ಉಳ್ಳಾಲ : ತೊಕ್ಕೊಟ್ಟು ಒಳಪೇಟೆಯ ಮನೆಯಿಂದ 15 ಪವನ್ ಚಿನ್ನ ಹಾಗೂ ರೂ.5000 ನಗದು ಕಳವುಗೈದಿರುವ ಘಟನೆ ಮಧ್ಯರಾತ್ರಿ ನಡೆದಿದೆ.ತೊಕ್ಕೊಟ್ಟು ಒಳಪೇಟೆ ಓವರ್ ಬ್ರಿಡ್ಜ್ ಬಳಿಯ ಜಯರಾಜ್ ಎಂಬವರ ಮನೆಯಲ್ಲಿ ಕಳವು ನಡೆದಿದೆ. ಮನೆಮಂದಿ ಮಲಗಿದ್ದ ಸಂದರ್ಭ ಹಂಚು ತೆಗೆದು ಒಳನುಗ್ಗಿರುವ ಕಳ್ಳರು ಕಳವು ನಡೆಸಿದ್ದಾರೆ. ಸದ್ದು ಕೇಳಿದ ಮನೆಯಲ್ಲಿದ್ದ ಮಹಿಳೆಯೊಬ್ಬರು ಬೊಬ್ಬಿಡುವ ಸಂದರ್ಭ ಕಳ್ಳರು ಪರಾರಿಯಾಗಿದ್ದಾರೆ. ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Author: UllalaVani
ಬೋಳಿಯಾರು :ಮೈಸೂರು ಇಂಡಸ್ಟ್ರೀಸ್ ಸಂಸ್ಥೆಯ ಲಾಭದ ಹಣ ತಮ್ಮ ಕ್ಷೇತ್ರಕ್ಕೂ ತಂದು ಅಭಿವೃದ್ಧಿಗೆ ಬಳಸಲು ಸಾಧ್ಯ ಎಂದು ತೋರಿಸುವ ಜೊತೆಗೆ ತಾನು ಕಲಿತ ಎಲ್ಲ ಶಾಲೆಗಳು, ಸೇವಾಶ್ರಮಕ್ಕೆ ನೀಡುವ ಮೂಲಕ ಅಧ್ಯಕ್ಷ ಸಂತೋಷ್ ಕುಮಾರ್ ಸಾಮಾಜಿಕ ಬದ್ಧತೆ ತೋರ್ಪಡಿಸಿದ್ದಾರೆ ಎಂದು ಅಮ್ಮೆಂಬಳ ಸೇವಾ ಸಹಕಾರಿ ಬ್ಯಾಂಕ್ ಅಧ್ಯಕ್ಷ ಟಿ.ಜಿ.ರಾಜಾರಾಂ ಭಟ್ ಅಭಿಪ್ರಾಯಪಟ್ಟರು.ಬೋಳಿಯಾರ್ ಅಮರ್ ದೀಪ ಸಭಾಂಗಣದಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ಕರ್ನಾಟಕ ಸರ್ಕಾರದ ಮೈಸೂರು ಎಲೆಕ್ಟ್ರಿಕಲ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಸಿಆರ್ ಎಸ್ ನಿಧಿಯಿಂದ ಬಿಡುಗಡೆಗೊಳಿಸಲಾದ 25 ಲಕ್ಷ ಅನುದಾನ ಮಂಗಳೂರು ಕ್ಷೇತ್ರದ 12 ಶಾಲೆಗಳು ಮತ್ತು ಎರಡು ಸೇವಾಶ್ರಮಗಳಿಗೆ ಹಸ್ತಾಂತರಿಸಿ ಮಾತನಾಡಿದರು.ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಮೂಡಬಿದ್ರೆ ಮಾತನಾಡಿ, ಇದುವರೆಗೆ ಎಂಇಇಎಲ್ ಮತ್ತು ಕಿಯೋನಿಕ್ಸ್ ಸಂಸ್ಥೆಗೆ ಶಾಸಕರೇ ಅಧ್ಯಕ್ಷರಾಗುತ್ತಿದ್ದರೆ ಬಿಜೆಪಿ ಆಡಳಿತ ಪ್ರಥಮ ಬಾರಿಗೆ ಪಕ್ಷದ ಕಾರ್ಯಕರ್ತರಿಗೆ ನೀಡಿದೆ. ಎಂಇಇಎಲ್ ನಿಂದ ಪ್ರಥಮ ಬಾರಿಗೆ ದಕ್ಷಿಣ ಕನ್ನಡ ಜಿಲ್ಲೆಗೆ ಅನುದಾನ ಬರುವ ಜೊತೆ 36 ಮಂದಿಗೆ ಉದ್ಯೋಗವಕಾಶವೂ ದೊರಕುವಂತಾಗಿದೆ ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಬೋಳಿಯಾರ್…
ಉಳ್ಳಾಲ: ಹಿಟ್ ಆಂಡ್ ರನ್ ಪ್ರಕರಣದಲ್ಲಿ ಸ್ಕೂಟರ್ ಸವಾರ ಸಾವನ್ನಪ್ಪಿರುವ ಘಟನ ತೊಕ್ಕೊಟ್ಟು ಕಲ್ಲಾಪಿನಲ್ಲಿ ನಿನ್ನೆ ಮಧ್ಯರಾತ್ರಿ ವೇಳೆ ಸಂಭವಿಸಿದೆ. ಜಲ್ಲಿಗುಡ್ಡೆ ನಿವಾಸಿ ಪ್ರಶಾಂತ್(32) ಮೃತರು. ತಲಪಾಡಿ ದೇವಿಪುರ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವಾರ್ಷಿಕ ಉತ್ಸವಕ್ಕೆ ತೆರಳಿ ಮನೆಗೆ ಹಿಂತಿರುಗುವ ವೇಳೆ ಘಟನೆ ನಡೆದಿದೆ.ದಕ್ಷಿಣ ಸಂಚಾರಿ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ವಿವಾಹಿತರಾಗಿರುವ ಪ್ರಶಾಂತ್ ಪತ್ನಿ ಮತ್ತು ಏಳರ ಹರೆಯದ ಗಂಡು ಮಗುವನ್ನು ಅಗಲಿದ್ದಾರೆ.
ಉಳ್ಳಾಲ: ಆಧುನಿಕ ತಂತ್ರಜ್ಞಾನವನ್ನು ಉಪಯೋಗಿಸುತ್ತಿರುವ ಮಾದಕ ಪದಾರ್ಥಗಳ ದಂಧೆಕೋರರು ಡಾರ್ಕ್ ನೆಟ್ ಅನ್ನುವ ವೆಬ್ ಸೈಟ್ ಮೂಲಕ ದಂಧೆ ಆರಂಭಿಸಿದ್ದಾರೆ. ಕೊರಿಯರ್ ಮೂಲಕ ಪಾರ್ಸೆಲ್ ತರಿಸಿ ವ್ಯವಹಾರಗಳು ನಡೆಯುತ್ತಿವೆ. ಇದಕ್ಕೆ ಇತ್ತೀಚೆಗೆ ನೆದರ್‍ಲ್ಯಾಂಡ್‍ನಿಂದ ಉಡುಪಿಗೆ ಕೊರಿಯರ್ ಮುಖೇನ ಮಾದಕ ಪದಾರ್ಥ ಪಾರ್ಸೆಲ್ ಮಾಡಿರುವುದು ಉದಾಹರಣೆಯಾಗಿದೆ ಎಂದು ಮಂಗಳೂರು ದಕ್ಷಿಣ ಪೊಲೀಸ್ ಸಹಾಯಕ ಆಯುಕ್ತ ರಂಜಿತ್ ಬಂಡಾರು ಐಪಿಎಸ್ ಹೇಳಿದರು. ಅವರು ನಿಟ್ಟೆ ವಿಶ್ವವಿದ್ಯಾಲಯ ದ ಕೆ.