ಮುಡಿಪು: ನಾವು ಕೊರೋನದ ವಿರುದ್ಧ ಸಂಘಟಿತರಾಗಿ ಹೋರಾಡಿದರೆ ಕೊರೋನದ ಯಾವುದೇ ಅಲೆಯನ್ನು ಹೊಡೆದೋಡಿಸಬಹುದು. ಆತ್ಮಸ್ಥೈರ್ಯದೊಂದಿಗೆ ನಿಯಮಾವಳಿಗಳನ್ನು ಪಾಲಿಸಿಕೊಂಡು ಮುನ್ನಡೆದರೆ ಕೊರೋನ ಮೂರನೇ ಅಲೆಯನ್ನು ತಡೆಯಲು ಸಾಧ್ಯ ಎಂದು ವಿಧಾನಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್ ಅವರು ಹೇಳಿದರು.ಅವರು ಮುಡಿಪುವಿನಲ್ಲಿ ಮಂಗಳೂರು ವಿಧಾನಸಭಾ ಕ್ಷೇತ್ರದ ಕುರ್ನಾಡು ಶಕ್ತಿ ಕೇಂದ್ರದ ವತಿಯಿಂದ ಅಂಗನವಾಡಿ ಕಾರ್ಯಕರ್ತರಿಗೆ ಶನಿವಾರ ಮುಡಿಪುವಿನಲ್ಲಿ ನಡೆದ ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.ಜಗತ್ತಿನಲ್ಲಿ ಚೀನಕ್ಕಿಂತ ಭಾರತದಲ್ಲಿಯೇ ತಯಾರಾದ ವ್ಯಾಕ್ಸಿನ್ ನ್ನು ಜನರು ಹೆಚ್ಚು ಅಪೇಕ್ಷೆ ಪಡುತ್ತಿದ್ದಾರೆ. ಭಾರತದ ಆರೋಗ್ಯ ವೈಜ್ಞಾನಿಕ ಕ್ಷೇತ್ರದಲ್ಲಿ ಮಹತ್ವದ ಸಾಧನೆ ಮಾಡುತ್ತಿದೆ ಎಂದರು.ದಿ ಮೈಸೂರು ಎಲೆಕ್ಟ್ರಿಕಲ್ ಇಂಡಸ್ಟ್ರೀಸ್ ಇದರ ಅಧ್ಯಕ್ಷ ರಾದ ಸಂತೋಷ್ ಕುಮಾರ್ ಬೋಳಿಯಾರ್ ಅವರು ಮಾತನಾಡಿ, ಕೊರೋನ ಸಂದಿಗ್ಧ ಕಾಲದಲ್ಲಿ ಸಮಾಜಕ್ಕಾಗಿ ಸೇವೆ ಸಲ್ಲಿಸುತ್ತಿರುವ ಅಂಗನವಾಡಿ ಕಾರ್ಯಕರ್ತೆಯರ ಪಾತ್ರ ಮಹತ್ತರವಾದುದು. ಅವರ ಸೇವೆಯನ್ನು ಸಮಾಜ ಗುರುತಿಸಬೇಕು ಎಂದು ಹೇಳಿದರು.ಹಿರಿಯ ಮುಖಂಡರಾದ ಟಿ.ಜಿ.ರಾಜಾರಾಮ ಭಟ್ ಅವರು ಮಾತನಾಡಿ, ಕೊರೋನ ಎರಡನೇ ಅಲೆ ಸಮಾಜದಲ್ಲಿ ಬಹಳಷ್ಟು ತೊಂದರೆಯನ್ನು ಕೊಟ್ಟಿದೆ. ಇಂತಹ…
Author: UllalaVani
