Author: UllalaVani

Kannada News From Coastal Karnataka

ಉಳ್ಳಾಲ: ಉಳ್ಳಾಲ ನಗರಸಭೆ ವ್ಯಾಪ್ತಿಯ ರಿಕ್ಷಾ ಚಾಲಕರ ಮನವಿಗೆ ಸ್ಪಂಧಿಸಿರುವ ಶಾಸಕರು ಉಳ್ಳಾಲ ಸಮುದಾಯ ಆರೋಗ್ಯ ಕೇಂದ್ರದ ಸಹಕಾರದೊಂದಿಗೆ 300 ಕ್ಕೂ ಅಧಿಕ ರಿಕ್ಷಾ ಚಾಲಕರುಗಳಿಗೆ ಉಚಿತ ವ್ಯಾಕ್ಸಿನ್ ಒದಗಿಸಿಕೊಟ್ಟಿದ್ದಾರೆ ಎಂದು ಉಳ್ಳಾಲ ನಗರಸಭೆ ಉಪಾಧ್ಯಕ್ಷ ಅಯೂಬ್ ಮಂಚಿಲ ಹೇಳಿದರು.ಅವರು ತೊಕ್ಕೊಟ್ಟು ಸಮೀಪದ ಕಲ್ಲಾಪು ಖಾಸಗಿ ಸಭಾಂಗಣದಲ್ಲಿ ಉಳ್ಳಾಲ ನಗರಸಭೆ ವ್ಯಾಪ್ತಿಯ ರಿಕ್ಷಾ ಚಾಲಕರಿಗೆ ಹಮ್ಮಿಕೊಂಡ ಉಚಿತ ವ್ಯಾಕ್ಸಿನ್ ನೀಡುವ ಶಿಬಿರದಲ್ಲಿ ಭಾಗವಹಿಸಿ ಮಾತನಾಡಿದರು.ಉಳ್ಳಾಲ ನಗರಸಭೆ ಅಧ್ಯಕ್ಷೆ ಚಿತ್ರಾ ಚಂದ್ರಕಾಂತ್ ಮಾತನಾಡಿ, ಸಂಧಿಗ್ಧ ಸ್ಥಿತಿಯಲ್ಲಿ ರಿಕ್ಷಾ ಚಾಲಕರು ಹಣ ಕೊಟ್ಟು ವ್ಯಾಕ್ಸಿನ್ ಪಡೆಯಲು ಅಸಾಧ್ಯ. ಅವರ ಕಷ್ಟಕ್ಕೆ ಶಾಸಕರು ಸ್ಪಂಧಿನೆ ಕೃತಜ್ಞಕಾಪೂರ್ವ ಎಂದರು.ಈ ವೇಳೆ ಉಳ್ಳಾಲ ನಗರಸಭೆ ಅಧ್ಯಕ್ಷೆ ಚಿತ್ರಾ ಚಂದ್ರಕಾಂತ್, ಉಳ್ಳಾಲ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ವಿದ್ಯಾಸಾಗರ್, ಉಳ್ಳಾಲ ನಗರಸಭೆ ಸದಸ್ಯರಾದ ಜಬ್ಬಾರ್, ರವಿಚಂದ್ರ ಗಟ್ಟಿ, ಅಝೀಝ್, ವೀಣಾ ಡಿಸೋಜ, ಭಾರತಿ, ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷರುಗಳಾದ ಮುಸ್ತಾಫ ಅಬ್ದುಲ್ಲಾ, ಉಸ್ಮಾನ್ ಕಲ್ಲಾಪು, ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಮಹಿಳಾ…

