ಉಳ್ಳಾಲ: ಉಳ್ಳಾಲದ ಯುವಕರಿಬ್ಬರು ಒಮಾನ್ ದೇಶದಲ್ಲಿ ಸಮುದ್ರ ವಿಹಾರಕ್ಕೆಂದು ತೆರಳಿದ್ದ ಸಂದರ್ಭ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಶುಕ್ರವಾರ ನಡೆದಿದೆ.ಉಳ್ಳಾಲದ ಅಲೇಕಳ ನಿವಾಸಿ ರಿಜ್ವಾನ್ (25), ಉಳ್ಳಾಲ ಕೋಡಿ ನಿವಾಸಿ ಜಹೀರ್ (25) ಮೃತಪಟ್ಟವರು. ಎರಡು ವರ್ಷದ ಹಿಂದೆ ಉಳ್ಳಾಲದಿಂದ ಒಮಾನ್ ದೇಶಕ್ಕೆ ಉದ್ಯೋಗಕ್ಕಾಗಿ ತೆರಳಿದ್ದ ಇಬ್ಬರು ಯುವಕರು ಅಲ್ಲಿನ ಫಿಶ್ ಮಿಲ್ ಕಂಪೆನಿಯಲ್ಲಿ ಉದ್ಯೋಗದಲ್ಲಿದ್ದರು. ಅಲ್ಲಿನ ದುಕ್ಕುಂ ಎಂಬ ಕಡಲ ತೀರಕ್ಕೆ ಶುಕ್ರವಾರ ಸಂಜೆ ವಿಹಾರಕ್ಕೆ ತೆರಳಿದ್ದ ಸಂದರ್ಭ ರಿಜ್ವಾನ್ ಕಡಲಿನ ಅಲೆಯಲ್ಲಿ ಸಿಲುಕಿದ್ದು ಮುಳುಗುತ್ತಿದ್ದಾಗ ಜಹೀರ್ ಆತನ ರಕ್ಷಣೆಗೆ ತೆರಳಿದ್ದಾನೆ. ಈ ವೇಳೆ, ಇಬ್ಬರೂ ಸಮುದ್ರ ನೀರಿನಲ್ಲಿ ಸಿಲುಕಿ ನೀರಾಪಾಲಾಗಿದ್ದಾರೆ ಎನ್ನಲಾಗಿದೆ.ಘಟನೆಯಲ್ಲಿ ಉಳ್ಳಾಲ ಕೋಡಿ ಜಹೀರ್ ಮೃತದೇಹ ಪತ್ತೆಯಾಗಿದ್ದು, ರಿಜ್ವಾನ್‍ಗಾಗಿ ಶೋಧ ಮುಂದುವರಿದಿದೆ. ಜಹೀರ್‍ಗೆ ಈಗಾಗಲೇ ಮದುವೆ ನಿಶ್ವಯವಾಗಿತ್ತು. ಕೆಲವೇ ದಿನಗಳಲ್ಲಿ ಆತ ತಾಯ್ನಾಡಿಗೆ ಆಗಮಿಸುವ ತಯಾರಿಯಲ್ಲಿದ್ದ ಎಂದು ತಿಳಿದುಬಂದಿದೆ.
