Author: UllalaVani

Kannada News From Coastal Karnataka

UN networks ತೊಕ್ಕೊಟ್ಟು: ಖಾಸಗಿ ಬಸ್ ಪ್ರಯಾಣ ದರದ ವಿಪರೀತ ಏರಿಕೆ ವಿರೋಧಿಸಿ ಹಾಗೂ ಜಿಲ್ಲಾಡಳಿತದ ಏಕಪಕ್ಷೀಯ ನಿರ್ಧಾರವನ್ನು ಖಂಡಿಸಿ ಸಿ.ಪಿ.ಐ.ಎಂ ಉಳ್ಳಾಲ ವಲಯ ಸಮಿತಿ ವತಿಯಿಂದ ಪ್ರತಿಭಟನೆ ತೊಕ್ಕೊಟ್ಟು ಬಸ್ ನಿಲ್ದಾಣದಲ್ಲಿ ಗುರುವಾರ ನಡೆಯಿತು. ಸಿ.ಪಿ.ಐ.ಎಂ ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯ ಸುನಿಲ್ ಕುಮಾರ್ ಬಜಾಲ್ ಮಾತನಾಡಿ ಕಳೆದ ಕೆಲವು ದಿನಗಳ ಹಿಂದೆ ಈ ಜಿಲ್ಲೆಯಲ್ಲಿ ವಿವಿಧ ಜಾತ್ಯಾತೀತ ಪಕ್ಷ ಹಾಗೂ ಸಂಘಟನೆಗಳು ಒಟ್ಟಾಗಿ ಬಸ್ ದರ ಏರಿಕೆಯ ವಿರುದ್ದ ಜಿಲ್ಲಾಧಿಕಾರಿಗಳಿಗೆ ಮನವಿಯ ಜೊತೆಗೆ ಏರಿಸಿದ ಬಸ್ ಪ್ರಯಾಣ ದರವನ್ನು ತಡೆ ಹಿಡಿಯಬೇಕು, ಸಾರಿಗೆ ಪ್ರಾಧಿಕಾರದ ಸಭೆ ಕರೆದು ಸಾರ್ವಜನಿಕರ ಅಹವಾಲುಗಳನ್ನು ಕೇಳಬೇಕು ಎಂದು ಬೇಡಿಕೆ ಇಟ್ಟಿದ್ದೇವು. ಆದರೆ ಇದುವರೆಗೂ ಜಿಲ್ಲಾಡಳಿತದಿಂದ ಯಾವುದೇ ರೀತಿಯ ಸ್ಪಂದನೆ ಸಿಕ್ಕಿಲ್ಲ.ಬಸ್ಸು ದರ ಏರಿಕೆಯಿಂದ ಬಹು ಸಂಖ್ಯಾತ ಪ್ರಯಾಣಿಕರು ಇಂದು ಆಕ್ರೋಶಿತರಾಗಿದ್ದಾರೆ. ಇದರ ಹಿಂದೆ ದೊಡ್ಡ ಪಿತೂರಿ ಇದೆ ಎಂದು ಹೇಳಿದ ಅವರು ಬಸ್ಸು ಮಾಲಕರು 25 % ದರ ಜಾಸ್ತಿ ಮಾಡಲು ಹೇಳಿದ್ದರು,…