ಎಸ್ ಹೆಗ್ಡೆ ವೈದ್ಯಕೀಯ ಅಕಾಡೆಮಿ ಯ ಮನೋವೈದ್ಯಕೀಯ ಶಾಸ್ತ್ರ ವಿಭಾಗದ ಆಶ್ರಯದಲ್ಲಿ ದೇರಳಕಟ್ಟೆ ಆವಿಷ್ಕಾರ ಸಭಾಂಗಣದಲ್ಲಿ ಬುಧವಾರ ಆಯೋಜಿಸಲಾದ ` ಹೋಲಿಸ್ಟಿಕ್ ಮೆನೇಜ್‍ಮೆಂಟ್ ಆಫ್ ಸಬ್‍ಸ್ಟೆನ್ಸ್ ಯೂಸ್ ಡಿಸಾರ್ಡರ್ಸ್ ‘ ಅನ್ನುವ ವಿಚಾರದ ಕುರಿತು ಆಯೋಜಿಸಲಾದ ಒಂದು ದಿನದ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದರು. ಮಾದಕ ವಸ್ತುಗಳು ಪೊಲೀಸ್ ಇಲಾಖೆಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಎನ್ ಡಿಪಿಎಸ್ ಕಾಯ್ದೆಯಡಿ ಪ್ರಕರಣಗಳಿಗೆ ಇಲಾಖೆ ಹೆಚ್ಚಿನ ಗಮನ ನೀಡುತ್ತಿದೆ. ಆದರೂ ಪ್ರಕರಣಗಳು ಹೆಚ್ಚಾಗುತ್ತಿವೆ. ಮಂಗಳೂರು ಕಮೀಷನರೇಟ್ ವ್ಯಾಪ್ತಿಯಲ್ಲಿ ಮಾದಕ ವ್ಯಸನಗಳ…
ಉಳ್ಳಾಲ: ನಿದ್ರೆ ತೊಂದರೆ ಅನುಭವಿಸುವ ಮಕ್ಕಳಿಗೆ ನಿಟ್ಟೆ ಸ್ಲೀಪ್ ಕ್ಲಿನಿಕ್ ಪರಿಣಾಮಕಾರಿಯಾಗಿ ಕಾರ್ಯಾಚರಿಸಲಿದೆ. 25 ವರ್ಷಗಳಿಂದ ಎ.ಬಿ ಶೆಟ್ಟಿ ದಂತ ವೈದ್ಯಕೀಯ ಕಾಲೇಜು ಉಚಿತವಾಗಿ ಜನರ ಹಲ್ಲಿನ ಚಿಕಿತ್ಸೆಯನ್ನು ನಡೆಸುತ್ತಿದೆ. ಇದೀಗ ಸ್ಲೀಪ್ ಕ್ಲಿನಿಕ್ ಆರಂಭಿಸುವ ಮೂಲಕ ಸಂಸ್ಥೆ ಮತ್ತೊಂದು ಮೈಲಿಗಲ್ಲು ಸ್ಥಾಪಿಸಿದೆ ಎಂದು ಎ.ಬಿ ಶೆಟ್ಟಿ ದಂತವಿಜ್ಞಾನ ಸಂಸ್ಥೆಯ ಡೀನ್ ಡಾ.ಯು ಕೃಷ್ಣ ನಾಯಕ್ ಅಭಿಪ್ರಾಯಪಟ್ಟರು. ಅವರು ವಿಶ್ವ ಮಲಗುವ ದಿನಾಚರಣೆ ಅಂಗವಾಗಿ ದೇರಳಕಟ್ಟೆಯ ಎ.ಬಿ ಶೆಟ್ಟಿ ಸ್ಮಾರಕ ದಂತ ವಿಜ್ಞಾನ ಸಂಸ್ಥೆಯ ಮಕ್ಕಳ ವಿಭಾಗ ಮತ್ತು ದಂತ ವೈದ್ಯಕೀಯ ಶಾಸ್ತ್ರ ವಿಭಾಗಗಳ ಆಶ್ರಯದಲ್ಲಿ ಎ.