Close Menu
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • E-Paper
  • News Upload
Asasas asasa
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • E-Paper
  • News Upload
UllalavaniUllalavani
ಅಂಬ್ಲಮೊಗರು

ಹಿಂದೂ ಸಮಾಜದ ಒಗ್ಗಟ್ಟು ಮುರಿಯುವ ಉದ್ದೇಶದಿಂದ ಧಾರ್ಮಿಕ ನಂಬಿಕೆಗಳಿಗೆ ಘಾಸಿಗೊಳಿಸುವ ಕಾರ್ಯ : ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ

UllalaVaniBy UllalaVaniMarch 22, 2021Updated:March 22, 2021No Comments3 Mins Read
Facebook Twitter Pinterest LinkedIn Tumblr Email WhatsApp
Felicitation
Share
Facebook Twitter LinkedIn Pinterest Email WhatsApp
ಕುತ್ತಾರು ಕೊರಗಜ್ಜನ ಕಟ್ಟೆ ಸಮೀಪ ಸ್ವಾಮೀಜಿ ಆಶೀರ್ವಚನ ನೀಡಿದರು.
ಧಾರ್ಮಿಕ ಸಭೆಯಲ್ಲಿ ನೆರೆದ ಜನ
Sharan Pumpwell
M B puranik
Felicitation
Felicitation