Read More

UN networks ದೇರಳಕಟ್ಟೆ : ಮಾಹಿತಿಯಿಲ್ಲದೆ ನಡೆದ 20-21ನೇ ಸಾಲಿನ ಜಮಾಬಂದಿಗೆ ಗ್ರಾಮಸ್ಥರು ಹಾಗೂ ಪ್ರತಿಪಕ್ಷಗಳು ವಿರೋಧ ವ್ಯಕ್ತಪಡಿಸಿ, ಜಮಾಬಂದಿಯನ್ನು ರದ್ದುಪಡಿಸಿದ ಪ್ರಸಂಗ ದೇರಳಕಟ್ಟೆಯ ಬೆಳ್ಮ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಮಂಗಳವಾರ ನಡೆದಿದೆ. ಆ.31 ರಂದು ಬೆಳ್ಮ ಗ್ರಾಮದ ಜಮಾಬಂದಿಯನ್ನು ಕಚೇರಿ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು. ಬೆಳ್ಮ ಗ್ರಾ.ಪಂ ಅಧ್ಯಕ್ಷ ಅಬ್ದುಲ್ ಸತ್ತಾರ್ ಅವರ ಅನುಪಸ್ಥಿತಿಯಲ್ಲಿ ಉಪಾಧ್ಯಕ್ಷೆ ಝುಲೈಕಾ ಜಮಾಬಂದಿಯ ಅಧ್ಯಕ್ಷತೆ ವಹಿಸಿದ್ದರು. ಆದರೆ ಮಾಧ್ಯಮಗಳಲ್ಲಿ ಪ್ರಚಾರವಿಲ್ಲದೆ, ಬ್ಯಾನರ್ ಅಳವಡಿಸದೆ, ಗ್ರಾಮಸ್ಥರ ಅರಿವಿಗೆ ಬಾರದಂತೆ, ಹಲವು ಗ್ರಾ.ಪಂ ಸದಸ್ಯರ ಗಮನಕ್ಕೆ ಬಾರದಂತೆ ತಮಗೆ ಬೇಕಾದವರಿಗೆ ಮಾತ್ರ ಆಹ್ವಾನಿಸಿ ಜಮಾಬಂದಿಯನ್ನು ಆಯೋಜಿಸಲಾಗಿತ್ತು. ವಿಚಾರ ತಿಳಿದು ಸಭಾಂಗಣಕ್ಕೆ ಆಗಮಿಸಿದ ಪಂ. ಸದಸ್ಯರು ಹಾಗೂ ಗ್ರಾಮಸ್ಥರು ಆಡಳಿತ ವರ್ಗಕ್ಕೆ ಧಿಕ್ಕಾರ ಕೂಗಿ, ಜಮಾಬಂದಿ ನಡೆಸದಂತೆ ವಿರೋಧ ವ್ಯಕ್ತಪಡಿಸಿದರು. ಪ್ರಚಾರವಿಲ್ಲದೆ ಕದ್ದುಮುಚ್ಚಿ ನಡೆಸುವ ಜಮಾಬಂದಿಯ ಅವಶ್ಯಕತೆಯಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿ ಜಮಾಬಂದಿ ನಡೆಯದಂತೆ ತಡೆಯೊಡ್ಡಿದ್ದಾರೆ. ಬಳಿಕ ಉಪಾಧ್ಯಕ್ಷೆ ಜಮಾಬಂದಿಯನ್ನು ರದ್ದುಗೊಳಿಸುವ ಮೂಲಕ ಪಂಚಾಯಿತಿ ಸಭಾಂಗಣದಲ್ಲಿ ಶಾಂತಿ ವಾತಾವರಣ ನಿರ್ಮಾಣವಾಯಿತು.

Read More

UN networks ಮಾಡೂರು : ಉಚಿತ ಲಸಿಕಾ ಅಭಿಯಾನಉಳ್ಳಾಲ: ದಕ್ಷಿಣ ಕನ್ನಡ ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆ ಇದರ ಸಹಭಾಗಿತ್ವದಲ್ಲಿ ಸಂಸದ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಇವರ ಸಹಕಾರದೊಂದಿಗೆ ವಿಶ್ವ ಭಾರತಿ ಮಾಡೂರು ಇದರ ವತಿಯಿಂದ ಉಚಿತ ಕೋವಿಡ್ ಲಸಿಕೆ ಅಭಿಯಾನ ಇಂದು ಭಾರತೀಯ ಸತ್ಯನಾರಾಯಣ ಮಾಡೂರು ಸಭಾಂಗಣದಲ್ಲಿ ನಡೆಯಿತು. ದಿ ಮೈಸೂರು ಎಲೆಕ್ಟ್ರಿಕಲ್ ಇಂಡಸ್ಟ್ರೀಸ್ ಲಿಮಿಟೆಡ್ ಅಧ್ಯಕ್ಷ ಸಂತೋಷ್ ಕುಮಾರ್ ರೈ ಬೋಳಿಯಾರ್, ಬಿಜೆಪಿ ಮಂಡಲ ಅಧ್ಯಕ್ಷ ಚಂದ್ರಹಾಸ್ ಪಂಡಿತ್ ಹೌಸ್ ಹಾಗೂ ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು

