೆ ಹೋಗ್ತೇವೆ: ಹರ್ಷಾದ್ ವರ್ಕಾಡಿ: ಕೇಂದ್ರ ಸರಕಾರ…
ಉಳ್ಳಾಲ: ಗೇರು ಕೃಷಿ ಅಭಿವೃದ್ಧಿಯ ಕುರಿತಾಗಿ ಉತ್ತೇಜನದ ಕಾರ್ಯಕ್ರಮಗಳು ತೀರಾ ಕಡಿಮೆಯಾಗಿದ್ದು ಜನರು ಸರಕಾರವನ್ನು ಮಾತ್ರ ಅವಲಂಬಿಸುವಂತಾಗದೆ ಖಾಸಗಿ ಅಥವಾ ಎನ್‍ಜಿಒಗಳ ಪ್ರಾಯೋಜಕತ್ವದಲ್ಲಿ ಉತ್ತೇಜನ ನೀಡುವ ಕಾರ್ಯಕ್ರಮಗಳು ನಡೆಯುವಂತಾಗಬೇಕು ಎಂದು ಕರ್ನಾಟಕ ರಾಜ್ಯ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷ ಮಣಿರಾಜ್ ಶೆಟ್ಟಿ ಹೇಳಿದರು.ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ ಶಿವಮೊಗ್ಗ, ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರ ಉಳ್ಳಾಲ, ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರ ಬ್ರಹ್ಮಾವರ, ಗೇರು ಮತ್ತು ಕೋಕೋ ಅಭಿವೃದ್ಧಿ ನಿರ್ದೇಶನಾಲಯ ಕೊಚ್ಚಿನ್, ಕರ್ನಾಟಕ ರಾಜ್ಯ ಗೇರು ಅಭಿವೃದ್ಧಿ ನಿಗಮ ಮಂಗಳೂರು, ಕರ್ನಾಟಕ ರಾಜ್ಯ ಗೇರು ಉತ್ಪಾದಕರ ಸಂಘ ಮಂಗಳೂರು, ತೋಟಗಾರಿಕೆ ಇಲಾಖೆ ದ.ಕ. , ಕೃಷಿ ಇಲಾಖೆ ದ.ಕ, ಕೃಷಿ ವಿಜ್ಞಾನ ಕೇಂದ್ರ ಮಂಗಳೂರು ಮತ್ತು ಬ್ರಹ್ಮಾವರ , ಜಿಲ್ಲಾ ಕೃಷಿಕ ಸಮಾಜ ದ.ಕ. , ಬ್ರಹ್ಮಾವರದ ಡಿಪೆÇ್ಲೀಮಾ ಕೃಷಿ ಮಹಾವಿದ್ಯಾಲಯದ ಸಂಯುಕ್ತ ಆಶ್ರಯದಲ್ಲಿ ಶುಕ್ರವಾರ ಉಳ್ಳಾಲ ಕಾಪಿಕಾಡಿನ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರದಲ್ಲಿ ನಡೆದ…