ಉಳ್ಳಾಲ:  ಒಗ್ಗಟ್ಟನ್ನು ಮುರಿಯುವ ಉದ್ದೇಶದಿಂದ ಧಾರ್ಮಿಕ ನಂಬಿಕೆಗಳಿಗೆ ಘಾಸಿಗೊಳಿಸುವ ಕಾರ್ಯಗಳಾಗುತ್ತಿದೆ.  ನಾವು ನಾವಾಗಿಯೇ ಉಳಿಯಲು ಸಂಸ್ಕೃತದ ಮೇಲಿರುವ ಗೌರವ ನಂಬಿಕೆಗಳೇ ಕಾರಣ. ಇದನ್ನು ಹಾಳುಗೆಡವಲು ದುಷ್ಟ ಶಕ್ತಿಗಳು ಯತ್ನಿಸುತ್ತಿವೆ. ಇದನ್ನು ಎಲ್ಲರೂ ಒಂದಾಗಿ ನಿಂತು ತಡೆಗಟ್ಟಬೇಕು. ಆಕ್ರಮಣ ಬಂದಾಗ ಮಾತ್ರವಲ್ಲ ಇಲ್ಲದಿದ್ದರೂ ಹಿಂದೂ ಸಮಾಜ ಒಗ್ಗಟ್ಟಾಗಿರಬೇಕಿದೆ ಎಂದು ಅಯೋಧ್ಯೆ ಶ್ರೀ ರಾಮಜನ್ಮಭೂಮಿ ಸೇವಾ ಟ್ರಸ್ಟಿನ  ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಅಭಿಪ್ರಾಯಪಟ್ಟರು
ಅವರು ವಿಶ್ವ ಹಿಂದೂ ಪರಿಷತ್- ಬಜರಂಗದಳ ವತಿಯಿಂದ ಹಿಂದೂ ಶ್ರಧ್ಧಾ ಕೇಂದ್ರಗಳಲ್ಲಿ  ದುಷ್ಕøತ್ಯ ಎಸಗುತ್ತಿರುವ  ದುಷ್ಕರ್ಮಿಗಳ ಕೃತ್ಯಗಳ ವಿರುದ್ಧ  ಕದ್ರಿ ಶ್ರೀ ಮಂಜುನಾಥೇಶ್ವರ ದೇವಸ್ಥಾನದಿಂದ ಕುತ್ತಾರು  ಶ್ರೀ ಕೊರಗಜ್ಜ ಆದಿಕ್ಷೇತ್ರಕ್ಕೆ  ಭಾನುವಾರ ಹಮ್ಮಿಕೊಂಡಿದ್ದ ಕೊರಗಜ್ಜನ ಆದಿಕ್ಷೇತ್ರಕ್ಕೆ ನಮ್ಮ ನಡೆ ಕಾರ್ಯಕ್ರಮದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು.  
ಸಂಸ್ಕೃತಿ ಪ್ರತೀಕವಾಗಿರುವ ಅಯೋಧ್ಯೆ ರಾಮಮಂದಿರ ನಿರಂತರ ಹೋರಾಟದ ಬಳಿಕ ಫಲಪ್ರದವಾಗಿದೆ. ಹಿಂದೂ ಸಂತತಿ ಇರುವಷ್ಟು ಕಾಲ ಮಂದಿರ ಮಂದಿರವಾಗಿಯೇ ಉಳಿಯಲಿದೆ.   ದೇಶದಲ್ಲಿ ಮಹಿಳೆಯರು ನರಕ ಸ್ಥಿತಿಯನ್ನು ಅನುಭವಿಸುತ್ತಿದ್ದಾರೆ. ಸರಕಾರವೇ ಹೆಣ್ಮಕ್ಕಳ ನಾಪತ್ತೆ ಕುರಿತು ವರದಿ ನೀಡುತ್ತಲೇ ಇದೆ. ರಾಮನ ಆದರ್ಶಗಳನ್ನು ಮಕ್ಕಳಿಗೆ ತಿಳಿಸುವ ಕಾರ್ಯವಾಗಲಿ. ಹೆತ್ತವರಿಗೆ , ಸಂಸ್ಕೃತಿಗೆ ಗೌರವ ಕೊಡುವುದನ್ನು ಕಲಿಸಲಿ ಎಂದರು.
ವಿಶ್ವ ಹಿಂದೂ ಪರಿಷತ್ ಕಾರ್ಯಾಧ್ಯಕ್ಷ ಪ್ರೊ. ಎಂ.ಬಿ ಪುರಾಣಿಕ್ ಮಾತನಾಡಿ,   ಹಿಂದೂ ಶ್ರದ್ಧಾ ಕೇಂದ್ರಗಳಿಗೆ ಘಾಸಿಗೊಳಿಸುತ್ತಿರುವುದು  ಸಮಾಜದ ಪಿಡುಗಾಗಿದೆ. ಮೊಗಲರು, ಕ್ರೈಸ್ತರಿಂದ ಅನ್ಯಾಯಕ್ಕೊಳಗಾದ ಹಿಂದೂ ಧರ್ಮ ಎಂದಿಗೂ ಸೋತಿಲ್ಲ.  ದೈವ-ದೇವರ ವಿಚಾರಗಳ ಮೇಲೆ ಕೀಳರಿಮೆ ಹುಟ್ಟುವಂತೆ  ಮಾಡುತ್ತಿರುವ ಕಿರಾತಕರು ಹಿಂದೂಗಳ ದೌರ್ಬಲ್ಯ  ಉಪಯೋಗಿಸಿ ಮತಾಂತರ ಷಡ್ಯಂತ್ರ ರೂಪಿಸಲಾಗುತ್ತಿದೆ.  ಹಿಂದೂ ಸಮಾಜ ಎಲ್ಲರನ್ನು ಸ್ವಾಗತಿಸಿದ ಸನಾತನ ಧರ್ಮ.   ಸಹನೆ, ತಾಳ್ಮೆಯ ಇನ್ನೊಂದು ಮುಖವೇ ಹಿಂದೂ ಸಮಾಜ. ಆದರೆ  ತಾಳ್ಮೆಗೂ ಮಿತಿ ಇದೆ.  ಅಯೋಧ್ಯೆ ಕರಸೇವಕರಿದ್ದ  ರೈಲಿಗೆ ಬೆಂಕಿ ಕೊಟ್ಟವರನ್ನು ಬಿಡದ ಸಮಾಜದ ತಾಳ್ಮೆಗೂ ಮಿತಿ ಇದೆ. ಮಿತಿ ಮೀರಿದಲ್ಲಿ ನಿಲ್ಲಿಸುವ ತಾಕತ್ತೂ ಇದೆ ಎಂದರು.