Read More

UN networks ಕೊಣಾಜೆ: ಬಿಜೆಪಿ ಕೊಣಾಜೆ ಮಹಾಶಕ್ತಿ ಕೇಂದ್ರದ ಬೂತ್ ಪ್ರಮುಖರ ಸಮಾವೇಶ ಹಾಗೂ ಬೂತ್ ಅಧ್ಯಕ್ಷರಿಗೆ ನಾಮಫಲಕ ವಿತರಣಾ ಕಾರ್ಯಕ್ರಮವು ಕೊಣಾಜೆ ಸಪ್ತಸ್ವರ ಕಲಾತಂಡದ ಸರಸ್ವತಿ ಕಲಾ ವೇದಿಕೆಯಲ್ಲಿ ಬುಧವಾರ ನಡೆಯಿತು. ಈ ಸಂದರ್ಭ ಬಿಜೆಪಿ ಮಂಡಲ ಅಧ್ಯಕ್ಷ ಚಂದ್ರಹಾಸ್ ಪಂಡಿತ್ ಹೌಸ್, ದಿ. ಮೈಸೂರ್ ಇಲೆಕ್ಟ್ರಿಕಲ್ ಇಂಡಸ್ಟ್ರಿಯಲ್ ಲಿಮಿಟೆಡಿನ ಅಧ್ಯಕ್ಷ ಸಂತೋಷ್ ಕುಮಾರ್ ರೈ ಬೋಳಿಯಾರ್, ಬಿಜೆಪಿ ಮುಖಂಡರುಗಳಾದ ಈಶ್ವರ್ ಕಟೀಲ್, ಕಸ್ತೂರಿ ಪಂಜ , ತಾ.ಪಂ ಮಾಜಿ ಸದಸ್ಯ ರವಿಶಂಕರ್ ಸೋಮೇಶ್ವರ, ಗುತ್ತಿಗೆದಾರ ನವೀನ್ ಶೆಟ್ಟಿ ಕುರ್ನಾಡು ಉಪಸ್ಥಿತರಿದ್ದರು.