Author: UllalaVani
UN networks ಉಳ್ಳಾಲ: ಕನ್ನಡಿಗರಲ್ಲಿ ರಾಷ್ಟ್ರೀಯ ಪ್ರಜ್ಞೆ ಮೂಡಿಸುವ ಪ್ರಯತ್ನಗಳಲ್ಲಿ ಡಾ. ನಾರಾಯಣರಾವ್ ಸುಬ್ಬರಾವ್ ಹರ್ಡೀಕರ್‌ರವರನ್ನು ನಿರ್ಲಕ್ಷಿಸುವಂತಿಲ್ಲ. ವೈದ್ಯಕೀಯ ಕ್ಷೇತ್ರದಲ್ಲಿದ್ದರೂ ರಾಷ್ಟ್ರ ನಿರ್ಮಾಣದ ಆಸಕ್ತಿಯೇ ಅವರಲ್ಲಿ ಹೆಚ್ಚಾಗಿತ್ತು. ಆರ್ಯ ಬಾಲಸಭಾ ಎಂಬ ಕ್ಲಬ್ ಕಟ್ಟುವುದರ ಮೂಲಕ ಇಡೀ ರಾಷ್ಟ್ರಕ್ಕೆ ಪ್ರೇರಣೆಯಾದವರು ಎಂದು ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂತೋಷ್ ಶೆಟ್ಟಿ ಅಸೈಗೋಳಿ ಹೇಳಿದರು. ಅವರು ತೊಕ್ಕೊಟ್ಟು ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ, ಕಾಂಗ್ರೆಸ್ ಸೇವಾದಳ ಹಾಗೂ ಉಳ್ಳಾಲ ಬ್ಲಾಕ್ ಕಾಂಗ್ರೆಸ್ ವತಿಯಿಂದ ಶುಕ್ರವಾರ ಜರಗಿದ ದಿ| ಡಾ. ನಾರಾಯಣರಾವ್ ಸುಬ್ಬರಾವ್ ಹರ್ಡೀಕರ್ ಪುಣ್ಯತಿಥಿಯಲ್ಲಿ ಭಾಗವಹಿಸಿ ಮಾತನಾಡಿದರು. ಈ ಸಂದರ್ಭ ಕಾಂಗ್ರೆಸ್ ಮುಖಂಡರುಗಳಾದಟಿ.ಕೆ ಸುಧೀರ್, ಸುರೇಖಾ ಚಂದ್ರಹಾಸ್, ಪುರುಷೋತ್ತಮ ಅಂಚನ್, ಕಿಶೋರ್ ಮುಂಡೋಳಿ, ಸೇವಾದಳದ ನಾಗೇಶ್ ಶೆಟ್ಟಿ ತೊಕ್ಕೊಟ್ಟು ಮೊದಲಾದವರು ಉಪಸ್ಥಿತರಿದ್ದರು.
UN networks ಉಳ್ಳಾಲ: ಉಳ್ಳಾಲದ ಮಾಸ್ತಿಕಟ್ಟೆ ಜಂಕ್ಷನ್ನಿನಲ್ಲಿರುವ ಶುದ್ಧ ನೀರಿನ ವಾಟರ್ ಕಿಯೋಸ್ಕ್ ಯಂತ್ರ ಕ್ಕೆ ಕಾಯಿನ್ ಹಾಕಿದರೂ ನೀರು ಬರುತ್ತಿಲ್ಲ. ಆದರೆ ಯಂತ್ರ ಮಾತ್ರ ಕಾಯಿನ್ ಅನ್ನು ನುಂಗುತ್ತಿರುವುದು ನಾಗರಿಕರ ಆಕ್ರೋಶಕ್ಕೆ ಕಾರಣವಾಗಿದೆ. ನಗರೋತ್ಥಾನ-3 ರ ಅನುದಾನದಡಿ ಖಾಸಗಿ ಸಂಸ್ಥೆ ಸಹಭಾಗಿತ್ವದಲ್ಲಿ ಕಳೆದ ವರ್ಷ ಸ್ಥಾಪಿಸಲಾಗಿತ್ತು. ಉತ್ತಮ ಗುಣಮಟ್ಟದ ಯಂತ್ರ ಇದಾಗಿದ್ದು, ವರ್ಷ ಪೂರ್ತಿ ಶುದ್ಧ ನೀರನ್ನು ಜನತೆ ಹಾಕುವ ಹಣಕ್ಕೆ ತಕ್ಕಂತೆ ಪೂರೈಸುತಿತ್ತು. ಆದರೆ ಇದೀಗ ಕೆಲ ದಿನಗಳಿಂದ ಯಂತ್ರ ಕಾಯಿನ್ ಮಾತ್ರ ನುಂಗುತ್ತಿರುವುದು ನಾಗರಿಕರ ಆಕ್ರೋಶಕ್ಕೆ ಕಾರಣವಾಗಿದೆ. ಜನರ ತೆರಿಗೆ ಹಣದಲ್ಲಿ ನಿರ್ಮಿಸಲಾದ ಯಂತ್ರ, ಇದೀಗ ಮತ್ತೆ ಜನರ ಹಣವನ್ನು ನುಂಗುತ್ತಿದೆ ಅನ್ನುವ ಸಂದೇಶ ವಾಟ್ಸ್ಯಾಪ್ ಮೂಲಕ ಹರಿದಾಡುತ್ತಿದೆ
UN networks ದೇರಳಕಟ್ಟೆ: ಗೂಡ್ಸ್ ವಾಹನವೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆಯಲ್ಲೇ ಪಲ್ಟಿಯಾಗಿರುವ ಘಟನೆ ಕುತ್ತಾರು ನಿತ್ಯಾನಂದನಗರ ಬಳಿ ಇಂದು ನಡೆದಿದೆ.ದೇರಳಕಟ್ಟೆ ಕಡೆಯಿಂದ ತೊಕ್ಕೊಟ್ಟು ಕಡೆಗೆ ಹಣ್ಣುಹಂಪಲುಗಳನ್ನು ಸಾಗಾಟ ನಡೆಸುತ್ತಿದ್ದ ಟೆಂಪೋ ಚಾಲಕನ ನಿಯಂತ್ರಣ ತಪ್ಪಿ ರಸ್ತೆಗೆ ಉರಳಿದೆ. ಟೆಂಪೋದಲ್ಲಿ ಚಾಲಕ ಮಾತ್ರ ಇದ್ದು, ಯಾವುದೇ ಗಾಯವಿಲ್ಲದೆ ಪಾರಾಗಿದ್ದಾನೆ. ಸ್ಥಳಕ್ಕೆ ನಾಗುರಿ ಸಂಚಾರಿ ಠಾಣಾ ಪೊಲೀಸರು ಭೇಟಿ ನೀಡಿ ,ಅಡ್ಡಿಯುಂಟಾಗಿದ್ದರಸ್ತೆ ಸಂಚಾರವನ್ನು ತೆರವುಗೊಳಿಸಿದ್ದಾರೆ .
UN networks ತಲಪಾಡಿ: ಮಂಗಳೂರು ಪ್ರವೇಶಕ್ಕೆ ನಕಲಿ ನೆಗೆಟಿವ್ ರಿಪೋರ್ಟ್ ತಂದ ನಾಲ್ವರ ನ್ನು ಉಳ್ಳಾಲ ಪೊಲೀಸರು ಬಂಧಿಸಿರುವ ಘಟನೆ ತಲಪಾಡಿಯಲ್ಲಿ ನಡೆದಿದೆ. ಕೇರಳದ ಆದಿಲ್, ಹನಿನ್, ಇಸ್ಮಾಯಿಲ್ ಮತ್ತು ಅಬ್ದುಲ್ ತಮೀಮ್ ಬಂಧಿತರು. ನಾಲ್ವರುಮೊಬೈಲ್ ನಲ್ಲಿ ಎಡಿಟ್ ಮಾಡಿದ್ದ ನಕಲಿ ರಿಪೋರ್ಟ್ ತೋರಿಸಿ ಮಂಗಳೂರು ಪ್ರವೇಶಕ್ಕೆ ಯತ್ನಿಸುವಾಗ ,ಪೊಲೀಸರು ಪರಿಶೀಲನೆ ನಡೆಸಿ ಬಂಧಿಸಿದ್ದಾರೆ.ನಾಲ್ವರು ಆರೋಪಿಗಳನ್ನು ಉಳ್ಳಾಲ ಪೊಲೀಸರು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.