ತುಳು ಜಾನಪದ ವಿಧ್ವಾಂಸ ಕೆ.ಕೆ ಪೇಜಾವರ ಮಾತನಾಡಿ  ಉಚ್ಛಯ ಆಗುವುದು ದೇವರಿಗೆ, ಕೋಲ ಮತ್ತು ನೇಮ  ದೈವಗಳಿಗೆ. ಆದರೆ ಈಗ ನೇಮೋತ್ಸವ, ಕೋಲೋತ್ಸವ ಎಂದು ದೇವರ ಉತ್ಸವವನ್ನು ದೈವದ ಜೊತೆಗೆ ಸೇರಿಸಲಾಗುತ್ತಿದೆ.  ಹದಿಹರೆಯದವರು ದೈವಶಕ್ತಿಗಳ ಕುರಿತು ಜ್ಞಾನದ ಕೊರತೆಯಿಂದ ಫೇಸ್‍ಬುಕ್, ವಾಟ್ಸ್ಯಾಪ್, ಇನ್ಸ್ಟಾಗ್ರಾಂ ನಲ್ಲಿ ದೈವ ಕಟ್ಟುವವರ   ಚಿತ್ರಗಳನ್ನು ಹಾಕಿ ವಿಕೃತ ಮೆರೆಯುತ್ತಿದ್ದಾರೆ.  ಈ ಕುರಿತು ವಿ.ಹಿಂ.ಪ ಎದುರುನಿಂತು ಜಾಗೃತಿ ಮೂಡಿಸಬೇಕಾದ ಅವಶ್ಯಕತೆ ಇದೆ. ಉಡುಪಿ ಆಮಂತ್ರಣ ಪತ್ರಿಕೆಯೊಂದರಲ್ಲಿ ದೈವದ ಸಂದರ್ಶನ ಎಂದು ಮುದ್ರಿಸಿದರೆ,  ಕಂಗೀಲು ನೃತ್ಯದಲ್ಲಿ ಕೊರಗಜ್ಜನ ವೇಷವನ್ನು ಧರಿಸಿ ಕುಣಿಯಲಾಗಿತ್ತು.  ಕೊರಗಜ್ಜ ಎಂದರೆ 800 ವರ್ಷಗಳ ಇತಿಹಾಸವಿರುವ ವಿಚಾರ. ಕಂಗೀಲು ನೃತ್ಯದ ಕಾಲಘಟ್ಟವೇ ಬೇರೆ. ಖಂಡಾಲ,  ಬಿಲ್ಲಾಲ,  ಮುರಕಾಲ, ಮುಂಡಾಲ, ಸ್ಥಾನಿಕ ಐದು ವರ್ಗಗಳ ಮೂಲದ ಜಾಗ ಇದಾಗಿದೆ. ಪಂಚವರ್ಣದ ಮಣ್ಣಾಗಿರುವ ತುಳುನಾಡಿನ ಆರಾಧನೆಗಳಲ್ಲಿ ಮೂಲತ್ವ ಇದೆ.  ಅಂತಹ ಆರಾಧನೆಯನ್ನು  ವೈಭವೀಕರಿಸುವ ಕಾರ್ಯಗಳಾಗುತ್ತಿದೆ. ವೈಭವ ಇರುವಲ್ಲಿ ಕಲೆ ಕಾರ್ಣಿಕ ಕಡಿಮೆಯಾಗುತ್ತಿದೆ ಅನ್ನುವುದನ್ನು ಸಮಾಜ ಅರಿಯಬೇಕು ಎಂದರು.
ಈ ವೇಳೆ ಕೊರಗಜ್ಜ ಹಾಡು ಹಾಡಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಕಾರ್ಕಳ ಹಿರ್ಗಾನದ ಬಾಲಕ ಕಾರ್ತಿಕ್ ಮತ್ತು ಆತನಿಗೆ ಹಾಡು ಕಲಿಸಿದ ಸಹೋದರಿ  ರಕ್ಷಿತಾಳನ್ನು ಸ್ವಾಮೀಜಿ ಸನ್ಮಾನಿಸಿದರು.