Read More

UN network ಉಳ್ಳಾಲ : ಕಾರಿನ ನಂಬರ್ ಪ್ಲೇಟ್ ನಲ್ಲಿ ಅಂಟಿಸಿರುವ ಸ್ಟಿಕ್ಕರ್ ಕಂಡು ಸಂಚಾರಿ ಠಾಣೆ ಪೊಲೀಸ್ ಸಿಬ್ಬಂದಿ ವಾಹನವನ್ನು ತಡೆದು ನಿಲ್ಲಿಸಿದ ಘಟನೆ ತೊಕ್ಕೊಟ್ಟು  ಬಳಿ ನಡೆದಿದ್ದು, ನಂಬರ್ ಪ್ಲೇಟಿನಲ್ಲಿ  ‘ ಟೀಂ ಪರಶುರಾಮ ಹಾಗೂ ಧರ್ಮೋ ರಕ್ಷತಿ ರಕ್ಷಿತಾ: ಅನ್ನುವ ಸ್ಟಿಕ್ಕರ್ ಹಾಗೂ ಗಾಜಿನಲ್ಲಿ ಅಳವಡಿಸಿದ ಓಂಸಾಯಿ ಮತ್ತು ಸ್ವಾಮಿ ಕೊರಗಜ್ಜ ಸ್ಟಿಕ್ಕರ್ ಇರುವುದನ್ನು ತೆಗೆಯಲು ಒತ್ತಾಯಿಸಿದ್ದಾರೆ ಎಂದು ಆರೋಪಿಸಿ ಎಎಸ್ಐ ವಿರುದ್ಧ ಹಿಂದೂ ಸಂಘಟನೆ ಕಾರ್ಯಕರ್ತರು ಹಾಗೂ ಬಿಜೆಪಿ ಮಂಗಳೂರು ಮಂಡಲ ಅಧ್ಯಕ್ಷರು ಆಕ್ರೋಶ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ತೊಕ್ಕೊಟ್ಟು ಫ್ಲೈಓವರ್ ಕೆಳಗಡೆ ಕೆಲಕಾಲ ಗೊಂದಲದ ವಾತಾವರಣ  ಇಂದು ನಿರ್ಮಾಣವಾಯಿತು. ಬಬೀಶ್ ಪೂಜಾರಿ ಎಂಬವರು ಮಾರುತಿ ಕಾರಿನಲ್ಲಿ ತೊಕ್ಕೊಟ್ಟು ಫ್ಲೈಓವರ್ ಕೆಳಗಿನಿಂದ ಹೋಗುತ್ತಿದ್ದ ಸಂದರ್ಭ ತೊಕ್ಕೊಟ್ಟಿನಲ್ಲಿ ಫ್ಲೈ ಓವರ್ ಕೆಳಗಡೆ ಕರ್ತವ್ಯದಲ್ಲಿದ್ದ ನಾಗುರಿ ಸಂಚಾರಿ ಠಾಣಾ ಎಎಸ್ಸೈ ಆಲ್ಬರ್ಟ್ ಲಸ್ರಾದೊ ಅವರು ಪರಿಶೀಲನೆಗಾಗಿ ನಿಲ್ಲಿಸಿದ್ದಾರೆ. ದಾಖಲೆಗಳನ್ನು ಪರಿಶೀಲಿಸಿ ನಂತರ ಕಾರಿನ ನಂಬರ್‌ ಪ್ಲೇಟಿನಲ್ಲಿ ಸ್ಟಿಕ್ಕರ್‌ ಅಂಟಿಸಿರುವುದು ಕಾನೂನು…