Read More

ಉಳ್ಳಾಲ: ದೇಶದ ಸೈನಿಕರು, ಪಾರ್ಲಿಮೆಂಟ್ ವ್ಯವಸ್ಥೆ, ವಿಜ್ಞಾನಿಗಳ ಮೇಲೆ ನಂಬಿಕೆಯಿಲ್ಲದ ಕಾಂಗ್ರೆಸ್ ಪಕ್ಷದಿಂದ ಜನತೆ ಯಾವುದನ್ನೂ ನಿರೀಕ್ಷಿಸುವುದಿಲ್ಲ, ಸದೃಢವಾಗಿ ನಿಶ್ಚಿತ ಧಿಕ್ಕಿನೆಡೆಗೆ ಕೊಂಡೊಯ್ಯುತ್ತಿರುವ ಬಿಜೆಪಿ ಸರಕಾರದ ಮೇಲೆ ಅಪಾರ ನಂಬಿಕೆ ಉಳಿದಿದದೆ. ಅದಕ್ಕಾಗಿ ಕಾರ್ಯಕರ್ತರು ಸಮಾಜದ ನಿರೀಕ್ಷೆಗೆ , ಪರೀಕ್ಷೆಗೆ ಸರಿಯಾಗಿ ಉತ್ತರದ ಉತ್ತರದಾಯಿತ್ವದ ಸ್ಥಾನದಲ್ಲಿ ನಿಲ್ಲಬೇಕು ವಿಧಾನಪರಿಷತ್ ಸದಸ್ಯ ಪ್ರತಾಪ ಸಿಂಹ ನಾಯಕ್ ಅಭಿಪ್ರಾಯಪಟ್ಟರು.ಅವರು ತೊಕ್ಕೊಟ್ಟು ಕಾಪಿಕಾಡಿನ ಗಟ್ಟಿ ಸಮಾಜ ಭವನದಲ್ಲಿ ಸೋಮವಾರ ಆಯೋಜಿಸಲಾದ ಬಿಜೆಪಿ ಮಂಗಳೂರು ಮಂಡಲ ವಿಶೇಷ ಕಾರ್ಯಕಾರಿಣಿ ಸಮಿತಿ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.ವ್ಯಕ್ತಿಪೂಜೆಗೆ ಸೀಮಿತಗೊಂಡ ಪಕ್ಷವಲ್ಲ, ಘೋಷಣೆಗಳು ಬಲಯುತವಾಗಿರಬೇಕು, ಭಾವಯುತವಾಗಿರಬೇಕು ಇದರಿಂದ ದೇಶ ಶಕ್ತಿಯುತವಾಗಿ ಬೆಳಗಲು ಸಾಧ್ಯ. ಸ್ವತಂತ್ರ ಭಾರತದ ಇತಿಹಾಸದಲ್ಲಿ ಪ್ರಥಮ ಬಾರಿಗೆ ಎರಡು ಅವಧಿಗಳ ಕಾಲ, ಕಾಂಗ್ರೆಸ್ಸೇತರ ಸರಕಾರ ರಾಷ್ಟ್ರವನ್ನು ಆಳುತ್ತಿದೆ. ಕರ್ನಾಟಕದಲ್ಲಿಯೂ ಉತ್ತಮ ಆಡಳಿತವನ್ನು ನೀಡಿದೆ. ಆದರೆ ಕಾಂಗ್ರೆಸ್ಸಿನ ಸುಳ್ಳು ಅಪಪ್ರಚಾರಗಳಿಂದ ಗೊಂದಲಗಳಾಗುತ್ತಿವೆ.ಕಾರ್ಯಕರ್ತರಲ್ಲಿಯೂ ಹೇಳಿಕೆಗಳು, ಬೆಳವಣಿಗೆಗಳು, ಗೊಂದಲಗಳು ಮನಸ್ಸಿನಲ್ಲಿ ಮೂಡಿದರೆ , ಉದ್ದೇಶದ ಪುನರುಚ್ಛಾರ ಮಾಡಬೇಕಿದೆ. ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದರೆ ಅಪಾಯಕಾರಿ,…