ಬಿ ಶೆಟ್ಟಿ ದಂತ ಮಹಾವಿದ್ಯಾಲಯದ ನಾಲ್ಕನೇ ಮಹಡಿಯಲ್ಲಿ ಆರಂಭಗೊಂಡ ನಿಟ್ಟೆ ಸ್ಪೆಷಲ್ ಸ್ಲೀಪ್ ಕ್ಲಿನಿಕ್ ಉದ್ಘಾಟನೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು. ನಿಟ್ಟೆ ವಿಶ್ವವಿದ್ಯಾಲಯದ ಕುಲಾಧಿಪತಿ ಎನ್. ವಿನಯ್ ಹೆಗ್ಡೆ ನಿಟ್ಟೆ ಸ್ಲೀಪ್ ಕ್ಲಿನಿಕ್ ಉದ್ಘಾಟಿಸಿದರು. ವಿಭಾಗ ಮುಖ್ಯಸ್ಥೆ ಡಾ.ಅಮಿತಾ ಎಂ ಹೆಗ್ಡೆ ಮಾತನಾಡಿ , ಮಕ್ಕಳಿಗೆ ಸುಖವಾಗಿ ನಿದ್ರೆ ಮಾಡಲು ಸಲಹೆಗಳು,…
ಉಳ್ಳಾಲ : ಗೋಣಿಯಲ್ಲಿರಿಸಿ ಸ್ಕೂಟರಿನಲ್ಲಿ ಕರು ಸಾಗಾಟ ನಡೆಸುವಾಗ, ಗೋಣಿಚೀಲ ಕೆಳಗೆಬಿದ್ದು ಮಾಂಸಕ್ಕಾಗಿ ಕೊಂಡೊಯ್ಯುತ್ತಿದ್ದ ಕರು ಬದುಕುಳಿದಿರುವ ಘಟನೆ ಉಳ್ಳಾಲ ಪೊಲೀಸ್ ಠಾಣೆಯ ಬಬ್ಬುಕಟ್ಟೆ ಸಮೀಪ ಮಂಗಳವಾರ ತಡರಾತ್ರಿ ವೇಳೆ ನಡೆದಿದೆ. ಕರು ಸಾಗಾಟ ನಡೆಸುತ್ತಿದ್ದ ಸ್ಕೂಟರಿನಲ್ಲಿ ದ್ದ ಮೂವರು ಸ್ಥಳದಿಂದ ಪರಾರಿಯಾಗಿದ್ದಾರೆ. ಆಕ್ಸೆಸ್ ಸ್ಕೂಟರಿನಲ್ಲಿ ಗೋಣಿ ಚೀಲದಲ್ಲಿ ಮೂರು ಮಂದಿ ಗೋಣಿ ಚೀಲದೊಳಗಿರಿಸಿ ಕರು ಸಾಗಾಟ ನಡೆಸುತ್ತಿದ್ದರು. ದಾರಿಮಧ್ಯೆ ರಸ್ತೆಗೆ ಬಿದ್ದಾಗ ಯುವಕನೋರ್ವ ಪ್ರಶ್ನಿಸಿದ್ದನು. ಹೊಟೇಲ್ ತ್ಯಾಜ್ಯ ಕೊಂಡೊಯ್ಯುತ್ತಿರುವುದಾಗಿ ತಿಳಿಸಿದ್ದರು. ಆದರೆ ಕರುವಿನ ಕಾಲುಗಳನ್ನು ಕಂಡ ಸ್ಥಳೀಯ ಯುವಕ ಮೂವರು ಸ್ಕೂಟರಿನಲ್ಲಿ ಸುಳ್ಳು ಹೇಳಿ ಮುಂದುವರಿದಾಗ, ಕರು ಸಾಗಾಟ ನಡೆಸುವುದನ್ನು ಯುವಕ ಬೊಬ್ಬಿಡಲು ಆರಂಭಿಸಿದ್ದ. ಇದರಿಂದ ಗಾಬರಿಗೊಂಡ ಸ್ಕೂಟರಿನಲ್ಲಿ ದ್ದವರು ಗೋಣಿಚೀಲವನ್ನು ರಸ್ತೆಗೆ ಎಸೆದು ಪರಾರಿಯಾಗಿದ್ದಾರೆ. ಕೂಡಲೇ ಸ್ಥಳೀಯರು ಗೋಣಿ ಚೀಲ ಪರಿಶೀಲಿಸಿದಾಗ ಅದರೊಳಗೆ ಕರು ಇರುವುದನ್ನು ಗಮನಿಸಿದ್ದಾರೆ. ಕರುವಿನ ಬೆನ್ನಿಗೆ, ಕಾಲಿಗೆ ಗಾಯಗಳಾಗಿದ್ದು, ಬಾಲವನ್ನು ತುಂಡರಿಸಲಾಗಿತ್ತು. ಆಹಾರವಿಲ್ಲದೆ ಸೊರಗಿದ್ದ ಕರುವಿಗೆ ಸ್ಥಳೀಯರು ಅನ್ನ ನೀಡಿ ಶುಶ್ರೂಷೆ ನಡೆಸಿದರು. ಉಳ್ಳಾಲ…