Read More

UN networks ಕೊಣಾಜೆ: ಕೇಂದ್ರ ಸರಕಾರ ಜಾರಿಗೆ ತಂದಿರುವ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಸೋಮವಾರ ಮಂಗಳೂರು ವಿಶ್ವವಿದ್ಯಾನಿಲಯದ ಮಂಗಳಾ ಸಭಾಂಗಣದಲ್ಲಿ  ನಡೆದ ಕಾರ್ಯಕ್ರಮದಲ್ಲಿ ಉನ್ನತ ಶಿಕ್ಷಣ, ಕೌಶಾಲಾಭಿವೃದ್ಧಿ , ಐಟಿ ಹಾಗೂ ಬಿಟಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಡಾ| ಸಿ.ಎನ್. ಅಶ್ವತ್ಥನಾರಾಯಣ ಆವರು ಉದ್ಘಾಟನೆ ನಡೆಸುತ್ತಿದ್ದಂತೆ ಕ್ಯಾಂಪಸ್ ಪ್ರಂಟ್ ಆಫ್ ಇಂಡಿಯಾದ ಕಾರ್ಯಕರ್ತರು ನೂತನ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ವಿರೋಧಿಸಿ ಮಂಗಳ ಸಭಾಂಗಣದ ಎದುರು ಪ್ರತಿಭಟನೆ ನಡೆಸಿದ್ದು, ಪೆÇಲೀಸರು ಪ್ರತಿಭಟನಾಕಾರರನ್ನು ವಶಕ್ಕೆ ಪಡೆದುಕೊಂಡರು.    ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಉದ್ಘಾಟನಾ ಕಾರ್ಯಕ್ರಮಕ್ಕೆ ತಡೆಯೊಡ್ಡುವ ವಿಚಾರದಲ್ಲಿ ಮೊದಲೇ ಪೆÇಲೀಸರಿಗೆ ಮಾಹಿತಿ ಇದ್ದರಿಂದ ಮಂಗಳೂರು ವಿಶ್ವವಿದ್ಯಾನಿಲಯ ಕ್ಯಾಂಪಸ್‍ಗೆ ತೆರಳುವ ಎಲ್ಲಾ ದಾರಿಗಳಲ್ಲಿ ನಾಕಾಬಂ„ಯನ್ನು ಹಾಕಲಾಗಿತ್ತು. ಆದರೆ ಒಳದಾರಿಗಳ ಮೂಲಕ ನಡೆದುಕೊಂಡು ಬಂದ  ಸಿಎಪ್‍ಐ ಕಾರ್ಯಕರ್ತರು ಸಚಿವರ ಕಾರ್ಯಕ್ರಮ ನಡೆಯುವ ಮಂಗಳಾ ಸಭಾಂಗಣದ ಹೊರಗೆ ಇರುವ ಮುಖ್ಯ ರಸ್ತೆ ಬಳಿ ಸುಮಾರು 40ಕ್ಕೂ ಹೆಚ್ಚು ಕಾರ್ಯಕರ್ತರು ಪ್ರತಿಭಟನೆ ನಡೆಸಲು ಆರಂಬಿಸಿದರು. ಪೆÇಲೀಸರು…

Read More

ಉಳ್ಳಾಲ: ತೋಟಕ್ಕೆ ಬಂದ ಕೋಣದ ಕತ್ತು ಕೊಯ್ದು ಹತ್ಯೆ ನಡೆಸಿರುವ ಘಟನೆ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಕೊಲ್ಯ ಬಳಿಯ ಬಲ್ಯ ಎಂಬಲ್ಲಿ ಇಂದು ಸಂಜೆ ನಡೆದಿದೆ. ವಿಚಾರ ಬೆಳಕಿಗೆ ಬರುತ್ತಿದ್ದಂತೆ ಹಿಂದೂ ಸಂಘಟನೆ ಕಾರ್ಯಕರ್ತರು ಜಮಾಯಿಸಿ ತೋಟದ ಮಾಲೀಕನೇ ಕೋಣವನ್ನು ಬೇರೆಯವರ ಮೂಲಕ ಹತ್ಯೆ ನಡೆಸಿರುವುದಾಗಿ ಆರೋಪಿಸಿದ್ದಾರೆ.ಬಲ್ಯ ಎಂಬಲ್ಲಿರುವ ಜಯರಾಮ ಶೆಟ್ಟಿ ಎಂಬವರ ತೋಟದ ಬಳಿ ಕೃತ್ಯ ನಡೆದಿದೆ. ಕೋಣದ ಕುತ್ತಿಗೆಯನ್ನು ಹರಿತವಾದ ಆಯುಧದಿಂದ ಕಡಿದ ಸ್ಥಿತಿಯಲ್ಲಿದ್ದು, ರಕ್ತಸ್ರಾವ ಆಗಿ ಕೋಣ ಸತ್ತು ಬಿದ್ದಿದೆ. ಈ ಬಗ್ಗೆ ಸ್ಥಳೀಯರು ಗಮನಿಸಿ ಹಿಂದೂ ಸಂಘಟನೆ ಕಾರ್ಯಕರ್ತರಿಗೆ ಮಾಹಿತಿ ನೀಡಿದ್ದಾರೆ. ಸ್ಥಳೀಯರು ಸ್ಥಳಕ್ಕೆ ಬಂದಾಗ ಕೃತ್ಯ ನಡೆದ ಸ್ಥಳದ ಬಳಿ ಆಕ್ಸೆಸ್ ಸ್ಕೂಟರ್ ಪತ್ತೆಯಾಗಿದೆ. ಕೃತ್ಯ ನಡೆಸಿ ಆರೋಪಿಗಳು ಸ್ಕೂಟರನ್ನು ಬಿಟ್ಟು ಪರಾರಿಯಾಗಿದ್ದಾರೆ. ಅಲ್ಲದೆ ತೋಟಕ್ಕೆ ನುಗ್ಗುತ್ತಿದ್ದ ಕೋಣವನ್ನು ಜಯರಾಮ ಶೆಟ್ಟಿ ಎಂಬವರು ಬೇರೆಯವರ ಮುಖೇನ ಹತ್ಯೆ ನಡೆಸಿದ್ದಾರೆ ಎಂದು ಹಿಂದೂ ಸಂಘಟನೆಯ ಅರ್ಜುನ್ ಮಾಡೂರು ಉಳ್ಳಾಲ ಠಾಣಾಧಿಕಾರಿ ಸಂದೀಪ್ ಎಸ್. ಅವರಲ್ಲಿ…