UN Networks ಬೆಳ್ತಂಗಡಿ : ಬೆಳ್ತಂಗಡಿಯಲ್ಲಿ ತುಲುವೆರೆ ಪಕ್ಷ ಅಸ್ತಿತ್ವಕ್ಕೆ ಬಂದಿದ್ದು, ಇತ್ತೀಚೆಗೆ ಬೆಳ್ತಂಗಡಿ ತಾಲೂಕು ಮಟ್ಟದ ಕಾರ್ಯಕರ್ತರ ಸಭೆ ಅಂಬೇಡ್ಕರ್ ಭವನದಲ್ಲಿ ನಡೆಯಿತು. ತುಲುವೆರೆ ಪಕ್ಷದ ಅಧ್ಯಕ್ಷ ಶೈಲೇಶ್ ಆರ್.ಜೆ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನ್ಯಾಯವಾದಿ ಪ್ರಶಾಂತ್ ಎಂ. ಅವರನ್ನು ಆಯ್ಕೆ ಮಾಡಲಾಯಿತು. ತುಳು ಭಾಷೆಗೆ ಸ್ಥಾನಮಾನ, ತುಳುನಾಡಿನ ಸಮಗ್ರ ಅಭಿವೃದ್ದಿ ಮತ್ತು ತುಳುನಾಡ್ ರಾಜ್ಯ ರಚನೆಗೆ ಪಕ್ಷವನ್ನು ಬಲಿಷ್ಠವಾಗಿ ಕಟ್ಟುವ ನಿರ್ಣಯದೊಂದಿಗೆ ಬೆಳ್ತಂಗಡಿ ತಾಲೂಕು ಸಮಿತಿಯನ್ನು ರಚಿಸಲಾಯಿತು. ಅಧ್ಯಕ್ಷರಾಗಿ ನ್ಯಾಯವಾದಿ ಪ್ರಶಾಂತ್. ಎಂ, ಉಪಾಧ್ಯಕ್ಷರಾಗಿ ಮುಖಿಂ ಖಾನ್, ಪ್ರಧಾನ ಕಾರ್ಯದರ್ಶಿಯಾಗಿ ನ್ಯಾಯವಾದಿ ಸತೀಶ್ ಪೂಜಾರಿ .ಎನ್, ಜೊತೆ ಕಾರ್ಯದರ್ಶಿಯಾಗಿ ದಿನೇಶ್ ಆರ್. ಮತ್ತು ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಗೋಪಾಲ್ ಸಂಜಯನಗರ, ಸುರೇಂದ್ರ ಬಂಗಾಡಿ, ಧನಂಜಯ ಕುಮಾರ್ ಡಿ., ಉಮೇಶ್ ಕುಲಾಲ್, ಮಹಮ್ಮದ್ ಶರೀಫ್, ಮನೋಹರ್ ಕುಮಾರ್, ಗಿರೀಶ್ ನಿಸರ್ಗ ಆಯ್ಕೆಯಾದರು. ತುಲುವೆರೆ ಪಕ್ಷದ ವಿವಿಧ ಘಟಕಗಳ ಪದಾಧಿಕಾರಿಗಳಾದ ನವೀನ್ ಪೂಜಾರಿ, ರೇಖಾ ಲೋಬೋ, ರಾಜೇಶ್ ಕುಲಾಲ್, ಪ್ರವೀಣ್ ಕುಮಾರ್…