Read More

ಉಳ್ಳಾಲ : ತೊಕ್ಕೊಟ್ಟು ಕಾಪಿಕಾಡು ಬಳಿ ಮುಸ್ಲಿಂ ಮನೆಗೆ ಹಿಂದೂ ಯುವತಿಯನ್ನು ಯುವಕನೋರ್ವ ಕರೆ ತಂದಿರುವ ಕುರಿತು ಮಾಹಿತಿ ಪಡೆದ ಉಳ್ಳಾಲ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದುಕೊಂಡಿರುವ ಘಟನೆ ನಿನ್ನೆ ತಡರಾತ್ರಿ ವೇಳೆ ನಡೆದಿದೆ. ಗುಲ್ಬರ್ಗಾ ಮೂಲದ 30 ರ ಹರೆಯದ ಮಹಿಳೆಯನ್ನು ಮುಸ್ಲಿಂ ಯುವಕನೋರ್ವ ಮಂಗಳೂರು ರೈಲ್ವೇ ನಿಲ್ದಾಣದಿಂದ ಕರೆತಂದಿದ್ದ. ಈ ಬಗ್ಗೆ ಸ್ಥಳೀಯರು ಗಮನಿಸಿ, ಹಿಂದೂ ಯುವತಿ ಇರುವುದನ್ನು ಖಚಿತಪಡಿಸಿ ಉಳ್ಳಾಲದ ಪೊಲೀಸರಿಗೆ ಮಾಹಿತಿ ನೀಡಿದ್ದರು. ಪೊಲೀಸರು ರಾತ್ರೋರಾತ್ರಿ ಇಬ್ಬರನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಮಹಿಳೆ ಪತಿ ತೀರಿಕೊಂಡಿದ್ದು, ಗುಲ್ಬರ್ಗಾ ಮೂಲದವಳಾಗಿದ್ದು, ಕೇರಳದ ಮನೆಯಲ್ಲಿ ಕೆಲಸಕ್ಕಿರುವುದಾಗಿ ತಿಳಿಸಿದ್ದಳು. ಕೇರಳ ನಿವಾಸಿ ಆಗಿರುವ ಯುವಕನ ಮನೆಯಲ್ಲಿ ಮಹಿಳೆ ಕೆಲಸಕ್ಕಿದ್ದರು. ಯುವಕ ಬೆಂಗಳೂರಿಗೆ ಹೋಗುವವನಾಗಿದ್ದು, ಕಾಪಿಕಾಡಿನ ಸಂಬಂಧಿಕರ ಮನೆಯಲ್ಲಿ ಬಂದು ಮೊದಲೇ ನಿಂತಿದ್ದನು. ಕೇರಳದಿಂದ ಗುಲ್ಬರ್ಗಾಕ್ಕೆ ಹೋಗುವ ಮಹಿಳೆ ಶನಿವಾರ ಸಂಜೆ ಮಂಗಳೂರು ರೈಲ್ವೇ ನಿಲ್ದಾಣದಲ್ಲಿ ಬಂದಿಳಿದು, ಇಂದು ಯುವಕನ ಜೊತೆಗೆ ಬೆಂಗಳೂರಿಗೆ ತೆರಳಿ ಅಲ್ಲಿಂದ ಗುಲ್ಬರ್ಗಾ…

