UN Networks
ಬೆಳ್ತಂಗಡಿ : ಬೆಳ್ತಂಗಡಿಯಲ್ಲಿ ತುಲುವೆರೆ ಪಕ್ಷ ಅಸ್ತಿತ್ವಕ್ಕೆ ಬಂದಿದ್ದು, ಇತ್ತೀಚೆಗೆ ಬೆಳ್ತಂಗಡಿ ತಾಲೂಕು ಮಟ್ಟದ ಕಾರ್ಯಕರ್ತರ ಸಭೆ ಅಂಬೇಡ್ಕರ್ ಭವನದಲ್ಲಿ ನಡೆಯಿತು. ತುಲುವೆರೆ ಪಕ್ಷದ ಅಧ್ಯಕ್ಷ ಶೈಲೇಶ್ ಆರ್.ಜೆ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನ್ಯಾಯವಾದಿ ಪ್ರಶಾಂತ್ ಎಂ. ಅವರನ್ನು ಆಯ್ಕೆ ಮಾಡಲಾಯಿತು.
ತುಳು ಭಾಷೆಗೆ ಸ್ಥಾನಮಾನ, ತುಳುನಾಡಿನ ಸಮಗ್ರ ಅಭಿವೃದ್ದಿ ಮತ್ತು ತುಳುನಾಡ್ ರಾಜ್ಯ ರಚನೆಗೆ ಪಕ್ಷವನ್ನು ಬಲಿಷ್ಠವಾಗಿ ಕಟ್ಟುವ ನಿರ್ಣಯದೊಂದಿಗೆ ಬೆಳ್ತಂಗಡಿ ತಾಲೂಕು ಸಮಿತಿಯನ್ನು ರಚಿಸಲಾಯಿತು.
ಅಧ್ಯಕ್ಷರಾಗಿ ನ್ಯಾಯವಾದಿ ಪ್ರಶಾಂತ್. ಎಂ, ಉಪಾಧ್ಯಕ್ಷರಾಗಿ ಮುಖಿಂ ಖಾನ್, ಪ್ರಧಾನ ಕಾರ್ಯದರ್ಶಿಯಾಗಿ ನ್ಯಾಯವಾದಿ ಸತೀಶ್ ಪೂಜಾರಿ .ಎನ್, ಜೊತೆ ಕಾರ್ಯದರ್ಶಿಯಾಗಿ ದಿನೇಶ್ ಆರ್. ಮತ್ತು ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಗೋಪಾಲ್ ಸಂಜಯನಗರ, ಸುರೇಂದ್ರ ಬಂಗಾಡಿ, ಧನಂಜಯ ಕುಮಾರ್ ಡಿ., ಉಮೇಶ್ ಕುಲಾಲ್, ಮಹಮ್ಮದ್ ಶರೀಫ್, ಮನೋಹರ್ ಕುಮಾರ್, ಗಿರೀಶ್ ನಿಸರ್ಗ ಆಯ್ಕೆಯಾದರು.
ತುಲುವೆರೆ ಪಕ್ಷದ ವಿವಿಧ ಘಟಕಗಳ ಪದಾಧಿಕಾರಿಗಳಾದ ನವೀನ್ ಪೂಜಾರಿ, ರೇಖಾ ಲೋಬೋ, ರಾಜೇಶ್ ಕುಲಾಲ್, ಪ್ರವೀಣ್ ಕುಮಾರ್ ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.