ಈ ಸಂದರ್ಭ ಶ್ರೀ ಪಂಜಂದಾಯ ಬಂಟ ದೈವಸ್ಥಾನ ಮತ್ತು ಶ್ರೀ ಕೊರಗ ತನಿಯ ಆದಿಸ್ಥಳಗಳ ಆಡಳಿತ ಮೊಕ್ತೇಸರ ರವೀಂದ್ರನಾಥ್ ಪೂಂಜ ,ವಿ.ಹಿಂ.ಪ ಸಹಕಾರ್ಯದರ್ಶಿ ಕೃಷ್ಣಮೂರ್ತಿ, ಜಿಲ್ಲಾಧ್ಯಕ್ಷ ಗೋಪಾಲ್ ಕುತ್ತಾರ್, ಬಜರಂಗದಳದ ಜಿಲ್ಲಾ ಸಂಚಾಲಕ ಪುನಿತ್ ಅತ್ತಾವರ ಉಪಸ್ಥಿತರಿದ್ದರು.

ಜಿಲ್ಲಾ ಕಾರ್ಯದರ್ಶಿ ಶಿವಾನಂದ ಮೆಂಡನ್ ಸ್ವಾಗತಿಸಿದರು.  ವಿಭಾಗ ಕಾರ್ಯದರ್ಶಿ ಶರಣ್ ಪಂಪ್ ವೆಲ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ರವಿ ಅಸೈಗೋಳಿ ನಿರೂಪಿಸಿದರು. ಸುರೇಖಾರಾಜ್ ವಂದಿಸಿದರು.

`ಎಲ್ಲಾ ಕ್ಷೇತ್ರದಲ್ಲೂ ಜಿಹಾದಿಗಳಿದ್ದಾರೆ ‘
ಶಿವಮೊಗ್ಗದ ಕಾರ್ಯಕ್ರಮದಲ್ಲಿ  ಬ್ರಾಹ್ಮಣ ಯುವತಿಯರು ಅನ್ಯ ಜಾತಿಯವರನ್ನು ವಿವಾಹವಾಗಬಾರದು ಅನ್ನುವ ಹೇಳಿಕೆಯನ್ನು ಸುಳ್ಳಾಗಿ  ಪ್ರಕಟಿಸಿದೆ. ವರದಿ ಪ್ರಕಟಿಸಿರುವ ಮಾಧ್ಯಮದವರಲ್ಲಿ  ವೀಡಿಯೋ ದಾಖಲೆ ಕೇಳಿದಾಗ, ಅದನ್ನು ಸ್ಪಷ್ಟವಾಗಿ ನೀಡಿಲ್ಲ. ಅಂತಹ ಹೇಳಿಕೆಯನ್ನು ನೀಡದೇ ಇದ್ದರೂ,  ಜನರಿಗೆ ಪತ್ರಿಕೆಗಳು ಹೇಳುವುದು ಸತ್ಯವಾಗುತ್ತದೆ.  ವೈದ್ಯರು, ಇಂಜಿನಿಯರುಗಳು ಉನ್ನತ ವಿದ್ಯಾಭ್ಯಾಸ ಪಡೆದುಕೊಂಡವರೇ ಉಗ್ರ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ.  ಜಿಹಾದಿ ಪ್ರವೃತ್ತಿ ಯಾವ ರೀತಿಯಲ್ಲೂ ಇರಬಹುದು. ಪೂಜೆ ಮಾಡುವ ಅರ್ಚಕರ ವೇಷದಲ್ಲೂ ಬರಬಹುದು. ಹಿಂದೂ ಸಮಾಜದಲ್ಲಿ ಒಡಕು ಹುಟ್ಟಿಸುವ ಪ್ರಯತ್ನಗಳು ನಿರಂತರವಾಗಿ ಆಗುತ್ತಿವೆ.  ಮನಸ್ಸುಗಳು ತುಂಡಾದಲ್ಲಿ ಅವರಿಗೇ ಲಾಭ. ಇಂತಹ ಉದ್ದೇಶವನ್ನಿಟ್ಟುಕೊಂಡೇ ನಮ್ಮೊಳಗೆ ಒಡಕು  ಮೂಡುವಂತಹ ವಿಚಾರಗಳನ್ನು  ಪ್ರಚಾರಕ್ಕೆ ತರಲಾಗುತ್ತಿದೆ ಎಂದರು. 

