Author: UllalaVani

Kannada News From Coastal Karnataka

ಉಳ್ಳಾಲ: ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ತಲಪಾಡಿ ಕೆ.ಸಿ.ರೋಡ್ ನಿವಾಸಿ ಶನಿವಾರ ರಾತ್ರಿ ನಾಪತ್ತೆಯಾಗಿದ್ದ ಹನ್ನೆರಡರ ಹರೆಯದ ಬಾಲಕ ಆಕೀಫ್ ಮೃತದೇಹ ಭಾನುವಾರ ಕೆ.ಸಿರೋಡ್ ಬಳಿ ಮೈದಾನದ ಬಳಿ ತೆಂಗಿನಗರಿಯ ಅಡಿಯಲ್ಲಿ ಪತ್ತೆಯಾಗಿದ್ದು, ಪಬ್‍ಜಿ ಮಾದರಿಯ ಫ್ರೀ ಫಯರ್ ಮೊಬೈಲ್ ಗೇಮ್ ವಿಚಾರದಲ್ಲಿ ಆತನ ಸ್ನೇಹಿತನೇ ಕೊಲೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಕೆ.ಸಿ.ರೋಡ್ ನಿವಾಸಿ ದ್ವಿತೀಯ ಪಿಯುಸಿ ಕಲಿಯುತ್ತಿರುವ ಉತ್ತರ ಪ್ರದೇಶ ಮೂಲದ ದೀಪಕ್(17) ಆಕೀಫ್‍ನನ್ನು ಕಲ್ಲಿನಿಂದ ಹೊಡೆದು ಕೊಲೆ ಮಾಡಿರುವ ಆರೋಪಿಯಾಗಿದ್ದು, ಫ್ರೀ ಫಯರ್ ಮೊಬೈಲ್ ಗೇಮ್ ವಿಚಾರದಲ್ಲಿ ನಡೆದ ಮಾತಿನ ಚಕಮಕಿ ಕೊಲೆಯಲ್ಲಿ ಅಂತ್ಯವಾಗಿದ್ದು, ದೀಪಕ್‍ನನ್ನು ಉಳ್ಳಾಲ ಪೆÇಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಘಟನೆಯ ವಿವರ : ಕೆ.ಸಿ ರೋಡ್ ನಿವಾಸಿ ಹನೀಫ್ ಅವರ ಐವರು ಮಕ್ಕಳಲ್ಲಿ ಮಹಮ್ಮದ್ ಆಕೀಫ್ ನಾಲಕನೆಯವನಾಗಿದ್ದು ಮೂವರು ಸಹೋದರಿ, ಓರ್ವ ಸಹೋದರ ಮತ್ತು ತಂದೆ ತಾಯಿಯನ್ನು ಅಗಲಿದ್ದಾನೆ. ಕೆ.ಸಿ. ರೋಡ್‍ನ ಫಲಾಹ್ ಶಿಕ್ಷಣ ಸಂಸ್ಥೆಯಲ್ಲಿ 6ನೇ ತರಗತಿಯಲ್ಲಿ ಕಲಿಯುತ್ತಿರುವ ಈತನಿಗೆ ಕೊರೊನ ಹಿನ್ನಲೆಯಲ್ಲಿ ಆನ್‍ಲೈನ್…