Read More

ಉಳ್ಳಾಲ: ಮೀನುಗಾರಿಕಾ ದೋಣಿಯಿಂದ ಎಸೆಯಲ್ಪಟ್ಟ ಮೀನುಗಾರನನ್ನು ಐವರ ತಂಡ ರಕ್ಷಿಸಿರುವ ಘಟನೆ ಉಳ್ಳಾಲ ಅಳಿವೆಬಾಗಿಲು ಸಮೀಪ ಇಂದು ನಡೆದಿದೆ.ಬೆಂಗ್ರೆ ನಿವಾಸಿ ನವಾಝ್‌ (೩೫) ರಕ್ಷಣೆಗೊಳಗಾದವರು. ಓಷಿಯನ್‌ ಬ್ರೀಝ್‌ ದೋಣಿಯಲ್ಲಿದ್ದ ಉಳಿಯ ನಿವಾಸಿ ಪ್ರೇಮ್‌ ಪ್ರಕಾಶ್‌ ಡಿಸೋಜ, ಅನಿಲ್‌ ಮೊಂತೇರೊ, ಸೂರ್ಯ ಪ್ರಕಾಶ್‌ ಡಿಸೋಜ ಹಾಗೂ ಬೆಂಗ್ರೆ ನಿವಾಸಿ ರಿತೇಶ್‌ ಮತ್ತು ಅಜಿತ್‌ ಎಂಬವರು ರಕ್ಷಿಸಿದವರಾಗಿದ್ದಾರೆ. ಘಟನೆ ವಿವರ: ಆ.೨೭ ರಂದು ಬೆಳಿಗ್ಗೆ ನಾಡದೋಣಿ ಮೀನುಗಾರಿಕೆಯವರು ಸಮುದ್ರದಲ್ಲಿ ಬಲೆ ಹಾಕಿ ವಾಪಸ್ಸಾಗಿದ್ದರು. ಏಡಿ ಸಿಗುವ ಸಮಯವಾಗಿದ್ದರಿಂದಾಗಿ ಬಲೆ ಹಾಕಲಾಗಿತ್ತು. ಇಂದು ಬೆಳಿಗ್ಗೆ ಬಹುತೇಕ ದೋಣಿಯವರು ಹಾಕಿರುವ ಬಲೆಯನ್ನು ತೆಗೆಯಲು ಸಮುದ್ರಕ್ಕೆ ತೆರಳಿದ್ದರು. ಆದರೆ ಭಾರೀ ಗಾಳಿ ಬೀಸುತ್ತಿದ್ದ ಹಿನ್ನೆಲೆಯಲ್ಲಿ ಹಲವು ದೋಣಿಗಳು ತೆರಳದೇ ಉಳಿದಿತ್ತು. ಆದರೆ ಹೋದಂತಹ ದೋಣಿಯೊಂದು ಬಲೆ ತೆಗೆದು ವಾಪಸ್ಸಾಗುವಾಗ ಅಳಿವೆಬಾಗಿಲು ಸಮೀಪ ಕಲ್ಲುಗಳ ಮಧ್ಯೆಯಿಂದ ಒಳಬರುವ ಸಂದರ್ಭ ಭಾರೀ ಗಾಳಿಯೊಂದು ಅಪ್ಪಳಿಸಿದಾಗ ಮೀನುಗಾರಿಕಾ ದೋಣಿಯಲ್ಲಿದ್ದ ನವಾಝ್‌ ಎಂಬವರು ಸಮುದ್ರಕ್ಕೆ ಬಿದ್ದಿದ್ದಾರೆ. ಆದರೆ ಅಲೆಗಳ ಅಪ್ಪಳಿಸುವಿಕೆಗೆ ದೋಣಿ ನಿಲ್ಲಿಸಲಾಗದೆ ಮೀನುಗಾರರು…