Read More

ಉಳ್ಳಾಲ : ಯುವತಿಯೋರ್ವಳು ಸ್ನಾನ ಮಾಡುವಾಗ ಮೊಬೈಲಿನಲ್ಲಿ ಕದ್ದು ಚಿತ್ರೀಕರಿಸುತ್ತಿದ್ದ ಯುವಕನ ಕೃತ್ಯ ಬೆಳಕಿಗೆ ಬರುತ್ತಿದ್ದಂತೆ, ಯುವಕ ಸ್ಥಳದಿಂದ ಕಾಲ್ಕಿತ್ತಿರುವ ಘಟನೆ ಕೋಟೆಕಾರು ಸಮೀಪದ ಮಾಡೂರು ಎಂಬಲ್ಲಿ ನಿನ್ನೆ ತಡರಾತ್ರಿ ವೇಳೆ ನಡೆದಿದೆ. ಕೆಲಸ ಮುಗಿಸಿ ಮನೆಗೆ ವಾಪಸ್ಸಾದ ಯುವತಿ ಮನೆ ಅಂಗಳದಲ್ಲಿರುವ ಬಾತ್ ರೂಮಿನಲ್ಲಿ ಸ್ನಾನಕ್ಕೆ ಇಳಿದಿದ್ದರು. ಇದೇ ಸಂದರ್ಭವನ್ನು ಉಪಯೋಗಿಸಿದ ಯುವಕ ಮನೆಯಂಗಳದಲ್ಲಿ ಇರಿಸಲಾಗಿದ್ದ ಮರದ ಸ್ಟೂಲನ್ನು ತೆಗೆದು ಬಾತ್ ರೂಮಿನ ಕಿಟಕಿ ಬಳಿ ಇರಿಸಿ ಮೇಲಕ್ಕೆ ಹತ್ತಿ ಮೊಬೈಲ್ ಮೂಳ ವೀಡಿಯೋ ತೆಗೆದಿದ್ದಾನೆ. ಸ್ನಾನದ ಬಳಿಕ ಟವಲನ್ನು ತೆಗೆಯಲು ಯುವತಿ ಮುಂದಾಗುತ್ತಿದ್ದಂತೆ ಮೊಬೈಲಿನ ಬೆಳಕು ಕಾಣಿಸಿಕೊಂಡಿದ್ದು, ಯುವತಿ ಬೊಬ್ಬಿಟ್ಟಿದ್ದಾರೆ. ಆದರೆ ಅಷ್ಟರಲ್ಲಾಗಲೇ ಕಿರಾತಕ ಯುವಕ ಪರಾರಿಯಾಗಿದ್ದಾನೆ. ಈ ಕುರಿತ ನೊಂದ ಯುವತಿ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ.

Read More

ಉಳ್ಳಾಲ: ಎಸ್‍ಎಸ್‍ಎಲ್‍ಸಿ ಪರೀಕ್ಷೆ ಬರೆಯಲು ಬಸ್ಸಿನಲ್ಲಿ ಸಂಚರಿಸುವ ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತ ಬಸ್ಸು ಪ್ರಯಾಣಕ್ಕೆ ಪೂರ್ವ ವಲಯ ಬಸ್ಸು ಮಾಲಕರ ಒಕ್ಕೂಟ ಮತ್ತು ಕರಾವಳಿ ವಲಯ ಬಸ್ಸು ಮಾಲಕರ ಒಕ್ಕೂಟ ವ್ಯವಸ್ಥೆ ಮಾಡಿದ್ದು, ವಿದ್ಯಾರ್ತಿಗಳು ಪ್ರವೇಶಪತ್ರ ತೋರಿಸಿ ಈ ವ್ಯಾಪ್ತಿಯ ಬಸ್ಸುಗಳಲ್ಲಿ ಟಿಕೆಟ್ ರಹಿತವಾಗಿ ಪ್ರಯಾಣಿಸಬಹುದು ಎಂದು ಪೂರ್ವ ವಲಯ ಬಸ್ಸು ಮಾಲಕರ ಒಕ್ಕೂಟದ ಅಧ್ಯಕ್ಷ ಶೇಷಪ್ಪ ಶೆಟ್ಟಿ ತಿಳಿಸಿದರು.ದೇರಳಕಟ್ಟೆಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಜು. 19 ಮತ್ತು ಜು. 22ರಂದು ನಡೆಯುವ ಎಸ್‍ಎಸ್‍ಎಲ್‍ಸಿ ಪರೀಕ್ಷಗೆ ವಿಟ್ಲ, ಕನ್ಯಾನ, ಮಂಜನಾಡಿ ಮುಡಿಪು, ಹರೇಕಳ. ಪಾವೂರು ಕೊಣಾಜೆ ವ್ಯಾಪ್ತಿಯಿಂದ ಮಂಗಳೂರು ವಿಶ್ವವಿದ್ಯಾನಿಲಯ ರಸ್ತೆಯಾಗಿ ತೊಕ್ಕೊಟ್ಟುವಿಂದ ಮಂಗಳೂರಿಗೆ ಸಂಚರಿಸುವ ಪೂರ್ವ ವಲಯ ಮತ್ತು ಸ್ಟೇಟ್‍ಬ್ಯಾಂಕ್ ಮತ್ತು ಮಂಗಳಾದೇವಿಯಿಂದ ಹೊರಟು ಲಾಭಾಗ್, ಕೂಳೂರು, ಬೈಕಂಪಾಡಿ, ಸುರತ್ಕಲ್, ಕಾಟಿಪಳ್ಳ ಕಡೆಗೆ ಸಂಚರಿಸುವ ಕರಾವಳಿ ವಲಯದ ಬಸ್ಸುಗಳಲ್ಲಿ ಈ ಆವಕಾಶ ಕಲ್ಪಿಸಲಾಗಿದೆ. ಕೋವಿಡ್ -19ರ ಸಾಂಕ್ರಾಮಿಕ ರೋಗದ ಹಾವಳಿಯಿಂದ ತತ್ತರಿಸುತ್ತಿರುವ ಈ ಸಂದರ್ಭದಲ್ಲಿ ವಿದ್ಯಾರ್ಥಿಗಳ ವಿದ್ಯಾರ್ಜನೆಗೆ ಪೆÇ್ರೀತ್ಸಾಹ ನೀಡುವ…