ಉಳ್ಳಾಲ: ಯುವತಿಯೋರ್ವಳು ನೇಣುಬಿಗಿದ ಸ್ಥಿತಿಯಲ್ಲಿ ಮನೆಯೊಳಗೆ ಪತ್ತೆಯಾಗಿರುವ ಘಟನೆ ಕುಂಪಲ ಆಶ್ರಯಕಾಲನಿಯಲ್ಲಿ ನಡೆದಿದೆ. ಚಿತ್ತಪ್ರಸಾದ್ ಎಂಬವರ ಪುತ್ರಿ ಪ್ರೇಕ್ಷಾ(20) ಶವವಾಗಿ ಪತ್ತೆಯಾದಾಕೆ. ಮಂಗಳೂರಿನ ಖಾಸಗಿ ಕಾಲೇಜೊಂದರಲ್ಲಿ ವಿದ್ಯಾರ್ಥಿನಿಯಾಗಿದ್ದ ಈಕೆ ರಜೆ ಪಡೆದುಕೊಂಡು ಮನೆಯಲ್ಲೇ ಉಳಿದಿದ್ದಳು. ತಾಯಿ ಅಂಗನವಾಡಿ ಕೆಲಸಕ್ಕೆ ಹೋಗಿದ್ದು, ಪ್ರೇಕ್ಷಾ ಮನೆಯಲ್ಲಿ ಒಬ್ಬಳೇ ಇದ್ದಳು. ಮಧ್ಯಾಹ್ನ ವೇಳೆ ತಾಯಿ ಊಟಕ್ಕೆಂದು ಮನೆಗೆ ಬಂದ ಸಂದರ್ಭ ಮನೆಯೊಳಗಿನ ಕೋಣೆಯೊಳಗೆ ಪ್ರೇಕ್ಷಾ ಮೃತದೇಹ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಸ್ಥಳೀಯರು ಕೊಲೆಶಂಕೆಯನ್ನು ವ್ಯಕ್ತಪಡಿಸಿದ್ದಾರೆ. ಘಟನಾ ಸ್ಥಳಕ್ಕೆ ಉಳ್ಳಾಲ ಠಾಣಾ ಪೊಲೀಸರು ಭೇಟಿ ನೀಡಿದ್ದು, ತನಿಖೆ ನಡೆಸುತ್ತಿದ್ದಾರೆ. ಪ್ರೇಕ್ಷಾ ನಿಗೂಢ ಸಾವು ಪ್ರಕರಣಗಾಂಜಾ ತಂಡದಿಂದ ಆರೋಪಿಸಿದ ವ್ಯಕ್ತಿ ಮನೆಗೆ ಕಲ್ಲು, ಹಲವರು ಪೊಲೀಸ್ ವಶಕ್ಕೆಉಳ್ಳಾಲ: ಕುಂಪಲ ಆಶ್ರಯಕಾಲನಿ ನಿವಾಸಿ ವಿದ್ಯಾರ್ಥಿನಿ ಹಾಗೂ ಹವ್ಯಾಸಿ ಮಾಡೆಲ್ ಪ್ರೇಕ್ಷಾ(17) ನಿಗೂಢ ಸಾವಿನ ಪ್ರಕರಣಕ್ಕೆ ಸಂಬಂಧಿಸಿ ಗಾಂಜಾ ವ್ಯಸನಿಗಳ ಮೇಲೆ ಆರೋಪಿಸಿರುವ ಮೋಹನ್ ಶೆಟ್ಟಿ ಎಂಬವರ ಮನೆಗೆ ಗುರುವಾರ ತಡರಾತ್ರಿ ದುಷ್ಕರ್ಮಿಗಳು ಕಿಟಕಿ ಗಾಜುಗಳಿಗೆ ಕಲ್ಲೆಸೆದು ಹಾನಿಗೊಳಿಸಿದ್ದಾರೆ. ಪ್ರಕರಣ ಸಂಬಂಧ…