Share. Facebook Twitter Pinterest LinkedIn Tumblr Email WhatsApp
UllalaVani

Kannada News From Coastal Karnataka

Related Posts

ಖಾಜಿ ತ್ವಾಖಾ ಅಹ್ಮದ್ ಮುಸ್ಲಿಯಾರ್ ನಿಧನಕ್ಕೆ ಉಳ್ಳಾಲ ಸೆಂಟ್ರಲ್ ಕಮಿಟಿ ಟ್ರಸ್ಟ್ ಸಂತಾಪ

June 23, 2026

ವಿಶ್ವ ಯೋಗ ದಿನಾಚರಣೆ ಅಂಗವಾಗಿ ಜೂನ್ 18ರಿಂದ ನಾಲ್ಕು ದಿನಗಳ ಯೋಗ ಶಿಬಿರ

June 18, 2026

ನಮ್ಮ ಎಲ್ಲಾ ಕಷ್ಟ ಮತ್ತು ಸುಖಗಳಿಗೆ ನಮ್ಮ ಮನಸ್ಸೇ ಕಾರಣ – ಡಾ. ಸರ್ಫ್ರಾಜ್ ಜೆ ಹಾಸಿಮ್

June 17, 2026
Leave A Reply

Advertise
ಸಂಪರ್ಕಿಸಿ

ಕರ್ನಾಟಕದಾದ್ಯಂತ ಆರೋಗ್ಯ ಇಲಾಖೆಯಲ್ಲಿ ಮೆಗಾ ನೇಮಕಾತಿ: ಸಾರ್ವಜನಿಕ ಆರೋಗ್ಯ ಸೇವೆ ಬಲಪಡಿಸಲು ಮಹತ್ವದ ಹೆಜ್ಜೆ

June 11, 2026

ರಾಜ್ಯದಲ್ಲಿ ಖಾಸಗಿ ಅಸ್ಪತ್ರೆಯಲ್ಲಿ ಆಯುಷ್ಮಾನ್ ಯೋಜನೆ ಸಮರ್ಪಕ ಜಾರಿಗೆ ಜ್ಯಾರಿ ಆಗದಿದ್ದರೆ ಜಿಲ್ಲೆಯ ಅರೋಗ್ಯಧಾರಿಗಳ ಮೇಲೆ ಕ್ರಮ :- ಅರೋಗ್ಯ ಸಚಿವ ಯು.ಟಿ ಖಾದರ್

June 9, 2026

ಫೀಲ್ಡ್ ಗೆ ಇಳಿದ ಯು.ಟಿ. ಖಾದರ್ – ಸರ್ಕಾರಿ ಆಸ್ಪತ್ರೆ ವೈದ್ಯರಿಗೆ ಕ್ಲಾಸ್…!

June 5, 2026

ವೆನ್ಲಾಕ್ ಆಸ್ಪತ್ರೆಯಲ್ಲಿ ಮನೋವೈದ್ಯರು ಮತ್ತು ಕ್ಲಿನಿಕಲ್ ಸೈಕಾಲಜಿಸ್ಟ್‌ಗಳ ತೀವ್ರ ಕೊರತೆ – ಬಡ ರೋಗಿಗಳ ನಿರ್ಲಕ್ಷ್ಯ ಯಾಕೆ ಎಂದು ಸಾರ್ವಜನಿಕರ ಪ್ರಶ್ನೆ