Read More

ಉಳ್ಳಾಲ: ಬಾಡಿಗೆ ಮನೆಯಲ್ಲಿ ವಾಸವಿದ್ದ ಮಹಿಳೆಯೊಬ್ಬರು ನಾಪತ್ತೆಯಾಗಿರುವ ಕುರಿತು ಉಳ್ಳಾಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.ಉಳ್ಳಾಲದ ಅಬ್ಬಕ್ಕ ವೃತ್ತ ಬಳಿಯಿರುವ ಪದ್ಮಶಾಲಿ ಕಂಪೌಂಡ್ ಎಂಬಲ್ಲಿನ ಬಾಡಿಗೆ ಮನೆಯಲ್ಲಿ ವಾಸವಿದ್ದ ನಾಗೇಂದ್ರ ಎಂಬವರ ಪತ್ನಿ ಪ್ರೇಮ(30) ನಾಪತ್ತೆಯಾದವರು. ಜು.10 ರಂದು ಮನೆಯಿಂದ ಹೊರಹೋದವರು ವಾಪಸ್ಸಾಗದೆ ನಾಪತ್ತೆಯಾಗಿದ್ದಾರೆ. ಇವರನ್ನು ಸ್ವಂತ ಊರು ದಾವಣಗೆರೆಯಲ್ಲಿ ಮತ್ತು ಸಂಬಂಧಿಕರ ಮನೆಗಳಲ್ಲಿ ಹುಡುಕಾಡಿದರೂ ಪತ್ತೆಯಾಗಿಲ್ಲ. ಎಲ್ಲಿಯಾದರೂ ಪತ್ತೆಯಾದಲ್ಲಿ ಉಳ್ಳಾಲ ಪೊಲೀಸರಿಗೆ ಮಾಹಿತಿ ನೀಡುವಂತೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ

Read More

ಪಾವೂರು: ಎಸ್‍ಡಿಪಿಐ ಪಾವೂರು ಗ್ರಾಮ ಸಮಿತಿಯಿಂದ ಪಾವೂರು ಪಂಚಾಯತ್ ಬಳಿ ಆರಂಭಿಸಲಾದ ಮಾಹಿತಿ ಮತ್ತು ಸೇವಾ ಕೇಂದ್ರವನ್ನು ಎಸ್‍ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಹನ್ನಾನ್ ಉದ್ಘಾಟಿಸಿದರು.ಎಸ್‍ಡಿಪಿಐ ಪಾವೂರು ಗ್ರಾಮಾಧ್ಯಕ್ಷ ಎಂ. ಕೆ.ಕಮರುದ್ದೀನ್ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಕಾರ್ಯದರ್ಶಿ ಅಶ್ರಫ್ ಮಾಚಾರ್, ಜಿಲ್ಲಾಧ್ಯಕ್ಷ ಅತ್ತಾವುಲ್ಲಾ ಜೋಕಟ್ಟೆ, ಉಪಾಧ್ಯಕ್ಷ ಇಕ್ಬಾಲ್, ಕ್ಷೇತ್ರಾಧ್ಯಕ್ಷ ಅಬ್ಬಾಸ್ ಕಿನ್ಯ, ಪ್ರಧಾನ ಕಾರ್ಯದರ್ಶಿ ಲತೀಫ್ ಕೋಡಿಜಾಲ್, ಎಸ್‍ಡಿಟಿಯು ಕ್ಷೇತ್ರಾಧ್ಯಕ್ಷ ಇರ್ಷಾದ್ ಅಬೂಬಕ್ಕರ್, ಪಾವೂರು ಗ್ರಾಮ ಪಂಚಾಯತ್‍ಅಧ್ಯಕ್ಷೆ ಖಮರುನ್ನಿಸಾ, ಉಪಾಧ್ಯಕ್ಷ ಮುಹಮ್ಮದ್ ಅನ್ಸಾ ರ್, ಸದಸ್ಯರಾದ ಇಕ್ಬಾಲ್ ಇನೋಳಿ, ರಿಝ್ವಾನ್ ಮಲಾರ್, ವಲೇರಿಯನ್ ಡಿಸೋಜ, ಖತೀಜಾ ಲತೀಫ್, ಮಾಜಿ ಸದಸ್ಯರಾದ ನಾಸೀರ್ ಮಲಾರ್, ಮಹಮ್ಮದ್ ಬದ್ರಿಯಾ ನಗರ, ಬದ್ರಿಯಾ ಜುಮಾ ಮಸೀದಿಯ ಉಪಾಧ್ಯಕ್ಷ ಶರೀಫ್, ಮೆಹರುನ್ನಿಸಾ ಬಶೀರ್, ಅಕ್ರಂ ಹಸನ್, ಸಿರಾಜುದ್ದೀನ್ ಅರ್ಖಾನ, ಹೈದರ್ ಅಡ್ಕರೆಪಡ್ಪು ಮೊದಲಾದವರು ಉಪಸ್ಥಿತರಿದ್ದರು. ಸಮೀರ್ ಟಿಪ್ಪುನಗರ ಕಾರ್ಯಕ್ರಮ ನಿರೂಪಿಸಿದರು.