Read More

UN networks ಉಳ್ಳಾಲ: ಮಂಗಳೂರು ನಗರ ಪೊಲೀಸ್ ಅಧಿಕಾರಿಗಳಿಂದ ‘ತುರ್ತು ಸ್ಪಂದನ ಬೆಂಬಲ ವ್ಯವಸ್ಥೆ’ (ಇಆರ್‌ಎಸ್‌ಎಸ್)ನ 112 ಸಹಾಯವಾಣಿ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಇಂದು ದಿನವಿಡೀ ಆಯೋಜಿಸಲಾಗಿರುವ ‘ಮಹಿಳಾ ಸುರಕ್ಷತೆಗಾಗಿ ಒಂದು ದಿನ’ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಒಂದು ಗಂಟೆಯೊಳಗೆ ಡಿಸಿಪಿ ಹರಿರಾಂ ಶಂಕರ್ ನೇತೃತ್ವದ ತಂಡ ಉಳ್ಳಾಲ ಠಾಣಾ ವ್ಯಾಪ್ತಿಯ ಉಳಿಯ ಹಿರಿಯ ನಾಗರಿಕರೋರ್ವರ ಕರೆಗೆ 12 ನಿಮಿಷಗಳಲ್ಲಿ ತಲುಪಿ, ಸ್ಪಂಧಿಸಿ ಸಮಸ್ಯೆ ಬಗೆಹರಿಸಿದ್ದಾರೆ. ಭಾರತೀಯ ಸೇನೆಯ ನಿವೃತ್ತ ಸೈನಿಕರು ಹಿರಿಯರಾಗಿರುವ ಉಳ್ಳಾಲ ಉಳಿಯ ನಿವಾಸಿ ಶೇಸಪ್ಪ ಎಂಬವರು ಇಆರ್ ಎಸ್ಎಸ್ ನ 112 ಸಹಾಯವಾಣಿಗೆ ಕರೆ ಮಾಡಿ ಸ್ಥಳೀಯರಿಂದ ತೊಂದರೆಯುಂಟಾಗುತ್ತಿರುವ ಕುರಿತು ದೂರು ನೀಡಿದ್ದರು. ಇದಕ್ಕೆ ತಕ್ಷಣ ಸ್ಪಂಧಿಸಿ ಡಿಸಿಪಿ ಹರಿರಾಂ ಶಂಕರ್ ನೇತೃತ್ವದಲ್ಲಿ ಉಳ್ಳಾಲ ಪೊಲೀಸ್ ಠಾಣೆಯ ಹೊಯ್ಸಳ ದಳದ ವಾಹನ ಉಳಿಯ ಪ್ರದೇಶಕ್ಕೆ ತೆರಳಿದೆ. ಅಲ್ಲಿ ದೂರುದಾರರ ಮಾಹಿತಿ ಪಡೆದು, ತೊಂದರೆಯುಂಟು ಮಾಡುತ್ತಿರುವವರ ಕುರಿತು ವಿಚಾರಣೆ ನಡೆಸಿ ಅವರಿಗೆ ಎಚ್ಚರಿಕೆ ನೀಡಿ, ಸಮಸ್ಯೆಯನ್ನು ಬಗೆಹರಿಸಲಾಗಿದೆ.…