ಉಳ್ಳಾಲ: ಆಕಸ್ಮಿಕ ಬೆಂಕಿ ತಗಲಿ ಮನೆಯೊಂದು ಸಂಪೂರ್ಣ ಸುಟ್ಟು ಹೋಗಿರುವ ಘಟನೆ ತಲಪಾಡಿ ಗ್ರಾಮದ ತಚ್ಚಣಿ ಕ್ರಾಸ್ ಎಂಬಲ್ಲಿ ಮಾ.6 ರಂದು ಬೆಳಗ್ಗಿನ ಜಾವ ಸಂಭವಿಸಿದೆ. ವಿನಯಕುಮಾರ್ ಎಂಬವರ ಮನೆಯಲ್ಲಿ ದುರಂತ ಸಂಭವಿಸಿದೆ. ಪತ್ನಿ ಚೈತ್ರ, ಮಕ್ಕಳಾದ ಧನ್ವಿನ್ ಹಾಗೂ ತೃಷಿಕ ಎಂಬವರ ಜತೆಯಲ್ಲಿ ಮನೆಯೊಳಗೆ ಮಲಗಿದ್ದ ಸಂದರ್ಭವೇ ಘಟನೆ ನಡೆದಿದೆ. ಮನೆಯ ನಡುವಿನ ಹಾಲ್‍ನಲ್ಲಿ ಶಬ್ದ ಕೇಳಿ ಎಚ್ಚರವಾದಾಗ ಬೆಂಕಿ ತಗಲಿರುವುದು ಗಮನಕ್ಕೆ ಬಂದಿದೆ. ಕೂಡಲೇ ಮನೆಮಂದಿ ಹೊರ ಓಡಿಬಂದಿದ್ದು,ಈ ವೇಳೆ ಮನೆಯ ಮಾಡು, ಹಂಚು ಪೂರ್ತಿ ಸುಟ್ಟು ಹೋಗಿರುವುದಲ್ಲದೆ ಮನೆಯ ಗೃಹ ಬಳಕೆಯ ಸೊತ್ತುಗಳಾದ 2 ಕಬ್ಬಿಣದ ಕಪಾಡು, ಅದರೊಳಗಿದ್ದ ಜಾಗದ ದಾಖಲಾತಿಗಳು, ಬಟ್ಟೆ ಬರೆಗಳು , ಡೈನಿಂಗ್ ಟೇಬಲ್ , ಮರದ ಕುರ್ಚಿಗಳು, ಕೃಷಿಗೆ ಮದ್ದು ಉಪಯೋಗಿಸುವ ಯಂತ್ರಗಳು, ಮನೆ ಪಾತ್ರೆಗಳು ಸೇರಿದಂತೆ ರೂ. 20 ಲಕ್ಷ ನಷ್ಟ ಉಂಟಾಗಿದೆ. ಈ ಕುರಿತು ಮನೆಮಂದಿ ಉಳ್ಳಾಲ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಉಳ್ಳಾಲ: ತಲಪಾಡಿ ರೂಟ್ ಬಸ್ಸು ಕೊನೆ ಸ್ಟಾಪ್ ಹೋಗದೇ ಕಳೆದ ಒಂದು ವರ್ಷದಿಂದ ಪ್ರಯಾಣಿಕರು ಪಡುತ್ತಿದ್ದ ಸಂಕಷ್ಟಕ್ಕೆ ಇಂದು ಮಂಗಳೂರಿನ ಕದ್ರಿಯಲ್ಲಿರುವ ಮ.ನ.ಪಾ ವಿಭಾಗೀಯ ಕಚೇರಿಯಲ್ಲಿ ಜಿಲ್ಲಾಧಿಕಾರಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಒಂದು ಹಂತದ ಪರಿಹಾರ ಸಿಕ್ಕಿದೆ. ಸಿಟಿ ಬಸ್ ಮಾಲೀಕರು ನವಯುಗ ಸಂಸ್ಥೆಗೆ ರೂ.14,000 ಮಾಸಿಕವಾಗಿ ಸುಂಕವನ್ನು ಪಾವತಿಸುವ ನಿರ್ಣಯ ಕೈಗೊಳ್ಳುವ ಮೂಲಕ ಒಂದು ಹಂತದ ಸಂಧಾನ ಮುಗಿಸಿದೆ. ಜಿಲ್ಲಾಧಿಕಾರಿ ಕೆ.