Read More

ಉಳ್ಳಾಲ: ಕರ್ನಾಟಕದಲ್ಲಿ ಜು. 19ಮತ್ತು 22ರಂದು ನಡೆಯಲಿರುವ ಎಸ್‍ಎಸ್‍ಎಲ್‍ಸಿ ಪರೀಕ್ಷೆಗೆ ಸಿದ್ಧತೆ ನಡೆಯುತ್ತಿದ್ದು, ಕೇರಳ ರಾಜ್ಯದಿಂದ ದ.ಕ.ಜಿಲ್ಲೆಗೆ 441 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಲಿದ್ದು ಮಂಗಳೂರು ತಾಲೂಕು ವ್ಯಾಪ್ತಿಗೆ ತಲಪಾಡಿ ಗಡಿಭಾಗದಿಂದ 22 ಪರೀಕ್ಷಾ ಕೇಂದ್ರಗಳಿಗೆ ಸುಮಾರು 125 ವಿದ್ಯಾರ್ಥಿಗಳು ಹಾಜರಾಗಲಿದ್ದು, ಗಡಿ ಚೆಕ್‍ಪೆÇೀಸ್ಟ್‍ನಲ್ಲಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಪ್ರವೇಶಪತ್ರ ತೋರಿಸಿ ಗಡಿ ಪ್ರವೇಶ್ಕಕೆ ಅನುಮತಿ ನೀಡಿದ್ದು, ತಲಪಾಡಿಯಿಂದ ಪರೀಕ್ಷಾ ಕೇಂದ್ರಗಳಿಗೆ ತೆರಳಲು ವಾಹನದ ವ್ಯವಸ್ಥೆ ಮಾಡಲಾಗಿದೆ ಎಂದು ಹಾಗೂ ಕ್ಷೇತ್ರ ಸಂಪನ್ಮೂಲ ಕೇಂದ್ರದ ಸಮನ್ವಯಾ„ಕಾರಿ ಪ್ರಶಾಂತ್ ಕುಮಾರ್ ಕೆ.ಎಸ್. ತಿಳಿಸಿದರು.ಅವರು ಶನಿವಾರ ದ.ಕ. ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಮಲ್ಲೇಸ್ವಾಮಿ, ದೈಹಿಕ ಶಿಕ್ಷಣ ಅ„ಕಾರಿ ರಘುನಾಥ್ ಅವರೊಂದಿಗೆ ತಲಪಾಡಿ ಗಡಿಭಾಗದಲ್ಲಿ ಅಗತ್ಯ ಸಿದ್ಧತೆಗಳ ಪರಿಶೀಲನೆ ನಡೆಸಿದ ಬಳಿಕ ಮಾತನಾಡಿದರು.ಈಗಾಗಲೇ ಪರೀಕ್ಷೆಗೆ ಆಗಮಿಸುವ ಗಡಿಭಾಗದ ಎಲ್ಲಾ ವಿದ್ಯಾರ್ಥಿಗಳೊಂದಿಗೆ ಸಂಪರ್ಕದಲ್ಲಿದ್ದು, ಶೇ. 40 ವಿದ್ಯಾರ್ಥಿಗಳು ಹೆತ್ತವರೊಂದಿಗೆ ಪರೀಕ್ಷಾ ಕೇಂದ್ರಗಳಿಗೆ ಆಗಮಿಸುವ ಸೂಚನೆ ನೀಡಿದ್ದು ಅವರಲ್ಲಿ ಹೆತ್ತವರಿಗೆ ಗಡ ಪ್ರವೇಶಕ್ಕೆ ಆರ್‍ಟಿಪಿಸಿಆರ್ ಕಡ್ಡಾಯ ಮಾಡಲಾಗಿದೆ. ಮಂಗಳೂರು…