Read More

ತಲಪಾಡಿ: ತಲಪಾಡಿ ತಚ್ಚಣಿ ಬಳಿಯ ಬಾರೊಂದರ ಬಳಿ ನಿಷೇ„ತ ಎಂ.ಡಿ.ಎಂ.ಎ. ಡ್ರಗ್ ಪೌಡರ್ ಮಾರಾಟ ಮಾಡುತ್ತಿದ್ದ ಉಪ್ಪಳ ಮೂಲದ ಇಬ್ಬರನ್ನು ಮಂಗಳೂರು ದಕ್ಷಿಣ ಸಹಾಯಕ ಪೆÇಲೀಸ್ ಆಯುಕ್ತ ರಂಜಿತ್ ಬಂಡಾರು ನೇತೃತ್ವದ ತಂಡ ಮತ್ತು ಉಳ್ಳಾಲ ಪೆÇಲೀಸರು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಬಂ„ಸಿದ್ದಾರೆ.ಉಪ್ಪಳ ಪಚ್ಚಿಲಮಾರ್ ನಿವಾಸಿ ಫಜಲ್ ಪಿ.ಎಂ.(27), ಮತ್ತು ಉಪ್ಪಳ ಮಜಲ್ ನಿವಾಸಿ ಮೊಹಮ್ಮದ್ ನೌಫಾಲ್ ಬಂ„ತ ಆರೋಪಿಗಳಾಗಿದ್ದು, ತಲಪಾಡಿ ತಚ್ಛಣಿ ಬಾರ್ ಬಳಿ ನಿಷೇ„ತ ಡ್ರಗ್ ಪೌಡರ್ ಮಾರಾಟ ಮಾಡಲು ಯತ್ನಿಸುತ್ತಿದ್ದಾಗ ಬಂ„ಸಿ ಅವರಿಂದ ಡ್ರಗ್ ಪೌಡರ್ ಸಹಿತ ಬೈಕ್ ಮತ್ತು ಕಾರನ್ನು ವಶಕ್ಕ ತೆಗೆದುಕೊಂಡಿದ್ದಾರೆ. ಪೆÇಲೀಸ್ ಆಯುಕ್ತ ಶಶಿಕುಮಾರ್ ನಿರ್ದೇಶನದಂತೆ ಡಿಸಿಪಿಗಳಾದ ಹರಿರಾಮ್ ಶಂಕರ್ ಮತ್ತು ವಿನಯ ಗಾಂವ್ಕರ್ ಮಾರ್ಗದರ್ಶನದಲ್ಲಿ ಎಸಿಪಿ ನೇತೃತ್ವದಲ್ಲಿ ಸಿಬಂದಿಗಳು ಭಾಗವಹಿಸಿದ್ದರು. 

Read More

ಉಳ್ಳಾಲ: ಸ್ಕೂಟರ್ ಮತ್ತು ಬೈಕ್ ಮುಖಾಮುಖಿಯಾಗಿ ಸಂಭವಿಸಿದ ಅಪಘಾತದಲ್ಲಿ ನಾಲ್ವರು ಗಾಯಗೊಂಡಿದ್ದು, ಈ ಪೈಕಿ ಚಿಂತಾಜನಕ ಸ್ಥಿತಿಯಲ್ಲುದ್ದ ಇಬ್ಬರು ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.ಸ್ಕೂಟರಿನಲ್ಲಿದ್ದ ಕಿನ್ಯ ನಿವಾಸಿ ರಾಮಣ್ಣ (50) ಮತ್ತು ಮಾಡೂರು ನಿವಾಸಿ ಸತೀಶ್ (34) ಸಾವನ್ನಪ್ಪಿದವರು. ಮಾಡೂರು ನಿವಾಸಿಗಳಾಗಿರುವ ಬೆನ್ಸನ್ ಮತ್ತು ನರೇಂದ್ರ ಎಂಬವರು ದೇರಳಕಟ್ಟೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಾ. 27 ರಂದು ರಾತ್ರಿ 10 ಗಂಟೆಗೆ ಕೊಂಡಾಣ ಕಟ್ಟೆ ಜಾತ್ರೆ ಮುಗಿಸಿ ವಾಪಸ್ಸಾಗುತ್ತಿದ್ದ ರಾಮಣ್ಣ ಮತ್ತು ಸತೀಶ್ ಎಂಬವರಿದ್ದ ಸ್ಕೂಟರಿಗೆ , ಎದುರಿನಿಂದ ಬಂದ ಬೆನ್ಸನ್, ನರೇಂದ್ರ ಅವರಿದ್ದ ಬೈಕ್ ಮುಖಾಮುಖಿಯಾಗಿ ಗುದ್ದಿತ್ತು. ಗಾಯಗೊಂಡಿದ್ದ ನಾಲ್ವರನ್ನು ದೇರಳಕಟ್ಟೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಇಬ್ಬರ ಸ್ಥಿತಿ ಚಿಂತಾಜನಕವಾಗಿದ್ದ ಹಿನ್ನೆಲೆಯಲ್ಲಿ ನಗರದ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ರಾಮಣ್ಣ ಅವರು ಮಾ. 28 ರಂದೇ‌ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದರೆ, ಸತೀಶ್ ಅವರು ಮಾ. 30 ರಂದು ಸಾವನ್ನಪ್ಪಿದ್ದಾರೆ‌ . ಇಬ್ಬರೂ ಕೂಲಿ ಕಾರ್ಮಿಕರಾಗಿದ್ದು, ರಾಮಣ್ಣ ಅವರು…

Read More

ಉಳ್ಳಾಲ :ಫಾ.ಮುಲ್ಲರ್ ವಿದ್ಯಾಸಂಸ್ಥೆಯ ಪ್ರವರ್ತಕರು ಆಗಿರುವ ವಿದ್ಯಾರ್ಥಿಗಳು ಈ ಸಂಸ್ಥೆಯಿಂದ ಪಡೆದ ಜ್ಞಾನದಿಂದ  ಜಗತ್ತಿಗೆ ಹಾಗೂ ಸಮಾಜಕ್ಕೆ ಉತ್ತಮ ಸೇವೆಯನ್ನು ಒದಗಿಸುವಂತಾಗಬೇಕಿದೆ ಎಂದುಎಂದು ಫಾ. ಮುಲ್ಲರ್ ಚಾರಿಟೇಬಲ್ ಇನ್ಸ್ಟಿಟ್ಯೂಷನ್ಸ್ ಉಪಾಧ್ಯಕ್ಷ ರೆವರೆಂಡ್ ಮೊನ್ಸಿಂಜರ್ ಮ್ಯಾಕ್ಸಿಮ್ ಎಲ್. ನೊರೊನ್ಹಾ ಹೇಳಿದರು. ದೇರಳಕಟ್ಟೆಯ ಫಾ. ಮುಲ್ಲರ್ ಹೋಮಿಯೋಪಥಿ ಕಾಲೇಜಿನ‌ ಆಡಿಟೋರಿಯಂನಲ್ಲಿ ಗುರುವಾರ ನಡೆದ ಫಾ. ಮುಲ್ಲರ್ ಸೇವಾ ಸಂಸ್ಥೆಯ ಘಟಕವಾಗಿರುವ ದೇರಳಕಟ್ಟೆಯ ಫಾ. ಮುಲ್ಲರ್ ಹೋಮಿಯೋಪಥಿ ಪದವಿ  ಹಾಗೂ ಸ್ನಾತಕೋತ್ತರ ಪದವಿಯ 30ನೇ ಪದವಿ ಪ್ರದಾನ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ,  ಪದವಿ ಪ್ರದಾನ‌ ಮಾಡಿ ಅವರು ಮಾತನಾಡಿದರು. ಸಮಾಜಕ್ಕೆ ಹಾಗೂ ಜಗತ್ತಿಗೆ ಸೇವೆಯನ್ನು ನೀಡಲು  ಆದಷ್ಟೋ ವೈದ್ಯರನ್ನು ಈ ಸಂಸ್ಥೆ ನೀಡಿದೆ ಹಾಗೂ ನೀಡುತ್ತಾ ಬರುತ್ತಿದೆ. ಇಲ್ಲಿ ಸಂಶೋಧನೆಯನ್ನು ಮಾಡಿ  ವೈದ್ಯಕೀಯ ಪದವಿಯನ್ನು ಪಡೆದ ಪ್ರತಿಯೊಬ್ಬರು ಮುಂದೆ ಪ್ರೀತಿ ಮತ್ತು ಸಹಾನುಭೂತಿಯಿಂದ ಜನರ ಸೇವೆಯನ್ನು ಮಾಡಬೇಕು.ಫಾ. ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಮಹಾವಿದ್ಯಾಲಯ 1985ರಿಂದ ಹೋಮಿಯೋಪಥಿ ವೈದ್ಯಕೀಯ ಪದ್ಧತಿಯಲ್ಲಿ ಅತ್ಯುನ್ನತ ಸೇವೆ ಸಲ್ಲಿಸುತ್ತಾ ಬಂದಿದ್ದು ಎಲ್ಲ ವಿಭಾಗದ ಜನರಿಗೂ…

Read More

ಉಳ್ಳಾಲ: ರಸ್ತೆ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಅಂಬಾಸಿಡರ್ ಕಾರು ಉರುಳಿಬಿದ್ದ ಘಟನೆ ಬೆಳ್ಮ ಪೆಲತ್ತಡಿ ಎಂಬಲ್ಲಿ ಮಂಗಳವಾರ ತಡರಾತ್ರಿ ವೇಳೆ ಸಂಭವಿಸಿದೆ. ಕಾರಿನಲ್ಲಿದ್ದ ಇಬ್ಬರು ಅಲ್ಪಸ್ವಲ್ಪ ಗಾಯಗಳೊಂದಿಗೆ ಪಾರಾಗಿದ್ದಾರೆ.