UN networks ಉಳ್ಳಾಲ: ಕಳೆದ ಐದು ವರ್ಷಗಳಿಂದ ಕಾಬೂಲಿನಲ್ಲಿ ನ್ಯಾಟೋ ಪಡೆಯ ಮಿಲಿಟರಿ ಬೇಸ್ ನಲ್ಲಿ ಇಕೊಲಾಗ್ ಇಂಟರ್ ನ್ಯಾಷನಲ್ ಕಂಪೆನಿಯಲ್ಲಿ ಎ.ಸಿ ಮೆಕ್ಯಾನಿಕ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಡೆಮ್ಸಿ ಮೊಂತೇರೊ (29) ಇಂದು ಉಳ್ಳಾಲ ಉಳಿಯದಲ್ಲಿರುವ ತನ್ನ ಮನೆಗೆ ತಲುಪಿದ್ದಾರೆ. ಆ.18 ರಂದು ಇವರ ಸಹೋದರ ಮೆಲ್ವಿನ್ ಮೊಂತೇರೋ ತಾಯ್ನಾಡಿಗೆ ಮರಳಿದ್ದರು. ಸಹೋದರ ಡೆಮ್ಸಿ ಅಪಘಾನಿಸ್ತಾನದಲ್ಲಿ ಸಿಲುಕಿರುವುದರಿಂದ ಚಿಂತೆಯಲ್ಲಿದ್ದ ಕುಟುಂಬ ಇದೀಗ ನಿರಾಳವಾಗಿದೆ. ಕುಟುಂಬದ ಸದಸ್ಯರು ಹಾಗೂ ನಗರಸಭೆ ಸದಸ್ಯೆ ಜೊತೆಗೆ ಅಪಘಾನಿನಿಂದ್ ವಾಪಸ್ಸಾದ ಸಹೋದರರು ಅಪಘಾನಿಸ್ತಾನದಿಂದ ವಾಪಸ್ಸಾದ ಡೆಮ್ಸಿ ಮೊಂತೇರೊ ವಾಪಸ್ಸಾದ ಡೆಮ್ಸಿ ಮೊಂತೇರೋ ಅವರನ್ನು ಸ್ವಾಗತಿಸಿದ ಸಹೋದರ ಮೆಲ್ವಿನ್ ಮೊಂತೇರೊ ಕಾಬುಲ್ ನಲ್ಲಿ ನಡೆದ ಗುಂಡಿನ ದಾಳಿಯ ವೀಡಿಯೋ ಸೆರೆಹಿಡಿದ ಡೆಮ್ಸಿ ಮೊಂತೇರೊ ಆ.17 ರಂದು ನ್ಯಾಟೋ ಪಡೆಯ ಕ್ಯಾಂಪ್ ನಲ್ಲಿದ್ದ ಮೆಲ್ವಿನ್ ಮೊಂತೇರೋ ಅವರನ್ನು ಭಾರತೀಯ ವಾಯುಪಡೆ ಕಾಬೂಲ್ ನಿಂದ ಏರ್ ಲಿಫ್ಟ್ ನಡೆಸಿ ಗುಜರಾತ್ ಗೆ ಕರೆತಂದಿದ್ದರು. ಆದರೆ ಸಹೋದರ ಡೆಮ್ಸಿ ಮೊಂತೇರೋ…
UN networks ಉಳ್ಳಾಲ: ಹೊರಗೆ ಹೋಗುತ್ತಿದ್ದಲ್ಲಿ ತಾಲಿಬಾನಿಗರು ಗುಂಡು ದಾಳಿ ನಡೆಸುತ್ತಿದ್ದರು. ಆದರೆ ನ್ಯಾಟೋ ಏರ್‍ಬೇಸ್ ಕ್ಯಾಂಪಿನ ಒಳಗೆಯೇ ಕೆಲಸವಿರುವುದರಿಂದ ಹೊರಹೋಗುವ ಅವಕಾಶವೂ ಇರಲಿಲ್ಲ. ಮನೆಗೆ ಯಾವಾಗ ತಲುಪುತ್ತೇನೋ ಅನ್ನುವ ಪ್ರಶ್ನೆ ಇತ್ತು. ಭಾರತೀಯ ರಾಯಭಾರಿ ಕಚೇರಿ ಮತ್ತು ಅಮೆರಿಕಾ ವಾಯುಸೇನೆ ಸಹಕಾರದಿಂದ ಆ.17 ರಂದು ಏರ್ ಲಿಫ್ಟ್ ಆಗಿ ಕತಾರ್ ನಲ್ಲಿ ಮೂರು ದಿನಗಳ ಕಾಲ ಉಳಿದು, ಇಂದು