Read More

ಉಳ್ಳಾಲ: ಉಳ್ಳಾಲ ನಗರ ಸಭಾ ವ್ಯಾಪ್ತಿಯಲ್ಲಿ ಬೀದಿ ಬದಿ ವ್ಯಾಪಾರಿಗಳು ತಮ್ಮ ಬದುಕನ್ನು ರೂಪಿಸಿಕೊಳ್ಳಲು ಬೀದಿ ಬದಿ ವ್ಯಾಪಾರ ಮಾಡುತ್ತಾ ಬಂದಿದ್ದು ಇವರಿಗೆ ನಮ್ಮ ನಗರ ಸಭೆಯ ಆಡಳಿತ ಉತ್ತಮ ಸಹಕಾರ ನೀಡುತ್ತಾ ಬಂದಿದ್ದು, ಮುಂದಿನ ದಿನಗಳಲ್ಲಿಯೂ ವ್ಯಾಪಾರಿಗಳು ಸರಕಾರದ ಯೋಜನೆಯನ್ನು ಸದುಪಯೋಗಪಡಿಸಿಕೊಂಡು ಉತ್ತಮ ಕಾರ್ಯವನ್ನು ಮುಂದುವರೆಸಿಕೊಂಡು ನಗರಸಭೆಯ ಅ„ಕಾರಿಗಳೊಂದಿಗೆ ಅನ್ಯೋನ್ಯತೆಯನ್ನು ಉಳಿಸಿಕೊಂಡು ಹೋಗಬೇಕು ಎಂದು ಉಳ್ಳಾಲ ನಗರಸಭಾ ಉಪಾಧ್ಯಕ್ಷ ಅಯ್ಯೂಬ್ ಮಂಚಿಲ ಅಭಿಪ್ರಾಯಪಟ್ಟರು.ಕೇಂದ್ರ ವಸತಿ ಮತ್ತು ವ್ಯವಹಾರ ಮಂತ್ರಾಲಯ, ಭಾರತ ಸರಕಾರ , ನವದೆಹಲಿ ಆಯುಕ್ತಾಲಯ ಉದ್ಯಮಶೀಲತೆ ಮತ್ತು ಜೀವನೋಪಾಯ ಬೆಂಗಳೂರು, ದ.ಕ.ಜಿಲ್ಲಾಡಳಿತ ಮತ್ತು ಉಳ್ಳಾಲ ನಗರ ಸಭೆ ವತಿಯಿಂದ ಉಳ್ಳಾಲ ನಗರ ಸಭಾ ಸಮುದಾಯ ಭವನದಲ್ಲಿ ಶನಿವಾರ ನಡೆದ ದೀನ್ ದಯಾಳ್ ಅಂತ್ಯೋದಯ ಯೋಜನೆ- ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನ(ಡೇ ನಲ್ಮ್) ಪ್ರಧಾನ ಮಂತ್ರಿ ಬೀದಿ ಬದಿ ವ್ಯಾಪಾರಿಗಳ ಆತ್ಮ ನಿರ್ಭರ್ ನಿ„ ಯೋಜನೆಯಡಿ “ಸಂಕಲ್ಪದಿಂದ ಸಿದ್ಧಿ” ನಾನೂ ಕೂಡ ಡಿಜಿಟಲ್ 2.0 ಮತ್ತು ಸ್ವ-ನಿ„ಯಿಂದ ಸಮೃದ್ಧಿ ವಿಶೇಷ…

Read More

ಉಳ್ಳಾಲ: ಸೋಮೇಶ್ವರ ಪುರಸಭಾ ವ್ಯಾಪ್ತಿಯಲ್ಲಿ ಸರಕಾರದ ಆದೇಶದಂತೆ 2020-21 ನೇ ಸಾಲಿನಲ್ಲಿ ಶಾಲೆಯಿಂದ ಹೊರಗುಳಿದ ಮಕ್ಕಳ ಸರ್ವೆ ಸಮೀಕ್ಷೆ ಕಾರ್ಯ ಶೇ100 ಪೂರ್ಣಗೊಂಡಿದ್ದು, ವಾರ್ಡ್‍ವಾರು ಸರ್ವೆ ಕಾರ್ಯ ಮಾಡಿದ ಮಾಹಿತಿಯನ್ನು ಹಾಗೂ ಶಾಲೆಯಿಂದ ಹೊರಗುಳಿದ ಮಕ್ಕಳ ಮಾಹಿತಿಯನ್ನು ಕಚೇರಿಯ ಸೂಚನಾ ಫಲಕದಲ್ಲಿ ಪ್ರಚುರಪಡಿಸಲಾಗಿದೆ. ಸರ್ವೆ ಕಾರ್ಯಕ್ಕೆ ಸಂಬಂಧಪಟ್ಟಂತೆ ಆಕ್ಷೇಪಣೆಗಳು ಇದ್ದಲ್ಲಿ ಜು.22ರೊಳಗೆ ಕಚೇರಿಗೆ ಲಿಖಿತ ರೂಪದಲ್ಲಿ ಸಲ್ಲಿಸುವಂತೆ ಸೋಮೇಶ್ವರ ಪುರಸಭಾ ಆಡಳಿತಾ„ಕಾರಿ ಮದನ್‍ಮೋಹನ್ ಮತ್ತು ಮುಖ್ಯಾ„ಕಾರಿ ವಾಣಿ.ವಿ.ಆಳ್ವ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More