ಉಳ್ಳಾಲ : ಗ್ರಾಮ ಪಂಚಾಯಿತಿ ಸದಸ್ಯರು ತಮಗೆ ಬರುವ ಗೌರವ ಧನವನ್ನು ಆಶಾ ಕಾರ್ಯಕರ್ತರಿಗೆ ನೀಡಿರುವ ಕಾರ್ಯ ರಾಜ್ಯಕ್ಕೆ ಮಾದರಿ. ರಾಜ್ಯದಾದ್ಯಂತಹ ಇಂತಹ ಕಾರ್ಯಗಳು ನಡೆದು ಕೊರೊನಾ ಸಂಧಿಗ್ಧ ಸ್ಥಿತಿಯಲ್ಲಿ ಮನೆ ಮನೆಗೆ ಸುತ್ತಿ ಇತರರಿಗಾಗಿ ಶ್ರಮಿಸುವ ಆಶಾ ಕಾರ್ಯಕರ್ತರಿಗೆ ಸಹಾಯಕವಾಗಲಿ ಎಂದುಎಂದು ಶಾಸಕ ಯು.ಟಿ ಖಾದರ್ ಅಭಿಪ್ರಾಯಪಟ್ಟರು. ಅವರು ನರಿಂಗಾನ ಗ್ರಾ.ಪಂ ನ ನವೀಕೃತಗೊಂಡ ಕಟ್ಟಡದ ಉದ್ಘಾಟನೆ ಹಾಗೂ ನರಿಂಗಾನ ಗ್ರಾಮದ ಕೊರೊನಾ ವಾರಿಯರ್ಸ ಹಾಗೂ ಸಾಧಕರಿಗೆ ಸನ್ಮಾನಿಸಿ ಮಾತನಾಡಿದರು. ಗ್ರಾ.ಪಂ ನ ಸದಸ್ಯರು ಒಗ್ಗಟ್ಟಾಗಿ ಕಾರ್ಯಚರಿಸಿದಾಗ ಗ್ರಾಮದ ಅಭಿವೃದ್ಧಿಯನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ನರಿಂಗಾನದ 30 ಮಂದಿ ಸದಸ್ಯರು ತಮಗೆ ಬರುವ ಗೌರವಧನವನ್ನು ಆಶಾ ಕಾರ್ಯಕರ್ತೆಯರಿಗೆ ನೀಡಿರುವುದು ಮಹತ್ತರ ಕಾರ್ಯ.ಗ್ರಾಮದ ಜನತೆ ಸಂಪೂರ್ಣ ಅಭಿವೃದ್ಧಿಗೆ ಒಂದೇ ಪಕ್ಷದ ಸದಸ್ಯರನ್ನು ಬೆಂಬಲಿಸಿದ್ದಾರೆ. ಅವರ ವಿಶ್ವಾಸಕ್ಕೆ ದ್ರೋಹ ಆಗದಂತೆ ಆಡಳಿತ ಸಮಿತಿ ಒಗ್ಗಟ್ಟಾಗಿ ಕಾರ್ಯಾಚರಿಸಬೇಕು. ಜುಲೈನಲ್ಲಿ ನೂತನ ರೇಷನ್ ಅಂಗಡಿ ಗ್ರಾಮದ ಎಲ್ಲರಿಗೂ ಅನುಕೂಲವಾಗುವ ಜಾಗದಲ್ಲಿ ಕಡ್ಡಾಯವಾಗಿ ಆರಂಭವಾಗಬೇಕು.ಗ್ರಾಮದ 300 ಮನೆಮಂದಿಯನ್ನು…
ಉಳ್ಳಾಲ : ಸಂಕಷ್ಟದ ಕಾಲದಲ್ಲಿ ಮಾನವೀಯ ಮೌಲ್ಯಗಳಿಗೆ ಬೆಲೆ ಕೊಡುವುದು ದೇವರು ಮೆಚ್ಚುವ ಕಾರ್ಯ ಎಂದು ರಾಣಿಪುರ ಚರ್ಚ್‍ನ ಧರ್ಮಗುರು ಫಾ.ಜಯಪ್ರಕಾಶ್ ಅಭಿಪ್ರಾಯಪಟ್ಟರು.ಅವರು ಯು.ಟಿ.ಕೆ ಹೆಲ್ಪ್ ಲೈನ್ ನಿರ್ದೇಶನದೊಂದಿಗೆ ಮುನ್ನೂರು ಗ್ರಾ.