UN Newsnetworks ಉಳ್ಳಾಲ: ಅಯೋಧ್ಯೆ ರಾಮನ ಮಂದಿರವಲ್ಲ, ಅದು ಆರ್ ಎಸ್ ಎಸ್ ನ ಮಂದಿರವಾಗಿದೆ. ಮುಸ್ಲಿಂ ಉದ್ಯಮಿಗಳು , ವ್ಯಾಪಾರಸ್ಥರು ಮಂದಿರ ನಿರ್ಮಾಣಕ್ಕೆ ಹಣ ಸಂಗ್ರಹಕ್ಕೆ ಬಂದಲ್ಲಿ ಒಂದು ರೂಪಾಯಿ ಕೂಡ ಕೊಡದಿರಿ. ಸಿಎಎ ಎನ್ ಆರ್ ಸಿ ಯಾಔ ರೀತಿಯಲ್ಲಿ ತ್ಯಜಿಸಿದ್ದೀರಿ ಅದೇ ರೀತಿಯಲ್ಲಿ ಧೈರ್ಯದಿಂದ ಹಿಂದಕ್ಕೆ ಕಳುಹಿಸಿ ಎಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅನೀಸ್ ಅಹಮ್ಮದ್ ವಿವಾದಸ್ಪದ ಹೇಳಿಕೆ ನೀಡಿದ್ದಾರೆ. ಅವರು ಉಳ್ಳಾಲ ಒಂಭತ್ತುಕೆರೆಯ ಅನಿಲ ಕಂಪೌಂಡಿನಲ್ಲಿ ಪಿಎಫ್ ಐ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ಎರಡು ದಿನಗಳ ಹಿಂದೆ ನಡೆದ ದೇಶಕ್ಕಾಗಿ ಪಾಪ್ಯುಲರ್ ಫ್ರಂಟ್ ಜತೆಗೆ ಘೋಷಣೆಯಡಿ ಹಮ್ಮಿಕೊಂಡ ಯುನಿಟಿ ಮಾಚ್ ್ ಮತ್ತು ಬೃಹತ್ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಆರ್ ಎಸ್ ಎಸ್ ಎಂಬುದು ಹಿಂದೂ ವಿರೋಧಿ ಸಂಘಟನೆ. ದೇವಸ್ಥಾನದ ಜಾಗದ ಹೆಸರಿನಲ್ಲಿ ಹೋರಾಡಿ ಅಮಾಯಕ ಮುಸ್ಲಿಮರನ್ನು ಹತ್ಯೆಗೈದು, ಇದೀಗ ದೇವಸ್ಥಾನ ನಿರ್ಮಾಣಕ್ಕೆ ಸ್ಥಳ ಸಿಕ್ಕರೂ ಮಂದಿರ ನಿರ್ಮಾಣಕ್ಕೆ…
ಉಳ್ಳಾಲ: ಫಾಸ್ಟ್ ಟ್ಯಾಗ್ ಅಳವಡಿಸದೇ ಇದ್ದಲ್ಲಿ ದುಬಾರಿ ಸುಂಕ ಪಾವತಿಸುವುದು ಹೊಸ ಕಾನೂನು. ಆದರೆ ತಲಪಾಡಿ ಟೋಲ್ ಗೇಟಿನಲ್ಲಿ ಎರಡು ಪಟ್ಟು ಸುಂಕ ಪಾವತಿ ಮಾಡಿ ಗೇಟ್ ದಾಟಿರುವ ಪ್ರಸಂಗ ಇಂದು ನಡೆದಿದೆ.ಉಪ್ಪಳ ಪಚ್ಚಂಬಳ ನಿವಾಸಿ ಸಂದೇಶ್ ಎಂಬವರು ಮಧ್ಯಾಹ್ನ 11 ಗಂಟೆ ಸುಮಾರಿಗೆ ಮನೆ ಕಡೆಗೆ ಕಾರಿನಲ್ಲಿ ತೆರಳುವ ಸಂದರ್ಭ ಫಾಸ್ಟ್ ಟ್ಯಾಗ್ ಇಲ್ಲದೇ ರೂ. 