May 26, 2026
suddi

ತಮಿಳುನಾಡು ವಿಧಾನಸಭೆಯಲ್ಲಿ ವಿಜಯ್ ಅವರ ಕೈ ಸನ್ನೆ- ಡಿಎಂಕೆ ಸಭಾತ್ಯಾಗ

By UllalaVaniJune 23, 20260

ಚೆನ್ನೈ, ಜೂ. 23:ತಮಿಳುನಾಡು ವಿಧಾನಸಭೆಯಲ್ಲಿ ನಡೆದ ಅಧಿವೇಶನ ರಾಜಕೀಯ ಹೈಡ್ರಾಮಾಕ್ಕೆ ಸಾಕ್ಷಿಯಾಗಿದೆ. ಮುಖ್ಯಮಂತ್ರಿ ವಿಜಯ್ ಅವರು ಭಾಷಣದ ವೇಳೆ ಕೈ…

ಉಡುಪಿಯಲ್ಲಿ ದೇವಾಡಿಗ ಸಮಾಜದ ಮಹಾ ಅಧಿವೇಶನ-2026: ಪಾವಂಜೆಯಲ್ಲಿ ಪೂರ್ವಭಾವಿ ಸಭೆ

June 23, 2026

ಖಾಜಿ ತ್ವಾಖಾ ಅಹ್ಮದ್ ಮುಸ್ಲಿಯಾರ್ ನಿಧನಕ್ಕೆ ಉಳ್ಳಾಲ ಸೆಂಟ್ರಲ್ ಕಮಿಟಿ ಟ್ರಸ್ಟ್ ಸಂತಾಪ

June 23, 2026

ಆ. 7-8ರಂದು ಆಳ್ವಾಸ್ ಪ್ರಗತಿ ಉದ್ಯೋಗ ಮೇಳ

June 23, 2026
1 2 3 … 1,978 Next
Automatic YouTube Gallery

ಉಡುಪಿಯಲ್ಲಿ ದೇವಾಡಿಗ ಸಮಾಜದ ಮಹಾ ಅಧಿವೇಶನ 2026-ಪೂರ್ವಬಾವಿ ಸಭೆ

ಉಡುಪಿಯಲ್ಲಿ ನಡೆಯಲಿದೆ ದೇವಾಡಿಗ ಸಮಾಜದ ಮಹಾ ಅಧಿವೇಶನ 2026; ಇದರ ಹಿನ್ನಲೆ ಪಾವಂಜೆಯಲ್ಲಿ ಪೂರ್ವಬಾವಿ ಸಭೆ

ಜನಬಲವೇ ಸಂಘಟನೆಯ ದೊಡ್ಡ ಶಕ್ತಿ: ರವಿ ದೇವಾಡಿಗ

📍 Ullal | Dakshina Kannada | Coastal Karnataka News Update
ಉಳ್ಳಾಲ, ಮಂಗಳೂರು ಹಾಗೂ ದಕ್ಷಿಣ ಕನ್ನಡ ...
ಜಿಲ್ಲೆಯ ತಾಜಾ ಸುದ್ದಿಗಳಿಗೆ Ullalavaani ಅನ್ನು Subscribe ಮಾಡಿ.

Stay connected with Ullalavaani for trusted and fast local news from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #UllalVaani #UllalNews #VoiceOfUllal #UllalMedia #UllalUpdates
Show More
ಉಡುಪಿಯಲ್ಲಿ ದೇವಾಡಿಗ ಸಮಾಜದ ಮಹಾ ಅಧಿವೇಶನ 2026-ಪೂರ್ವಬಾವಿ ಸಭೆ
Now Playing
ಉಡುಪಿಯಲ್ಲಿ ದೇವಾಡಿಗ ಸಮಾಜದ ಮಹಾ ಅಧಿವೇಶನ 2026-ಪೂರ್ವಬಾವಿ ಸಭೆ
ಉಡುಪಿಯಲ್ಲಿ ನಡೆಯಲಿದೆ ದೇವಾಡಿಗ ಸಮಾಜದ ಮಹಾ ಅಧಿವೇಶನ 2026; ಇದರ ಹಿನ್ನಲೆ ...
ಉಡುಪಿಯಲ್ಲಿ ನಡೆಯಲಿದೆ ದೇವಾಡಿಗ ಸಮಾಜದ ಮಹಾ ಅಧಿವೇಶನ 2026; ಇದರ ಹಿನ್ನಲೆ ಪಾವಂಜೆಯಲ್ಲಿ ಪೂರ್ವಬಾವಿ ಸಭೆ