ಪಂ ಅಧ್ಯಕ್ಷ ವಿಲ್ಪ್ರೆಡ್ ಅವರು ವೈಯಕ್ತಿಕವಾಗಿ ಸಂತೋಷನಗರದ ಏಳನೇ ವಾರ್ಡಿನ ಫ್ಲೇವಿ ಡಿಸೋಜ ಎಂಬವರ ಮನೆಯಲ್ಲಿ ನೀಡಿದ ಆಹಾರ ಕಿಟ್ ವಿತರಣೆ ನಡೆಸಿ ಮಾತನಾಡಿದರು.ಮುನ್ನೂರು ಗ್ರಾ.ಪಂ ಅಧ್ಯಕ್ಷ ವಿಲ್ಫ್ರೆಡ್ ಡಿಸೋಜ ಮಾತನಾಡಿ, ಗ್ರಾಮದಲ್ಲಿ ಯುಟಿಕೆ ಹೆಲ್ಪ್ ಲೈನ್ ಸಹಯೋಗದೊಂದಿಗೆ ಬಹಳಷ್ಟು ಗ್ರಾಮಸ್ಥರಿಗೆ ವಿವಿಧ ರೀತಿಯಲ್ಲಿ ಸಹಕರಿಸಿದ್ದೇವೆ. ಸೋಂಕಿತರ ಮನೆಮಂದಿಗೂ ಎಲ್ಲಾ ರೀತಿಯ ಸಹಕಾರವನ್ನು ಪಂಚಾಯಿತಿ ವತಿಯಿಂದ ಮಾಡಲಾಗಿದೆ ಎಂದರು.ಈ ಸಂದರ್ಭ ಯುಟಿಕೆ ಹೆಲ್ಪ್ ಲೈನ್ ನ ಮುನ್ನೂರು ವಲಯ ಅಧ್ಯಕ್ಷ ಆರ್.ಕೆ.ಸಿ ಅಝೀಝ್, ನರಿಂಗಾನ ಗ್ರಾ.ಪಂ ಉಪಾಧ್ಯಕ್ಷ ನವಾಝ್, ಉಳ್ಳಾಲ ಬ್ಲಾಕ್ ಇಂಟಕ್ ಅಧ್ಯಕ್ಷ ಸಿದ್ದೀಖ್, ಉಪಾಧ್ಯಕ್ಷ ನೌಷೀರ್, ನದೀಮ್, ಸಿರಾಜ್, ಶಿಯಾಬ್, ಪಂ. ಸದಸ್ಯರುಗಳಾದ ಜಮೀಲಾ , ವಿಜಯಲಕ್ಷ್ಮೀ , ಪುಷ್ಪಾ ಅಂಚನ್, ಫ್ಲೇವಿ, ಸಮಾಜ ಸೇವಕ ಹೆರಾಲ್ಡ್…
ಉಳ್ಳಾಲ: ರೈತರು ಬೀದಿಯಲ್ಲಿ, ಬಡವರು ಸಂಕಷ್ಟದಲ್ಲಿದ್ದರೂ ಕಿವಿ ಕಣ್ಣು ಕಾಣಿಸದ ಮೋದಿ ಸರಕಾರ ಅಂಬಾನಿ, ಅಧಾನಿಯವರ ಆರ್ಥಿಕತೆಯನ್ನು ಹೆಚ್ಚಿಸುವಲ್ಲಿ ತೊಡಗಿದ್ದಾರೆ. ದೇಶಕ್ಕೆ ಸ್ವಾತಂತ್ರ್ಯ ತಂದೊಡ್ಡಿದ ಅಹಿಂಸಾ ರೀತಿಯ ಚಳವಳಿ ಕೇಂದ್ರದ ಬಿಜೆಪಿ ಸರಕಾರವನ್ನು ಕಿತ್ತೊಗೆಯುವವರೆಗೂ ಕಾಂಗ್ರೆಸ್ ನಡೆಸಲಿದೆ ಎಂದು ಮುಡಾ ಮಾಜಿ ಅಧ್ಯಕ್ಷ ಇಬ್ರಾಹಿಂ ಕೋಡಿಜಾಲ್ ಹೇಳಿದರು.ಅವರು ಉಳ್ಳಾಲ ಬ್ಲಾಕ್ ಕಾಂಗ್ರೆಸ್ ವತಿಯಿಂದ ಪೆಟ್ರೋಲ್ ದರ ರೂ.100 ಕ್ಕೆ ಏರಿಕೆಯಾಗಿರುವುದನ್ನು ಖಂಡಿಸಿ ಕುತ್ತಾರು ಯೆನೆಪೋಯ ಆಸ್ಪತ್ರೆ ಬಳಿಯ ಪೆಟ್ರೋಲ್ ಬಂಕ್ ನಲ್ಲಿ ಭಾನುವಾರ ಹಮ್ಮಿಕೊಂಡ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು.ಸರಕಾರ ತಪ್ಪು ದಾರಿಯಲ್ಲಿದ್ದಾಗ ತಿದ್ದುವ ಕೆಲಸ ವಿರೋಧ ಪಕ್ಷ ಮಾಡಬೇಕಿದೆ. ಅದನ್ನು ಕಾಂಗ್ರೆಸ್ ಮಾಡುತ್ತಿದ್ದರೂ ಪ್ರಧಾನಿ ಕಿವಿ, ಕಣ್ಣು ಇಲ್ಲದಂತೆ ವರ್ತಿಸುತ್ತಿದ್ದಾರೆ. ಕ್ರೂಡ್ ಆಯಿಲ್ ಗೆ 65 ರೂ. ಇಳಿಕೆಯಾದರೂ ಸರಕಾರ ಅದನ್ನು ದೇಶದಲ್ಲಿ ಜಾರಿ ಮಾಡದೇ ಬಡವರನ್ನು ಸಂಕಷ್ಟಕ್ಕೆ ದೂಡಿ ಹಾಕಿದೆ ಎಂದರು.ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಸದಾಶಿವ ಉಳ್ಳಾಲ್ ಮಾತನಾಡಿ, ಇತಿಹಾಸದಲ್ಲಿ ಪೆಟ್ರೋಲ್ ದರ 100 ರೂ. ಎಂದಿಗೂ ಆಗಿರಲಿಲ್ಲ. ಇದು…
ಉಳ್ಳಾಲ: ಸಂಕಷ್ಟದ ಸಂದರ್ಭ ಜನರಿಗೆ ಆಶ್ರಯವಾಗುವ ಉದ್ದೇಶದಿಂದ ಅಲೋಶಿಯಸ್ ಸಂಸ್ಥೆ ಜಿಲ್ಲೆಯಾದ್ಯಂತ ಆಹಾರ ಕಿಟ್ ಗಳನ್ನು ಒದಗಿಸುತ್ತಿದೆ. ಆದಷ್ಟು ಬೇಗ ಕೋವಿಡ್ ಮಹಾಮಾರಿ ದೂರವಾಗಿ ಎಲ್ಲರೂ ಎಂದಿನಂತೆ ಜೀವನ ನಡೆಸುವಂತಾಗಲಿ ಎಂದು ಸಂತ ಅಲೋಶಿಯಸ್ ಸಂಸ್ಥೆಯ ಕೋವಿಡ್ ಕೇರ್ ಮುಖ್ಯಸ್ಥ ಫಾ. ಸಿರಿಲ್ ಡಿಮೆಲ್ಲೋ ಹೇಳಿದರು. ಅವರು ಸಂತ ಅಲೋಶಿಯಸ್ ಶಿಕ್ಷಣ ಸಂಸ್ಥೆ ಹಾಗೂ ಹಳೇ ವಿದ್ಯಾರ್ಥಿಗಳ ಸಹಕಾರದಿಂದ ನೀಡಲಾದ ಆಹಾರ ಕಿಟ್ ಗಳನ್ನುಕೃಷ್ಣನಗರ, ಉಚ್ಚಿಲ, ಕುಂಪಲ, ತೊಕ್ಕೊಟ್ಟು ಭಾಗದಲ್ಲಿ ವಿತರಿಸಿ ಮಾತನಾಡಿದರು. ರೇಡಿಯೋ ಸಾರಂಗ್ ಇನ್ಚಾಜ್೯ ರೋಷನ್ ಡಿಮೆಲ್ಲೋ, ಅಲೋಶಿಯಸ್ ಐಟಿಐ ಕಾಲೇಜು ಪ್ರಾಧ್ಯಾಪಕ ವಿಲ್ಸನ್, ರೀಚಲ್ ಸಮಾಜ ಸೇವಾ ಸಂಸ್ಥೆಯ ನಿರ್ಮಾ ಡಿಸೋಜ, ಸಿರಿಲ್ ಡಿಸೋಜ ಉಪಸ್ಥಿತರಿದ್ದರು.