ದೆಹಲಿಗೆ ತಲುಪಿ ಅಲ್ಲಿಂದ ಮನೆಗೆ ಮರಳಿದ್ದೇನೆ. ಇದು ಅಫ್ಘಾನಿಸ್ಥಾನದ ನ್ಯಾಟೋ ಪಡೆಯ ಅಧೀನದ ಲಂಡನ್ ಮೂಲದ ಓವರ್ ಸೀಸ್ ಸಪ್ಲೈ ಸರ್ವೀಸಸ್ ಸಂಸ್ಥೆಯಲ್ಲಿ ಅಕೌಂಟೆಂಟ್ ಆಗಿದ್ದ ಕೊಲ್ಯ ಕನೀರುತೋಟ ನಿವಾಸಿ ಪ್ರಸಾದ್ ಅವರ ಮಾತು. ಬಿಜೆಪಿ ಮಂಡಲ ಅಧ್ಯಕ್ಷ ಚಂದ್ರಹಾಸ್ ಪಂಡಿತ್ ಹೌಸ್ ಭೇಟಿ ಶಾಸಕ ಯು.ಟಿ ಖಾದರ್ ಭೇಟಿ ಕಳೆದ ಎಂಟು ವರ್ಷಗಳಿಂದ ನ್ಯಾಟೋ ಪಡೆಯ ಕಂಪೆನಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. 2021ರ ಫೆಬ್ರವರಿಗೆ ಆಗಮಿಸಿದ್ದ ಪ್ರಸಾದ್ ಎಪ್ರಿಲ್ 3ರಂದು ಅಫ್ಘಾನಿಸ್ಥಾನಕ್ಕೆ ತೆರಳಿದ್ದರು. ಅಪಘಾನಿಸ್ತಾನ ತಾಲಿಬಾನಿಗರ ವಶವಾಗುತ್ತಿದ್ದಂತೆ ,…
ಉಳ್ಳಾಲ: ಭಯೋತ್ಪಾದನೆಯಂತಹ ಕೃತ್ಯಗಳು ದೇಶದ ಯಾವುದೇ ಮೂಲೆಯಲ್ಲಾದರೂ ಕೂಡ ಬಿಜೆಪಿ ಹಾಗೂ ಸಂಘಟನೆಗಳು ಸಹಿಸುವುದಿಲ್ಲ. ಭಯೋತ್ಪಾದನೆಯನ್ನು ಬೇರು ಸಮೇತ ಕಿತ್ತು ಹಾಕಲು ಎಲ್ಲಿಗೆ ಬೇಕಾದರೂ ಹೋಗಲು ತಯಾರಿದ್ದೇವೆ ಎಂದು ಬಿಜೆಪಿ ಮಂಗಳೂರು ಕ್ಷೇತ್ರ ಅಧ್ಯಕ್ಷ ಚಂದ್ರಹಾಸ್ ಪಂಡಿತ್ ಹೌಸ್ ತಿಳಿಸಿದ್ದಾರೆ.ಸಂಘಪರಿವಾರದ ಕಾರ್ಯಕರ್ತರು ಉಳ್ಳಾಲದ ಎನ್‍ಐಎ ದಾಳಿ ನಡೆದಿರುವ ಮನೆಗೆ ಮುತ್ತಿಗೆ ಹಾಕಿರುವುದರ ವಿರುದ್ಧ ಶಾಸಕ ಯು.ಟಿ ಖಾದರ್ ನೀಡಿರುವ ಹೇಳಿಕೆ ವಿರುದ್ಧ ಮಾತನಾಡಿರುವ ಅವರು ಪತ್ರಿಕಾಗೋಷ್ಟಿಯಲ್ಲಿ ಯು.