Read More

ಉಳ್ಳಾಲ: ಬೈಕೊಂದು ಸ್ಕೂಟಿಗೆ ಹಿಂದಿನಿಂದ ಢಿಕ್ಕಿ ಹೊಡೆದ ಪರಿಣಾಮ ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಕಡಬದ ಯುವಕ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ಬುಧವಾರದಂದು ನಡೆದಿದೆ.ಮೃತ ಯುವಕನನ್ನು ಕಡಬ ತಾಲೂಕಿನ ಮರ್ಧಾಳ ಸಮೀಪದ ಕೆರ್ಮಾಯಿ ನಿವಾಸಿ ಸನು ಅಬ್ರಹಾಂ (21) ಎಂದು ಗುರುತಿಸಲಾಗಿದೆ. ಮಂಗಳೂರಿನ ಖಾಸಗಿ ಕಾಲೇಜಿನಲ್ಲಿ ಹೋಟೆಲ್ ಮ್ಯಾನೇಜ್‍ಮೆಂಟ್ ವಿದ್ಯಾರ್ಥಿಯಾಗಿದ್ದ ಸನು ಅಬ್ರಹಾಂ ಚಲಾಯಿಸುತ್ತಿದ್ದ ಯಮಹಾ ಯಂಟಿ ಬೈಕ್ ಮಂಗಳೂರಿನ ಉಳ್ಳಾಲ ನೇತ್ರಾವತಿ ಸೇತುವೆಯಲ್ಲಿ ಸೋಮವಾರ ರಾತ್ರಿ ದ್ವಿಚಕ್ರ ವಾಹನಕ್ಕೆ ಹಿಂದಿನಿಂದ ಢಿಕ್ಕಿ ಹೊಡೆದಿತ್ತು. ಗಂಭೀರ ಗಾಯಗೊಂಡಿದ್ದ ಸನು ಅಬ್ರಹಾಂನನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಂತಾಜನಕ ಸ್ಥಿತಿಯಲ್ಲಿದ್ದ ಸನು ಅಬ್ರಹಾಂ ಚಿಕಿತ್ಸೆ ಫಲಕಾರಿಯಾಗದೆ ಬುಧವಾರದಂದು ಮೃತಪಟ್ಟಿದ್ದಾರೆ. ಮೃತರ ತಾಯಿ ಎರಡು ವರ್ಷಗಳ ಹಿಂದಷ್ಟೇ ಸಿಡಿಲು ಬಡಿದು ಮೃತಪಟ್ಟಿದ್ದರು. ಮೃತರು ತಂದೆ, ಓರ್ವ ಸಹೋದರನನ್ನು ಅಗಲಿದ್ದಾರೆ.

Read More

ಉಳ್ಳಾಲ: ಆಸ್ಪತ್ರೆಗೆ ಬರುವ ವಿದ್ಯಾರ್ಥಿಗಳಿಗೆ ಹಾಗೂ ರೋಗಿಗಳಿಗೆ ಅನುಕೂಲವಾಗುವ ಸವಲತ್ತುಗಳು ಆಸ್ಪತ್ರೆ ಪೂರೈಸಬೇಕಾಗಿರುವುದು ಕರ್ತವ್ಯ. ಈ ಉದ್ದೇಶದಿಂದ ಫಾದರ್ ಮುಲ್ಲರ್ಸ್ ಸಂಸ್ಥೆಯ ಎಲ್ಲಾ ವಿಭಾಗಗಳು ಉತ್ತಮವಾದ ಮೂಲಭೂತ ಸೌಕರ್ಯಗಳನ್ನು ಪೂರೈಸುತ್ತಿದೆ ಎಂದು ಫಾದರ್ ಮುಲ್ಲರ್ ಚಾರಿಟೇಬಲ್ ಸಂಸ್ಥೆಗಳ ಉಪಾಧ್ಯಕ್ಷ ರೆ. ಮ್ಯಾಕ್ಸಿಂ ಎಲ್. ನೊರೊನ್ಹಾ ಅಭಿಪ್ರಾಂiÀiಪಟ್ಟರು. ಅವರು ದೇರಳಕಟ್ಟೆಯ ಫಾದರ್ ಮುಲ್ಲರ್ ಹೋಮಿಯೋಪತಿ ಆಸ್ಪತ್ರೆಯ ವಠಾರದಲ್ಲಿ ನವೀಕರಣಗೊಂಡ ಫಾದರ್ ಮುಲ್ಲರ್ ಆಡಿಟೋರಿಯಂ ಅನ್ನು ಉದ್ಘಾಟಿಸಿ ಮಾತನಾಡಿದರು.ನೂತನವಾಗಿ ಆರಂಭವಾಗಿರುವ ಸಭಾಂಗಣದ ಸದುಪಯೋಗವನ್ನು ವಿದ್ಯಾರ್ಥಿಗಳು ಹೆಚ್ಚಾಗಿ ತರಬೇತಿ ಶಿಬಿರಗಳಿಗೆ ಪಡೆದುಕೊಳ್ಳಲಿ. ಈ ಮೂಲಕ ಶೈಕ್ಷಣಿಕವಾಗಿ ಉತ್ತಮ ಸ್ಥಾನವನ್ನು ಪಡೆಯುವುದರ ಜೊತೆಗೆ ಶಿಕ್ಷಣ ಸಂಸ್ಥೆಯ ಹೆಸರನ್ನು ಉಜ್ವಲಗೊಳಿಸಲಿ ಎಂದರು. ಫಾದರ್ ಮುಲ್ಲರ್ ಚಾರಿಟೇಬಲ್ ಸಂಸ್ಥೆಗಳ ನಿರ್ದೇಶಕ ಫಾ. ರಿಚರ್ಡ್ ಅಲೋಷಿಯಸ್ ಕೊಯೆಲ್ಹೋ, ಮಾತನಾಡಿ ಒಳ್ಳೆಯ ದಿನಾವದ ಇಂದು ಸಭಾಂಗಣ ಉದ್ಘಾಟನೆ ಮತ್ತು ಘಟಿಕೋತ್ಸವವನ್ನು ಏರ್ಪಡಿಸಲಾಗಿದೆ. ಸಂಸ್ಥೆಯ ಎಲ್ಲಾ ಸಂಸ್ಥೆಗಳಿಂದಲೂ ವಿವಿಧ ಮನವಿಗಳು ಇವೆ ಹಂತಹಂತವಾಗಿ ಅದನ್ನು ಪೂರೈಸುತ್ತಾ ಬರುತ್ತೇವೆ. ಎಲ್ಲಾ ಸಂಸ್ಥೆಗಳ ಮಂದಿ ಕುಟುಂಬದ ರೀತಿಯಲ್ಲಿ…

Read More

ಉಳ್ಳಾಲ: ಸಮುದ್ರ ಪಾಲಾಗುತ್ತಿದ್ದ ಉತ್ತರಪ್ರದೇಶ ಮೂಲದ ವ್ಯಕ್ತಿಯನ್ನು ಕರಾವಳಿ ಕಾವಲು ಪಡೆ ಸಿಬ್ಬಂದಿ ಮತ್ತು ಸ್ಥಳೀಯ ಈಜುಗಾರ ರಕ್ಷಿಸಿರುವ ಘಟನೆ ಸೋಮೇಶ್ವರ ಸಮುದ್ರ ತೀರದಲ್ಲಿ ಇಂದು ಸಂಜೆ ವೇಳೆ ನಡೆದಿದೆ.ಉತ್ತರ ಪ್ರದೇಶ ಮೂಲದ 11 ಮಂದಿ ಸೋಮೇಶ್ವರ ಸಮುದ್ರ ವಿಹಾರಕ್ಕೆ ಬಂದಿದ್ದರು. ಈ ಪೈಕಿ ನಾಲ್ವರು ಸಮುದ್ರ ಸ್ನಾನಕ್ಕೆ ಇಳಿದಿದ್ದರು. ಇದರಲ್ಲಿ ಯುವಕನೋರ್ವ ಸಮುದ್ರದ ಅಲೆಗಳ ನಡುವೆ ಸಿಲುಕಿ ಸುಮಾರು 40 ಮೀ ನಷ್ಟು ದೂರ ಎಳೆದೊಯ್ದಿದ್ದರು. ಘಟನೆಯನ್ನು ಕಂಡ ಕರಾವಳಿ ಕಾವಲು ಪಡೆ ಸಿಬ್ಬಂದಿ ಅಶೋಕ್ ಸೋಮೇಶ್ವರ ಮತ್ತು ಸ್ಥಳೀಯ ಈಜುಗಾರ ಕಿರಣ್ ಒಂಭತ್ತುಕೆರೆ ಎಂಬವರು ಸೇರಿ ಸಮುದ್ರಕ್ಕೆ ಧುಮುಕಿ ಬಹಳಷ್ಟು ಸೆಣೆಸಾಡಿ ಯುವಕನನ್ನು ದಡ ಸೇರಿಸಿ ಪ್ರಾಣವನ್ನು ರಕ್ಷಿಸಿದ್ದಾರೆ