Read More

UN networks ಉಳ್ಳಾಲ: ಡಬ್ಬದಲ್ಲಿ ಹಣವನ್ನು ಕೂಡಿಟ್ಟು , ಸಮಾಜಕ್ಕೆ ಸೌಹಾರ್ದದ ಸಂದೇಶ ಹಾಗೂ ಸಾಯುವ ಮುನ್ನ ಅನಿಸಿದ್ದನ್ನು ಸಾಧಿಸು ಅನ್ನುವ ಉದ್ದೇಶವನ್ನು ಮುಂದಿಟ್ಟು ಕೇರಳದ ಹವ್ಯಾಸಿ ಬೈಕ್‌ ರೈಡರ್‌ಗಳ ಒಂಭತ್ತು ಮಂದಿಯ ತಂಡ ಕಲ್ಲಿಕೋಟೆಯಿಂದ – ನೇಪಾಳ ಪ್ರವಾಸವನ್ನು ಆರಂಭಿಸಿದೆ. ಆ.೨೭ ರಂದು ಪ್ರವಾಸವನ್ನು ಆರಂಭಿಸಿದ ತಂಡ ಇಂದು ದೇರಳಕಟ್ಟೆಯನ್ನು ತಲುಪಿದೆ. ಅಲ್ಲಿಂದ ಐದು ಬೈಕುಗಳಲ್ಲಿ ಪ್ರವಾಸ ಮುಂದುವರಿಸಿದ ತಂಡ ಇಂದು ಗೋಕರ್ಣ ತಲುಪಿ ಅಲ್ಲೇ ಉಳಿಯಲಿದೆ. ಕೋಝಿಕ್ಕೋಡ್‌, ಮಲಪ್ಪುರಂ, ತಿರುವನಂತಪುರಂ ನಿವಾಸಿಗಳಾದ ಸಂಶುದ್ದೀನ್‌, ಬಾಷಿತ್‌, ಪ್ರಷೀಬ್‌, ಸಾಹಿರ್‌ ಬಾಬು, ಮುನವ್ವಿರ್‌, ಶಫೀಖ್‌, ಸುಹೈಬ್‌ ಅಖ್ತರ್‌, ಜ್ಯಾಕ್ಸನ್‌ ಥಾಮಸ್‌ , ಫೈಝಲ್‌ ದೇರಳಕಟ್ಟೆ ಎಂಬವರ ತಂಡ ಪ್ರಯಾಣ ಆರಂಭಿಸಿದೆ.ಕಾಲೇಜು ಜೀವನದಲ್ಲಿ ಇತರರು ಬೈಕಿನಲ್ಲಿ ಪ್ರಯಾಣಿಸುವುದನ್ನು ಕಂಡು ಪ್ರೇರಣೆಗೊಂಡು ತಾವು ಕೂಡಾ ಬೈಕ್‌ ಮೂಲಕ ದೇಶ ಸುತ್ತಬೇಕೆಂಬ ಕನಸನ್ನು ಸಾಕಾರಗೊಳಿಸಲು ಪ್ರಯಾಣ ಆರಂಭಿಸಿದ್ದಾರೆ. ಕೋವಿಡ್‌ ನಿರ್ಭಂಧನೆಗಳು ಇರುವುದರಿಂದ ೭೩ ಗಂಟೆಗಳ ಆರ್‌ ಟಿಪಿಸಿಆರ್‌ ವರದಿ ಹಾಗೂ ಎರಡು ವ್ಯಾಕ್ಸಿನ್‌ ಪಡೆದುಕೊಂಡೇ ಯುವಕರ…

Read More