ಟಿ ಖಾದರ್ ಸಂಘಪರಿವಾರಕ್ಕೆ ಉಳ್ಳಾಲಕ್ಕೆ ಬರಲು ತಾವು ಯಾರು ಎಂದು ಕೇಳಿದ್ದಾರೆ. ಆದರೆ ರಾಷ್ಟ್ರದ ಮೂಲೆ ಮೂಲೆಯ ವಿಷಯದಲ್ಲಿ ಏನೇ ಆದರೂ ಕೈ ಹಾಕುವ ಖಾದರ್ ರವರಿಗೆ ತಮ್ಮ ಕ್ಷೇತ್ರದ ವಿಷಯವು ಮುಖ್ಯವಾಗದೇ ಇರಬಹುದು. ಆದರೆ ಉಳ್ಳಾಲದಲ್ಲಿ ನಡೆಯುವ ದೇಶವಿರೋಧಿ ಕೃತ್ಯಗಳನ್ನು ಸಂಘಪರಿವಾರ ಹಾಗೂ ಬಿಜೆಪಿಗೆ ಸಹಿಸಲು ಸಾಧ್ಯವಿಲ್ಲ . ಅಷ್ಟು ಮಾತ್ರವಲ್ಲದೇ ಉಳ್ಳಾಲ ಭವ್ಯ ಭಾರತದಲ್ಲಿಯೇ ಇದ್ದು ಅಲ್ಲಿಗೆ ಹೋಗಲು ಯಾರು ಕೂಡ ಅನುಮತಿ ನೀಡಬೇಕಾದ ಅನಿವಾರ್ಯತೆ ಒದಗಿ ಬಂದಿಲ್ಲ.ಲವ್ ಜಿಹಾದ್ ನಿಷೇಧದ…
ಉಳ್ಳಾಲ : ಪ್ರಯಾಣಿಕರಿಗೆ ಮೂಲಭೂತ ಸೌಕರ್ಯ ಕಲ್ಪಿಸುವ ಕಾರ್ಯವನ್ನು ಊರಿನ ಹಿರಿಯರು ಹಾಗೂ ಮಂದಿರದ ಆಡಳಿತ ಮಂಡಳಿ ಸೇರಿಕೊಂಡು ಮಾಡುತ್ತಿರುವ ಕಾರ್ಯ ಶ್ಲಾಘನೀಯ ಎಂದು ಹೆಚ್ ಬಿಎಫ್ ಪ್ರೈ. ಲಿ ನ ಆಡಳಿತ ನಿರ್ದೇಶಕ ಬಾಬ್ ಸಿಂಗ್ ಹೇಳಿದರು.ಅವರು ಕುಂಪಲ ಶ್ರೀ ಬಾಲಕೃಷ್ಣ ಮಂದಿರದ ರಜತ ವರ್ಷಾಚರಣೆ 1997-2022 ಸೇವಾ ಕಾರ್ಯದ ಅಂಗವಾಗಿ ನೂತನ ಬಸ್ಸು ತಂಗುದಾಣ ನೆರಳು ಇದರ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು.ಬಸ್ಸು ತಂಗುದಾಣವನ್ನು ಕೊಡುಗೆಯಾಗಿ ನೀಡಿದ ದಿ| ರಾಮ ಸಾಲಿಯಾನ್ ಕುಂಪಲ ಇವರ ಸೊಸೆ ಶಾಲಿನಿ ಶೇಖರ್ ಬಂಗೇರ, ದಿ. ಮುರಳಿ (ಐಓಸಿ) ಇವರ ಪುತ್ರಿ ಬಿಂದು, ದಿ| ರಾಮ ಭಂಜನ್ ಹನುಮಾನ್‍ನಗರ ಇವರ ಪತ್ನಿ ಅಂಭಾ ಬಂಗೇರ ಮುಖ್ಯ ಅತಿಥಿಗಳಾಗಿದ್ದರು. ಈ ಸಂದರ್ಭ ಮಂದಿರದ ಗೌರವಾಧ್ಯಕ್ಷ ಕೇಶವದಾಸ್ ಬಗಂಬಿಲ, ಗುತ್ತಿಗೆದಾರ ಪ್ರಸಾದ್ ಕಡಬ ಸುಳ್ಯ, ಪ್ರಧಾನ ಕಾರ್ಯದರ್ಶಿ ರವೀಂದ್ರ ಕುಂಪಲ, ಮಹಿಳಾ ಸಮಿತಿ ಅಧ್ಯಕ್ಷೆ ಸುಶೀಲ ಕೆ, ರಜತ ಮಹೋತ್ಸವ ಸಮಿತಿ ಗೌರವಾಧ್ಯಕ್ಷ ಮೋಹನ್…