Read More

ಉಳ್ಳಾಲ: ಸೋಮೇಶ್ವರ ಪುರಸಭಾ ವ್ಯಾಪ್ತಿಯಲ್ಲಿ ಜಾಗೃತಿಅಭಿಯಾನದೊಂದಿಗೆ ಜನರಿಗೆ ಆರಂಭಿಕ ಎಚ್ಚರಿಕೆ ನೀಡಿದ್ದು, ಬುಧವಾರದಿಂದ ಈ ವ್ಯಾಪ್ತಿಯಲ್ಲಿ ಕಟ್ಟುನಿಟ್ಟಿನ ಕ್ರಮವನ್ನು ತೆಗೆದುಕೊಳ್ಳಲಾಗುವುದು ಸಾರ್ವಜನಿಕರು ಮಾಸ್ಕ್ ಸೇರಿದಂತೆ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಹೆಚ್ಚಿನ ಆದ್ಯತೆ ನೀಡಬೇಕು ಎಂದು ಸೋಮೇಶ್ವರ ಪುರಸಭಾ ಮುಖ್ಯಾ„ಕಾರಿ ವಾಣಿ ವಿ. ಆಳ್ವ ಎಚ್ಚರಿಕೆ ನೀಡಿದರು.ಸೋಮೇಶ್ವರ ಪುರಸಭಾ ವ್ಯಾಪ್ತಿಯಲ್ಲಿ ಮಂಗಳವಾರ ಕೋವಿಡ್ 19 ಜಾಗೃತಿ ಅಭಿಯಾನ ಇದರ ನೇತೃತ್ವ ವಹಿಸಿ ಪ್ರಮುಖ ಜಂಕ್ಷನ್‍ಗಳಲ್ಲಿ ವ್ಯಾಪಾರಸ್ಥರಿಗೆ, ಹೋಟೆಲ್ ಮಾಲೀಕರಿಗೆ ಮತ್ತು ಸಾರ್ವಜನಿಕರಿಗೆ ಮಾಹಿತಿ ನೀಡಿ ಮಾತನಾಡಿದರು.ಜನರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು, ಹೋಟೆಲ್‍ಗಳಲ್ಲಿ ಸಾಮಾಜಿಕ ಅಂತ ಮತ್ತು ಕೋವಿಡ್ ಮುಂಜಾಗರೂಕತಾ ಕ್ರಮವನ್ನು ಕೈಗೊಳ್ಳಬೇಕು ಇದರೊಂದಿಗೆ ಕೇರಳ ಸೇರಿದಂತೆ ಹೊರಗಿನಿಂದ ಬರುವ ಗ್ರಾಹಕರ ಮಾಹಿತಿ ಲಾಡ್ಜ್, ಸೇರಿದಂತೆ ಗೆಸ್ಟ್‍ಹೌಸ್‍ಗಳಲ್ಲಿ ನಮೂದಿಸಬೇಕು ಮತ್ತು ಕಡ್ಡಾಯವಾಗಿ ಅವರಿಂದ ಆರ್‍ಟಿಪಿಸಿಆರ್ ವರದಿ ಪಡೆಯಬೇಕು ಎಂದ ಅವರು ಮಂಗಳವಾರ ಹೋಟೆಲ್, ಲಾಡ್ಜ್, ಗೆಸ್ಟ್‍ಹೌಸ್‍ಗಳಿಗೆ ನೋಟೀಸು ನೀಡಿದ್ದು , ನಿಯಮ ಉಲ್ಲಂಘಿಸಿದರೆ ದಂಡ ವಿಸ್ತಸಲಾಗುವುದು . ಇದರೊಂದಿಗೆ ಪ್ರಮುಖ ಜಂಕ್ಷನ್‍ಗಳಲ್ಲಿ ಪ್ಲೆಕ್ಸ್ ಮೂಲಕ…