ವಿ ರಾಜೇಂದ್ರ ನೇತೃತ್ವದಲ್ಲಿ ಬಸ್ಸು ಮಾಲಕರು , ಟೋಲ್ ಅಧಿಕಾರಿಗಳ ನಡುವೆ ಇಂದು ಸಭೆ ನಡೆದಿದೆ. ಸಭೆಯಲ್ಲಿ ಪ್ರತೀ ಬಸ್ಸುಗಳು ತಿಂಗಳಿಗೆ 14,000 ರೂಪಾಯಿ ಸುಂಕವನ್ನು ಟೋಲ್ಗೆ ನೀಡಬೇಕೆಂಬ ತೀರ್ಮಾನಕ್ಕೆ ಸಭೆಯಲ್ಲಿ ಸರ್ವಾನುಮತದ ಒಪ್ಪಿಗೆ ಸಿಕ್ಕಿದೆ. ತಿಂಗಳ 14,000 ರೂಪಾಯಿ ಟೋಲನ್ನು ಮುಂಗಡವಾಗಿ ಕಟ್ಟಿದ ಮೇಲೆ ಅವರ ಪಾಸ್ಟ್ ಸ್ಟ್ಯಾಗ್ ಆಕ್ಟಿವೇಶನ್ ಆದ ಬಳಿಕ ಸಿಟಿ ಬಸ್ಸುಗಳು ತಲಪಾಡಿ ಟೋಲ್ ಗೇಟನ್ನು ಹಾದು ಮೇಲಿನ ತಲಪಾಡಿಗೆ ತೆರಳಬಹುದಾಗಿದೆ. ಇದಕ್ಕಾಗಿ ಮಂಗಳೂರಿನಿಂದ ಮೇಲಿನ ತಲಪಾಡಿಗೆ ಸಂಚರಿಸುವ ಪ್ರಯಾಣಿಕರ ಟಿಕೆಟ್ ದರದಲ್ಲಿ…
ಉಳ್ಳಾಲ: ಮನೆ ಆವರಣದಲ್ಲಿ ನಿಲ್ಲಿಸಲಾಗಿದ್ದ ಎರಡು ಕಾರುಗಳು ಸಹಿತ ಮನೆ ಕಿಟಕಿ ಗಾಜಿಗೆ ಕಲ್ಲುಗಳನ್ನು ಎಸೆದು ದುಷ್ಕರ್ಮಿಗಳು ಹಾನಿಗೊಳಿಸಿರುವ ಘಟನೆ ನರಿಂಗಾನ ಪಂಚಾಯಿತಿ ವ್ಯಾಪ್ತಿಯ ಜಲ್ಲಿಕ್ರಾಸ್ ಎಂಬಲ್ಲಿ ಇಂದು ನಸುಕಿನ ಜಾವ ಸಂಭವಿಸಿದೆ. ಜಲ್ಲಿಕ್ರಾಸ್ ನಿವಾಸಿ ಅಬ್ಬಾಸ್ ಎಂಬವರ ಮನೆಯಲ್ಲಿ ಘಟನೆ ನಡೆದಿದೆ. ನಸುಕು 3.30 ರ ಸುಮಾರಿಗೆ ಅಂಗಳದಲ್ಲಿ ಸದ್ದು ಕೇಳಿ ಮನೆಮಂದಿ ಹೊರಬಂದಾಗ ಅಂಗಳದಲ್ಲಿ ನಿಲ್ಲಿಸಲಾದ ಓಮ್ನಿ ಕಾರು ಮತ್ತು ಕ್ವಾಲಿಸ್ ವಾಹನದ ಗಾಜುಗಳನ್ನು ಸಂಪೂರ್ಣ ಹಾನಿಗೊಳಿಸಲಾಗಿದೆ. ಮನೆಯ ಕಿಟಿಕಿ ಗಾಜನ್ನೂ ಹಾನಿಗೊಳಿಸಲಾಗಿದೆ. ರೇಷನ್ ಅಂಗಡಿ ಹೊಂದಿರುವ ಅಬ್ಬಾಸ್ ಅವರಿಗೆ ಯಾರ ಜತೆಯೂ ವೈಷಮ್ಯವಿರಲಿಲ್ಲ. ಘಟನೆಗೆ ಕಾರಣವೂ ತಿಳಿದುಬಂದಿಲ್ಲ. ಸ್ಥಳಕ್ಕಾಗಮಿಸಿದ ಕೊಣಾಜೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