ತೊಕ್ಕೊಟ್ಟು: ಇಲ್ಲಿನ ಫ್ಲೈಓವರಿನಡಿ ಬಿಗು ತಪಾಸಣೆ ನಡೆಸಿದ ಪೊಲೀಸರು ಅನಗತ್ಯವಾಗಿ ತಿರುಗಾಡುವ ವಾಹನ ಸವಾರರನ್ನು ತಡೆದು ದಂಡ ವಿಧಿಸಿದರು.ಉಳ್ಳಾಲ ಪಿಎಸ್ ಐ ರೇವಣ್ಣ ಸಿದ್ದಯ್ಯ ನೇತೃತ್ವದಲ್ಲಿ ಪೊಲೀಸರು ತಪಾಸಣೆ ನಡೆಸಿದರು. ಬೆಳಗ್ಗಿನಿಂದ ಮಧ್ಯಾಹ್ನದವರೆಗೆ ನಿಂತ ಪೊಲೀಸರು 10ಕ್ಕೂ ಅಧಿಕ ದ್ವಿಚಕ್ರ ವಾಹನಗಳಿಗೆ ದಂಡ ವಿಧಿಸಿದರು.
ಉಳ್ಳಾಲ: ನಟರಾಗಿ ಸಮಾಜದ ಜವಾಬ್ದಾರಿ ವಹಿಸುತ್ತಾ ಜಿಲ್ಲೆಯಾದ್ಯಂತ ಪ್ರಚಾರದ ಹಂಗಿಲ್ಲದೆ ಜನರ ಸಂಕಷ್ಟದಲ್ಲಿ ಪಾಲ್ಗೊಳ್ಳುತ್ತಿರುವ ರೂಪೇಶ್ ಶೆಟ್ಟಿ ಕಾರ್ಯ ಶ್ಲಾಘನೀಯ ಎಂದು ರೀಚಲ್ ಚಾರಿಟೇಬಲ್ ಟ್ರಸ್ಟಿನ ಟ್ರಸ್ಟೀ ಸಿರಿಲ್ ರಾಬರ್ಟ್ ಅಭಿಪ್ರಾಯಪಟ್ಟರು.ಅವರು ತೊಕ್ಕೊಟ್ಟು ಶಿವಾಜಿ ಫ್ರೆಂಡ್ಸ್ ಸರ್ಕಲ್ ನಲ್ಲಿ ಮಂಗಳವಾರ ರೂಪೇಶ್ ಶೆಟ್ಟಿ ನೇತೃತ್ವದಲ್ಲಿ 100 ಕುಟುಂಬಗಳಿಗೆ ಆಹಾರ ಕಿಟ್ ಗಳನ್ನು ವಿತರಣೆ ನಡೆಸಿ ಮಾತನಾಡಿದರು.ತೊಕ್ಕೊಟ್ಟು ಭಾಗದಲ್ಲಿ ಅಶಕ್ತರಿಗೆ ನೆರವಾಗುವ ಸಲುವಾಗಿ ನಟ ರೂಪೇಶ್ ಶೆಟ್ಟಿ ಅವರನ್ನು ಕೇಳಿಕೊಂಡಾಗ ಉತ್ತಮವಾಗಿ ಸ್ಪಂಧಿಸಿ ಆಹಾರ ಕಿಟ್ ಗಳನ್ನು ಶಿವಾಜಿ ಫ್ರೆಂಡ್ಸ್ ಮೂಲಕ ನೀಡಿದ್ದಾರೆ ಎಂದರು.ನಟ ರೂಪೇಶ್ ಶೆಟ್ಟಿ ಮಾತನಾಡಿ , ಈವರೆಗೆ ಜಿಲ್ಲೆಯಾದ್ಯಂತ 3,000 ಕಿಟ್ ವಿತರಿಸಲಾಗಿದೆ. ಗಿರಗಿಟ್ ಚಲನಚಿತ್ರಕ್ಕೆ ಜಿಲ್ಲೆಯ ಜನ ಅಭೂತಪೂರ್ವ ಯಶಸ್ಸನ್ನು ತಂದುಕೊಟ್ಟಿದ್ದಾರೆ. ಇದರಿಂದ ಚಲನಚಿತ್ರದ ತಂಡದ ಮೇಲೆ ಜವಾಬ್ದಾರಿಯಿದೆ ಅನ್ನುವುದನ್ನು ಅರಿತುಕೊಂಡು ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡಿದ್ದೇವೆ . ಮುಂದರೆಯೂ 1,000ಕ್ಕಿಂತ ಅಧಿಕ ಕಿಟ್ ನೀಡಲಿದ್ದೇವೆ ಎಂದರು.ಕಾರ್ಯಕ್ರಮದಲ್ಲಿ ಲೋಕೋಪಯೋಗಿ ಇಲಾಖೆಯ ನಿವೃತ್ತ ಅಧಿಕಾರಿ ಚಂದ್ರಹಾಸ್ ಶೆಟ್ಟಿ, ಶಿವಾಜಿ ಫ್ರೆಂಡ್ಸ್…
ಉಳ್ಳಾಲ ತಾಲೂಕು ಕಚೇರಿ ನಾಟೆಕಲ್ ಪ್ರಾಥಮಿಕ ಆರೋಗ್ಯ ಕೇಂದ್ರದ ಹಳೇ ಕಟ್ಟಡದಲ್ಲಿ ತಾತ್ಕಾಲಿಕವಾಗಿ ಕಾರ್ಯಾಚರಣೆ ನಡೆಸಲಿದೆ. ತಾಲೂಕಿನ ಎಲ್ಲಾ ನಿಯಮಗಳನ್ನು ಜ್ಯಾರಿಗೊಳಿಸಿ ಹಾಗೂ ತಹಶೀಲ್ದಾರ್ ಮತ್ತು ವಿವಿಧ ಇಲಾಖೆಗಳ ಅಧಿಕಾರಿಗಳ ನೇಮಕಕ್ಕೆ ರಾಜ್ಯ ಸರಕಾರ ಆದೇಶ ನೀಡಿದೆ ಎಂದು ಶಾಸಕ ಯು.ಟಿ ಖಾದರ್ ಹೇಳಿದರು.ಅವರು ಉಳ್ಳಾಲ ತಾಲೂಕು ಕಚೇರಿಗೆ ಗುರುತಿಸಲಾದ ನಾಟೆಕಲ್ ಪ್ರಾಥಮಿಕ ಆರೋಗ್ಯ ಕೇಂದ್ರದ ಹಳೇ ಕಟ್ಟಡವನ್ನು ವೀಕ್ಷಿಸಿ ಮಾತನಾಡಿದರು.ನೂತನ ತಾಲೂಕು ಕಚೇರಿಯ ವ್ಯವಸ್ಥೆ ಕಲ್ಪಿಸುವ ಉಸ್ತುವಾರಿಯನ್ನು ಮಂಗಳೂರು ತಹಶೀಲ್ದಾರ್ ಗುರುಪ್ರಸಾದ್ ಅವರಿಗೆ ನೀಡಲಾಗಿದೆ. ತಾತ್ಕಾಲಿಕವಾಗಿ ತಾಲೂಕು ಕಚೇರಿ ನಾಟೆಕಲ್ ನಲ್ಲಿ ಕಾರ್ಯಾಚರಿಸಲಿದ್ದು, ಮುಂದಿನ ದಿನಗಳಲ್ಲಿ ಸರಕಾರಿ ಸ್ಥಳವನ್ನು ಕಂದಾಯ ಇಲಾಖೆ ಗುರುತಿಸಿ ಜಿಲ್ಲಾಧಿಕಾರಿಗೆ ವರದಿ ಸಲ್ಲಿಸಿದ ನಂತರ ಶಾಶ್ವತ ತಾಲೂಕು ಕಚೇರಿಯ ನಿರ್ಮಾಣ ಆಗಲಿದೆ. ಸ್ಥಳ ನಿಗದಿ ಬಳಿಕ ಕಟ್ಟಡ ನಿರ್ಮಾಣಕ್ಕೆ ಬೇಕಾಗಿರುವ ಅನುದಾನವನ್ನು ಸರಕಾರದಿಂದ ಕೇಳಿ ತರುವ ಜವಾಬ್ದಾರಿ ತನ್ನದು. ತಾಲೂಕು ಪಂಚಾಯತ್ ಕಚೇರಿಯೂ ಹತ್ತಿರದಲ್ಲೇ ನಿರ್ಮಾಣವಾಗಲಿದೆ. ತೊಕ್ಕೊಟ್ಟು ಪರಿಸರದಲ್ಲಿ ಕಾರ್ಯಾಚರಿಸುವ ನೆಮ್ಮದಿ ಕೇಂದ್ರ, ಕಂದಾಯ ಇಲಾಖೆ…