Read More

ಉಳ್ಳಾಲ: ಕೋವಿಡ್ ಎರಡನೇ ಅಲೆ ವೇಗವಾಗಿ ಹಬ್ಬುತ್ತಿದ್ದು ಉಳ್ಳಾಲ ನಗರಸಭಾ ವ್ಯಾಪ್ತಿಯಲ್ಲಿ ಸಾಮಾಜಿಕ ಅಂತರ ಮತ್ತು ಮಾಸ್ಕ್ ಧರಿಸದಿದ್ದರೆ ಕಠಿಣಕ್ರಮ ಕೈಗೊಳ್ಳಾಗುವುದು ಬುಧವಾರದಿಂದ ಪ್ರತಿಯೊಬ್ಬರು ಮಾಸ್ಕ್ ಧರಿಸಬೇಕು ಇಲ್ಲದಿದ್ದರೆ ದಂಡ ವಿಧಿಸಲಾಗುವುದು ಎಂದು ಉಳ್ಳಾಲ ನಗರಸಭಾ ಆಯುಕ್ತ ರಾಯಪ್ಪ ಎಚ್ಚರಿಕೆ ನೀಡಿದರು.ದ.ಕ.ಜಿಲ್ಲಾಧಿಕಾರಿ ಆದೇಶದಂತೆ ಉಳ್ಳಾಲ ನಗರಸಭೆ ವ್ಯಾಪ್ತಿಯಲ್ಲಿ ಮಂಗಳವಾರ ನಡೆದ ಕೋವಿಡ್-19 ಜಾಗೃತಿ ಅಭಿಯಾನ ಜಾಥದಲ್ಲಿ ಅವರು ಭಾಗಹಿಸಿ ಎಚ್ಚರಿಕೆ ನೀಡಿದರು.ಜಾಗೃತಿ ಜಾಥಾ ಅಭಿಯಾನವು ಅಬ್ಬಕ್ಕ ಸರ್ಕಲ್‍ನಿಂದ ಆರಂಬಿಸಿ ಉಳ್ಳಾಲ ಪೇಟೆ ಮಾರ್ಗವಾಗಿ ಬಿ.ಯಂ. ಸ್ಕೂಲ್ ಮಾರ್ಗವಾಗಿ ಸಂಚರಿಸಿ ಜಾಗೃತಿ ಮೂಡಿಸಲಾಯಿತು. ಉಳ್ಳಾಲ ನಗರಸಭಾ ಅಧಿಕಾರಿಘಲು, ಪೌರಕಾರ್ಮಿಕರು, ಸಿಬಂದಿಗಳು ಸೇರಿದಂತೆ ಒಟ್ಟು ಐದು ತಂಡಗಳಾಗಿ ರಚಿಸಿ ಎಲ್ಲಾ ವಾಡ್ರಗಳಲ್ಲುಇ ಜಾಗೃತಿ ಮೂಡಿಸಲಾಯಿತು. ಈ ಸಂದರ್ಭದಲ್ಲಿ ಜನಸಾಮಾನ್ಯರು , ಆಟೋ ರಿಕ್ಷಾ ಚಾಲಕರು, ದ್ವಿಚಕ್ರ ಸವಾರರು, ಬಸ್ ಪ್ರಯಾಣಿಕರಿಗೆ ಉಚಿತವಾದ ಮಾಸ್ಕ್ ಗಳನ್ನು ವಿತರಿಸಿ ಆರೋಗ್ಯ ಕಾಪಾಡುವಂತೆ ಮನವಿ ಮಾಡಲಾಯಿತು. ಬಸ್‍ಗಳಲ್ಲಿ ತಪಾಸಣೆ ನಡೆಸಿ ಎಚ್ಚರಿಕೆ ನೀಡಲಾಯಿತು.ನಗರ ಸಭೆಯ ಅಧ್ಯಕ್ಷೆ ಚಿತ್ರಕಲಾ ಚಂದ್ರಕಾಂತ್,…

Read More