ಜನಬಲವೇ ಸಂಘಟನೆಯ ದೊಡ್ಡ ಶಕ್ತಿ: ರವಿ ದೇವಾಡಿಗ

📍 Ullal | Dakshina Kannada | Coastal Karnataka News Update
ಉಳ್ಳಾಲ, ಮಂಗಳೂರು ಹಾಗೂ ದಕ್ಷಿಣ ಕನ್ನಡ ...
ಜಿಲ್ಲೆಯ ತಾಜಾ ಸುದ್ದಿಗಳಿಗೆ Ullalavaani ಅನ್ನು Subscribe ಮಾಡಿ.

Stay connected with Ullalavaani for trusted and fast local news from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #UllalVaani #UllalNews #VoiceOfUllal #UllalMedia #UllalUpdates
Show More
ಚಾಲಕ ಅಸ್ವಸ್ಥಗೊಂಡ ಪರಿಣಾಮ ದೇರಳಕಟ್ಟೆಯಲ್ಲಿ ಬಸ್ ಅ#ಪಘಾ*ತ..!!
Now Playing
ಚಾಲಕ ಅಸ್ವಸ್ಥಗೊಂಡ ಪರಿಣಾಮ ದೇರಳಕಟ್ಟೆಯಲ್ಲಿ ಬಸ್ ಅ#ಪಘಾ*ತ..!!
ದೇರಳಕಟ್ಟೆಯಲ್ಲಿ ಬಸ್ ಅ#ಪಘಾ*ತ; ಚಾಲಕ ಅಸ್ವಸ್ಥಗೊಂಡ ಪರಿಣಾಮ ಡಿವೈಡರ್ ಏರಿದ ಖಾಸಗಿ ...
ದೇರಳಕಟ್ಟೆಯಲ್ಲಿ ಬಸ್ ಅ#ಪಘಾ*ತ; ಚಾಲಕ ಅಸ್ವಸ್ಥಗೊಂಡ ಪರಿಣಾಮ

ಡಿವೈಡರ್ ಏರಿದ ಖಾಸಗಿ ಬಸ್..!

📍 Ullal | Dakshina Kannada | Coastal Karnataka News Update
ಉಳ್ಳಾಲ, ಮಂಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ತಾಜಾ ಸುದ್ದಿಗಳಿಗೆ Ullalavaani ಅನ್ನು Subscribe ಮಾಡಿ.

Stay connected ...
with Ullalavaani for trusted and fast local news from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #UllalVaani #UllalNews #VoiceOfUllal #UllalMedia #UllalUpdates
Show More
Follow us on Facebook
Recent Editions
Ullal Vaani February 5 to 25

Ullal Vaani February 5 to 25

Mangalore

Feb 9, 2026

JAN 19-FEB 6

JAN 19-FEB 6

Mangalore

Jan 20, 2026

JAN 1-15

JAN 1-15

Mangalore

Jan 8, 2026

Latest E-Papers
Loading editions...
Office Address:

ಉಳ್ಳಾಲವಾಣಿ
ಕನ್ನಡ ವಾರಪತ್ರಿಕೆ
RNI No. KARKAN28322
ಅಪ್ಪಚ್ಚಿ ಕಾಂಪ್ಲೆಕ್ಸ್‌, ಕುತ್ತಾರು, ಮುನ್ನೂರು,
ಸೋಮೇಶ್ವರ ಗ್ರಾಮ,
ಉಳ್ಳಾಲ ತಾಲೂಕು ದ.ಕ- 575017

Ullalavani 
Kannada Weekly
RNI No. KARKAN28322
Appachi Complex, Kuttaru
munnuuru, Someshwara Village,
Ullala Tq., D.K. – 575017
+91 98454 78858
+91 99725 28110

 

ಸಂಪರ್ಕಿಸಿ
Facebook X (Twitter) Instagram Pinterest
© 2026 ullalavani.com. Designed by wpwebsmartz.com.

Type above and press Enter to search. Press Esc to cancel.

Go to mobile version