ಉಳ್ಳಾಲ: ಗ್ರಾಮಮಟ್ಟದಲ್ಲಿ ವ್ಯಾಕ್ಸಿನ್ ಟೋಕನ್ ನೀಡುವ ಸಂದರ್ಭ ಆಧಾರ್ ಕಾರ್ಡ್ ಮೊಬೈಲನ್ನು ಕಡ್ಡಾಯವಾಗಿ ಪಡೆದುಕೊಳ್ಳಿ. ಈ ಮೂಲಕ ಬೇರೆ ಗ್ರಾಮದವರು ವ್ಯಾಕ್ಸಿನ್ ಪಡೆಯುವುದನ್ನು ತಪ್ಪಿಸಿಕೊಳ್ಳಬಹುದು ಎಂದು ಶಾಸಕ ಯು.ಟಿ ಖಾದರ್ ಹೇಳಿದರುಮಂಗಳೂರು ತಾಲೂಕಿನ ಮಂಗಳೂರು ಬಿ. (ಉಳ್ಳಾಲ) ಹೋಬಳಿಯ 14 ಗ್ರಾಮಗಳು ಮತ್ತು ಬಂಟ್ವಾಳ ತಾಲೂಕಿನ ಪಾಣೆಮಂಗಳೂರು (ಮುಡಿಪು) ಹೋಬಳಿಯ 9 ಗ್ರಾಮಗಳು ಸೇರಿ ಒಟ್ಟು 23 ಗ್ರಾಮಗಳನ್ನೊಳಗೊಂಡ ನೂತನ ಉಳ್ಳಾಲ ತಾಲೂಕು ಅಸ್ತಿತ್ವಕ್ಕೆ ಬಂದ ಒಂದು ವರ್ಷದ ಬಳಿಕ ದೇರಳಕಟ್ಟೆಯ ಖಾಸಗಿ ಸಭಾಂಗಣದಲ್ಲಿ ಮಂಗಳವಾರ ನಡೆದ ಉಳ್ಳಾಲ ತಾಲೂಕಿಗೆ ಸಂಬಂಧಪಟ್ಟ ಎಲ್ಲಾ ಸ್ಥಳೀಯಾಡಳಿತ ಸಂಸ್ಥೆಗಳ ಅ„ಕಾರಿಗಳು, ಜನಪ್ರತಿನಿ„ಗಳ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.ಗ್ರಾಮಿಣ ಮಟ್ಟಕ್ಕೂ ಆ್ಯಪ್ ರಚಿಸುವ ಮೂಲಕ ಆಸ್ಪತ್ರೆ ಮಟ್ಟಕ್ಕೆ ಬರುವ ವ್ಯಾಕ್ಸಿನ್ ಗ್ರಾಮ ಮಟ್ಟಕ್ಕೆ ವಿಂಗಡಣೆಗೆ ಸೂಚಿಸುತ್ತೇವೆ. ಈ ಕುರಿತು ಸರಕಾರದ ಗಮನಕ್ಕೆ ತರುತ್ತೇನೆ. ಗ್ರಾಮಕ್ಕೆ ಹೊರಗಿನಿಂದ ಬಂದವರಿಗೆ ವ್ಯಾಕ್ಸಿನ್ ನೀಡಬೇಡಿ. ಗ್ರಾಮದವರಿಗೆ ಟೋಕನ್ ನೀಡಿ. 150 ವ್ಯಾಕ್ಸಿನ್ ಇದ್ದರೆ 300 ಕೂಪನ್ ಒಂದೇ ದಿನ ನೀಡಿ,…