80 ದುಪ್ಪಟ್ಟು ಸುಂಕ ಪಾವತಿಸಿದ್ದರು. ಬಳಿಕ ಟೋಲ್ ಸಮೀಪದಲ್ಲೇ ಇರುವ ಫಾಸ್ಟ್ ಟ್ಯಾಗ್ ಕೌಂಟರಿನಲ್ಲಿ ಟ್ಯಾಗ್ ಖರೀದಿಸಿದರು. ಅಲ್ಲಿನ ಸಿಬ್ಬಂದಿ ಎರಡು ಗಂಟೆಗಳ ಬಳಿಕ ಫಾಸ್ಟ್ ಟ್ಯಾಗ್ ಚಾಲ್ತಿಗೆ ಬರುವುದಾಗಿ ತಿಳಿಸಿದ್ದಾರೆ. ಎರಡು ಗಂಟೆ ಬಿಟ್ಟು 2 ಗಂಟೆ ಆಸುಪಾಸಿಗೆ ವಾಪಸ್ಸು ಬರುವ ಸಂದರ್ಭ ಮತ್ತೆ ಟೋಲ್ ಸಿಬ್ಬಂದಿ ಸುಂಕ ಕೇಳಿದ್ದಾರೆ. ಅದಾಗಲೇ ದುಪ್ಪಟ್ಟು ಸುಂಕ ಪಾವತಿಸಿರುವುದಾಗಿ ತಿಳಿಸಿ ರಶೀದಿ ತೋರಿಸಿದಾಗ ವಾಹನದ ಸಂಖ್ಯೆಯನ್ನು ತಪ್ಪಾಗಿ ನಮೂದಿಸಿ ಸುಂಕ ಪಡೆಯಲಾಗಿತ್ತು. ಆದರೂ ಸುಮ್ಮನಾದ ಸಂದೇಶ್ ತಮ್ಮದಲ್ಲದ ತಪ್ಪಿಗೆ ರೂ.80 ಮತ್ತೆ ಪಾವತಿಸಿದ್ದಾರೆ. ಅಲ್ಲಿಂದ…
ಉಳ್ಳಾಲ: ಮಾದಕ ವ್ಯಸನಿಯೊಬ್ಬ ಮೊಬೈಲ್ ಅಂಗಡಿಯಲ್ಲಿ ದಾಂಧಲೆ ನಡೆಸಿದ್ದು, ಘಟನೆಯ ಕುರಿತು ಪೆÇಲೀಸ್ ಕಂಪ್ಲೇಂಟ್ ನೀಡಿದ ಮೊಬೈಲ್ ಅಂಗಡಿಗೆ ತೆರಳಿ ತಲವಾರು ಬೀಸಿ ಅಂಗಡಿಯ ಗಾಜುಗಳನ್ನು ಪುಡಿಗೈದ ಘಟನೆ ತೊಕ್ಕೊಟ್ಟು ಸ್ಮಾರ್ಟ್ ಸಿಟಿಯಲ್ಲಿ ನಡೆದಿದೆ. ಉಳ್ಳಾಲ ಸುಭಾಷ್ ನಗರ ನಿವಾಸಿ ಸವಾದ್ ಎಂಬಾತನೇ ದಾಂಧಲೆ ನಡೆಸಿದ ಆರೋಪಿಯಾಗಿದ್ದು, ನೌಫಾಲ್ ಅವರಿಗೆ ಸೇರಿದ ಅಂಗಡಿಗೆ ತೆರಳಿ ದಾಂಧಲೆ ನಡೆಸಿದ್ದ. ನೌಫಾಲ್ ಅದೇ ಕಟ್ಟಡದಲ್ಲಿರುವ ಕ್ರೀಡಾ ಸಾಮಾಗ್ರಿ ಮಾರಾಟದ ಮಳಿಗೆಯಲ್ಲಿ ಪಾಲುದಾರನಾಗಿದ್ದು, ಗಾಂಜಾ ವ್ಯಸನ ಮಾಡುತ್ತಿದ್ದ ಈತ ಈ ಹಿಂದೆಯೂ ದಾಂಧಲೆ ನಡೆಸಿದ್ದು, ನೌಫಾಲ್ ಪೆÇಲೀಸ್ ದೂರು ನೀಡಿದ ಹಿನ್ನೆಲೆಯಲ್ಲಿ ಪೆÇಲೀಸರ ಎದುರೆ ಅಂಗಡಿಗೆ ಕಲ್ಲು ಬಿಸಾಕಿದ್ದು ಬಳಿಕ ಅಂಗಡಿಯ ಎದುರು ಬಂದು ಚೂರಿಯಲ್ಲಿ ಗ್ಲಾಸ್ ಗೆ ಹಾನಿಗೊಳಿಸಿದ್ದಾನೆ. ಉಳ್ಳಾಲ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