ಉಳ್ಳಾಲ : ಕಡಲ್ಕೊರೆತ ಸಂಭಂಧ ಪಟ್ಟ ಹಾಗೆ ತೌಕ್ತೆ ಚಂಡಮಾರುತ ದಿಂದ ಸೋಮೇಶ್ವರ, ಉಳ್ಳಾಲ, ಕೋಟೆಪುರ,ಭಟ್ಟಂಪಾಡಿಯಲ್ಲಿ ಮನೆಗಳಿಗೆ ವ್ಯಾಪಕವಾಗಿ ಹಾನಿಯಾಗಿದೆ. ಮೊಗವೀರ ಪಟ್ನದಿಂದ ಸೋಲಾರ್ ಕ್ಲಬ್ ವರೆಗೆ ಹಾಗೂ ಪೆರಿಬೈಲ್ ರೋಹಿತ್ ಮಾಸ್ಟರ್ ಮನೆಕೋಟೆಬಾಗಿಲು, ನಾಗೇಶ್, ಬೆಟ್ಟಂಪಾಡಿಯವರ ಮನೆ ಅಪಾಯದಲ್ಲಿದೆ, ಇದನ್ನು ಸಂರಕ್ಷಿಸುವ ಕಾರ್ಯ ಸರಕಾರ ಮಾಡಬೇಕಿದೆಈವರೆಗೆ ಸರಿಪಡಿಸುವ ಕಾರ್ಯಕ್ಕೆ ಸರಕಾರ ಮುಂದಾಗಿಲ್ಲ ಎಂದು ಶಾಸಕ ಯು.ಟಿ ಖಾದರ್ ಹೇಳಿದರು.ಅವರು ಮಂಗಳೂರು ವಿಶ್ವವಿದ್ಯಾನಿಲಯದ ಐ.ಬಿಯಲ್ಲಿ ನಡೆಸಿದ ಸುದ್ಧಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.ಇಂದಿನವರೆಗೆ ಮನೆಗಳನ್ನು ಉಳಿಸುವ ಕೆಲಸ ಪ್ರಾರಂಭವಾಗಿಲ್ಲ, ಕಡಲಂಚಿನ ಜನರು ಭಯದ ವಾತಾವರಣದಲ್ಲಿ ಇದ್ದಾರೆ. ಜಿಲ್ಲಾಧಿಕಾರಿ ಕಚೇರಿರಯಲ್ಲಿ ನಡೆದ ಸಭೆಯಲ್ಲಿ ಸ್ಪಷ್ಟವಾಗಿ ಹೇಳಲಾಗಿತ್ತು . ಮೀನುಗಾರಿಕೆ ಹಾಗೂ ಬಂದರು ಇಲಾಖೆಯ ಸಂಬಂಧ ಪಟ್ಟ ಸಭೆ ಮಂಗಳೂರಿನಲ್ಲಿ ನಡೆಯಬೇಕು. ಬೆಂಗಳೂರಿನ ಎ.ಸಿ ಕೋಣೆಯಲ್ಲಿ ಅಧಿಕಾರಿಗಳಿಗೆ ಕಡಲಿನಂಚಿನಲ್ಲಿರುವ ಸಮಸ್ಯೆ ತಿಳಿಯುವುದಿಲ್ಲ. ಆದ್ದರಿಂದಉನ್ನತ ಮಟ್ಟದ ಸಭೆ ಮಂಗಳೂರಿನಲ್ಲಿಯೇ ನಡೆಯಬೇಕು ಎಂದು ಒತ್ತಾಯಿಸಿದ್ದೆ. ಆದರೆ ಈವರೆಗೆ ಬೆಂಗಳೂರಿನಲ್ಲೂ ಸಭೆ ಆಗಿಲ್ಲ, ಮಂಗಳೂರಿನಲ್ಲೂ ಆಗಿಲ್ಲ. ಮೀನುಗಾರರ ಮನೆ ಹಾನಿಯಾದಲ್ಲಿ ರಾಜ್ಯ…

